Tag: ಬನಾರಸ್

  • ಪನೋರಮಾ ಸ್ಟುಡಿಯೋ ತೆಕ್ಕೆಗೆ ಝೈದ್ ಖಾನ್ ನಟನೆಯ ‘ಬನಾರಸ್’ ಸಿನಿಮಾ

    ಪನೋರಮಾ ಸ್ಟುಡಿಯೋ ತೆಕ್ಕೆಗೆ ಝೈದ್ ಖಾನ್ ನಟನೆಯ ‘ಬನಾರಸ್’ ಸಿನಿಮಾ

    ಝೈದ್ ಖಾನ್ (Zaid Khan) ನಟನೆಯ ಮತ್ತು ಸೋನಲ್ (Sonal) ಕಾಂಬಿನೇಷನ್ ನ ‘ಬನಾರಸ್’ ಸಿನಿಮಾ ತಂಡದಿಂದ ದಿನಕ್ಕೊಂದು ಹೊಸ ಹೊಸ ಅಚ್ಚರಿಗಳು ಎದುರುಗೊಳ್ಳುತ್ತಿವೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಹಾಗಾಗಿ ಈಗಿನಿಂದಲೇ ಬಿಡುಗಡೆಗೆ ಭರ್ಜರಿ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.

    ನವೆಂಬರ್ 4ರಂದು ಬನಾರಸ್ (Banaras) ಸಿನಿಮಾ ದೇಶಾದ್ಯಂತ ರಿಲೀಸ್ ಆಗುತ್ತಿದ್ದು, ಸಿನಿಮಾದ ಬಗ್ಗೆ ಸಹಜವಾಗಿಯೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆಗಳು ಮೂಡಿವೆ. ಅದಕ್ಕೆ ಕಾರಣ ಟ್ರೇಲರ್ ನಲ್ಲಿ ಕಂಡ ಅದ್ಭುತ ಪ್ರಪಂಚ. ಮಾಯಗಂಗೆ ಹಾಡಿನಲ್ಲಿ ಕಂಡ ಸುಂದರ ಕಾಶಿ. ಇದು ಯಾವ ಜಾನರಿನ ಸಿನಿಮಾ ಅಂತ ಊಹೆ ಮಾಡಿಕೊಳ್ಳುವುದಕ್ಕು ಮೊದಲೇ ನಿರ್ದೇಶಕ ಜಯತೀರ್ಥ ಅವರು ಇದು ಎಲ್ಲಾ ಜಾನರಿನ ಸಿನಿಮಾ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಇದೀಗ ರಿಲೀಸ್ ಗೆ ರೆಡಿಯಾಗಿರುವ ಬನಾರಸ್ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಖುಷಿಯ ಸಂದೇಶಗಳು ರವಾನೆಯಾಗುತ್ತಿವೆ.

    ಬನಾರಸ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಐದು ಭಾಷೆಯಲ್ಲಿ ರೆಡಿಯಾಗಿರುವ ಈ ಸಿನಿಮಾವನ್ನು ದೊಡ್ಡ ದೊಡ್ಡ ಸಂಸ್ಥೆಗಳೇ ವಿತರಣೆ ಮಾಡುತ್ತಿರುವುದು ದೊಡ್ಡ ಪ್ಲಸ್ ಪಾಯಿಂಟ್ ಎಂದೇ ಹೇಳಬಹುದು. ಕರ್ನಾಟಕದಲ್ಲಿ ಡಿ ಬೀಟ್ಸ್, ಕೇರಳದಲ್ಲಿ ಮುಲಕುಪ್ಪಡಂ ಇತ್ತೀಚೆಗೆ ವಿತರಣಾ ಹಕ್ಕು ಪಡೆದ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿತ್ತು. ಇದಾದ ಬಳಿಕ ಎಲ್ಲರ ಚಿತ್ತ ಹರಿದಿದ್ದು ಉತ್ತರ ಭಾರತದಲ್ಲಿ ಯಾರು ಹಂಚಿಕೆ ಮಾಡುತ್ತಾರೆ ಎಂಬುದರತ್ತ.

    ಈಗಾಗಲೇ ಎರಡು ದೊಡ್ಡ ದೊಡ್ಡ ಸಂಸ್ಥೆಗಳು ಅಸ್ತು ಎಂದಾಗ ಮತ್ತೊಂದು ದೊಡ್ಡ ಸಂಸ್ಥೆಯೇ ಆಗಿರಬೇಕು ಎಂಬ ಊಹೆ ಎಲ್ಲರಲ್ಲೂ ಇತ್ತು. ಅದೀಗ ನಿಜವಾಗಿದೆ. ಉತ್ತರ ಭಾರತದಾದ್ಯಂತ ಬನಾರಸ್ ವಿತರಿಸಲು ಪನೋರಮಾ ಸ್ಟುಡಿಯೋ (Panorama Studio) ಅಸ್ತು ಎಂದಿದೆ. ಖ್ಯಾತ ನಟ ಅಜಯ್ ದೇವಗನ್ (Ajay Devgn) ಕೂಡ ಪನೋರಮಾ ಸ್ಟುಡಿಯೋದ ಪಾಲುದಾರರಾಗಿದ್ದಾರೆ. ಇದೀಗ ಇಂಥ ದೊಡ್ಡ ಸ್ಟಾರ್ ಬನಾರಸ್ ಸಿನಿಮಾ ರಿಲೀಸ್ ಮಾಡುತ್ತಿರುವುದು ಸಹಜವಾಗಿಯೇ ಮತ್ತೊಂದು ಮಗ್ಗುಲಿನಲ್ಲಿ ನಿರೀಕ್ಷೆ ದೊಡ್ಡ ಮಟ್ಟದಲ್ಲಿ ಶುರುವಾಗಿದೆ.

    ಸದ್ಯ ಬನಾರಸ್ ಸಿನಿಮಾ ನವೆಂಬರ್ 4ಕ್ಕೆ ತೆರೆಗೆ ಬರಲಿದ್ದು, ಪ್ರಚಾರ ಕಾರ್ಯದಲ್ಲಿ ತಂಡ ಬ್ಯುಸಿಯಾಗಿದೆ. ಝೈದ್ ಖಾನ್ ಮೊದಲ ಬಾರಿಗೆ ನಾಯಕ ನಟನಾಗಿ ಎಂಟ್ರಿಯಾಗುತ್ತಿದ್ದು, ಸೋನಲ್ ಜೋಡಿಯಾಗಿದ್ದಾರೆ. ತಿಲಕ್ ರಾಜ್ ಬಲ್ಲಾಳ್ ಅದ್ದೂರಿಯಾಗಿ ಬನಾರಸ್ ಅನ್ನು ನಿರ್ಮಾಣ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬನಾರಸ್’ ಸಿನಿಮಾ ಕರ್ನಾಟಕದ ವಿತರಣಾ ಹಕ್ಕು ತನ್ನದಾಗಿಸಿಕೊಂಡ ಡಿ ಬೀಟ್ಸ್

