Tag: ಬಬಿತಾ ಫೋಗಟ್

  • ʻದಂಗಲ್‌ʼ ಸಿನಿಮಾ ಗಳಿಸಿದ್ದು 2,000 ಕೋಟಿ, ನಮಗೆ ಸಿಕ್ಕಿದ್ದು ಕೇವಲ 1 ಕೋಟಿ: ಬಬಿತಾ ಫೋಗಟ್‌

    ʻದಂಗಲ್‌ʼ ಸಿನಿಮಾ ಗಳಿಸಿದ್ದು 2,000 ಕೋಟಿ, ನಮಗೆ ಸಿಕ್ಕಿದ್ದು ಕೇವಲ 1 ಕೋಟಿ: ಬಬಿತಾ ಫೋಗಟ್‌

    ಚಂಡೀಗಢ: ಆಮೀರ್‌ ಖಾನ್‌ ನಟನೆಯ ಬ್ಲಾಕ್‌ಬಸ್ಟರ್‌ ʻದಂಗಲ್‌ʼಸಿನಿಮಾ (Dangal Cinema) ಇಡೀ ವಿಶ್ವದಾದ್ಯಂತ ಗಳಿಸಿದ್ದು 2,000 ಕೋಟಿ ರೂ. ಆದ್ರೆ ನಮ್ಮ ಕುಟುಂಬಕ್ಕೆ ಸಿಕ್ಕಿದ್ದು ಕೇವಲ 1 ಕೋಟಿ ರೂ. ಎಂದು ಭಾರತದ ಮಾಜಿ ಕುಸ್ತಿಪಟು ಬಬಿತಾ ಫೋಗಟ್‌ (Babita Phogat) ಬಹಿರಂಗಪಡಿಸಿದ್ದಾರೆ.

    2016ರಲ್ಲಿ ತೆರೆ ಕಂಡ‌ ಬಬಿತಾ ಫೋಗಟ್‌ ಅವರ ಜೀವನಾಧಾರಿತ ಬಾಲಿವುಡ್‌ ಸಿನಿಮಾ (Bollywood Movie) ʻದಂಗಲ್‌ʼ ದೇಶಾದ್ಯಂತ ಭರ್ಜರಿ ಕಮಾಲ್‌ ಮಾಡಿತ್ತು. ಸದ್ಯ ಕುಸ್ತಿ ಬಿಟ್ಟು ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಬಬಿತಾ ಅವರು ದಂಗಲ್‌ ಚಿತ್ರದ ಹಣಕಾಸಿನ ವಿವರವನ್ನ ಬಹಿರಂಗಪಡಿಸಿದ್ದಾರೆ. ದಂಗಲ್‌ ಚಿತ್ರವು ವಿಶ್ವದಾದ್ಯಂತ 2,000 ಕೋಟಿ ರೂ. ಗಳಿಸಿತು. ಆದ್ರೆ ಚಿತ್ರ ತಯಾಕರಿಂದ ನಮಗೆ ಸಿಕ್ಕಿದ್ದು ಕೇವಲ 1 ಕೋಟಿ ರೂ. ಮಾತ್ರ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಯುದ್ಧಕ್ಕೆ ನಮ್ಮ ಬೆಂಬಲ ಇಲ್ಲ: BRICS ಶೃಂಗಸಭೆಯಲ್ಲಿ ಮೋದಿ ಸ್ಪಷ್ಟನೆ

    ಇದರಿಂದ ನಿಮಗೆ ಭ್ರಮನಿರಸನವಾಗಿದೆಯೇ ಎಂದು ನಿರೂಪಕರು ಮರು ಪ್ರಶ್ನೆ ಮಾಡಿದಾಗ ಪ್ರತಿಕ್ರಿಯಿಸಿದ ಬಬಿತಾ, ಇದು ತಮ್ಮ ತಂದೆ ಮಹಾವೀರ್ ಸಿಂಗ್‌ ಫೋಗಟ್ (Mahavir Singh) Phogat) ಅವರಲ್ಲಿ ಅಡಗಿರುವ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಏಕೆಂದರೆ ನಮಗೆ ಜನರ ಪ್ರೀತಿ ಹಾಗೂ ಗೌರವ ಬೇಕು ಹಣ ಮುಖ್ಯವಲ್ಲ ಎಂದು ನಮ್ಮ ತಂದೆ ನಮಗೆ ಹೇಳಿದ್ದರು ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವ್ರು ಗನ್ ತಗೊಂಡು ಹೋದ್ರು, ಬುಲೆಟ್‌ಗಳು ಬಿಜೆಪಿ-ಜೆಡಿಎಸ್‌ನಲ್ಲಿವೆ: ಸುರೇಶ್ ಬಾಬು

