Tag: ಬಜ್ಜಿ

  • ಬಜ್ಜಿ, ಬೋಂಡಾ ತಿನ್ನಲು ಬಂದಿದ್ದ ಮಹಿಳಾ ‘ಪೊಲೀಸ್’ ಮೇಲೆ ದೂರು ದಾಖಲು!

    ಬಜ್ಜಿ, ಬೋಂಡಾ ತಿನ್ನಲು ಬಂದಿದ್ದ ಮಹಿಳಾ ‘ಪೊಲೀಸ್’ ಮೇಲೆ ದೂರು ದಾಖಲು!

    ಬೆಂಗಳೂರು: ಮಹಿಳಾ ‘ಪೊಲೀಸ್’ ಎಂದು ಧಮ್ಕಿ ಹಾಕಿ ಮಹಿಳೆಯೊಬ್ಬಳು 100 ರೂಪಾಯಿಗೆ ಬಜ್ಜಿ ಬೊಂಡಾ ತಿಂದ ಪ್ರಸಂಗವೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬ್ಯಾಟರಾಯನಪುರ (Byatarayanapura) ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಶೇಕ್ ಸಲಾಂ ಎಂಬವರು ಬಜ್ಜಿ ಅಂಗಡಿ ಇಟ್ಟುಕೊಂಡಿದ್ದಾರೆ. ಅಲ್ಲಿಗೆ ಬಂದ ಮಹಿಳೆಯೊಬ್ಬಳು, ತಾನು ಮಹಿಳಾ ಪೊಲೀಸ್ (Woman Police) ಎಂದು ಹೇಳಿ ಬಜ್ಜಿ ತಿಂದು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದಳು. ಇದನ್ನೂ ಓದಿ: ಐಷಾರಾಮಿ ಕಾರುಗಳ ಹೆಸರಲ್ಲಿ ಸ್ಯಾಂಟ್ರೋ ರವಿಯಿಂದ ನಡೀತಿತ್ತು ಸುಂದರಿಯರ ಸೆಲೆಕ್ಷನ್..!

    ಇತ್ತ ವ್ಯಾಪಾರಿ ಕೂಡ ಪೊಲೀಸ್ ಎಂಬ ಭಯಕ್ಕೆ ಪ್ರತಿ ನಿತ್ಯ ಬಜ್ಜಿ ನೀಡುತ್ತಿದ್ದರು. ಇತ್ತೀಚೆಗೆ ಕೂಡ ಅಂಗಡಿ ಬಳಿ ಬಂದಿದ್ದ ಮಹಿಳೆ, ಹೊಟ್ಟೆ ತುಂಬಾ ಬಜ್ಜಿ ತಿಂದು ಪಾರ್ಸೆಲ್ ತೆಗೆದುಕೊಂಡಿದ್ದಳು. ಈ ವೇಳೆ ವ್ಯಾಪಾರಿ, 100 ರೂಪಾಯಿ ಆಗುತ್ತೆ ಎಂದಿದಕ್ಕೆ ನಕಲಿ ಪೊಲೀಸ್ ಮತ್ತೆ ಧಮ್ಕಿ ಹಾಕಿದ್ದಾಳೆ. ನಾನು ಕೊಡಿಗೇಹಳ್ಳಿ ಪೊಲೀಸ್ ಬಂದಾಗಲೆಲ್ಲ ಬಜ್ಜಿ ಕೊಡಬೇಕು. ಇಲ್ಲದಿದ್ದಲ್ಲಿ ನಾಳೆಯಿಂದ ಅಂಗಡಿನ ಎತ್ತಂಗಡಿ ಮಾಡಿಸ್ತೀನಿ ಎಂದು ಅವಾಜ್ ಹಾಕಿದ್ದಾಳೆ.

    ಈ ವೇಳೆ 112ಗೆ ಕರೆ ಮಾಡಿದ್ದ ವ್ಯಾಪಾರಿ, ತಕ್ಷಣ ತನ್ನ ಬೈಕ್‍ನಲ್ಲಿ ಮಹಿಳೆ ಪರಾರಿಯಾಗಿದ್ದಾಳೆ. ಪೊಲೀಸ್ ಹೆಸರಿಲ್ಲಿ ಬಜ್ಜಿ ಬಿಟ್ಟಿಯಾಗಿ ತಿನ್ನುತ್ತಿದ್ದ ಮಹಿಳೆಯ ವಿರುದ್ಧ ವ್ಯಾಪಾರಿ ಇದೀಗ ದೂರು ದಾಖಲಿಸಿದ್ದಾರೆ.

    ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆ (Kodigehalli Police Station) ಯಲ್ಲಿ ದೂರು ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುದಿಯುವ ಎಣ್ಣೆಗೆ ಕೈ ಹಾಕಿ ಬಜ್ಜಿ ಬೇಯಿಸುತ್ತಾಳೆ ಮಹಿಳೆ- ವಿಡಿಯೋ

    ಕುದಿಯುವ ಎಣ್ಣೆಗೆ ಕೈ ಹಾಕಿ ಬಜ್ಜಿ ಬೇಯಿಸುತ್ತಾಳೆ ಮಹಿಳೆ- ವಿಡಿಯೋ

    ನವದೆಹಲಿ: ಬಿಸಿ ಎಣ್ಣೆಯಲ್ಲಿ ಕೈ ಇಟ್ಟು ಜಾದು ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಯಾವುದೇ ಭಯವಿಲ್ಲ, ಯಾವುದರ ಸಹಾಯವಿಲ್ಲದೆ ಬೆರಳುಗಳನ್ನು ಎಣ್ಣೆಯೊಳಗೆ ಹಾಕಿ ಬಜ್ಜಿಯನ್ನು ಬೇಯಿಸಿದ್ದಾಳೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಮಹಿಳೆ ಕುದಿಯುವ ಎಣ್ಣೆಯಲ್ಲಿ ಬೆರಳುಗಳನ್ನು ಎದ್ದಿ, ಬರಿಗೈಲೇ ಬಜ್ಜಿಗಳನ್ನು ತಿರುಗಿಸುತ್ತ ಬೇಯಿಸುತ್ತಾಳೆ. ಇಂತಹ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಸಖತ್ ವೈರಲ್ ಆಗಿದೆ. ಅಲ್ಲದೆ ಇಕ್ಕಳು ಇಲ್ಲದ್ದಕ್ಕೆ ಎಂದು ಮಹಿಳೆ ಹೇಳಿರುವುದಾಗಿ ಟ್ವಿಟ್ಟರ್ ನಲ್ಲಿ ಬರೆದು ಪೋಸ್ಟ್ ಮಾಡಲಾಗಿದೆ.

    13 ಸೆಕೆಂಡ್‍ಗಳ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ದೊಡ್ಡ ಬಾಣಲಿಯಲ್ಲಿ ಎಣ್ಣೆ ಕುದಿಯುತ್ತಿದ್ದು, ಮಹಿಳೆ ಇಕ್ಕಳ ಅಥವಾ ಇನ್ನಾವುದೋ ವಸ್ತುಗಳ ಸಹಾಯವಿಲ್ಲದೇ ಬಜ್ಜಿಯನ್ನು ತಿರುಗಿಸುವ ಬದಲು ತನ್ನ ಬೆರಳುಗಳಿಂದಲೇ ಅವುಗಳ್ನು ಹೊರಳಿಸಿ ಹಾಕುತ್ತಿದ್ದಾಳೆ. ಅಲ್ಲದೆ ವಿಡಿಯೋದ ಒಂದು ಭಾಗದಲ್ಲಿ ಮಹಿಳೆ ಕುದಿಯುವ ಎಣ್ಣೆಯನ್ನು ಕೈಯ್ಯಲ್ಲೇ ಹಿಡಿಯುತ್ತಾಳೆ. ಆದರೆ ಏನೂ ಆಗುವುದಿಲ್ಲ. ಇದನ್ನು ನೆರೆದಿದ್ದ ಜನಕ್ಕೆ ಸಹ ತೋರಿಸಿದ್ದಾಳೆ.

