Tag: ಬಣವೆ

  • ಆಕಸ್ಮಿಕ ಬೆಂಕಿಗೆ 30 ಹುಲ್ಲಿನ ಬಣವೆಗಳು ಸುಟ್ಟು ಭಸ್ಮ

    ಆಕಸ್ಮಿಕ ಬೆಂಕಿಗೆ 30 ಹುಲ್ಲಿನ ಬಣವೆಗಳು ಸುಟ್ಟು ಭಸ್ಮ

     ಬೇಸಿಗೆಯಲ್ಲಿ ಜಾನುವಾರುಗಳಿಗಾಗಿ ಮೇವು ಸಂಗ್ರಹಿಸಿಟ್ಟಿದ್ದ ರೈತರು

    ಬಳ್ಳಾರಿ: ಆಕಸ್ಮಿಕ ಬೆಂಕಿಗೆ (Fire) 30 ಹುಲ್ಲಿನ ಬಣವೆಗಳು (Haystacks) ಸುಟ್ಟು ಭಸ್ಮವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ (Huvinahadagali) ತಾಲೂಕಿನ ಸೋಗಿ ಗ್ರಾಮದಲ್ಲಿ ನಡೆದಿದೆ.

    ರೈತರು ತಮ್ಮ ಜಾನುವಾರುಗಳಿಗೆ ಬೇಸಿಗೆಗಾಗಿ ಸುಮಾರು 30 ಬಣವೆಗಳನ್ನ ಸಂಗ್ರಹಿಸಿಟ್ಟಿದ್ದರು. ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಅಷ್ಟೂ ಮೇವಿನ ಬಣವೆಗಳು ಸುಟ್ಟು ಹೋಗಿವೆ.

    ಬಣವೆ ಇರುವ ಭಾಗದಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ್ದ ರೈತರು (Farmers) ಸ್ಥಳಕ್ಕೆ ಹೋಗುವಷ್ಟರಲ್ಲಿ ಎಲ್ಲಾ ಬಣವೆಗಳಿಗೆ ಬೆಂಕಿ ತಗುಲಿತ್ತು. ಕೂಡಲೇ ರೈತರು ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಬಣವೆಗಳು ಬೆಂಕಿಗಾಹುತಿಯಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಬಣಗಳ ನಡುವೆ ಏಪ್ರಿಲ್ Vs ಡಿಸೆಂಬರ್ ವಾರ್!

    ರೈತರಾದ ರಫಿ, ನಾಗರಾಜ, ಆನಂದ, ಮಂಜವ್ವ, ಕೊಟ್ರೇಶ, ಖಾಜಾಸಾಬ್, ಜಿನ್ನಾಸಾಬ್, ಟಿ.ಬಸವರಾಜ, ನಾಗಪ್ಪ ತಳಕಲ್, ಕಾಗನೂರು ನಾಗರಾಜಪ್ಪ ಸೇರಿ ಒಟ್ಟು ಹತ್ತು ಜನ ರೈತರಿಗೆ ಸೇರಿದ್ದ ಲಕ್ಷಾಂತರ ಬೆಲೆ ಬಾಳುವ ಮೆಕ್ಕೆಜೋಳದ ಸಿಪ್ಪೆ ಹಾಗೂ ಭತ್ತದ ಹುಲ್ಲಿನ ಬಣವೆಗಳು ಬೆಂಕಿಗಾಹುತಿಯಾಗಿವೆ. ಇದನ್ನೂ ಓದಿ: ಮೂವರನ್ನು ಕೊಲೆ ಮಾಡಿದ್ದೇನೆ, ನಾನು ಸಾಯ್ತಿನಿ – ಅಮೆರಿಕದಲ್ಲಿರುವ ಅಣ್ಣನಿಗೆ ಫೋನ್‌ ಮಾಡಿ ಹೇಳಿದ್ದ ಚೇತನ್‌