    ‘ಬನಾರಸ್’ ಸಿನಿಮಾ ಕರ್ನಾಟಕದ ವಿತರಣಾ ಹಕ್ಕು ತನ್ನದಾಗಿಸಿಕೊಂಡ ಡಿ ಬೀಟ್ಸ್

    ಬನಾರಸ್ (Banaras) ಚಿತ್ರದ ಕಡೆಯಿಂದ ಒಂದರ ಹಿಂದೊಂದರಂತೆ ಖುಷಿಯ ಸಂಗತಿಗಳು ಹೊರ ಬೀಳುತ್ತಿವೆ. ಹೊಸತನಗಳಿಂದಲೇ ಮೈ ಕೈ ತುಂಬಿಕೊಂಡಿರುವ ಚಿತ್ರವೊಂದು ಹೆಜ್ಜೆ ಹೆಜ್ಜೆಗೂ ದಾಖಲೆ ಬರೆಯುತ್ತಾ ಮುಂದುವರೆಯುತ್ತೆ. ಸದ್ಯ ಬನಾರಸ್ ಚಿತ್ರದ ನಡೆ ಆ ಮಾತಿಗೆ ಅನ್ವರ್ಥ ಎಂಬಂತಿದೆ. ಒಂದು ಕಡೆಯಿಂದ ತಂಗಾಳಿಯಂತೆ ತೇಲಿ ಬಂದು ಎಲ್ಲರ ಮನಸೋಕಿ ಮುದಗೊಳಿಸಿರುವ ಮಾಯಗಂಗೆ, ಮತ್ತೊಂದೆಡೆ ವಾರದ ಹಿಂದಷ್ಟೇ ಬಿಡುಗಡೆಗೊಂಡು ಮಿಲಿಯನ್ನುಗಟ್ಟಲೆ ವೀವ್ಸ್ ಪಡೆದು ಪ್ರಸಿದ್ಧಿ ಪಡೆದುಕೊಂಡಿರುವ ಟ್ರೈಲರ್… ಇದೆಲ್ಲದರಿಂದಾಗಿ ನಿಗಿ ನಿಗಿಸೋ ನಿರೀಕ್ಷೆ ಮೂಡಿಸಿರುವ ಬಾನಾರಸ್ ದಿಕ್ಕಿನಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಈ ಸಿನಿಮಾದ ವಿಶಾಲ ಕರ್ನಾಟಕ ವಿತರಣಾ ಹಕ್ಕನ್ನು ಖ್ಯಾತ ವಿತರಣಾ ಸಂಸ್ಥೆ ಡಿ ಬೀಟ್ಸ್ ಪಡೆದುಕೊಂಡಿದೆ.

    ಶೈಲಜಾ ನಾಗ್ (Shailaja Nag) ಮತ್ತು ಬಿ ಸುರೇಶ್ ಸಾರಥ್ಯದ ಡಿ ಬೀಟ್ಸ್ (D Bits) ಎಂಥಾ ಗುಣಮಟ್ಟವನ್ನು ಕಾಯ್ದುಕೊಂಡಿರುವ ಚಿತ್ರವೆಂಬುದು ಎಲ್ಲರಿಗೂ ಗೊತ್ತಿದೆ. ಈ ಸಂಸ್ಥೆಯಿಂದ ಬಿಡುಗಡೆಗೊಳ್ಳುವುದೇ ಪ್ರತಿಷ್ಠೆಯ ಸಂಗತಿ ಎಂಬಂಥಾ ವಾತಾವರಣವೂ ಇದೆ. ಎಲ್ಲ ದಿಕ್ಕುಗಳಿಂದಲೂ ಹಿಡಿಸಿದರೆ ಮಾತ್ರವೇ ಅಂಥಾ ಚಿತ್ರಕ್ಕೆ ಡಿ ಬೀಟ್ಸ್ ಕಡೆಯಿಂದ ಬಿಡುಗಡೆಯ ಭಾಗ್ಯ ಸಿಗುತ್ತದೆ. ಅಂಥಾದ್ದರಲ್ಲಿ ಶೈಲಜಾ ನಾಗ್ ವಿತರಣಾ ಹಕ್ಕು ಖರೀದಿಸಿದ್ದಾರೆಂದರೆ, ಬನಾರಸ್ ಮೂಡಿ ಬಂದಿರುವ ರೀತಿ ಎಂಥಾದ್ದಿದೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಅದುವೇ ಬನಾರಸ್ ಬಗೆಗಿನ ಬೆರಗನ್ನು ಇಮ್ಮಡಿಯಾಗುವಂತೆ ಮಾಡಿದೆ. ಇದನ್ನೂ ಓದಿ:ಗೊಬ್ಬರಗಾಲ ಮೈ ಮೇಲೆ ದೆವ್ವ: ಹೆದರಿ ಓಡಿದ ನವಾಜ್, ರೂಪೇಶ್ ರಾಜಣ್ಣ

    ಬನಾರಸ್ ಅನ್ನು ವಿಶಾಲ ಕರ್ನಾಟಕಕ್ಕೆ ಯಾವ ಸಂಸ್ಥೆಯ ಮೂಲಕ ವಿತರಣೆ ಮಾಡುತ್ತಾರೆಂಬ ಕುತೂಹಲಕ್ಕೆ ಈ ಮೂಲಕ ತೆರೆಬಿದ್ದಿದೆ. ನಿರೀಕ್ಷೆಯಂತೆಯೇ ಡಿ ಬೀಟ್ಸ್ ವಿತರಣಾ ಹಕ್ಕನ್ನು ಖರೀದಿಸಿದೆ. ಅತ್ಯಂತ ವ್ಯವಸ್ಥಿತವಾಗಿ ಚಿತ್ರವನ್ನು ಕರ್ನಾಟಕದ ತುಂಬೆಲ್ಲ ಪಸರಿಸೋದು ಡಿ ಬೀಟ್ಸ್ ಹೆಚ್ಚುಗಾರಿಕೆ. ಅದಕ್ಕೆ ತಕ್ಕುದಾಗಿಯೇ ಬನಾರಸ್ ಬಿಡುಗಡೆಗೆ ಪ್ಲಾನು ಮಾಡಿಕೊಳ್ಳಲಾಗಿದೆ. ಈ ವಿದ್ಯಮಾನದಿಂದಾಗಿ ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಸಂತೃಪ್ತರಾಗಿದ್ದಾರೆ. ನಾಯಕ ನಟ ಝೈದ್ ಖಾನ್ ಮುಖದಲ್ಲಿಯೂ ಸಂತಸ ಮಿರುಗುತ್ತಿದೆ.

    ಬನಾರಸ್ ಬಿಡುಗಡೆಗೆ ಇನ್ನು ಬಾಕಿ ಉಳಿದಿರೋದು ಕೆಲವೇ ದಿನಗಳು ಮಾತ್ರ. ಈ ಸಂಬಂಧವಾಗಿ ಝೈದ್ ಖಾನ್ (Zaid Khan) ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ನಾಯಕಿ ಸೋನಲ್ ಮೊಂತೇರೋ (Sonal Montero) ಕೂಡಾ ಅದಕ್ಕೆ ಸಾಥ್ ಕೊಟ್ಟಿದ್ದಾರೆ. ಒಂದಿಡೀ ಚಿತ್ರತಂಡವೇ ನಾನಾ ಜವಾಬ್ದಾರಿ ಹೊತ್ತು ಉತ್ಸಾಹದಿಂದ ಮುಂದಡಿ ಇಡುತ್ತಿದೆ. ಇದೀಗ ಕರ್ನಾಟಕದಲ್ಲಿ ವಿತರಣಾ ಹಕ್ಕು ಡಿ ಬೀಟ್ಸ್ ಉಡಿ ಸೇರುತ್ತಲೇ, ಇನ್ನುಳಿದ ಒಂದಷ್ಟು ಭಾಷೆಗಳಲ್ಲಿಯೂ ಮಾತುಕತೆ ನಡೆಯುತ್ತಿವೆ. ದೊಡ್ಡ ಸಂಸ್ಥೆಗಳೇ ವಿತರಣಾ ಹಕ್ಕು ಖರೀದಿಸಲು ಮುಂದೆ ಬಂದಿವೆ. ಒಟ್ಟಾರೆಯಾಗಿ ಬನಾರಸ್ ಪ್ರಥಮ ಹೆಜ್ಜೆಯಲ್ಲಿಯೂ ನಿರ್ಣಾಯಕವಾಗಿ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕೇರಳದ ಪ್ರಖ್ಯಾತ ವಿತರಣಾ ಸಂಸ್ಥೆಯ ತೆಕ್ಕೆಗೆ ‘ಬನಾರಸ್’ ವಿತರಣಾ ಹಕ್ಕು

