Tag: ಬರಹಗಾರ

  • ಹಾಲಿವುಡ್ ಖ್ಯಾತ ಬರಹಗಾರ-ನಿರ್ದೇಶಕ ರಾಬರ್ಟ್ ವಿನ್ಸೆಂಟ್ ಓ’ನೀಲ್ ವಿಧಿವಶ

    ಹಾಲಿವುಡ್ ಖ್ಯಾತ ಬರಹಗಾರ-ನಿರ್ದೇಶಕ ರಾಬರ್ಟ್ ವಿನ್ಸೆಂಟ್ ಓ’ನೀಲ್ ವಿಧಿವಶ

    ನ್ಯೂಯಾರ್ಕ್: ಹಾಲಿವುಡ್ ಚಿತ್ರರಂಗದ ಖ್ಯಾತ ಬರಹಗಾರ ಮತ್ತು ಎಂಜಲ್ ಚಿತ್ರದ ನಿರ್ದೇಶಕ ವಿನ್ಸೆಂಟ್ ಓ’ನೀಲ್ (91) ನಿಧನರಾಗಿದ್ದಾರೆ. ರಾಬರ್ಟ್ ನಿದ್ರಾವಸ್ಥೆಯಲ್ಲಿ ಇದ್ದಾಗಲೇ ಪ್ರಾಣ ಬಿಟ್ಟಿದ್ದಾರೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.

    ಓ’ನೀಲ್ ಅವರಿಗೆ ಲಾರಿ ಮತ್ತು ನಿಕೋಲ್ ಲಾಯ್ಡ್ ಇಬ್ಬರು ಅವಳಿ ಹೆಣ್ಣುಮಕ್ಕಳಿದ್ದು, ಲಾರಿ ಅವರ ಪತಿ ಆಂಡ್ರ್ಯೂ ಮತ್ತು ಮೊಮ್ಮಗಳು ಲಿಸಾ ಬಿಲ್, ಸಹೋದರ ರಾನ್ ಇವಿ, ಹಾಗೂ ಜೆಸ್ಸಿಕಾ, ಕ್ವಿನ್, ಸಾರಾ, ರಸ್ಸೆಲ್, ಜೆಸ್ ಏಳು ಮೊಮ್ಮಕ್ಕಳು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ಸಿನಿಮಾದಲ್ಲಿ ಹೀರೋ ಯಾರು? ವಿಲನ್ ಯಾರು? : ರಾಜಮೌಳಿ ಕೊಟ್ಟರು ಉತ್ತರ

    ಹಾಲಿವುಡ್-ಸೆಟ್ ವೈಸ್ ಸ್ಕ್ವಾಡ್ (1982), ದಿ ಬಾಲ್ಟಿಮೋರ್ ಬುಲೆಟ್ (1980), ಲೈಕ್ ಮದರ್ ಲೈಕ್ ಡಾಟರ್ (1969), ದಿ ಸೈಕೋ ಲವರ್ (1970), ಬ್ಲಡ್ ಮೇನಿಯಾ (1970), ವಂಡರ್ ವುಮೆನ್ (1973) ಮತ್ತು ಪ್ಯಾಕೊ (1975) ಹೀಗೆ ಹಾಲಿವುಡ್‍ನಲ್ಲಿ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದ ಕೀರ್ತಿ ಇವರದ್ದು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

  • ಬಳ್ಳಾರಿ ಟು ಬೆಂಗಳೂರು – ರವಿ ಬೆಳಗೆರೆ ಜೀವನ ಪಯಣ ಹೇಗಿತ್ತು..?

    ಬಳ್ಳಾರಿ ಟು ಬೆಂಗಳೂರು – ರವಿ ಬೆಳಗೆರೆ ಜೀವನ ಪಯಣ ಹೇಗಿತ್ತು..?

