Tag: ಬದಲಾವಣೆ

  • ಡ್ರಗ್ಸ್ ಪ್ರಚೋದನೆ ಹಾಡು : ವಿಜಯ್ ಚಿತ್ರತಂಡಕ್ಕೆ ನೀಡಿದ ಖಡಕ್ ಸೂಚನೆ ಏನು?

    ಡ್ರಗ್ಸ್ ಪ್ರಚೋದನೆ ಹಾಡು : ವಿಜಯ್ ಚಿತ್ರತಂಡಕ್ಕೆ ನೀಡಿದ ಖಡಕ್ ಸೂಚನೆ ಏನು?

    ಮಿಳಿನ ಖ್ಯಾತ ನಟ ದಳಪತಿ ವಿಜಯ್, ಸದಾ ಸಮಾಜಮುಖಿ ಚಿಂತೆಗಳಲ್ಲಿ ತೊಡಗಿಕೊಂಡವರು. ಸಿನಿಮಾ ಮೂಲಕ ಮಾತ್ರವಲ್ಲ, ವೈಯಕ್ತಿಕ ಜೀವನವನ್ನು ಅಷ್ಟೇ ಹಸನಾಗಿ ಇಟ್ಟುಕೊಂಡವರು. ಮೊನ್ನೆಯಷ್ಟೇ ಅವರ ನಟನೆಯ ಲಿಯೋ ಸಿನಿಮಾದ ‘ನಾ ರೆಡಿದಾ ವರವಾ’ ಹಾಡು ರಿಲೀಸ್ ಆಗಿತ್ತು. ಈ ಹಾಡಿನ ಕುರಿತಾಗಿ ಸಾಕಷ್ಟು ಟೀಕೆ ಕೇಳಿ ಬಂದಿದ್ದವು.

    ‘ನಾ ರೆಡಿದಾ ವರವಾ’ ಹಾಡಿನಲ್ಲಿ ಡ್ರಗ್‌ ಮತ್ತು ಮಾದಕ ವಸ್ತುಗಳನ್ನು ಪ್ರಚೋದಿಸುವಂತಹ ಅಂಶಗಳು ಇವೆ. ಇವು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಆರೋಪಿಸಿ ಸೆಲ್ವಂ ಅನ್ನುವವರು ದೂರು ನೀಡಿದ್ದರು. ಮಾದಕ ಕ್ರಮ ನಿಯಂತ್ರಣ ತಡೆ ಕಾಯ್ದೆ ಅನ್ವಯ ಚಿತ್ರತಂಡದ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಸೆಲ್ವಂ ನಡೆಗೆ ಸ್ವತಃ ವಿಜಯ್ ಅಭಿನಂದಿಸಿದ್ದಾರೆ. ಹಾಡಿನಲ್ಲಿ ಮಾರ್ಪಾಡು ಮಾಡುವಂತೆ ನಿರ್ದೇಶಕರಿಗೆ ವಿಜಯ್ ಸೂಚಿಸಿದ್ದಾರೆ.

    ವಿಜಯ್ ಸೂಚನೆಯಂತೆ ಹಾಡಿನಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದು, ಮಾದಕ ವಸ್ತು ಪ್ರಚೋದಿಸುವಂತಹ ಎಲ್ಲ ಅಂಶಗಳನ್ನು ತೆಗೆದಿರುವುದಾಗಿ ಚಿತ್ರತಂಡ ಹೇಳಿದೆ. ವಿಜಯ್ ಅವರ ಸಾಮಾಜಿಕ ಕಳಕಳಿಗೆ ಚಿತ್ರತಂಡ ಜೊತೆಯಾಗಿ ಗೌರವಿಸಿದೆ. ಈ ನಡೆಗೆ ಭಾರೀ ಪ್ರಶಂಸೆ ಕೂಡ ವ್ಯಕ್ತವಾಗಿದೆ.

    ಕಳೆದ ಜೂನ್ 22 ರಂದು ವಿಜಯ್​ (Dalpati Vijay) ಹುಟ್ಟುಹಬ್ಬದ ಪ್ರಯುಕ್ತ ‘ಲಿಯೋ’ (Leo) ಚಿತ್ರತಂಡದವರು ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ವಿಜಯ್​ ಅವರಿಗೆ ಶುಭಾಶಯ ಕೋರಿದ್ದರು. ಜೊತೆಗೆ ಸಿನಿಮಾದ ಮೊದಲ ಲಿರಿಕಲ್​ ಹಾಡು (Song) ಬಿಡುಗಡೆ ಮಾಡಿದ್ದರು. ಇದನ್ನೂ ಓದಿ:ಆಸ್ಕರ್ ಜ್ಯೂರಿಯಾಗುವ ಅವಕಾಶ ಪಡೆದ ರಾಮ್‌ಚರಣ್- ಜ್ಯೂ.ಎನ್‌ಟಿಆರ್

    ‘ನಾ ರೆಡಿದಾ ವರವಾ’ (Na Redida Varava) ಎಂಬ ಲಿರಿಕಲ್​ ಹಾಡು ಅಂದು ಬಿಡುಗಡೆ ಆಗಿತ್ತು. ಅದೇ ಹಾಡು ವಿವಾದಕ್ಕೂ ಕಾರಣವಾಗಿತ್ತು. ಈಗಾಗಲೇ ತೆಲುಗು ಸಿನಿಮಾ ರಂಗದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಕೆಲವರ ವಿಚಾರಣೆ ಹಾಗೂ ಬಂಧನ ಕೂಡ ನಡೆದಿದೆ. ಈ ಹೊತ್ತಿನಲ್ಲಿ ಹಾಡಿನಲ್ಲಿ ಡ್ರಗ್ಸ್ (Drugs) ಪ್ರಚೋದಿಸುವಂತಹ ಸನ್ನಿವೇಶಗಳು ಇದ್ದವು. ಹಾಗಾಗಿ ಈ ಹಾಡಿನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೆಲ್ವಂ ಅನ್ನುವವರು ದೂರು (Complaint) ನೀಡಿದ್ದರು.