    ಕೇರಳದ ಪ್ರಖ್ಯಾತ ವಿತರಣಾ ಸಂಸ್ಥೆಯ ತೆಕ್ಕೆಗೆ ‘ಬನಾರಸ್’ ವಿತರಣಾ ಹಕ್ಕು

    ಝೈದ್ ಖಾನ್ (Zaid Khan) ನಾಯಕನಾಗಿ ನಟಿಸಿರುವ ಬನಾರಸ್ (Banaras) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ಹೊತ್ತಿನಲ್ಲಿ ಅತ್ತ ಝೈದ್ ಖಾನ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವಾಗಲೇ, ಇತ್ತ ಬಿಡುಗಡೆಗೆ ಬೇಕಿರುವಂಥಾ ತಯಾರಿಯೂ ತೀವ್ರವಾಗಿಯೇ ಶುರುವಾಗಿದೆ. ಇಂಥಾ ವಾತಾವರಣದಲ್ಲಿ ಬನಾರಸ್ ಚಿತ್ರತಂಡದ ಕಡೆಯಿಂದ ಖುಷಿಯ ಸಂಗತಿಯೊಂದು ಹೊರಬಿದ್ದಿದೆ. ಕೇರಳದಲ್ಲಿ (Kerala) ಪ್ರಖ್ಯಾತ ವಿತರಣಾ ಸಂಸ್ಥೆಯಾಗಿರುವ ಮಲಕುಪ್ಪಡಮ್, ಬನಾರಸ್‌ನ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಈಗಾಗಲೇ ಕೇರಳದಲ್ಲಿ ದೊಡ್ಡ ಹೆಸರು ಮಾಡಿರುವ ಸದರುಇ ಸಂಸ್ಥೆ ಹಲವಾರು ಹಿಟ್ ಸಿನಿಮಾಗಳನ್ನು ಕೇರಳದಲ್ಲಿ ಬಿಡುಗಡೆಗೊಳಿಸಿದೆ. ಆದ್ದರಿಂದಲೇ ಕೇರಳದ ತುಂಬೆಲ್ಲ ಬನಾರಸ್ ಬಗೆಗೀಗ ಬೇರೆಯದ್ದೇ ದಿಕ್ಕಿನಲ್ಲಿ ನಿರೀಕ್ಷೆ ಮೂಡಿಕೊಂಡಿದೆ.

    ಈ ವಿಚಾರವನ್ನು ಖುದ್ದು ಆ ಸಂಸ್ಥೆಯೇ ಅಧಿಕೃತವಾಗಿ ಘೋಶಿಸಿಕೊಂಡಿದೆ. ದೇಶಾದ್ಯಂತ ಉದ್ಯಮಿಯಾಗಿ ದೊಡ್ಡ ಹೆಸರು ಮಾಡಿರುವ ಥಾಮಸ್ ಆಂಟೋನಿ, ತೋಮಿಚನ್ ಮುಪಕುಪ್ಪದಮ್ ಎಂದೇ ಹೆಸರುವಾಸಿಯಾಗಿರುವವರು. ಅವರು ಉದ್ಯಮಿಯಾಗಿದ್ದುಕೊಂಡೇ ಮಲಕುಪ್ಪಡಮ್ ಫಿಲಂಸ್ ಮೂಲಕ ಹಲವಾರು ಚಿತ್ರಗಳನ್ನು ನಿಮರ್ಠಾಣ ಮಾಡಿದ್ದಾರೆ. ಅದರೊಂದಿಗೇ ಮಲಕುಪ್ಪಡಮ್ ರಿಲೀಸ್ ಸಂಸ್ಥೆಯ ಮೂಲಕ ಹಲವಾರು ಸಿನಿಮಾಗಳ ವಿತರಕರಾಗಿಯೂ ಯಶಸ್ವಿಯಾಗಿದ್ದಾರೆ. ಎಲ್ಲ ರೀತಿಯಲ್ಲಿಯೂ ಗುಣಮಟ್ಟ ಹೊಂದಿರುವ ಚಿತ್ರಗಳ ವಿತರಣಾ ಹಕ್ಕುಗಳನ್ನು ಖರೀದಿಸೋದು ಈ ಸಂಸ್ಥೆಯ ಹೆಚ್ಚುಗಾರಿಕೆ. ಆದ್ದರಿಂದಲೇ, ಈ ಸಂಸ್ಥೆ ಒಂದು ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸಿತೆಂದರೆ, ಆ ಚಿತ್ರದ ಬಗ್ಗೆ ತಾನೇ ತಾನಾಗಿ ನಿರೀಕ್ಷೆ ಮೂಡಿಕೊಳ್ಳುತ್ತದೆ. ಇದನ್ನೂ ಓದಿ:ರೂಪೇಶ್‌ಗೆ ಕೊನೆಯುಸಿರು ಇರುವವರೆಗೂ ಪ್ರೀತಿ ಮಾಡುತ್ತೀನಿ ಎಂದ ಸಾನ್ಯ

    ಈವತ್ತಿಗೂ ಆಯ್ಕೆಯಲ್ಲಿ ಗುಣಮಟ್ಟ ಕಾಯ್ದುಕೊಂಡಿರುವ ಈ ಸಂಸ್ಥೆ, ಆ ಮಾನದಂಡಗಳ ಆಧಾರದಲ್ಲಿಯೇ ಬನಾರಸ್ ಅನ್ನು ಆರಿಸಿಕೊಂಡಿದೆ. ವಿಶೇಷವೆಂದರೆ, ಈ ಸಂಸ್ಥೆಯ ಮುಖ್ಯಸ್ಥರು ಬನಾರಸ್ ಮೂಡಿ ಬಂದಿರುವ ರೀತಿ ಕಂಡು ಥ್ರಿಲ್ ಆಗಿದ್ದಾರೆ. ಆ ಮೆಚ್ಚುಗೆಯಿಂದಲೇ ದೊಡ್ಡ ಮೊತ್ತಕ್ಕೆ ಬನಾರಸ್ ವಿತರಣಾ ಹಕ್ಕುಗಳನ್ನು ಖರೀದಿಸಿದ್ದಾರೆ. ಇದೇ ನವೆಂಬರ್ ನಾಲಕ್ಕರಂದು ವಿಶಾಲ ಕೇರಳಕ್ಕೆ ಅತ್ಯಂತ ವ್ಯವಸ್ಥಿತವಾಗಿ ಬನಾರಸ್ ಹಬ್ಬಿಕೊಳ್ಳಲಿದೆ. ಈ ವಿದ್ಯಮಾನ ಒಂದಿಡೀ ಬನಾರಸ್ ಚಿತ್ರತಂಡವನ್ನು ಥ್ರಿಲ್ ಆಗಿಸಿದೆ. ಹೊಸಾ ಹೀರೋನ ಚಿತ್ರವೊಂದು ಇಷ್ಟು ದೊಡ್ಡ ಮೊತ್ತದ ವ್ಯವಹಾರ ನಡೆಸಿರೋದೊಂದು ದಾಖಲೆ ಎಂಬುದರಲ್ಲಿ ಎರಡು ಮಾತಿಲ್ಲ. ಇದರಿಂದಾಗಿ ನವನಾಯಕ ಝೈದ್ ಖಾನ್ ಪಾಲಿಗೂ ಹೊಸಾ ಭರವಸೆ, ಹುರುಪು ಮೂಡಿಕೊಂಡಂತಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕಡಿಮೆ ಅವಧಿಯಲ್ಲಿ ದಾಖಲೆಯ ವೀಕ್ಷಣೆ ಪಡೆದ ಝೈದ್ ಖಾನ್ ನಟನೆಯ ‘ಬನಾರಸ್’ ಟ್ರೇಲರ್

    ಕಡಿಮೆ ಅವಧಿಯಲ್ಲಿ ದಾಖಲೆಯ ವೀಕ್ಷಣೆ ಪಡೆದ ಝೈದ್ ಖಾನ್ ನಟನೆಯ ‘ಬನಾರಸ್’ ಟ್ರೇಲರ್

    ಇತ್ತೀಚೆಗಷ್ಟೇ  ರಿಲೀಸ್ ಆಗಿರುವ ಝೈದ್ ಖಾನ್ (Zaid Khan) ನಟನೆಯ ‘ಬನಾರಸ್’ (Banaras) ಸಿನಿಮಾದ ಟ್ರೇಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡವೂ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಟ್ರೇಲರ್ ಬಿಡುಗಡೆ ಆಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪಂಚ ಭಾಷೆಗಳಲ್ಲಿ ಹತ್ತು ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ, ಸಿನಿಮಾದ ಮೇಲಿನ ಭರವಸೆಯನ್ನು ದುಪ್ಪಟ್ಟು ಮಾಡಿದೆ.

