ಹಾವೇರಿ: ರಾಜ್ಯದಲ್ಲಿ ರೈತರಿಗೆ ಯೂರಿಯಾ ಅಭಾವವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿ ಹಾವೇರಿಯಲ್ಲಿ (Haveri) ಬಿಜೆಪಿ ಕಾರ್ಯಕರ್ತರು ಜಿಲ್ಲಾಡಳಿತ ಕಚೇರಿ ಮುತ್ತಿಗೆ ಹಾಕಿದ್ದಾರೆ.
ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಂತರ ಮಾತನಾಡಿದ ಮಾಜಿ ಸಚಿವ ಬಿ.ಸಿ.ಪಾಟೀಲ್ (B C Patil), ಯೂರಿಯಾ ರಸಗೊಬ್ಬರ ಅಭಾವ ಎದ್ದು ಕಾಣ್ತಿದೆ. ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ. ಸರ್ಕಾರಕ್ಕೆ ಸರಿಯಾಗಿ ನಿಭಾಯಿಸಲು ಆಗುತ್ತಿಲ್ಲ. ಹೀಗಾಗಿ ಯೂರಿಯಾ ಕಾಳ ಸಂತೆಯಲ್ಲಿ ಮಾರಾಟ ಆಗ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ – 5.46 ಕೋಟಿ ರೂ. ಕಾಣಿಕೆ ಸಂಗ್ರಹ
ಯೂರಿಯಾ ಗೊಬ್ಬರ (Urea Fertilizer) ಒಂದು ಚೀಲದ ಬೆಲೆ 1666 ರೂ. ರೈತರಿಗೆ 266 ರೂ. ಒಂದು ಚೀಲ ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರ 1400 ರೂ. ರೈತರಿಗೆ ಸಬ್ಸಿಡಿ ಕೊಡ್ತಿದೆ. ಈ ಸಬ್ಸಿಡಿ ಹಣ ಕಬಳಿಸುವ ದುರುದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಸರ್ಕಾರವು ವ್ಯಾಪಾರಿಗಳು ಮತ್ತು ಫ್ಯಾಕ್ಟರಿಗಳೊಂದಿಗೆ ಶಾಮೀಲಾಗಿದೆ. ಗೊಬ್ಬರವನ್ನ ಕಾಳ ಸಂತೆಯಲ್ಲಿ ಮಾರುವ ವ್ಯವಸ್ಥೆ ಹೊಂದಿದೆ. ಹೀಗಾಗಿ ರಾಜ್ಯಾದ್ಯಂತ ಯೂರಿಯಾ ಗೊಬ್ಬರದ ಅಭಾವ ಕಾಣುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಮುತಾಲಿಕ್ ಜೊತೆ ವೇದಿಕೆ ಹಂಚಿಕೊಂಡ ನಯನ ಮೋಟಮ್ಮ – ಕೇಸರಿ ಶಾಲು ಧರಿಸಿರೋದು ಧರ್ಮಕ್ಕಾಗಿ ಎಂದ `ಕೈ’ ಶಾಸಕಿ
ಈ ವರ್ಷ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ರೈತರಿಗೆ ಗೊಬ್ಬರ ಸಿಗ್ತಿಲ್ಲ. ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಮಧ್ಯಂತರ ಪರಿಹಾರದ ಬಗ್ಗೆ ಮೌನವಹಿಸಿದೆ. ಕಾಳ ಸಂತೆಯಲ್ಲಿ ಗೊಬ್ಬರ ಮಾರಾಟ ಮಾಡಿ, ರೈತರಿಗೆ ಪಂಗನಾಮ ಹಾಕುವ ಕೆಲಸ ಆಗುತ್ತಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದತ್ತ ಬೊಟ್ಟು ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೃಷಿ ಸಚಿವರು ಬಹಳ ದುರಂಹಕಾರಿ ಮಾತುಗಳನ್ನಾಡ್ತಿದ್ದಾರೆ. ನಮಗೆ ಸರ್ಕಾರ ನಡೆಸಲು ನಮ್ಮ ಬಳಿ ಹಣವಿಲ್ಲ. ಹೀಗಾಗಿ ಗೊಬ್ಬರ ಕಾಳ ಸಂತೆಯಲ್ಲಿ ಮಾರಾಟ ಮಾಡ್ತೀವಿ ಅಂತ ನೇರವಾಗಿ ಜನರಿಗೆ ಹೇಳಿ. ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದು ಇದು ಹೇಡಿಗಳ ಕೆಲಸ. ನಮ್ಮ ಸರ್ಕಾರದ ಕಾಲದಲ್ಲಿ ರೈತರ ಜೀವನ ಸುಗಮವಾಗಿರಲು ಬೇಕಾದ ಎಲ್ಲವನ್ನೂ ಮಾಡಿದ್ದೇವೆ. ಈ ಸರ್ಕಾರ ತಾನೇ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಪರಿಸ್ಥಿತಿಗೆ ಬಂದಿದೆ ಎಂದು ಗುಡುಗಿದ್ದಾರೆ.
