Tag: ಬನಶಂಕರಿ ದೇವಸ್ಥಾನ

  • ಪ್ರೀತಿಸಿದ ಹುಡ್ಗ ನನಗೆ ಬೇಡ, ಐಎಎಸ್ ಅಧಿಕಾರಿ ಜೊತೆ ಮದ್ವೆ ಮಾಡಿಸು; ಬನಶಂಕರಿ ದೇವಿಗೆ ಚಿತ್ರವಿಚಿತ್ರ ಕೋರಿಕೆ!

    ಪ್ರೀತಿಸಿದ ಹುಡ್ಗ ನನಗೆ ಬೇಡ, ಐಎಎಸ್ ಅಧಿಕಾರಿ ಜೊತೆ ಮದ್ವೆ ಮಾಡಿಸು; ಬನಶಂಕರಿ ದೇವಿಗೆ ಚಿತ್ರವಿಚಿತ್ರ ಕೋರಿಕೆ!

    – ಹೃದಯವಂತ, ಗುಣವಂತ, ಸಿರಿವಂತ ಸಿಗಲೆಂದು ಯುವತಿ ಬೇಡಿಕೆ

    ಬೆಂಗಳೂರು: ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ನಾವು ಹುಂಡಿಗೆ ಹಣ ಹಾಕೋದನ್ನ ನಾವು ನೋಡಿರುತ್ತೀವಿ. ಇಲ್ಲವೆಂದರೆ ತಮ್ಮಿಷ್ಟದ ಬೇಡಿಕೆಗಳು ಈಡೇರಲು ಹರಕೆ ಕಟ್ಟಿಕೊಳ್ಳುತ್ತಾರೆ. ಆದ್ರೆ ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ (Banashankari Temple) ದೇವರ ಹುಂಡಿಗೆ ಚಿತ್ರ-ವಿಚಿತ್ರ ಕೊರಿಕೆಯ ಪತ್ರಗಳನ್ನ ಹಾಕಿರುವುದು ಕಂಡುಬಂದಿದೆ. ಇದನ್ನ ಕಂಡು ದೇವಸ್ಥಾನ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿ ನಕ್ಕಿದ್ದಾರೆ.

    ದೇವಸ್ಥಾನ ಹುಂಡಿಗಳಲ್ಲಿ ಹಣದ ಬದಲು ಭಕ್ತರು (Devotees) ಚೀಟಿ, ಪತ್ರಗಳು ಪತ್ತೆಯಾಗಿವೆ. ಅಷ್ಟಕ್ಕೂ ಚಿತ್ರ, ವಿಚಿತ್ರ ಕೋರಿಕೆಯ ಪತ್ರಗಳು ಏನು? ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ… ಇದನ್ನೂ ಓದಿ: ವಕೀಲೆ ಚೈತ್ರಾ ಗೌಡ ಅನುಮಾನಾಸ್ಪದ ಸಾವು ಕೊಲೆಯಲ್ಲ, ಆತ್ಮಹತ್ಯೆ – ಪೊಲೀಸ್‌ ವರದಿಯಲ್ಲೇನಿದೆ?