    ಬನಾರಸ್ ಕಡೆಯಿಂದ ಮಾಯಾಗಂಗೆ ಸಾಂಗ್ ರಿಲೀಸ್ ಆದಾಗಲೇ ಟ್ರೇಲರ್ (Trailer) ಮೇಲಿನ ನಿರೀಕ್ಷೆ ಹೆಚ್ಚಿಸಿತ್ತು. ಆ ನಿರೀಕ್ಷೆಯನ್ನು ಟ್ರೇಲರ್ ಎಲ್ಲಿಯೂ ಹುಸಿಗೊಳಿಸಲಿಲ್ಲ. ಅಂದುಕೊಂಡಿದ್ದಕ್ಕಿಂತ ಎಕ್ಸ್ಟ್ರಾ ಎನಿಸುವಂತ ಅಂಶಗಳನ್ನು ಇಟ್ಟು, ಟ್ರೇಲರ್ ಅನ್ನು ನೀಡಲಾಗಿದೆ. ವಾವ್ ಎನಿಸುವಂಥ ವಿಷ್ಯೂಲೈಸೇಷನ್, ಶಾಕಿಂಗ್ ಎನಿಸುವಂತ ಘಟನೆಗಳು ಟ್ರೇಲರ್ ನಲ್ಲಿ ಪಾಸ್ ಆಗುತ್ತವೆ. ಝೈದ್ ಖಾನ್ ಈಗಾಗಲೇ ಹಾಡುಗಳಲ್ಲಿ ಭರವಸೆ ಮೂಡಿಸಿದ್ದರು. ಆದರೆ ಟ್ರೇಲರ್ ನಲ್ಲಿ ಮತ್ತಷ್ಟು ಖುಷಿ ನೀಡಿದ್ದಾರೆ. ಝೈದ್ ಗೆ ಇದು ಮೊದಲ ಸಿನಿಮಾ ಎಂಬ ಫೀಲ್ ನೋಡುಗರಲ್ಲಿ ಬರುವಂತೆ ಬಿಟ್ಟುಕೊಟ್ಟಿಲ್ಲ.

    ಜಯತೀರ್ಥ (Jayathirtha) ಅವರ ಡೈರೆಕ್ಷನ್ ನಲ್ಲಿ ಬನಾರಸ್ ರೆಡಿಯಾಗಿದ್ದು, ಇತ್ತೀಚೆಗಷ್ಟೇ ದೊಡ್ಡ ವೇದಿಕೆಯಲ್ಲಿ ಟ್ರೇಲರ್ ಲಾಂಚ್ ಮಾಡಲಾಗಿದೆ. ಸ್ಯಾಂಡಲ್ ವುಡ್ ನ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಬಾಲಿವುಡ್ ನ ಅರ್ಬಾಜ್ ಖಾನ್ ವೇದಿಕೆ ಮೇಲೇರಿ ಬನಾರಸ್ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದರು. ರವಿಚಂದ್ರನ್ ಅಂತು ಟ್ರೇಲರ್ ನೋಡಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದರು. ಇದೀಗ ಟ್ರೇಲರ್ ಜನರ ಮನಸ್ಸನ್ನು ಗೆದ್ದಿದೆ. ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮಟ್ಟದ ವೀವ್ಸ್ ಪಡೆದುಕೊಂಡಿದೆ. ಇದನ್ನೂ ಓದಿ:ಮಗಳ ಆಗಮನದ ಖುಷಿಯಲ್ಲಿ ಮೇಘನಾ ರಾಜ್

    ಝೈದ್ ಖಾನ್ ಹಾಗೂ ಸೋನಲ್ ಮಂಥೆರೋ (Sonal Manthero) ಕೆಮಿಸ್ಟ್ರಿ ಸೂಪರ್ ಆಗಿ ವರ್ಕೌಟ್ ಆಗಿರುವುದು ಟ್ರೇಲರ್, ಸಾಂಗ್ಸ್ ನಲ್ಲಿ ಕಾಣಬಹುದು. ನವೆಂಬರ್ 4ರಂದು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಸಿನಿಮಾಗೆ ತಿಲಕ್ ರಾಜ್ ಬಲ್ಲಾಳ್ ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆಯ ‘ಬನಾರಸ್’ ಚಿತ್ರದ ಟ್ರೋಲ್ ನೋಡಿದ್ರಾ?

    ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆಯ ‘ಬನಾರಸ್’ ಚಿತ್ರದ ಟ್ರೋಲ್ ನೋಡಿದ್ರಾ?

    ಝೈದ್ ಖಾನ್ (Zaid Khan) ನಾಯಕನಾಗಿ ಎಂಟ್ರಿ ಕೊಡುತ್ತಿರುವ ಬಹುನಿರೀಕ್ಷಿತ ಚಿತ್ರ ಬನಾರಸ್ (Banaras). ಜಯತೀರ್ಥ (Jayathirtha) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಈಗಾಗಲೇ ನಾನಾ ದಿಕ್ಕುಗಳಿಂದ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಕುತೂಹಲ ಹುಟ್ಟು ಹಾಕಿದೆ. ಅದನ್ನೆಲ್ಲ ಮತ್ತಷ್ಟು ತೀವ್ರವಾಗಿಸಿದ ಕ್ರೆಡಿಟ್ ಸಲ್ಲುವುದು ಮುದ್ದಾಗಿ ಮೂಡಿಬಂದು, ಹಂತ ಹಂತವಾಗಿ ಬಿಡುಗಡೆಯಾದ ಹಾಡುಗಳಿಗೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಮಾಯಗಂಗೆ ಎಂಬ ಹಾಡಿನ ಮೋಡಿಗೆ ಸಿಲುಕದವರೇ ಇಲ್ಲ. ಸಾಹಿತ್ಯ, ಸಂಗೀತ, ದೃಷ್ಯೀಕರಣ ಸೇರಿದಂತೆ ಎಲ್ಲದರಲ್ಲಿಯೂ ಸೈ ಅನ್ನಿಸಿಕೊಂಡಿದ ಮಾಯಗಂಗೆ ಈವತ್ತಿಗೂ ಟ್ರೆಂಡಿಂಗ್‌ನಲ್ಲಿದೆ. ಇದೇ ಹೊತ್ತಿನಲ್ಲೀಗ ಲಿರಿಕಲ್ ವೀಡಿಯೋ ಸಾಂಗ್ ಒಂದು ಬಿಡುಗಡೆಗೊಂಡಿದೆ.

