Tag: ಬರ

  • ಉತ್ತರ ಕನ್ನಡ ಜಿಲ್ಲೆಯ ಕರಾವಳಿಗೆ ತಟ್ಟಿದ ಬರ – 20 ಗ್ರಾಮಗಳಲ್ಲಿ ಒಂದು ತೊಟ್ಟು ನೀರಿಲ್ಲ, ಬತ್ತಿದ ಬಾವಿಗಳ ಅಂತರ್ಜಲ

    ಉತ್ತರ ಕನ್ನಡ ಜಿಲ್ಲೆಯ ಕರಾವಳಿಗೆ ತಟ್ಟಿದ ಬರ – 20 ಗ್ರಾಮಗಳಲ್ಲಿ ಒಂದು ತೊಟ್ಟು ನೀರಿಲ್ಲ, ಬತ್ತಿದ ಬಾವಿಗಳ ಅಂತರ್ಜಲ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆ ಬಂದ್ರೆ ಪ್ರವಾಹ, ಬಿಸಿಲು ಹೊಡೆದರೆ ಬರ. ಬಿಸಿಲ ಹೊಡೆತಕ್ಕೆ ಕರಾವಳಿಯ 20 ಗ್ರಾಮಗಳಲ್ಲಿ ಬಾವಿಗಳು ಬತ್ತಿ ಹೋಗಿದ್ದು, ಒಂದು ತೊಟ್ಟು ನೀರಿಗೂ ಪರದಾಡುವಂತಾಗಿದೆ. ಕಾಲಿ ಕೊಡ ಹಿಡಿದು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ.

    ಕಾರವಾರ ತಾಲೂಕಿನ ತೋಡುರು ಗ್ರಾಮದಲ್ಲಿ ಪಂಚಾಯಿತಿ ಮಾಡಿದ ಎಡವಟ್ಟಿನಿಂದ, ಕಳೆದ ಎರಡು ತಿಂಗಳಿನಿಂದ ತೋಡುರು ಕಾಲೋನಿಯ ಮನೆಗಳಿಗೆ 10 ರಿಂದ 15 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ, ಇಲ್ಲಿನ ಜನ ಸಮೀಪದಲ್ಲಿರುವ ಬಾವಿ ಹಾಗೂ ಬೋರವೇಲ್‌ಗಳಿಂದ ನೀರು ತಂದು ಜೀವನ ಮಾಡುತ್ತಿದ್ದರು. ಆದರೆ, ಕೆಲವು ದಿನಗಳಿಂದ ಮನೆ ಬಳಿಯ ಬಾವಿಗಳು ಬತ್ತಿ ಹೋಗಿರುವುದರಿಂದ ಕಿಲೋಮೀಟರ್ ಗಟ್ಟಲೇ ದೂರದೂರಿಂದ ನೀರು ತರುವ ಪರಿಸ್ಥಿತಿ ಉಂಟಾಗಿದೆ. ಸಮಿಪದಲ್ಲಿರುವ ಕೆಲವು ಬಾವಿಗಳಲ್ಲಿ ಸ್ವಲ್ಪ ನೀರು ಕಂಡರೆ ಸಾಕು, ಬಂಗಾರ ಸಿಕ್ಕಂತೆ ಖುಷಿ ಪಡುವ ಇಲ್ಲಿನ ಜನ, ಕೆಂಡದಂತಹ ಬಿಸಿಲನ್ನು ಲೆಕ್ಕಿಸದೆ ಅರ್ಧ ಬಿಂದಿಗೆ ನೀರಿಗಾಗಿ, ಹತ್ತಾರು ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ನೀರು ಪಡೆಯುತ್ತಾರೆ.

    ಕಳೆದ 35 ವರ್ಷಗಳ ಹಿಂದೆ ನೌಕಾನೆಲೆ ನಿರ್ಮಾಣಕ್ಕಾಗಿ 13 ಹಳ್ಳಿಗಳನ್ನು ತೋಡುರು ಗ್ರಾಮಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಮೂಲಭೂತ ಸೌಕರ್ಯಗಳನ್ನು ಮಾತ್ರ ಸಮರ್ಪಕವಾಗಿ ನೀಡದೆ ಆಡಳಿತ ನಿರ್ಲಕ್ಷ್ಯ ವಹಿಸಿತ್ತು. ಇದರ ಪ್ರತಿಫಲವಾಗಿ ಮಳೆ ಬಂದರೇ ಗ್ರಾಮವೇ ಮುಳುಗಿ ಹೋಗುತ್ತದೆ. ಬೇಸಿಗೆ ಬಂದರೇ ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ. ಇನ್ನೂ, ಜೆ.ಜೆ.ಎಮ್ ಯೋಜನೆ ಅನುಷ್ಟಾನ ಸಂದರ್ಭದಲ್ಲಿ ಪೈಪ್ ಕನೆಕ್ಷನ್ ಮಾಡುವಾಗ ಆದ ತಪ್ಪಿನಿಂದ ನಲ್ಲಿಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಲು ಆಗುತ್ತಿಲ್ಲ. ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿನ ಜಲಮೂಲಗಳು ಬತ್ತಿ ಹೋಗುತ್ತವೆ. ಹೀಗಾಗಿ, ಕಳೆದ ನಾಲ್ಕೈದು ವರ್ಷಗಳಿಂದ ಈ ಜನ ಮಳೆ ಮತ್ತು ಬಿಸಿಲಿನಿಂದ ಪರಿತಪಿಸುತ್ತಾ ಜೀವನ ಮಾಡುವಂತಾಗಿದೆ.

    ಇದು ಕಾರವಾರ ತಾಲೂಕಿಗೆ ಮಾತ್ರ ಸೀಮಿತವಾಗಿಲ್ಲ. ಅಂಕೋಲ, ಕುಮಟಾ, ಹೊನ್ನಾವರ ಭಾಗದಲ್ಲೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಜಿಲ್ಲೆಯ 20 ಗ್ರಾಮಗಳಲ್ಲಿ ಜಲಮೂಲ ಬತ್ತಿಹೋಗಿದ್ದು, ಕುಡಿಯುವ ನೀರು ಸ್ಥಳೀಯ ಸಂಸ್ಥೆಗಳಿಂದ ಪೂರೈಕೆ ಆಗುತ್ತಿಲ್ಲ. ಇದರಿಂದ ಖಾಸಗಿಯಾಗಿ ಕುಡಿಯುವ ನೀರು ತರಬೇಕಿದ್ದು, ಒರುವ ನೀರಿಗೆ ಹಣ ಸಂದಾಯ ಮಾಡಬೇಕಿದೆ. ಜಿಲ್ಲೆಯಲ್ಲಿ ಸದ್ಯ 20 ಗ್ರಾಮಗಳು ಅತೀ ಹೆಚ್ಚು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, 411 ಗ್ರಾಮಗಳಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಆದರೆ, ಇದಕ್ಕೆ ಬೇಕಾದ ಪರ್ಯಾಯ ವ್ಯವಸ್ಥೆಯೇ ಆಗಿಲ್ಲ. ಹೀಗಾಗಿ, ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅಧಿಕಾರಿಗಳ ಸಭೆ ನಡೆಸಿದ್ದು, ಕುಡಿಯುವ ನೀರು ಪೂರೈಕೆಗೆ ಬೇಕಾದ ಹಣ ನಮ್ಮ ಬಳಿ ಇದೆ. ಸೂಕ್ತ ವ್ಯವಸ್ಥೆ ಮಾಡದೇ ದೂರುಗಳು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಯಾರೂ ಖಾಸಗಿಯಾಗಿ ನೀರು ಖರೀದಿ ಮಾಡಬಾರದು ಎಂದು ಹೇಳಿದ್ದಾರೆ.

  • 83 ಆನೆ, 30 ಹಿಪ್ಪೋ ಸೇರಿದಂತೆ 723 ಕಾಡು ಪ್ರಾಣಿಗಳನ್ನು ಕೊಂದು ಮಾಂಸವನ್ನು ಜನರಿಗೆ ವಿತರಿಸಲು ಮುಂದಾದ ನಮೀಬಿಯಾ

    83 ಆನೆ, 30 ಹಿಪ್ಪೋ ಸೇರಿದಂತೆ 723 ಕಾಡು ಪ್ರಾಣಿಗಳನ್ನು ಕೊಂದು ಮಾಂಸವನ್ನು ಜನರಿಗೆ ವಿತರಿಸಲು ಮುಂದಾದ ನಮೀಬಿಯಾ

    ವಿಂಡ್ಹೋಕ್: ಕಾಡು ಪ್ರಾಣಿಗಳನ್ನು ಭಾರತದಲ್ಲಿ (India) ಕೊಲ್ಲಲು ನಿಷೇಧವಿದೆ. ಅದರೆ ನಮೀಬಿಯಾದಲ್ಲಿ (Namibia) ಸರ್ಕಾರವೇ ಕಾಡುಪ್ರಾಣಿಗಳನ್ನು (Wild Animals) ಕೊಲ್ಲಲು ಆದೇಶಿಸಿದೆ.

