Tag: ಬಡವ ರಾಸ್ಕಲ್

  • ‘ರಾವಣ ರಾಜ್ಯದಲ್ಲಿ ನವದಂಪತಿ’ಗಳಿಗೆ ಸಾಥ್ ಕೊಟ್ಟ ‘ಬಡವ ರಾಸ್ಕಲ್‌’ ಡೈರೆಕ್ಟರ್ ಶಂಕರ್ ಗುರು

    ‘ರಾವಣ ರಾಜ್ಯದಲ್ಲಿ ನವದಂಪತಿ’ಗಳಿಗೆ ಸಾಥ್ ಕೊಟ್ಟ ‘ಬಡವ ರಾಸ್ಕಲ್‌’ ಡೈರೆಕ್ಟರ್ ಶಂಕರ್ ಗುರು

    ‘ಬಡವರ ಮನೆ ಮಕ್ಕಳು ಬೆಳಿಬೇಕು ಕಣ್ರಯ್ಯ’ ಎಂಬ ನಾಣ್ಮುಡಿ ಸೃಷ್ಟಿಕರ್ತ ಈಗ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ಬಡವ ರಾಸ್ಕಲ್ ಸಿನಿಮಾ ಸೂತ್ರಧಾರ ಶಂಕರ್ ಗುರು ಈಗ ನಿರ್ಮಾಪಕರಾಗಿದ್ದಾರೆ. ಯುವ ಪ್ರತಿಭೆಗಳ‌ ‘ರಾವಣ ರಾಜ್ಯದಲ್ಲಿ ನವದಂಪತಿಗಳು’ (Ravana Rajyadali Navadampathigalu) ಎಂಬ ಕನಸಿಗೆ ಶಂಕರ್ ಗುರು (Shankar Guru) ಸಾಥ್ ಕೊಟ್ಟಿದ್ದಾರೆ.

    ‘ರಾವಣ ರಾಜ್ಯದಲ್ಲಿ ನವದಂಪತಿಗಳು’ ಸಿನಿಮಾಗೆ ಯುವ ಪ್ರತಿಭೆ ರಂಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗುರು ಪ್ರಸಾದ್ ಗರಡಿಯಲ್ಲಿ ಕೋ ಡೈರೆಕ್ಟರ್ ಆಗಿ ಹಾಗೂ ಸುನಿಲ್ ಕುಮಾರ್ ದೇಸಾಯಿ ಅವರ ಜೊತೆ ನಿರ್ದೇಶನದ ಪಟು ಕಲಿತುಕೊಂಡಿರುವ ರಂಗ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅದರ ಭಾಗವಾಗಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಡಲಾಗಿದೆ. ಯುವ ಪ್ರತಿಭೆ ಅರುಣ್ ಸೂರ್ಯ ಹಾಗೂ ಡೊಳ್ಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಿಧಿ ಹೆಗ್ಡೆ (Nidhi Hegde) ಜೋಡಿಯಾಗಿ ನಟಿಸಿದ್ದಾರೆ.

    ಅಭಿನಂದನ್ ಕಶ್ಯಪ್ ಮ್ಯೂಸಿಕ್ ಹಾಗೂ ಸೌಂಡ್ ಡಿಸೈನ್, ವೀರೇಶ್ ಎನ್ ಟಿಎ ಕ್ಯಾಮೆರಾ ಹಿಡಿದಿದ್ದು, ವಸಂತ ಸಂಕಲನ ಚಿತ್ರಕ್ಕಿದೆ. ಡಾರ್ಕ್ ಸೋಷಿಯಲ್ ಸರ್ಟಿಕಲ್ ಡ್ರಾಮಾ ಕಂಟೆಂಟ್ ಹೊಂದಿದ್ದು, ಹೊಸದಾಗಿ ಮದುವೆಯಾದ ನವದಂಪತಿಗಳು ಸಾಮಾಜಿಕ ಕಟ್ಟುಪಾಡುಗಳಿಗೆ ಸಿಲುಕುವ ಕಥೆಯೇ ಚಿತ್ರದ ತಿರುಳು. ‘ರಾವಣ ರಾಜ್ಯದಲ್ಲಿ ನವದಂಪತಿಗಳು’ ಸಿನಿಮಾವನ್ನು ಕನ್ನಡ‌ ಫಿಲ್ಮಿ ಕ್ಲಬ್ ಸಿನಿಮಾ ಬಿಡುಗಡೆ ಕಾರ್ಯಕ್ಕೆ ಸಾಥ್ ಕೊಡಲಿದೆ.

