Tag: ಬಡ ಕುಟುಂಬಗಳು

  • ಅಧಿಕಾರಿಗಳ ಎಡವಟ್ಟು – ಬಡ ಕುಟುಂಬಗಳ ರೇಷನ್ ಕಾರ್ಡ್ ರದ್ದು

    ಅಧಿಕಾರಿಗಳ ಎಡವಟ್ಟು – ಬಡ ಕುಟುಂಬಗಳ ರೇಷನ್ ಕಾರ್ಡ್ ರದ್ದು

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ತಾಲೂಕು ಕಚೇರಿಯ ಅಧಿಕಾರಿಗಳ ಎಡವಟ್ಟಿನಿಂದ ಬಡಕುಟುಂಬಗಳು ಹೈರಾಣಾಗುವ ಸ್ಥಿತಿಗೆ ತಲುಪಿದೆ. ಇದನ್ನೂ ಓದಿ: ಬಗೆದಷ್ಟು ಬಯಲಾಗ್ತಿದೆ ಐವರ ಡೆತ್ ಸೀಕ್ರೆಟ್ – ‘ಹಾಳಾಗ್ ಹೋಗ್ರಿ’ ಅಂದಿದ್ದಕ್ಕೇ ಆತ್ಮಹತ್ಯೆನಾ..?

    sri ranga pattana

    ಅಧಿಕಾರಿಗಳು ಆದಾಯ ಪ್ರಮಾಣ ಪತ್ರದಲ್ಲಿ ಒಂದು ಸೊನ್ನೆಯನ್ನು ಹೆಚ್ಚಾಗಿ ಸೇರಿಸಿರುವ ಪರಿಣಾಮ ಸುಮಾರು 20ಕ್ಕೂ ಅಧಿಕ ಬಡಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದಾಗಿದೆ. ಉದಾಹರಣೆಗೆ 20 ಸಾವಿರ ಆದಾಯ ಇರುವುದಕ್ಕೆ ಒಂದು ಸೊನ್ನೆ ಜಾಸ್ತಿ ಮಾಡಿರುವ ಕಾರಣ ಆದಾಯ 2 ಲಕ್ಷ ರೂಪಾಯಿಯಾಗಿದೆ. ಹೀಗಾಗಿ ಆದಾಯ ಹೆಚ್ಚಿದೆ ಎಂಬ ಕಾರಣಕ್ಕೆ ಸರ್ಕಾರ ಏಕಾಏಕಿ ಇವರ ಬಿಪಿಎಲ್ ಕಾರ್ಡ್ ರದ್ದಾಗಿದೆ. ಇದನ್ನೂ ಓದಿ: ಲಸಿಕೆ ಪಡೆದವರಿಗೆ ನವೆಂಬರ್‌ನಿಂದ ಅಮೆರಿಕಾ ಪ್ರಯಾಣಕ್ಕೆ ಅವಕಾಶ

    sri ranga pattana

    ಈ ಕುಟುಂಬಗಳು ಕೂಲಿ ಕೆಲಸ, ಆಟೋ ಓಡಿಸಿಕೊಂಡು ಜೀವನ ಮಾಡುವ ಸ್ಥಿತಿಯಲ್ಲಿ ಇದ್ದಾರೆ. ಇವರ ಬಿಪಿಎಲ್ ಕಾರ್ಡ್ ರದ್ದಾಗಿರುವ ಕಾರಣ ಇವರಿಗೆ ಸರ್ಕಾರದಿಂದ ಸಿಗಬೇಕಿದ್ದ ಅಕ್ಕಿ ಸಿಗುತ್ತಿಲ್ಲ. ಇದಲ್ಲದೇ ಆಯುಷ್ಮಾನ್ ಕಾರ್ಡ್ ಕೂಡ ರದ್ದಾಗಿದ್ದು, ಇದರಿಂದ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಲು ಹಣವಿಲ್ಲದೇ ಪರಿತಪಿಸಬೇಕಾದ ಪರಿಸ್ಥಿತಿ ಈ ಕುಟುಂಬಗಳಿಗೆ ಬಂದಿದೆ. ಇದನ್ನು ಸರಿಪಡಿಸಿಕೊಡಿ ಎಂದು ಅಧಿಕಾರಿಗಳ ಬಳಿ ಹೋದರೆ ಆ ಮೇಲೆ ಬನ್ನಿ ಈಗ ಆಗಲ್ಲ ಎನ್ನುವ ಸಬೂಬು ಹೇಳಿ ಕಳುಹಿಸುತ್ತಿದ್ದಾರೆ.