    ಬರದಿಂದ (Drought) ತತ್ತರಿಸಿರುವ ನಮೀಬಿಯಾ ಜನರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ 83 ಆನೆಗಳು (Elephants) ಸೇರಿದಂತೆ 723 ಕಾಡು ಪ್ರಾಣಿಗಳನ್ನು ಕೊಲ್ಲುವ ಯೋಜನೆಯನ್ನು ರೂಪಿಸಿದೆ. ತೀವ್ರ ಬರಗಾಲದಿಂದ ಆಹಾರಕ್ಕಾಗಿ ಹೆಣಗಾಡುತ್ತಿರುವವರಿಗೆ ಮಾಂಸವನ್ನು ವಿತರಿಸುವುದಾಗಿ ಸರ್ಕಾರ ಹೇಳಿದೆ.

    ಪ್ರಾಣಿಗಳ ಸಂಖ್ಯೆಯು ಲಭ್ಯವಿರುವ ಹುಲ್ಲುಗಾವಲು ಭೂಮಿ ಮತ್ತು ನೀರಿನ ಸಂಪನ್ಮೂಲಗಳನ್ನು ಮೀರಿದೆ.ಇದರಿಂದಾಗಿ ಜನವಸತಿ ಇರುವ ಸ್ಥಳಗಳಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವರ ಸಂಘರ್ಷ ಹೆಚ್ಚಾಗಿದೆ. ಈ ಸಂಘರ್ಷವನ್ನು ನಿಯಂತ್ರಿಸಲು ಗುರುತಿಸಲಾದ ಪ್ರದೇಶಗಳಿಂದ 83 ಆನೆಗಳನ್ನು ಕೊಲ್ಲಲಾಗುತ್ತದೆ ಮತ್ತು ಮಾಂಸವನ್ನು ಬರ ಪರಿಹಾರ ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ ಎಂದು ನಮೀಬಿಯಾ ಪರಿಸರ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಇದನ್ನೂ ಓದಿ: ವಿದೇಶಗಳಲ್ಲಿ ಬ್ರಿಟನ್‌ನ ದಾನಿಗಳ ವೀರ್ಯ ಬಳಕೆ ಏಕೆ ಕಳವಳಕಾರಿ? 

    ಆನೆಗಳ ಜೊತೆಗೆ, 30 ಹಿಪ್ಪೋಗಳು, 60 ಎಮ್ಮೆಗಳು, 50 ಇಂಪಾಲಾಗಳು, 100 ನೀಲಿ ಕಾಡುಕೋಣಗಳು, 300 ಜೀಬ್ರಾಗಳು ಮತ್ತು 100 ಎಲ್ಯಾಂಡ್‌ಗಳನ್ನು ಕೊಲ್ಲಲು ಯೋಜಿಸಿದೆ. ವೃತ್ತಿಪರ ಬೇಟೆಗಾರರು ಮತ್ತು ಸರ್ಕಾರದಿಂದ ಗುತ್ತಿಗೆ ಪಡೆದ ಕಂಪನಿಗಳು ಈಗಾಗಲೇ 157 ಪ್ರಾಣಿಗಳನ್ನು ಬೇಟೆಯಾಡಿ, 56,800 ಕೆಜಿ  ಮಾಂಸವನ್ನು ಜನರಿಗೆ ನೀಡಲಾಗಿದೆ.

    ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ನಾಗರಿಕರ ಅನುಕೂಲಕ್ಕಾಗಿ ಬಳಸಲು ನಮಗೆ ಸಂವಿಧಾನದಲ್ಲಿ ಅನುಮತಿ ಇದೆ ಎಂದು ನಮೀಬಿಯಾ ಸರ್ಕಾರ ಕಾಡು ಪ್ರಾಣಿಗಳ ಭೇಟೆಯಾಡುವ ಕ್ರಮವನ್ನು ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: 2014ರ ನಂತರ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ

    ದಕ್ಷಿಣ ಆಫ್ರಿಕಾವು ಪ್ರಸ್ತುತ ದಶಕಗಳಲ್ಲಿ ಅತ್ಯಂತ ಭೀಕರ ಬರವನ್ನು ಅನುಭವಿಸುತ್ತಿದೆ. ವಿಶ್ವಸಂಸ್ಥೆಯು ವರದಿ ಮಾಡಿದಂತೆ ಜುಲೈನಲ್ಲಿ ನಮೀಬಿಯಾ ಸಂಗ್ರಹಿಸಿಟ್ಟಿದ್ದ ಮೀಸಲು ಆಹಾರದಲ್ಲಿ 84% ರಷ್ಟು ಆಹಾರ ಖಾಲಿಯಾಗಿದೆ. ನಮೀಬಿಯಾದ ಜನಸಂಖ್ಯೆಯ ಅರ್ಧದಷ್ಟು ಜನರು ಮುಂಬರುವ ತಿಂಗಳುಗಳಲ್ಲಿ ಭಾರೀ ಆಹಾರದ ಸಮಸ್ಯೆ ಎದುರಿಸಬಹುದು. ಪರಿಸರ ಸಚಿವಾಲಯವು ಕೂಡಲೇ ಮಧ್ಯಪ್ರವೇಶಿಸದಿದ್ದರೆ ಭೀಕರ ಬರಗಾಲವು ಮಾನವ-ವನ್ಯಜೀವಿ ಸಂಘರ್ಷವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿತ್ತು.

    ಜಿಂಬಾಬ್ವೆ, ಜಾಂಬಿಯಾ, ಬೋಟ್ಸ್ವಾನಾ, ಅಂಗೋಲಾ ಮತ್ತು ನಮೀಬಿಯಾದಲ್ಲಿ ಅಂದಾಜು 2 ಲಕ್ಷ ಆನೆಗಳು ಇದ್ದು, ವಿಶ್ವದಲ್ಲೇ ಅತಿ ಹೆಚ್ಚು ಪ್ರಮಾಣದ ಆನೆಗಳು ಇಲ್ಲಿ ನೆಲೆಸಿವೆ. ಕಳೆದ ವರ್ಷ ಬೋಟ್ಸ್ವಾನಾ ಮತ್ತು ಜಿಂಬಾಬ್ವೆಯಲ್ಲಿ ನೂರಾರು ಆನೆಗಳು ಬರಗಾಲದಿಂದ ಸಾವನ್ನಪ್ಪಿದ್ದವು.

  • ರೈತರಿಗೆ ಗುಡ್‌ನ್ಯೂಸ್‌ –   ರಾಜ್ಯದ ಅನ್ನದಾತರಿಗೆ ಬರ ಪರಿಹಾರ ಬಿಡುಗಡೆ

    ರೈತರಿಗೆ ಗುಡ್‌ನ್ಯೂಸ್‌ – ರಾಜ್ಯದ ಅನ್ನದಾತರಿಗೆ ಬರ ಪರಿಹಾರ ಬಿಡುಗಡೆ

    ಬೆಂಗಳೂರು: ಬರದಿಂದ (Drought) ಕಂಗೆಟ್ಟ ರೈತರಿಗೆ ಸರ್ಕಾರ ಬೆಳೆ ಪರಿಹಾರವನ್ನು (Drought Relief Fund) ಬಿಡುಗಡೆ ಮಾಡಿದೆ.

    ಕೇಂದ್ರದಿಂದ ಸಿಕ್ಕಿದ 3,454 ಕೋಟಿ ರೂ. ಬೆಳೆ ನಷ್ಟ ಪರಿಹಾರವನ್ನು ಬಿಡುಗಡೆ ‌ಮಾಡಿ ರಾಜ್ಯ ಕಂದಾಯ ಇಲಾಖೆ (State Revenue Department) ಆದೇಶ ಪ್ರಕಟಿಸಿದೆ.

