Tag: ಬಯೋ ಬಬಲ್

  • 14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್

    14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್

    ದುಬೈ: ವೆಸ್ಟ್ ಇಂಡೀಸ್ ಸ್ಟಾರ್ ಆಟಗಾರ, ಪಂಜಾಬ್ ಕಿಂಗ್ಸ್ ತಂಡದ ಕ್ರಿಸ್ ಗೇಲ್ ಬಯೋಬಬಲ್‍ಗೆ ಬೇಸತ್ತು 14ನೇ ಐಪಿಎಲ್‍ನಿಂದ ಹೊರ ನಡೆದಿದ್ದಾರೆ.

    ಕಳೆದ ಕೆಲ ತಿಂಗಳಿನಿಂದ ನಾನು ಸಿಡಬ್ಲ್ಯುಐ ಬಬಲ್, ಸಿಪಿಎಲ್ ಬಬಲ್ ನಂತರ ಐಪಿಎಲ್ ಬಬಲ್‍ನ ಭಾಗವಾಗಿದ್ದೇನೆ. ಈಗ ನಾನು ಮಾನಸಿಕವಾಗಿ ಸಿದ್ಧವಾಗಲು ಮತ್ತು ರಿಫ್ರೆಶ್ ಆಗಲು ಬಯಸುತ್ತೇನೆ ಎಂದು ಗೇಲ್ ಹೇಳಿದ್ದಾರೆ. ಇದನ್ನೂ ಓದಿ: ಆರ್​ಸಿಬಿಗೆ ಹರ್ಷ ತಂದ ಅನ್​ಕ್ಯಾಪ್ಡ್​ ಪ್ಲೇಯರ್

    ವಿಶ್ವಕಪ್‍ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ನೆರವಾಗಲು ದುಬೈನಲ್ಲಿ ವಿರಾಮ ಪಡೆಯುತ್ತಿದ್ದೇನೆ. ನನಗೆ ಅನುಮತಿ ನೀಡಿದ ಪಂಜಾಬ್ ತಂಡಕ್ಕೆ ಧನ್ಯವಾದಗಳು. ಮುಂಬರುವ ಪಂದ್ಯಗಳಿಗೆ ಶುಭ ಹಾರೈಕೆಗಳು ಎಂದು ಗೇಲ್ ಹೇಳಿದ್ದಾರೆ.

    ಈ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಗೇಲ್ ಲಭ್ಯ ಇರುವುದಿಲ್ಲ ಎಂದು ಪಂಜಾಬ್ ತಂಡ ಟ್ವೀಟ್ ಮಾಡಿದೆ.

    42 ವರ್ಷದ ಗೇಲ್ ಈ ವರ್ಷ ವೆಸ್ಟ್ ಇಂಡೀಸ್, ಸೈಂಟ್ ಕೀಟ್ಸ್, ನೆವಿಸ್ ಪ್ಯಾಟ್ರಿಯಾಟ್ಸ್, ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದಾರೆ. ಕೋವಿಡ್ 19 ಹಿನ್ನೆಲೆಯಲ್ಲಿ ಎಲ್ಲ ಟೂರ್ನಿಗಳು ಬಯೋಬಬಲ್ ಆಡಿಯಲ್ಲಿ ನಡೆದಿತ್ತು. ಹೀಗಾಗಿ ಆಟಗಾರರು ಕೋವಿಡ್ 19 ನಿಯಮವನ್ನು ಉಲ್ಲಂಘಿಸುವಂತಿಲ್ಲ.