  • ಲಾಕ್‍ಡೌನ್ ಸಡಿಲಿಕೆಯಾದ್ರೂ ಪೋಷಕರಿಗಿಲ್ಲ ವ್ಯಾಪಾರ- ಭಿಕ್ಷಾಟನೆಗೆ ಇಳಿದ ಕಂದಮ್ಮಗಳು

    ಲಾಕ್‍ಡೌನ್ ಸಡಿಲಿಕೆಯಾದ್ರೂ ಪೋಷಕರಿಗಿಲ್ಲ ವ್ಯಾಪಾರ- ಭಿಕ್ಷಾಟನೆಗೆ ಇಳಿದ ಕಂದಮ್ಮಗಳು

    ರಾಯಚೂರು: ಗ್ರೀನ್ ಝೋನ್ ಜಿಲ್ಲೆ ರಾಯಚೂರಿನಲ್ಲಿ ಲಾಕ್‍ಡೌನ್ ಸಂಪೂರ್ಣ ಸಡಿಲಿಕೆಯಾಗಿದ್ದರೂ ಜನರ ಜೀವನ ಇನ್ನೂ ಕಷ್ಟದಲ್ಲಿದೆ. ಕೆಲಸವಿಲ್ಲದೆ ಕೆಲವರು ಭಿಕ್ಷಾಟನೆಗೆ ಇಳಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

    ನಗರದ ಆಶಾಪುರ ರಸ್ತೆ ಪದ್ಮಾವತಿ ಕಾಲೋನಿ ಬಳಿ ಬಯಲು ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡಿರುವ ಸುಮಾರು 20 ಕುಟುಂಬಗಳ ಪುಟ್ಟ ಪುಟ್ಟ ಮಕ್ಕಳು ಈಗ ಭಿಕ್ಷಾಟನೆ ನಡೆಸಿವೆ. ಆಹಾರಧಾನ್ಯ ಇಲ್ಲದೆ ಬಡ ಕುಟುಂಬಗಳು ಪರದಾಡುತ್ತಿದ್ದು, ಮಕ್ಕಳು ಕೈಯಲ್ಲಿ ಪಾತ್ರೆ ಹಿಡಿದು ಮನೆಮನೆಗೆ ಹೋಗಿ ಅಕ್ಕಿ ಭಿಕ್ಷೆ ಕೇಳುತ್ತಿದ್ದಾರೆ.

    ಮೊದಲೆಲ್ಲಾ ವೇಷಹಾಕಿಕೊಂಡು ಬದುಕುತ್ತಿದ್ದ ಕುಟುಂಬಗಳು ಬದುಕು ಕಷ್ಟವಾಗಿ ಗ್ರಾಮೀಣ ಭಾಗದಲ್ಲಿ ನೀರಿನ ಕೊಡ, ಬಟ್ಟೆ, ಬಳೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಹೇಗೋ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದ ಈ ಕುಟುಂಬಗಳು ಲಾಕ್‍ಡೌನ್‍ನಿಂದ ಕಂಗಾಲಾಗಿವೆ. ಲಾಕ್‍ಡೌನ್ ಸಡಿಲಿಕೆಯಾಗಿದ್ದರಿಂದ ವ್ಯಾಪಾರಕ್ಕೆ ಹೋದರೆ ಹಳ್ಳಿಗಳಲ್ಲಿ ಜನ ಇವರನ್ನ ಊರಿನೊಳಗೆ ಬಿಟ್ಟುಕೊಳ್ಳಯತ್ತಿಲ್ಲ. ಇತ್ತ ಬೇರೆ ಕೆಲಸವೂ ಸಿಗುತ್ತಿಲ್ಲ.

    ಒಂದೆರಡು ಬಾರಿ ದಾನಿಗಳು ಆಹಾರ ಕಿಟ್ ವಿತರಿಸಿದ್ದಾರೆ, ಪಡಿತರ ಧಾನ್ಯವೂ ಸಿಕ್ಕಿದೆ. ಆದರೆ 50ಕ್ಕೂ ಹೆಚ್ಚು ಜನರಿರುವ ಇವರಿಗೆ ನಿತ್ಯದ ಊಟಕ್ಕೆ ಆಹಾರಧಾನ್ಯ ಸಾಲುತ್ತಿಲ್ಲ. ಮಕ್ಕಳನ್ನ ಸಾಕುವುದು ಹೆತ್ತವರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಹೊಟ್ಟೆ ತುಂಬಿಸಿಕೊಳ್ಳಲು ಭಿಕ್ಷಾಟನೆ ನಡೆಸಿದ್ದಾರೆ.

