Tag: ಬಜಾಜ್ ಆಟೋ

  • ವಿಶ್ವದ ಮೊದಲ CNG ಬೈಕ್ ಬಿಡುಗಡೆ ಮಾಡಿದ ಬಜಾಜ್

    ವಿಶ್ವದ ಮೊದಲ CNG ಬೈಕ್ ಬಿಡುಗಡೆ ಮಾಡಿದ ಬಜಾಜ್

    ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ (Bajaj Auto) ವಿಶ್ವದ ಮೊದಲ ಸಿಎನ್‌ಜಿ ಬೈಕ್ (CNG Bike) ‘ಬಜಾಜ್ ಫ್ರೀಡಂ 125’ (Bajaj Freedom 125) ಅನ್ನು ಬಿಡುಗಡೆಗೊಳಿಸಿದೆ. ಇದರ ಎಕ್ಸ್ ಶೋರೂಂ ಬೆಲೆ ರೂ.95,000 ದಿಂದ 1. 10 ಲಕ್ಷದವರೆಗೆ ಇದೆ.

    ಬಜಾಜ್ ಫ್ರೀಡಂ ಬೈಕ್ 125 ಸಿಸಿ ಎಂಜಿನ್ ಹೊಂದಿದ್ದು 9.5 ಪಿಎಸ್ ಪವರ್ ಮತ್ತು 9.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 2 ಲೀಟರ್ ಪೆಟ್ರೋಲ್ ಟ್ಯಾಂಕ್ ಮತ್ತು ಸೀಟ್ ನ ಕೆಳಗೆ 2 ಕೆಜಿ ಸಿಎನ್‌ಜಿ ಸಿಲಿಂಡರ್ ಅನ್ನು ಈ ಬೈಕ್ ಹೊಂದಿದೆ. ಇದು CNGಯಲ್ಲಿ ಚಲಿಸುವಾಗ, ಪ್ರತಿ ಕಿಲೋಗ್ರಾಂಗೆ 102 ಕಿಲೋಮೀಟರ್‌ ಮೈಲೇಜ್ ಮತ್ತು ಪೆಟ್ರೋಲ್‌ನಲ್ಲಿ ಚಲಿಸುವಾಗ 67 ಕಿಲೋಮೀಟರ್‌ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕೇವಲ ಒಂದು ಸ್ವಿಚ್ ಪ್ರೆಸ್ ಮಾಡುವ ಮೂಲಕ CNGಯಿಂದ ಪೆಟ್ರೋಲ್ ಮತ್ತು ಪೆಟ್ರೋಲ್‌ನಿಂದ CNGಗೆ ಬದಲಾವಣೆ ಮಾಡಿಕೊಳ್ಳಬಹುದು.

    ಫ್ರೀಡಂ ಬೈಕ್ 147 ಕೆಜಿ ತೂಕವಿದ್ದು, 758 ಮಿಲಿಮೀಟರ್ ಉದ್ದದ ಸಿಂಗಲ್ ಪೀಸ್ ಸೀಟ್ ಹೊಂದಿದೆ. ನೋಡೋಕೆ ತುಂಬಾ ಸ್ಟೈಲಿಶ್ ಆಗಿರುವ ಫ್ರೀಡಂ ಬೈಕ್ ಸ್ಪೋರ್ಟಿ ಸ್ಟೈಲಿಂಗ್, ಪೂರ್ಣ ಡಿಜಿಟಲ್ ಸ್ಪೀಡೋ ಮೀಟರ್ ಜೊತೆ ಬ್ಲೂಟ್‌ಟೂತ್ ಕನೆಕ್ಟಿವಿಟಿ, ಫಸ್ಟ್-ಇನ್-ಕ್ಲಾಸ್ ಲಿಂಕ್ಡ್ ಮೊನೊಶಾಕ್ ಸಸ್ಪೆನ್ಷನ್, ಎಲ್‌ಇಡಿ ಹೆಡ್ ಲ್ಯಾಂಪ್, ಡ್ಯುಯಲ್ ಕಲರ್ ಸ್ಕೀಮ್ ಅನ್ನು ಹೊಂದಿದೆ.