    ಅಂದಹಾಗೆ, ಈ ಚಿತ್ರದ ಪ್ರಮುಖ‌ ಪಿಲ್ಲರ್ ಧೀರಜ್ ಎಂವಿ ಹಾಗೂ ವರುಣ್ ಗುರುರಾಜ್. ಇವರಿಬ್ಬರು ಗ್ರೀನ್ ಚಿಲ್ಲೀಸ್ ಸ್ಟುಡಿಯೋಸ್ ಹಾಗೂ ಧೀರಜ್ ಎಂವಿ ಫಿಲ್ಮಂಸ್ ನಡಿ ರಾವಣ ರಾಜ್ಯದಲ್ಲಿ ನವದಂಪತಿಗಳು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಧೀರಜ್ ಹಾಗೂ ವರುಣ್ ಗುರುರಾಜ್ ಸಾಹಸಕ್ಕೆ ಶಂಕರ್ ಗುರು ನಿರ್ಮಾಪಕರಾಗಿ ಬೆಂಬಲ ನೀಡಿದ್ದಾರೆ.

  • Exclusive: ‘ಬಡವ ರಾಸ್ಕಲ್’ ನಿರ್ದೇಶಕನ ಜೊತೆ ಡಾಲಿ ಹೊಸ ಸಿನಿಮಾ

    Exclusive: ‘ಬಡವ ರಾಸ್ಕಲ್’ ನಿರ್ದೇಶಕನ ಜೊತೆ ಡಾಲಿ ಹೊಸ ಸಿನಿಮಾ

    ಡಾಲಿ ಧನಂಜಯ (Daali Dhananjay) ಇತ್ತೀಚಿಗೆ ‘ಹೊಯ್ಸಳ’ನಾಗಿ (Hoysala) ಅಬ್ಬರಿಸಿದ್ದರು. ಗುರುದೇವ್ ಹೊಯ್ಸಳ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಡಾಲಿ ಮುಂದಿನ ಸಿನಿಮಾ ಯಾವುದು? ಯಾರ ಜೊತೆ ಸಿನಿಮಾ ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ನಟ, ವಿಲನ್, ನಿರ್ಮಾಪಕ, ಲಿರಿಕ್ಸ್ ರೈಟರ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಡಾಲಿಗೆ ಕನ್ನಡ ಮತ್ತು ತೆಲುಗು, ತಮಿಳು ಚಿತ್ರರಂಗದಲ್ಲಿ ಭರ್ಜರಿ ಡಿಮ್ಯಾಂಡ್‌ಯಿದೆ. ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಧನಂಜಯ ನಟಿಸಿ ಸೈ ಎನಿಸಿಕೊಂಡಿದ್ದಾರೆ.