    ಬೆಂಗಳೂರು: ಕನ್ನಡದ ಪ್ರಸಿದ್ಧ ಪತ್ರಕರ್ತ, ಪತ್ರಿಕೋದ್ಯಮಿ ರವಿ ಬೆಳಗೆರೆಯವರ ಬದುಕೇ ವರ್ಣರಂಜಿತವಾಗಿದೆ. ರವಿ ಬೆಳಗೆರೆ ಪತ್ರಕರ್ತ, ನಿರೂಪಕ, ನಟ, ಲೇಖಕ, ಕಾದಂಬರಿಕಾರ, ಚಿತ್ರಕಥೆ ಬರಹಗಾರ, ‘ಕ್ರೈಂ ಡೈರಿ’ ಕಾರ್ಯಕ್ರಮ ನಿರೂಪಕ, ಹಾಯ್ ಬೆಂಗಳೂರು ಹಾಗೂ ಓ ಮನಸೇ ಪತ್ರಿಕೆಯ ಸಂಪಾದಕರಾಗಿದ್ದಾರೆ. ಅಲ್ಲದೆ ‘ಪ್ರಾರ್ಥನಾ ಶಾಲೆ’ಯ ಸಂಸ್ಥಾಪಕ ಕೂಡ ಆಗಿದ್ದಾರೆ. ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿರುವ ರವಿ ಬೆಳಗೆರೆ, ತನ್ನ ಬರಹದಿಂದಲೇ ಅಸಂಖ್ಯಾತ ಓದುಗ ಬಳಗವನ್ನು ಸೃಷ್ಟಿಸಿಕೊಂಡಿದ್ದ ಮಾಂತ್ರಿಕರಾಗಿದ್ದಾರೆ.

    ಬಳ್ಳಾರಿ ಟು ಬೆಂಗಳೂರು:
    ಬೆಂಗಳೂರು: ಖ್ಯಾತ ಬರಹಗಾರ, ಪತ್ರಕರ್ತ ರವಿ ಬೆಳಗೆರೆ ಅವರು ಬಳ್ಳಾರಿಯ ಸತ್ಯನಾರಾಯಣಪೇಟೆಯಲ್ಲಿ 1958 ಮಾರ್ಚ್ 15ರಂದು ಜನಿಸಿದ್ದಾರೆ. ಬಳ್ಳಾರಿಯಲ್ಲೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕರ್ನಾಟಕ ವಿವಿಯಲ್ಲಿ ಇತಿಹಾಸ, ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ ಮಾಡಿ, ಇತಿಹಾಸ ಉಪನ್ಯಾಸಕರಾಗಿ ರವಿ ಬೆಳಗೆರೆ ವೃತ್ತಿಜೀವನ ಪ್ರಾರಂಭಿಸಿದರು. ಓದಿದ ವಿಶ್ವವಿದ್ಯಾಲಯ ಧಾರವಾಡ ವಿವಿಯಲ್ಲೇ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ಕ್ರಮೇಣ ಉಪನ್ಯಾಸಕ ವೃತ್ತಿ ತೊರೆದು ಬರಹದತ್ತ ವಾಲಿದರು.

    ಉಪನ್ಯಾಸಕ ವೃತ್ತಿಗೆ ರಾಜೀನಾಮೆ, ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಕರ್ಮವೀರ, ಕಸ್ತೂರಿ, ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡಿದ್ದಾರೆ. 1995ರಲ್ಲಿ ಬೆಂಗಳೂರಿನಲ್ಲಿ ‘ಹಾಯ್ ಬೆಂಗಳೂರ್’ ಪತ್ರಿಕೆಯನ್ನು ಪ್ರಾರಂಭಿಸಿ ಜನಮೆಚ್ಚುಗೆ ಗಳಿಸಿದರು. ಜನಪ್ರಿಯ ‘ಕ್ರೈಂ ಡೈರಿ’ ಕಾರ್ಯಕ್ರಮದ ನಿರೂಪಕ ಕೂಡ ಆಗಿದ್ದರು. ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಕ್ರೈಂ, ದೇಶ, ಯುದ್ಧ, ಇತಿಹಾಸ, ಭೂಗತ ಇತಿಹಾಸದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು.