    ನೇರ ನಗದು ವರ್ಗಾವಣೆ (DBT) ಮೂಲಕ ಪರಿಹಾರ ಬಿಡುಗಡೆ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. 223 ಬರ ಪೀಡಿತ ತಾಲ್ಲೂಕುಗಳ 33,55,599 ರೈತರಿಗೆ ಅರ್ಹತೆಗನುಸಾರವಾಗಿ 2023 ರ ಮುಂಗಾರು ಹಂಗಾಮಿನ ಬೆಳೆ ನಷ್ಟವನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಗರ್ಭಿಣಿ – ದೂರು ನೀಡಿದ್ರೆ ಕೊಲೆ ಬೆದರಿಕೆ ಹಾಕಿದ್ದ ಯುವಕ

     

    ಈ ಹಿಂದೆ ಎಕರೆಗೆ ತಲಾ 2 ಸಾವಿರ ರೂ ಬೆಳೆ ನಷ್ಟ ಪರಿಹಾರವಾಗಿ 636.44 ಕೋಟಿ ರೂ. ಹಣವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಹಿಂದಿನ 2 ಸಾವಿರ ರೂ. ಹಿಡಿದುಕೊಂಡು ಉಳಿದ ಬೆಳೆ ನಷ್ಟ ಪರಿಹಾರ ವಿತರಿಸುವಂತೆ ಸರ್ಕಾರ ಆದೇಶ ನೀಡಿದೆ. ಇದನ್ನೂ ಓದಿ: ಅಮಿತ್‌ ಶಾ ನಕಲಿ ವೀಡಿಯೋ ಪ್ರಕರಣ – ಕಾಂಗ್ರೆಸ್‌ ಕಾರ್ಯಕರ್ತ ಅರೆಸ್ಟ್‌

     

  • ಬರ ಪರಿಹಾರ ಬಿಡುಗಡೆ – ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

    ಬರ ಪರಿಹಾರ ಬಿಡುಗಡೆ – ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

    ನವದೆಹಲಿ: ರಾಜ್ಯದ ಬರ ಪರಿಹಾರ (Drought Relief )ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ನೀಡಿದ ಅಂತರ್ ಸಚಿವಾಲಯದ ವರದಿಯನ್ನು (Inter Ministerial Central Team’s Report) ಸಲ್ಲಿಸುವಂತೆ ಸುಪ್ರೀಂಕೋರ್ಟ್ (Supreme Court) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ ಮುಂದಿನ ವಾರಕ್ಕೆ ವಿಚಾರಣೆ ಮುಂದೂಡಿತು.

    ಇಂದಿನ ವಿಚಾರಣೆಯಲ್ಲಿ ಕರ್ನಾಟಕ ಸರ್ಕಾರದ (Karnataka Government) ಪರ ವಾದ ಮಂಡಿಸಿದ ಕಪಿಲ್ ಸಿಬಲ್ (Kapil Sibal), ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ ಅದಕ್ಕಾಗಿ ಧನ್ಯವಾದಗಳು. ಆದರೆ ಬಿಡುಗಡೆ ಮಾಡಿರುವ ಪರಿಹಾರದ ಮೊತ್ತ ಕಡಿಮೆಯಾಗಿದೆ ಇದು ಅಸಮಂಜಸ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರ ಸರ್ಕಾರ ಪರ ವಾದಿಸಿದ ಅರ್ಟಾನಿ ಜನರಲ್ ಆರ್ ವೆಂಕಟರಮಣಿ, ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಪರಿಹಾರ ಬಿಡುಗಡೆ ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಚುನಾವಣೆಯಿಂದ 6 ವರ್ಷ ಮೋದಿ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

     

    ಇದೇ ಅಂಶವನ್ನು ಪ್ರಸ್ತಾಪಿಸಿದ ಸಿಬಲ್, ರಾಜ್ಯಕ್ಕೆ ಆಗಮಿಸಿದ ತಜ್ಞರ ತಂಡದ ವರದಿ ಏನು ಎಂಬುದು ರಾಜ್ಯಕ್ಕೆ ತಿಳಿದಿಲ್ಲ, ಅದರ ಪ್ರತಿಯನ್ನು ರಾಜ್ಯಕ್ಕೆ ನೀಡಿಲ್ಲ. ಹೀಗಾಗಿ ಆ ಪ್ರತಿಯನ್ನು ಕೋರ್ಟ್ ಮುಂದೆ ಇಡಬೇಕು. ಅದರ ಅನ್ವಯ ಪರಿಹಾರ ನೀಡುವುದಕ್ಕೆ ನಮ್ಮದು ಯಾವುದೇ ತಕರಾರು ಇಲ್ಲ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಲು ಸಮಯ ಬೇಕು ಎಂದು ಅರ್ಟಾನಿ ಜನರಲ್ ಕೇಳಿದರು‌. ಇದಕ್ಕೆ ನಿರಾಕರಿಸಿದ ಪೀಠ ಮುಂದಿನ ಸೋಮವಾರದೊಳಗೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿತು.

    ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ಬಳಿಕ ಕೇಂದ್ರ ಬರ ಪರಿಹಾರ ಬಿಡುಗಡೆ ಮಾಡಿದ್ದು ಈ ಪರಿಹಾರದ ಮೊತ್ತ ಕಡಿಮೆಯಾಗಿದೆ ಎಂದು ಈಗ ಮತ್ತೆ ತಕರಾರು ಎತ್ತಿದೆ.

  • ಕರ್ನಾಟಕಕ್ಕೆ ಅನ್ಯಾಯ, ಮೋದಿ ಸರ್ಕಾರ ರೈತರನ್ನು ದ್ವೇಷಿಸುತ್ತಿದೆ: ಸಿಎಂ ಕಿಡಿ

    ಕರ್ನಾಟಕಕ್ಕೆ ಅನ್ಯಾಯ, ಮೋದಿ ಸರ್ಕಾರ ರೈತರನ್ನು ದ್ವೇಷಿಸುತ್ತಿದೆ: ಸಿಎಂ ಕಿಡಿ

    ಬೆಂಗಳೂರು: ಬರ ಪರಿಹಾರ (Drought Relief Fund) ವಿಳಂಬ ಖಂಡಿಸಿ ಕಾಂಗ್ರೆಸ್ ನಾಯಕರು (Congress Leades) ವಿಧಾನಸೌಧ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.

    ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ, ಸಚಿವರಾದ ರಾಮಲಿಂಗ ರೆಡ್ಡಿ, ಕೆ.ಜೆ.ಜಾರ್ಜ್ ಹಾಗೂ ಕೃಷ್ಣ ಬೈರೇಗೌಡ ಕೇಂದ್ರ  ಸರ್ಕಾರದ ವಿರುದ್ದ ಪೋಸ್ಟರ್ ಪ್ರದರ್ಶಿಸಿ ಕಿಡಿಕಾರಿದರು. ಇದನ್ನೂ ಓದಿ: ತಂದೆಯ ಕಾರು ಹರಿದು ಪುಟ್ಟ ಕಂದಮ್ಮ ದುರ್ಮರಣ

    ಬೇಡ ಬೇಡ ಖಾಲಿ ಚೊಂಬು ಬೇಡ. ಚೋಂಬೇಶ್ವರನಿಗೆ ಚೊಂಬು ಕೊಟ್ಟ ಮೋದಿಗೆ (PM Narendra Modi) ಧಿಕ್ಕಾರ. ನರೇಂದ್ರ ಚೊಂಬೇಶ್ವರನಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ತರಬೇತಿ ವೇಳೆ ಪರಸ್ಪರ ಡಿಕ್ಕಿ ಹೊಡೆದುಕೊಂಡ ಹೆಲಿಕಾಪ್ಟರ್‌ಗಳು- 10 ಮಂದಿ ದುರ್ಮರಣ

    ಕಾಂಗ್ರೆಸ್ ಪಕ್ಷದ ವತಿಯಿಂದ ಕರ್ನಾಟಕ ಬಗ್ಗೆ ಕೇಂದ್ರದ ಮಲತಾಯಿ ಧೋರಣೆ ಖಂಡಿಸಿ ಪ್ರತಿಭಟನೆ ಮಾಡಿದ್ದೇವೆ. ಮೋದಿ ಮತ್ತು ಅಮಿತ್ ಶಾ ಕರ್ನಾಟಕ ರೈತರನ್ನು ದ್ವೇಷ ಮಾಡುತ್ತಿದ್ದಾರೆ. ಕರ್ನಾಟಕದ 220 ತಾಲೂಕಿನಲ್ಲಿ ಬರ ಇದೆ. ನಾವು ಗ್ಯಾರಂಟಿ ಯೋಜನೆಗೆ ದುಡ್ಡು ಕೇಳುತ್ತಿಲ್ಲ. ಬರದ ಪರಿಹಾರವನ್ನು ಕೇಳುತ್ತಿದ್ದೇವೆ ಎಂದು ಹೇಳಿದರು.