ಬೆಂಗಳೂರು: ಕಾನೂನು, ಕಾಯ್ದೆ ಪ್ರಕಾರವೇ ಎಸ್‌ಸಿಎಸ್‌ಪಿ-ಟಿಎಸ್‌ಪಿ (SCSP-TSP) ಹಣವನ್ನ ಗ್ಯಾರಂಟಿ ಯೋಜನೆ ಗಳಿಗೆ ಬಳಕೆ ಮಾಡಿಕೊಳ್ಳಲಾಗ್ತಿದೆ ಎಂದು ಸಚಿವ ಮಹದೇವಪ್ಪ (Mahadevappa) ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ಗ್ಯಾರಂಟಿಗೆ ಬಳಕೆಯ ಬಗ್ಗೆ ಬಿಜೆಪಿಯಿಂದ (BJP) ವಿರೋಧದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಮೊದಲ ದಿನದಿಂದ ಸದನದಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇನೆ. ರಾಜ್ಯದಲ್ಲಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಇದೆ. ಇದರ ಅನ್ವಯ ಖರ್ಚು ಮಾಡಲಾಗ್ತಿದೆ. ಬಿಜೆಪಿ ಅವರು ಈ ಕಾಯ್ದೆ ಬಳಸಿಕೊಂಡು 7ಡಿ ಅಡಿ 10 ಸಾವಿರ ಕೋಟಿ ರೂ. ಡೀಮ್ಡ್ ಎಕ್ಸೆಪೆಂಡೇಚರ್ ಅಂತ ಖರ್ಚು ಮಾಡಿದ್ರು. ಕಾರ್ಪೋರೇಷನ್‌ನಲ್ಲೂ ಖರ್ಚು ಮಾಡಿದ್ರು. ಅವರ ಮೇಲೆ ಕೇಸ್ ಹಾಕಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: Operation MAHADEV | ಪಹಲ್ಗಾಮ್ ದಾಳಿಯ ಮೂವರು ಶಂಕಿತ ಉಗ್ರರನ್ನು ಹತ್ಯೆಗೈದ ಸೇನೆ
ನಾವು ಬಂದ ಮೇಲೆ ಬಿಜೆಪಿ ಖರ್ಚು ಮಾಡಿದ್ದ 7ಡಿ ತೆಗೆದು ಹಾಕಿ. ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಬಜೆಟ್‌ನಲ್ಲಿ ಪ್ರತ್ಯೇಕ ಹಣ ತೆಗೆದು ಇಡುತ್ತಿದ್ದೇವೆ. ಆ ಜನಾಂಗದ ಕಲ್ಯಾಣಕ್ಕೆ ಆ ಹಣ ಬಳಕೆ ಮಾಡ್ತಿದ್ದೇವೆ. 7ಡಿ ಬಳಸಿಕೊಂಡು ಎಸ್‌ಸಿ, ಎಸ್‌ಟಿ ಜನಾಂಗಕ್ಕೆ, ಗ್ಯಾರಂಟಿಗೆ ಹಣ ಖರ್ಚು ಮಾಡ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ನೇತ್ರಾವತಿ ತಟದಲ್ಲಿ ಎಸ್‌ಐಟಿಯಿಂದ ಸ್ಥಳ ಮಹಜರು
ಹಣ ಬಳಕೆಗೆ ಕಾನೂನು ಕ್ಲಿಯರ್ ಆಗಿದೆ. ಬಿಜೆಪಿ ಪದೇ ಪದೇ ರಾಜಕೀಯ ಮಾಡ್ತಿದೆ. ಅವರಿಗೆ ಬದ್ಧತೆ ಇಲ್ಲ. ಅಷ್ಟು ಬದ್ಧತೆ ಇದ್ದರೆ ಕೇಂದ್ರ ಸರ್ಕಾರ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಕೇಂದ್ರದಲ್ಲಿ ಜಾರಿ ಮಾಡಲಿ. ಬಿಜೆಪಿ ಅವರು ದಲಿತರ ಹಣವನ್ನೇ ಬಳಕೆ ಮಾಡಿದ್ರು. ಅವರಿಗೆ ಬದ್ಧತೆ ಇದ್ಯಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: `ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ
ಗ್ಯಾರಂಟಿಯಲ್ಲಿ ನಾವು ಎಸ್‌ಸಿ, ಎಸ್ಟಿ ಫಲಾನುಭವಿಗಳಿಗೆ ಖರ್ಚು ಮಾಡ್ತಿದ್ದೇವೆ. ಡೇಟಾ ತಗೊಂಡು ಹಣ ಕೊಡ್ತಿದ್ದೇವೆ. ಸಿಎಂ ಕೂಡಾ ಡೋರ್ ಡೋರ್ ಮಾಹಿತಿ ಕೊಡಬೇಕು ಎಂದು ಹೇಳಿದ್ದಾರೆ. ಡೇಟಾ ಕೊಡಬೇಕು ಅಂತ ನಾನು ಗ್ಯಾರಂಟಿ ಅವರಿಗೆ ಹೇಳಿದ್ದೇನೆ. ರಾಜಕೀಯ, ವೋಟ್‌ಗೆ ಗ್ಯಾರಂಟಿ ಮಾಡಿಲ್ಲ. ಜನರ ಅಭಿವೃದ್ಧಿಗೆ ಮಾಡಿರೋದು ಎಂದು ಹೇಳಿದ್ದಾರೆ.
ಸಿಎಸ್ ಅವರಿಗೆ ಡೇಟಾ ಕೊಡಬೇಕೆಂದು ಅವರಿಗೆ ಜವಾಬ್ದಾರಿ ಕೊಡಲಾಗಿದೆ. ಈಗಾಗಲೇ ಎಲ್ಲವೂ ಹೇಳಿದ್ದೇನೆ. ಹೋಗಿ ಬಂದು ಮೂಗು ಹಿಡಿದುಕೊಂಡ ಹಾಗೇ ಆಯ್ತು ಬಿಜೆಪಿ ಅವರ ಮಾತು. ಬಿಜೆಪಿ ಅವರಿಗೆ ಸಾಮಾನ್ಯ ಜ್ಞಾನ ಇರಬೇಕು ಅಲ್ವಾ. ಕಾಂಗ್ರೆಸ್, ನಾನು ಹಾಗೂ ಸಿದ್ದರಾಮಯ್ಯ ಸೇರಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಮಾಡಿದ್ದು. ಮೊದಲು ಬಿಜೆಪಿಯವರು ರಾಜಕೀಯ ಮಾಡೋದು ಬಿಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಬಿಜೆಪಿಯಲ್ಲಿ ರೇಪ್ ಮಾಡಿದವರನ್ನು ಉಚ್ಚಾಟನೆ ಮಾಡುವುದಿಲ್ಲ. ನಮ್ಮಂತವರನ್ನು ಉಚ್ಚಾಟನೆ ಮಾಡ್ತಾರೆ ಎಂದು ಯಶವಂತಪುರದ ಬಿಜೆಪಿಯ ಉಚ್ಚಾಟಿತ ಶಾಸಕ ಎಸ್‌ಟಿ ಸೋಮಶೇಖರ್ (S T Somashekar) ಹೇಳಿದರು.
