Tag: ಬಡ್ಡಮಗನ್ ಲೈಫು

  • ನಮ್ಮದೇ ಮನಸ್ಥಿತಿಗೆ ಕನ್ನಡಿ ಹಿಡಿದಂಥಾ ಬಡ್ಡಿಮಗನ್ ಲೈಫು!

    ನಮ್ಮದೇ ಮನಸ್ಥಿತಿಗೆ ಕನ್ನಡಿ ಹಿಡಿದಂಥಾ ಬಡ್ಡಿಮಗನ್ ಲೈಫು!

    ಗ್ರೀನ್ ಚಿಲ್ಲಿ ಎಂಟರ್ ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಪವನ್ ನಿರ್ಮಾಣ ಮಾಡಿರುವ ಬಡ್ಡಿಮಗನ್ ಲೈಫು ಚಿತ್ರ ಈ ವಾರ ಡಿ.27 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹಾಡು ಮತ್ತು ಟ್ರೇಲರ್ ಗಳ ಮೂಲಕ ಸಖತ್ ಕ್ರೇಜ್ ಸೃಷ್ಟಿ ಮಾಡಿರೋ ಈ ಚಿತ್ರ ಹಳ್ಳಿಗಾಡಿನ ಕಥೆಯೊಂದಿಗೆ, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ಕಂಟೆಂಟಿನ ಸುಳಿವಿನೊಂದಿಗೆ ಸಮ್ಮೋಹಕವಾದ ವಾತಾವರಣವನ್ನೇ ನಿರ್ಮಿಸಿಕೊಂಡಿದೆ. ಯಶಸ್ವಿ ಸಿನಿಮಾವೊಂದು ಬಿಡುಗಡೆಯ ಹಂತದವರೆಗೆ ದಾಟಿಕೊಳ್ಳುವ ಘಟ್ಟಗಳಿವೆಯಲ್ಲಾ? ಅದೆಲ್ಲವನ್ನೂ ಸಮರ್ಥವಾಗಿಯೇ ದಾಟಿಕೊಂಡು ಬಂದಿರುವ ಈ ಸಿನಿಮಾದತ್ತ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ. ಅವರ ಮುಂದೆ ಬಡ್ಡಿಮಗನ್ ಲೈಫು ಈ ವಾರವೇ ಅನಾವರಣಗೊಳ್ಳಲಿದೆ.

    ಈ ಚಿತ್ರವನ್ನು ಪವನ್ ಮತ್ತು ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಜೊತೆಯಾಗಿಯೇ ಸಿನಿಮಾ ಕನಸು ಕಂಡು ಒಂದಷ್ಟು ಕ್ರಿಯೇಟಿವ್ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದ ಇವರಿಬ್ಬರೂ ಸೇರಿಕೊಂಡೇ ಮನುಷ್ಯ ಸಹಜ ಮನೋಭೂಮಿಕೆಯನ್ನು ಆಧಾರವಾಗಿಟ್ಟುಕೊಂಡಿರುವಂಥಾ ಪೊಗದಸ್ತಾದ ಕಥೆಯೊಂದನ್ನು ಸಿದ್ಧಡಿಸಿಕೊಂಡು ಈ ಕಥೆಯನ್ನು ರೂಪಿಸಿದ್ದಾರೆ. ಮನೋರಂಜನೆಯನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು ಬದುಕಿಗೆ ಲಹತ್ತಿರಾದ ಅಂಶಗಳನ್ನೊಳಗೊಂಡಿರುವ ಈ ಚಿತ್ರ ಈಗಾಗಲೇ ಏನ್ ಚಂದಾನೋ ತಕ್ಕೋ ಎಂಬ ಹಾಡಿನ ಮೂಲಕವೇ ನೈಜ ಪ್ರಚಾರದ ವಿರಾಟ್ ರೂಪ ಪ್ರದರ್ಶಿಸಿದೆ.