    ಅಮಿತ್ ಶಾ ಹಾಗೂ ಮೋದಿ ಯಾವ ಮುಖ ಇಟ್ಟುಕೊಂಡು ರಾಜ್ಯಕ್ಕೆ ಬರುತ್ತೀರಿ? 18 ಸಾವಿರ ಕೋಟಿ ಬರ ಪರಿಹಾರ ಕೊಡದೇ ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಯಾಕೆ? ಕನ್ನಡಿಗರ ಮೇಲೆ ದ್ವೇಷ ಯಾಕೆ ಎಂದು ಪ್ರಶ್ನಿಸಿ ಸಿಎಂ ವಾಗ್ದಾಳಿ ನಡೆಸಿದರು.

     

  • ಬರಪೀಡಿತ ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ನೋಡಿ ಕಲಿಯಿರಿ – ಬಿಜೆಪಿ ಅವಧಿಯ ದಾಖಲೆ ರಿಲೀಸ್‌ ಮಾಡಿ ವಿಜಯೇಂದ್ರ ತಿರುಗೇಟು

    ಬರಪೀಡಿತ ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ನೋಡಿ ಕಲಿಯಿರಿ – ಬಿಜೆಪಿ ಅವಧಿಯ ದಾಖಲೆ ರಿಲೀಸ್‌ ಮಾಡಿ ವಿಜಯೇಂದ್ರ ತಿರುಗೇಟು

    – ಬರ ನಿರ್ವಹಣೆಯಲ್ಲಿ ವೈಫಲ್ಯ, ಈಗ ಕೇಂದ್ರದ ಮೇಲೆ ಗೂಬೆ
    – ಚುನಾವಣಾ ಸಮಯದಲ್ಲಿ ಮೊಸಳೆ ಕಣ್ಣೀರು

    ಬೆಂಗಳೂರು: ಬರ (Drought) ನಿರ್ವಹಣೆಯಲ್ಲಿ ತನ್ನ ವೈಫಲ್ಯ ಹಾಗೂ ಬೇಜವಾಬ್ದಾರಿಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಸುಪ್ರೀಂ ಕೋರ್ಟ್ (Supreme Court) ಅಂಗಳ ಪ್ರವೇಶಿಸಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನಡೆ ರಾಜಕೀಯ ಪ್ರೇರಿತವಾಗಿದ್ದು ಇದು ಭಾರತದ ಒಕ್ಕೂಟ ವ್ಯವಸ್ಥೆಯನ್ನು ಅಪಮಾನಿಸುವ ಹಾಗೂ ಕರ್ನಾಟಕದ ಘನತೆಯನ್ನು ಕುಗ್ಗಿಸುವ ತಪ್ಪು ನಿರ್ಧಾರವಾಗಿದೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಿದ್ದರಾಮಯ್ಯ (Vijayendra Yediyurappa) ವಿರುದ್ಧ ಕಿಡಿಕಾರಿದ್ದಾರೆ.

    ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಬರ ಬಂದಾಗ ಬಿಜೆಪಿ (BJP) ಸರ್ಕಾರ ಏನು ಮಾಡಿತ್ತು ಮತ್ತು ಹಿಂದೆ ಕಾಂಗ್ರೆಸ್‌ (Congress) ಸರ್ಕಾರ ಏನು ಮಾಡಿತ್ತು ಎಂಬುದರ ಬಗ್ಗೆ ಲೆಕ್ಕದೊಂದಿಗೆ ವಿವರವನ್ನು ಹಂಚಿಕೊಂಡು ತಿರುಗೇಟು ನೀಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ‘ಕೈಲಾಗದವನು ಮೈಪರಚಿಕೊಂಡ’ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಎಲ್ಲ ಎಡವಟ್ಟುಗಳಿಗೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುವ ಮೂಲಕ ಚುನಾವಣಾ ಸಂದರ್ಭದ ಕುಟಿಲತನ ಪ್ರದರ್ಶಿಸಲು ಹೊರಟಿದ್ದಾರೆ.

    ಹಿಂದಿನ ಬಿಜೆಪಿ ಸರ್ಕಾರ ಬರ, ಪ್ರವಾಹ ಮುಂತಾದ ನೈಸರ್ಗಿಕ ವಿಕೋಪ ಎದುರಾದಾಗ ಕೇಂದ್ರ ಸರ್ಕಾರದ ನೆರವಿಗೆ ಕಾಯದೇ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯ ಸಮತೋಲನ ಕಾಯ್ದು ಕೊಂಡು ಸಂಕಷ್ಟಿತ ಜನರ ಕಣ್ಣೀರು ಒರೆಸಿ ಪರಿಹಾರ ನೀಡಿತ್ತು. ಆದರೆ ಕಿಂಚಿತ್ತೂ ರೈತ ಕಾಳಜಿ ಇಲ್ಲದ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಅಭಿವೃದ್ಧಿ ಶೂನ್ಯ ಜನವಿರೋಧಿ ಆಡಳಿತದ ಕರಾಳ ಮುಖವನ್ನು ಮುಚ್ಚಿಕೊಳ್ಳಲು ಜನರನ್ನು ದಿಕ್ಕು ತಪ್ಪಿಸಲು ಹೊರಟಿದೆ.

    ಯಡಿಯೂರಪ್ಪನವರ ಆಡಳಿತದ 2019ರಲ್ಲಿ 9,72,517 ಹೆಕ್ಟೇರ್‌ ಬೆಳೆಹಾನಿಯಾಗಿತ್ತು. ಆಗ 6,71,314 ಫಲಾನುಭವಿಗಳಿಗೆ 1232.20 ಕೋಟಿ ರೂ. ಪರಿಹಾರ ನೀಡಲಾಗಿತ್ತು. 2020ರಲ್ಲಿ 19,68,247 ಹೆಕ್ಟೇರ್‌ ಬೆಳೆಹಾನಿಯಾಗಿತ್ತು. ಆಗ 12,00,346 ಫಲಾನುಭವಿಗಳಿಗೆ 941.70 ಕೋಟಿ ರೂ. ಪರಿಹಾರ ನೀಡಲಾಗಿತ್ತು. 2021ರಲ್ಲಿ 14,93,811 ಹೆಕ್ಟೇರ್‌ ಬೆಳೆಹಾನಿಯಾಗಿತ್ತು. ಆಗ 18,56,083 ಫಲಾನುಭವಿಗಳಿಗೆ 2446.10 ಕೋಟಿ ರೂ. ಪರಿಹಾರ ನೀಡಲಾಗಿತ್ತು. 2022 ರಲ್ಲಿ 13,09,421, ಹೆಕ್ಟೇರ್‌ ಬೆಳೆಹಾನಿ ಆಗಿತ್ತು. ಆಗ 14,62,841 ಫಲಾನುಭವಿಗಳಿಗೆ 2031.15 ಕೋಟಿ ರೂ. ಪರಿಹಾರ ನೀಡಲಾಗಿತ್ತು.

    ಸಿದ್ದರಾಮಯ್ಯನವರ ನಿದ್ರೆ ಸರ್ಕಾರದ ಈ ನಾಟಕ ಹೊಸದೇನಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ರೈತರಿಗೆ ಬರ ಪರಿಹಾರ ವಿಷಯದಲ್ಲಿ ಇದೇ ರೀತಿ ನಾಟಕವಾಡುತ್ತದೆ. 2013-14ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಜುಲೈ-ಆಗಸ್ಟ್‌ ಅವಧಿಯ ಮುಂಗಾರಿನ ಬರಗಾಲಕ್ಕೆ 2014 ರ ಏಪ್ರಿಲ್‌ನಿಂದ ಇನ್‌ಪುಟ್‌ ಸಬ್ಸಿಡಿ ಪಾವತಿ ಮಾಡಲು ಶುರು ಮಾಡಿತ್ತು. ಅಂದರೆ ಅದಕ್ಕೆ ತೆಗೆದುಕೊಂಡ ಅವಧಿ 9 ತಿಂಗಳು.

    2014-15ರ ಸಾಲಿನಲ್ಲಿ ಇದೇ ಸಿದ್ದರಾಮಯ್ಯನವರ ಸರ್ಕಾರ 2014ರ ಜುಲೈ-ಆಗಸ್ಟ್‌ ಅವಧಿಯ ಬರಗಾಲಕ್ಕೆ ಪರಿಹಾರ ನೀಡಲು, 2015 ಮಾರ್ಚ್‌ನಿಂದ ಇನ್‌ಪುಟ್‌ ಸಬ್ಸಿಡಿ ಪಾವತಿ ಶುರು ಮಾಡಿತ್ತು. ಅಂದರೆ ಇದಕ್ಕೆ ತೆಗೆದುಕೊಂಡ ಅವಧಿ 8 ತಿಂಗಳು.