ಬಿಜೆಪಿಯ (BJP) ಯಶವಂತಪುರದ ಶಾಸಕ ಎಸ್‌ಟಿ ಸೋಮಶೇಖರ್ ಹಾಗೂ ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್ (Shivaram Hebbar) ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ. ಈ ಬಗ್ಗೆ `ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯೆ ನೀಡಿದ ಎಸ್‌ಟಿ ಸೋಮಶೇಖರ್ ಅವರು, ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು. ಒಳ್ಳೆಯದಾಯ್ತು ಎಂದರು. ಇದನ್ನೂ ಓದಿ: ಸಾಲು ಸಾಲು ಉಚ್ಛಾಟನೆ, ತಾಂತ್ರಿಕವಾಗಿ ಬಿಜೆಪಿ ಬಲಾಬಲ ಕುಸಿತ
1% ಸಹ ಬೇಸರ, ಅಸಮಾಧಾನ ಇಲ್ಲ. ಉಚ್ಚಾಟನೆ ಮಾಡಿದ್ದು ಖುಷಿ ಇದೆ. ಬಿಜೆಪಿಯಲ್ಲಿ ನನ್ನ ಪರವಾಗಿ ಮಾತನಾಡಲು ಯಾರಿಗೂ ಧೈರ್ಯ ಇಲ್ಲ. ಬಿಜೆಪಿಯಲ್ಲಿ ಮಾಡಬಾರದ್ದನ್ನ ಮಾಡಿರೋರು ಯರ‍್ಯಾರೋ ಇದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರೋರು ಇದ್ದಾರೆ. ಅವರೆಲ್ಲರನ್ನೂ ಬಿಟ್ಟು ನನ್ನ ಉಚ್ಛಾಟನೆ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯಿಂದ ಎಸ್‌ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಉಚ್ಚಾಟನೆ
ಉಚ್ಚಾಟನೆ ಯಾಕೆ ಮಾಡಿದ್ದೀರಿ ಅಂತಾನೂ ಕೇಳೋದಿಲ್ಲ. ನಾನು ಈಗ ಫ್ರೀ ಬರ್ಡ್ ಆಗಿದ್ದೀನಿ. ಇನ್ನು ಫ್ರೀ ಬರ್ಡ್ ಆಗಿ ಓಡಾಡುತ್ತೇನೆ. ಕಾಂಗ್ರೆಸ್ ಇಲ್ಲ, ಬಿಜೆಪಿ ಇಲ್ಲ ಆರಾಮಾಗಿ ಇದ್ದೇವೆ. ಮುಂದಿನ ನಡೆ ಬಗ್ಗೆ ಈಗ ಯೋಚನೆ ಮಾಡಿಲ್ಲ ಎಂದರು.
– ಹನಿಟ್ರ್ಯಾಪ್ ಪ್ರಕರಣ ಕಾಂಗ್ರೆಸ್ ಬುಡಕ್ಕೆ ಬರುತ್ತೆ – `ಕೈ’ ಹೈಕಮಾಂಡ್ ಸಿಎಂ ಜೊತೆ ಸೇರಿ ಪ್ರಕರಣ ಮುಚ್ಚಿ ಹಾಕಲು ನೋಡ್ತಿದೆ
ನವದೆಹಲಿ: ಮುಸ್ಲಿಮರಿಗೆ ಗುತ್ತಿಗೆಯಲ್ಲಿ 4% ಮೀಸಲಾತಿ ನೀಡುವ ಮೂಲಕ ಈ ಸರ್ಕಾರ ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡುತ್ತಿದೆ. ಸಂವಿಧಾನ ವಿರೋಧಿ ಸರ್ಕಾರ ಕರ್ನಾಟಕದಲ್ಲಿದ್ದು, ಈ ಸರ್ಕಾರ ಆಡಳಿತ ನಡೆಸಲು ಯಾವುದೇ ನೈತಿಕ ಹಕ್ಕಿಲ್ಲ. ಇಡೀ ಸರ್ಕಾರವೇ ರಾಜೀನಾಮೆ ನೀಡಬೇಕು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಆಗ್ರಹಿಸಿದರು.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಆಂಧ್ರಪ್ರದೇಶ (Andhra Pradesh) ಹಾಗೂ ಪಶ್ಚಿಮ ಬಂಗಾಳ ಪ್ರಕರಣಗಳಲ್ಲಿ ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ಬಹಳ ಸ್ಪಷ್ಟವಾಗಿ ಹೇಳಿದೆ. ಆದರೂ, ಇವರು ಧರ್ಮದ ಆಧಾರದಲ್ಲಿ ಮೀಸಲಾತಿ ತರುತ್ತಿದ್ದಾರೆ. ಅದೂ ಕೂಡ ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಂವಿಧಾನ ತಿದ್ದುಪಡಿಯ ಅಗತ್ಯವೂ ಇಲ್ಲ, ಅನಿವಾರ್ಯತೆಯೂ ಇಲ್ಲ: ಬಿ.ಕೆ.ಹರಿಪ್ರಸಾದ್
ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಯಾವುದೇ ಅವಕಾಶ ಇಲ್ಲ. ಟೆಂಡರ್‌ನಲ್ಲಿ ಪಾರದರ್ಶಕತೆ ಕಾಯ್ದೆಯನ್ನೇ ರದ್ದು ಪಡಿಸುವುದು ಒಳ್ಳೆಯದು. ಸುಮಾರು ಶೇ.30 ರಿಂದ 40ರಷ್ಟು ಮೀಸಲಾತಿ ನೀಡಿದರೆ ಪಾರದರ್ಶಕತೆಗೆ ಎಲ್ಲಿ ಗೌರವ ಇರುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ಸಮರ್ಥನೆ ಭರದಲ್ಲಿ ಡಿಕೆ ವಿವಾದ- ಸಂಸತ್‌ನ ಉಭಯ ಸದನಗಳಲ್ಲಿ ಕೋಲಾಹಲ
ಅಲ್ಲದೇ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು (Rahul Gandhi) ಯಾವಾಗಲೂ ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಾರೆ. ಆದರೆ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರ ಸಂವಿಧಾನದ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಮಾತನಾಡಿದ್ದಾರೆ. ಮುಸಲ್ಮಾನರಿಗೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಡಿಕೆಶಿ ಅವರೇ ಒಪ್ಪಿಕೊಂಡಿದ್ದಾರೆ. ಸಂವಿಧಾನ ತಿದ್ದುಪಡಿ ತರುತ್ತೇವೆ ಎಂದು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಾಲಿನ ದರ ಏರಿಕೆಯ ಒತ್ತಡಕ್ಕೆ ಮಣಿಯದ ಸಿಎಂ – ಇಂದಿನ ಹೈವೋಲ್ಟೇಜ್ ಸಭೆಯಲ್ಲಿ ಏನಾಯ್ತು?