    ಈ ಬೈಕ್ ಡಿಸ್ಕ್ LED, ಡ್ರಮ್ LED ಮತ್ತು ಡ್ರಮ್ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿದೆ. ಹೊಸ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌ಗಳ ಬುಕ್ಕಿಂಗ್‌ ಆರಂಭವಾಗಿದ್ದು, ಡೆಲಿವರಿಗಳು ಮೊದಲು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಪ್ರಾರಂಭವಾಗುತ್ತದೆ.

    ಬಜಾಜ್ ಫ್ರೀಡಂ 125 ಮೋಟಾರ್‌ಸೈಕಲ್ 11 ಸುರಕ್ಷತಾ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿದೆ. ಬಜಾಜ್ ಕಂಪನಿಯು ಫ್ರೀಡಂ 125 ಬೈಕನ್ನು ಈಜಿಪ್ಟ್, ತಾಂಜಾನಿಯಾ, ಕೊಲಂಬಿಯಾ, ಪೆರು, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾದಂತಹ ದೇಶಗಳಿಗೆ ರಫ್ತು ಮಾಡಲು ಯೋಜಿಸಿದೆ.

  • ಒಂದೇ ದಿನ 3 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು- ಏಷ್ಯನ್ ಪೇಂಟ್ಸ್, ಬಜಾಜ್ ಆಟೋ, ಮಾರುತಿಗೆ ಭಾರೀ ಲಾಭ

    ಒಂದೇ ದಿನ 3 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು- ಏಷ್ಯನ್ ಪೇಂಟ್ಸ್, ಬಜಾಜ್ ಆಟೋ, ಮಾರುತಿಗೆ ಭಾರೀ ಲಾಭ

    – ಪ್ರಧಾನಿ ಮೋದಿ ಆಲೋಚನೆಯಿಂದ ದೇಶ ಆರ್ಥಿಕತೆ ನಾಶ: ರಾಹುಲ್
    – ಮಾರುಕಟ್ಟೆ ತೆರೆಯುತ್ತಿದ್ದಂತೆ ಸೆನ್ಸೆಕ್ಸ್ 1,459 ಪಾಯಿಂಟ್ ಕುಸಿತ

    ಮುಂಬೈ: ಕೊರೊನಾ ವೈರಸ್ ಹಾಗೂ ಯೆಸ್ ಬ್ಯಾಂಕಿನ ಬಿಕ್ಕಟ್ಟಿನಿಂದ ಭಯಭೀತರಾದ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದಾಗಿ ಬಿಎಸ್‍ಇ ಸೆನ್ಸೆಕ್ಸ್ ಶುಕ್ರವಾರ 893.99 ಪಾಯಿಂಟ್‍ಗಳ ಕುಸಿತ ಕಂಡು 37,576.62 ಕ್ಕೆ ತಲುಪಿದೆ. ಅಂತೆಯೇ, ಎನ್‍ಎಸ್‍ಇ ನಿಫ್ಟಿ 368.15 ಪಾಯಿಂಟ್‍ಗಳ ಕುಸಿತದಿಂದ 11,000 ಪಾಯಿಂಟ್‍ಗಳ ಪಾತಾಳಕ್ಕೆ ತಲುಪಿದೆ.

    ಬ್ಯಾಂಕ್ ಷೇರುಗಳು ಬಿಎಸ್‍ಇಯಲ್ಲಿ ಶೇ.56 ಮತ್ತು ಎನ್‍ಎಸ್‍ಇಯಲ್ಲಿ ಶೇ.74 ಕುಸಿತ ಕಂಡಿವೆ. ಟಾಟಾ ಸ್ಟೀಲ್ ಷೇರುಗಳು ಬಿಎಸ್‍ಇಯಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದವು. ಬಜಾಜ್ ಆಟೋ, ಮಾರುತಿ ಮತ್ತು ಏಷ್ಯನ್ ಪೇಂಟ್ಸ್ ಮಾತ್ರ ಭಾರೀ ಲಾಭ ಗಳಿಸಿವೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್- ಒಂದೇ ದಿನಕ್ಕೆ ಚಿನ್ನದ ಬೆಲೆ 990 ರೂ. ಹೆಚ್ಚಳ