    ‘ಎಲ್ಲ ಟ್ರೋಲು (Troll) ಎಲ್ಲಾ ಟ್ರೋಲು, ಸಿಕ್ಕಾಪಟ್ಟೆ ಕೊಲೇಸ್ಟ್ರಾಲು’ ಅಂತ ಶುರುವಾಗೋ ಈ ಹಾಡಿಗೆ ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ವಿಶೇಷವೆಂದರೆ, ಸಂಗೀತ ಸಂಯೋಜನೆ ಮಾಡಿರುವ ಅಜನೀಶ್ ಲೋಕನಾಥ್ ಅವರೇ ಈ ಹಾಡನ್ನು ಹಾಡಿದ್ದಾರೆ. ಸಾಮಾನ್ಯವಾಗಿ ಮೆಲೋಡಿ ಹಾಡುಗಳ ಮೂಲಕ ಗಮನ ಸೆಳೆಯುವ, ಅದಕ್ಕೆ ಪ್ರಸಿದ್ಧಿ ಪಡೆದುಕೊಂಡಿರುವವರು ನಾಗೇಂದ್ರ ಪ್ರಸಾದ್. ಅವರು ಆಗಾಗ ಟಪ್ಪಾಂಗುಚ್ಚಿ ಸಾಂಗಿಗೂ ಸೈ ಎಂಬುದನ್ನು ಸಾಬೀತುಪಡಿಸುತ್ತಿರುತ್ತಾರೆ. ಈ ಟ್ರೋಲ್ ಹಾಡಿನ ಮೂಲಕ ಅದು ಮತ್ತೊಮ್ಮೆ ಋಜುವಾತಾಗಿದೆ. ಇದನ್ನೂ ಓದಿ:ಪುನೀತ್ ಅಭಿಮಾನಿಗಳಿಗೆ ಗುಡ್‍ನ್ಯೂಸ್- ಅಪ್ಪು ಜನ್ಮದಿನ ಇನ್ಮೇಲೆ ಸ್ಫೂರ್ತಿ ದಿನ

    ವಿಸೇಷವಾಗಿ, ಈ ಹಾಡಿನಲ್ಲಿ ಝೈದ್ ಖಾನ್ ಮತ್ತೆ ಮಿಂಚಿದ್ದಾರೆ. ಆ ಮೂಲಕ ಮತ್ತಷ್ಟು ಭರವಸೆ ಮೂಡಿಸಿದ್ದಾರೆ. ಈ ಹಿಂದೆ ಮಾಯಗಂಗೆ ಹಾಡು ನೋಡಿದವರೆಲ್ಲರೂ ಝೈದ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದೀಗ ಸದರಿ ಟ್ರೋಲ್ ಸಾಂಗ್ ಕೂಡಾ ಅಂಥಾದ್ದೇ ಮೆಚ್ಚುಗೆಗೆ ಪಾತ್ರವಾಗಿದೆ. ಈ ಜಮಾನದ ಟ್ರೆಂಡ್ ಅನ್ನು ಸಾಹಿತ್ಯಕ್ಕೆ ಒಗ್ಗಿಸಿಕೊಂಡಿರುವ ಈ ಹಾಡೂ ಕೂಡಾ ಟ್ರೆಂಡ್ ಸೆಟ್ ಮಾಡೋದರಲ್ಲಿ ಯಾವ ಅನುಮಾನವೂ ಇಲ್ಲ.

    ಬನಾರಸ್ ಏಕಕಾಲದಲ್ಲಿಯೇ ಐದು ಭಾಷೆಗಳಲ್ಲಿ ತಯಾರುಗೊಂಡಿರುವ ಪ್ಯಾನಿಂಡಿಯಾ ಚಿತ್ರ. ಇದನ್ನು ಬಲು ಪ್ರೀತಿಯಿಂದ ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ಕರಾವಳಿಯ ಹುಡುಗಿ ಸೋನಲ್ ಮಂತೇರೋ ನಾಯಕಿಯಾಗಿ ಝೈದ್ ಖಾನ್‌ಗೆ ಸಾಥ್ ಕೊಟ್ಟಿದ್ದಾರೆ. ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್, ಸಪ್ನಾ ರಾಜ್, ಬರ್ಖತ್ ಅಲಿ ಮುಂತಾದವರು ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಾನಪದ ಸೊಗಡಿನಲ್ಲಿ ಬಂತು ‘ಬನಾರಸ್’ ಸಿನಿಮಾದ ಹಾಡು

    ಜಾನಪದ ಸೊಗಡಿನಲ್ಲಿ ಬಂತು ‘ಬನಾರಸ್’ ಸಿನಿಮಾದ ಹಾಡು

    ಶಾಸಕ ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಾಯಕನಾಗಿ ಹಾಗೂ ಸೊನಾಲ್ ಮೊಂತೆರೊ ನಾಯಕಿಯಾಗಿ ನಟಿಸಿರುವ,  ಜಯತೀರ್ಥ ನಿರ್ದೇಶಿಸಿರುವ “ಬನಾರಸ್” ಚಿತ್ರ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಸಂಗೀತ ರಸಿಕರ ಮನ ಗೆದ್ದಿದೆ.

    “ಬನಾರಸ್” ಹಾಡುಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿರುವ ಸಮಯದಲ್ಲಿ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ‌. “ಹೆಣ್ಣು ಹಡೆಯಲು ಬ್ಯಾಡಾ” ಎಂಬ ಪ್ರಸಿದ್ದ ಜಾನಪದ ಗೀತೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ‌.‌ ಅಜನೀಶ್ ಲೋಕನಾಥ್ ಅವರ ಸಮಧುರ ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡನ್ನು ಹರ್ಷಿಕಾ ದೇವನಾಥ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ

    ಜಯತೀರ್ಥ ಅವರು ವಿಶೇಷವಾಗಿ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದು, ಈಗಾಗಲೇ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ತಿಲಕ್ ರಾಜ್ ಬಲ್ಲಾಳ್ ನಿರ್ಮಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ ಝೈದ್ ಖಾನ್

    ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ ಝೈದ್ ಖಾನ್

    ನಾರಸ್ ಎಂಬ ಶೀರ್ಷಿಕೆಯ ಹೆಸರು ಕೇಳಿದರೆ ಈ ಚಿತ್ರದ ಕಥೆಯ ಬಿರುಸು ಎಂತಹದ್ದು ಇರಬಹುದು ಎಂಬ ಸುಳಿವು ಚಿತ್ರರಸಿಕರಿಗೆ ಸಿಗುವುದು ಸಹಜ. ಬನಾರಸ್ ಸಿನಿಮಾದ ಮೊದಲ ಗೀತೆ ಚಿತ್ರರಸಿಕರ ಮಡಿಲು ಸೇರಿದ್ದು, ಪ್ರೇಮದೂರಿನಲ್ಲಿ ಕಳೆದು ಹೋಗುವ ದಾರಿಹೋಕನ ದೃಶ್ಯಕಾವ್ಯದ ಮಯಾಗಂಗೆ ಹಾಡು ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ಸುದ್ದಿಯಾಗುತ್ತಿದೆ. ಆಫ್ ಕೋರ್ಸ್, ಬನಾರಸ್ ಪ್ಯಾನ್ ಇಂಡಿಯಾ ಸಿನಿಮಾ. ಏಕಕಾಲದಲ್ಲಿ ಐದು ಭಾಷೆಯಲ್ಲಿ ರೆಡಿಯಾಗಿರುವ ಈ ಚಿತ್ರ ಭಾರತೀಯ ಚಿತ್ರಲೋಕದಲ್ಲಿ ಹೊಸದೊಂದು ಭರವಸೆ ಹುಟ್ಟಿಸಿದೆ. ಸಿನಿಮಾದ ನಾಯಕ ಝೈದ್ ಖಾನ್ ಚಿತ್ರರಂಗದಲ್ಲಿ ಒಳ್ಳೆ ಕಲಾವಿದ ಆಗುತ್ತಾನೆ ಎಂಬ ಮೆಚ್ಚುಗೆ ಮಾತುಗಳು ಚಾಲ್ತಿಯಲ್ಲಿವೆ.