    ಪತ್ರ – 01
    ಐಎಎಸ್ ಅಧಿಕಾರಿ ಜೊತೆಗೇ ಮದ್ವೆ ಮಾಡ್ಸು:
    “ಅಮ್ಮ ನಾನು ತಪ್ಪು ಮಾಡಿದೀನಿ ಕ್ಷಮಿಸಿ, ಹಿಂದೆ ಪತ್ರ (Devotees Request Letter) ಬರೆದಾಗ ನಾನು ಗೋಪಿನಾಥ್ ಬಿಟ್ರೆ ಯಾರನ್ನೂ ಬೇರೆ ಯಾರನ್ನೂ ಮದುವೆಯಾಗದಂತೆ ಆಗದಂತೆ ಬಯಸಿದ್ದೆ. ಈಗ ಅವನು ನನಗೆ ಬೇಡ. ಆದಷ್ಟು ಬೇಗ ಮುಂದಿನ ವರ್ಷದಷ್ಟರಲ್ಲಿ ನನ್ನ ಮದುವೆ ಆಗುವಂತೆ ಮಾಡು. ಒಳ್ಳೆಯ ಹೆಸರು, ಕೀರ್ತಿ, ಹೃದಯವಂತ, ಗುಣವಂತ, ಸಿರಿವಂತ, ಐಶ್ವರ್ಯವಂತ ಹುಡುಗ ಆಗಿರಬೇಕು, ಯಾವ ಹೀರೋಗೂ ಕಡಿಮೆ ಇರಬಾರದು. ಅಷ್ಟು ಚೆನ್ನಾಗಿರೋ ಒಳ್ಳೆಯ ಐಎಎಸ್ ಅಧಿಕಾರಿ ಜೊತೆ ನನ್ನ ಮದುವೆ ಮಾಡಿಸು. ನನ್ನ ಗಂಡ ಬೇರೆ ಯಾವ ಹೆಂಗಸರನ್ನು, ಹುಡುಗಿಯರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು, ನನ್ನನ್ನ ಹೆಚ್ಚಾಗಿ ಪ್ರೀತಿ ಮಾಡಬೇಕು. ನಾನಂದ್ರೆ ಅವರಿಗೆ ಜೀವ ಆಗಿರಬೇಕು. ನನಗೆ ಮಕ್ಕಳು, ಮೊಮ್ಮಕ್ಕಳ ಜೊತೆ ಜೀವನ ಮಾಡಬೇಕು ಇಷ್ಟು ವರ್ಷ ಕಾದಿದ್ದಕ್ಕೆ ಒಳ್ಳೆ ಹುಡುಗ ಸಿಕ್ಕಿದ ಅಂತ ಆಡಿಕೊಳ್ಳೋರ ಬಾಯಿ ಮುಚ್ಚಿಸಬೇಕು ಅಂತಾ ಹುಡುಗ ಕೊಡು.

    ಪತ್ರ – 02
    ತಾಯಿ ಆಸ್ತಿ ಸಿಗಲಿ:
    ನನ್ನ ತಾಯಿ ಮನೆಯಿಂದ ನನಗೆ ಬರಬೇಕಾಗಿರುವ ಆಸ್ತಿ ಯಾವುದೇ ಅಡ್ಡಿಯಿಲ್ಲದೇ ನನ್ನ ಕೈಸೇರಬೇಕು. ಯಾವುದೇ ಅಡ್ಡಿ ಇಲ್ಲದೇ ನನಗೆ ಸಿಗೋತರಹ ಮಾಡು ತಾಯಿ.

    ಪತ್ರ – 03
    ಸಂಸಾರ ದೂರ ಆಗುವಂತೆ ಮಾಡು:
    ಅಮ್ಮ ತಾಯಿ ರಮ್ಯ ಮತ್ತು ಉಮೇಶ್ ಇಬ್ಬರು ದೂರು ಆಗುವಂತೆ ಮಾಡು. ಇವರಿಂದ ಒಂದು ಸಂಸಾರ ದೂರ ಆಗಿದೆ. ಅವರ ತಪ್ಪಿಗೆ ಶಿಕ್ಷೆ ಕೊಡು ತಾಯಿ ಎಂಬುದು ಭಕ್ತರೊಬ್ಬರ ಕೋರಿಕೆ.

    ಪತ್ರ – 04
    ಮಗನ ಮದುವೆ ನಡೆದು, ಜೀವನ ಚೆನ್ನಾಗಿರಲಿ:
    ಅಮ್ಮ-ತಾಯಿ ನಿನ್ನಲ್ಲಿ ನನ್ನದು ಒಂದು ಕೋರಿಕೆ ನನ್ನ ಮಗ ಶಶಾಂಕ್‌ಗೆ ಮತ್ತೆ ಮದುವೆ ಫಿಕ್ಸ್ ಆಗಿದೆ, ನಿಶ್ಚಿತಾರ್ಥ ಆಗಿದೆ. ನನ್ನ ಮಗನನ್ನ ಮದುವೆ ಆಗುತ್ತಿರುವ ಹುಡುಗಿ ರಮ್ಯ. ನನ್ನ ಮಗನ ಜೊತೆ ಚೆನ್ನಾಗಿರುವಂತೆ ಮಾಡು. ನನ್ನ ಜೊತೆ, ನಮ್ಮ ಮನೆಯವರ ಜೊತೆ ಸಂತೋಷದಿಂದ ಇರುವಂತೆ ಮಾಡು ಯಾವುದೇ ಬೇಜಾರು ಇಲ್ಲದೇ ಸಂಸಾರ ನಡೆಸಿಕೊಂಡು ಹೋಗುವಂತೆ ಮಾಡು ತಾಯಿ ಅಂತೆಲ್ಲ ಭಕ್ತರು ಚೀಟಿಗಳಲ್ಲಿ ಬರೆದು ಹುಂಡಿಗೆ ಹಾಕಿದ್ದಾರೆ.