    2019-20 ನೇ ಸಾಲಿನಲ್ಲಿ ಬಿಜೆಪಿ ಸರ್ಕಾರವಿದ್ದಾಗ, 2019ರ ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಪ್ರವಾಹ ವಿಕೋಪ ಉಂಟಾಗಿತ್ತು. ಆಗ 2019ರ ಅಕ್ಟೋಬರ್‌ನಿಂದ ಇನ್‌ಪುಟ್‌ ಸಬ್ಸಿಡಿ ಪಾವತಿ ಶುರು ಮಾಡಲಾಗಿತ್ತು. ಅಂದರೆ ಬರ ಪರಿಹಾರ ನೀಡಲು ಬಿಜೆಪಿ ಸರ್ಕಾರ ತೆಗೆದುಕೊಂಡ ಅವಧಿ ಕೇವಲ 2 ತಿಂಗಳು. ಇದನ್ನೂ ಓದಿ: ಸೋನು ಶ್ರೀನಿವಾಸ ಗೌಡ ಯಾವುದೇ ಹಣದ ಸಹಾಯ ಮಾಡಿಲ್ಲ- ಪೊಲೀಸರಿಂದ ಸ್ಥಳ ಮಹಜರು

    2020-21 ರ ಸಾಲಿನಲ್ಲಿ, 2020ರ ಆಗಸ್ಟ್‌-ಅಕ್ಟೋಬರ್‌ನಲ್ಲಿ ಪ್ರವಾಹ ಉಂಟಾಗಿತ್ತು. ಆಗ ಅಕ್ಟೋಬರ್‌ನಿಂದಲೇ ಪರಿಹಾರ ವಿತರಣೆ ಶುರುವಾಗಿತ್ತು. ಅಂದರೆ ಬಿಜೆಪಿ ಸರ್ಕಾರ ತೆಗೆದುಕೊಂಡ ಅವಧಿ 2 ತಿಂಗಳು.

    2021-22 ನೇ ಸಾಲಿನಲ್ಲಿ, 2021ರ ಆಗಸ್ಟ್‌ನಲ್ಲಿ ಪ್ರವಾಹವಾದಾಗ, ಸೆಪ್ಟೆಂಬರ್‌ನಿಂದಲೇ ಪರಿಹಾರ ವಿತರಣೆ ಶುರುವಾಯಿತು. ಅದಕ್ಕೆ ತೆಗೆದುಕೊಂಡ ಅವಧಿ 2 ತಿಂಗಳು. ಇದೇ ಸಾಲಿನಲ್ಲಿ, ಮತ್ತೊಮ್ಮೆ ಅಕ್ಟೋಬರ್‌-ನವೆಂಬರ್‌ ನಲ್ಲಿ ಪ್ರವಾಹ ಉಂಟಾಗಿ, ಆಗ ನವೆಂಬರ್‌ ನಿಂದಲೇ ಪರಿಹಾರ ವಿತರಣೆ ಮಾಡಲಾಯಿತು. ಅದಕ್ಕೆ ತೆಗೆದುಕೊಂಡ ಅವಧಿ 1 ತಿಂಗಳು. ಇದನ್ನೂ ಓದಿ: ಕಾವೇರಿ ನೀರಿನಲ್ಲಿ ಕಾರು ವಾಶ್‌: ಮಾಲೀಕರಿಗೆ 5 ಸಾವಿರ ದಂಡ ವಿಧಿಸಿದ ಜಲಮಂಡಳಿ

    2022-23 ನೇ ಸಾಲಿನಲ್ಲಿ, 2022ರ ಮೇ-ಜೂನ್‌-ಜುಲೈ ತಿಂಗಳಲ್ಲಿ ಪ್ರವಾಹವಾದಾಗ ಜುಲೈನಿಂದ ಪರಿಹಾರ ವಿತರಣೆ ಶುರು ಮಾಡಲಾಯಿತು. ಅದಕ್ಕೆ ತೆಗೆದುಕೊಂಡ ಅವಧಿ 1 ತಿಂಗಳು. ಮತ್ತೆ ಇದೇ ಸಾಲಿನಲ್ಲಿ, 2022 ರ ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಪ್ರವಾಹ ಉಂಟಾಯಿತು. ಆಗ 2 ತಿಂಗಳಲ್ಲಿ ಪರಿಹಾರ ವಿತರಣೆ ಶುರು ಮಾಡಲಾಯಿತು.

     

    ಮೇಲಿನ ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಒಂದಂತೂ ಸ್ಪಷ್ಟವಾಗುತ್ತದೆ. ಕಷ್ಟ ಕಾಲದಲ್ಲಿ ರೈತರ ನೆರವಿಗೆ ಬರುವುದಕ್ಕಿಂತ ರೈತರ ಕಣ್ಣೀರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಕಾಂಗ್ರೆಸ್ ಸರ್ಕಾರದ ಅಮಾನವೀಯ ಕುತಂತ್ರ ಅನ್ನಿಸುತ್ತಿದೆ.

    ಮಾನ್ಯ ಸಿದ್ದರಾಮಯ್ಯನವರೇ, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಜೊತೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ಬರಪೀಡಿತ ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ನೋಡಿ ನೀವು ಕಲಿಯಬೇಕಿದೆ. ಇದುವರೆಗು ಸುಮ್ಮನಿದ್ದು ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿರುವ ಈ ಹೊತ್ತಿನಲ್ಲೇ ಸುಪ್ರೀಂ ಕದ ತಟ್ಟುತ್ತಿರುವ ನಿಮ್ಮ ಕಾಂಗ್ರೆಸ್ ಸರ್ಕಾರದ ಕಾಳಜಿ ‘ಮೊಸಳೆ ಕಣ್ಣೀರಿನದು’ಎಂಬುದನ್ನು ಅರ್ಥಮಾಡಿಕೊಳ್ಳುವಷ್ಟು ಕರ್ನಾಟಕದ ಜನತೆ ಪ್ರಬುದ್ಧರಿದ್ದಾರೆ, ಇದಕ್ಕೆ ತಕ್ಕನಾದ ಉತ್ತರ ಅತೀ ಶೀಘ್ರದಲ್ಲೇ ನೀವು ಪಡೆಯಲ್ಲಿದ್ದೀರಿ.

     

  • 15 ಪತ್ರ ಬರೆದರೂ ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ- ಚೆಲುವರಾಯಸ್ವಾಮಿ

    15 ಪತ್ರ ಬರೆದರೂ ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ- ಚೆಲುವರಾಯಸ್ವಾಮಿ

    ಬೆಂಗಳೂರು: ಕೇಂದ್ರ ಸರ್ಕಾರಕ್ಕೆ 15 ಪತ್ರ ಬರೆದರೂ ಬರ ಪರಿಹಾರಕ್ಕೆ ಇದೂವರೆಗೂ ಹಣ ಬಿಡುಗಡೆ ಮಾಡಿಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ (Cheluvarayaswamy) ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.

    ವಿಧಾನ ಪರಿಷತ್ (Vidhan Parishad) ‌ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ (JDS) ಶರವಣ ತೋಟಗಾರಿಕೆ ಬೆಲೆ ನಷ್ಟ ಮತ್ತು ಪರಿಹಾರದ ಬಗ್ಗೆ ಪ್ರಶ್ನೆ ಕೇಳಿದರು. ಇದನ್ನೂ ಓದಿ: ಕೇಂದ್ರ ಸರ್ಕಾರ ಪ್ರಚಾರಕ್ಕಾಗಿ ಭಾರತ್ ರೈಸ್ ಕೊಡ್ತಿದೆ – ಮುನಿಯಪ್ಪ ಕಿಡಿ

     

    ಇದಕ್ಕೆ ಉತ್ತರ ನೀಡಿದ ಚೆಲುವರಾಯಸ್ವಾಮಿ, ರಾಜ್ಯದಲ್ಲಿ ತೀವ್ರ ಬರಗಾಲದಿಂದ (Drought) 5,11,208 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಕೇಂದ್ರಕ್ಕೆ ಪರಿಹಾರಕ್ಕಾಗಿ ಪತ್ರ ಬರೆದು 5 ತಿಂಗಳು ಆಗಿದೆ. ಈವರೆಗೂ ಕೇಂದ್ರ ಸರ್ಕಾರ (Union Government) ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಈವರೆಗೂ 15 ಪತ್ರ ಕೇಂದ್ರಕ್ಕೆ ಬರೆಯಲಾಗಿದೆ. ಸಿಎಂ ಅವರು ಪ್ರಧಾನಿ, ಅಮಿತ್ ಶಾ ಅವರಿಗೆ ಮನವಿ ಮಾಡಿದರೂ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸಚಿವ ಅಮಿತ್ ಶಾ ಸಭೆ ಮಾಡುತ್ತೇನೆ ಎಂದರೂ ಸಭೆ ಮಾಡಿಲ್ಲ. ಕೇಂದ್ರದ ಬರ ಅಧ್ಯಯನ ತಂಡವೇ ವರದಿ ಕೊಟ್ಟರೂ ಕೇಂದ್ರ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಪರೀಕ್ಷೆ ವೇಳೆ ಲೋಡ್ ಶೆಡ್ಡಿಂಗ್ – ಸೋಲಾರ್ ಬೀದಿ ದೀಪದ ಕೆಳಗೆ ಓದುತ್ತಿದ್ದಾರೆ ವಿದ್ಯಾರ್ಥಿನಿಯರು

