Tag: ಬದಲಾವಣೆ

  • ಯಾವುದೇ ಹಳೆಯ ಫೀಚರ್ ಫೋನ್ ನೀಡಿ ಹೊಚ್ಚ ಹೊಸ ಜಿಯೋ ಫೋನ್-2 ಖರೀದಿಸಿ

    ಯಾವುದೇ ಹಳೆಯ ಫೀಚರ್ ಫೋನ್ ನೀಡಿ ಹೊಚ್ಚ ಹೊಸ ಜಿಯೋ ಫೋನ್-2 ಖರೀದಿಸಿ

    ಮುಂಬೈ: 50 ಕೋಟಿಗೂ ಹೆಚ್ಚಿನ ಭಾರತೀಯರು ಇನ್ನೂ ಅಂತರ್ಜಾಲ ಸಂಪರ್ಕವಿಲ್ಲದ ಫೀಚರ್ ಫೋನುಗಳನ್ನು ಬಳಸುತ್ತಿದ್ದು, ಇದರಿಂದ ಅವರು ಅಂತರ್ಜಾಲ ಸಂಪರ್ಕಕ್ಕೆ ಒಳಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಜಿಯೋ ಸಂಸ್ಥೆಯು ಕೈಗೆಟುಕುವ ಬೆಲೆಯಲ್ಲಿ ಡಿಜಿಟಲ್ ಸೇವೆಯನ್ನು ಎಲ್ಲರೂ ಬಳಸಬೇಕೆಂದು ನೂತನ ಯೋಜನೆಯನ್ನು ಜಾರಿಗೊಳಿಸಿದೆ.

    ಈ ಯೋಜನೆಯಲ್ಲಿ ಗ್ರಾಹಕರು ತಮ್ಮ ಬಳಿ ಇರುವ ಯಾವುದೇ ಫೀಚರ್ ಫೋನ್‍ನ್ನು ಜಿಯೋದ ನೂತನ ಮೊಬೈಲ್ ನೊಂದಿಗೆ ಬದಲಾಯಿಸಿಕೊಳ್ಳುವ ಮಾನ್ಸೂನ್ ಹಂಗಾಮ ಕೊಡುಗೆಯನ್ನು ಘೋಷಿಸಲಾಗಿದೆ. 25 ಕೋಟಿ ಭಾರತೀಯರು ಈಗಾಗಲೇ ಜಿಯೋ ಫೋನ್ ಬಳಸುತ್ತಿದ್ದು, ಇನ್ನೂ ಹಲವು ಕೋಟಿ ಜನರು ಜಿಯೋಫೋನ್ ಬಳಕೆ ಪ್ರಾರಂಭಿಸಲು ನೆರವಾಗುವಂತೆ ಮಾನ್ಸೂನ್ ಹಂಗಾಮ ಕೊಡುಗೆಯನ್ನು ಘೋಷಿಸಲಾಗಿದೆ.

    ಇದೇ ಶುಕ್ರವಾರ ಸಂಜೆ 5 ಗಂಟೆಯಿಂದ ಆರಂಭಿಸಿ ಗ್ರಾಹಕರು ತಮ್ಮ ಯಾವುದೇ ಹಳೆಯ ಫೀಚರ್ ಫೋನ್‍ಗಳನ್ನು ಕೇವಲ ರೂ. 501 ವಾಸ್ತವಿಕ ವೆಚ್ಚ ಪಾವತಿಸಿ ಹೊಸ ಜಿಯೋ ಫೋನ್‍ನೊಡನೆ ಬದಲಾಯಿಸಿಕೊಳ್ಳಬಹುದು ಎಂದು ಜಿಯೋ ಹೇಳಿದೆ.

    ಜಿಯೋ ಫೋನ್-2ರ ಗುಣವೈಶಿಷ್ಟ್ಯಗಳು:

    * ಕ್ವರ್ಟಿ ಕೀ ಪ್ಯಾಡ್ ನ 2.4 ಇಂಚ್ ಸ್ಕೀನ್ ಡಿಸ್ಪ್ಲೇ (240X340 ಪಿಕ್ಸೆಲ್)
    * ಜಿಯೋ ಫೋನ್’ನ ಧ್ವನಿ ಆಜ್ಞೆ (ವಾಯ್ಸ್ ಕಮ್ಯಾಂಡ್) ವೈಶಿಷ್ಟ್ಯವನ್ನು
    * ಫೇಸ್ಬುಕ್, ವಾಟ್ಸಪ್, ಯುಟ್ಯೂಬ್, ವೈ-ಫೈ ಮತ್ತು ಜಿಪಿಎಸ್ ಸೌಲಭ್ಯ.
    * 512 RAM 4 ಜಿಬಿ ಆಂತರಿಕ ಮೆಮೊರಿ ಹೊಂದಿದೆ. ಮೆಮೊರಿ ಕಾರ್ಡ್ ಮೂಲಕ 128 ಜಿಬಿವರೆಗೆ ವಿಸ್ತರಿಸಬಹುದು.
    * ಹಿಂದುಗಡೆ 2 ಮೆಗಾಪಿಕ್ಸೆಲ್ ಕ್ಯಾಮೆರಾ ಮುಂದುಗಡೆ 0.3 ಮೆಗಾಪಿಕ್ಸೆಲ್(ವಿಜಿಎ) ಕ್ಯಾಮೆರಾ.
    * ಫೋನ್ ಡ್ಯೂಯಲ್ ಸಿಮ್ ವೈಶಿಷ್ಟ್ಯವನ್ನು ಹಾಗೂ ಲೌಡ್ ಮೆನೋ ಸ್ಪೀಕರ್
    * 2000 ಎಂಎಎಚ್ ಬ್ಯಾಟರಿ ಸಾಮರ್ಥ್ಯ.