    ನಾ ರೆಡಿದಾ ವರವಾ ಹಾಡಿಗೆ ವಿಜಯ್​ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಧ್ವನಿಯಾಗಿರುವುದು ವಿಶೇಷ. ಈ ಹಾಡಿಗೆ ವಿಷ್ಣು ಎಡವನ್​ ಸಾಹಿತ್ಯ ರಚಿಸಿದ್ದು, ವಿಜಯ್​ ಸಖತ್​ ಸ್ಟೆಪ್​ ಹಾಕಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮೂರು ಮಿಲಿಯನ್​ಗಳಿಗೂ ಹೆಚ್ಚು ವೀಕ್ಷಣೆ ಕಂಡಿತ್ತು.

    ‘ಮಾಸ್ಟರ್’ ನಂತರ ನಿರ್ದೇಶಕ ಲೋಕೇಶ್​ ಕನಕರಾಜ್​ (Lokesh Kanakaraj) ಮತ್ತು ವಿಜಯ್ ಜೊತೆಯಾಗಿ ಕೆಲಸ ಮಾಡುತ್ತಿರುವ ‘ಲಿಯೋ’ ಚಿತ್ರವನ್ನು ಸೆವೆನ್​ ಸ್ಕ್ರೀನ್​ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ಲಲಿತ್​ ಕುಮಾರ್​ ನಿರ್ಮಿಸುತ್ತಿದ್ದಾರೆ. ಇನ್ನು, ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನೂ ರಚಿಸಿದ್ದಾರೆ ವಿಜಯ್​.

     

    ‘ಲಿಯೋ’ ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಅಕ್ಟೋಬರ್​ 19ರಂದು ಐದು ಭಾಷೆಗಳಲ್ಲಿ  ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಬಾಲಿವುಡ್​ ನಟ ಸಂಜಯ್​ ದತ್​ ಈ ಚಿತ್ರದ ಮೂಲಕ ಕಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದು, ವಿಜಯ್​ ಮತ್ತು ಸಂಜಯ್​ ದತ್​ ಜೊತೆಗೆ ತ್ರಿಷಾ, ಅರ್ಜುನ್‌ ಸರ್ಜಾ, ಪ್ರಿಯಾ ಆನಂದ್, ಮನ್ಸೂರ್‌ ಅಲಿ ಖಾನ್‌, ಗೌತಮ್​ ಮೆನನ್​, ಮಿಸ್ಕಿನ್​ ಮುಂತಾದವರು ಅಭಿನಯಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನಿನ್ನೂ ಆಲಿಯಾ ಭಟ್ ಆಗಿದ್ದೇನೆ, ಮುಂದಿನ ದಿನಗಳಲ್ಲಿ ಕಪೂರ್ ಆಗುತ್ತೇನೆ ಎಂದು ಪ್ರಾಮೀಸ್ ಮಾಡಿದ ನಟಿ

    ನಾನಿನ್ನೂ ಆಲಿಯಾ ಭಟ್ ಆಗಿದ್ದೇನೆ, ಮುಂದಿನ ದಿನಗಳಲ್ಲಿ ಕಪೂರ್ ಆಗುತ್ತೇನೆ ಎಂದು ಪ್ರಾಮೀಸ್ ಮಾಡಿದ ನಟಿ

    ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ಮದುವೆಯ ನಂತರ ತಮ್ಮ ಹೆಸರಿನ ಮುಂದೆ ಕಪೂರ್ ಸೇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಪತಿ ರಣಬೀರ್ ಕಪೂರ್ ಜೊತೆಯೇ ನನ್ನ ಹೆಸರು ಇರಬೇಕು ಎಂದು ಇಷ್ಟ ಪಡುತ್ತೇನೆ. ಸಿನಿಮಾ ಶೂಟಿಂಗ್ ಮಧ್ಯ ಈ ಕೆಲಸವನ್ನು ಮಾಡಲು ಆಗಿರಲಿಲ್ಲ. ಹಾಗಾಗಿ ಇನ್ನೂ ದಾಖಲೆಗಳಲ್ಲಿ ಆಲಿಯಾ ಭಟ್ ಅಂತಷ್ಟೇ ಇದೆ. ಮುಂದಿನ ದಿನಗಳಲ್ಲಿ ಅದು ಆಲಿಯಾ ಕಪೂರ್ ಆಗಿ ಬದಲಾಗಲಿದೆ ಎಂದು ಅವರು ತಿಳಿಸಿದ್ದಾರೆ.

