Tag: ಬಡಿಎ

  • ಬೇಲಿಯೇ ಎದ್ದು ಹೊಲ ಮೇಯ್ದ ಕಥೆ – ಸರ್ಕಾರಿ ಸಂಸ್ಥೆಗಳಿಂದಲೇ ಕೆರೆ ಗುಳುಂ

    ಬೇಲಿಯೇ ಎದ್ದು ಹೊಲ ಮೇಯ್ದ ಕಥೆ – ಸರ್ಕಾರಿ ಸಂಸ್ಥೆಗಳಿಂದಲೇ ಕೆರೆ ಗುಳುಂ

    ಬೆಂಗಳೂರು: ಉದ್ಯಾನನಗರಿ ಬೆಂಗಳೂರು(Bengaluru) ಕಾಂಕ್ರೀಟ್ ಕಾಡು ಆಗುವ ಭರದಲ್ಲಿ ತನ್ನ ಮೂಲ ಸ್ವರೂಪವನ್ನ ಕಳೆದುಕೊಂಡು ಎಷ್ಟೋ ವರ್ಷಗಳಾಗಿದೆ. ಮಳೆ(Rain) ಅನಾಹುತದ ನಂತ್ರ ಒತ್ತುವರಿ ಬಗ್ಗೆ ವರಿ ಮಾಡಿರೋ ಸರ್ಕಾರ ಕೆರೆ ಒತ್ತುವರಿ(Lake Encroachment) ಪಟ್ಟಿ ಬಿಡುಗಡೆ ಮಾಡಿದೆ. ವಿಪರ್ಯಾಸ ಅಂದರೆ ಖಾಸಗಿಯವರಿಂದ ಆದ ಒತ್ತುವರಿಗಿಂತ ಸರ್ಕಾರಿ ಸಂಸ್ಥೆಗಳಿಂದಲೇ ಆದ ಒತ್ತುವರಿಯೇ ಹೆಚ್ಚು.

    ಮಾಯವಾದ ಕೆರೆಗಳ ಬಹುಪಾಲನ್ನು ಸರ್ಕಾರಿ ಸಂಸ್ಥೆಗಳೇ ನುಂಗಿವೆ. ಜನ, ಖಾಸಗಿಯವರತ್ತ ಬೊಟ್ಟು ಮಾಡುತ್ತಿರುವ ಸರ್ಕಾರ, ತನ್ನಿಂದಲೇ ಆದ ತಪ್ಪುಗಳತ್ತ ನೋಡುತ್ತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಕೆರೆಗಳನ್ನೇ ಗುಳುಂ ಮಾಡಿರೋ ಸರ್ಕಾರ, ತಪ್ಪಿತಸ್ಥ ಸ್ಥಾನದಲ್ಲಿ ನಿಂತಿದೆ.. ಈ ಪಟ್ಟಿಯಲ್ಲಿ ಬಿಡಿಎ(BDA), ಬಿಬಿಎಂಪಿ(BBMP), ಸ್ಲಂಬೋರ್ಡ್, ಬಿಎಂಟಿಸಿ, ಗೃಹ ಮಂಡಳಿ, ಕೆಐಎಡಿಬಿ, ರೈಲ್ವೆ ಸೇರಿ ಅನೇಕ ಇಲಾಖೆಗಳಿವೆ. ಇದನ್ನೂ ಓದಿ: ವಿಮಾನದಲ್ಲಿ ಭಾರತಕ್ಕೆ ಬರುತ್ತಿದೆ 8 ಚೀತಾ – ವಿಶೇಷತೆ ಏನು? ತಯಾರಿ ಹೇಗೆ?

    ಅದರಲ್ಲೂ ಬಿಡಿಎ ಒತ್ತುವರಿ ಶೂರ ಎಂದ್ರೆ ತಪ್ಪಲ್ಲ. ಯಾಕೆಂದರೆ ಅತೀ ಹೆಚ್ಚು ಕೆರೆ ಒತ್ತುವರಿ ಬಿಡಿಎನಿಂದಲೇ ಆಗಿದೆ. ಕೋಳಿವಾಡ ಸಮಿತಿ ನೀಡಿದ ವರದಿಯನ್ನೇ ಆಧಾರವಾಗಿರಿಸಿಕೊಂಡು ಬಿಬಿಎಂಪಿ 201 ಕೆರೆಗಳು ಒತ್ತುವರಿ ಆಗಿರೋ ಬಗ್ಗೆ ದಾಖಲೆ ಸಿದ್ದಪಡಿಸಿದೆ

    ಕೆರೆ ನುಂಗಣ್ಣರು ಯಾರು:
    * ಬಿಡಿಎ – 128.5 ಎಕರೆ
    * ಬಿಬಿಎಂಪಿ -85.07 ಎಕರೆ
    * ಸ್ಲಂ ಬೋರ್ಡ್ – 30.12 ಎಕರೆ
    * ಮಾಲಿನ್ಯ ನಿಯಂತ್ರಣ ಮಂಡಳಿ – 15.24
    * ಅರಣ್ಯ – 13.23 ಎಕರೆ
    * ರೈಲ್ವೆ – 12.63 ಎಕರೆ
    * ಖಾಸಗಿಯವರು – 200 ಎಕರೆ