    ಲಾಕ್‌ಡೌನ್ ಬಳಿಕ ‘ಬಡವ ರಾಸ್ಕಲ್’ (Badava Rascal) ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. 16 ಕೋಟಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಫ್ರೆಂಡ್‌ಶಿಪ್- ಪ್ರೀತಿ ಎರಡರ ಮೌಲ್ಯವನ್ನ ನಿರ್ದೇಶಕ ಶಂಕರ್ ಗುರು (Shankar Guru) ಅದ್ಭುತವಾಗಿ ತೋರಿಸಿದ್ದರು. ಡಾಲಿ- ಅಮೃತಾ ಅಯ್ಯಂಗಾರ್ (Amrutha Iyengar) ಜೋಡಿ ಬೆಳ್ಳಿಪರದೆಯಲ್ಲಿ ಮೋಡಿ ಮಾಡಿತ್ತು. ನಿರ್ದೇಶಕ ಶಂಕರ್ ಗುರು- ಡಾಲಿ ಕಾಂಬೋ ಸಿನಿಮಾ ವರ್ಕ್ ಆಗಿತ್ತು. ಇದೀಗ ಇದೇ ಜೋಡಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಇದನ್ನೂ ಓದಿ:60ರ ದಶಕದ ಕಥೆ ಹೇಳಲು ರೆಡಿಯಾದ ನೆನಪಿರಲಿ ಪ್ರೇಮ್

    ‘ಬಡವ ರಾಸ್ಕಲ್’ ನಿರ್ದೇಶಕ ಶಂಕರ್ ಗುರು- ಧನಂಜಯ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಬರಲಿದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ, ಶಂಕರ್ ಗುರು ರೆಡಿ ಮಾಡಿರುವ ಸ್ಕ್ರಿಪ್ಟ್ ಕೇಳಿ, ಖುಷಿಯಿಂದ ಡಾಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರು ಒಟ್ಟಿಗೆ ಸಿನಿಮಾ ಮಾಡ್ತಿರುವ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ? ಎಂಬುದನ್ನ ಮುಂದಿನ ದಿನಗಳಲ್ಲಿ ಡಾಲಿ-ಶಂಕರ್ ಅಧಿಕೃತ ಅಪ್‌ಡೇಟ್‌ಗೆ ಕಾದುನೋಡಬೇಕಿದೆ.

    ‘ಉತ್ತರಾಕಾಂಡ’ (Uttarakanda) ಸಿನಿಮಾಗೆ ಈಗಾಗಲೇ ತಯಾರಿ ನಡೆಯುತ್ತಿದೆ. ಡಾಲಿ, ರಮ್ಯಾ, ಶಿವಣ್ಣ ಕಾಂಬಿನೇಷನ್‌ನಲ್ಲಿ ಉತ್ತರ ಕರ್ನಾಟಕದ ಸೊಗಡಿನಲ್ಲಿ ಈ ಚಿತ್ರ ಮೂಡಿ ಬರಲಿದೆ.

    ಶ್ರುತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌ 

  • ಅಮೃತಾಗೆ ಡಾಲಿ ವಿಶ್ ಮಾಡಿದಕ್ಕೆ ಮದುವೆ ಯಾವಾಗ ಅಂತಾ, ಡಾಲಿ ಹಿಂದೆ ಬಿದ್ದ ಫ್ಯಾನ್ಸ್

    ಅಮೃತಾಗೆ ಡಾಲಿ ವಿಶ್ ಮಾಡಿದಕ್ಕೆ ಮದುವೆ ಯಾವಾಗ ಅಂತಾ, ಡಾಲಿ ಹಿಂದೆ ಬಿದ್ದ ಫ್ಯಾನ್ಸ್

    ಚಂದನವನದ ಬ್ಯೂಟಿ ಕ್ವೀನ್ ಅಮೃತ ಅಯ್ಯಂಗಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜತೆಗೆ ಧನಂಜಯ್ ಮತ್ತು ಅಮೃತಾ ಲವ್ ಗಾಸಿಪ್ ಬೆನ್ನಲ್ಲೇ ಸಹನಟಿಗೆ ಡಾಲಿ ವಿಶ್ ಮಾಡಿದ್ದಕ್ಕೆ ಮದುವೆ ಯಾವಾಗ ಅಂತಾ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

     

    View this post on Instagram

     

    A post shared by Dhananjaya KA (@dhananjaya_ka)