    ಸಾಮಾನ್ಯವಾಗಿ ಬಾಲಿವುಡ್ ನಟಿಯರು ಮದುವೆ ನಂತರ ಪತಿಯ ಹೆಸರನ್ನು ಸೇರಿಸಿಕೊಳ್ಳುವುದು ವಾಡಿಕೆ. ಆದರೆ, ಈವರೆಗೂ ಆ ಕೆಲಸವನ್ನು ಆಲಿಯಾ ಭಟ್ ಮಾಡಿರಲಿಲ್ಲ. ಹಾಗಾಗಿ ಹಲವರು ನಾನಾ ರೀತಿಯ ಅನುಮಾನಗಳನ್ನು ವ್ಯಕ್ತ ಪಡಿಸಿದ್ದರು. ಅದಕ್ಕೆ ಸ್ಪಷ್ಟನೆ ನೀಡಿರುವ ಆಲಿಯಾ ಮುಂದಿನ ದಿನಗಳಲ್ಲಿ ಕಪೂರ್ ಎನ್ನುವ ಹೆಸರನ್ನು ಸೇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಎರಡನೇ ಮದುವೆ ವದಂತಿಯ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ

    ಮದುವೆಯಾಗಿ ಎರಡೂವರೆ ತಿಂಗಳಿಗೆ ತಾನು ಗರ್ಭಿಣಿ ಎಂದು ಬಹಿರಂಗ ಪಡಿಸಿ, ಅಚ್ಚರಿ ಮೂಡಿಸಿದ್ದ ಆಲಿಯಾ ಭಟ್, ಇನ್ನೂ ಏಕೆ ಕಪೂರ್ ಹೆಸರನ್ನು ತಮ್ಮ ಹೆಸರಿನ ಹಿಂದೆ ಸೇರಿಸಿಕೊಂಡಿಲ್ಲ ಎಂದು ಹಲವರು ಪ್ರಶ್ನಿಸಿದ್ದರು. ಅವರಿಗೆ ಇದೀಗ ಉತ್ತರ ಸಿಕ್ಕಿದೆ. ಸಿನಿಮಾ ರಂಗದಲ್ಲಿ ಅವರ ಹೆಸರು ಆಲಿಯಾ ಭಟ್ ಎಂದೇ ಇರುತ್ತಂತೆ. ದಾಖಲೆಗಳಲ್ಲಿ ಮಾತ್ರ ಕಪೂರ್ ಎಂದಾಗಿರುತ್ತದೆ ಎಂದು ತಿಳಿದು ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • I am very confident ಉಪಚುನಾವಣೆ ನಂತ್ರ ಯಡಿಯೂರಪ್ಪ ಬದಲಾಗ್ತಾರೆ: ಸಿದ್ದರಾಮಯ್ಯ

    I am very confident ಉಪಚುನಾವಣೆ ನಂತ್ರ ಯಡಿಯೂರಪ್ಪ ಬದಲಾಗ್ತಾರೆ: ಸಿದ್ದರಾಮಯ್ಯ

    – ನನಗೆ ದೆಹಲಿಯಿಂದ ಮಾಹಿತಿ ದೊರಕಿದೆ

    ಬೆಂಗಳೂರು: ಉಪಚುನಾವಣೆಯ ನಂತರ ಯಡಿಯೂರಪ್ಪ ಅವರು ಬದಲಾಗುತ್ತಾರೆಯೆಂದು ನನಗೆ ಬಹಳ ವಿಶ್ವಾಸವಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

    ದೆಹಲಿಯಿಂದ ನನಗೆ ದೊರೆತಿರುವ ಮಾಹಿತಿ ಪ್ರಕಾರ ಉಪಚುನಾವಣೆ ನಂತರ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಮಾಡ್ತಾರೆ. I am very confident ಯಡಿಯೂರಪ್ಪ ಬದಲಾಗ್ತಾರೆ. ನಾನು ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದು ಒಂದು ಕಾರಣ, ಇದರ ಜೊತೆಗೆ ಬೇರೆ ಹಲವು ಕಾರಣಗಳೂ ಇವೆ ಎಂದು ಟ್ವೀಟ್‍ನಲ್ಲಿ ಬರೆದಿದ್ದಾರೆ.

    ಇದರ ಜೊತೆಗೆ ಶಿರಾ ಹಾಗೂ ಆರ್.ಆರ್ ನಗರ ಎರಡೂ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆಯಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಜನವಿರೋಧಿ ಕಾನೂನುಗಳಿಂದ ಜನ ಬೇಸತ್ತಿದ್ದಾರೆ. ಅವೆಲ್ಲಾ ಕಾಂಗ್ರೆಸ್ ಮತಗಳಾಗಿ ಪರಿವರ್ತನೆಯಾಗಿವೆ ಎಂದು ಟ್ವೀಟ್ ಮಾಡಿ ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಜೊತೆಗೆ ರಾಜ್ಯ ಸಂಪೂರ್ಣ ಕೊರೊನಾ ಮುಕ್ತವಾಗುವವರೆಗೆ ಶಾಲೆ ಆರಂಭಿಸುವುದು ಬೇಡ. ಈ ವರ್ಷ ಎಲ್ಲಾ ತರಗತಿಗಳಿಗೆ ಆನ್‍ಲೈನ್ ಮೂಲಕ ಪಾಠ ಮಾಡಿ, ಎಲ್ಲರನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಲಿ. ಸರ್ಕಾರ ಶಾಲೆ ತೆರೆಯುವ ದುಸ್ಸಾಹಸ ಮಾಡುವುದು ಬೇಡ ಎಂದು ಸರ್ಕಾರಕ್ಕೆ ಕಿವಿ ಮಾತು ಹೇಳಿದ್ದಾರೆ.

