Tag: ಬರಹ

  • ‘ಕಾಂತಾರ’ ಸಿನಿಮಾದ ಪೋಸ್ಟರ್ ಮೇಲೆ ದೇವರಿಗೆ ಅವಹೇಳನ

    ‘ಕಾಂತಾರ’ ಸಿನಿಮಾದ ಪೋಸ್ಟರ್ ಮೇಲೆ ದೇವರಿಗೆ ಅವಹೇಳನ

    ರಿಷಬ್ ಶೆಟ್ಟಿ (Rishabh Shetty)  ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ಬಿಡುಗಡೆ ಆಗಿ ಇಂದಿಗೆ ಏಳು ದಿನಗಳಾಗಿವೆ. ಮೊದಲನೇ ದಿನದಿಂದಲೂ ಈವರೆಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮೂಲಗಳ ಪ್ರಕಾರ 25 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಪ್ರತಿ ಪ್ರೇಕ್ಷಕನೂ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದರೆ, ಶಿವಮೊಗ್ಗದಲ್ಲಿ ವಿಕೃತ ಮನಸ್ಸಿನವರು ಅವಹೇಳನ (Insulting) ಮಾಡಿದ್ದಾರೆ.

    ಶಿವಮೊಗ್ಗದಲ್ಲಿ (Shivamogga) ಕಾಂತಾರ ಸಿನಿಮಾ ತುಂಬಿದ ಪ್ರದರ್ಶನ ಕಾಣುತ್ತಿದ್ದು, ಶಿವಮೊಗ್ಗದ ಗೋಡೆ ಗೋಡೆಗಳ ಮೇಲೆ ಕಾಂತಾರ ಸಿನಿಮಾದ ಪೋಸ್ಟರ್ ರಾರಾಜಿಸುತ್ತಿದೆ. ಆ ಪೋಸ್ಟರ್ ನೋಡಿ ಕಣ್ತುಂಬಿಕೊಳ್ಳಬೇಕಾಗಿದ್ದ ಕೆಲ ವಿಕೃತ ಮನಸ್ಸಿನವರು ಪೋಸ್ಟರ್ ಮೇಲೆ ವಿಕೃತ ಬರಹವನ್ನೇ (Writing) ಬರೆದಿದ್ದಾರೆ. ದೇವರಿಗೆ ಅವಹೇಳನ ಮಾಡುವಂತಹ ಪದ ಬಳಕೆ ಮಾಡಿದ್ದಾರೆ. ಈ ಬರಹವುಳ್ಳ ಪೋಸ್ಟರ್ ನೋಡಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಆಕ್ರೋಶ  ವ್ಯಕ್ತ ಪಡಿಸಿದ್ದಾರೆ.

    ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಕಾಂತಾರ ಸಿನಿಮಾ ಪೋಸ್ಟರ್ ಮೇಲೆ ‘F * * K YOU G * D’  ಅಂತಾ ಕಿಡಿಗೇಡಿಗಳು ಬರೆದಿದ್ದು, ಪೋಸ್ಟರ್ ಮೇಲೆ ಪೆನ್ನಿನಿಂದ ಈ ಬರಹವನ್ನು ಬರೆಯಲಾಗಿದೆ. ಸ್ಥಳಕ್ಕೆ ಜಯನಗರ ಠಾಣೆ ಪೊಲೀಸರು (Police) ಭೇಟಿ ಪರಿಶೀಲನೆ ಮಾಡಿದ್ದು, ತಕ್ಷಣವೇ ಅವಹೇಳನಕಾರಿ ಬರಹ ತೆಗೆಸಿದ್ದಾರೆ ಪೊಲೀಸರು.

    ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಭೇಟಿ ಮಾಡಿ, ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ರೀತಿಯಲ್ಲಿ ದೇವರಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ. ಕಿಡಿಗೇಡಿ ವಿರುದ್ದ ಪ್ರಕರಣ ದಾಖಲಿಸುತ್ತೇವೆ ಎಂದು ವೇದಿಕೆಯ ಕಾರ್ಯಕರ್ತರನ್ನು ಸಮಾಧಾನ ಮಾಡಿ ಪೊಲೀಸರು ಕಳುಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾರಿನ ಮೇಲೆ KILL U ಬರಹ- ಕಡೂರಿನ RSS ಕಾರ್ಯಕರ್ತನಿಗೆ ಕೊಲೆ ಬೆದರಿಕೆ

