Tag: ಬಡ್ಡಿ ವ್ಯವಹಾರ

  • ಅಕ್ರಮ ಬಡ್ಡಿ ವ್ಯವಹಾರ ಶಂಕೆ – ಮಹಿಳೆಯ ಮೇಲೆ ಶೂಟೌಟ್

    ಅಕ್ರಮ ಬಡ್ಡಿ ವ್ಯವಹಾರ ಶಂಕೆ – ಮಹಿಳೆಯ ಮೇಲೆ ಶೂಟೌಟ್

    ಚಿಕ್ಕೋಡಿ: ಅಕ್ರಮವಾಗಿ ಬಡ್ಡಿ ವ್ಯವಹಾರದ ಕೋಪಕ್ಕೆ ಮಹಿಳೆಯ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿ ಶೈಲಾ ನಿರಂಜನ ಸುಭೇದಾರ್ (56) ಎಂಬುವವರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಆರೋಪಿಗಳು ನಿರಂಜನ ಸುಭೇದಾರ್ ತಲೆಗೆ ಪಿಸ್ತೂಲಿನಿಂದ ಶೂಟ್ ಮಾಡಿ ಪರಾರಿ ಆಗಿದ್ದಾರೆ. ಇತ್ತ ಕೊಲೆಯಾದ ಮಹಿಳೆ ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದರೆಂಬ ಮಾತು ಕೇಳಿ ಬರುತ್ತಿದ್ದು, ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಸಾಲ ವಸೂಲಿಗಾಗಿ ವೃದ್ಧೆಗೆ ಬಂದೂಕು ತೋರಿಸಿ ಹೆದರಿಸಿದ ಆಸಾಮಿ

    ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಕೊಲೆಗೆ ಬಡ್ಡಿ ವ್ಯವಹಾರ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಿಸೆಸ್ ವರ್ಲ್ಡ್ 2022 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಹಳ್ಳಿ ಸುಂದರಿ ನವ್ದೀಪ್ ಕೌರ್

  • ಬಡ್ಡಿ ಹಣ ನೀಡದ್ದಕ್ಕೆ ಲಾಡ್ಜ್‌ನಲ್ಲಿ ಕೂಡಿ ಹಾಕಿ ಕಿರುಕುಳ

    ಬಡ್ಡಿ ಹಣ ನೀಡದ್ದಕ್ಕೆ ಲಾಡ್ಜ್‌ನಲ್ಲಿ ಕೂಡಿ ಹಾಕಿ ಕಿರುಕುಳ

    ಬೆಂಗಳೂರು: ಬಡ್ಡಿ ಹಣ ನೀಡದ್ದಕ್ಕೆ ಲಾಡ್ಜ್‌ನಲ್ಲಿ ಕೂಡಿ ಹಾಕಿ ಕಿರುಕುಳ ನೀಡಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.

    ನೆಲಮಂಗಲದ ವಿನಯ್ ಕುಮಾರ್ ಕಿರುಕುಳಕ್ಕೆ ಒಳಗಾದ ಆಟೋ ಚಾಲಕ. ಫೈನಾನ್ಸಿಯರ್ ಎಸ್‍ಎಲ್‍ಎನ್ ನವೀನ್ ನಿಂದ ಆಟೋ ಚಾಲಕ ವಿನಯ್ ಕುಮಾರ್ 10 ವರ್ಷಗಳ ಹಿಂದೆ 35 ಸಾವಿರ ರೂ. ಪಡೆದಿದ್ದರು. ಪ್ರತಿ ತಿಂಗಳು ಬಡ್ಡಿ ಕಟ್ಟುತ್ತಿದ್ದ. ಆದರೆ ಇತ್ತೀಚೆಗೆ ಬಡ್ಡಿ ಹಣ ನೀಡುವುದನ್ನು ನಿಲ್ಲಿಸಿದ್ದರಿಂದ ಲಾಡ್ಜ್‌ನಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಇದನ್ನೂ ಓದಿ: ತಂದೆಯಿಂದಲೇ ಮಗನಿಗೆ ನೇಣು – ದೃಶ್ಯ ನೋಡಿ ರೂಮಲ್ಲಿ ಓಡಾಡಿ ಕಣ್ಣೀರಿಟ್ಟ ತಾಯಿ