  • ಸಿಎಂ ಬದಲಾವಣೆ ವಿಚಾರವನ್ನು ಯಾರೋ ಕುಡಿದವರು ಮಾತನಾಡುತ್ತಾರೆ: ಈಶ್ವರಪ್ಪ ವ್ಯಂಗ್ಯ

    ಸಿಎಂ ಬದಲಾವಣೆ ವಿಚಾರವನ್ನು ಯಾರೋ ಕುಡಿದವರು ಮಾತನಾಡುತ್ತಾರೆ: ಈಶ್ವರಪ್ಪ ವ್ಯಂಗ್ಯ

    ಹುಬ್ಬಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯೇ ಇಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಯಾರೋ ಕುಡಿದವರು ಮಾತನಾಡುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಇಂದು ನಗರದ ಸರ್ಕ್ಯೂಟ್ ಹೌಸ್‍ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಿಲ್ಲ. ಇದನ್ನು ಯಾರೋ ಕುಡಿದವರು ಮಾತನಾಡುತ್ತಾರೆ ಎಂದು ಅವರು ವ್ಯಂಗ್ಯವಾಡಿದರು. ನರೇಗಾ ಅಡಿಯಲ್ಲಿ ಉದ್ಯೋಗ ನೀಡುವಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಛತ್ತೀಸ್‍ಗಢ್ ಮೊದಲನೆ ಸ್ಥಾನದಲ್ಲಿದೆ. ನರೇಗಾದಲ್ಲಿ 1,861 ಕೋಟಿ ಹಣ ಬಂದಿದೆ ಎಂದು ಹೇಳಿದ್ದಾರೆ.

    ಹಿಂದಿನ ಸರಕಾರದಲ್ಲಿದ್ದ ಬಾಕಿ ಹಣ ಕೊಟ್ಟು, ಸರ್ಕಾರದ ಬಳಿ 1,000 ಕೋಟಿ ಉಳಿದಿದ್ದು, ಅಂತರ್ಜಲ ಚೇತನ ಕಾರ್ಯಕ್ರಮ ಎಲ್ಲಾ ಜಿಲ್ಲೆಗಳಲ್ಲಿ ಆರಂಭವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಗ್ರಾಮ ಪಂಚಾಯ್ತಿಗಳಿಗೆ ಆಡಳಿತ ಸಮಿತಿ ನೇಮಕ ಮಾಡುವ ನಿಟ್ಟಿನಲ್ಲಿ ಚರ್ಚೆಯಾಗಿದೆ. ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ ನೀಡಿದ್ದಾರೆ.

  • ಸಿಎಂ ಬಿಎಸ್‍ವೈ ಪಾಲಿಗೆ ವರವಾಗಲಿದೆ ಲಕ್ಕಿ ನಂಬರ್ 12!

    ಸಿಎಂ ಬಿಎಸ್‍ವೈ ಪಾಲಿಗೆ ವರವಾಗಲಿದೆ ಲಕ್ಕಿ ನಂಬರ್ 12!

    ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಅಗತ್ಯವಿದ್ದ ಶಾಸಕ ಸ್ಥಾನ ಮತ್ತು ಸಂಖ್ಯಾಶಾಸ್ತ್ರದ ಜ್ಯೋತಿಷ್ಯದ ಲೆಕ್ಕ ಈಗ ಭರ್ಜರಿ ಚರ್ಚೆಗೆ ಕಾರಣವಾಗಿದ್ದು, ಉಪಚುನಾವಣೆ ಕಣದಲ್ಲಿ 12 ಸ್ಥಾನದಲ್ಲಿ ಗೆಲುವು ಬಾರಿಸಿರುವುದಕ್ಕೆ ಈಗ ಸಿಎಂ ಸಂಖ್ಯಾಶಾಸ್ತ್ರದ ಜ್ಯೋತಿಷ್ಯಕ್ಕೆ ಸಂತಸಗೊಂಡಿದ್ದಾರೆ.

    ಸಿಎಂ ಬಿಎಸ್‍ವೈ ಪಾಲಿಗೆ 12 ಲಕ್ಕಿ ನಂಬರ್ ಆಗಲಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿದ್ದು, ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಪ್ರಕಾರ ಬಿಜೆಪಿ ಪಾಲಿಗೆ ಒಳ್ಳೆಯ ನಂಬರ್ ಆಗಿದೆ. ಮುಂದಿನ ದಿನದಲ್ಲಿ ಬಿಜೆಪಿ ಪಕ್ಷ ಭದ್ರವಾಗಿ ಬೇರೂರುವ ಸಾಧ್ಯತೆ ಇದೆ ಎನ್ನುವ ವಿಶ್ಲೇಷಣೆ ನಡೆಯುತ್ತಿದೆ.