    ನಾವು ಗ್ಯಾರಂಟಿ ಯೋಜನೆಗಳಿಂದ ಹಣ ಇಲ್ಲ ಎಂದು ಎಲ್ಲೂ ಹೇಳಿಲ್ಲ.ಕೇಂದ್ರ ಸರ್ಕಾರ ಪರಿಹಾರ ಕೊಡದೇ ಹೋದರೂ ರಾಜ್ಯ ಸರ್ಕಾರ 2 ಸಾವಿರ ಪರಿಹಾರ ಹಣ ಕೊಡಲಾಗುತ್ತಿದೆ. ಇಲ್ಲಿಯವರೆಗೆ 30,24,795 ರೈತರಿಗೆ 573.28 ಕೋಟಿ ಪರಿಹಾರ ನೀಡಲಾಗಿದೆ. ಕೇಂದ್ರ ಸರ್ಕಾರದ ನಿರೀಕ್ಷೆಯಲ್ಲಿ ಇದ್ದೇವೆ.ಪರಿಹಾರ ಬಂದ ಕೂಡಲೇ ರೈತರಿಗೆ ಪರಿಹಾರ ಬಿಡುಗಡೆ ಮಾಡ್ತೀವಿ ಅಂತ ತಿಳಿಸಿದರು.

     

  • ನೀನು‌ ಎಷ್ಟು ಟ್ಯಾಕ್ಸ್  ಕಟ್ತೀಯಾ ಹೇಳು – ರೈತನ ವಿರುದ್ಧ ಸುರೇಶ್‌ ಗರಂ

    ನೀನು‌ ಎಷ್ಟು ಟ್ಯಾಕ್ಸ್ ಕಟ್ತೀಯಾ ಹೇಳು – ರೈತನ ವಿರುದ್ಧ ಸುರೇಶ್‌ ಗರಂ

    ರಾಮನಗರ: ಬರ ಪರಿಹಾರ ಕೇಳಿದ ರೈತನ (Farmer) ಮೇಲೆ ಬೆಂಗಳೂರು ಗ್ರಾಮಾಂತರ (Bengaluru Rural) ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ (DK Suresh) ಗರಂ ಆಗಿದ್ದಾರೆ.

    ಮಾಗಡಿ (Magadi) ತಾಲೂಕಿನ ಜನಸಂಪರ್ಕ ಸಭೆಯಲ್ಲಿ ಬರ (Drought) ಪರಿಹಾರದ ಕುರಿತ ಸದನದಲ್ಲಿ ಚರ್ಚೆ ಮಾಡಿ ಹೆಚ್ಚಿನ ಪರಿಹಾರ ಕೊಡಿಸಿ ಎಂದು ರೈತ ಹೇಳಿದ್ದಕ್ಕೆ ಸುರೇಶ್ ಸಿಟ್ಟಾಗಿದ್ದಾರೆ.

     

    ಸರ್ಕಾರ 5 ಕೆ.ಜಿ ಅಕ್ಕಿ ಕೊಡುತ್ತಿದೆ. ಇನ್ನುಳಿದ 5 ಕೆಜಿಗೆ ಹಣ ಕೊಡುತ್ತಿದೆ. ರೈತರ ಪಂಪ್ ಸೆಟ್‌ಗೆ ವಿದ್ಯುತ್ ಖರೀದಿ ಮಾಡುತ್ತಿದೆ. ನಾವು ಪ್ರತಿ ದಿನ ಬೆಳಗ್ಗೆ ಜೆಡಿಎಸ್‌, ಬಿಜೆಪಿಯವರ ಕೈಯಲ್ಲಿ ಬೈಸಿಕೊಳ್ಳುತ್ತಿದ್ದೇವೆ. ನೀನಿನ್ನೂ ಅದು ಕೊಡಿ, ಇದು ಕೊಡಿ ಅಂತಿದ್ದೀಯಾ. ನೀನು‌ ಎಷ್ಟು ಟ್ಯಾಕ್ಸ್ ಕಟ್ಟುತ್ತಿದ್ದೀಯ ಹೇಳು? ನೀನು ಟ್ಯಾಕ್ಸ್ ಕಟ್ಟುವುದಿಲ್ಲ ಎಂದು ಗರಂ ಆದರು.  ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲೂ ಯೋಗಿ ಸರ್ಕಾರದ ಬುಲ್ಡೋಜರ್ ದಾಳಿ – ಕಟ್ಟಡಗಳು ಧ್ವಂಸ

    ತೆರಿಗೆ (Tax) ಕಟ್ಟದವರಿಗೆ ಯಾಕೆ ಉಚಿತ ನೀಡಬೇಕು ಎಂದು ಮೋದಿ (Narendra Modi) ಕೇಳುತ್ತಿದ್ದಾರೆ. ಮೋದಿ ಯಾರ ಹತ್ತಿರವೂ ಮಾತನಾಡುವುದಿಲ್ಲ. ಅವರು ಹೇಳಿದನ್ನು ನೀನು ಕೇಳಿಕೊಳ್ಳಬೇಕು. ನಿನಗೆ ಮೋದಿಯೇ ಸರಿ ಅಂದರೆ ನಾನು‌ ಏನು‌ ಮಾಡಲು ಆಗುತ್ತೆ? ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಬೇಡಿಕೆಯನ್ನು ಇಡಬೇಕು ಎಂದರು.

     

    ಎಲ್ಲರಿಗೂ ಆಸೆ ಇದೆ, ಏನು ಕೊಟ್ಟರೂ ಸಾಲುವುದಿಲ್ಲ. ಸರ್ಕಾರಿ ನೌಕರರಿಗೂ ಸಮಾಧಾನ ಇಲ್ಲ. ಪಂಚಾಯತ್ ಸದಸ್ಯರು, ಶಾಸಕರು ಸಮಾಧಾನವಾಗಿಲ್ಲ. ಬೆಳಗ್ಗೆ ಎದ್ದು ಯಾರು ದುಡಿಮೆ ಮಾಡುತ್ತಾನೋ ಅವನೇ ಸಮಾಧಾನವಾಗಿದ್ದಾನೆ. ಇವತ್ತಿನ‌ ಪರಿಸ್ಥಿತಿ ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ. ನೀನು ನೆಮ್ಮದಿಯಾಗಿಲ್ಲ, ನಿನಗೆ ದಿನವೂ ಆಸೆ ಜಾಸ್ತಿ ಆಗುತ್ತಿದೆ ಎಂದು ಕಿಡಿಕಾರಿದರು.

  • ರಾಜ್ಯ ಸರ್ಕಾರ 10 ಸಾವಿರ ಕೋಟಿ ಬರ ಪರಿಹಾರ ಘೋಷಣೆ ಮಾಡದಿದ್ರೆ ಬಿಜೆಪಿಯಿಂದ ವಿಧಾನಸೌಧ ಮುತ್ತಿಗೆ: ಕೋಟ ಎಚ್ಚರಿಕೆ

    ರಾಜ್ಯ ಸರ್ಕಾರ 10 ಸಾವಿರ ಕೋಟಿ ಬರ ಪರಿಹಾರ ಘೋಷಣೆ ಮಾಡದಿದ್ರೆ ಬಿಜೆಪಿಯಿಂದ ವಿಧಾನಸೌಧ ಮುತ್ತಿಗೆ: ಕೋಟ ಎಚ್ಚರಿಕೆ

    ರಾಮನಗರ: ರಾಜ್ಯ ಸರ್ಕಾರ ಈ ಕೂಡಲೇ 10 ಸಾವಿರ ಕೋಟಿ ರೂ. ಬರ (Drought) ಪರಿಹಾರ ಘೋಷಣೆ ಮಾಡಿ. ಇಲ್ಲದೇ ಹೋದರೆ ಬಿಜೆಪಿಯಿಂದ (BJP) ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಎಚ್ಚರಿಕೆ ನೀಡಿದ್ದಾರೆ.