    ರವಿ ಬೆಳಗೆರೆಯ ‘ಪ್ರೀತಿ ಪತ್ರಗಳು’ ‘ಲವ್ ಲವಿಕೆ’ ಯುವ ಮನಸುಗಳಿಗೆ ಸ್ಫೂರ್ತಿ ನೀಡಿತ್ತು. ಬದುಕು ಬಗೆಗಿನ ‘ಖಾಸ್ ಬಾತ್’ 1996ರಿಂದ 2003ರವರೆಗೆ ಪ್ರಕಟವಾಗಿತ್ತು. `ಓ ಮನಸೇ’ ಅತೀ ಹೆಚ್ಚು ಪ್ರೇಮ ಬರಹಗಳಿಂದ ಪ್ರಸಿದ್ಧಿ ಪಡೆದಿತ್ತು. ‘ಹಿಮಾಲಯನ್ ಬ್ಲಂಡರ್’ ರವಿ ಬೆಳಗೆರೆಯ ತುಂಬಾ ಬೇಡಿಕೆಯ ಪುಸ್ತಕವಾಗಿದೆ. ಇದನ್ನೂ ಓದಿ:  ನಾನು ನಿಮ್ಮ ಜೊತೆ ಇದ್ದೀನಿ ಕಣೋ ಅಂದಿದ್ರು: ರವಿ ಪುತ್ರ ಕಣ್ಣೀರು

    ‘ಬೆಳಗೆರೆ’ಗೊಲಿದ ಸಮ್ಮಾನ:
    1984ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1990 ರಲ್ಲಿ ಮಾಸ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 1997 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಪಾ.ವೆಂ. ಹೇಳಿದ ಕತೆ) (ಸಣ್ಣ ಕತೆ), 2004 ರಲ್ಲಿ `ನೀ ಹಿಂಗೆ ನೀಡಬ್ಯಾಡ..’ ಕಾದಂಬರಿಗೆ ಶಿವರಾಮ ಕಾರಂತ ಪುರಸ್ಕಾರ, 2005 ರಲ್ಲಿ ಕೇಂದ್ರ ಸರ್ಕಾರದಿಂದ ಕಂಪ್ಯೂಟರ್ ಎಕ್ಸಲೆನ್ಸಿ ಅವಾರ್ಡ್ (ಪ್ರಾರ್ಥನಾ ಶಾಲೆ), 2008 ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ (ಜೀವಮಾನದ ಸಾಧನೆ) ಹಾಗೂ 2011 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು.

    ರವಿ ಬೆಳಗೆರೆ ಕಾದಂಬರಿಗಳು:
    ಗೋಲಿಬಾರ್ (1983), ಅರ್ತಿ (1990), ಮಾಂಡೋವಿ (1996), ಮಾಟಗಾತಿ (1998), ಒಮರ್ಟಾ (1999), ಸರ್ಪಸಂಬಂಧ (2000), ಹೇಳಿ ಹೋಗು ಕಾರಣ (2003), ನೀ ಹಿಂಗ ನೋಡಬ್ಯಾಡ ನನ್ನ (2003), ಗಾಡ್‍ಫಾದರ್ (2005), ಕಾಮರಾಜ ಮಾರ್ಗ (2010), ಹಿಮಾಗ್ನಿ (2012).

    ಅನುವಾದ:
    ವಿವಾಹ (1983), ನಕ್ಷತ್ರ ಜಾರಿದಾಗ (1984), ಹಿಮಾಲಯನ್ ಬ್ಲಂಡರ್ (1999), ಕಂಪನಿ ಆಫ್ ವಿಮೆನ್ (2000), ಟೈಂಪಾಸ್ (2001), ರಾಜ ರಹಸ್ಯ (2002), ಹಂತಕಿ ಐ ಲವ್ ಯೂ (2007), ದಂಗೆಯ ದಿನಗಳು (2008). ಇದನ್ನೂ ಓದಿ: ಖ್ಯಾತ ಬರಹಗಾರ, ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ

    ಲೇಖನಿಯಲ್ಲಿ..:
    ಕಾರ್ಗಿಲ್‍ನಲ್ಲಿ ಹದಿನೇಳು ದಿನ (1999), ಬ್ಲ್ಯಾಕ್ ಫ್ರೈಡೆ (2005), ರೇಷ್ಮೆ ರುಮಾಲು (2007), ಇಂದಿರೆಯ ಮಗ ಸಂಜಯ (2002), ಗಾಂಧೀ ಹತ್ಯೆ ಮತ್ತು ಗೋಡ್ಸೆ (2003), ಡಯಾನಾ (2007), ನೀನಾ ಪಾಕಿಸ್ತಾನ, ಅವನೊಬ್ಬನಿದ್ದ ಗೋಡ್ಸೆ, ಮೇಜರ್ ಸಂದೀಪ್ ಹತ್ಯೆ, ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು, ಮುಸ್ಲಿಂ.