    ಸಂಖ್ಯಾಶಾಸ್ತ್ರ ಜ್ಯೋತಿಷ್ಯದಲ್ಲಿ 12 ನಂಬರಿಗೆ ಬಹಳಷ್ಟು ಮಹತ್ವ ಇದ್ದು, ಈ ನಂಬರ್ ಗೇಮ್‍ಗೆ ಬಿಎಸ್‍ವೈ ಖುಷಿಯಾಗಿದ್ದಾರೆ. 12 ಸ್ಥಾನಗಳು ಲಭಿಸಿರುವುದರಿಂದ ಬಿಜೆಪಿ ಪಾಲಿಗೆ ವರದಾನವಾಗಲಿದ್ದು, ಸರ್ಕಾರಕ್ಕೆ ಯಾವುದೇ ಗಂಡಾಂತರ ಹಾಗೂ ಕಿರಿಕಿರಿ ಇಲ್ಲದೇ ಸಂಪೂರ್ಣವಾಗಿ ಸ್ಥಿರವಾಗಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಚುನಾವಣೆಯಲ್ಲಿ ಅಗತ್ಯವಿದ್ದ ಸ್ಥಾನಕ್ಕಿಂತಲೂ ಹೆಚ್ಚಿನ ಸ್ಥಾನ ಗಳಿಸಿರುವ ಕಾರಣ ಸರ್ಕಾರ ಸೇಫ್ ಆಗಿದ್ದು, ಅಗತ್ಯ ಸ್ಥಾನಗಳನ್ನಷ್ಟೇ ಗಳಿಸದಿದ್ದರೆ ಮತ್ತೆ ವಿರೋಧಿಗಳಿಂದ ಸಮಸ್ಯೆ ಎದುರಿಸುವ ಸಾಧ್ಯತೆ ಇತ್ತು. ಆದರೆ ಈಗ 12 ಸ್ಥಾನ ಗೆಲುವು ಪಡೆದಿರುವುದರಿಂದ ಬಿಎಸ್‍ವೈ ಕೂಡ ನಿರಳರಾಗಿದ್ದಾರೆ. ಅಲ್ಲದೇ ಸಂಪುಟ ವಿಸ್ತರಣೆ ಸಮಯದಲ್ಲೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂಬ ಮಾಹಿತಿ ವಿಶ್ಲೇಷಣೆ ನಡೆದಿದೆ.

    ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಂಖ್ಯಾಶಾಸ್ತ್ರವನ್ನು ನಂಬುತ್ತಾರೆ. ಈ ಹಿಂದೆ 2017ರ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಪರಿವರ್ತನಾ ರ್ಯಾಲಿ ನಡೆಸಿದ್ದ ಸಿಎಂ ಬಿಎಸ್‍ವೈ ಅವರ ವಾಹನ ಸಂಖ್ಯೆ 45 ಆಗಿದ್ದು. ಸಿಎಂ ಅವರು ಓಡಾಡುವ ಕಾರಿನ ನಂಬರ್ ಹಾಗೂ ಪ್ರಚಾರ ವಾಹನದ ನಂಬರ್ 45 ಆಗಿತ್ತು. 4+5=9 ಆಗಿರುವುದರಿಂದ ಅವರ ಲಕ್ಕಿ ನಂಬರ್ 9 ಬರುವ ಸಂಖ್ಯೆಯ ವಾಹನವನ್ನೇ ಬಳಕೆ ಮಾಡಿದ್ದರು.

    2007ರಲ್ಲಿ ಸಂಖ್ಯಾಶಾಸ್ತ್ರರ ಜ್ಯೋತಿಷಿಗಳ ಸಲಹೆ ಮೇರೆಗೆ ತಮ್ಮ ಹೆಸರಿನ ಸ್ಪೆಲಿಂಗ್ ನಲ್ಲಿದ್ದ ಒಂದು ಡಿ ಅಕ್ಷರದ (Yediyurappa) ಪಕ್ಕ ಐ ಅಕ್ಷರ ಕೈಬಿಟ್ಟು ಡಿ ಅಕ್ಷರ (Yeddyurappa)ವನ್ನು ಕೂಡಿಸಿಕೊಂಡಿದ್ದರು. ಆ ಬಳಿಕ 2019 ಜುಲೈ 26 ರಂದು ಮತ್ತೆ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಒಂದು ಡಿ ಅಕ್ಷರನ್ನು ಬಿಟ್ಟು ಮತ್ತೆ ಮೊದಲಿನಂತೆ ಬದಲಾಯಿಸಿಕೊಂಡಿದ್ದರು.

     

  • ಬೆಂಗ್ಳೂರಿನಲ್ಲಿ 500, 1 ಸಾವಿರ ಮುಖಬೆಲೆಯ 1 ಕೋಟಿ ಹಣ ವಶ

    ಬೆಂಗ್ಳೂರಿನಲ್ಲಿ 500, 1 ಸಾವಿರ ಮುಖಬೆಲೆಯ 1 ಕೋಟಿ ಹಣ ವಶ

    ಬೆಂಗಳೂರು: 500 ರೂ. ಮತ್ತು 100 ಮುಖಬೆಲೆ ಹಳೆ ನೋಟು ಬ್ಯಾನ್ ಆಗಿ ಎರಡು ವರ್ಷ ಕಳೆದರೂ ಸಿಲಿಕಾನ್ ಸಿಟಿಯಲ್ಲಿ ಬ್ಲಾಕ್ ಅಂಡ್ ವೈಟ್ ದಂಧೆ ಇನ್ನೂ ನಿಂತಿಲ್ಲ.

    ನಗರದಲ್ಲಿ ಹಳೆಯ ನೋಟುಗಳನ್ನು ಹೊಸ ನೋಟುಗಳಾಗಿ ಪರಿವರ್ತನೆ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರ ಬಳಿಕ ಇದ್ದ ಬರೋಬ್ಬರಿ ಒಂದು ಕೋಟಿ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಒಂದು ಕೋಟಿ ಪೂರ್ತಿ ಹಳೆಯ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳಾಗಿವೆ. ಆರೋಪಿಗಳು ಮತ್ತೆ ಅದೇ ನೋಟುಗಳ ಚಲಾವಣೆಗೆ ಬರುತ್ತೆ ಎಂದು ಜನರಿಗೆ ವಂಚನೆ ಮಾಡುತ್ತಿದ್ದರು.

