Tag: ಬಜಾರ್‌ ಸಿನಿಮಾ

  • ನನ್ನ ಬದುಕಿನ ಶಕ್ತಿ ನೀವು: ಪತಿಗೆ ಅದಿತಿ ಪ್ರಭುದೇವ ಲವ್ಲಿ ವಿಶ್

    ನನ್ನ ಬದುಕಿನ ಶಕ್ತಿ ನೀವು: ಪತಿಗೆ ಅದಿತಿ ಪ್ರಭುದೇವ ಲವ್ಲಿ ವಿಶ್

    ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ (Aditi Prabhudeva) ಕಿರುತೆರೆಗೆ ಎಂಟ್ರಿ ಕೊಟ್ಟು ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ. ದಾಂಪತ್ಯ ಜೀವನ ಮತ್ತು ಸಿನಿಮಾ ಬದುಕು ಎರಡನ್ನು ನಿಭಾಯಿಸಿಕೊಂಡು ಹೋಗ್ತಿದ್ದಾರೆ. ನನ್ನ ಬದುಕಿನ ಶಕ್ತಿ ನೀವು ಎಂದು ಪತಿಗೆ ಯಶಸ್‌ಗೆ (Yashas Patla) ವಿಶೇಷವಾಗಿ ಶುಭಕೋರಿದ್ದಾರೆ.

    ಪ್ರೀತಿಯ ಯಶು, ಹುಟ್ಟುಹಬ್ಬದ ಶುಭಾಶಯಗಳು. ನೀವೊಬ್ಬ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿತ್ವದವರು. ಮೌನಕ್ಕೂ ಅರ್ಥವಿದೆ ಎಂದು ತಿಳಿಸಿ ಕೊಟ್ಟ ಪ್ರೀತಿಯ ಗೆಳೆಯ ನೀವು. ನನ್ನ ಬದುಕಿನ ಶಕ್ತಿ ನೀವು ಎಂದು ಅದಿತಿ ಪ್ರಭುದೇವ ಪೋಸ್ಟ್ ಮಾಡಿದ್ದಾರೆ. ಆ ದೇವರು ಪ್ರಪಂಚದ ಎಲ್ಲಾ ಸುಖವನ್ನು, ನೆಮ್ಮದಿಯನ್ನು ನಿಮಗೆ ನೀಡಲಿ ಕಂದ. ಹಾಗೆಯೇ ನಾವಿಬ್ರೂ ಯಾವಾಗಲೂ ಹೀಗೆ ಒಟ್ಟಿಗೆ ಕಷ್ಟ ಸುಖದಲ್ಲಿ ಒಂದಾಗಿ, ಜೊತೆಯಾಗಿ ಬೆಳೆದು ಸಾಧನೆ, ನೆಮ್ಮೆದಿಯತ್ತ ಹೆಜ್ಜೆ ಹಾಕೋಣ ಎಂದು ನಟಿ ಪತಿಗೆ ವಿಶ್ ಮಾಡಿದ್ದಾರೆ.

     

    View this post on Instagram

     

    A post shared by ADITI PRABHUDEVA (@aditiprabhudeva)

    ನಿಮಗೆ ನೆನಪಿದೆಯಾ ಕಳೆದ ವರ್ಷ ಇದೇ ದಿವಸ ನೀವು ತಂದೆಯಾಗುವ ಸುದ್ದಿಯನ್ನು ನೀಡಿದೆ. ಈ ವರ್ಷ ನಾವು ಇಬ್ಬರಲ್ಲ ಮೂವರು. ಈ ವರ್ಷದ ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮ ಮಗಳೇ ನಾನು ನಿಮಗೆ ನೀಡಿರುವ ಮುದ್ದಾದ ಉಡುಗೊರೆ. ಏನಂತೀರಾ?? ಎಲ್ಲದಕ್ಕೂ ಧನ್ಯವಾದಗಳು. ಹ್ಯಾಪಿ ಬರ್ತ್ಡೇ ಎಂದು ನಟಿ ಬರೆದುಕೊಂಡಿದ್ದಾರೆ.

