Tag: ಬಪ್ಪನಾಡು

  • ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲಕ್ಕೆ ಕ್ರಿಕೆಟಿಗ ಅಜಿಂಕ್ಯ ರಹಾನೆ ಭೇಟಿ

    ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲಕ್ಕೆ ಕ್ರಿಕೆಟಿಗ ಅಜಿಂಕ್ಯ ರಹಾನೆ ಭೇಟಿ

    ದಕ್ಷಿಣ ಕನ್ನಡ: ಭಾರತ ತಂಡದ ಕಿಕ್ರೆಟಿಗ ಅಜಿಂಕ್ಯ ರಹಾನೆ (Ajinkya Rahane) ಬಪ್ಪನಾಡು (Bappanadu) ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ (Sri Durga Parameshwari Temple) ಭೇಟಿ ನೀಡಿ, ದೇವಿ ದರ್ಶನ ಪಡೆದರು.

    ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮುಲ್ಕಿಯಲ್ಲಿರುವ (Mulky) ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬುಧವಾರ (ಅ.1) ಭೇಟಿ ನೀಡಿದರು. ಈ ವೇಳೆ ಅರ್ಚಕ ಗೋಪಾಲಕೃಷ್ಣ ಭಟ್ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು.ಇದನ್ನೂ ಓದಿ: ಪ್ರಧಾನಿ ಮೋದಿ ಆಧುನಿಕ ರಾವಣ, ಶೀಘ್ರವೇ ಅವರ ಲಂಕಾದಲ್ಲಿ ಬೆಂಕಿ ಹೊತ್ತಿ ಉರಿಯುತ್ತೆ: ಕಾಂಗ್ರೆಸ್‌ ನಾಯಕ

    ಮಂಗಳೂರಿನ ಕರಾವಳಿ ಮೈದಾನದಲ್ಲಿ ಆಯೋಜಿಸಲಾಗಿದ್ದ 10ನೇ ವರ್ಷದ ಪಿಲಿನಲಿಕೆ ಸಂಭ್ರಮಕ್ಕೆ ವಿಶೇಷ ಅತಿಥಿಯಾಗಿ ಅಜಿಂಕ್ಯ ರಹಾನೆ ಆಗಮಿಸಿದ್ದರು. ಈ ವೇಳೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಜೊತೆ ಕಾರ್ಯದರ್ಶಿ ಡಾ. ಪಿ ವಿ ಶೆಟ್ಟಿ ಬಪ್ಪನಾಡು ಕ್ಷೇತ್ರಕ್ಕೆ ಬರಮಾಡಿಕೊಂಡರು. ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಕಾರ್ಯನಿರ್ವಣಾಧಿಕಾರಿ ಶ್ವೇತಾ ಪಳ್ಳಿ, ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ಅಕೌಂಟೆಂಟ್ ಶಿವಶಂಕರ್
    ಮುಲ್ಕಿ ವಿಜಯ ರೈತ ಸೊಸೈಟಿಯ ನಿರ್ದೇಶಕ ದೇವಿಪ್ರಸಾದ್ ಕೆಂಪುಗುಡ್ಡೆ, ಕಾರ್ತಿಕ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

  • ಬಪ್ಪನಾಡು ದುರ್ಗೆಗೆ ಭಕ್ತರಿಂದ 5 ಕೋಟಿ ಮೌಲ್ಯದ ಚಿನ್ನದ ಪಲ್ಲಕ್ಕಿ ಸಮರ್ಪಣೆ

    ಬಪ್ಪನಾಡು ದುರ್ಗೆಗೆ ಭಕ್ತರಿಂದ 5 ಕೋಟಿ ಮೌಲ್ಯದ ಚಿನ್ನದ ಪಲ್ಲಕ್ಕಿ ಸಮರ್ಪಣೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಪುಣ್ಯಕ್ಷೇತ್ರ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀದೇವಿಯ ಕೋರಿಕೆಯಂತೆ ಭಕ್ತರು ಕೋಟ್ಯಂತರ ರೂ. ಮೌಲ್ಯದ ಚಿನ್ನದ ಪಲ್ಲಕ್ಕಿಯನ್ನ ಸಮರ್ಪಣೆ ಮಾಡಿದ್ದಾರೆ.

    ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಬಪ್ಪನಾಡು ಕ್ಷೇತ್ರದ ಅತ್ಯಂತ ಪವಿತ್ರ ಪುಣ್ಯ ಕ್ಷೇತ್ರವಾಗಿದೆ. ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೇವಸ್ಥಾನವನ್ನು ಮುಸ್ಲಿಂ ವ್ಯಾಪಾರಿಯಾಗಿದ್ದ ಬಪ್ಪ ಬ್ಯಾರಿ ತನ್ನ ಕನಸಿನಲ್ಲಿ ದೇವಿ ಕಾಣಿಸಿಕೊಂಡ ಕಾರಣ ಗುಡಿ ಕಟ್ಟಿ ನಂಬಿದ್ದರು ಎನ್ನುವ ಪ್ರತೀತಿ ಇದೆ. ದೇವಾಲಯದ ಮುಖ್ಯ ದೇವತೆ ಶ್ರೀ ದುರ್ಗಾಪರಮೇಶ್ವರಿಯಾಗಿದ್ದು, ಲಿಂಗ ರೂಪದಲ್ಲಿ ಆರಾಧಿಸಲ್ಪಡುತ್ತಾಳೆ. ಎಲ್ಲ ಜನಾಂಗ ಮತ್ತು ಜಾತಿಗಳ ಜನರ ಪಾಲಿಗೆ ಆರಾಧ್ಯ ದೇವತೆಯಾಗಿರುವ ದುರ್ಗಾಪರಮೇಶ್ವರಿಗೆ ಚಿನ್ನದ ಪಲ್ಲಕ್ಕಿಯನ್ನ ಸಮರ್ಪಣೆ ಮಾಡಬೇಕು ಎನ್ನುವುದು ಅಷ್ಟಮಂಗಳ ಪ್ರಶ್ನೆಯ ವೇಳೆ ಗೊತ್ತಾಗಿತ್ತು.

    ಚಿನ್ನದ ಪಲ್ಕಕ್ಕಿಗೆ ಕೋಟ್ಯಂತರ ರೂಪಾಯಿ ವ್ಯಯವಾಗುವ ಕಾರಣದಿಂದ ಒಂದಷ್ಟು ಆತಂಕವಾಗಿತ್ತು. ಆದರೆ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಭಕ್ತರು ಚಿನ್ನದ ಪಲ್ಲಕ್ಕಿ ನಿರ್ಮಾಣಕ್ಕೆ ಮುಂದಾಗಿದ್ದು, 2018ರ ವಿಜಯದಶಮಿ ದಿನ ಭಕ್ತರಿಂದ ದೇಣಿಗೆ ಸಂಗ್ರಹಿಸಲು ಆರಂಭಿಸಿದರು. ಆ ಬಳಿಕ ನಡೆದಿದ್ದು ಅಕ್ಷರಶಃ ಪವಾಡ. ಚಿನ್ನ, ನಗದು ಸೇರಿದಂತೆ ಭಾರೀ ಪ್ರಮಾಣದ ದೇಣಿಗೆ ಕ್ಷೇತ್ರಕ್ಕೆ ಹರಿದು ಬಂತು. ಕೇವಲ 1 ವರ್ಷ 4 ತಿಂಗಳ ಅಂತರದಲ್ಲಿ ಬರೋಬ್ಬರಿ 5 ಕೋಟಿ ಮೌಲ್ಯದ 11 ಕೆ.ಜಿ. ತೂಕದ ಬೃಹತ್ ಸ್ವರ್ಣ ಪಲ್ಕಕ್ಕಿ ಎದ್ದು ನಿಂತಿದೆ. ಅದನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದುರ್ಗಾಪರಮೇಶ್ವರಿಗೆ ಅರ್ಪಣೆ ಮಾಡಲಾಗಿದೆ.

