Tag: ಬಡ್ಡಿ ಹಣ

  • ಬಡ್ಡಿ ಹಣಕ್ಕಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

    ಬಡ್ಡಿ ಹಣಕ್ಕಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

    ಬೆಂಗಳೂರು: ಬಡ್ಡಿ ಹಣಕ್ಕಾಗಿ (Usury Money) ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆಗೈದ ಘಟನೆ ಬೆಂಗಳೂರಿನ (Bengaluru) ಕಾಕ್ಸ್‌ಟೌನ್ ದೊಡ್ಡಗುಂಟೆ (Doddagunte) ಬಳಿ ನಡೆದಿದೆ.

    ಅಜಿತ್ (35) ಕೊಲೆಯಾದ ವ್ಯಕ್ತಿ. ಅಜಿತ್ ಐಟಿಸಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದ ಸಂದರ್ಭ ಮನೆ ಮುಂಭಾಗದಲ್ಲೇ ಕೊಲೆ ಮಾಡಲಾಗಿದೆ. ಇದನ್ನೂ ಓದಿ: ದರ್ಶನ್ ಖೈದಿ ನಂಬರಿನಲ್ಲಿ ಮಗುವಿನ ಪೊಟೋ ಶೂಟ್‌ ಮಾಡಿದ ಪೋಷಕರಿಗೆ ಸಂಕಷ್ಟ

    ಬಡ್ಡಿ ಹಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಜಿತ್ ವ್ಯಕ್ತಿಯೊಬ್ಬರಿಂದ ಅಧಿಕ ಬಡ್ಡಿಗೆ ಹಣ ಪಡೆದಿದ್ದರು. ಬಡ್ಡಿ ಹಣ ಮತ್ತು ಅಸಲು ಹಣ ವಾಪಸ್ ವಿಚಾರಕ್ಕೆ ಆರೋಪಿ ಮತ್ತು ಅಜಿತ್ ನಡುವೆ ಗಲಾಟೆ ಆಗುತ್ತಿತ್ತು. ಇಂದು ಅಜಿತ್ ಮನೆಗೆ ಬರೋದನ್ನೇ ಕಾದು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದಿಂದ ಬಂದು ಆರೋಪಿ ಕೃತ್ಯವೆಸಗಿದ್ದು, ಆರೋಪಿ ಪತ್ತೆಗಾಗಿ ಪುಲಿಕೇಶಿ ನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಇದನ್ನೂ ಓದಿ: ಭಾಷಣಕ್ಕೆ ಕಿರುಚಿ ಅಡ್ಡಿಪಡಿಸಿ ಸುಸ್ತಾಗಿದ್ದ ಪ್ರತಿಪಕ್ಷ ಸದಸ್ಯರಿಗೆ ನೀರು ನೀಡಿದ ಮೋದಿ – ವಿಡಿಯೋ ವೈರಲ್‌

  • ಬಡ್ಡಿ ದಂಧೆಕೋರರ ಕಿರಿಕ್-ಸಂಭ್ರಮದ ಮನೆಯಲ್ಲಿ ಆವರಿಸ್ತು ಸೂತಕದ ಛಾಯೆ

    ಬಡ್ಡಿ ದಂಧೆಕೋರರ ಕಿರಿಕ್-ಸಂಭ್ರಮದ ಮನೆಯಲ್ಲಿ ಆವರಿಸ್ತು ಸೂತಕದ ಛಾಯೆ

    ವಿಜಯಪುರ: ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಬಡ್ಡಿ ದಂಧೆಕೋರರ ಕಿರುಕುಳ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

    ಮಲ್ಲಿಕಾರ್ಜುನ್ ಜೇವೂರಕರ್ ಸಾವನ್ನಪ್ಪಿದ ವ್ಯಕ್ತಿ. ದಂಪತಿ ಜೊತೆಯಲ್ಲಿ ನೇಣು ಹಾಕಿಕೊಂಡಿದ್ದರು. ಆದರೆ ಪತ್ಮಿ ಲಕ್ಷ್ಮಿ ಹಗ್ಗ ತುಂಡಾಗಿದ್ದರಿಂದ ಪ್ರಜ್ಞೆ ತಪ್ಪಿದ್ದಾರೆ. ಮದುವೆ ವಾರ್ಷಿಕೋತ್ಸವಕ್ಕೆ ದಂಪತಿ ಸಿದ್ಧತೆ ನಡೆಸಿಕೊಂಡಿದ್ದರು. ಮನೆ ಬಳಿ ಬಂದ ಬಡ್ಡಿ ದಂಧೆಕೋರರು ಗಲಾಟೆ ಮಾಡಿದ್ದರು. ಇದರಿಂದ ಮನನೊಂದ ದಂಪತಿ ಆತ್ಮಹತ್ಯೆಗೆ ಮುಂದಾಗಿದ್ದರು.

    ದಂಪತಿ ನಗರದ ಉಪಲಿ ಬುರ್ಜ್ ಬಳಿ 7 ವರ್ಷಗಳಿಂದ ಊಟದ ಮೆಸ್ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಮೆಸ್‍ಗೆ ಹೆಚ್ಚಿನ ಬಂಡವಾಳ ಹಾಕಿ ದೊಡ್ಡ ಪ್ರಮಾಣದಲ್ಲಿ ಬೆಳೆಸಲು ನಿರ್ಧರಿಸಿ ಅದಕ್ಕಾಗಿ ಸಾಲ ಮಾಡಿದ್ದರು. ಆದರೆ ಸರಿಯಾದ ಸಮಯಕ್ಕೆ ಸಾಲ ತೀರಿಸಲಾಗದ ಕಾರಣ, ಬಡ್ಡಿ ದಿನದಿಂದ ದಿನಕ್ಕೆ ಬೆಳೆದಿತ್ತು. ಈ ಸಮಯಕ್ಕೆ ಬಡ್ಡಿದಂಧೆಕೋರರ ಕಿರಿಕ್ ಶುರುವಾಗಿತ್ತು.

    ಸಾಲ ನೀಡಿದ್ದವರು ಮನೆ ಬಳಿ ಬಂದು ಗಲಾಟೆ ಮಾಡಿದ್ದರು. ಇದರಿಂದ ಮನನೊಂದ ಮಲ್ಲಿಕಾರ್ಜುನ್, ಪತ್ನಿ ಲಕ್ಷ್ಮಿ ಜೊತೆ ನೇಣುಬಿಗಿದುಕೊಂಡಿದ್ದಾರೆ. ಆದರೆ ಲಕ್ಷ್ಮಿ ಅವರ ಹಗ್ಗ ತುಂಡಾದ ಕಾರಣ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಆದರೆ ಪತಿ ಮಲ್ಲಿಕಾರ್ಜುನ್ ಸಾವನ್ನಪ್ಪಿದ್ದಾರೆ.

    ಸ್ವಲ್ಪ ಸಮಯ ಕೊಡಿ ಅಂತ ಕೇಳಿಕೊಂಡ್ರೂ ಕೇಳದ ದಂಧೆಕೋರರು, ನಿನ್ನ ಹೆಂಡ್ತಿನ ಕಳುಹಿಸು ಅಂತ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ರಂತೆ. ಬಡ್ಡಿದಂಧೆಕೋರರ ಕಿರುಕುಳವೇ ನನ್ನ ಮಗನ ಸಾವಿಗೆ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಮೀಟರ್ ಬಡ್ಡಿದಂದೆಕೋರರ ಹಾವಳಿ ಮಿತಿಮೀರಿದೆ. ಇದನ್ನ ತಡೆಯಬೇಕಾಗಿರುವ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇನ್ನಾದರೂ ಇಂತಹ ಘಟನೆ ಮರುಕಳಿಸದಂತೆ ಜಾಗೃತ ವಹಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.