    ಪ್ರತಿವರ್ಷ ಬೇಸಿಗೆಯ ಸಂದರ್ಭದಲ್ಲಿ ಯಾರೋ‌ ಕಿಡಿಗೇಡಿಗಳು ಮೇವಿನ ಬಣವೆಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಕಳೆದ ವರ್ಷವೂ ಇದೇ ರೀತಿ ಆಗಿತ್ತು ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಇಟ್ಟಿಗಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

     

  • ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವಿಗೆ ಬೆಂಕಿ- ಹೊತ್ತಿಉರಿದ ಬಣವೆಗಳು

    ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವಿಗೆ ಬೆಂಕಿ- ಹೊತ್ತಿಉರಿದ ಬಣವೆಗಳು

    ಚಿತ್ರದುರ್ಗ: ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವಿಗೆ ಆಕಸ್ಮಿಕ ಬೆಂಕಿ ತಗುಲಿರುವ ಘಟನೆ ಹೊಸದುರ್ಗ ತಾಲೂಕಿನ ನಾಗಯ್ಯನಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಶಾಶ್ವತ ಬರದನಾಡೆಂಬ ಹಣೆಪಟ್ಟಿ ಹೊತ್ತಿರುವ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಸಕಾಲಕ್ಕೆ ಮಳೆ ಬಾರದೇ ಬರ ತಾಂಡವವಾಡುತ್ತಿದೆ. ಹೀಗಾಗಿ ಜಿಲ್ಲೆಯ ಹೊಸದುರ್ಗ, ಚಳ್ಳಕೆರೆ ಹಾಗೂ ಹಿರಿಯೂರು ತಾಲೂಕುಗಳ ಭಾಗದ ಅನ್ನದಾತರು ಮುಂಜಾಗ್ರತಾ ಕ್ರಮವಾಗಿ ಕಷ್ಟ ಕಾಲಕ್ಕೆ ಜಾನುವಾರುಗಳಿಗೆ ಇರಲಿ ಅಂತ ಶೇಂಗಾ, ಮೆಕ್ಕೆಜೋಳ ಮತ್ತು ರಾಗಿ ಹುಲ್ಲನ್ನು ಸಂಗ್ರಹಿಸಿ ಬಣವೆ ಹಾಕಿ ವರ್ಷಗಟ್ಟಲೇ ಇಡುತ್ತಾರೆ. ಆದರೆ ಆಕಸ್ಮಿಕ ಬೆಂಕಿ ತಗುಲಿ ಜಾನುವಾರುಗಳಿಗಳಿಗಾಗಿ ಸಂಗ್ರಹಿಸಿಡಲಾಗಿದ್ದ ರಾಗಿ ಹಾಗು ಶೇಂಗಾ ಬಣವೆಗಳು ಹೊತ್ತಿ ಉರಿದು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

    ರೈತ ತಿಮ್ಮಣ್ಣ ಎಂಬವರಿಗೆ ಸೇರಿದ್ದ ಸಾವಿರಾರು ರೂಪಾಯಿ ಮೌಲ್ಯದ ರಾಗಿ ಹಾಗು ಶೇಂಗಾ ಬಣವೆಗಳಿಗೆ ಬೆಳಗಿನ ಜಾವ ಐದು ಗಂಟೆ ಸಮಯದಲ್ಲಿ ಆಕಸ್ಮಿಕ ಬೆಂಕಿ ತಗುಲಿರೋ ಪರಿಣಾಮ ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಬಣವೆ ಬಳಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕದಳದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಒಂದೂವರೆ ಗಂಟೆ ತಡವಾಗಿ ಬಂದ ಕಾರಣ ಬಣವೆ ಸುಟ್ಟುಕರಕಲಾಗಿದೆ. ಸಿಬ್ಬಂದಿ ಬೇಗ ಬಂದಿದ್ದರೆ ಸ್ಪಲ್ಪನಾದರೂ ಮೇವು ಉಳಿಸಿಕೊಳ್ಳಬಹುದಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮತ್ತೆ ಜಮೀನಿನಲ್ಲಿದ್ದ ಮೇವಿನ ಬಣವೆಗೆ ಕಿಡಿಕೇಡಿಗಳಿಂದ ಬೆಂಕಿ- ರೈತ ಕಂಗಾಲು