    ಈ ಚಿನ್ನದ ಪಲ್ಲಕ್ಕಿ ನಿರ್ಮಾಣದ ಕಾರ್ಯ 1 ವರ್ಷ 4 ತಿಂಗಳ ಹಿಂದೆ ಆರಂಭವಾದರೂ ದೇಣಿಗೆ ಸಂಗ್ರಹಿಸುವ ಕೆಲಸ ನಡೆಯುತ್ತಿತ್ತು. ಈ ವೇಳೆ ಅನೇಕ ಭಕ್ತರು ಚಿನ್ನ, ತಮ್ಮ ಒಡವೆಗಳು ಸೇರಿ ನಗದು ರೂಪದಲ್ಲೂ ದೇಣಿಗೆ ನೀಡಿದ್ದಾರೆ. ಹೀಗೆ ಕೋಟಿ ಕೋಟಿ ರೂಪಾಯಿ ಸಂಗ್ರಹವಾದ ಬೆನ್ನಲ್ಲೇ ದೇವಸ್ಥಾನದ ಆಡಳಿತ ಮಂಡಳಿ ಉಡುಪಿಯ ಗುಜ್ಹಾಡಿಯ ಸ್ವರ್ಣ ಜ್ಯೂವೆಲ್ಲರಿಗೆ ಚಿನ್ನದ ಪಲ್ಲಕ್ಕಿ ನಿರ್ಮಾಣದ ಜವಾಬ್ದಾರಿ ವಹಿಸಿದೆ.

    ದೇವಸ್ಥಾನದ 1.50 ಕೆ.ಜಿ ಹಳೆಯ ಚಿನ್ನ, ಭಕ್ತರಿಂದ ಸಂಗ್ರಹವಾದ 6 ಕೆ.ಜಿ ಚಿನ್ನ ಮತ್ತು ದೇಣಿಗೆ ಬಂದ ನಗದನ್ನು ಸೇರಿಸಿ ಪಲ್ಲಕ್ಕಿ ನಿರ್ಮಾಣದ ಕೆಲಸ ಉಡುಪಿಯಲ್ಲಿ ಶುರುವಾಗಿತ್ತು. ಆಂಧ್ರ ಪ್ರದೇಶ ಮೂಲದ ಶಿಲ್ಪಿ ಅರ್ಜುನ್ ಮತ್ತು ಅವರ ತಂಡ ಸುಮಾರು ಎರಡು ತಿಂಗಳ ಕಾಲ ಶ್ರಮ ವಹಿಸಿ ಭವ್ಯ ಸ್ವರ್ಣ ಪಲ್ಲಕ್ಕಿ ನಿರ್ಮಾಣ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಕ್ಷೇತ್ರಕ್ಕೆ ತರಲಾಗಿದ್ದ ಪಲ್ಲಕ್ಕಿಯನ್ನು ಇಂದು ದೇವರಿಗೆ ಅರ್ಪಣೆ ಮಾಡಲಾಯ್ತು. ಕ್ಷೇತ್ರದಲ್ಲಿ ಶತ ಚಂಡಿಕಾಯಾಗದ ಜೊತೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿಯನ್ನ ದೇವಿಗೆ ಅರ್ಪಿಸಲಾಗಿದೆ. ಇಷ್ಟು ದಿನ ಬೆಳ್ಳಿಯ ಪಲ್ಲಕ್ಕಿಯಲ್ಲಿ ವಾರ್ಷಿಕ ಜಾತ್ರೋತ್ಸವದ ವೇಳೆ ವಿರಾಜಮಾನಳಾಗುತ್ತಿದ್ದ ದುರ್ಗೆ ಇನ್ನು ಮುಂದೆ ಸ್ವರ್ಣ ಪಲ್ಲಕ್ಕಿಯಲ್ಲಿ ವಿರಾಜಮಾನಳಾಗಲಿದ್ದಾಳೆ. ಇದು ಭಕ್ತರಿಗೂ ಖುಷಿ ಕೊಟ್ಟಿದೆ.