  • ಬನಶಂಕರಿ ದೇವಸ್ಥಾನದ ನೂತನ ಗೋಪುರಕ್ಕೆ ಬಡಿದ ಸಿಡಿಲು – ಸ್ಥಳೀಯರಲ್ಲಿ ಆತಂಕ

    ಬನಶಂಕರಿ ದೇವಸ್ಥಾನದ ನೂತನ ಗೋಪುರಕ್ಕೆ ಬಡಿದ ಸಿಡಿಲು – ಸ್ಥಳೀಯರಲ್ಲಿ ಆತಂಕ

    ಗದಗ: ಬನಶಂಕರಿ ದೇವಸ್ಥಾನದ (Banashankari temple) ನೂತನ ಗೋಪುರಕ್ಕೆ ಸಿಡಿಲು ಬಡಿದು ಸ್ಥಳದಲ್ಲಿದ್ದ 8 ಜನ ಪ್ರಾಣಾಪಾಯದಿಂದ ಪಾರಾದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ (Lakshmeshwara) ತಾಲೂಕಿನ ಶಿಗ್ಲಿ (Shigli) ಗ್ರಾಮದಲ್ಲಿ ನಡೆದಿದೆ.

    ಶಿಗ್ಲಿ ಗ್ರಾಮದ ಐತಿಹಾಸಿಕ ಬನಶಂಕರಿ ದೇವಸ್ಥಾನ ಗೋಪುರಕ್ಕೆ ಸಿಡಿಲು ಬಡಿದು ಗೋಪುರ ಜಖಂ ಆಗಿದೆ. ಈ ವೇಳೆ ಸ್ಥಳದಲ್ಲಿದ್ದ 8 ಜನ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಓರ್ವನ ಕೈಗೆ ಗೋಪುರದ ಸಿಮೆಂಟ್ ತುಣುಕುಗಳು ಬಡಿದು ಗಾಯವಾಗಿದೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದನ್ನೂ ಓದಿ: ಪುಣ್ಯಸ್ಮರಣೆ – ತಂದೆಯ ಸಮಾಧಿಗೆ ಹೆಲಿಕಾಪ್ಟರ್‌ನಲ್ಲಿ ಪುಷ್ಪಾರ್ಚನೆ ಮಾಡಿಸಿದ ಮಗ

    8 ತಿಂಗಳ ಹಿಂದೆಯಷ್ಟೇ ಸುಮಾರು 1.20 ಕೋಟಿ ರೂ. ವೆಚ್ಚದಲ್ಲಿ ಈ ಗೋಪುರ ಜೀರ್ಣೋದ್ಧಾರ ಮಾಡಲಾಗಿತ್ತು. ಸಾವಿರಾರು ಜನ ದಾನಿಗಳ ದೇಣಿಗೆ ಸಹಾಯದಿಂದ ಸುಂದರ ಗೋಪುರ ನಿರ್ಮಿಸಲಾಗಿತ್ತು. ಈಗ ಏಕಾಏಕಿ ಸಿಡಿಲು ಬಡಿದಿರುವುದರಿಂದ ಗ್ರಾಮದ ಜನರಲ್ಲಿ ಆತಂಕ ಮನೆಮಾಡಿದೆ. ಐತಿಹಾಸಿಕ ದೇವಸ್ಥಾನ ಗೋಪುರಕ್ಕೆ ಅಪಚಾರ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಪ್ರೀತಿಸಿದವಳಿಂದ ಕಪಾಳಮೋಕ್ಷ – ಅವಮಾನ ಸಹಿಸಲಾರದೇ ಪ್ರಿಯಕರ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ಬನಶಂಕರಿ ದೇವಸ್ಥಾನ ಅಭಿವೃದ್ಧಿ – ಮಾಸ್ಟರ್ ಪ್ಲಾನ್‌ಗೆ ಶಶಿಕಲಾ ಜೊಲ್ಲೆ ಸೂಚನೆ