    ಮಹಿಳೆ ಎಣ್ಣೆಯನ್ನು ಕೈಯಲ್ಲಿ ಹಿಡಿದ ದೃಶ್ಯ ಮುಗಿಯುತ್ತಿದ್ದಂತೆ ನಂತರ ವಿಡಿಯೋ ಎಡಿಟ್ ಮಾಡಲಾಗಿದ್ದು, ಇಕ್ಕಳುಗಳ ಮಧ್ಯೆ ಮುಖವನ್ನು ತೋರಿಸಿ, ನಾನು ಇಲ್ಲಿ ಇರಲಿಲ್ಲ ಅನ್ನಿಸುತ್ತದೆ. ನಾನು ಭ್ರಮೆಯಲ್ಲಿದ್ದೆ ಅನ್ನಿಸುತ್ತದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ವಿಡಿಯೋ ಕಣ್ಣಾರೆ ಕಂಡರೂ ನೆಟ್ಟಿಗರು ಇದನ್ನು ನಂಬುತ್ತಿಲ್ಲ. ಸಾವಿರಾರು ಜನ ಕಮೆಂಟ್ ಮಾಡಿ ಲೈಕ್ ಮಾಡಿದ್ದಾರೆ. ಹಲವು ಜನ ಆಶ್ಚರ್ಯಕರ ರೀತಿಯಲ್ಲಿ ವಿವಿಧ ರೀತಿಯ ಕಮೆಂಟ್ ಮಾಡಿದ್ದಾರೆ.

  • ಬಜ್ಜಿ ವಿಚಾರಕ್ಕೆ ಹಲ್ಲೆ: ಆಸ್ಪತ್ರೆ ಸೇರಿದವನು ಹೆಣವಾಗಿ ಬಂದ

    ಬಜ್ಜಿ ವಿಚಾರಕ್ಕೆ ಹಲ್ಲೆ: ಆಸ್ಪತ್ರೆ ಸೇರಿದವನು ಹೆಣವಾಗಿ ಬಂದ

    ಮಡಿಕೇರಿ: ಬಜ್ಜಿ ವಿಚಾರಕ್ಕೆ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ಸೇರಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಮಹದೇವ ನಾಯಕ(65) ಮೃತ ದುರ್ದೈವಿ. ಅದೇ ಗ್ರಾಮದ ಬಾರ್ ನಲ್ಲಿ ಡಿಸೆಂಬರ್ 6ರಂದು ಮಹದೇವ ಮೇಲೆ ಹಲ್ಲೆ ಆಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

    ಕೊಪ್ಪ ಗ್ರಾಮದ ಮಹದೇವ ಡಿಸೆಂಬರ್ 6ರಂದು ಕಂಠಪೂರ್ತಿ ಕುಡಿದಿದ್ದರು. ಎಣ್ಣೆ ಹೊಡೆದ ಮಹದೇವ ಅವರಿಗೆ ಬಾಯಿ ಚಪ್ಪರಿಸುವುದಕ್ಕೆ ಏನಾದರೂ ಬೇಕು ಅನಿಸಿತ್ತು. ಹೀಗಾಗಿ ಬಾರ್ ಎದುರಿಗಿದ್ದ ಕ್ಯಾಂಟಿನ್‍ಗೆ ಹೋಗಿ ಮೆಣಸಿನಕಾಯಿ ಬಜ್ಜಿ ಕೇಳಿದ್ದಾರೆ. ಹಣ ಇಲ್ಲದೆ ಮೆಣಸಿನಕಾಯಿ ಬಜ್ಜಿ ಕೊಡುವುದಿಲ್ಲ ಅಂತ ಅಂಗಡಿ ಮಾಲೀಕರು ಹೇಳಿದ್ದಕ್ಕೆ ಜಗಳಮಾಡಿಕೊಂಡಿದ್ದರು.

    ಮಹದೇವ ಜಗಳ ಆರಂಭಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಇಬ್ಬರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಜ್ಜಿ ಅಂಗಡಿಯ ಮಹಿಳೆಯ ಸ್ಟೀಲ್ ಜಗ್‍ನಿಂದ ಮಹದೇವಗೆ ಹೊಡೆದರೆ, ಉಳಿದ ಕೆಲವರು ಎದೆಗೆ ಗುದ್ದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸಂತೋಷ್ ಮತ್ತು ಶಿವಕುಮಾರ್ ಪಕ್ಕಕ್ಕೆ ಎಳೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಗಂಭೀರವಾಗಿ ಗಾಯಗೊಂಡಿದ್ದ ಮಹದೇವ ಅವರನ್ನು ಆಟೋದಲ್ಲಿ ಮನೆಗೆ ಕಳಿಸಿದ್ದಾರೆ. ತಕ್ಷಣವೇ ಕುಟುಂಬಸ್ಥರು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹದೇವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೈಲುಕುಪ್ಪೆ ಪೊಲೀಸರು ಆರೋಪಿಗಳಾದ ಶಿವಕುಮಾರ್ ಮತ್ತು ಸಂತೋಷನನ್ನು ಬಂಧಿಸಿದ್ದಾರೆ.