    ಶ್ರೀಮಂತಿಕೆ ಜೊತೆಗೆ ವರ್ಚಸ್ಸು ಎರಡೂ ಇರುವವರು ಚಿತ್ರರಂಗಕ್ಕೆ ಪ್ರವೇಶಿಸುತ್ತಲೇ ಇರುತ್ತಾರೆ. ಆದರೆ ಮೊದಲ ನೋಟದಲ್ಲಿಯೇ ಪ್ರೇಕ್ಷಕರನ್ನು ಆವರಿಸಿ ಬಿಡುವುದು ಸವಾಲೇ ಸರಿ. ಮಯಾಗಂಗೆ ಹಾಡಿನ ಮೂಲಕ ತನ್ನ ಸಾಮರ್ಥ್ಯ ಏನು? ತನ್ನ ಪ್ರತಿಭೆ ಎಂತಹದ್ದು? ನಿರಂತರ ಕಲಾದೇವಿಯ ಆರಾಧನೆ ಜೊತೆಗೆ ಪರಿಶ್ರಮ ಇದ್ದರೆ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಬಹುದು ಎಂಬ ಭರವಸೆಯನ್ನು ಝೈದ್ ಖಾನ್ ಮೂಡಿಸಿದ್ದಾರೆ. ಕೇವಲ ಕನ್ನಡ ಸಿನಿಲೋಕ ಮಾತ್ರವಲ್ಲ ಟಾಲಿವುಡ್, ಬಾಲಿವುಡ್‍ನಲ್ಲಿಯೂ ಝೈದ್ ಬದ್ಧತೆಗೆ ಶಹಬ್ಬಾಸ್ ಗಿರಿ ಸಿಗುತ್ತಿದೆ ಅಂದರೆ ಅದಕ್ಕೆ ಕಾರಣ ಅವರ ಪರಿಶ್ರಮ. ಇದನ್ನೂ ಓದಿ: ತೆಲುಗಿನ ಮಹೇಶ್ ಬಾಬುಗೆ ತಂದೆಯಾಗಿ ನಟಿಸ್ತಾರಾ ರಿಯಲ್ ಸ್ಟಾರ್ ಉಪೇಂದ್ರ

    ಸಿನಿಮಾ ರಂಗದಲ್ಲಿ ಈಜಬೇಕು ಎಂಬ ಕನಸು ಕಟ್ಟಿಕೊಂಡು ಬಂದ ಝೈದ್ ಖಾನ್ ಆರಂಭದಿಂದಲೇ ಅವರು ಮೆಚ್ಚಿಕೊಂಡ ನಾಯಕ ನಟರ ಕಷ್ಟದ ಹಾದಿಯನ್ನು ಮೆಲುಕು ಹಾಕುತ್ತಲೇ ತಮ್ಮ ಮೊದಲ ಹೆಜ್ಜೆ ಪ್ರತಿಯೊಬ್ಬರ ಅಂತರ್ಯದಲ್ಲಿ ನೆನಪಿನಲ್ಲಿ ಉಳಿಯಬೇಕು. ಮೆಚ್ಚುಗೆ ವ್ಯಕ್ತವಾಗಬೇಕು ಅಂತಾ ಬೇಜಾನ್ ಕಸರತ್ತು ನಡೆಸಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಒಂದಷ್ಟು ವರ್ಷಗಳ ಕಾಲ ಕಲಾತರಬೇತಿ ಪಡೆದು ನಾಯಕನಾಗುವ ಏಕೈಕ ಗುರಿಯೊಂದಿಗೆ ಬಂದ ಝೈದ್‍ಗೆ ಗುರಿ ಸ್ಪಷ್ಟವಾಗಿತ್ತು. ಆ ಗುರಿ ಬೆನ್ನಟ್ಟಿದಾಗ ಸಿಕ್ಕಿದ್ದು ಬನಾರಸ್ ಎಂಬ ಒಂದೊಳ್ಳೆ ಕಥೆ, ಜಯತೀರ್ಥರಂತಹ ಅದ್ಭುತ ನಿರ್ದೇಶಕ. ಗುರು ಹಾಗೂ ಗುರಿ ಎರಡು ಸ್ಪಷ್ಟವಾದ್ಮೇಲೆ ಝೈದ್ ಬನಾರಸ್ ಮೂಲಕ ನಾಯಕನಾಗಿ ಬಣ್ಣ ಹಚ್ಚಿ, ಒಂದಷ್ಟು ವರ್ಷಗಳ ಕಾಲ ಸಿನಿಮಾ ತಪಸ್ಸು ಮಾಡಿ ಬನಾರಸ್ ಮೂಲಕ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ. ಅದಕ್ಕೂ ಮುನ್ನ ಚಿತ್ರಾಭಿಮಾನಿಗಳ ಮಡಿಲು ಸೇರಿರುವ ಚಿತ್ರದ ಮೊದಲ ಹಾಡು, ಝೈದ್ ಪರಿಶ್ರಮ ಎಂತಹದ್ದು, ಎನ್ನುವುದು ಎದ್ದು ಕಾಣುತ್ತದೆ. ಇದನ್ನೂ ಓದಿ: ಕನ್ನಡ ರಾಜ್ಯೋತ್ಸವಕ್ಕೆ ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ

    ಮುದನೀಡುವ ಮಯಾಗಂಗೆ ಸೊಗಸಾದ ಹಾಡಿನ ಮೂಲಕ ಝೈದ್ ಖಾನ್ ಬಲು ಚೆಂದವಾಗಿ ಕಾಣಿಸಿಕೊಂಡಿದ್ದು, ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ಎಂಬ ಆಶಾಭಾವನೆ ಮೂಡಿಸಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ಝೈದ್ ಪ್ಯಾನ್ ಇಂಡಿಯಾ ತುಂಬೆಲ್ಲಾ ರಾರಾಜಿಸೋದು ಮೇಲ್ನೋಟಕ್ಕೆ ತಿಳಿಯುವಂತಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜಕೀಯ ಎಂದರೆ ನನಗೆ ಇಷ್ಟ ಇಲ್ಲ: ಜಮೀರ್ ಪುತ್ರ

    ರಾಜಕೀಯ ಎಂದರೆ ನನಗೆ ಇಷ್ಟ ಇಲ್ಲ: ಜಮೀರ್ ಪುತ್ರ

    ಹಾಸನ: ನನ್ನ ತಂದೆ ರಾಜಕೀಯದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಆದರೆ ನಾನು ಮೊದಲಿನಿಂದಲೂ ರಾಜಕೀಯದಿಂದ ದೂರವೇ ಇದ್ದೇನೆ ಎಂದು ಶಾಸಕ ಜಮೀರ್‌ ಅಹಮದ್‌ ಪುತ್ರ ಹಾಗೂ ನಟ ಜೈದ್‌ ಖಾನ್‌ ಹೇಳಿದರು.