    ಬನಶಂಕರಿ ದೇವಸ್ಥಾನ ಅಭಿವೃದ್ಧಿ – ಮಾಸ್ಟರ್ ಪ್ಲಾನ್‌ಗೆ ಶಶಿಕಲಾ ಜೊಲ್ಲೆ ಸೂಚನೆ

    ಬೆಂಗಳೂರು: ನಗರದ ಸುಪ್ರಸಿದ್ಧ ಬನಶಂಕರಿ ದೇವಾಲಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ. ದೈವ ಸಂಕಲ್ಪ ಯೋಜನೆಯ ಮೊದಲ ಹಂತದ ದೇವಾಲಯಗಳ ಪಟ್ಟಿಯಲ್ಲಿರುವ ಬೆಂಗಳೂರಿನ ಬನಶಂಕರಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರಚಿಸುವಂತೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ವಿಧಾನಸೌಧದಲ್ಲಿ ಕಂದಾಯ ಸಚಿವರು ಹಾಗೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಅವರ ಜೊತೆಯಲ್ಲಿ ನಡೆದ ಸಭೆಯಲ್ಲಿ ಬನಶಂಕರಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ವಿಸ್ತೃತವಾಗಿ ಚರ್ಚಿಸಲಾಯಿತು.

    ಈ ವೇಳೆ ಮಾಹಿತಿ ನೀಡಿದ ಸಚಿವೆ ಜೊಲ್ಲೆ, 4.20 ಎಕರೆ ಪ್ರದೇಶದಲ್ಲಿರುವ ಬನಶಂಕರಿ ದೇವಸ್ಥಾನ ನಗರದ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಈ ದೇವಸ್ಥಾನದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಈಗಾಗಲೇ ದೈವ ಸಂಕಲ್ಪ ಯೋಜನೆಯ ಮೊದಲ ಹಂತದ ದೇವಾಲಯಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಮಗ್ರವಾದ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ದೇವಾಲಯದಲ್ಲಿ 48 ಕೋಟಿ ರೂ. ಹಣವಿದ್ದು, ಈ ಹಣದ ಸದುಪಯೋಗದ ಮೂಲಕ ಭಕ್ತಸ್ನೇಹಿ ಪರಿಸರವನ್ನು ನಿರ್ಮಾಣ ಮಾಡುವತ್ತ ಹೆಚ್ಚಿನ ಗಮನ ನೀಡುವಂತಹ ಮಾಸ್ಟರ್ ಪ್ಲಾನ್ ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಮಾಜಿ ಶಾಸಕ ಎಂ.ಡಿ ಲಕ್ಷ್ಮಿ ನಾರಾಯಣ್ ಗುಡ್ ಬೈ

    ಆಂಜನೇಯ ದೇವಾಲಯ ಪುನರ್ ನಿರ್ಮಾಣ:
    ಬನಶಂಕರಿ ದೇವಾಲಯದ ಆವರಣದಲ್ಲಿರುವ ವರಪ್ರಸಾದ ಆಂಜನೇಯ ದೇವಾಲಯವು 1915 ರಲ್ಲಿ ನಿರ್ಮಿಸಲಾಗಿದೆ. ಇದು ಸುಮಾರು 100 ವರ್ಷಗಳಿಗೂ ಹಿಂದಿನ ದೇವಾಲಯವಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಇದರ ಜೀರ್ಣೋದ್ಧಾರಕ್ಕಾಗಿ ಮೂಲ ದೇವಾಲಯದ ಗರ್ಭಗುಡಿಯ ಹಿಂಬದಿ ಅಲಂಕಾರ ಮೂರ್ತಿಯಾಗಿ ಮತ್ತೊಂದು ಹೊಸ ಮೂರ್ತಿಯನ್ನು ಪ್ರತಿಸ್ಥಾಪಿಸಲು ಹಾಗೂ ಮೂಲ ದೇವಾಲಯದ ಗರ್ಭಗುಡಿ, ಪ್ರಾಂಗಣಗಳ ವಿಸ್ತೀರ್ಣವನ್ನು ವಿನ್ಯಾಸಗೊಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅನುಕೂಲಕರವಾಗುವ ರೀತಿಯಲ್ಲಿ ನಕ್ಷೆಯನ್ನು ತಯಾರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

    ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳ ಪ್ರಸಾದ ವಿತರಣೆಗೆ ಅನ್ನದಾಸೋಹ ಭವನವನ್ನು ಉಪಯೋಗಿಸಲಾಗುತ್ತಿದೆ. ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಿಂದ ಭವನದ ಖಾಲಿ ಸ್ಥಳದಲ್ಲಿ ತಾತ್ಕಾಲಿಕವಾಗಿ ಪೆಂಡಾಲ್‌ಗಳನ್ನು ಹಾಕಿ ಪ್ರಸಾದವನ್ನು ವಿತರಿಸಲಾಗುತ್ತಿದೆ. ಮಳೆ ಬಂದಾದ ಪ್ರಸಾದ ಸ್ವೀಕರಿಸಲು ತೊಂದರೆ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸದರಿ ಸ್ಥಳದಲ್ಲಿ ಭಕ್ತಾದಿಗಳಿಗೆ ಅನುಕೂಲ ಉಂಟಾಗುವಂತೆ ಶಾಶ್ವತ ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ ಶಾಶ್ವತ ಮೇಲ್ಚಾವಣಿಯನ್ನು ನಿರ್ಮಿಸಿ ಅನ್ನಪ್ರಸಾದ ವಿತರಣೆಗೆ ಕೌಂಟರ್‌ಗಳ ನಿರ್ಮಾಣ ಮತ್ತು ಪ್ರಸಾದ ಸೇವನೆಗೆ ಅನುಕೂಲವಾಗುವಂತೆ ಕುಳಿತುಕೊಳ್ಳಲು ಆಸನಗಳನ್ನು ನಿರ್ಮಿಸಲು ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.

    ದೇವಾಲಯದ ಹಿಂಭಾಗದಲ್ಲಿರುವ ಹಾಲು ಕಾಂಪೌಂಡು ಗೋಡೆಯನ್ನು ಸೂಕ್ತ ಎತ್ತರಕ್ಕೆ ಏರಿಸಲು ಹಾಗೂ ಸುತ್ತಲಿನ ಗಾಳಿ, ಬೆಳಕು ಸರಾಗವಾಗಿ ಒಳಬರಲು ಕಾಂಪೌಂಡಿನ ಮೇಲ್ಭಾಗದಲ್ಲಿ ಎಸ್.ಎಸ್ ನಿಂದ ಲೂವರ್ಸ್‌ಗಳನ್ನು ಅಳವಡಿಸಲು ತಿಳಿಸಲಾಯಿತು. ಸದರಿ ಕಾಮಗಾರಿಗಾಗಿ ಅಂದಾಜು ಪಟ್ಟಿಯನ್ನು ಸಲ್ಲಿಸಲು ಮತ್ತು ಕಾಮಗಾರಿಯನ್ನು ಶ್ರೀಘ್ರವಾಗಿ ಕೈಗೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.

    ದೇವಾಲಯದ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯ ತುಂಬಾ ಹಳೆಯ ಕಟ್ಟಡವಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಒಂದೇ ಪ್ರವೇಶವಿದೆ. ಇದರಿಂದ ಭಕ್ತಾದಿಗಳಿಗೆ ಬಹಳಷ್ಟು ಅನಾನುಕೂಲವಾಗುತ್ತಿದೆ. ಆದ್ದರಿಂದ ಶೌಚಾಲಯನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಿಸಲು ಅಂದಾಜು ಪಟ್ಟಿಯನ್ನು ಸಲ್ಲಿಸುಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಶೌಚಾಲಯಗಳ ನಿರ್ವಹಣೆಗಾಗಿ ಸುಲಭ ಶೌಚಾಲಯದವರಿಗೆ ವಹಿಸಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಇದನ್ನೂ ಓದಿ: ಜೇಮ್ಸ್‌ವೆಬ್‌ ಕಣ್ಣಲ್ಲಿ ಗುರು ಗ್ರಹದ ರಹಸ್ಯ

    ಅನ್ನದಾಸೋಹ ಭವನದ ಅಡುಗೆ ಮನೆ ನೆಲ ಮಹಡಿಯಲ್ಲಿದೆ. ಪ್ರಸಾದ ವ್ಯವಸ್ಥೆಗೆ ಮೊದಲ ಮಹಡಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ದಾಸೋಹ ಭವನಕ್ಕೆ ಲಿಫ್ಟ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲು ಅಡುಗೆ ಮನೆಯಿಂದ ಮೊದಲನೇ ಮಹಡಿಗೆ ಪ್ರಸಾದ ಕೊಂಡೊಯ್ಯುವುದು ತುಂಬಾ ಕಷ್ಟವಾಗುತ್ತಿದೆ. ಈ ಸಂಬಂಧ ದಾನಿಗಳೊಬ್ಬರು ಲಿಫ್ಟ್ ಕೊಡಿಸಲು ಮುಂದಾಗಿದ್ದು, ಇದಕ್ಕೆ ಅಗತ್ಯ ಅನುಮತಿಗಳನ್ನು ಪಡೆದುಕೊಂಡು ಕಾಮಗಾರಿ ಪ್ರಾರಂಭಿಸುವಂತೆ ಸೂಚನೆ ನೀಡಲಾಯಿತು.

    Live Tv
    [brid partner=56869869 player=32851 video=960834 autoplay=true]

  • ಗಂಡನನ್ನು ಕೊಂದು ನನ್ನ ವಿಧವೆ ಮಾಡು, ವಾಟ್ಸಪ್ uninstall ಮಾಡ್ತೀನಿ ಅತ್ತೆಮಗಳ ಬಗ್ಗೆ ಯೋಚಿಸಲ್ಲ- ಬನಶಂಕರಿದೇವಿಗೆ ಭಕ್ತರ ವಿಚಿತ್ರ ಪತ್ರ

    ಗಂಡನನ್ನು ಕೊಂದು ನನ್ನ ವಿಧವೆ ಮಾಡು, ವಾಟ್ಸಪ್ uninstall ಮಾಡ್ತೀನಿ ಅತ್ತೆಮಗಳ ಬಗ್ಗೆ ಯೋಚಿಸಲ್ಲ- ಬನಶಂಕರಿದೇವಿಗೆ ಭಕ್ತರ ವಿಚಿತ್ರ ಪತ್ರ

    ಬೆಂಗಳೂರು: ನಗರದ ಬನಶಂಕರಿ ದೇವಿ ದೇವಸ್ಥಾನದಲ್ಲಿ ಭಕ್ತರ ವಿಚಿತ್ರ ಬೇಡಿಕೆಯ ಪತ್ರಗಳು ಸಿಕ್ಕಿವೆ.

    ಮಾಂಗಲ್ಯ ಉಳಿಸಲು ದೇವಿಗೆ ಹರಕೆ ನೀಡುತ್ತಾರೆ. ಆದ್ರೇ ಇಲ್ಲೊಬ್ಬ ಭಕ್ತೆ ನನ್ನ ಗಂಡನನ್ನು ಕೊಲ್ಲಮ್ಮ. ನನ್ನ ವಿಧವೆ ಮಾಡು ಅಂತಾ ಪತ್ರ ಬರೆದು ದೇವಿ ಹುಂಡಿಗೆ ಹಾಕಿದ್ದಾರೆ. ನನ್ನನ್ನು ರಕ್ಷಿಸಿ, ನನ್ನ ಗಂಡನನ್ನು ಕೊಂದು ಹಾಕು. ಆತನ ಅಹಂಕಾರ ಹುಟ್ಟಡಗಿಸು ಅಂತಾ ಪತ್ರದಲ್ಲಿ ಬರೆಯಲಾಗಿದೆ.