    2016ರ ಡಿಸೆಂಬರ್ 23ರಂದು ಬಿಡುಗಡೆಯಾದ ದಂಗಲ್ ಚಿತ್ರವನ್ನು ನಿತೀಶ್ ತಿವಾರಿ ನಿರ್ದೇಶಿಸಿದ್ದು, ಆಮೀರ್ ಖಾನ್, ಮಹಾವೀರ್ ಫೋಗಟ್ ಅವರ ಪ್ರಮುಖ ಪಾತ್ರ ನಿರ್ವಹಿಸಿರುವುದು ಮಾತ್ರವಲ್ಲದೇ ಈ ಚಿತ್ರದ ಸಹ ನಿರ್ಮಾಪಕರೂ ಹೌದು. ಇದು ಮಾಜಿ ಕುಸ್ತಿಪಟು ಮಹಾವೀರ್ ಫೋಗಟ್ ಅವರು ತಮ್ಮ ಮಕ್ಕಳಾದ ಗೀತಾ ಹಾಗೂ ಬಬಿತಾ ಅವರನ್ನು ವಿಶ್ವದರ್ಜೆಯ ಕುಸ್ತಿಪಟುಗಳಾಗಿ ಬೆಳೆಸಿದ ಕಥಾನಕವನ್ನು ಬಿಂಬಿಸುತ್ತದೆ. ಇದನ್ನೂ ಓದಿ: `ಮಹಾ’ ಚುನಾವಣೆ: ಎನ್‌ಸಿಪಿ ಮೊದಲ ಪಟ್ಟಿ ಬಿಡುಗಡೆ – ಬಾರಾಮತಿಯಿಂದ ಅಜಿತ್ ಪವಾರ್ ಸ್ಪರ್ಧೆ

  • ಸಾಕ್ಷಿ ಮಲಿಕ್ ಕಾಂಗ್ರೆಸ್ ಕೈಗೊಂಬೆ; ನಿಜ ಉದ್ದೇಶ ಬಹಿರಂಗಪಡಿಸೋ ಸಮಯ ಬಂದಿದೆ – ಬಬಿತಾ ಫೋಗಟ್

    ಸಾಕ್ಷಿ ಮಲಿಕ್ ಕಾಂಗ್ರೆಸ್ ಕೈಗೊಂಬೆ; ನಿಜ ಉದ್ದೇಶ ಬಹಿರಂಗಪಡಿಸೋ ಸಮಯ ಬಂದಿದೆ – ಬಬಿತಾ ಫೋಗಟ್

    ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ (Brij Bhushan Sharan Singh) ವಿರುದ್ಧ ಕುಸ್ತಿಪಟುಗಳು (Wrestlers) ಮಾಡಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಲೇ ಇದೆ. ಇದೀಗ ಭಾರತದ ಕುಸ್ತಿಪಟು ಬಬಿತಾ ಫೋಗಟ್ (Babita Phogat) ಈ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿ, ಸಾಕ್ಷಿ ಮಲಿಕ್ (Sakshi Malik) ಅವರನ್ನು ಕಾಂಗ್ರೆಸ್‌ನ ಕೈಗೊಂಬೆ ಎಂದು ಆರೋಪಿಸಿದ್ದಾರೆ.