    ಜೀವನ ಕಥನ:
    ಪ್ಯಾಸಾ, 1991, ಪಾಪದ ಹೂವು ಫೂಲನ್, ಆಗಸ್ಟ್ 2001, ಸಂಜಯ 2000, ಚಲಂ (ಅನುವಾದ) ಮಾರ್ಚ್ 2008.

    ಹತ್ಯಾಕಥನ:
    ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು? 1991, ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, 1998, ರಂಗವಿಲಾಸ್ ಬಂಗಲೆಯ ಕೊಲೆಗಳು, ಬಾಬಾ ಬೆಡ್‍ರೂಂ ಹತ್ಯಾಕಾಂಡ (ತನಿಖಾ ವರದಿ) ಜನವರಿ 2007, ಪ್ರಮೋದ್ ಮಹಾಜನ್ ಹತ್ಯೆ (ಅನುವಾದ) ಅಕ್ಟೋಬರ್ 2012.

    ಭೂಗತ ಇತಿಹಾಸ:
    ಪಾಪಿಗಳ ಲೋಕದಲ್ಲಿ ಭಾಗ -1 (1995), ಪಾಪಿಗಳ ಲೋಕದಲ್ಲಿ ಭಾಗ 2 (ಸೆಪ್ಟಂಬರ್ 1997), ಭೀಮಾ ತೀರದ ಹಂತಕರು (ಮೇ 2001), ಪಾಪಿಗಳ ಲೋಕದಲ್ಲಿ (2005), ಡಿ ಕಂಪನಿ (2008).

    ಬದುಕು:
    ಖಾಸ್‍ಬಾತ್ 96, 1997, ಖಾಸ್‍ಬಾತ್ 97, ಸೆಪ್ಟಂಬರ್ 1997, ಖಾಸ್‍ಬಾತ್ 98, ಸೆಪ್ಟಂಬರ್ 1998, ಖಾಸ್‍ಬಾತ್ 99, ಅಕ್ಟೋಬರ್ 2003, ಖಾಸ್‍ಬಾತ್ 2000, ಅಕ್ಟೋಬರ್ 2003, ಖಾಸ್‍ಬಾತ್ 2001, ಜನವರಿ 2007, ಖಾಸ್‍ಬಾತ್ 2002, ಜನವರಿ 2008, ಖಾಸ್‍ಬಾತ್ 2003.

    ಅಂಕಣ ಬರಹಗಳ ಸಂಗ್ರಹ:
    ಜೀವನ ಪಾಠ, ಬಾಟಮ್ ಐಟಮ್ ಭಾಗ 1, ಫೆಬ್ರವರಿ2002, ಬಾಟಮ್ ಐಟಮ್ 2, ಅಕ್ಟೋಬರ್2003, ಬಾಟಮ್ ಐಟಮ್ ಭಾಗ 3, ಡಿಸೆಂಬರ್ 2006, ಬಾಟಂ ಐಟಮ್ 4 ಹಾಗೂ ಬಾಟಂ ಐಟಮ್ 5.

    ಪ್ರೀತಿ ಪತ್ರಗಳು:
    ಲವಲವಿಕೆ -1, ಡಿಸೆಂಬರ್ 1998, ಲವಲವಿಕೆ -2, ಸೆಪ್ಟಂಬರ್ 2004, ಲವಲವಿಕೆ -3, ಲವಲವಿಕೆ -4.

    ಕವನ ಸಂಕಲನ:
    ಅಗ್ನಿಕಾವ್ಯ, 1983, ಇತರೆ. ಹೀಗೆ ತಮ್ಮ ಬರಹದಿಂದಲೇ ಅಂಖ್ಯಾತ ಅಭಿಮಾನಿಗಳು ಹೊಂದಿರುವ ಮಾಂತ್ರಿಕರಾಗಿದ್ದರು.

