Tag: ಬಜೆಟ್ ಕೆರಿಯರ್ ಸ್ಪೈಸ್ ಜೆಟ್

  • ಮೇ 17ರಿಂದ ಸ್ಪೈಸ್ ಜೆಟ್ ನೌಕರರಿಗೆ ಲಸಿಕೆ

    ಮೇ 17ರಿಂದ ಸ್ಪೈಸ್ ಜೆಟ್ ನೌಕರರಿಗೆ ಲಸಿಕೆ

    ನವದೆಹಲಿ: ಕಂಪನಿಯ ಎಲ್ಲ ಉದ್ಯೋಗಿಗಳಿಗೆ ಕೋವಿಡ್-19 ಲಸಿಕೆ ನೀಡಲಾಗುತ್ತದೆ ಎಂದು ಬಜೆಟ್ ಕೆರಿಯರ್ ಸ್ಪೈಸ್ ಜೆಟ್ ಘೋಷಿಸಿದೆ.

    ಕಂಪನಿಯ ಪ್ರಾಯೋಜಿತ, ವ್ಯಾಕ್ಸಿನೇಷನ್ ಡ್ರೈವ್‍ನನ್ನು ದೆಹಲಿ ಮತ್ತು ಗುರುಗ್ರಾಮ್‍ನಿಂದ ಪ್ರಾರಂಭಿಸಲಾಗುತ್ತದೆ. ಸ್ಪೈಸ್ ಜೆಟ್‍ನ ಎಲ್ಲಾ ಉದ್ಯೋಗಿಗಳಿಗೂ ಲಸಿಕೆ ನೀಡಲಾಗುತ್ತದೆ ಮತ್ತು ನೌಕರರ ಕುಟುಂಬಸ್ಥರಿಗೂ ಲಸಿಕೆ ಹಾಕಲು ಸ್ಪೈಸ್‍ಜೆಟ್ ಪ್ರಯತ್ನಗಳನ್ನು ಮಾಡಲಿದೆ. ಮೊದಲಿಗೆ ಲಸಿಕೆಯನ್ನು ವಿಮಾನದಲ್ಲಿ ಕಾರ್ಯನಿರ್ವಹಿಸುವ ಫ್ರಂಟ್ ಲೈನ್ ಉದ್ಯೋಗಿಗಳಿಗೆ ನೀಡಲಾಗುತ್ತದೆ ನಂತರ ವಿಮಾನ ನಿಲ್ದಾಣದಲ್ಲಿರುವ ಸಿಬ್ಬಂದಿಗೆ ನೀಡಲಾಗುತ್ತದೆ ಎಂದು ಸ್ಪೈಸ್ ಜೆಟ್ ತಿಳಿಸಿದೆ.

    ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್‍ನ ಮೂರನೇ ಹಂತದಲ್ಲಿ 18-45 ವಯೋಮಾನದವರಿಗೆ ಲಸಿಕೆಯನ್ನು ಮೇ 1 ರಿಂದ ನೀಡಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಜನ ಲಸಿಕೆಯನ್ನು ಪಡೆದುಕೊಳ್ಳಲು ಸರ್ಕಾರ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿದೆ.