Tag: ಬಪ್ಪಿ ಲಹರಿ

  • ಸ್ವರ್ಗದಲ್ಲಿ ಇಬ್ಬರು ಲೆಜೆಂಡ್ಸ್ – ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಸುರಿಮಳೆ

    ಸ್ವರ್ಗದಲ್ಲಿ ಇಬ್ಬರು ಲೆಜೆಂಡ್ಸ್ – ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಸುರಿಮಳೆ

    ಮುಂಬೈ: ಒಂದೇ ತಿಂಗಳಲ್ಲಿ ಇಬ್ಬರು ಲೆಜೆಂಡ್ ಸಿಂಗರ್‍ಗಳನ್ನು ಭಾರತ ಚಿತ್ರರಂಗ ಕಳೆದುಕೊಂಡಿದೆ. ಪರಿಣಾಮ ಟ್ವೀಟ್‍ನಲ್ಲಿ ಭಾವನ್ಮಾಕ ಸಾಲುಗಳನ್ನು ಬರೆದುಕೊಂಡು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

    ಇದೇ ತಿಂಗಳು ಫೆ.06 ರಂದು ಲತಾ ಮಂಗೇಶ್ವರ್ ಅಗಲಿದ್ದು, ನಿನ್ನೆ ರಾತ್ರಿ ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ಬಪ್ಪಿ ಲಹರಿ ನಿಧನರಾಗಿದ್ದಾರೆ. ಈ ಹಿನ್ನೆಲೆ ಅಭಿಮಾನಿಗಳು, ನಮ್ಮ ಭಾರತೀಯ ಚಿತ್ರರಂಗ ಬಡವಾಗಿದೆ. ಇಬ್ಬರು ಪ್ರಸಿದ್ಧ ಗಾಯಕರನ್ನು ನಮ್ಮ ಚಿತ್ರರಂಗ ಕಳೆದುಕೊಂಡಿದೆ ಎಂದು ಸಂತಾಪ ಸೂಚಿಸುತ್ತಿದ್ದಾರೆ.

    https://twitter.com/Chaipeelofranss/status/1493826182697025537?ref_src=twsrc%5Etfw%7Ctwcamp%5Etweetembed%7Ctwterm%5E1493826182697025537%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Fentertainment%2Ftwo-legends-in-heaven-now-on-twitter-tributes-to-bappi-lahiri-and-lata-mangeshkar-2771818

    ಭಾರತೀಯ ಸಿನಿಮಾರಂಗದಲ್ಲಿ ಸಂಗೀತದ ಅಭಿಮಾನಿಗಳಿಗೆ ಈ ತಿಂಗಳು ತುಂಬಾ ಕಷ್ಟದ ದಿನವಾಗಿದೆ. ಈ ತಿಂಗಳಲ್ಲಿಯೇ ಇಬ್ಬರು ಲೆಜೆಂಡ್ ಗಳನ್ನು ನಮ್ಮ ಭಾರತೀಯ ಚಿತ್ರರಂಗ ಕಳೆದುಕೊಂಡಿದೆ. ಫೆಬ್ರವರಿ 6 ರಂದು ಲತಾ ಮಂಗೇಶ್ಕರ್, ನಿನ್ನೆ ರಾತ್ರಿ ಬಪ್ಪಿ ಲಹರಿ. ಪರಿಣಾಮ ಇಂದು ಟ್ವಿಟ್ಟರ್ ನಲ್ಲಿ, ಇಬ್ಬರನ್ನೂ ಪ್ರೀತಿ ಮತ್ತು ಗೌರವದಿಂದ ಸ್ಮರಿಸಲಾಗುತ್ತಿದೆ. ಇದನ್ನೂ ಓದಿ: ವಿಷ್ಣುವರ್ಧನ್ ಅವರ ಸಿನಿಮಾಗೆ ಬಪ್ಪಿ ಲಹರಿ ಹಾಡು