    ಜಿಯೋ ತನ್ನ ಮೊದಲ ಫೋನಿನಲ್ಲಿ ನೀಡಿದಂತೆ ಎಫ್‍ಎಂ ರೇಡಿಯೋ, ವೈಫೈ, ಎನ್‍ಎಫ್‍ಸಿ, ಬ್ಲೂಟೂತ್, ಜಿಪಿಎಸ್ ಹೊಂದಿದ್ದು, ಕನ್ನಡ ಸೇರಿದಂತೆ ದೇಶದ 22 ಭಾಷೆಗಳನ್ನು ಈ ಫೋನ್ ಸಪೋರ್ಟ್  ಮಾಡುತ್ತದೆ. ಮೈ ಜಿಯೋ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಚಾಟ್, ಜಿಯೋ ಮ್ಯೂಸಿಕ್, ಜಿಯೋ ಎಕ್ಸ್ ಪ್ರೆಸ್ ನ್ಯೂಸ್ ಅಪ್ಲಿಕೇಶನ್‍ಗಳು ಪ್ರಿಲೋಡೆಡ್ ಆಗಿ ಇರಲಿದೆ.

     

  • ಬೆಂಗಳೂರು ಒನ್ ಕೇಂದ್ರದಿಂದ 410 ಕೋಟಿ ರೂ. ಹಳೆ ನೋಟು ಬದಲಾವಣೆ: ಸಿದ್ದು ವಿರುದ್ಧ ದೂರು

    ಬೆಂಗಳೂರು ಒನ್ ಕೇಂದ್ರದಿಂದ 410 ಕೋಟಿ ರೂ. ಹಳೆ ನೋಟು ಬದಲಾವಣೆ: ಸಿದ್ದು ವಿರುದ್ಧ ದೂರು

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಚಾರ್ಜ್ ಹಾಗೂ ಕೆಲ ಶಾಸಕರು ಹಳೆ ನೋಟುಗಳ ಬದಲಾವಣೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ಒನ್ ಕೇಂದ್ರದ ಮೂಲಕ 2016 ನವೆಂಬರ್ ನಿಂದ 141 ದಿನಗಳಲ್ಲಿ 500 ಹಾಗೂ ಒಂದು ಸಾವಿರ ಮುಖ ಬಲೆಯ 410 ಕೋಟಿ ರೂ. ಹಳೆ ನೋಟುಗಳನ್ನು ಬದಲಾವಣೆ ಮಾಡಲಾಗಿದೆ. ಇದರಲ್ಲಿ ಸಿದ್ದರಾಮಯ್ಯ, ಡಿ.ಕೆ.ಜಾರ್ಜ್ ಹಾಗೂ ಶಾಸಕರು ಭಾಗಿಯಾಗಿದ್ದಾರೆ ಎಂದು ಲೋಕಾಯುಕ್ತ, ಎಸಿಬಿ, ಜಾರಿ ನಿರ್ದೇಶನಾಲಯಕ್ಕೆ ರಮೇಶ್ ಅವರು ದೂರು ನೀಡಿದ್ದಾರೆ.

    235 ಪುಟಗಳ ದಾಖಲೆ ಬಿಡುಗಡೆ ಮಾಡಿದ ಎನ್.ಆರ್.ರಮೇಶ್ ಅವರು, ಬೆಂಗಳೂರು ಒನ್‍ನಲ್ಲಿ 96 ವಿವಿಧ ಇಲಾಖೆಗಳ ಸೇವೆ ಮತ್ತು ಹಣ ಪಾವತಿ ವ್ಯವಸ್ಥೆ ಇದೆ. ಹೀಗಾಗಿ ಅಲ್ಲಿ ಪಾವತಿಯಾಗುತ್ತಿದ್ದ ಹಣವನ್ನು ತಾವು ಪಡೆದು, ನಿಷೇಧಗೊಂಡಿರುವ ನೋಟುಗಳನ್ನು ಅದರಲ್ಲಿ ಸೇರಿಸುವ ಮೂಲಕ ನೂರಾರು ಕೋಟಿ ಹಗರಣ ಮಾಡಲಾಗಿದೆ ಎಂದು ಅವರು ಆರೋಪಿಸಿದರು.