    ಈ ಕುರಿತು ವಿನಯ್ ಕುಮಾರ್ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆಕೆಯ ಜೊತೆಗೆ ಲಾಡ್ಜ್ ಗೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿ ವಿನಯ್ ಕುಮಾರ್ ನನ್ನು ಬಂಧನ ಮುಕ್ತಗೊಳಿಸಿದ್ದಾರೆ. ಯಾರು ನಿನ್ನನ್ನು ಕೂಡಿ ಹಾಕಿದ್ದು ಎಂದು ಪೊಲೀಸರು ಪ್ರಶ್ನಿಸಿದಾಗ ವಿನಯ್ ಕುಮಾರ್, ಭಯದಿಂದ ಆರೋಪಿಗಳ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರೆ. ಇತ್ತ ಕಣ್ಣೀರು ಹಾಕುತ್ತಿದ್ದ ಪತ್ನಿ, ನಮಗೆ ಎರಡು ತಿಂಗಳು ಅವಕಾಶ ಕೊಡಿ. ಅಸಲು ಹಾಗೂ ಬಡ್ಡಿಯನ್ನು ಕೊಡುತ್ತೇವೆ ಎಂದು ಮನವಿ ಮಾಡಿಕೊಂಡಿದ್ದೇವು. ಆದರೆ ಈಗ ಪತಿಯನ್ನ ತಂದು ಕೂಡಿ ಹಾಕಿ ಕಿರುಕುಳ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

    ನನಗೆ ಗೊತ್ತಿಲ್ಲದಂತೆ ಪತಿ ವಿನಯ್ ಕುಮಾರ್ ಫೈನಾನ್ಸಿಯರ್ ನವೀನ್ ಬಳಿ ಒಟ್ಟು 35 ಸಾವಿರ ರೂ. ಪಡೆದಿದ್ದರು. ಈ ವಿಚಾರವನ್ನು ಇತ್ತೀಚೆಗಷ್ಟೇ ನನಗೆ ಹೇಳಿದ್ದರು. ನಾನು ಕೂಲಿ ಮಾಡಿ ಕೂಡಿಟ್ಟಿದ್ದ 10 ಸಾವಿರ ರೂ. ಕೊಟ್ಟಿದ್ದೇನೆ. ಉಳಿದ ಹಣಕ್ಕೆ ಬಡ್ಡಿ ನೀಡುತ್ತಿದ್ದು, ಎಲ್ಲ ಹಣವನ್ನು ಮರು ಪಾವತಿ ಮಾಡಲು ಕಾಲಾವಕಾಶ ಕೇಳಿದ್ದೇವು. ಆದರೆ ನವೀನ್ ಮನೆಗೆ ಬಂದು ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು. ಈಗ ಪತಿಯನ್ನೇ ಕೂಡಿ ಹಾಕಿದ್ದಾರೆ ಎಂದು ವಿನಯ್ ಕುಮಾರ್ ಪತ್ನಿ ಆರೋಪಿಸಿದ್ದಾರೆ.

    ನಿನ್ನೆ ರಾತ್ರಿ 8 ಗಂಟೆಗೆ ನನ್ನನ್ನು ಎಳೆದುಕೊಂಡು ಬಂದು ಕೂಡಿ ಹಾಕಿದ್ದಾರೆ ಎಂದು ಪತಿ ವಿನಯ್ ಕುಮಾರ್ ಫೋನ್ ಮಾಡಿ ಹೇಳಿದ್ದರು. ಅವರು ಫೋನ್ ಮಾಡಿದಾಗ ರಾತ್ರಿ 12 ಗಂಟೆಯಾಗಿತ್ತು. ಮನೆಯಲ್ಲಿ ಒಬ್ಬಳೆ ಇದ್ದಿದ್ದರಿಂದ ಪೊಲೀಸ್ ಠಾಣೆಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರು ಇಡುತ್ತ ಅಳಲು ತೋಡಿಕೊಂಡರು.

  • ಮೀಟರ್ ಬಡ್ಡಿವ್ಯವಹಾರ ಮಾಡುತ್ತಾ ಶಾಲೆಗೆ ಬಾರದ ಶಿಕ್ಷಕನ ವಿರುದ್ಧ ಪ್ರತಿಭಟನೆ!

    ಮೀಟರ್ ಬಡ್ಡಿವ್ಯವಹಾರ ಮಾಡುತ್ತಾ ಶಾಲೆಗೆ ಬಾರದ ಶಿಕ್ಷಕನ ವಿರುದ್ಧ ಪ್ರತಿಭಟನೆ!