    ಲತಾ ಮಂಗೇಶ್ಕರ್ ಮತ್ತು ಬಪ್ಪಿ ಲಹರಿ ಹಾಡುಗಳನ್ನು ಮರೆಯಲು ಆಗುವುದೇ ಇಲ್ಲ. ಇವರಿಬ್ಬರ ಕೀರ್ತಿ ಮತ್ತು ಅಭಿಮಾನಿ ಬಳಗ ದೊಡ್ಡದು. ಬಪ್ಪಿ ಲಹರಿ ಅವರು ನಿನ್ನೆ ತಡರಾತ್ರಿ ಮುಂಬೈ ಆಸ್ಪತ್ರೆಯಲ್ಲಿ ಸ್ಲೀಪ್ ಅಪ್ನಿಯಾದಲ್ಲಿ ನಿಧನರಾದರು. ಈ ಹಿನ್ನೆಲೆ ಟ್ವಿಟ್ಟರ್ ನಲ್ಲಿ, ಇಬ್ಬರು ಲೆಜೆಂಡ್ಸ್ ಈಗ ಸ್ವರ್ಗದಲ್ಲಿದ್ದಾರೆ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಭಾರತೀಯ ಸಂಗೀತ ಉದ್ಯಮ 2 ರತ್ನಗಳನ್ನು ಕಳೆದುಕೊಂಡಿದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

    ನಿನ್ನೆ ನಿಧನರಾದ ಬಪ್ಪಿ ಲಾಹಿರಿ, ಲತಾ ಮಂಗೇಶ್ಕರ್ ಮತ್ತು ಬಂಗಾಳಿ ಗಾಯಕಿ ಸಂಧ್ಯಾ ಮುಖರ್ಜಿ ಅವರನ್ನು ನೆನಪಿಸಿಕೊಂಡು ಅಭಿಮಾನಿಯೊಬ್ಬರು, ಈ ಫೆಬ್ರವರಿಯಲ್ಲಿ ನಾವು ಮೂರು ಪ್ರಸಿದ್ಧ ಗಾಯಕರನ್ನು ಕಳೆದುಕೊಂಡಿದ್ದೇವೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

    ಭಾರತೀಯ ಸಂಗೀತ ಉದ್ಯಮದ ಎರಡು ಐಕಾನ್‍ಗಳು ಎಂದು ಟ್ವೀಟ್ ಗಳ ಸುರಿಮಳೆ ಕೇಳಿಬರುತ್ತಿದೆ. ಫೆಬ್ರವರಿ 6 ರಂದು ಲತಾ ಮಂಗೇಶ್ಕರ್ ಅವರ ಮರಣದ ನಂತರ, ಬಪ್ಪಿ ಲಹಿರಿ ಅವರು ತಮ್ಮ ಬಾಲ್ಯದ ಥ್ರೋಬ್ಯಾಕ್ ಪೋಸ್ಟ್ ಮಾಡಿದ್ದು, ಮಾ ಎಂದು ಬರೆದುಕೊಂಡಿದ್ದರು.

    v

     

    View this post on Instagram

     

    A post shared by Bappi Lahiri (@bappilahiri_official_)

    ಲತಾ ಮಂಗೇಶ್ಕರ್ ಅವರು ಹಿಂದಿ, ಮರಾಠಿ, ಬಂಗಾಳಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದ್ದಾರೆ. ಲತಾ ಅವರಿಗೆ ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳ ಜೊತೆಗೆ ಹಲವಾರು ರಾಷ್ಟ್ರೀಯ ಮತ್ತು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಲತಾ ಮಂಗೇಶ್ಕರ್ ಅವರ ‘ವೀರ್-ಜಾರಾ’ ಆಲ್ಬಂ ಸಾಂಗ್ ಆಗಿತ್ತು. ಈ ಸಾಂಗ್ ಅನ್ನು 2004ರಲ್ಲಿ ಬಿಡುಗಡೆ ಮಾಡಲಾಗಿತ್ತು. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್

    ಬಪ್ಪಿ ಲಹರಿ ಅವರು 1970-80ರ ದಶಕದ ಚಲ್ತೆ ಚಲ್ತೆ, ಡಿಸ್ಕೋ ಡ್ಯಾನ್ಸರ್ ಮತ್ತು ಶರಾಬಿಯಂತಹ ಸಿನಿಮಾಗಳಿಗೆ ಹಿಟ್ ಸಾಂಗ್‍ಗಳನ್ನು ಸಂಯೋಜಿಸಿದ್ದು, ಜನಪ್ರಿಯರಾಗಿದ್ದರು. ಅವರು ಕೊನೆಯದಾಗಿ 2020ರಲ್ಲಿ ಬಿಡುಗಡೆಯಾದ ‘ಭಾಗಿ 3’ ಸಿನಿಮಾದಲ್ಲಿ ಸಾಂಗ್ ಹಾಡಿದ್ದಾರೆ. ಹಿರಿಯ ಗಾಯಕ ರಿಯಾಲಿಟಿ ಶೋ ಬಿಗ್‍ಬಾಸ್ 15ರ ಕೊನೆಯ ಸೀಸನ್‍ನಲ್ಲಿಯೂ ಸಹ ಕಾಣಿಸಿಕೊಂಡಿದ್ದರು.