    ಇನ್ನೋರ್ವ ಯುವಕ ನಾನಿನ್ನು ವಾಟ್ಸಾಪ್ ಅನ್ ಇನ್ಸ್ಟಾಲ್ ಮಾಡಿಕೊಳ್ಳುತ್ತೇನೆ. ಅತ್ತೆ ಮಗಳು ಸೌಂದರ್ಯ ಹಾಗೂ ಸೌಮ್ಯ ಜೊತೆ ಚಾಟ್ ಮಾಡಲ್ಲ. ಕೆಟ್ಟ ವಿಡಿಯೋ ನೋಡಲ್ಲ. ಒಬ್ಬನೇ ಪಾನಿಪುರಿ ಕಾಫಿ-ಟೀ ಕುಡಿಯಲ್ಲ. ಇದಕ್ಕೆಲ್ಲ ನಂಗೆ ಶಕ್ತಿ ಕೊಡು ಅಂತಾ ಪತ್ರ ಬರೆದಿದ್ದಾರೆ. ಹೀಗೆ ದೇವಿಗೆ ಸಾಕಷ್ಟು ಜನ ಚಿತ್ರ ವಿಚಿತ್ರ ಬೇಡಿಕೆಯ ಪತ್ರ ಬರೆದಿದ್ದಾರೆ. ಪತ್ರ ನೋಡಿ ಮುಜರಾಯಿ ಇಲಾಖೆ ಅಧಿಕಾರಿಗಳು ದಂಗಾಗಿದ್ದಾರೆ.

    ಮಹಿಳೆಯ ಪತ್ರದಲ್ಲಿ ಏನಿದೆ?: ನನ್ನ ವಿಧವೆ ಮಾಡು. ನನ್ನ ಗಂಡನ ಅಹಂಕಾರವನ್ನು ಅಡಗಿಸು. ನನ್ನ ಗಂಡ ಸತ್ತರೆ ಸಾಕು. ನಾನು ವಿಧವೆ ಆದರೆ ಸಾಕು. ನನ್ನ ಮಗನನ್ನು, ನನ್ನನ್ನು ನೆಮ್ಮದಿಯಾಗಿಡು ತಾಯಿ. ನನ್ನ ಗಂಡನ ಅಹಂಕಾರವನ್ನು ತುಳಿದು ಹಾಕು. ನನ್ನ ಗಂಡನ ಅಟ್ಟಹಾಸಕ್ಕೆ ಮಟ್ಟ ಹಾಕು ತಾಯಿ. ತಾಯಿ ಬನಶಂಕರಿ ದೇವಿ ನನ್ನ ಮನಸ್ಸಿನಲ್ಲಿರುವ ಇಷ್ಟಾರ್ಥಗಳನ್ನು ನೆರವೇರಿಸು ದೇವಿ. ನನ್ನ ಮಗನಿಗೆ ಒಳ್ಳೆಯ ವಿದ್ಯೆ, ಬುದ್ಧಿ, ಸಕಲ ಸಂತೋಷ, ಸಂಪತ್ತು, ದೀರ್ಘಾಯುಷ್ಯ, ಅಷ್ಟೈಶ್ವರ್ಯಗಳನ್ನು ದಯಪಾಲಿಸು ದೇವಿ. ನನ್ನನ್ನು ನೀನೇ ರಕ್ಷಿಸಬೇಕು. ನನ್ನ ಗಂಡನಿಗೆ ಸಾವು ಕೊಡು. ಬನಶಂಕರಿ ಅಮ್ಮ ನನ್ನ ಮಗ ಆರ್.ಪರೀಕ್ಷಿತ್ ಎಂಜಿನಿಯರ್ ಫಸ್ಟ್ ಸೆಮ್ ಎಲೆಕ್ಟ್ರಿಕಲ್ ಸಬ್ಜೆಕ್ಟ್ ರಿವ್ಯಾಲ್ಯುವೇಷನ್‍ಗೆ ಹಾಕಿದ್ದಾನೆ. ಅಮ್ಮ ನಿನಗೆ ಅಸಾಧ್ಯವಾದುದು ಯಾವುದೂ ಈ ಪ್ರಪಂಚದಲ್ಲಿ ಇಲ್ಲ. ನಿನ್ನ ಕಾಲಿಗೆ ಬಿದ್ದು ಬೇಡಿಕೊಳ್ಳುವೆ ತಾಯಿ. ರಿವ್ಯಾಲ್ಯುವೇಷನ್‍ನಲ್ಲಿ ನನ್ನ ಮಗ ಪಾಸ್ ಅಂತ ಇನ್ನು 12 ದಿನದೊಳಗೆ ಮೊಬೈಲ್‍ಗೆ ಮೆಸೇಜ್ ಬರುವ ಹಾಗೆ ಮಾಡವ್ವ. ನನ್ನ ಮಗನ ಕೈ ಬಿಡಬೇಡ ತಾಯಿ ನೀನೇ ಗತಿ.