    ರಾಜಕೀಯ ಪ್ರೇರಿತವೆಂದು ಭಾರೀ ಟೀಕೆಗೆ ಗುರಿಯಾಗಿದ್ದ ತಮ್ಮ ಹೋರಾಟದ ಬಗ್ಗೆ ಶನಿವಾರ ಕುಸ್ತಿಪಟುಗಳು ಸ್ಪಷ್ಟನೆ ನೀಡಿದ್ದರು. ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ. ಕೇಂದ್ರ ಸರ್ಕಾರದ ವಿರುದ್ಧವೂ ಅಲ್ಲ. ನಮ್ಮ ಹೋರಾಟ ಬ್ರಿಜ್ ಭೂಷಣ್ ವಿರುದ್ಧ ಮಾತ್ರ ಎಂದು ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಹಾಗೂ ಅವರ ಪತಿ ಸತ್ಯವರ್ತ್ ಕಡಿಯಾನ್ ಹೇಳಿದ್ದರು.

    ಈ ಬಗ್ಗೆ 11 ನಿಮಿಷಗಳ ಸುದೀರ್ಘ ವೀಡಿಯೋ ಹಂಚಿಕೊಂಡಿದ್ದ ಸಾಕ್ಷಿ ಮಲಿಕ್ ತಮ್ಮ ಹೋರಾಟದ ಬಗ್ಗೆ ಸ್ಪಷ್ಟನೆ ನೀಡುತ್ತಾ, ನಮ್ಮ ಹೋರಾಟದ ಬಗ್ಗೆ ವದಂತಿಗಳನ್ನು ಹರಡಲಾಗುತ್ತಿದೆ. ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ. ಕಳೆದ ಜನವರಿಯಲ್ಲಿ ನಾವು ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಇಳಿದಾಗ ಇಬ್ಬರು ಬಿಜೆಪಿ ನಾಯಕರನ್ನೇ ಕೋರಿ ಪೊಲೀಸರಿಂದ ಅನುಮತಿ ಪಡೆದುಕೊಂಡಿದ್ದೆವು. ಕಳೆದ 10-12 ವರ್ಷಗಳಿಂದ ಕುಸ್ತಿಪಟುಗಳ ಮೇಲೆ ಕಿರುಕುಳ ನಡೆಯುತ್ತಲೇ ಬಂದಿದೆ. 90% ಕ್ಕೂ ಹೆಚ್ಚು ಕುಸ್ತಿಪಟುಗಳು ತೊಂದರೆ ಅನುಭವಿಸುತ್ತಿರುವುದು ತಿಳಿದಿತ್ತು. ಆದರೆ ಒಗ್ಗಟ್ಟಿನ ಕೊರತೆಯಿಂದಾಗಿ ಸುಮ್ಮನಿದ್ದೆವು ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ – ಕುಸ್ತಿಪಟುಗಳ ಸ್ಪಷ್ಟನೆ

    ಈ ವೀಡಿಯೋವನ್ನು ಬಿಡುಗಡೆ ಮಾಡಿದ ಬಳಿಕ ಪ್ರತಿಕ್ರಿಯಿಸಿರುವ ಬಬಿತಾ ಫೋಗಟ್, ನನ್ನ ಕಿರಿಯ ಸಹೋದರಿ ಹಾಗೂ ಆಕೆಯ ಪತಿ ಮಾಡಿರುವ ವೀಡಿಯೋ ನೋಡಿ ನನಗೆ ಬಹಳ ದುಃಖ ಹಾಗೂ ನಗು ಎರಡೂ ಬಂದಿದೆ. ಸಾಕ್ಷಿ ಮಲಿಕ್ ಪ್ರದರ್ಶಿಸಿರುವ ಅನುಮತಿ ಪತ್ರದಲ್ಲಿ ನನ್ನ ಹೆಸರು ಅಥವಾ ಸಹಿ ಎಲ್ಲಿಯೂ ಇಲ್ಲ. ಸಹಮತಕ್ಕೆ ಇದು ಪುರಾವೆಯಾಗಲು ಸಾಧ್ಯವಿಲ್ಲ ಎಂದಿದ್ದಾರೆ.