    ಕಳೆದ ವರ್ಷ ನಡೆದ ಬ್ರಹ್ಮಕಲಶೋತ್ಸವದಲ್ಲಿ ಉಳಿಕೆಯಾಗಿದ್ದ ಒಂದೂವರೆ ಕೋಟಿ ರೂಪಾಯಿಯನ್ನೂ ಈ ಚಿನ್ನದ ಪಲ್ಲಕ್ಕಿಗೆ ದೇಣಿಗೆಯಾಗಿ ಹಾಕಲಾಗಿದೆ. ಒಟ್ಟಿನಲ್ಲಿ ಬಪ್ಪನಾಡಿನ ಭಕ್ತ ಸಾಗರ ಹರಿಸಿದ ದೇಣಿಗೆ ಚಿನ್ನದ ಪಲ್ಲಕ್ಕಿ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಮೂಲಕ ತನ್ನ ಇಷ್ಟಾರ್ಥ ಈಡೇರಿಸಿಕೊಂಡ ದೇವಿ ಭಕ್ತರನ್ನು ಕಾಯುತ್ತಾ, ಬಪ್ಪನಾಡಿನಲ್ಲಿ ಸಾಮರಸ್ಯ ಕಾಯುವ ದೇವತೆಯಾಗಿ ಕಂಗೊಳಿಸುತ್ತಿದ್ದಾಳೆ.

  • ಬಾಹುಬಲಿ ಸಕ್ಸಸ್: ನಿನ್ನೆ ಕೊಲ್ಲೂರು, ಇಂದು ಬಪ್ಪನಾಡು ಕ್ಷೇತ್ರಕ್ಕೆ ಅನುಷ್ಕಾ ಶೆಟ್ಟಿ ಭೇಟಿ

    ಬಾಹುಬಲಿ ಸಕ್ಸಸ್: ನಿನ್ನೆ ಕೊಲ್ಲೂರು, ಇಂದು ಬಪ್ಪನಾಡು ಕ್ಷೇತ್ರಕ್ಕೆ ಅನುಷ್ಕಾ ಶೆಟ್ಟಿ ಭೇಟಿ

    ಮಂಗಳೂರು: ಟಾಲಿವುಡ್ ಬೆಡಗಿ ಅನುಷ್ಕಾ ಶೆಟ್ಟಿ ಇಂದು ಮಂಗಳೂರಿನ ಮೂಲ್ಕಿಯಲ್ಲಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

    ಅನುಷ್ಕಾ ಶೆಟ್ಟಿ ಜೊತೆ ತಾಯಿ, ಸಹೋದರ ಹಾಗು ಉದ್ಯಮಿ ಮುತ್ತಪ್ಪ ರೈ ದಂಪತಿ ಸಾಥ್ ನೀಡಿದ್ದು, ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

    ಬಾಹುಬಲಿ ಸಿನಿಮಾದ ಯಶಸ್ಸಿನ ನಂತರ ನಿನ್ನೆ ಕೊಲ್ಲೂರಿಗೆ ಭೇಟಿ ನೀಡಿದ್ದೆವು. ಹೋಗುವಾಗ ಬಪ್ಪನಾಡು ತಾಯಿಯ ದರ್ಶನ ಪಡೆಯಲು ಬಂದಿದ್ದೇವೆ ಎಂದು ಅನುಷ್ಕಾ ಶೆಟ್ಟಿ ಹೇಳಿದರು.

    ಶುಕ್ರವಾರ ಕೊಲ್ಲೂರು ಮುಕಾಂಬಿಕಾ ದೇವಸ್ಥಾನಕ್ಕೂ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಯಾವ ಮುನ್ಸೂಚನೆಯೂ ನೀಡದೇ ಕೊಲ್ಲೂರಿಗೆ ಭೇಟಿ ನೀಡಿದ್ದ ಅನುಷ್ಕಾ ಸಾಮನ್ಯ ಜನರಂತೆ ಸರತಿ ಸಾಲಿನಲ್ಲಿ ನಿಂತು ತಾಯಿ ಮುಕಾಂಭಿಕೆಯ ದರ್ಶನ ಪಡೆದಿದ್ದರು. ಬಾಹುಬಲಿ ಸಿನಿಮಾ ಯಶಸ್ಸಿನ ನಂತರ ನಾಡಿನ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.

    https://www.youtube.com/watch?v=ewO7vD8euaw

     

    https://www.youtube.com/watch?v=98Lv8rjXlFI