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚುನಾವಣೆಗೂ ಮುಂಚೆ ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಹೇಳಿದ್ದರು. ಆದರೆ, ಸಂವಿಧಾನದ ಮೂಲ ಉದ್ದೇಶವನ್ನೇ ಬದಲಾವಣೆ ಮಾಡಿರುವುದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ಸಿನ ಮುಖವಾಡ ಕಳಚಿ ಬಿದ್ದಿದೆ ಹೇಳಿದರು. ಇದನ್ನೂ ಓದಿ: 3.5 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್ 6.6 ಕೋಟಿಗೆ ಮಾರಿದ ಅಕ್ಷಯ್ ಕುಮಾರ್
ಸಂವಿಧಾನದ ಮೇಲೆ ಪ್ರಮಾಣವಚನ ತೆಗೆದುಕೊಂಡು ಅದರ ವಿರುದ್ಧ ಕೆಲಸ ಮಾಡುತ್ತಾರೆ ಎಂದರೆ ಇದು ಸಂವಿಧಾನ ವಿರೋಧಿ ಅಷ್ಟೇ ಅಲ್ಲ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಕ್ಕೂ ವಿರುದ್ಧವಾಗಿದೆ. ತುಷ್ಟೀಕರಣದ ಪರಾಕಾಷ್ಟೇ ಮೀರಿದೆ. ತುಷ್ಟೀಕರಣಕ್ಕಾಗಿ ದೇಶವನ್ನು ಒಡೆಯುವ ತೀರ್ಮಾನ ತೆಗೆದುಕೊಳ್ಳುವುದು ಸಂವಿಧಾನಿಕ ಹುದ್ದೆಯಲ್ಲಿರುವವರಿಗೆ ಇದು ನ್ಯಾಯಾನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪತ್ನಿಗೆ 9 ಕೋಟಿ ಜೀವನಾಂಶ, ತಿಂಗಳಿಗೆ 4 ಲಕ್ಷ – ಭಾರೀ ಸಂಚಲನ ಸೃಷ್ಟಿಸಿದ ಟೆಕ್ಕಿ ಪೋಸ್ಟ್
ಸ್ವಾತಂತ್ರ‍್ಯ ಬಂದಾಗ ಕಾಂಗ್ರೆಸ್‌ನವರು ತನ್ನ ಆಡಳಿತಕ್ಕಾಗಿ ದೇಶ ವಿಭಜನೆ ಮಾಡಿದರು. ಶಾಭಾನು ಪ್ರಕರಣದಲ್ಲಿ ಕುರ್ಚಿ ಉಳಿಸಿಕೊಳ್ಳಲು ಕಾನೂನು ಬದಲಾವಣೆ ಮಾಡಿದ್ದರು. ಈಗ ಸಂವಿಧಾನವನ್ನೇ ಬದಲಾವಣೆ ಮಾಡಲು ಹೊರಟಿದ್ದಾರೆ. ರಾಹುಲ್ ಗಾಂಧಿಯವರಿಗೆ ಇನ್ನು ಮುಂದೆ ಸಂವಿಧಾನವನ್ನು ಹಿಡಿಕೊಳ್ಳುವ ಯಾವುದೇ ನೈತಿಕ ಹಕ್ಕಿಲ್ಲ. ಈ ಸರ್ಕಾರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಸಂಸದರ ಸಂಬಳ 24% ಏರಿಕೆ – ಈಗ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?
ಕಾಂಗ್ರೆಸ್ ಬುಡಕ್ಕೆ ಹನಿಟ್ರ್ಯಾಪ್
ಹನಿಟ್ರ‍್ಯಾಪ್ ಕುರಿತು ಪ್ರತಿಕ್ರಿಯಿಸಿದ ಅವರು, ಹನಿಟ್ರ‍್ಯಾಪ್ ವಿಚಾರದಲ್ಲಿ ಮತ್ತೆ ರಾಜಕಾರಣ ಶುರುವಾಗಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ (K N Rajanna) ಅವರು ವಿಧಾನಸಭೆಯಲ್ಲಿ ತಮ್ಮದಷ್ಟೇ ಅಲ್ಲ 48 ಜನರ ಹನಿಟ್ರ‍್ಯಾಪ್ ಆಗಿದೆ ಅಂತ ಹೇಳಿದ್ದಾರೆ. ಇದು ಬಹಳ ಗಂಭೀರ ವಿಷಯ. ಅವರು ದೂರು ಕೊಡುತ್ತೇನೆ ಅಂತ ಹೇಳಿದ್ದರು. ಇನ್ನು ದೂರು ಕೊಟ್ಟಿಲ್ಲ. ತನಿಖೆಯೂ ನಡೆಯುತ್ತಿಲ್ಲ ಎಂದರು.
ಈಗ ಕಾಂಗ್ರೆಸ್ ಹೈಕಮಾಂಡ್ ಇದರಲ್ಲಿ ಮಧ್ಯ ಪ್ರವೇಶ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikharjun Kharge) ಹಾಗೂ ಸಿಎಂ ಸಿದ್ದರಾಮಯ್ಯ ಅವರ ನಡುವೆ ಈ ಪ್ರಕರಣ ಮುಚ್ಚಿಹಾಕುವ ಕುರಿತು ಚರ್ಚೆ ನಡೆದಿದೆ. ಕಾಂಗ್ರೆಸ್‌ನ ಬುಡಕ್ಕೆ ಈ ಪ್ರಕರಣ ಬರುತ್ತದೆ ಎಂದು ಅವರಿಗೆ ಗೊತ್ತಾಗಿದೆ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರೀಲ್ಸ್ ತಂದ ಆಪತ್ತು- ರಜತ್, ವಿನಯ್ ಅರೆಸ್ಟ್
ಡಿಸಿಎಂ ಹೇಳಿಕೆಯನ್ನು ನೋಡಿದಾಗ ಇವರು ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡಿದ್ದಾರೆ. ನೈತಿಕವಾಗಿಯೂ ರಾಜ್ಯವನ್ನು ಹಾಳು ಮಾಡಿದ್ದಾರೆ. ಈಗ ಸಂವಿಧಾನ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇದು ಜನವಿರೋಧಿ ಸರ್ಕಾರ ಇದು ಎಷ್ಟು ಬೇಗ ತೊಲಗುತ್ತದೆಯೋ ಅಷ್ಟು ಕರ್ನಾಟಕಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಚಿಕ್ಕಮಗಳೂರು: ಜೆಡಿಎಸ್ (JDS) ಮುಖಂಡ ಭೋಜೆಗೌಡ (Bhojegowda) ಕಾಂಗ್ರೆಸ್ (Congress) ಪರ ಬಹಿರಂಗ ಪ್ರಚಾರದಲ್ಲಿ ತೊಡಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರ ಆಪ್ತರಾಗಿರುವ ಎಂಎಲ್‍ಸಿ ಭೋಜೇಗೌಡ ಸಖರಾಯಪಟ್ಟಣ ಸಮೀಪದ ಚಿಕ್ಕಗೌಜ ಗ್ರಾಮದ ದೇವರಕಟ್ಟೆಯ ಮುಂದೆ ಕುಳಿತು ಪ್ರಚಾರ ನಡೆಸಿದ್ದಾರೆ. ಈ ವೇಳೆ ಬಿಜೆಪಿ (BJP) ಶಾಸಕ ಸಿ.ಟಿ.ರವಿಯವರನ್ನು ಸೋಲಿಸಲು ಕಾಂಗ್ರೆಸ್‍ಗೆ ಮತ ಹಾಕಬೇಕು. ಸಿದ್ದರಾಮಯ್ಯ ಹಾಗೂ ದೇವೇಗೌಡರಿಗೆ ಅವಮಾನ ಮಾಡಿದವರನ್ನು ಸೋಲಿಸಲು ಕಾಂಗ್ರೆಸ್‍ಗೆ ಮತ ಹಾಕಿ ಎಂದು ಕ್ಷೇತ್ರದ ಜನರಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಹೊಯ್ಸಳರ ನಾಡಲ್ಲಿ ತ್ರಿಕೋನ ಸ್ಪರ್ಧೆ – ಯಾರಾಗ್ತಾರೆ ಸಾಮ್ರಾಟ?
