Tag: ಬನಾರಸ್ ಜಮೀರ್ ಅಹಮದ್

  • ರಾಜ್‍ಕುಮಾರ್ ಕುಟುಂಬ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು: ಜಮೀರ್ ಪುತ್ರ ಝೈದ್ ಖಾನ್

    ರಾಜ್‍ಕುಮಾರ್ ಕುಟುಂಬ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು: ಜಮೀರ್ ಪುತ್ರ ಝೈದ್ ಖಾನ್

    – ನಾನು ಸಿನಿಮಾಗೆ ಬರಲು ಸ್ಫೂರ್ತಿಯೇ ಅಣ್ಣಾವ್ರ ಕುಟುಂಬ

    ಬೆಂಗಳೂರು: ನಾನು ಸಿನಿಮಾ ರಂಗಕ್ಕೆ ಬರಲು ಸ್ಫೂರ್ತಿಯೇ ಅಣ್ಣಾವ್ರ ಕುಟುಂಬವಾಗಿದೆ. ಚಿಕ್ಕಂದಿನಿಂದಲೂ ಅವರ ಕುಟುಂಬವನ್ನ ನೋಡುತ್ತಾ ಬಂದಿದ್ದೇನೆ ಎಂದು ಶಾಸಕ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ಹೇಳಿದ್ದಾರೆ.

    ಬನಾರಸ್ ಚಿತ್ರತಂಡ ಅಪ್ಪು ಸಮಾಧಿ ಬಳಿ ಪೋಸ್ಟರ್ ಲಾಂಚ್ ಮಾಡಿದೆ. ಈ ವೇಳೆ ಝೈದ್ ಖಾನ್ ಮಾತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ನವೆಂಬರ್ 1 ಕ್ಕೆ ರಿಲೀಸ್ ಮಾಡಬೇಕಿತ್ತು. ಅಕ್ಟೋಬರ್ 28ರ ಸಂಜೆ ಅಪ್ಪು ಸರ್‌ಗೆ ಫೋನ್ ಮಾಡಿ ನನ್ನ ಸಿನಿಮಾದ ಪೋಸ್ಟರ್ ಲಾಂಚ್ ಮಾಡುವಂತೆ ಕೇಳಿಕೊಂಡಿದ್ದೆ. ಆದರೆ ಮರುದಿನ ಅವರೇ ಇಲ್ಲ. ಇದನ್ನ ಹೇಗೆ ಡೈಜೆಸ್ಟ್ ಮಾಡಿಕೊಳ್ಳುವುದು ಗೊತ್ತಾಗುತ್ತಿಲ್ಲ ಎಂದು ಭಾವುಕರಾಗಿದ್ದಾರೆ. ‘ಬನಾರಸ್’ ಫಸ್ಟ್ ಲುಕ್ ಮೋಷನ್ ಪೋಸ್ಟರ್‌ಗೆ ಚಿತ್ರರಸಿಕರಿಂದ ಬಹುಪರಾಕ್

    ರಾಜ್‍ಕುಮಾರ್ ಸರ್‌ನ ವೀರಪ್ಪನ್ ಕಿಡ್ನ್ಯಾಪ್ ಮಾಡಿದ್ದರು. ಆಗ ರಾಜ್‍ಕುಮಾರ್ ಅವರು ವಾಪಸ್ ಬಂದಾದ್ಮೇಲೆ ಇಡೀ ಕುಟುಂಬ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ಚಿಕ್ಕಂದಿನಿಂದಲೂ ಅಣ್ಣಾವ್ರ ಕುಟುಂಬವನ್ನ ನೋಡುತ್ತಾ ಬಂದಿದ್ದೇನೆ. ಇವತ್ತು ನಾನು ಮರೂನ್ ಬಣ್ಣದ ಶರ್ಟ್ ಹಾಕಿದ್ದೇನೆ. ಇದಕ್ಕೂ ಹಿನ್ನಲೆ ಇದೆ. ಅಪ್ಪು ಸರ್ ಹೇಳಿದ್ದರು ನಿನಗೆ ಮರೂನ್ ಬಣ್ಣ ಚೆನ್ನಾಗಿ ಒಪ್ಪುತ್ತದೆ ಎಂದು. ಅವರ ನೆನಪಿಗಾಗಿ ಈ ಬಣ್ಣದ ಶರ್ಟ್ ಹಾಕಿದ್ದೇನೆ ಎಂದು ಹೇಳುತ್ತಾ ಅಪ್ಪು ಅವರ ಜೊತೆಗೆ ಇರುವ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಹೊಸ ಇತಿಹಾಸ ಸೃಷ್ಟಿಸಿದ ಜಮೀರ್ ಪುತ್ರ ಝೈದ್ ಖಾನ್ ನಟನೆಯ ‘ಬನಾರಸ್’