    ಮತ್ತೆ ಜಮೀನಿನಲ್ಲಿದ್ದ ಮೇವಿನ ಬಣವೆಗೆ ಕಿಡಿಕೇಡಿಗಳಿಂದ ಬೆಂಕಿ- ರೈತ ಕಂಗಾಲು

    ರಾಯಚೂರು: ಜಮೀನಿನಲ್ಲಿದ್ದ ಮೇವಿನ ಬಣವೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಎರಡು ಬಣವೆಗಳು ಸಂಪೂರ್ಣ ಭಸ್ಮವಾಗಿರುವ ಘಟನೆ ರಾಯಚೂರಿನ ಲಿಂಗಸುಗೂರಿನ ಕನ್ನಾಪುರಹಟ್ಟಿಯಲ್ಲಿ ನಡೆದಿದೆ.

    ಮೇಗಳಪೇಟೆಯ ಹನುಮಂತ ಎಂಬ ರೈತನ ಜಮೀನಿನಲ್ಲಿ ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟಿದ್ದ ಮೇವಿನ ಬಣವೆಗಳಿಗೆ ಬೆಂಕಿ ಹಚ್ಚಲಾಗಿದೆ. ಲಿಂಗಸ್ಗೂರು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಹೊತ್ತಿಗೆ ಬಣವೆಗಳು ಸುಟ್ಟುಹೋಗಿದ್ದವು.

    15 ದಿನಗಳ ಹಿಂದೆ ಇದೇ ರೈತನಿಗೆ ಸೇರಿದ್ದ ಎರಡು ಟ್ರ್ಯಾಕ್ಟರ್ ಮೇವಿನ ಬಣವೆ ಸುಟ್ಟು ಅಪಾರ ನಷ್ಟ ಅನುಭವಿಸಿದ್ದರು. ಪುನಃ ಬಣವೆಗಳು ಸುಟ್ಟಿದ್ದಕ್ಕೆ ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

    ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಬಣವೆ ಬಳಿ ಆಟವಾಡುತ್ತಿದ್ದ ಬಾಲಕ ಬೆಂಕಿಗಾಹುತಿಯಾದ

    ಬಣವೆ ಬಳಿ ಆಟವಾಡುತ್ತಿದ್ದ ಬಾಲಕ ಬೆಂಕಿಗಾಹುತಿಯಾದ

    ಧಾರವಾಡ: ಆಕಸ್ಮಿಕ ಬೆಂಕಿ ಅನಾಹುತಕ್ಕೆ ಬಾಲಕ ಬಲಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲುಕಿನ ಕುರುವಿನಕೊಪ್ಪ ಗ್ರಾಮದಲ್ಲಿ ನಡೆದಿದೆ.

    7 ವರ್ಷದ ಬಾಲಕ ಚಂದನ ಸಂಗೊಳ್ಳಿ ಮೃತ ದುರ್ದೈವಿ. ದ್ಯಾಮಣ್ಣ ಕೊಂಕಣ್ಣವರ ಅವರಿಗೆ ಸೇರಿದ ಬಣವೆಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಬಣವೆಯ ಬಳಿ ಆಟವಾಡುತ್ತಿದ್ದ ಬಾಲಕ ಚಂದನ ಸಂಗೊಳ್ಳಿ ಬೆಂಕಿಗೆ ಆಹುತಿಯಾಗಿದ್ದಾನೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

    ಕಲಘಟಗಿ ಪೊಲೀಸರು ಬಣವೆಗೆ ಬೆಂಕಿ ಹೊತ್ತಿಕೊಂಡ ಬಗ್ಗೆ ಮಹಿತಿ ಕಲೆ ಹಾಕುತ್ತಿದ್ದಾರೆ.