    ಸಿಎಜಿ ವರದಿ ಸಲ್ಲಿಕೆ:
    ಬೆಂಗಳೂರು ರಾಜಕಾಲುವೆ ಒತ್ತುವರಿ ತೆರವು ಸಂಬಂಧ ಸಿಎಜಿ 2020-21ರ ಸಾಲಿನ ವರದಿ ಪ್ರಕಟಿಸಿದೆ. ಈ ವರದಿಯಲ್ಲಿ ಕೋರ್ಟ್ ನಿರ್ದೇಶನವನ್ನು ಬಿಬಿಎಂಪಿ ಗಾಳಿಗೆ ತೂರಿದೆ ಎಂದು ಉಲ್ಲೇಖಿಸಲಾಗಿದೆ. ಮಳೆ ನೀರುಗಾಲುವೆ ವ್ಯವಸ್ಥೆ ಹಾಳಾಗಲು ಬಿಬಿಎಂಪಿ ಕಾರಣ ಎಂದಿದೆ. ಆರ್‍ಎಂಪಿ-2015ರ ಪ್ರಕಾರ ರಾಜಕಾಲುವೆ ಎರಡು ಬದಿಯಲ್ಲಿ ಸ್ಪಷ್ಟವಾಗಿ ಬಫರ್ ಜೋನ್ ಗುರುತು ಮಾಡಬೇಕು. ಆದರೆ ಕೆಎಂಸಿ ಆಕ್ಟ್ 1976ರ ಸೆಕ್ಷನ್ 58 ಪ್ರಕಾರ ಗೊತ್ತು ಮಾಡಿದ ಕಾಲುವೆ ಗಡಿಗಳನ್ನು ಪರಿಶೀಲನೆ ಮಾಡಿದಾಗ, ಅವುಗಳ ನಿರ್ವಹಣೆ ಆಗಿಲ್ಲ ಎನ್ನುವುದು ಗೊತ್ತಾಗಿದೆ. ಬಿಬಿಎಂಪಿಯಿಂದಲೇ ರಾಜ ಕಾಲುವೆ ಬಫರ್ ಜೋನ್ ನಿಯಮ ಪಾಲನೆ ಆಗದಿರುವುದೇ ಅತಿಕ್ರಮಣಕ್ಕೆ ಕಾರಣ ಎಂದು ಸಿಎಜಿ ಹೇಳಿದೆ. ಇದನ್ನೂ ಓದಿ: ಮೋದಿ ಹುಟ್ಟುಹಬ್ಬ – ನಾಳೆ ಹುಟ್ಟುವ ಮಕ್ಕಳಿಗೆ ಚಿನ್ನದುಂಗುರ ನೀಡಲಿದೆ ಬಿಜೆಪಿ

    ಸಿಎಜಿ ವರದಿಯಲ್ಲಿ ಏನಿದೆ?
    * 2016-2020ರವರೆಗೂ 2,626 ಕಡೆ ರಾಜಕಾಲುವೆ ಒತ್ತುವರಿ
    * 2016-2021ರವರೆಗೂ 1 ಸಾವಿರಕ್ಕೂ ಹೆಚ್ಚು ಒತ್ತುವರಿ ತೆರವು
    * ಅಧಿಕಾರಿಗಳು, ಗುತ್ತಿಗೆದಾರರಿಂದ ಒತ್ತುವರಿ ತೆರವಿನ ನಷ್ಟ ಭರಿಸಿ

    Live Tv
    [brid partner=56869869 player=32851 video=960834 autoplay=true]

  • ಆರಗ, VVIP ವ್ಯಕ್ತಿಗಳಿಗೆ ನಿವೇಶನ – ಬಿಡಿಎ ಆಯುಕ್ತರ ವರ್ಗಾವಣೆಗೆ ಸುಪ್ರೀಂ ಸೂಚನೆ

    ಆರಗ, VVIP ವ್ಯಕ್ತಿಗಳಿಗೆ ನಿವೇಶನ – ಬಿಡಿಎ ಆಯುಕ್ತರ ವರ್ಗಾವಣೆಗೆ ಸುಪ್ರೀಂ ಸೂಚನೆ

    ನವದೆಹಲಿ: ಆರಗ ಜ್ಞಾನೇಂದ್ರ ಸೇರಿ ಇತರೆ ವಿವಿಐಪಿಗಳಿಗೆ ನಿವೇಶನ ಹಂಚಿಕೆ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಆಯುಕ್ತ ಎಂ.ಬಿ ರಾಜೇಶ್ ಗೌಡ ಅವರನ್ನು ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಬಹು ಜನರಿಗೆ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದಕ್ಕೆ ಕೋರ್ಟ್‌ ರಾಜೇಶ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

    ಡಾ.ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಎಸ್‌.ಅಬ್ದುಲ್‌ ನಜೀರ್ ಹಾಗೂ ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಅಧಿಕಾರಿಗಳಿಗೆ ಚಾಟಿ ಬೀಸಿತು. 2021ರ ಅಕ್ಟೋಬರ್‌ 29ರಂದು ಸುಪ್ರೀಂ ಕೋರ್ಟ್‌ ಹೊರಡಿಸಿದ ಆದೇಶಕ್ಕೆ ವ್ಯತಿರಿಕ್ತವಾಗಿ ತೀರ್ಮಾನ ತೆಗೆದುಕೊಂಡಿದ್ದಕ್ಕೆ ಬಿಡಿಎ ವಿರುದ್ಧ ಕೆಂಡಾಮಂಡಲವಾಗಿದೆ.

    ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಪರ್ಯಾಯ ನಿವೇಶನಗಳ ಹಂಚಿಕೆಯನ್ನು ಮಾಡುವಂತಿಲ್ಲ. ನಾವು ನಿರ್ಬಂಧಿಸಿದ್ದರೂ ಹಂಚಿಕೆ ಮಾಡಿ ಆದೇಶವನ್ನು ಉಲ್ಲಂಘಿಸಿ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದೆ ಎಂದು ಹೇಳಿ ಚಾಟಿ ಬೀಸಿದೆ.

    ಏನಿದು ಪ್ರಕರಣ?
    2021ರ ಅಕ್ಟೋಬರ್‌ 29ರಂದು ಮರು ಸ್ವಾಧೀನ ಪಡೆದಿರುವ ಅಥವಾ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಗಳ ನಿವೇಶನಗಳನ್ನು ಸಾರ್ವಜನಿಕ ಹರಾಜಿನ ಮೂಲಕ ಮಾತ್ರ ಹಂಚಿಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಆದರೆ ಬಿಡಿಎ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಆರಗ ಜ್ಞಾನೇಂದ್ರ ಸೇರಿದಂತೆ ನಾಲ್ವರಿಗೆ ಪರ್ಯಾಯ ನಿವೇಶನ ಹಂಚಿಕೆ ಮಾಡಿತ್ತು. ಬಳಿಕ ಮಧ್ಯಂತರ ಅರ್ಜಿ ಸಲ್ಲಿಸಿ ತನ್ನ ಆದೇಶವನ್ನು ಮಾರ್ಪಾಡು ಮಾಡುವಂತೆ ಮನವಿ ಮಾಡಿತ್ತು. ಇದನ್ನೂ ಓದಿ: ಕಾಂಗ್ರೆಸ್‌ಗೆ ಗುಲಾಂ ನಬಿ ಆಜಾದ್‌ ಗುಡ್‌ಬೈ

    ಬಿಡಿಎ ವಾದ ಏನು?
    ಆಯುಕ್ತರು ಕೋವಿಡ್‌ ಪೀಡಿತರಾಗಿದ್ದಾರೆ. ಹಾಗಾಗಿ ಅವರು ಇಂದಿನ ವಿಚಾರಣೆಗೆ ಹಾಜರಾಗಿಲ್ಲ. ನಿವೇಶನಗಳನ್ನು ಹಂಚಿಕೆ ಮಾಡುವ ಮೊದಲು ಆದೇಶ ಮಾರ್ಪಾಡು ಮಾಡುವಂತೆ ಅರ್ಜಿ ಸಲ್ಲಿಸಬೇಕಿತ್ತು. ಕೋರ್ಟ್‌ ಆದೇಶ ಉಲ್ಲಂಘನೆಯಾಗಿದ್ದಕ್ಕೆ ಕ್ಷಮೆ ಕೋರುತ್ತೇವೆ ಎಂದು ವಕೀಲರು ಹೇಳಿದರು.

    ಪೀಠ ಹೇಳಿದ್ದೇನು?
    ಕೋರ್ಟ್‌ ಆದೇಶ ಉಲ್ಲಂಘಿಸಿದ ಬಳಿಕ ಆಯುಕ್ತರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ ಎಂದರೆ ಅರ್ಥವೇನು? ಜಿ ಕೆಟಗರಿ ನಿವೇಶನವನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಆಯುಕ್ತರಿಗೆ ಕೋರ್ಟ್‌ ಆದೇಶಗಳ ಬಗ್ಗೆ ಗೌರವವೇ ಇಲ್ಲ. ಆದೇಶಕ್ಕೆ ಅವಿಧೇಯತೆ ತೋರಿದ ರಾಜೇಶ ಗೌಡ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಂದಿನಿಂದ ಅವರು ಯಾವುದೇ ಪ್ರಮುಖ ಆದೇಶಗಳಿಗೆ ಸಹಿ ಹಾಕುವಂತಿಲ್ಲ. ಇದು ಕೋರ್ಟ್‌ ಆದೇಶ. ಬಿಡಿಎ ಕಾರ್ಯದರ್ಶಿ ಹಾಗೂ ಉಪ ಕಾರ್ಯದರ್ಶಿಯವರು ಅಕ್ರಮ ಹಂಚಿಕೆಯಲ್ಲಿ ಭಾಗಿಯಾಗಿದ್ದು ಅವರನ್ನು ವರ್ಗಾವಣೆ ಮಾಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ.

    Live Tv
    [brid partner=56869869 player=32851 video=960834 autoplay=true]