    ವಂಚನೆ ಹೇಗೆ?
    ಆರೋಪಿಗಳ ಗ್ಯಾಂಗ್ ಮತ್ತೆ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳು ಚಲಾವಣೆಗೆ ಬರುತ್ತವೆ ಎಂದು ಮೊದಲು ಹೇಳಿ ಸಾರ್ವಜನಿಕರನ್ನು ನಂಬಿಸುತ್ತಿದ್ದರು. ನೀವು ನಮಗೆ 25 ಲಕ್ಷ ರೂ. ಹಣವನ್ನು ಕೊಡಿ. ನಾವು ನಿಮಗೆ 1 ಕೋಟಿ ಹಳೆಯ ನೋಟನ್ನು ಕೊಡುತ್ತೇವೆ. ಮುಂದಿನ ಸರ್ಕಾರದಲ್ಲಿ ಹಳೆಯ ನೋಟು ಚಲಾವಣೆಗೆ ಬಂದಾಗ ನಿಮಗೆ 75 ಲಕ್ಷ ರೂ. ಲಾಭವಾಗುತ್ತದೆ ಎಂದು ಹೇಳುವ ಮೂಲಕ ತಮ್ಮ ಬಳಿ ಇದ್ದ ಹಳೆಯ ನೋಟನ್ನು ಬದಲಾವಣೆ ಮಾಡಲು ಮುಂದಾಗಿದ್ದರು.

    ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇಂದು ವಿನೋದ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಹಣ ಎಲ್ಲಿಂದ ಬಂದಿದ್ದು, ಯಾರಿಗಾಗಿ ಹಳೆ ನೋಟು ಬದಲಾವಣೆ ಮಾಡುತ್ತಿದ್ದೀರ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ಮೊದಲು ಅಮಿತ್ ಶಾ ಹೆಸರನ್ನ ಬದಲಿಸಿ: ಯೋಗಿ ಆದಿತ್ಯನಾಥ್ ಗೆ ಸವಾಲ್

    ಮೊದಲು ಅಮಿತ್ ಶಾ ಹೆಸರನ್ನ ಬದಲಿಸಿ: ಯೋಗಿ ಆದಿತ್ಯನಾಥ್ ಗೆ ಸವಾಲ್

    ಲಕ್ನೋ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನಗರಗಳ ಹೆಸರನ್ನು ಬದಲಾಯಿಸುತ್ತಿರುವುದಕ್ಕೆ ಖ್ಯಾತ ಇತಿಹಾಸಕಾರ ಹಾಗೂ ಆಲೀಗಢ ಮುಸ್ಲಿಂ ವಿವಿಯ ಗೌರವ ಪ್ರೊಫೆಸರ್ ಇರ್ಫಾನ್ ಹಬೀಬ್ ವ್ಯಂಗ್ಯವಾಡಿದ್ದಾರೆ.

    ಆಗ್ರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಹೆಸರಿನಲ್ಲಿರುವ ಶಾ ಎನ್ನುವ ಅಕ್ಷರ ಪರ್ಶಿಯನ್ ಮೂಲದ್ದು, ಅದು ಗುಜರಾತಿಗೆ ಸೇರಿದ್ದಲ್ಲ. ಹೀಗಾಗಿ ಅವರ ಹೆಸರನ್ನು ಮೊದಲು ಬದಲಾಯಿಸುವ ಕುರಿತು ಬಿಜೆಪಿ ಚಿಂತಿಸಲಿ. ಅಲ್ಲದೇ ಗುಜರಾತ್ ಹೆಸರು ಕೂಡ ಪರ್ಶಿಯನ್ ಮೂಲದ್ದು, ಇದನ್ನು ಗುಜರಾತ್ರ ಎಂದು ಕರೆಯಲಾಗುತ್ತಿತ್ತು. ಇದನ್ನೂ ಬಿಜೆಪಿಯವರು ಬದಲಿಸಬೇಕೆಂದು ಲೇವಡಿ ಮಾಡಿದ್ರು.

    ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮಹಾನಗರಗಳ ಹೆಸರುಗಳನ್ನು ಬದಲಾವಣೆಯ ಮಾಡುವ ಹುಚ್ಚನ್ನು ಬೆಳೆಸಿಕೊಂಡಿದ್ದಾರೆ. ಇದು ಆರ್‍ಎಸ್‍ಎಸ್‍ನ ಹಿಂದುತ್ವ ನೀತಿಗೆ ಅನುಗುಣವಾಗಿದೆ. ಅಲ್ಲದೇ ನೆರೆಯ ಪಾಕಿಸ್ತಾನದಲ್ಲಿ ಇಸ್ಲಾಮಿಕ್‍ಗೆ ಸೇರಿಲ್ಲದವನ್ನೆಲ್ಲಾ ತೆಗೆದು ಹಾಕಿದ್ದರು. ಇಲ್ಲಿಯೂ ಸಹ ಅದೇರೀತಿ ಬಿಜೆಪಿ ಹಾಗೂ ಬಲಪಂಥೀಯ ಬೆಂಬಲಿಗರು ಹಿಂದೂಯೇತರ ಹೆಸರುಗಳನ್ನು, ಅದರಲ್ಲು ಪ್ರಮುಖವಾಗಿ ಇಸ್ಲಾಮಿಕ್ ಮೂಲದ ಹೆಸರುಗಳನ್ನು ಬದಲಿಸುತ್ತಿದ್ದಾರೆ ಎಂದು ಟೀಕಿಸಿದರು.

    ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಇರುವ ಆಗ್ರಾ ನಗರವನ್ನು ಅಗ್ರವನ ಎಂದು ಮರುನಾಮಕರಣ ಮಾಡುವಂತೆ ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ಆಗ್ರಹಿಸಿದ್ದರು. ಇದಲ್ಲದೇ ಯೋಗಿ ಆದಿತ್ಯನಾಥ್ ರಾಜ್ಯದ ಮಹಾನಗರಗಳ ಹೆಸರನ್ನು ಬದಲಾವಣೆ ಮಾಡಿದ್ದರು. ಹೀಗಾಗಿ ಹಬೀಬ್ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಗರಸಭೆ ಮೀಸಲಾತಿಯನ್ನೆ ಬದಲಾವಣೆ ಮಾಡಿದ್ರು ಶಾಸಕ ರಾಘವೇಂದ್ರ ಹಿಟ್ನಾಳ್

    ನಗರಸಭೆ ಮೀಸಲಾತಿಯನ್ನೆ ಬದಲಾವಣೆ ಮಾಡಿದ್ರು ಶಾಸಕ ರಾಘವೇಂದ್ರ ಹಿಟ್ನಾಳ್

    ಕೊಪ್ಪಳ: ನಗರ ಸಭೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾತಿ ಆಗಿತ್ತು. ಇದೀಗ ಶಾಸಕರು ನಗರಸಭೆ ಮೀಸಲಾತಿಯನ್ನೆ ಬದಲಾವಣೆ ಮಾಡಿದ್ದಾರೆ.

    ಶಾಸಕ ರಾಘವೇಂದ್ರ ಹಿಟ್ನಾಳ್ ರಿಂದ ಪರಿಶಿಷ್ಟ ಜಾತಿ ಮಹಿಳಾ ಮೀಸಲಾತಿಯನ್ನ ಬದಲಿಸಿ ಅಲ್ಪಸಂಖ್ಯಾತ ಅಮ್ಜದ್ ಪಟೇಲ್ ಅಧ್ಯಕ್ಷ ಸ್ಥಾನ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಬದಲಾವಣೆ ವಿರೋಧಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಫಲಿತಾಂಶ ಬಂದ ದಿನದಿಂದ ತಮ್ಮ ಆಪ್ತರಾದ, ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್ ಹಾಗೂ ಮುತ್ತು ಕುಷ್ಟಗಿರೊಂದಿಗೆ ಶಾಸಕರು ಬೆಂಗಳೂರಲ್ಲಿ ಬೀಡುಬಿಟ್ಟಿದ್ದರು. ಈ ವೇಳೆ ಮುಸ್ಲಿಂ ಮತಗಳ ಒಲೈಕೆಗಾಗಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನ ಬದಲಾವಣೆ ಮಾಡಿದ್ದಾರೆ ಎಂದು ಹೇಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಮಾರಸ್ವಾಮಿ ಬದಲು ಸಿದ್ದರಾಮಯ್ಯನವ್ರಿಗೆ ಸಿಎಂ ಪಟ್ಟ ಕಟ್ಟೋದಾದ್ರೆ ಓಕೆ: ಸಚಿವ ಶಿವಶಂಕರ ರೆಡ್ಡಿ ಬಾಂಬ್

    ಕುಮಾರಸ್ವಾಮಿ ಬದಲು ಸಿದ್ದರಾಮಯ್ಯನವ್ರಿಗೆ ಸಿಎಂ ಪಟ್ಟ ಕಟ್ಟೋದಾದ್ರೆ ಓಕೆ: ಸಚಿವ ಶಿವಶಂಕರ ರೆಡ್ಡಿ ಬಾಂಬ್

    ಚಾಮರಾಜನಗರ: ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಬದಲಿಸಿ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರನ್ನು ನೂತನ ಸಿಎಂ ಆಗಿ ಆಯ್ಕೆ ಮಾಡುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳುವ ಮೂಲಕ ಕೃಷಿ ಸಚಿವ ಶಿವಶಂಕರ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರಿಗೆ ಸಿದ್ದರಾಮಯ್ಯನವರ ಸಿಎಂ ಆಗುತ್ತೇನೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಯಾವ ರೀತಿ ಹೇಳಿದ್ದಾರೋ ನಮಗೆ ಗೊತ್ತಿಲ್ಲ, ನಾವು ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡುವ ಆಸೆ ಹೊಂದಿದ್ದೆವು. ಹೀಗಾಗಿ ಸಿದ್ದರಾಮಯ್ಯನವರನ್ನು ಸಿಎಂ ಮಾಡಲೇಬೇಕೆಂದು ವಿಧಾನಸಭಾ ಚುನಾವಣೆಯಲ್ಲಿ ಪಣ ತೊಟ್ಟಿದ್ದೇವು. ಆದರೆ ನಮಗೆ ಬೇಕಾದ ಬಹುಮತ ಸಿಗಲಿಲ್ಲ. ಹೀಗಾಗಿ ಅವರು ಮುಖ್ಯಮಂತ್ರಿಯಾಗುವ ಅವಕಾಶ ಕೈ ತಪ್ಪಿತು. ಇಂದು ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಒಂದು ವೇಳೆ ಸಭೆಯಲ್ಲಿ ಎಲ್ಲರೂ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ನಿರ್ಧಾರ ಮಾಡಿದರೆ, ನಮ್ಮೆಲ್ಲರ ಸಂಪೂರ್ಣ ಬೆಂಬಲ ಇದೆ ಎಂದು ಮಾಜಿ ಸಿಎಂ ಪರವಾಗಿ ಬ್ಯಾಟ್ ಬೀಸಿದರು.