  • ಬಪ್ಪಿ ಲಹರಿ ಧರಿಸುತ್ತಿದ್ದ ಚಿನ್ನಾಭರಣ ಎಷ್ಟು?

    ಬಪ್ಪಿ ಲಹರಿ ಧರಿಸುತ್ತಿದ್ದ ಚಿನ್ನಾಭರಣ ಎಷ್ಟು?

    ಮುಂಬೈ: ಮಹಿಳೆಯರಿಗೆ ಚಿನ್ನಾಭರಣದ ಮೇಲೆ ಅತೀವ ಪ್ರೀತಿ. ಹೆಚ್ಚಾಗಿ ಮತ್ತು ಸಾಮಾನ್ಯವಾಗಿ ಮಹಿಳೆಯರೇ ಹೆಚ್ಚು ಚಿನ್ನಾಭರಣ ಧರಿಸುತ್ತಾರೆ. ಇದಕ್ಕೆ ಅಪವಾದವಾಗಿದ್ದರು ಬಾಲಿವುಡ್ ನ ಖ್ಯಾತ ಗಾಯಕ ಬಪ್ಪಿ ಲಹರಿ.

    ತಮ್ಮದೇ ಆದ ವಿಶಿಷ್ಟ ಗಾಯನದ ಮೂಲಕ ಕೇಳುಗರನ್ನು ಅವರು ಯಾವ ಪರಿ ಮಂತ್ರಮುಗ್ಧರನ್ನಾಗಿಸುತ್ತಿದ್ದರೋ, ಅಷ್ಟೇ ಅವರು ತಾವು ಧರಿಸುತ್ತಿದ್ದ ಚಿನ್ನಾಭರಣಗಳಿಂದ ಗಮನ ಸೆಳೆಯುತ್ತಿದ್ದರು. ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, ‘ನನಗೆ ಯಾಕಾದರೂ ರಾತ್ರಿ ಆಗತ್ತೋ? ಚಿನ್ನಾಭರಣಗಳನ್ನು ಬಿಚ್ಚಿಟ್ಟು ಮಲಗಿಕೊಳ್ಳಬೇಕಲ್ಲ ಎನ್ನುವ ಸಂಕಟ ಪ್ರತಿ ದಿನವೂ ಕಾಡುತ್ತದೆ’ ಎಂದಿದ್ದರು. ಆ ಮಟ್ಟಿಗೆ ಅವರು ಚಿನ್ನಾಭಿಮಾನಿ. ಇದನ್ನೂ ಓದಿ: ಹಿರಿಯ ಗಾಯಕ ಬಪ್ಪಿ ಲಹರಿ ಇನ್ನಿಲ್ಲ

    ಕೊರಳ ತುಂಬಾ ಚಿನ್ನ, ಬೆರಳ ತುಂಬಾ ಚಿನ್ನ. ಮುಚ್ಚಿಟ್ಟಿದ್ದಕ್ಕಿಂತ ಅವರು ಚಿನ್ನಾಭರಣಗಳನ್ನು ಬಿಚ್ಚಿಟ್ಟಿದ್ದೇ ಹೆಚ್ಚು. ಅದು ಯಾವುದೇ ಶೋ ಆಗಿರಲಿ, ಕಾರ್ಯಕ್ರಮ ಎಲ್ಲಿಯೇ ಇರಲಿ, ಅದಕ್ಕೆ ತಕ್ಕಂತೆ ಅವರು ಚಿನ್ನಾಭರಣಗಳನ್ನು ಧರಿಸುತ್ತಿದ್ದರು. ರಿಯಾಲಿಟಿ ಶೋಗಳಲ್ಲಿ ತಮಗೆ ಕಾಡಿದ ಹಾಡುಗಾರನಿಗೆ ಅವರು ಸಾಕಷ್ಟು ಭಾರಿ ತಮ್ಮ ಮೈಮೇಲಿನ ಆಭರಣವನ್ನು ಬಿಚ್ಚಿಕೊಟ್ಟಿದ್ದೂ ಇದೆ.