    `ಪಾಪ್ ಕಾರ್ನ್ ಮಂಕಿ ಟೈಗರ್’, `ಬಡವ ರಾಸ್ಕಲ್’ ಈ ಎರಡು ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಅದರಲ್ಲೂ `ಬಡವ ರಾಸ್ಕಲ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ, ಜೋಡಿ ಎಲ್ಲರ ಗಮನ ಸೆಳೆದಿತ್ತು. ನಂತರ ಖಾಸಗಿ ಶೋನಲ್ಲಿ ಡಾಲಿ, ಅಮೃತಾ ಪ್ರಪೋಸ್ ಮಾಡಿದ್ರು. ಈ ಸೀನ್ ನೈಜವಾಗಿ ಮೂಡಿ ಬಂದಿತ್ತು. ಈ ಸೀನ್ ಬಳಿಕ ಇವರಿಬ್ಬರು ಪ್ರೇಮಿಗಳು ಎಂದೇ ಬಿಂಬಿತರಾಗಿದ್ದರು. ನಂತರ ಲವ್‌ ಮತ್ತು ಮದುವೆ ಗಾಸಿಪ್‌ ಸುಳ್ಳು ಎಂದು ಈ ಜೋಡಿ, ಕ್ಲ್ಯಾರಿಟಿ ಕೊಟ್ಟಿದ್ದರು. ಈಗ ಅಮೃತಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಕ್ಕೆ ಡಾಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:Breaking- ಅಭಿಮಾನಿಗಳಿಗೆ ನಿವೇದಿತಾ ಗೌಡ ಗುಡ್ ನ್ಯೂಸ್

    ಧನಂಜಯ್ ಮತ್ತು ಅಮೃತಾ ಲವ್ ಗಾಸಿಪ್ ಬೆನ್ನಲ್ಲೇ ಡಾಲಿ ಬರೆದ ಸಂದೇಶ ವೈರಲ್ ಆಗಿದೆ. ಹುಟ್ಟುಹಬ್ಬದ ಶುಭಾಶಯಗಳು ಅಮೃತಾ, ದೇವರ ಹಾರೈಕೆಯಿರಲಿ, ಕೀಪ್ ರಾಕಿಂಗ್. ಈ ವರ್ಷ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಡಾಲಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಬಳಿಕವೇ ಫ್ಯಾನ್ಸ್ ನಿಮ್ಮ ಮದುವೆ ಯಾವಾಗ ಅಂತಾ ಕೇಳಿದ್ದಾರೆ. ಅಭಿಮಾನಿಗಳ ಈ ಪ್ರಶ್ನೆಗೆ ಈ ಜೋಡಿ ಎನು ಉತ್ತರ ನೀಡಲಿದ್ದಾರೆ. ಕಾದುನೋಡಬೇಕಿದೆ.

    `ಬಡವ ರಾಸ್ಕಲ್’ ಚಿತ್ರದ ನಂತರ ಮತ್ತೆ ಡಾಲಿ ಮತ್ತು ಅಮೃತಾ ಹೊಯ್ಸಳ ಚಿತ್ರದಲ್ಲಿ ಜತೆಯಾಗಿ ನಟಿಸುತ್ತಿದ್ದಾರೆ. ಇಬ್ಬರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಜೋಡಿಯಾಗಿ ಮಿಂಚಲು ರೆಡಿಯಾದ್ರು ಡಾಲಿ-ಅಮೃತಾ: `ಹೊಯ್ಸಳ’ನಾಗಿ ಡಾಲಿ ಅಬ್ಬರ!

    ಮತ್ತೆ ಜೋಡಿಯಾಗಿ ಮಿಂಚಲು ರೆಡಿಯಾದ್ರು ಡಾಲಿ-ಅಮೃತಾ: `ಹೊಯ್ಸಳ’ನಾಗಿ ಡಾಲಿ ಅಬ್ಬರ!