ಸಿ.ಟಿ ರವಿ, ಸಿದ್ದರಾಮಯ್ಯನವರನ್ನು (Siddaramaiah) ಸಿದ್ರಾಮುಲ್ಲಾಖಾನ್ ಎನ್ನುತ್ತಾರೆ. ದೇವೇಗೌಡರನ್ನು ಮುಂದಿನ ಜನ್ಮದಲ್ಲಿ ಮುಸ್ಲಿಮರಾಗಿ ಹುಟ್ಟಿ ಎನ್ನುತ್ತಾರೆ. ಅಲ್ಲದೆ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರ ಬಗ್ಗೆಯೂ ಮಾತನಾಡುತ್ತಾರೆ. ಅವರಿಗೆ ಮತದಾರರು ಪಾಠ ಕಲಿಸಬೇಕು. ನೀವು ಹಾಲುಮತದ ಕುಟುಂಬದಲ್ಲಿ ಹುಟ್ಟಿದ್ದರೆ, ಸಿದ್ದರಾಮಯ್ಯರಿಗೆ ಅವಮಾನ ಮಾಡಿದವರಿಗೆ ಬುದ್ಧಿ ಕಲಿಸಿ. ಇಲ್ಲದಿದ್ದರೆ ನೀವು ಆ ಕುಟುಂಬದಲ್ಲಿ ಹುಟ್ಟೇ ಇಲ್ಲ ಎಂದರ್ಥ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಶುಕ್ರವಾರ ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರಕ್ಕೆ ಕಡೆಯ ಬಜೆಟ್ (Budget), ಎಲೆಕ್ಷನ್ ಬಜೆಟ್. ಕಾಂಗ್ರೆಸ್ ಪ್ರಣಾಳಿಕೆಗೆ ಟಕ್ಕರ್ ಕೊಡುವ ಜನಪ್ರಿಯ ಯೋಜನೆಗಳನ್ನೊಳಗೊಂಡ ಬಜೆಟ್ ಕೊಡುವತ್ತ ಸಿಎಂ ಬೊಮ್ಮಾಯಿ ಚಿತ್ತವಿದೆ. ಎಲೆಕ್ಷನ್‌ಗೂ ಬೂಸ್ಟ್, ಪಕ್ಷಕ್ಕೂ ಬೂಸ್ಟ್ ಎಂಬ ಸೂತ್ರದ ಛಾಯೆ ಬಜೆಟ್ ಮೇಲೆ ಬೀಳುವ ಸಾಧ್ಯತೆಯಿದೆ.
ವಿಧಾನಸಭೆಯಲ್ಲಿ ಶುಕ್ರವಾರ ಬೆಳಗ್ಗೆ 10:30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ 2ನೇ ಬಜೆಟ್ ಮಂಡಿಸಲಿದ್ದಾರೆ. ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿಗಿಂತ ಹೆಚ್ಚು ಸಂಗ್ರಹವಾಗಿದೆ ಎನ್ನಲಾಗಿದ್ದು, ಬಜೆಟ್ ಗಾತ್ರ ಸುಮಾರು 3 ಲಕ್ಷ ಕೋಟಿ ರೂ. ದಾಟುವ ಸಾಧ್ಯತೆ ಇದೆ. 2023-24ನೇ ಸಾಲಿನ ರಾಜ್ಯ ಬಜೆಟ್ (Karnataka Budget 2023-24) ನಿರೀಕ್ಷೆಗಳೂ ಹೆಚ್ಚು, ಸವಾಲುಗಳೂ ಹೆಚ್ಚು. ಪಕ್ಕಾ ಚುನಾವಣಾ ಲೆಕ್ಕಾಚಾರಗಳೊಂದಿಗೆ ಆಯವ್ಯಯ ಮಂಡನೆಗೆ ಮುಂದಾಗಿದ್ದಾರೆ ಸಿಎಂ.
ಉಚಿತ ಘೋಷಣೆಗಳನ್ನೂ ಒಳಗೊಂಡ ಜನತೆಗೆ ತೆರಿಗೆ ಹೊರೆ ಇಲ್ಲದ ಬಜೆಟ್ ಮಂಡನೆಗೆ ಪ್ಲಾನ್ ಮಾಡಿದ್ದು, ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಜನಪ್ರಿಯ ಉಚಿತ ಸ್ಕೀಮ್‌ಗಳೂ ಹೆಚ್ಚಿರುವ ಸಾಧ್ಯತೆ ಇದೆ. ರೈತರು, ಕಾರ್ಮಿಕರು, ಮಹಿಳೆಯರು, ಎಸ್‌ಸಿ, ಎಸ್‌ಟಿ, ಹಿಂದುಳಿದ ಜಾತಿ ವರ್ಗಗಳ ಕಲ್ಯಾಣಕ್ಕೆ ಒತ್ತು ಕೊಡುವ ಸಾಧ್ಯತೆ ಇದೆ.
ಬೊಮ್ಮಾಯಿ ಬಜೆಟ್ ನಿರೀಕ್ಷೆಗಳೇನು?