    ಏಳು ದೊಡ್ಡ ಸರಗಳು, ಎಂಟು ಚಿಕ್ಕ ಸರ ಹಾಗೂ ದೊಡ್ಡದಾಗಿ ಲಾಕೆಟ್ ಹೊಂದಿರುವ ಎರಡು ಸರಗಳನ್ನು ಕೊರಳಿಗೆ ಹಾಕಿದರೆ, ಒಟ್ಟು ಹನ್ನೊಂದು ಉಂಗುರಗಳನ್ನು ಅವರು ಧರಿಸುತ್ತಿದ್ದರು. ಒಂದೊಂದು ಬಾರಿ ಚಿನ್ನ ಲೇಪಿತ ಬಟ್ಟೆಯನ್ನೇ ಹಾಕಿಕೊಂಡು ಬಂದು ಅಚ್ಚರಿ ಮೂಡಿಸುತ್ತಿದ್ದರು. ಇವುಗಳನ್ನು ಕಾಯಲೆಂದೇ ಅವರು ಇಬ್ಬರು ಅಂಗರಕ್ಷಕರನ್ನೂ ಇಟ್ಟುಕೊಂಡಿದ್ದರು. ಇದನ್ನೂ ಓದಿ: ಕೆಂಪುಕೋಟೆ ಮೇಲೆ ಸಿಖ್‌ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು

    ಸ್ವತಃ ಬಪ್ಪಿ ಲಹರಿ ಅವರೇ 2014ರ ಚುನಾವಣೆ ವೇಳೆ ಸಲ್ಲಿಸಿದ ಅಫಿಡೆವಿಟ್‍ನಲ್ಲಿ 967 ಗ್ರಾಂ ಚಿನ್ನ, 8.9 ಕೆ. ಜಿ. ಬೆಳ್ಳಿ, 4 ಕೋಟಿ ರೂ. ಮೌಲ್ಯದ ವಜ್ರವಿದೆ ಎಂದು ಹೇಳಿದ್ದರು. 2022ರ ಹೊತ್ತಿಗೆ ಈ ತೂಕ ಎಷ್ಟಾಗಿರಬಹುದು ಎಂದು ಯೋಚಿಸಿ.

  • ಹಿರಿಯ ಗಾಯಕ ಬಪ್ಪಿ ಲಹರಿ ಇನ್ನಿಲ್ಲ

    ಹಿರಿಯ ಗಾಯಕ ಬಪ್ಪಿ ಲಹರಿ ಇನ್ನಿಲ್ಲ

    ಮುಂಬೈ: ಬಾಲಿವುಡ್‍ನ ಹಿರಿಯ ಗಾಯಕ, ಸಂಗೀತ ನಿದೇರ್ಶಕ ಬಪ್ಪಿ ಲಹರಿ ಅನಾರೋಗ್ಯದಿಂದಾಗಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಅನಾರೋಗ್ಯದಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ 69 ವರ್ಷದ ಬಪ್ಪಿ ಲಹರಿಗೆ ಚಿಕಿತ್ಸೆ ಕೊಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಇದನ್ನೂ ಓದಿ: ಕೆಂಪುಕೋಟೆ ಮೇಲೆ ಸಿಖ್‌ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು

    ಬಪ್ಪಿ ಲಹರಿ 1970-80ರ ದಶಕದಲ್ಲಿ ಬಾಲಿವುಡ್‍ನಲ್ಲಿ ಮಿಂಚಿದ ಹಾಡುಗಾರ. ಬಾಲಿವುಡ್‍ನಲ್ಲಿ ಹಲವು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದ ಅವರು, 1970-80ರ ದಶಕದಲ್ಲಿ ಸದ್ದು ಮಾಡಿದ್ದ ಚಲ್ತೆ ಚಲ್ತೆ, ಡಿಸ್ಕೋ ಡ್ಯಾನರ್ ಮತ್ತು ಶರಾಬಿ ಮುಂತಾದ ಹಲವಾರು ಜನಮೆಚ್ಚಿದ ಹಾಡುಗಳಿಂದ ಹೆಸರುವಾಸಿಯಾಗಿದ್ದರು. 2020ರಲ್ಲಿ ತೆರೆಕಂಡ ಭಾಗಿ-3 ಚಿತ್ರದ ಟೈಟಲ್ ಸಾಂಗ್ ಬಪ್ಪಿ ಲಹರಿಯವರ ಕಂಠದಲ್ಲಿ ಮೂಡಿಬಂದಿತ್ತು.  ಇದನ್ನೂ ಓದಿ: 7 ರಾಜ್ಯಗಳ ಅಳಿಯ, 14 ಮಹಿಳೆಯರಿಗೆ ಪತಿ ಈ ನಕಲಿ ವೈದ್ಯ