    ಸಾಮಾನ್ಯವಾಗಿ ಜನರಿಗೆ ತಮ್ಮ ವಲಯದಲ್ಲಿ ಅದೆಂಥಾದ್ದೇ ವಾತಾವರಣ ಇದ್ದರೂ ಪರರ ಬದುಕಿನ ಬಗ್ಗೆ ಎಲ್ಲಿಲ್ಲದ ಕ್ಯೂರಿಯಾಸಿಟಿ ಇರುತ್ತದೆ. ಅದರಲ್ಲಿಯೂ ಒಂದಷ್ಟು ಕುಟುಂಬಗಳಿರುವ, ದಿನಾ ಬೆಳಗೆದ್ದು ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುವಂಥಾ ವಾತಾವರಣವಿರುವ ಹಳ್ಳಿಗಾಡುಗಳ ಕಡೆಯಲ್ಲಿ ಇಂಥಾದ್ದೆಲ್ಲ ಮತ್ತಷು ತೀವ್ರವಾಗಿರುತ್ತದೆ. ಇದೇ ಭೂಮಿಕೆಯಲ್ಲಿ ರೂಪುಗೊಂಡು ದೃಷ್ಯೀಕರಿಸಿರುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಇದರ ಒಟ್ಟಾರೆ ರೂಪುರೇಷೆಗಳೇನೆಂಬುದು ನವೀನ್ ಸಜ್ಜು ಹಾಡಿರುವ ಏನ್ ಚಂದಾನೋ ತಕ್ಕೋ ಎಂಬ ಹಾಡಿನ ರೂಪದಲ್ಲಿಯೇ ಅನಾವರಣಗೊಂಡಿದೆ. ಒಟ್ಟಾರೆಯಾಗಿ ಪ್ರತೀ ಕ್ಷಣಂವೂ ಭರ್ಜರಿ ಮನರಂಜನೆ ಮತ್ತು ಲವಲವಿಕೆಯಿಂದ ಕೂಡಿರುವ ಈ ಚಿತ್ರ ಈ ವಾರ ನಿಮ್ಮೆಲ್ಲರ ಮುಂದೆ ಅನಾವರಣಗೊಳ್ಳಲಿದೆ.

  • ಬಡ್ಡಿಮಗನ್ ಲೈಫು: ಟ್ರೇಲರ್ ತುಂಬಾ ಮಜವಾದ ಕಥೆಯ ಕಂಪು!

    ಬಡ್ಡಿಮಗನ್ ಲೈಫು: ಟ್ರೇಲರ್ ತುಂಬಾ ಮಜವಾದ ಕಥೆಯ ಕಂಪು!

    ಗ್ರೀನ್ ಚಿಲ್ಲಿ ಎಂಟರ್‍ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಪವನ್ ಕುಮಾರ್ ನಿರ್ಮಾಣ ಮಾಡಿರುವ ಚಿತ್ರ ಬಡ್ಡಿ ಮಗನ್ ಲೈಫು. ಬದುಕಿಗೆ ಹತ್ತಿರಾದ ಶೀರ್ಷಿಕೆಯ ಕಾರಣದಿಂದಲೇ ಆರಂಭದಿಂದಲೂ ಚರ್ಚೆಗೆ ಗ್ರಾಸವಾಗುತ್ತಾ ಅದನ್ನೇ ಕುತೂಹಲವಾಗಿ ಮಾರ್ಪಾಡು ಮಾಡುವಲ್ಲಿ ಚಿತ್ರತಂಡ ಯಶ ಕಂಡಿತ್ತು. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ `ಏನ್ ಚಂದಾನೊ ತಕ್ಕೋ’ ಎಂಬ ಹಾಡಿನ ಮೂಲಕವೇ ಭರ್ಜರಿ ಮೈಲೇಜು ಗಿಟ್ಟಿಸಿಕೊಂಡಿದ್ದ ಈ ಚಿತ್ರದ ಮಜವಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ.