* ಕಾಂಗ್ರೆಸ್‌ನ ಗೃಹ ಲಕ್ಷ್ಮಿ ಯೋಜನೆಗೆ ಸೆಡ್ಡು ಹೊಡೆಯಲು ಸ್ತ್ರೀ ಶಕ್ತಿ ಯೋಜನೆ ಜಾರಿ ಸಾಧ್ಯತೆ.
* ಪ್ರತಿ ಕುಟುಂಬದ ಗೃಹಿಣಿಗೆ ಆರ್ಥಿಕ ಸಹಾಯ ನೀಡುವ ಯೋಜನೆ ಸ್ತ್ರೀ ಶಕ್ತಿ ಯೋಜನೆ ಜಾರಿ ಸಾಧ್ಯತೆ.
* ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ 3 ಲಕ್ಷದದಿಂದ 5 ಲಕ್ಷ ರೂ.ಗೆ ಹೆಚ್ಚಳ ಸಾಧ್ಯತೆ.
* ಮಹಿಳೆಯರಿಗೆ ಸ್ತ್ರೀ ಶಕ್ತಿ ಸಂಘಗಗಳ ಮೂಲಕ ಸಾಲ ಯೋಜನೆ ಜಾರಿ ಸಾಧ್ಯತೆ.
* ರಾಜ್ಯದೆಲ್ಲೆಡೆ ನಮ್ಮ ಕ್ಲಿನಿಕ್‌ಗಳ ಹೆಚ್ಚಳ, ಹೋಬಳಿ ಮಟ್ಟದ ತನಕ ನಮ್ಮ ಕ್ಲಿನಿಕ್.
* ಬೆಂಗಳೂರು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ.
* ವಿವಿಧ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮಗಳ ಸ್ಥಾಪನೆ ಸಾಧ್ಯತೆ.
* ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಹೆಚ್ಚು ಹಣ ಮೀಸಲಿಡುವ ಘೋಷಣೆ ಸಾಧ್ಯತೆ.
* ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪ್ರತ್ಯೇಕ ಯೋಜನೆ ಘೋಷಣೆ ಸಾಧ್ಯತೆ.
* ಕುಲ ಕಸುಬು ಆಧಾರಿತ ಸಮುದಾಯಗಳಿಗೆ ಸಹಾಯಧನ ಸಾಧ್ಯತೆ.
* ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ವರದಿ ಅನುಷ್ಠಾನ ಘೋಷಣೆ ಸಾಧ್ಯತೆ. ಇದನ್ನೂ ಓದಿ: ಬಜೆಟ್‌ನಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಅನುದಾನ: ಬೊಮ್ಮಾಯಿ ಭರವಸೆ
ಈ ನಡುವೆ ಸಾಲ ಮನ್ನಾದಂತಹ ಬಜೆಟ್ ಘೋಷಣೆಗೆ ಕೈ ಹಾಕುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕೆಲ ಅಭಿವೃದ್ಧಿ ನಿಗಮಗಳಲ್ಲಿ ಪಡೆದಿರುವ ಸಾಲಮನ್ನಾಗೆ ಬೇಡಿಕೆ ಪ್ರಸ್ತಾಪ ಇದೆ. ಆದರೆ ಕೆಲ ಸಬ್ಸಿಡಿ ಇಳಿಕೆ ವಿಚಾರದಲ್ಲಿ ಕ್ರಮಗಳನ್ನು ತೆಗೆದುಕೊಂಡಿರುವ ಕೇಂದ್ರ ಸರ್ಕಾರದ ನಿಲುವು, ಸಾಲಮನ್ನಾ ಯೋಜನೆಗಿಂತ ಸುಧಾರಣಾ ಕ್ರಮಗಳತ್ತ ಪ್ರಧಾನಿ ನರೇಂದ್ರ ಮೋದಿ ಕೂಡ ಒಲವು ವ್ಯಕ್ತಪಡಿಸಿರುವ ಕಾರಣದಿಂದಾಗಿ ಸಾಲಮನ್ನಾ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಬೊಮ್ಮಾಯಿ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
2018ರಲ್ಲಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಪೂರ್ಣ ಆಗಲಿಲ್ಲ. ಸಿದ್ದರಾಮಯ್ಯ ಅಧಿಕಾರ ಹೋಗಿ ಇನ್ನೊಂದು ಬಜೆಟ್ ಬಂತು. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ 5 ತಿಂಗಳಲ್ಲೇ ಇನ್ನೊಂದು ಬಜೆಟ್ ಆಗಿದ್ದು, ಅಂದು ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಹೆಚ್.ಡಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಿದ್ದರು. ಹೀಗಾಗಿ ಬೊಮ್ಮಾಯಿ ಬಜೆಟ್ 4-5 ತಿಂಗಳ ಎಲೆಕ್ಷನ್ ಬಜೆಟ್ ಆಗಿದ್ದು, ಮುಂದೆಯೂ ಬಿಜೆಪಿ ಸರ್ಕಾರ ಬಂದರೆ ಮಾತ್ರ ಅವರ ಬಜೆಟ್ ಭದ್ರವಾಗಿರುತ್ತದೆ. ಒಟ್ಟಿನಲ್ಲಿ ಎಲೆಕ್ಷನ್ ಬಜೆಟ್ ಆದರೂ ಜನಪ್ರಿಯ ಯೋಜನೆಗಳ ಘೋಷಣೆಗಳ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಬೊಮ್ಮಾಯಿ ಕಡೆಯ ಆಟ ಹೇಗೆ ಜನರನ್ನು ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಕಳ್ಳತನ ತಡೆಯಲು ವಿಜಿಲೆನ್ಸ್ ಪಡೆ ಸ್ಥಾಪನೆ: ಬೊಮ್ಮಾಯಿ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕಾಂಗ್ರೆಸ್ ಪಕ್ಷ ಮೇಕೆದಾಟು ಪಾದಯಾತ್ರೆಯನ್ನು ಆರಂಭಿಸಿದೆ. ಈ ವಿಚಾರವಾಗಿ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಬಿಜೆಪಿ ಸರ್ಕಾರ, ಈಗ ಡಿ.ಕೆ.ಶಿವಕುಮಾರ್ ಅವರಿಗೆ ಸಂಬಂಧಿಸಿದ ಒಂದು ವೀಡಿಯೋವನ್ನು ಹಂಚಿಕೊಂಡು ವ್ಯಂಗ್ಯವಾಡಿದೆ.