  • ನಾನು ನಿಮ್ಮ ಜೊತೆ ಇದ್ದೀನಿ ಕಣೋ ಅಂದಿದ್ರು: ರವಿ ಪುತ್ರ ಕಣ್ಣೀರು

    ನಾನು ನಿಮ್ಮ ಜೊತೆ ಇದ್ದೀನಿ ಕಣೋ ಅಂದಿದ್ರು: ರವಿ ಪುತ್ರ ಕಣ್ಣೀರು

    ಬೆಂಗಳೂರು: ನಾನು ನಿಮ್ಮ ಜೊತೆ ಇದ್ದೀನಿ ಕಣೋ. ನೀನು ಚೆನ್ನಾಗಿ ಬೆಳೆಯಬೇಕು ಎಂದು ಹೇಳಿದ್ದರು. ಆದರೆ ಅವರ ಸಾವಿನ ಸುದ್ದಿ ನಮಗೆ ಶಾಕ್ ಆಗಿದೆ ಎಂದು ರವಿಬೆಳಗೆರೆ ಪುತ್ರ ಕರ್ಣ ಕಣ್ಣೀರು ಹಾಕಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರವಿಬೆಳಗೆರೆ ರಾತ್ರಿ ಪದ್ಮನಾಭ ಕಚೇರಿಯಲ್ಲಿ ಸಾವನ್ನಪ್ಪಿದ್ದಾರೆ. ರಾತ್ರಿ ಸುಮಾರು 12.15ರ ವೇಳೆಗೆ ಎದೆ ನೋವು ಕಾಣಿಸಿಕೊಂಡಿತ್ತು. ನಾನು ಹೋಗುವಷ್ಟರಲ್ಲಿ ಆಸ್ಪತ್ರೆಗೆ ಸಾಗಿಸಲೆಂದು ತಯಾರಾಗಿದ್ದರು. ಆದರೆ ಅದಾಗಲೇ ಅವರ ಸಾವು ಕೂಡ ಆಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

    ಅವರು ನಮ್ಮ ಜೊತೆ ಇನ್ನೂ ಬಹಳ ದಿನಗಳ ಕಾಲ ಬದುಕಿರುತ್ತಿದ್ದರು ಅಂತ ಭಾವಿಸಿದ್ವಿ. ಪ್ರಾರ್ಥನಾ ಶಾಲೆ ಮತ್ತಷ್ಟು ಎತ್ತರಕ್ಕೆ ಬೆಳಸಬೇಕು ಅನ್ನೋ ಬಹುದೊಡ್ಡ ಆಸೆ ಅವರಿಗಿತ್ತು. ಅವರಿಗೆ ಡಯಾಬಿಟಿಸ್ ಇತ್ತು, ಕಾಲುಗಳ ನೋವಿತ್ತು. ಕಳೆದ ಮೂರು ದಿನಗಳ ಹಿಂದೆಯಷ್ಟೇ ನಾನು ಅವರ ಜೊತೆ ಮಾತನಾಡಿದ್ದರು. ನಾನು ನಿಮ್ಮ ಜೊತೆ ಇದ್ದೀನಿ ಕಣೋ ಅಂದಿದ್ದರು ಎಂದು ತಿಳಿಸಿದರು.

    ನೀನು ಚೆನ್ನಾಗಿ ಬೆಳಯಬೇಕು ಅಂತ ಕೂಡ ಹೇಳಿದ್ದರು. ಆದರೆ ಅವರ ದಿಢೀರ್ ಸಾವಿನ ಸುದ್ದಿ ನಮಗೆ ಶಾಕ್ ಆಗಿದೆ. ಬೆಳಗ್ಗೆ 9 ಗಂಟೆಗೆ ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುತ್ತೇವೆ. ಸಂಜೆ 4 ಗಂಟೆ ಒಳಗೆ ಬನಶಕಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

    ತನ್ನ ಬರಹದಿಂದಲೇ ಸಾಕಷ್ಟು ಮಂದಿ ಅಭಿಮಾನಿಗಳನ್ನು ಹೊಂದಿದ್ದ ರವಿ ಬೆಳಗೆರೆ ಅವರು ಇಂದು ಬೆಳಗ್ಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯ ಕರಿಷ್ಮಾ ಹಿಲ್ಸ್ ಮನೆಯಲ್ಲಿ ಹೃದಯಾಘಾತದಿಂದ ಅಸ್ತಂಗತರಾಗಿದ್ದಾರೆ.