  • ಬಡವರಿಗೆ ಉಚಿತವಾಗಿ 67 ಟನ್ ಆಹಾರ ಸಾಮಗ್ರಿ ವಿತರಿಸಿದ ಉಮೇಶ್ ಕತ್ತಿ

    ಬಡವರಿಗೆ ಉಚಿತವಾಗಿ 67 ಟನ್ ಆಹಾರ ಸಾಮಗ್ರಿ ವಿತರಿಸಿದ ಉಮೇಶ್ ಕತ್ತಿ

    ಬೆಳಗಾವಿ(ಚಿಕ್ಕೋಡಿ): ಲಾಕ್‍ಡೌನ್ ಹಿನ್ನೆಲೆ ದುಡಿಮೆ ಇಲ್ಲದೆ ಮನೆಯಲ್ಲಿ ಕಷ್ಟದಲ್ಲಿ ಇರುವ ಬಡವರಿಗೆ ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಸಹಾಯ ಹಸ್ತ ಚಾಚಿದ್ದಾರೆ.

    ಉಮೇಶ್ ಕತ್ತಿ ಅವರು ತಮ್ಮ ತಂದೆ ವಿಶ್ವನಾಶ್ ಕತ್ತಿ ಹಾಗೂ ತಾಯಿ ರಾಜೇಶ್ವರಿ ಅವರ ಸ್ಮರಣಾರ್ಥ ಹುಕ್ಕೇರಿ ತಾಲೂಕಿನ 5,500 ಬಡ ಕುಟುಂಬಗಳಿಗೆ ಉಚಿತವಾಗಿ ದಿನಸಿ ವಸ್ತುಗಳನ್ನ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ವಿಶ್ವರಾಜ ಭವನದಲ್ಲಿ ಸಾಂಕೇತಿಕವಾಗಿ ಬಡವರಿಗೆ ದಿನಸಿ ಸಾಮಗ್ರಿಗಳನ್ನ ವಿತರಿಸಲಾಯಿತು.

    ಹುಕ್ಕೇರಿ ತಾಲೂಕಿನಲ್ಲಿ ಗುರುತಿಸಲಾದ ಒಟ್ಟು 5,500 ಕುಟುಂಬಗಳಿಗೆ 17 ಟನ್ ಜೋಳ, 17 ಟನ್ ಗೋದಿ ಹಿಟ್ಟು, 11 ಟನ್ ರವಾ, 11 ಟನ್ ಅಡುಗೆ ಎಣ್ಣೆ, ಹೆಸರುಕಾಳು 5.5 ಟನ್, 25 ಸಾವಿರ ಮಾಸ್ಕ ಹಾಗೂ 2,500 ಲೀಟರ್ ಸ್ಯಾನಿಟೈಸರ್ , 16,500 ಸೋಪುಗಳನ್ನ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕಗಳ ಮೂಲಕ ನೀಡಲಾಗುತ್ತಿದೆ. ಪ್ರತಿ ಕುಟುಂಬಕ್ಕೆ 3 ಕೆಜಿ ಜೋಳ, 3 ಕೆಜಿ ಗೋದಿ ಹಿಟ್ಟು, 2 ಲೀಟರ್ ಅಡುಗೆ ಎಣ್ಣೆ, 2 ಕೆಜಿ ರವಾ, ಒಂದು ಕೆಜಿ ತೊಗರಿ ಬೇಳೆ, ಒಂದು ಕೆಜಿ ಹೆಸರು ಕಾಳು, 5 ಮಾಸ್ಕ, ಅರ್ಧ ಲೀಟರ್ ಸ್ಯಾನಿಟೈಸರ್ ನೀಡಲಾಗುತ್ತಿದೆ.

    ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಕತ್ತಿ, ಲಾಕ್‍ಡೌನ್ ಹಿನ್ನೆಲೆ ಸಂಕಷ್ಟದಲ್ಲಿ ಇರುವ ಬಡವರನ್ನ ಗುರತಿಸಿ ದಿನಸಿ ಸಾಮಗ್ರಿಗಳನ್ನ ನೀಡಲಾಗುತ್ತಿದೆ. ಈಗಾಗಲೇ ಒಂದು ತಿಂಗಳು ಲಾಕ್‍ಡೌನ್ ಮುಗಿದಿದ್ದು, ಮುಂದಿನ ದಿನಗಳಲ್ಲಿ ಬಡವರು ಹಸಿವಿನಿಂದ ಬಳಲಬಾರದು. ಹೀಗಾಗಿ ಉಚಿತವಾಗಿ ಬಡವರಿಗೆ ದಿನಸಿ ಸಾಮಗ್ರಿಗಳನ್ನ ನೀಡಲಾಗುತ್ತಿದೆ ಎಂದರು.

    ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಚನ್ನಪ್ಪ ಗಜಬರ, ಜಯಗೌಡ ಪಾಟೀಲ್, ಗುರು ಕುಲಕರ್ಣಿ, ಜಯಸಿಂಗ್, ಸದಾ ಮರಬಸ್ಸನವರ, ಹುಕ್ಕೇರಿ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ, ತಹಶೀಲ್ದಾರ್ ಅಶೋಕ್ ಗುರಾಣಿ, ಬಸವರಾಜ್ ಮರಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.