    ಕಾರಿನ ಮೇಲೆ KILL U ಬರಹ- ಕಡೂರಿನ RSS ಕಾರ್ಯಕರ್ತನಿಗೆ ಕೊಲೆ ಬೆದರಿಕೆ

    ಚಿಕ್ಕಮಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಧರ್ಮ ಜಾಗರಣದ ಜಿಲ್ಲಾ ಸಹ ಸಂಯೋಜಕರ ಕಾರಿನ (Car) ಮೇಲೆ ಕಿಲ್ ಯು ಜಿಹಾದಿ ಬರಹ ಬರೆದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಲಕ್ಷ್ಮೀಶ ನಗರದ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರದ ಗಾಳಿ ತೆಗೆದ ದುಷ್ಕರ್ಮಿಗಳು ಬಳಿಕ ಈ ರೀತಿ ಬರೆದಿದ್ದಾರೆ. ಕಿಲ್ ಯು, ಜಿಹಾದ್, ಅಶ್ಲೀಲ ಪದಗಳ ಬಳಕೆ ಮಾಡಲಾಗಿದೆ. ಇದನ್ನೂ ಓದಿ: ಹೊಟ್ಟೆ ಕ್ಯಾನ್ಸರ್‌ ರೋಗದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಶರಣು

    ಈ ಕುರಿತು ಆರ್‍ಎಸ್‍ಎಸ್ ಧರ್ಮಜಾಗರಣ ಸಹ ಸಂಯೋಜಕ ಡಾ.ಶಶಿಧರ್ ಅವರು ಕಡೂರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಕಚೇರಿ ಗೋಡೆಯ ಮೇಲೆ ಎನ್ಆರ್​ಸಿ ವಿರೋಧಿ ಬರಹ

    ಸರ್ಕಾರಿ ಕಚೇರಿ ಗೋಡೆಯ ಮೇಲೆ ಎನ್ಆರ್​ಸಿ ವಿರೋಧಿ ಬರಹ

    ಬಳ್ಳಾರಿ: ಎನ್ಆರ್​ಸಿ ಜಾರಿ ಆದ ಬಳಿಕವೂ ಅಲ್ಲಲ್ಲಿ ಕೆಲ ವಿರೋಧಿಗಳು ಗೋಡೆಗಳ ಮೇಲೆ ಎನ್ಆರ್​ಸಿ ವಿರೋಧಿ ಬರಹಗಳನ್ನು ಬರೆಯುವ ಮೂಲಕ ವಿರೋಧ ತೋರಿದ್ದಾರೆ.

    ಅದೇ ರೀತಿಯಲ್ಲಿ ಬಳ್ಳಾರಿಯ ಸರ್ಕಾರಿ ಕಚೇರಿಯ ಗೋಡೆಯ ಮೇಲೆ ಬಾಯ್‍ಕಟ್ ಎನ್ಆರ್​ಸಿ, ಎನ್‍ಪಿಆರ್ ಎಂದು ಅನಾಮಧೇಯ ವ್ಯಕ್ತಿಗಳು ಬರೆದಿದ್ದಾರೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಇರುವ ಐಟಿಐ ಕಾಲೇಜು ಕಾಂಪೌಂಡ್ ಗೋಡೆಯ ಮೇಲೆ ಈ ಬರಹ ಬರೆದಿದ್ದಾರೆ.

    ಮಂಗಳವಾರ ರಾತ್ರಿ ಈ ಬರಹವನ್ನು ಯಾರೋ ಕಿಡಗೇಡಿಗಳು ಬರೆದಿದ್ದಾರೆ. ಬಳಿಕ ವಿಷಯ ತಿಳಿದ ವಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಗೋಡೆ ಬರಹವನ್ನು ಅಳಿಸಿ ಹಾಕಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

    ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲೂ ಇದೇ ರೀತಿ ಬರೆಯಲಾಗಿತ್ತು, ಹುಬ್ಬಳ್ಳಿ ತಾಲೂಕಿನ ಬುಡರಶಿಂಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಯಾರೋ ದುಷ್ಕರ್ಮಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಬರೆದಿದ್ದರು. ಕೈ ಬರಹದಿಂದಲೇ ಬರೆದಿರುವ ಬರಹಗಳಾಗಿದ್ದು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ದೂರು ನೀಡಿತ್ತು.