    ಗುರುವಾರ ರಾಮನಗರಕ್ಕೆ ಆಗಮಿಸಿದ್ದ ಬಿಜೆಪಿ ಬರ ಅಧ್ಯಯನ ತಂಡ (Drought Study Team) ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಮಾಜಿ ಸಚಿವ ಕೋಟಾ ಶ್ರೀನಿವಾಸಪೂಜಾರಿ ನೇತೃತ್ವದಲ್ಲಿ ಬರ ಪರಿಶೀಲನೆ ಮಾಡಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

    ರಾಜ್ಯ ಸರ್ಕಾರ ಬರ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಈವರೆಗೂ ಯಾವೊಬ್ಬ ರೈತನಿಗೂ ಪರಿಹಾರ ನೀಡಿಲ್ಲ. ಕೇವಲ 324 ಕೋಟಿ ರೂ. ಅನುದಾನ ಬಿಡುಗಡೆ ಮಾಡ್ತೀವಿ ಎಂದು ಸಿಎಂ ಹೇಳಿದ್ದಾರೆ. ಮೊದಲು ಸೂಕ್ತ ಪರಿಹಾರ ನೀಡದೇ ಕೇಂದ್ರದ ಕಡೆ ಕೈ ತೋರಿಸುತ್ತಿದ್ದಾರೆ. ಸುಖಾ ಸುಮ್ಮನೆ ಕೇಂದ್ರದ ಕಡೆ ಬೊಟ್ಟು ಮಾಡುವುದು ಬಿಟ್ಟು ಮೊದಲು ಪರಿಹಾರ ನೀಡಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಶುಕ್ರವಾರ ಬಳ್ಳಾರಿ ಬಂದ್‌ಗೆ ಕರೆ – ಬಹುತೇಕ ಸಂಘಟನೆಯ ಬೆಂಬಲ

    ರಾಜ್ಯದಲ್ಲಿ 39 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾಳಾಗಿದೆ. 3 ಲಕ್ಷ ತೋಟಗಾರಿಕೆ ಬೆಳೆ ಹಾಳಾಗಿದೆ. 33 ಸಾವಿರ ಕೋಟಿ ನಷ್ಟ ಆಗಿರೋ ಬಗ್ಗೆ ಸಿದ್ದರಾಮಯ್ಯ ಹೇಳಿದ್ರು. ಮೊದಲು ನೀವು 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ. ಆಮೇಲೆ ಪ್ರಧಾನಿಯನ್ನು ಕೇಳೋಣ. ಆಗ ನಾವು ಜೊತೆಗೆ ಬರುತ್ತೇವೆ ಎಂದು ಹೇಳಿದರು.

    ಜಾನುವಾರುಗಳ ಮೇವು ಹಾಗೂ ಗೋಶಾಲೆಗಳ ಸಮಸ್ಯೆ ಆಗಿದೆ. ರೈತರು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಇದೆ. ಕೂಡಲೇ 10 ಸಾವಿರ ಕೋಟಿ ರೂ. ಪರಿಹಾರ ಘೋಷಣೆ ಮಾಡಿ. ಇಲ್ಲವಾದರೆ ಮಾಜಿ ಸಿಎಂ ಬಿಎಸ್‌ವೈ, ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಲಿಂಗಾಯತ ನಾಯಕರು ಕಾಂಗ್ರೆಸ್‌ನಲ್ಲಿ ಅಲೆಮಾರಿಗಳಾಗಿದ್ದಾರೆ: ಗೋವಿಂದ ಕಾರಜೋಳ

  • ಬರ ಪರಿಸ್ಥಿತಿಯ ಅಧ್ಯಯನ ಮಾಡಿ, ವರದಿ ನೀಡುವಂತೆ ಸಚಿವರಿಗೆ ಸಿಎಂ ಪತ್ರ

    ಬರ ಪರಿಸ್ಥಿತಿಯ ಅಧ್ಯಯನ ಮಾಡಿ, ವರದಿ ನೀಡುವಂತೆ ಸಚಿವರಿಗೆ ಸಿಎಂ ಪತ್ರ

    – ಬರ ಪರಿಹಾರ ಕೋರಿ ಮತ್ತೊಮ್ಮೆ ಕೇಂದ್ರಕ್ಕೆ ರಾಜ್ಯದಿಂದ ಪತ್ರ

    ಮೈಸೂರು: ಎಲ್ಲಾ ಜಿಲ್ಲಾ ಮಂತ್ರಿಗಳು ನವೆಂಬರ್ 15 ರೊಳಗೆ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಬರ (Drought) ಪರಿಸ್ಥಿತಿಯ ಅಧ್ಯಯನ ಹಾಗೂ ಜನರನ್ನು ಭೇಟಿ ಮಾಡಿ ವರದಿ (Report) ನೀಡುವಂತೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

    ಮೈಸೂರಿನಲ್ಲಿ (Mysuru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರ ಪರಿಹಾರ ಕಾರ್ಯಗಳಿಗೆ 900 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಪರಿಹಾರ ಕಾರ್ಯಗಳು ಪ್ರಾರಂಭವಾಗಿವೆ. ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಯಾವುದೇ ಕೆಲಸ ನಿಲ್ಲಿಸಿಲ್ಲ ಎಂದರು. ಕುಡಿಯುವ ನೀರು, ಉದ್ಯೋಗ ನೀಡುವುದು ಯಾವುದೂ ನಿಂತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ವರಿಷ್ಠರೇ ಎಲ್ಲಾ ಮಾಡೋದಾದ್ರೆ ನೀವೇನು ಬೆರಳು ಚೀಪ್ತಿದ್ರಾ – ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ

    ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 600 ಕೋಟಿ ರೂ. ಬಿಡುಗಡೆ:
    ನಾವು ಪತ್ರ ಬರೆದ ಮೇಲೆ 600 ಕೋಟಿ ರೂ.ಗಳನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಶನಿವಾರ ಬಿಡುಗಡೆ ಮಾಡಿದ್ದಾರೆ. 33 ಕೋಟಿ ರೂ.ಗಳಷ್ಟು ಹಾನಿಯಾಗಿದ್ದು, ಮಾರ್ಗಸೂಚಿ ಪ್ರಕಾರ 17,900 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ಕೋರಿದ್ದೇವೆ. ಇವತ್ತಿನವರೆಗೆ ನಮ್ಮ ರಾಜ್ಯದ ಮಂತ್ರಿಗಳಿಗೆ ಕೇಂದ್ರ ಸಚಿವರು ಭೇಟಿಗೆ ಅವಕಾಶವನ್ನೇ ನೀಡಿಲ್ಲ. ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸಚಿವರನ್ನು ಕಳುಹಿಸಲಾಗಿತ್ತು. ಮೂವರಿಗೂ ಭೇಟಿಗೆ ಅವಕಾಶ ನೀಡಿಲ್ಲ. ಪ್ರಧಾನಮಂತ್ರಿಗಳೂ ಸಮಯಾವಕಾಶ ನೀಡಿಲ್ಲದ ಕಾರಣ ಅವರು ಕೃಷಿ, ಕಂದಾಯ ಹಾಗೂ ಗೃಹ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಬಂದಿದ್ದಾರೆ ಎಂದರು.

    ಭೇಟಿಗೆ ಅವಕಾಶ ನೀಡದಿರುವುದು ಕೇಂದ್ರಕ್ಕೆ ಕರ್ನಾಟಕದ ಬಗ್ಗೆ ಇರುವ ನಿರ್ಲಕ್ಷ್ಯ ಹಾಗೂ ಮಲತಾಯಿ ಧೋರಣೆಯನ್ನು ಕೇಂದ್ರ ಸರ್ಕಾರ ತೋರಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಸಹಿಸಲು ಸಾಧ್ಯವಾಗುತ್ತಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ 135 ಸ್ಥಾನ ಗಳಿಸುತ್ತದೆ ಎಂದು ಅವರು ನಿರೀಕ್ಷಿಸಿರಲಿಲ್ಲ. ಬಿಜೆಪಿ ಕೇಂದ್ರಕ್ಕೆ ತಪ್ಪುಚಿತ್ರಣ ನೀಡಿದ್ದರು. ಅದಕ್ಕಾಗಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಬದಲಾವಣೆ ಮಾಡಿಬಿಡುತ್ತೇವೆ ಎಂದು ಸಾಕಷ್ಟು ಬಾರಿ ಭೇಟಿ ನೀಡಿದ್ದರು. ಕೇಂದ್ರಕ್ಕೆ ಪುನಃ ಪತ್ರ ಬರೆಯಲಾಗಿದೆ. ಪರಿಹಾರಕ್ಕಾಗಿ ಒತ್ತಾಯ ಮಾಡಲು ಪ್ರಧಾನಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಪುನಃ ಪತ್ರ ಬರೆಯಲಾಗಿದೆ ಎಂದು ನುಡಿದರು. ಇದನ್ನೂ ಓದಿ: ಭಯಾನಕ ಹವಾಮಾನ ಘಟನೆ, ಭಯೋತ್ಪಾದಕ ದಾಳಿಗಳಲ್ಲಿ ಹೆಚ್ಚಳ: 2024 ಕ್ಕೆ ಬಾಬಾ ವಂಗಾ ಭವಿಷ್ಯವಾಣಿ