    ಸಮನ್ವಯ ಸಮಿತಿಯಲ್ಲಿ ತೀರ್ಮಾನವಾದರೆ, ಮುಖ್ಯಮಂತ್ರಿಗಳ ಬದಲಾವಣೆ ಖಚಿತ. ಎರಡು ಪಕ್ಷಗಳ ಸಮನ್ವಯ ಸಮಿತಿಯವರು ಈ ಬಗ್ಗೆ ಕುಳಿತು ತೀರ್ಮಾನ ಕೈಗೊಳ್ಳಬೇಕು. ಸಮ್ಮಿಶ್ರ ಸರ್ಕಾರದ ಉಸ್ತುವಾರಿಯನ್ನು ಸಮನ್ವಯ ಸಮಿತಿ ಹೊಂದಿದೆ. ಸಮಿತಿಯ ನಿರ್ಧಾರಗಳಿಗೆ ಎಲ್ಲರೂ ಬದ್ಧರಾಗಿರಬೇಕು. ಒಂದು ವೇಳೆ ಸಭೆಯಲ್ಲಿ ಕುಮಾರಸ್ವಾಮಿಯವರನ್ನು ಬದಲಾಯಿಸಿ, ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದರೆ ನಮ್ಮ ಎಲ್ಲಾ ಶಾಸಕರುಗಳು ಬದ್ಧರಾಗಿರುತ್ತೇವೆ ಎಂದು ಹೇಳಿಕೆ ನೀಡಿದರು.

    ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಬೀಳುತ್ತದೆಂಬ ಹಗಲುಗನಸು ಕಾಣುತ್ತಾ ಕುಳಿತುಕೊಂಡಿದ್ದಾರೆ. ಅವರುಗಳು ಒಡೆದು ಆಳುವ ನೀತಿಗೆ ಹೆಚ್ಚಿನ ಆಧ್ಯತೆ ನೀಡುವವರು. ನಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಜಾತ್ಯತೀತ ಪಕ್ಷಗಳಾಗಿದ್ದು, ಸಮಾನ ಮನಸ್ಕರೊಂದಿಗೆ ಸರ್ಕಾರ ನಡೆಸುತ್ತಿದ್ದೇವೆ. ಸರ್ಕಾರಕ್ಕೆ ಯಾವುದೇ ಕಂಟಕ ಎದುರಾಗುವುದಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೊಲೀಸ್ ಪೇದೆಗಳ ಟೋಪಿ ಬದಲಾವಣೆ?

    ಪೊಲೀಸ್ ಪೇದೆಗಳ ಟೋಪಿ ಬದಲಾವಣೆ?

    ಬೆಂಗಳೂರು: ಇನ್ಮುಂದೆ ಪೊಲೀಸ್ ಪೇದೆಗಳ ಟೋಪಿ ಬದಲಾವಣೆಯಾಗುತ್ತಿದ್ದು, ಇನ್ಸ್ಪಕ್ಟರ್ ಗಳಿಗಿದ್ದ ಕ್ಯಾಪ್ ಮಾದರಿಯಲ್ಲಿ ಟೋಪಿ ಕೊಡಲಾಗುತ್ತಿದೆ.

    ಈ ಹಿಂದೆ ಇದ್ದ ಕ್ಯಾಪ್‍ಗಳು ಆರೋಗ್ಯಕರವಾಗಿರಲಿಲ್ಲ. ಅಷ್ಟೇ ಅಲ್ಲದೇ ಕ್ಯಾಪ್‍ಗಳು ಹೆಚ್ಚಿನ ತೂಕ ಇತ್ತು. ಇದರಿಂದಾಗಿ ಕುತ್ತಿಗೆ ನೋವು, ತಲೆ ನೋವು ಕಾಣಿಸಿಕೊಳ್ಳುತ್ತಿತ್ತು. ಹಾಗಾಗಿ ಗೃಹ ಇಲಾಖೆ ಬದಲಾವಣೆ ಮಾಡುವಂತೆ ಮನವಿ ಮಾಡಿಕೊಂಡಿತ್ತು. ಇದನ್ನು ಓದಿ: ಮಹಿಳಾ ಪೊಲೀಸರ ಖಾಕಿ ಸೀರೆ, ಸಲ್ವಾರ್ ಯೂನಿಫಾರ್ಮ್ ಗೆ ಬ್ರೇಕ್!

    ಇದಕ್ಕೆ ಸರ್ಕಾರ ಒಪ್ಪಿದರೆ ಎಲ್ಲಾ ಪೊಲೀಸರಿಗೆ ಟೋಪಿ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಹಾಗಾಗಿ ಡಿಜಿ ಐಜಿಪಿ ಕಚೇರಿಯಲ್ಲಿ ಟೋಪಿಯನ್ನು ತೊಟ್ಟು ಬದಲಾವಣೆ ಪ್ರಯೋಗವನ್ನು ನಡೆಸಿದರು. ಇದನ್ನು ಓದಿ: ಡೊಳ್ಳು ಹೊಟ್ಟೆ ಬೆಳೆಸಿಕೊಂಡಿರುವ ಪೊಲೀಸರೇ ಎಚ್ಚರ!