    ಮಾರುಕಟ್ಟೆ ತೆರೆದ ಕೂಡಲೇ ಸೆನ್ಸೆಕ್ಸ್ 1,459 ಪಾಯಿಂಟ್ ಕುಸಿದು, 37,011.09ಕ್ಕೆ ತಲುಪಿತ್ತು. ಬಿಎಸ್‍ಇಯಲ್ಲಿ ಗುರುವಾರ ದಿನದಂತ್ಯಕ್ಕೆ 37,524 ಪಾಂಯಿಂಟ್ಸ್ ಇತ್ತು. ಆದರೆ ಇಂದಿನ ದಿನದಂತ್ಯಕ್ಕೆ 893.99 ಪಾಯಿಂಟ್ಸ್ ಕಳೆದುಕೊಂಡು, 37,576.62 ಪಾಯಿಂಟ್ಸ್ ಗೆ ತಲುಪಿದೆ.

    ಎನ್‍ಎಸ್‍ಇ ಇಂದು 279.55 ಪಾಯಿಂಟ್ಸ್ ಕುಸಿತ ಕಂಡಿದೆ. ಗುರುವಾರ ದಿನದಂತ್ಯಕ್ಕೆ 10,979 ಪಾಂಯಿಂಟ್ಸ್ ಹೊಂದಿದ್ದ ನಿಫ್ಟಿ ಇಂದಿನ ದಿನದ ಅಂತ್ಯಕ್ಕೆ 10,989.45 ಪಾಯಿಂಟ್ಸ್ ತಲುಪಿದೆ.

    ಎನ್‍ಎಸ್‍ಇಯಲ್ಲಿ ಬ್ಯಾಂಕ್ ಷೇರುಗಳು ಶೇ.76 ರಷ್ಟು ಕುಸಿದಿವೆ. ಎಸ್‍ಬಿಐ ಷೇರುಗಳು ಶೇ.12 ಕಡಿಮೆ ಆಗಿದೆ. ಗುರುವಾರ, ಯೆಸ್ ಬ್ಯಾಂಕ್ ಅನ್ನು ಉಳಿಸಲು ಸರ್ಕಾರ ಎಸ್‍ಬಿಐಗೆ ಫಾರ್ವರ್ಡ್ ಮಾಡಬಹುದು ಎಂಬ ವರದಿಯಿತ್ತು. ಈ ಕಾರಣದಿಂದಾಗಿ ಎಸ್‍ಬಿಐ ಷೇರುಗಳು ಕುಸಿತ ಕಂಡಿವೆ.

    ಕೊರೊನಾ ವೈರಸ್ ಸೋಂಕು ಹೆಚ್ಚುತ್ತಲೇ ಇದೆ. ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 1 ಲಕ್ಷವನ್ನು ತಲುಪುತ್ತಿದೆ ಹಾಗೂ 3,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪರಿಣಾಮ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಿಂದ ನಿರಂತರವಾಗಿ ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಕಳೆದ 14 ವಹಿವಾಟು ಅವಧಿಯಲ್ಲಿ ಎಫ್‍ಐಐಗಳು ಭಾರತೀಯ ಮಾರುಕಟ್ಟೆಯಿಂದ 18,343 ಕೋಟಿ ರೂ. ಹಿಂಪಡೆದಿದ್ದಾರೆ.

    ಅಮೆರಿಕದ ಷೇರು ಮಾರುಕಟ್ಟೆ ಡೌ ಜೋನ್ಸ್ ಶೇ.3.58 ಮತ್ತು ನಾಸ್ಡಾಕ್ ಶೇ.3.10 ಇಳಿದಿದೆ. ನಿಕ್ಕಿ ಶೇ.2.94 ಮತ್ತು ಆಸ್ಟ್ರೇಲಿಯಾದ ಮಾರುಕಟ್ಟೆ ಶೇ.2.44 ಕುಸಿದಿದೆ.

    ಮೋದಿಯಿಂದ ನಾಶ:
    ಯೆಸ್ ಬ್ಯಾಂಕ್‍ನಲ್ಲಿನ ಬಿಕ್ಕಟ್ಟಿನ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಹನೆಯನ್ನು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದೆ. ಜೊತೆಗೆ ರಾಹುಲ್ ಗಾಂಧಿ ಅವರು, ಪ್ರಧಾನಿ ಮೋದಿ ಮತ್ತು ಅವರ ಆಲೋಚನೆಗಳು ಭಾರತದ ಆರ್ಥಿಕತೆಯನ್ನು ನಾಶಪಡಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.