    ಬಿಜೆಪಿಗೆ ಕಾಳಜಿ ಇದ್ದರೆ ದೆಹಲಿಗೆ ತೆರಳಿ ಹಣ ಬಿಡುಗಡೆ ಮಾಡಿಸಲಿ:
    ಬಿಜೆಪಿ ಅವರು ರಾಜ್ಯದಲ್ಲಿ ಪ್ರವಾಸ ಮಾಡುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಶಾಸಕರು ಇಲ್ಲಿ ಪ್ರವಾಸ ಮಾಡಿ ಏನು ಮಾಡುತ್ತಾರೆ? ಅವರಿಗೆ ಕರ್ನಾಟಕದ ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ದೆಹಲಿಗೆ ತೆರಳಿ ಹಣ ಬಿಡುಗಡೆ ಮಾಡಿಸಲಿ ಎಂದರು.

    ಬಡವರಿಗೆ ಗ್ಯಾರಂಟಿ ಯೋಜನೆ ನೀಡುವುದು ಟೀಕಿಸುವ ವಿಚಾರವಲ್ಲ:
    ಇಲ್ಲಿಯ ತನಕ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುತ್ತಿದ್ದ ಮೋದಿ ಅವರು ಪಂಚ ರಾಜ್ಯಗಳ ಚುನಾವಣೆಯಲ್ಲಿ ಆಶ್ವಾಸನೆ ಕೊಡುತ್ತಿರುವ ಬಗ್ಗೆ ಮಾತನಾಡಿ ರಾಜಕೀಯವಾಗಿ ಟೀಕೆ ಮಾಡಿದ್ದಾರೆ. ರಾಜ್ಯ ದಿವಾಳಿಯಾಗುತ್ತದೆ, ಕೊಡಲಾಗುವುದಿಲ್ಲ ಎಂದು ರಾಜಕೀಯವಾಗಿ ಹೇಳಿದ್ದಾರೆ. ಬಡವರಿಗೆ ಗ್ಯಾರಂಟಿ ಯೋಜನೆ ನೀಡುವುದು ಟೀಕಿಸುವ ವಿಚಾರವಲ್ಲ. ಅವರು ಗ್ಯಾರಂಟಿಗಳನ್ನು ಕೊಟ್ಟರೆ ಅದು ಬಡವರ ಕಾರ್ಯಕ್ರಮ. ನಾವು ನೀಡಿದರೆ ರಾಜ್ಯ ದಿವಾಳಿಯಾಗುತ್ತದೆ ಎನ್ನುತ್ತಾರೆ. ಅವರೇನೇ ಹೇಳಿದರೂ ನಾವು ಬಡವರ, ಸಾಮಾನ್ಯ ಜನರ, ಹಳ್ಳಿಗಾಡಿನ, ಎಲ್ಲಾ ಜಾತಿಯ ಬಡವರ ಪರವಾಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ತೀವ್ರ ಸ್ಥಿತಿಯಲ್ಲಿ ಗಾಳಿ ಗುಣಮಟ್ಟ – ನ.10 ರವರೆಗೆ ದೆಹಲಿಯ ಪ್ರಾಥಮಿಕ ಶಾಲೆಗಳು ಕ್ಲೋಸ್

    ಬಿಜೆಪಿ, ಜೆಡಿಎಸ್ ಹತಾಶರಾಗಿದ್ದಾರೆ:
    ಮುಖ್ಯಮಂತ್ರಿಗಳ ಕುರ್ಚಿ ಇವತ್ತು ನಾಳೆ ಬೀಳಲಿದೆ ಎಂದು ಬಿಜೆಪಿ, ಜೆಡಿಎಸ್ ಹೇಳಿಕೆ ನೀಡುತ್ತಿರುವ ಬಗ್ಗೆ ಮಾತನಾಡಿ, ಅವರು ಹತಾಶರಾಗಿದ್ದಾರೆ. ಅವರು ಸರ್ಕಾರ ರಚಿಸುವುದಾಗಿ ಭಾವಿಸಿದ್ದರು. ಅದಾಗದೆ ಇದ್ದುದರಿಂದ ಹತಾಶರಾಗಿದ್ದಾರೆ ಎಂದರು.

    ಕ್ಷೇತ್ರಗಳ ಸಾಧನೆಗಳ ಬಗ್ಗೆ ಮಾತನಾಡಲು ಮಂತ್ರಿಗಳಿಗೆ ಸೂಚನೆ:
    ಸಿಎಂ ಕುರ್ಚಿ ಬಗ್ಗೆ ಬಿಜೆಪಿ ಚರ್ಚೆ ಮಾಡುತ್ತಿದ್ದಾರೆ. ನಮ್ಮ ಶಾಸಕರು, ಸಚಿವರು ಈ ಬಗ್ಗೆ ಮಾತನಾಡಕೂಡದು ಎಂದು ತಿಳಿಸಲಾಗಿದೆ. ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಲಾಗಿದ್ದು, ಇನ್ನು ಮುಂದೆ ಮುಖ್ಯಮಂತ್ರಿಗಳ ಸ್ಥಾನದ ಬಗ್ಗೆ ಮಾತನಾಡಬಾರದು. ಏನಿದ್ದರೂ ನಿಮ್ಮ ಕ್ಷೇತ್ರಗಳ ಸಾಧನೆಗಳ ಬಗ್ಗೆ ಮಾತನಾಡಿ ಎಂದು ಸೂಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

    ನಾಳೆಯೇ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳಾದರೆ ತಮ್ಮ 17 ಶಾಸಕರ ಬೆಂಬಲ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದು ವ್ಯಂಗ್ಯವಾಗಿ ಹೇಳಿರುವುದು. ಕುಮಾರಸ್ವಾಮಿ ಅವರಿಗೆ ವ್ಯಂಗ್ಯವಾಗಿ ಹೇಳುವುದೂ ಬರುತ್ತದೆ ಎನ್ನುವುದೇ ನಮಗೆ ಖುಷಿ ಎಂದರು. ಮೊದಲು ಎನ್‌ಡಿಎ ಬಿಟ್ಟು ಹೊರಬರಲಿ ಎಂದಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂ ಆಗಿ ಹುಟ್ಟಿದ್ದೇನೆ ಹಿಂದೂ ಆಗೇ ಸಾಯುತ್ತೇನೆ: ಸಿ.ಟಿ ರವಿ

    ಈಶ್ವರಪ್ಪ ಸವಕಲು ನಾಣ್ಯ:
    ಕಾಂತರಾಜು ವರದಿ ಸುಟ್ಟುಹಾಕಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾಂತರಾಜು ವರದಿ ಜಾರಿಮಾಡಿ ಎಂದು ಈಶ್ವರಪ್ಪ ಭಾಷಣ ಮಾಡಿದ್ದರು. ಅವರ ಮಾತಿಗೆ ಬೆಲೆ ಇದೆಯೇ? ಅವರೆಲ್ಲಾ ಸವಕಲು ನಾಣ್ಯಗಳು. ಬಿಜೆಪಿಯಲ್ಲಿಯೇ ಅವರು ಸವಕಲು ನಾಣ್ಯ ಎಂದು ಟಿಕೆಟ್ ನೀಡಿಲ್ಲ. ಅವರ ಮಾತುಗಳಿಗೆ ಏನು ಬೆಲೆ ಇದೆ? ವರದಿ ನೀಡಿದರೆ ಅದನ್ನು ಸ್ವೀಕರಿಸುತ್ತೇವೆ ಎಂದರು. ವರದಿಯಲ್ಲಿ ಏನಿದೆ ಎಂದು ನಮಗೆ ತಿಳಿದಿಲ್ಲ ಎಂದರು. ಇದನ್ನೂ ಓದಿ: ಡಿಕೆಶಿ ಸಿಎಂ ಆಗೋಕೆ ಕುಮಾರಸ್ವಾಮಿ ಬೆಂಬಲ ಕೊಡೋದಾದ್ರೆ ಕೊಡಲಿ: ಪರಮೇಶ್ವರ್ ಲೇವಡಿ