ಮೆಕೆದಾಟು ಪಾದಯಾತ್ರೆ ಯಶಸ್ವಿಗಾಗಿ ಉದ್ಘಾಟನೆಗೂ ಮುನ್ನ ಡಿ.ಕೆ.ಶಿವಕುಮಾರ್ ಸಂಗಮದಲ್ಲಿ ವಿಶೇಷ ಪೂಜೆ ಮಾಡಿದ್ದಾರೆ. ಈ ವೇಳೆ ಅವರ ಕಾಲು ಸ್ಲಿಪ್ ಆಗಿತ್ತು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋವನ್ನು ಬಿಜೆಪಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ʻಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿʼ ಎಂದು ವ್ಯಂಗ್ಯವಾಡಿದೆ. ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಚಾಲನೆ
ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಸಚಿವ ಸುನೀಲ್ ಕುಮಾರ್ ಟ್ವೀಟ್ ಮೂಲಕವಾಗಿ ವಾಗ್ದಾಳಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಮೇಕೆದಾಟು ಯೋಜನೆ ನೆನಪಾಗಲಿಲ್ಲವೇ? ಈಗ ಪಾದಯಾತ್ರೆ ಮಾಡುವ ಬದಲು ಅಂದೇ ಯೋಜನೆಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಿಸಬಹುದಿತ್ತಲ್ಲವೇ? ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ಮೇಕೆದಾಟು ನಡಿಗೆಯಲ್ಲಿ ಸುಸ್ತಾದ ಸಿದ್ದರಾಮಯ್ಯ – ಕಾರಿನಲ್ಲಿ ವಾಪಸ್
ಅಧಿಕಾರವಿದ್ದಾಗ ಮೇಕೆದಾಟು ಯೋಜನೆ ಬಗ್ಗೆ ಕಾಂಗ್ರೆಸ್ ನಿರ್ಲಕ್ಷ್ಯ ತೋರಿಸಿತ್ತು. ಈಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೀದಿನಾಟಕ ಮಾಡುತ್ತಿದೆ. ಅಧಿಕಾರದಲ್ಲಿದ್ದಾಗ ಇಲ್ಲದ ಇಚ್ಛಾಶಕ್ತಿ, ಚುನಾವಣೆಗಾಗಿ ಬಂದಿರುವ ಹಠಾತ್ ರಾಜಕೀಯ ಆಸಕ್ತಿ ಎಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ಮೇಕೆದಾಟು ಯೋಜನೆ ಜಾರಿ ಮಾಡುವ ನೈಜ ಬದ್ಧತೆ ಇರುವುದು ಬಿಜೆಪಿಗೆ ಮಾತ್ರ ಎಂದು ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಸಚಿವ ಸುಧಾಕರ್ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಬೀದರ್: ಮಹಾತ್ಮ ಗಾಂಧಿ ಹೆಸರಿನಲ್ಲಿ ಈ ದೇಶದ ಜನರಿಗೆ ಕಾಂಗ್ರೆಸ್ ಟೋಪಿ ಹಾಕಿ ಮೋಸ, ವಂಚನೆ ಮಾಡಿದೆ. ಎಂದು ಬೀದರ್‌ನಲ್ಲಿ ನಡೆದ ಜನ ಸ್ವರಾಜ್ ಯಾತ್ರೆ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನವರು ದೇಶದ ಜನರನ್ನು ಬಡವರನ್ನಾಗಿಸಿದ್ದಾರೆ. ಗ್ರಾಮ ಸ್ವರಾಜ್ ಕಲ್ಪನೆಗೆ ಕಾಂಗ್ರೆಸ್ ಶಕ್ತಿ ತುಂಬಿಲ್ಲ, ಶಕ್ತಿ ತುಂಬಿದ್ದು ಪ್ರಧಾನಿ ಮೋದಿ. ಕಾಂಗ್ರೆಸ್ ಆಡಳಿತದಲ್ಲಿ ಈ ರಾಷ್ಟ್ರವನ್ನು ಜನರು ಭಿಕ್ಷೆ ಬೇಡುವ ರಾಷ್ಟ್ರ ಎಂದು ಕರೆದಿದ್ದರು ಯಾಕೆಂದ್ರೆ ಕಾಂಗ್ರೆಸ್ ಈ ದೇಶಕ್ಕೆ ನೀಡಿದ ಕೊಡುಗೆ ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ, ನಿರುದ್ಯೋಗ ಎಂದು ಕಿಡಿಕಾರಿದರು. ಇದನ್ನೂ ಓದಿ: ದೇಶದ ಮೊದಲ ಬಾಸ್ಕೆಟ್‌ಬಾಲ್ ಲೀಗ್‍ಗೆ ಅದ್ಧೂರಿ ಚಾಲನೆ
ಜವಾಹರಲಾಲ್ ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್‍ವರೆಗೆ ಕಳಂಕಿತರಾಗಿ ಜೈಲಿಗೆ ಹೋದವರೆ. ಲಾಲ್ ಬಹದ್ದೂರ್ ಶಾಸ್ತ್ರಿಯೊಬ್ಬರೆ ಕಳಂಕ ರಹಿತ ಪ್ರಧಾನಿ. ಕಾಂಗ್ರೆಸ್‍ನಿಂದ ಗರೀಬಿ ಹಠಾವೋ ಎಂಬ ಘೋಷಣೆ ಜೋರಾಗಿತ್ತು ಆದರೆ ಗರೀಬಿ ಹಠಾವೋ ಆಗಿದ್ದು ಈಶ್ವರ್ ಖಂಡ್ರೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಮನೆಯ ಬಡತನದ ನಿರ್ಮೂಲನೆಯಾಗಿದೆ ಆದರೆ ಬಡವರದ್ದು ಗರೀಬಿ ಹಠಾವೋ ಮಾತ್ರ ಆಗಲಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ವಿದರ್ಭ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ – ಫೈನಲ್‍ಗೆ ಲಗ್ಗೆ
ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೆ ಐಟಿ ರೇಡ್ ಬಿಜೆಪಿಯ ಆಂತರಿಕ ಕಿತ್ತಾಟದಿಂದ ಬೆಳಕಿಗೆ ಬಂದಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಮಾಜಿ ಸಿಎಂ ಬಿಎಸ್‍ವೈ ಹಾಗೂ ಡಿಕೆಶಿ ಆಪ್ತರ ಮೇಲೆ ಐಟಿ ದಾಳಿ ಸಂಬಂಧಿಸಿದಂತೆ ಕಲಬುರಗಿ ಏರ್‌ಪೋರ್ಟ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಟಿ ದಾಳಿ ಬಗ್ಗೆ ನನಗೆ ಯಾವುದೇ ರೀತಿಯ ಪ್ರತಿಕ್ರಿಯೆ ಇಲ್ಲ. ಆದರೆ ಉಪಚುನಾಣೆ ಸಂದರ್ಭದಲ್ಲಿ ಐಟಿ ದಾಳಿ ಸರ್ವೇ ಸಾಮಾನ್ಯ. ಆದರೆ ಬಿಎಸ್‍ವೈ ಆಪ್ತರ ಮೇಲೆ ದಾಳಿ ನಡೆದಿರುವುದು ಕುತೂಹಲ ಮೂಡಿಸಿದೆ. ಇದರಿಂದ ಅವರ ಪಕ್ಷದಲ್ಲಿ ಆಂತರಿಕ ಕಚ್ಚಾಟ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ದೂರಿದರು. ಇದನ್ನೂ ಓದಿ: ಬಿಎಸ್‍ವೈ ಆಪ್ತನ ಮನೆ ಮೇಲೆ ಐಟಿ ರೇಡ್
ಉಪಚುನಾಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾರು ಇವರು ನನಗೆ ಹೇಳೋಕೆ? ಅವರ ಯಾವ ಡೊಣ್ಣೆ ನಾಯಕ? ಅವರ ಪರ್ಮಿಷನ್ ತಗೋಂಡು ಅಭ್ಯರ್ಥಿ ಹಾಕಬೇಕಾ? ಎಲ್ಲಿ ಯಾವ ಅಭ್ಯರ್ಥಿ ನಿಲ್ಲಿಸಬೇಕೋ ಅಲ್ಲಿ ನಿಲ್ಲಿಸುತ್ತೇವೆ. ಅವರಿಗೆ ಪರಿಜ್ಞಾನ ಇದ್ದರೆ ನನ್ನ ಪಕ್ಷದ ಅಭ್ಯರ್ಥಿ ಬಗ್ಗೆ ಮಾತನಾಡಬಾರದು ಎಂದು ಕಿಡಿಕಾರಿದರು.
ಆರ್‌ಎಸ್‌ಎಸ್ ಕುರಿತು ಎಚ್‍ಡಿ ದೇವೆಗೌಡರ ಹೇಳಿಕೆ ವಿಚಾರವಾಗಿ, ಸ್ವಾತಂತ್ರ ಪೂರ್ವದ ಆರ್‌ಎಸ್‌ಎಸ್ ಬೇರೆ, ಈಗಿನ ಆರ್‌ಎಸ್‌ಎಸ್ ಬೇರೆ. ಈಗಿನ ಆರ್‌ಎಸ್‌ಎಸ್ ದೇಶವನ್ನು ಹಾಳು ಮಾಡುವ ಸಂಘಟನೆ. ದೇವೆಗೌಡರು ಹೇಳಿದ್ದು ಆರ್‌ಎಸ್‌ಎಸ್ ಸ್ವಾತಂತ್ರ ಪೂರ್ವದ ಸಂಘಟನೆ ಬಗ್ಗೆ ಎಂದರು. ಇದನ್ನೂ ಓದಿ: ದಿಢೀರ್ ಆರ್‌ಎಸ್‌ಎಸ್ ವಿರುದ್ಧ ಎಚ್‌ಡಿಕೆ ಮುಗಿಬಿದ್ದಿದ್ದು ಯಾಕೆ?
ಬೆಂಗಳೂರು: ಆರ್‌ಎಸ್‌ಎಸ್ ಸಂಘಟನೆ ಇಲ್ಲದೆ ಹೋಗಿದ್ದರೆ ಭಾರತ, ಪಾಕಿಸ್ತಾನ ಆಗುತಿತ್ತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ವಾಗ್ದಾಳಿ ನಡೆಸಿದ್ದಾರೆ.
ಆರ್‌ಎಸ್‌ಎಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಇದನ್ನು ಸಹಿಸಲು ಆಗದೇ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್ ಎಂದರೆ ದೇಶಭಕ್ತಿ ಸಂಸ್ಥೆ. ದೇಶದ ಪರ ಕೆಲಸ ಮಾಡುತ್ತಿದೆ. ಆರ್‌ಎಸ್‌ಎಸ್ ಇಲ್ಲವೆಂದಿದ್ದರೆ ಭಾರತ ಪಾಕಿಸ್ತಾನ ಆಗುತಿತ್ತು ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: RSS ನ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ- ಬಿಜೆಪಿ ವಿರುದ್ಧ ಎಚ್‍ಡಿಕೆ ವಾಗ್ದಾಳಿ
ಇದೇ ವೇಳೆ ತಾಲಿಬಾನ್ ಪದ ಬಳಕೆ ಮಾಡಿದ್ದ ಸಿದ್ದರಾಮಯ್ಯ ವಿರುದ್ಧವೂ ಚವ್ಹಾಣ್ ಆಕ್ರೋಶ ಹೊರ ಹಾಕಿದ್ದು, ಪಾಕಿಸ್ತಾನ, ತಾಲಿಬಾನ್ ಎಲ್ಲವೂ ಕಾಂಗ್ರೆಸ್ ಅವರೇ. ನಾವು ದೇಶಭಕ್ತರು. ಪ್ರಧಾನಿ ಮೋದಿ ನಾವೆಲ್ಲ ಒಂದು ಎನ್ನುತ್ತಿದ್ದಾರೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಲಿ. ಮಾಜಿ ಮುಖ್ಯಮಂತ್ರಿ ಆದವರು ಹೇಗೆ ಮಾತಾಡಬೇಕು ಎಂದು ಅರ್ಥ ಮಾಡಿಕೊಳ್ಳಬೇಕು. ಆರ್‌ಎಸ್‌ಎಸ್ ಏನು ಎಂದು ಜನತೆಗೆ ಗೊತ್ತಿದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸುತ್ತೇನೆ. ಆರ್‍ಎಸ್‍ಎಸ್ ಇರೋದಕ್ಕೆ ದೇಶ ಇದೆ. ನಾವು ದೇಶ ಸೇವೆ ಮಾಡುತ್ತಿದ್ದೇವೆ ಎಂದು ಚಾಟಿ ಬೀಸಿದರು. ಇದನ್ನೂ ಓದಿ: ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸಿಕೊಂಡರೆ ಎಚ್‍ಡಿಕೆಗೆ ಹೊಟ್ಟೆ ಉರಿ ಯಾಕೆ: ಸೂಲಿಬೆಲೆ ಪ್ರಶ್ನೆ