    ಕೋಲಾರ: ಮೀಟರ್ ಬಡ್ಡಿವ್ಯವಹಾರ ಮಾಡಿಕೊಂಡು ಶಾಲೆಗೆ ಬಾರದ ಶಿಕ್ಷಕನನ್ನು ವರ್ಗಾವಣೆ ಮಾಡಿ, ಬೇರೆ ಶಿಕ್ಷರನ್ನು ನೇಮಿಸುವಂತೆ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

    ಕೋಲಾರ ತಾಲೂಕಿನ ನಂದಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಂಜುಂಡಗೌಡ, ಊರಿನಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದು, ಶಾಲೆಗೆ ಸರಿಯಾಗಿ ಹಾಜರಾಗುತ್ತಿಲ್ಲ. ಅಲ್ಲದೇ ಕಳೆದ 5 ವರ್ಷಗಳಿಂದಲೂ ಶಿಕ್ಷಕ ಶಾಲೆಗೆ ಸರಿಯಾಗಿ ಬಾರದೆ ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

    ಶಾಲೆಯಲ್ಲಿ ಸುಮಾರು 70 ಮಕ್ಕಳು ಕಲಿಯುತ್ತಿದ್ದು, ಶಿಕ್ಷಕನ ವರ್ತನೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಹೈರಾಣಾಗಿದ್ದಾರೆ. ಅಲ್ಲದೇ ಇದನ್ನು ಪ್ರಶ್ನಿಸುವ ಸಹ ಶಿಕ್ಷಕರ ಮೇಲೆಯೂ ರಾಜಕೀಯ ಪ್ರಭಾವ ಬಳಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಶಿಕ್ಷಕನ ವರ್ತನೆಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಶಿಕ್ಷಕನನ್ನು ಕೂಡಲೇ ವರ್ಗಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಎಸ್‍ಐ ಪತ್ನಿಯಿಂದ ಮೀಟರ್ ಬಡ್ಡಿ-ಪಂಚಾಯ್ತಿ ಉಪಾಧ್ಯಕ್ಷನ ಪತ್ನಿಯೂ ಸಾಥ್!

    ಎಎಸ್‍ಐ ಪತ್ನಿಯಿಂದ ಮೀಟರ್ ಬಡ್ಡಿ-ಪಂಚಾಯ್ತಿ ಉಪಾಧ್ಯಕ್ಷನ ಪತ್ನಿಯೂ ಸಾಥ್!

    ಕೊಪ್ಪಳ: ಜಿಲ್ಲೆಯ ಕಾರಟಗಿ ಎಎಸ್‍ಐ ವೆಂಕಟೇಶ್ ತಮ್ಮ ಪತ್ನಿಯನ್ನು ಮುಂದೆ ಬಿಟ್ಟು ಭರ್ಜರಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪವೊಂದು ಕೇಳಿ ಬರುತ್ತಿದೆ.

    ಚಿಕ್ಕದಾಗಿ ಬಡ್ಡಿ ವ್ಯವಹಾರ ಮಾಡುತ್ತಾರೆ ಎಂದು ತಿಳಿದರೆ ತಪ್ಪು. ಅಸಲಿಗೆ ಎಎಸ್‍ಐ ಅವರ ಪತ್ನಿ ಪದ್ಮಾವತಿ 12 ಲಕ್ಷ ರೂ. ಸಾಲ ಪಡೆದಿದ್ದ ಗಂಗಾವತಿ ತಾಲೂಕಿನ ಉಳೇನೂರು ಗ್ರಾಮದ ಹೊನ್ನುರಪ್ಪನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ.

    ಇನ್ನು ರೈತ ಉಳಿದ 1 ಎಕರೆಯಲ್ಲಿ ಜಮೀನಿನಲ್ಲಿ ಉಳಿಮೆ ಮಾಡಲು ಹೋದ್ರೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕ್ತಿದ್ದಾರೆ ಅಂತ ನೊಂದ ಕುಟುಂಬ ಎಸ್‍ಪಿಗೆ ದೂರು ನೀಡಿದೆ. 12 ಲಕ್ಷದ ಬದಲು 35 ಲಕ್ಷ ರೂ.ಯ ಪತ್ರ ಬರೆಸಿಕೊಂಡು ಈಗ ರೈತನ 3 ಎಕರೆ ಜಮೀನನ್ನೇ ಕಬಳಿಸಿದ್ದಾರೆ ಎಂದು ಹೊನ್ನುರಪ್ಪರ ಮಗ ಅಂಬಣ್ಣ ಆರೋಪ ಮಾಡಿದ್ದಾರೆ.

    ಎಎಸ್‍ಐ ವೆಂಕಟೇಶ್‍ರ ಪತ್ನಿ ಪದ್ಮಾವತಿಗೆ ಬೆನ್ನೆಲುಬಾಗಿರೋದು ಗಂಗಾವತಿ ತಾ.ಪಂ ಉಪಾಧ್ಯಕ್ಷ ಗವಿಸಿದ್ದಪ್ಪ, ಆತನ ಹೆಂಡ್ತಿ ಶಾರದಮ್ಮ ಉಳೇನೂರು ಗ್ರಾಪಂ ಅಧ್ಯಕ್ಷೆಯ ಬೆಂಬಲವಿದೆ ಎಂದು ರೈತ ಕುಟುಂಬ ಆರೋಪಿಸುತ್ತಿದೆ.