    ಅಂದಹಾಗೆ, ಬಜಾರ್ ಸಿನಿಮಾ ನಟಿ ಅದಿತಿ 2022ರಲ್ಲಿ ಉದ್ಯಮಿ ಯಶಸ್ ಪಾಟ್ಲಾ ಜೊತೆ ಮದುವೆಯಾದರು. ಇದೀಗ ಮುದ್ದು ಮಗಳ ಆರೈಕೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ.

  • ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ

    ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ

    ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ (Aditi Prabhudeva) ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಪಾಲನೆಯಲ್ಲಿ ಬ್ಯುಸಿಯಿದ್ದ ನಟಿ ಈಗ ಕ್ಯಾಮೆರಾ ಮುಂದೆ ಬಂದಿದ್ದಾರೆ. ಮತ್ತೆ ಕಿರುತೆರೆಗೆ ಎಂಟ್ರಿ ಕೊಡುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ.

    ವಿಶಿಷ್ಟ ಜೋಡಿಗಳ ಸಮಾಗಮದ ‘ರಾಜ ರಾಣಿ’ (Raja Rani) ಶೋನಲ್ಲಿ ಅದಿತಿ ಪ್ರಭುದೇವ ಜಡ್ಜ್ ಆಗಿ ಎಂಟ್ರಿ ಕೊಡ್ತಿದ್ದಾರೆ. ಸೃಜನ್ ಲೋಕೇಶ್, ಹಿರಿಯ ನಟಿ ತಾರಾ ಜೊತೆ ಅದಿತಿ ಕೂಡ ಜಡ್ಜ್ ಆಗಿ ಸಾಥ್ ನೀಡುತ್ತಿದ್ದಾರೆ. ಇದನ್ನೂ ಓದಿ:ಟ್ರೋಲಿಗರ ವಿರುದ್ಧ ಸಿಡಿದೆದ್ದ ‘ಬಿಗ್‌ ಬಾಸ್‌’ ಮಾಜಿ ಸ್ಪರ್ಧಿ- ಸೈಬರ್ ಠಾಣೆಗೆ ಸುಷ್ಮಾ ವೀರ್ ದೂರು

    ಸದ್ಯ ರಿಲೀಸ್ ಆಗಿರುವ ‘ರಾಜ ರಾಣಿ’ ಶೋನ ಪ್ರೋಮೋದಲ್ಲಿ ಅದಿತಿ ಸ್ಟೈಲೀಶ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ರೆಡ್ ಕಲರ್ ಗೌನ್‌ನಲ್ಲಿ ಮಿಂಚಿದ್ದಾರೆ. ಬಹುದಿನಗಳ ನಂತರ ನೆಚ್ಚಿನ ನಟಿಯನ್ನು ನೋಡಿ ಅಭಿಮಾನಿಗಳು ಖುಷಿಪಡ್ತಿದ್ದಾರೆ. ಮಗು ಆಗಿ ಎರಡು ತಿಂಗಳು ಆಗಿದೆ. ಆ ಮಗುವನ್ನು ಬಿಟ್ಟು ಶೂಟಿಂಗ್ ಬರುತ್ತಿರಾ ಎಂದು ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

    ಇನ್ನೂ ‘ರಾಜ ರಾಣಿ’ ಶೋನಲ್ಲಿ ಏನೆಲ್ಲಾ ಹೊಸತನ ಇರಲಿದೆ ಎಂಬುದರ ಬಗ್ಗೆ ಅಭಿಮಾನಿಗಳು ಕ್ಯೂರಿಯಸ್ ಆಗಿದ್ದಾರೆ.

    2022ರಲ್ಲಿ ಕೊಡಗಿನ ಬ್ಯುಸಿನೆಸ್‌ಮೆನ್ ಯಶಸ್ ಪಾಟ್ಲಾರನ್ನು ಅದಿತಿ ಮದುವೆಯಾದರು. ಏ.4ರಂದು ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.