    ನಿಮ್ಮ ಉದ್ದೇಶಗಳ ಬಗ್ಗೆ ದೇಶದ ಜನರಿಗೆ ಸ್ಪಷ್ಟನೆ ಸಿಗುತ್ತಿದೆ. ಹೊಸ ಸಂಸತ್ ಉದ್ಘಾಟನೆ ಸಂದರ್ಭ ನೀವು ನಡೆಸಿರುವ ಪ್ರತಿಭಟನೆ ಮತ್ತು ಗಂಗಾ ನದಿಯಲ್ಲಿ ಪದಕಗಳನ್ನು ವಿಸರ್ಜಿಸುವ ಬೆದರಿಕೆ ಹಾಕಿದ್ದು ದೇಶಕ್ಕೆ ಮುಜುಗರ ಉಂಟುಮಾಡಿದೆ. ನೀವು ಕಾಂಗ್ರೆಸ್‌ನ ಕೈಗೊಂಬೆಗಳು ಎಂಬುದು ಈಗ ದೇಶದ ಜನರಿಗೆ ಮನದಟ್ಟಾಗುತ್ತಿದೆ. ನಿಮ್ಮ ನಿಜವಾದ ಉದ್ದೇಶ ಏನು ಎಂಬುದನ್ನು ಬಹಿರಂಗಪಡಿಸಬೇಕಾದ ಸಮಯ ಬಂದಿದೆ ಎಂದು ಬಬಿತಾ ಫೋಗಟ್ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬಿಕ್ಕಟ್ಟಿನ ನಡುವೆ 5 ವರ್ಷಗಳ ಬಳಿಕ ಅಮೆರಿಕ ರಾಜ್ಯ ಕಾರ್ಯದರ್ಶಿ ಚೀನಾಗೆ ಮೊದಲ ಭೇಟಿ

  • ಬಿಜೆಪಿಯಿಂದ ಚುನಾವಣೆಗಿಳಿದಿದ್ದ ಬಬಿತಾ ಫೋಗಟ್, ಯೋಗೇಶ್ವರ್ ಗೆ ಸೋಲು

    ಬಿಜೆಪಿಯಿಂದ ಚುನಾವಣೆಗಿಳಿದಿದ್ದ ಬಬಿತಾ ಫೋಗಟ್, ಯೋಗೇಶ್ವರ್ ಗೆ ಸೋಲು

    -ಗೆದ್ದ ಹಾಕಿ ಆಟಗಾರ ಸಂದೀಪ್ ಸಿಂಗ್

    ಚಂಡೀಗಢ: ಈ ಬಾರಿ ಬಿಜೆಪಿ ಹರ್ಯಾಣದಲ್ಲಿ ಮೂರು ಕ್ರೀಡಾಪಟುಗಳಿಗೆ ಬಿ ಫಾರಂ ನೀಡಿತ್ತು. ಕುಸ್ತಿಪಟುಗಳಾದ ಬಬಿತಾ ಪೋಗಾಟ್, ಯೋಗೇಶ್ವರ್ ದತ್ ಮತ್ತು ಹಾಕಿ ಆಟಗಾರ ಸಂದೀಪ್ ಸಿಂಗ್ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಬಬಿತಾ ಮತ್ತು ಯೋಗೇಶ್ವರ್ ಮೊದಲ ಚುನಾವಣೆಯಲ್ಲಿ ಸೋಲಿನ ರುಚಿ ನೀಡಿದರು. ಇತ್ತ ಸಂದೀಪ್ ಸಿಂಗ್ ಗೆದ್ದು ಜಯದ ನಗೆ ಬೀರಿದ್ದಾರೆ.

    ಬದೌಡಾ ವಿಧಾನಸಭಾ ಕ್ಷೇತ್ರದಲ್ಲಿ ಯೋಗೇಶ್ವರ್ ದತ್ ಕಣದಲ್ಲಿದ್ದು, ಕಾಂಗ್ರೆಸ್‍ನ ಶ್ರೀಕೃಷ್ಣ ಹೂಡಾಗೆ ನೇರ ಪೈಪೋಟಿ ನೀಡಿದ್ದರು. ಆರಂಭದಿಂದಲೂ ಮುನ್ನಡೆ ಸಾಧಿಸುತ್ತ ಬಂದ ಶ್ರೀಕೃಷ್ಣ ಗೆಲುವಿನ ಕೇಕೆ ಹಾಕಿದರು. 2014ರ ಚುನಾವಣೆಯಲ್ಲಿಯೂ ಶ್ರೀಕೃಷ್ಣ ಶಾಸಕರಾಗಿ ಆಯ್ಕೆಯಾಗಿದ್ದರು.

    ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ಬಿಜೆಪಿಯಿಂದ ಪೆಹೊವಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆರಂಭದಿಂದಲೂ ಕಾಂಗ್ರೆಸ್ ನ ಮನ್ದೀಪ್ ಸಿಂಗ್ ಗೆ ಟಕ್ಕರ್ ನೀಡುತ್ತಾ ಬಂದಿದ್ದರು.

    ದಾದ್ರಿ ವಿಧಾನಸಭಾ ಕ್ಷೇತ್ರದಿಂದ ಬಬಿತಾ ಫೋಗಾಟ್ ಕಣಕ್ಕಿಳಿದಿದ್ದರು. ಪಕ್ಷೇತರ ಅಭ್ಯರ್ಥಿ ಸೋಮ್‍ವೀರ್ ಸಂಗ್ವಾನ್ ವಿರುದ್ಧ ಬಬಿತಾ ಸೋಲು ಕಂಡಿದ್ದಾರೆ. ಬಿಜೆಪಿಯಿಂದ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಸೋಮ್ ವೀರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಮಲ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ.

  • ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದ ಬಬಿತಾ ಫೋಗಟ್

    ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದ ಬಬಿತಾ ಫೋಗಟ್

    ಚಂಡೀಗಢ: ಕಾಮನ್ ವೆಲ್ತ್ ಪಂದ್ಯಗಳಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದ ಕುಸ್ತಿಪಟು ಬಬಿತಾ ಫೋಗಟ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. 29 ವರ್ಷದ ಬಬಿತಾ ಹರ್ಯಾಣ ಪೊಲೀಸ್ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ.

    ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಬಬಿತಾ ಫೋಗಟ್, ಬಿಜೆಪಿ ಪಕ್ಷ ಸೇರ್ಪಡೆಯಾಗುವ ಉದ್ದೇಶದಿಂದ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದೇನೆ. ಸರ್ಕಾರಿ ಉದ್ಯೋಗಿಯಾಗಿ ಒಂದು ಪಕ್ಷದಲ್ಲಿ ಗುರುತಿಸಿಕೊಳ್ಳುವುದು ತಪ್ಪು. ಹಾಗಾಗಿ ಗೊಂದಲಗಳಿಗೆ ಎಡೆಮಾಡಿಕೊಡದೇ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಬಿತಾ, ಚರಖಿ ದಾದರೀ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೀಳಿಯಲಿದ್ದಾರೆ ಎಂದು ವರದಿಯಾಗಿದೆ.

    ನನ್ನ ರಾಜೀನಾಮೆಯನ್ನು ಆಗಸ್ಟ್ 13ರಂದು ನೀಡಿದ್ದೇನೆ. ಹರ್ಯಾಣ ಪೊಲೀಸ್ ಇಲಾಖೆ ನನ್ನ ರಾಜೀನಾಮೆಯನ್ನು ಅಂಗೀಕರಿಸಿದೆ. ಆಗಸ್ಟ್ 12ರಂದು ತಂದೆ ಮಹಾವೀರ್ ಫೋಗಟ್ ಜೊತೆ ಬಬಿತಾ ಅಧಿಕೃತವಾಗಿ ಕೇಂದ್ರ ಸಚಿವ ಕಿರಣ್ ರಿಜಿಜೂ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದು ತಿಳಿಸಿದ್ದಾರೆ.

    29 ವರ್ಷದ ಬಬಿತಾ ಫೋಗಟ್ 2014 ಮತ್ತು 2018ರ ಕಾಮನ್‍ವೆಲ್ತ್ ಪಂದ್ಯಗಳಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. 2012ರ ವರ್ಲ್ಡ್ ರೆಸಲಿಂಗ್ ಚಾಂಪಿಯನ್‍ಶಿಪ್ ನಲ್ಲಿ ಕಂಚಿನ ಪದಕ ಪಡೆದಿದ್ದರು.