    ಪವನ್-ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾ ಇದೇ ತಿಂಗಳ 27ರಂದು ಬಿಡುಗಡೆಯಾಗಲಿದೆ. ಈಗಾಗಲೇ ತುಂಬಾನೇ ನಿರೀಕ್ಷೆ ಮೂಡಿಸಿರೋ ಬಡ್ಡಿಮಗನ್ ಲೈಫು ಇದೀಗ ಮತ್ತೊಮ್ಮೆ ಟ್ರೇಲರ್ ಮೂಲಕ ಭಾರೀ ಸದ್ದು ಮಾಡುತ್ತಿದೆ. ಹರಿಕಥೆ ಶೈಲಿಯ ಪರಿಣಾಮಕಾರಿ ನಿರೂಪಣೆಯೊಂದಿಗೆ ತೆರೆದುಕೊಳ್ಳುವ ಈ ಟ್ರೇಲರ್ ಒಟ್ಟಾರೆ ಸಿನಿಮಾ ಕಥೆಯನ್ನು ಇಂಟರೆಸ್ಟಿಂಗ್ ಆಗಿ ತೆರೆದಿಟ್ಟಿದೆ. ಬಡ್ಡಿಮಗನ್ ಲೈಫು ಅದೆಷ್ಟು ಮನೋರಂಜನಾತ್ಮಕವಾಗಿ ಮೂಡಿ ಬಂದಿದೆ ಎಂಬುದಕ್ಕೂ ಈ ಟ್ರೇಲರ್ ನಲ್ಲಿ ಯಥೇಚ್ಛವಾಗಿಯೇ ಸಾಕ್ಷಿಗಳು ಸಿಕ್ಕಿವೆ.

    ಈ ಸಿನಿಮಾದಲ್ಲಿ ಬಡ್ಡಿ ಸೀನಪ್ಪ ಎಂಬ ಕ್ಯಾರೆಕ್ಟರ್ ಮೇಜರ್ ಆದ ಪಾತ್ರ ವಹಿಸುತ್ತೆ. ಊರಿಗೆಲ್ಲ ಬಡ್ಡಿಗೆ ಕಾಸು ಕೊಟ್ಟು ಜೀವ ತಿನ್ನೋ ಈತನ ಕೇಂದ್ರದಿಂದಲೇ ಇಡೀ ಕಥೆ ಕದಲುತ್ತದೆಯಂತೆ. ಬಡ್ಡಿ ಕೊಟ್ಟವನ ಕಾಟ, ತೆಗೆದುಕೊಂಡವರ ಪಡಿಪಾಟಲಿನ ಜೊತೆ ಜೊತೆಗೆ ಹಳ್ಳಿ ಬದುಕಿನ ದರ್ಶನ ಮಾಡಿಸಲಿರುವ ಈ ಚಿತ್ರದಲ್ಲಿ ಮುದ್ದು ಮುದ್ದಾದೊಂದು ಪ್ರೇಮಕಥೆಯೂ ಇದೆ. ಅದೆಲ್ಲದರ ಛಾಯೆಯೊಂದಿಗೆ ಭರ್ಜರಿ ಮನೋರಂಜನೆಯ ಕುರುಹುಗಳು, ವಿಭಿನ್ನವಾದ ಪಾತ್ರಗಳನ್ನು ಪರಿಚಯಿಸುತ್ತಾ ಈ ಟ್ರೇಲರ್ ಬಡ್ಡಿಮಗನ್ ಲೈಫನ್ನು ಬೇಗನೆ ನೋಡಬೇಕೆಂಬ ಕಾತರ ಮೂಡಿಸುವಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

    ಪ್ರತಿಭಾವಂತ ನಟ ಬಲ ರಾಜವಾಡಿ ಈ ಸಿನಿಮಾದಲ್ಲಿ ಬಡ್ಡಿ ಸೀಮಪ್ಪನಾಗಿ ಅಬ್ಬರದ ನಟನೆ ನೀಡಿದ್ದಾರೆ. ಅವರದ್ದಲ್ಲಿ ಈ ಹಿಂದೆಂದೂ ನಟಿಸಿರದಂತಹ, ಎಲ್ಲರಿಗೂ ತಟ್ಟುವಂತಹ ಪಾತ್ರವಂತೆ. ಐಶ್ವರ್ಯಾ ರಾವ್ ಮತ್ತು ಸಚಿನ್ ಶ್ರೀಧರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಪೂರ್ಣಚಂದ್ರ ತೇಜಸ್ವಿ, ಮಂಡ್ಯ ವನಿತಾ, ಪದ್ಮನಾಭ, ರಜನೀಕಾಂತ್, ಮೈಮ್ ರಮೇಶ್ ಮುಂತಾದವರ ತಾರಾಗಣವಿದೆ. ಈ ಸಿನಿಮಾ ಇದೇ ತಿಂಗಳ 27ರಂದು ತೆರೆಗಾಣಲಿದೆ.