    ಸ್ಯಾಂಡಲ್‌ವುಡ್‌ನಲ್ಲಿ ಹವಾ ಕ್ರಿಯೇಟ್ ಮಾಡಿದ್ದ `ಬಡವ ರಾಸ್ಕಲ್’ ಜೋಡಿ ಮತ್ತೆ ತೆರೆಯ ಮೇಲೆ ಒಂದಾಲು ಸಜ್ಜಾಗಿದ್ದಾರೆ. ಈ ಬಾರಿ ಹೊಯ್ಸಳನಾಗಿ ಡಾಲಿ ಮಿಂಚಲಿದ್ದಾರೆ. ಸದ್ಯ `ಹೊಯ್ಸಳ’ ಚಿತ್ರತಂಡ ಅದ್ದೂರಿಯಾಗಿ ಮುಹೂರ್ತ ನೆರೆವೇರಿಕೊಂಡಿದೆ.

    ವಿಜಯ್ ಕಿರಗಂದೂರ್ ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಅಡಿಯಲ್ಲಿ ಡಾಲಿ ಧನಂಜಯ ನಾಯಕರಾಗಿ ನಟಿಸುತ್ತಿರುವ `ಹೊಯ್ಸಳ’ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಡಾಲಿಗೆ ನಾಯಕಿಯಾಗಿ ಅಮೃತಾ ಸ್ಕ್ರೀನ್‌ ಶೇರ್‌ ಮಾಡಲಿದ್ದಾರೆ.

    ವಿಜಯ್ ಎನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ `ಹೊಯ್ಸಳ’ ಚಿತ್ರದಲ್ಲಿ ಡಿಫರೆಂಟ್ ರೋಲ್‌ನಲ್ಲಿ ಡಾಲಿ ಮಿಂಚಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕಾರ್ತಿಕ್ ಎಸ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಅಚ್ಯುತಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಸಾಥ್ ನೀಡಲಿದ್ದಾರೆ. ಇದನ್ನೂ ಓದಿ: Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್‌ ಹೇಗಿದೆ ಗೊತ್ತಾ?

    `ಪಾಪ್ ಕಾರ್ನ್ ಮಂಕಿ ಟೈಗರ್’ ಮತ್ತು `ಬಡವ ರಾಸ್ಕಲ್’ ನಂತರ ಡಾಲಿ ಮತ್ತು ಅಮೃತಾ ಜೋಡಿ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ತಿರೋದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಡಾಲಿಯನ್ನ ಹೊಯ್ಸಳನಾಗಿ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

  • ‘ಬಡವ ರಾಸ್ಕಲ್’ ಚಿತ್ರಕ್ಕೆ ಮುಹೂರ್ತ

    ‘ಬಡವ ರಾಸ್ಕಲ್’ ಚಿತ್ರಕ್ಕೆ ಮುಹೂರ್ತ

    ಬೆಂಗಳೂರು: ಗುಜ್ಜಲ್ ಟಾಕೀಸ್ ಹಾಗೂ ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ಗುಜ್ಜಲ್ ಪುರುಷೋತ್ತಮ್ ಹಾಗೂ ಡಾಲಿ ಧನಂಜಯ ಅವರು ನಿರ್ಮಿಸುತ್ತಿರುವ ‘ಬಡವ ರಾಸ್ಕಲ್` ಚಿತ್ರದ ಮುಹೂರ್ತ ಇತ್ತೀಚೆಗೆ ಗವಿಪುರದ ಶ್ರೀಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ರೇಣುಕಮ್ಮ ಅವರು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ದುನಿಯಾ ವಿಜಯ್ ಚೊಚ್ಚಲ ದೃಶ್ಯವನ್ನು ನಿರ್ದೇಶನ ಮಾಡಿದರು.

    ಶಂಕರ್ ಗುರು ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್‍ನಲ್ಲಿ ಆರಂಭವಾಗಲಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದಾರೆ. ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ಧನಂಜಯ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೃತ ಅಯ್ಯಂಗಾರ್. ರಂಗಾಯಣ ರಘು, ನಾಗಭೂಷಣ್, ಪೂರ್ಣಚಂದ್ರ ಮೈಸೂರು, ನಿರಂಜನ್, ಚಂದ್ರು, ಅಲ್ಲು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.