    ನಗರದಲ್ಲಿ ಮಾತನಾಡಿದ ಅವರು, ರಾಜಕೀಯದಿಂದ ನಾನು ಮೊದಲಿನಿಂದಲೂ ದೂರ ಉಳಿದಿದ್ದೇನೆ. ರಾಜಕೀಯ ನನಗೆ ಇಷ್ಟ ಇಲ್ಲ. ನನ್ನ ಆಯ್ಕೆ ಸಿನಿಮಾರಂಗ ಎಂದು ತಿಳಿಸಿದರು. ಇದನ್ನೂ ಓದಿ: ‘ಬನಾರಸ್’ ಫಸ್ಟ್ ಲುಕ್ ಮೋಷನ್ ಪೋಸ್ಟರ್‌ಗೆ ಚಿತ್ರರಸಿಕರಿಂದ ಬಹುಪರಾಕ್

    ನನ್ನ ನೋಡಲೆಂದು ಬಂದಿರುವ ಜನಸಾಗರ ನೋಡಿ ಸಂತೋಷವಾಗಿದೆ. ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದೇನೊ ನನಗೆ ಗೊತ್ತಿಲ್ಲ. ತಂದೆಯವರು ಸಾಕಷ್ಟು ಜನಪರ ಕೆಲಸ, ಬಡವರ ಸೇವೆ ಮಾಡಿದ್ದಾರೆ. ಅವರ ಮೇಲೆ ಪ್ರೀತಿ ಇಟ್ಟಿರುವ ಜನ ಇಂದು ನನ್ನನ್ನೂ ಗೌರವಿಸುತ್ತಿದ್ದಾರೆ. ನಾನು ತುಂಬ ಅದೃಷ್ಟವಂತನೆಂದು ಹೇಳಿಕೊಳ್ಳಲು ಹೆಮ್ಮಯಾಗುತ್ತಿದೆ ಎಂದು ಸಂಸತ ವ್ಯಕ್ತಪಡಿಸಿದರು.

    5 ಭಾಷೆಗಳಲ್ಲಿ ನಿರ್ಮಾಣವಾಗಿರುವ ʻಬನರಸ್ʼ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದು, ಈಗಾಗಲೇ ಟ್ರೈಲರ್‌ನಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಮೊದಲ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದೇನೆ. ರಾಜಕೀಯದಲ್ಲಿ ತಂದೆಗೆ ತೋರಿದ ಪ್ರೀತಿಯನ್ನು ನನ್ನ ಮೇಲೂ ತೋರಿಸಿ. ಚಿತ್ರರಂಗದಲ್ಲಿ ನನ್ನನ್ನು ಬೆಳೆಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ‘ಪುಷ್ಪ’ ಸಿನಿಮಾದ ರೋಮ್ಯಾಂಟಿಕ್ ಸೀನ್​ಗೆ ಬಿತ್ತು ಕತ್ತರಿ

    ಬನರಸ್ ಚಲನಚಿತ್ರದಲ್ಲಿ ಕಾಮಿಡಿ, ಆ್ಯಕ್ಷನ್, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಎಲ್ಲಾ ರೀತಿಯ ಸನ್ನಿವೇಶಗಳಿವೆ. ಕುಟುಂಬ ಸಮೇತರಾಗಿ ಸಿನಿಮಾ ನೋಡಿ. ಬನರಸ್ ಸಿನಿಮಾ ೨೦೨೨ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.

  • ‘ಬನಾರಸ್’ ಫಸ್ಟ್ ಲುಕ್ ಮೋಷನ್ ಪೋಸ್ಟರ್‌ಗೆ ಚಿತ್ರರಸಿಕರಿಂದ ಬಹುಪರಾಕ್

    ‘ಬನಾರಸ್’ ಫಸ್ಟ್ ಲುಕ್ ಮೋಷನ್ ಪೋಸ್ಟರ್‌ಗೆ ಚಿತ್ರರಸಿಕರಿಂದ ಬಹುಪರಾಕ್

    ವಿರಾದ ಪ್ರೇಮ ಕಥೆಯನ್ನು ತೆರೆ ಮೇಲೆ ಉಣಬಡಿಸಲು ಬರ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಬನಾರಸ್. ಬೆಲ್ ಬಾಟಂ ಸೂಪರ್ ಸಕ್ಸಸ್ ನಂತರ ನಿರ್ದೇಶಕ ಜಯತೀರ್ಥ ಹೊಸ ಮುಖವನ್ನು ಪ್ರೇಮ ಕಥೆಯ ಮೂಲಕ ಸ್ಯಾಂಡಲ್ ಅಂಗಳಕ್ಕೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ಬನಾರಸ್ ಸಿನಿಮಾ ಟಾಕ್ ಚಂದನವನದಲ್ಲಿ ಜೋರಾಗಿದ್ದು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿ ಎಲ್ಲರ ಹುಬ್ಬೇರಿಸಿದೆ.

    ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಬನಾರಸ್ ಚಿತ್ರತಂಡ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಪ್ರಾಮಿಸಿಂಗ್ ಆಗಿ ಮೂಡಿ ಬಂದಿರುವ ಮೋಷನ್ ಪೋಸ್ಟರ್ ಎಲ್ಲರ ಹುಬ್ಬೇರುವಂತೆ ಮಾಡಿದೆ. ಸಿನಿಮಾ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಬೇರೆಯದ್ದೇ ಲೆವೆಲ್ ನಲ್ಲಿ ಇರಲಿದೆ ಎಂಬ ಕುರುಹನ್ನು ಈ ಪೋಸ್ಟರ್ ನೀಡಿದೆ. ಮೋಷನ್ ಪೋಸ್ಟರ್ ಬಿಡುಗಡೆಯಾದ ಮೇಲೆ ಸಿನಿಮಾ ಮೇಲೆ ಟಾಕ್ ಜೋರಾಗಿದ್ದು, ಗಾಂದೀನಗರದಲ್ಲಿ ಬನಾರಸ್ ಸಖತ್ ಸೌಂಡ್ ಮಾಡಲಿದೆ ಎಂಬ ಭವಿಷ್ಯ ನುಡಿಯುತ್ತಿದ್ದಾರೆ.

    ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಬನಾರಸ್ ಸಿನಿಮಾ ಸ್ಯಾಂಡಲ್ ವುಡ್ ಅಂಗಳಕ್ಕೆ ತುಂಬಾನೇ ಸ್ಪೆಷಲ್. ಅದಕ್ಕೆ ಕಾರಣವೂ ಅಷ್ಟೇ ವಿಶೇಷವಾದದ್ದು. ಬನಾರಸ್ ನವೀರಾದ ಪ್ರೇಮ ಕಥೆ ಹೊತ್ತ ಸಿನಿಮಾ. ಪ್ರೇಮ ಕಥೆ ಹೇಳುವಲ್ಲಿ ನಿರ್ದೇಶಕ ಜಯತೀರ್ಥ ನಿಸ್ಸೀಮರು. ಈಗಾಗಲೇ ಇವರ ಒಲವೇ ಮಂದಾರ ಸಿನಿಮಾ ನೋಡಿ ಕಣ್ತುಂಬಿಕೊಂಡವರಿಗೆ ಅದು ಅರ್ಥವಾಗಿರುತ್ತೆ. ಬನಾರಸ್ ಅಂಗಳದಲ್ಲಿ ನಿಂತು ಅಲ್ಲಿನ ಸೌಂದರ್ಯದ ಜೊತೆಗೆ ನವಿರಾದ ಪ್ರೇಮಕಥೆಯನ್ನು ಹೆಣೆದು ತೆರೆಗೆ ತರಲು ಸಜ್ಜಾಗಿದ್ದಾರೆ. ಅಷ್ಟೇ ಅಲ್ಲ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಅಂಗಳಕ್ಕೆ ಲವರ್ ಬಾಯ್ ಆಗಿ, ಚಾಕೋಲೇಟ್ ಹೀರೋ ಆಗಿ ಶಾಸಕ ಜಮೀರ್ ಅಹಮ್ಮದ್ ಪುತ್ರ ಝೈದ್ ಖಾನ್ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೀಗೆ ಸಾಕಷ್ಟು ವಿಶೇಷತೆಯನ್ನು ಬನಾರಸ್ ಚಿತ್ರ ಒಳಗೊಂಡಿದೆ. ಸಹಜವಾಗಿಯೇ ಈ ಎಲ್ಲಾ ಅಂಶಗಳು ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇದನ್ನೂ ಓದಿ: ಹೊಸ ಇತಿಹಾಸ ಸೃಷ್ಟಿಸಿದ ಜಮೀರ್ ಪುತ್ರ ಝೈದ್ ಖಾನ್ ನಟನೆಯ ‘ಬನಾರಸ್’ ಚಿತ್ರ

    ಚಿತ್ರದಲ್ಲಿ ಝೈದ್ ಖಾನ್‌ಗೆ ಜೋಡಿಯಾಗಿ ಕರಾವಳಿ ಬೆಡಗಿ ಸೊನಲ್ ಮೊಂಥೆರೋ ತೆರೆ ಹಂಚಿಕೊಂಡಿದ್ದಾರೆ. ದೇವರಾಜ್ ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಸಪ್ನ ರಾಜ್, ಬರ್ಕತ್ ಅಲಿ ಒಳಗೊಂಡಂತೆ ಹಲವು ಕಲಾವಿದರ ತಾರಾಬಳಗವಿದೆ. ಈಗಾಗಲೇ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿ ಇತಿಹಾಸ ಸೃಷ್ಟಿಸಿರುವ ಈ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ.


    ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಎ. ವಿಜಯ್, ಡಿಫ್ರೆಂಟ್ ಡ್ಯಾನಿ ಸಾಹಸ ನಿರ್ದೇಶನ, ರಘು ನಿಡುವಳ್ಳಿ ಸಂಭಾಷಣೆ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಎ.ಹರ್ಷ ನೃತ್ಯ ನಿರ್ದೇಶನ ಬನಾರಸ್ ಚಿತ್ರಕ್ಕಿದೆ. ಎನ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ತಿಲಕ್ ರಾಜ್ ಬಲ್ಲಾಳ್ ಬಂಡವಾಳ ಹಾಕಿ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

  • ಹೊಸ ಇತಿಹಾಸ ಸೃಷ್ಟಿಸಿದ ಜಮೀರ್ ಪುತ್ರ ಝೈದ್ ಖಾನ್ ನಟನೆಯ ‘ಬನಾರಸ್’ ಚಿತ್ರ

    ಹೊಸ ಇತಿಹಾಸ ಸೃಷ್ಟಿಸಿದ ಜಮೀರ್ ಪುತ್ರ ಝೈದ್ ಖಾನ್ ನಟನೆಯ ‘ಬನಾರಸ್’ ಚಿತ್ರ

    ಬೆಂಗಳೂರು: ಚಂದನವನದ ಹೆಸರಾಂತ ನಿರ್ದೇಶಕ ಜಯತೀರ್ಥ ನಿರ್ದೇಶನದ ‘ಬನಾರಸ್’ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸೆಟ್ಟೇರಿದ ದಿನದಿಂದ ಸಖತ್ ಟಾಕ್ ಕ್ರಿಯೇಟ್ ಮಾಡಿದೆ.

    ಹಲವಾರು ವಿಶೇಷತೆ ಒಳಗೊಂಡಿರುವ ಈ ಚಿತ್ರದಲ್ಲಿ ಶಾಸಕ ಜಮೀರ್ ಅಹಮ್ಮದ್ ಖಾನ್ ಪುತ್ರ ಝೈದ್ ಖಾನ್ ನಾಯಕ ನಟನಾಗಿ ಸ್ಯಾಂಡಲ್‍ವುಡ್ ಅಂಗಳಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಲವರ್ ಬಾಯ್ ಆಗಿ ಮಿಂಚಲಿರೋ ಝೈದ್ ಖಾನ್ ಜೊತೆ ಕರಾವಳಿ ಬೆಡಗಿ ಸೊನಲ್ ಮೊಂಥೆರೋ ತೆರೆ ಹಂಚಿಕೊಂಡಿದ್ದಾರೆ.

    ಬಿಡುಗಡೆಯ ಆಸುಪಾಸಿನಲ್ಲಿರುವ ಸಿನಿಮಾ ಸಖತ್ ಸುದ್ದಿಯಲ್ಲಿದ್ದು, ಸಂಭ್ರಮದಲ್ಲಿದೆ. ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಇದಕ್ಕೆ ಕಾರಣ ‘ಬನಾರಸ್’ ಚಿತ್ರದ ಆಡಿಯೋ ರೈಟ್ಸ್. ಹೌದು, ‘ಬನಾರಸ್’ ಚಿತ್ರದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿರೋದೆ ಈ ಸಂಭ್ರಮಕ್ಕೆ ಕಾರಣವಾಗಿದೆ. ದೇಶದ ಅತ್ಯುನ್ನತ ಆಡಿಯೋ ಕಂಪನಿ ಲಹರಿ ಸಂಸ್ಥೆ ಹಾಗೂ ಟಿ-ಸೀರೀಸ್ ಜಂಟಿಯಾಗಿ ಚಿತ್ರದ ಆಡಿಯೋ ರೈಟ್ಸ್ ಬರೋಬ್ಬರಿ 3.5 ಕೋಟಿ ರೂ. ದಾಖಲೆ ಮೊತ್ತ ಕೊಟ್ಟು ಖರೀದಿಸಿದೆ. ಇದನ್ನೂ ಓದಿ: ರಿಲ್ಯಾಕ್ಸ್ ಮೂಡ್​ನಲ್ಲಿರುವ ಹೇಮ ಮಾಲಿನಿ, ಧರ್ಮೇಂದ್ರ

    ಭಾರೀ ಮೊತ್ತಕ್ಕೆ ಆಡಿಯೋ ರೈಟ್ಸ್ ಸೇಲಾಗಿದೆ. ಈ ವಿಷಯ ಒಂದು ಕಡೆಯಾದ್ರೆ, ಯುವ ನಟನೊಬ್ಬ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಿನಿಮಾವೊಂದರ ಆಡಿಯೋ ರೈಟ್ಸ್ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲು ಅನ್ನೋದು ವಿಶೇಷ ಸಂಗತಿಯಾಗಿದೆ.

    ಚಿತ್ರತಂಡ ಈ ಖುಷಿಯ ಸಂಭ್ರಮದಲ್ಲಿದ್ದು, ಚಿತ್ರ ಬಿಡುಗಡೆಗೂ ತಯಾರಿ ನಡೆಸುತ್ತಿದೆ. ‘ಬನಾರಸ್’ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ವಿಭಿನ್ನ ಹಾಗೂ ನವಿರಾದ ಪ್ರೇಮಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಝೈದ್ ಖಾನ್, ಸೊನೆಲ್ ಮೊಂಥೆರೋ ಜೋಡಿ ಲವ್ ಬಡ್ರ್ಸ್ ಆಗಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ಚಿತ್ರದ ಚಿತ್ರೀಕರಣ ಬೆಂಗಳೂರು ಒಳಗೊಂಡಂತೆ ಬಹುತೇಕ ಕಾಶಿಯಲ್ಲೇ ನಡೆದಿರೋದು ಚಿತ್ರದ ಮತ್ತೊಂದು ವಿಶೇಷವಾಗಿದೆ.

    ಚಿತ್ರದಲ್ಲಿ ದೇವರಾಜ್, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ ಒಳಗೊಂಡಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ‘ಬನಾರಸ್’ ಸಿನಿಮಾ ಮೂಡಿ ಬಂದಿದ್ದು, ಪ್ರೇಮಕಥೆ ಒಳಗೊಂಡ ಈ ಚಿತ್ರದಲ್ಲಿ ಸಂಗೀತಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ. ಇದನ್ನೂ ಓದಿ: ಗೋವು ಕಳ್ಳರನ್ನು ಬಂಧಿಸಿ – ಶಿವಮೊಗ್ಗದ್ದಲ್ಲಿ ವಿಎಚ್‍ಪಿ, ಭಜರಂಗ ದಳ ಪ್ರತಿಭಟನೆ

    ಅದ್ವೈತ್ ಗುರುಮೂರ್ತಿ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಎನ್.ಕೆ.ಪ್ರೊಡಕ್ಷನ್ಸ್ ಬ್ಯಾನರ್ ನಡಿ ವೈ.ಬಿ.ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದು, ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳಲಿದೆ.