Tag: ಬಜರಂಗದಳ

  • ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇಲ್ಲ: ಕಾಂಗ್ರೆಸ್‌ ವಿರುದ್ಧ ಫಡ್ನವೀಸ್‌ ವಾಗ್ದಾಳಿ

    ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇಲ್ಲ: ಕಾಂಗ್ರೆಸ್‌ ವಿರುದ್ಧ ಫಡ್ನವೀಸ್‌ ವಾಗ್ದಾಳಿ

    ಬೆಳಗಾವಿ: ಬಜರಂಗದಳ ನಿಷೇಧಕ್ಕೆ ಧೈರ್ಯ ಮಾಡುವವರಿಗೆ ಬಜರಂಗದಳದ ಶಕ್ತಿ ತೋರಿಸಲೇಬೇಕು ಎಂದು ಕಾಂಗ್ರೆಸ್‌ (Congress) ವಿರುದ್ಧ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ (Devendra Fadnavis) ಹರಿಹಾಯ್ದರು.

    ನಗರದ ಟಿಳಕಚೌಕನಲ್ಲಿ ಉತ್ತರ ಕ್ಷೇತ್ರದಲ್ಲಿ ನಡೆದ ಬಿಜೆಪಿ (BJP) ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಬಗ್ಗೆ ಪ್ರಸ್ತಾಪ ಮಾಡಿದೆ. ಅಷ್ಟೇ ಅಲ್ಲದೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧ ಹೇರುತ್ತೇವೆ ಎಂದು ಹೇಳಿದೆ. ಆದರೆ ಬಜರಂಗದಳ ನಿಷೇಧಿಸಲು ನಿಮ್ಮಪ್ಪನ ಬಳಿ ತಾಕತ್ ಇದೆಯಾ? ಯಾವನ ಅಪ್ಪನಿಗಾದರೂ ಧೈರ್ಯ ಇದೆಯಾ? ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇಲ್ಲ? ಬಜರಂಗದಳ ನಿಷೇಧ ಮಾಡ್ತೀವಿ ಅಂದ್ರೆ ಇದರ ಅರ್ಥ ಏನು ಎಂದು ಪ್ರಶ್ನಿಸಿದರು.

    ಕಾಂಗ್ರೆಸ್‌ ಪಕ್ಷದ ನಿಯತ್ತು ಹೇಗಿದೆ ಗೊತ್ತಾ?. ರಾಮಸೇತು ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ ರಾಮ ಕಾಲ್ಪನಿಕ ಎಂದು ಅಫಿಡೆವಿಟ್ ಸಲ್ಲಿಸಿದರು. ರಾಮನ ಅಸ್ತಿತ್ವ ಪ್ರಶ್ನಿಸುವ ಪಕ್ಷ ಒಂದೆಡೆ, ರಾಮಮಂದಿರ ಸ್ಥಾಪನೆ ಮಾಡುತ್ತಿರುವ ಪಕ್ಷ ಒಂದೆಡೆಯಾಗಿದೆ. ಬಜರಂಗಳ ಬ್ಯಾನ್ ಮಾಡಲು ತಾಕತ್ತಿದ್ದೇಯೇ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ‌ ಮಾಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಬಜರಂಗದಳ ನಿಷೇಧ ಮಾಡಲು ಆಗಲ್ಲ. ಅಂದು ರಾಮನನ್ನು ವಿರೋಧಿಸಿದವರು ಇಂದು ಹನುಮನನ್ನು ವಿರೋಧಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣ, ಬಜರಂಗಿ ನಮ್ಮ ಹಿಂದೂ ಸಂಸ್ಕೃತಿಯ ಅಸ್ಮಿತೆಯಾಗಿದೆ. ‌ರಾಮನ ಅಸ್ತಿತ್ವ ಬಗ್ಗೆ ಮಾತನಾಡುವವರಿಗೆ ಮತದಾನ ವೇಳೆ ತಕ್ಕಪಾಠ ಕಲಿಸಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್‌ ಹೈಪರ್‌ಮಾರ್ಕೆಟ್‌ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್‌!

    ಸಭೆಯಲ್ಲಿ ಸಂಸದೆ ಮಂಗಲ ಅಂಗಡಿ, ಶಾಸಕ ಅನಿಲ್ ಬೆನಕೆ, ಶಂಕರಗೌಡ ಪಾಟೀಲ,‌ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ್‌ ಭಾಗಿಯಾಗಿದ್ದರು. ಇದನ್ನೂ ಓದಿ: ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ – ವಿಡಿಯೋ ವೈರಲ್ ಬೆನ್ನಲ್ಲೇ ಪೇದೆ ಅಮಾನತು

  • ಕಾಂಗ್ರೆಸ್‍ನವರು ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದಾರೆ: ಅಶೋಕ್ ಕಿಡಿ

    ಕಾಂಗ್ರೆಸ್‍ನವರು ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದಾರೆ: ಅಶೋಕ್ ಕಿಡಿ

    ರಾಮನಗರ: ಬಜರಂಗದಳ (Bajaranagdal) ವನ್ನು ಬ್ಯಾನ್ ಮಾಡುತ್ತೇವೆ ಎಂಬ ಕಾಂಗ್ರೆಸ್ ಪ್ರಣಾಳಿಕೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಸಚಿವ ಆರ್.ಅಶೋಕ್ (R Ashok) ವಾಗ್ದಾಳಿ ನಡೆಸಿದ್ದಾರೆ.

    ಇಂದು ಕನಕಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾನು ಬಜರಂಗದಳದ ಸದಸ್ಯ, ಕಾಂಗ್ರೆಸ್ (Congress) ನಾಯಕರಿಗೆ ಧಮ್ಮಿದ್ರೆ, ತಾಕತ್ತಿದ್ರೆ ಕ್ರಮ ಜರುಗಿಸಲಿ ನೋಡೋಣ ಅಂತ ಸವಾಲೆಸೆದರು. ಕಾಂಗ್ರೆಸ್ ನವರು ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದಾರೆ, ಆ ಆಂಜನೇಯ ಬಾಲಕ್ಕೆ ಬೆಂಕಿ ಹತ್ತಿದಾಗ ಲಂಕೆಯನ್ನು ಸುಟ್ಟಂತೆಯೇ ಕಾಂಗ್ರೆಸ್ ಹಚ್ಚಿರುವ ಬೆಂಕಿ ಆ ಪಕ್ಷವನ್ನೇ ಅಗ್ನಿಗಾಹುತಿ ಮಾಡಲಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ:ಹೆಣ್ಣು ಸಿಗದ ಯುವಕರಿಗೆ ಮದುವೆ ಭಾಗ್ಯ – ಹುಬ್ಬೇರಿಸಿ ನೋಡುವಂತೆ ಪ್ರಣಾಳಿಕೆ ಘೋಷಿಸಿದ ಅಭ್ಯರ್ಥಿಗಳು

    ಸಿದ್ದರಾಮಯ್ಯ (Siddaramaiah) ಅವರು ಮೊದಲಿನಿಂದಲೂ ಕುಂಕುಮವನ್ನು ವಿರೋಧ ಮಾಡ್ತಾರೆ. ಟಿಪ್ಪು ಸುಲ್ತಾನ್ ಅವರನ್ನು ಓಲೈಕೆ ಮಾಡಿಕೊಳ್ಳುತ್ತಾರೆ. ಹಿಂದೂ ವಿರೋಧಿ ಭಾವನೆಯನ್ನು ಕಾಂಗ್ರೆಸ್ ಮಾಡಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಎಲ್ಲ ಕಡೆ ಪ್ರತಿಭಟನೆ ನಡೆಯುತ್ತಿದೆ. ಇದೇ ಕಾರಣಕ್ಕೆ ಎಲ್ಲಾ ಕಡೆ ಹನುಮಾನ್ ಚಾಲಿಸಾ (Hanuman Chalisa) ಪಠಣೆ ಮಾಡಲಾಗುತ್ತದೆ. ಕಾಂಗ್ರೆಸ್ ದೇಶದಲ್ಲಿ ಸರ್ವನಾಶವಾಗುತ್ತದೆ. ಲಂಕೆಯಲ್ಲಿ ರಾವಣ ಸಂಹಾರ ಆದ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಇದೆಲ್ಲವೂ ಕಾಂಗ್ರೆಸ್ ಗೆ ವ್ಯತಿರಿಕ್ತವಾಗುತ್ತದೆ. ಇದೆಲ್ಲವನ್ನೂ ನೋಡಿದ್ರೆ ಹಿಂದೂ ವಿರೋಧಿ ಕಾಂಗ್ರೆಸ್ ಅನ್ನೋದು ಗೊತ್ತಾಗುತ್ತದೆ ಎಂದರು.

    ಹಿಂದೆ ಅಖಂಡ ಶ್ರೀನಿವಾಸ್ (Akhanda SrinivasMurthy) ಮನೆಗೆ ಬೆಂಕಿ ಹಚ್ಚಲಾಗಿತ್ತು. ಆ ಟೈಮ್ ನಲ್ಲಿ ಏನಾಯ್ತು ಅಂತ ಎಲ್ಲರಿಗೂ ಗೊತ್ತು. ಅತಿ ಹೆಚ್ಚು ಮತಗಳಿಂದ ಅಖಂಡ ಶ್ರೀನಿವಾಸ ಮೂರ್ತಿ ಗೆದ್ದಿದ್ದರು. ಅಖಂಡ ಶ್ರೀನಿವಾಸ ಮೂರ್ತಿ ಒಬ್ಬ ದಲಿತ. ಅದಕ್ಕಾಗಿ ಆ ಭಾಗದ ಎಲ್ಲಾ ಮುಲ್ಲಾಗಳು ಬಂದು ಟಿಕೆಟ್ ಕೊಡಬೇಡಿ ಎಂದು ಹೇಳಿದ್ದರು. ಅದಕ್ಕಾಗಿಯೇ ಶ್ರೀನಿವಾಸ್‍ಗೆ ಟಿಕೆಟ್ ಕೈತಪ್ಪಿತ್ತು. ಯಾರು ಬೆಂಕಿ ಹಚ್ಚಿದ್ದಾರೆ ಅವರೆಲ್ಲ ಚೆನ್ನಾಗಿದ್ದಾರೆ. ಕಾಂಗ್ರೆಸ್ ಹಿಂದೂ ವಿರೋಧಿ ಧೋರಣೆ ಎದ್ದು ಕಾಣುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ರು.

  • ಕಿರುಕುಳ ನೀಡುವ ಬಜರಂಗದಳಕ್ಕೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ: ಎಚ್ ವಿಶ್ವನಾಥ್

    ಕಿರುಕುಳ ನೀಡುವ ಬಜರಂಗದಳಕ್ಕೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ: ಎಚ್ ವಿಶ್ವನಾಥ್

    ಮಡಿಕೇರಿ: ಜನರಿಗೆ ಕಿರುಕುಳ ನೀಡುವ ಬಜರಂಗದಳಕ್ಕೂ (Bajrang Dal) ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್  (H.Vishwanath) ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

    ಮಡಿಕೇರಿಯಲ್ಲಿ (Madikeri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳದವರು ನೈತಿಕ ಪೊಲೀಸ್ ಗಿರಿ ಮಾಡುತ್ತಾರೆ. ಜನರಿಗೆ ಪಾರ್ಕಲ್ಲಿ ಒಟ್ಟಿಗೆ ಓಡಾಡಲು ಬಿಡುವುದಿಲ್ಲ. ಇವರು ಸಮಾಜದಲ್ಲಿ ಅಶಾಂತಿಗೆ ಕಾರಣರಾಗಿದ್ದಾರೆ. ಆಂಜನೇಯ ಯಾವತ್ತೂ ಕಿರುಕುಳ ಕೊಟ್ಟವನಲ್ಲ. ಆದರೆ ಬಜರಂಗದಳದವರು ಕಾನೂನು ಕೈಗೆ ತೆಗೆದುಕೊಂಡು ಎಷ್ಟೋ ಸಾವುಗಳಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ತಮ್ಮ ಮಗನನ್ನು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಲಿ – ಕಾಂಗ್ರೆಸ್ ಕಿಡಿ

    ಬಿಜೆಪಿ ನಾಯಕರ ಹೆಣ್ಣು ಮಕ್ಕಳು ಬೇರೆ ಧರ್ಮದವರನ್ನು ಮದುವೆ ಆಗಿಲ್ಲವೇ? ಲವ್ ಮಾಡಿಲ್ಲವೇ? ಪ್ರತಿ ಮಾತಿಗೂ ಆಂಜನೇಯ ಎಂದು ಹೇಳುವುದು ಸರಿಯಲ್ಲ. ಭಜರಂಗದಳ ಒಂದು ಸಂಘಟನೆ ಮಾತ್ರ ಎಂದಿದ್ದಾರೆ.

    ನಾನು ಹಿಂದೂ, ಆಂಜನೇಯನ ಭಕ್ತ, ನನ್ನ ರಾಮ ವಿರಾಟ್ ಅಲ್ಲ ಶಾಂತಿ ಸೌಹಾರ್ದತೆಯ ರಾಮ, ಗಾಂಧಿ ಹೇಳಿಕೊಟ್ಟ ರಾಮ ಎಂದಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ಇಂಟರ್‌ನೆಟ್ ಸ್ಥಗಿತ, ಸ್ಥಳದಲ್ಲಿ ಸೇನೆ

  • ಅಮಿತ್ ಶಾ ತಮ್ಮ ಮಗನನ್ನು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಲಿ – ಕಾಂಗ್ರೆಸ್ ಕಿಡಿ

    ಅಮಿತ್ ಶಾ ತಮ್ಮ ಮಗನನ್ನು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಲಿ – ಕಾಂಗ್ರೆಸ್ ಕಿಡಿ

    ಬೆಂಗಳೂರು: ಬಜರಂಗದಳ (Bajrang Dal) ಅತ್ಯತ್ತಮ ಸಂಘಟನೆಯಾಗಿದ್ದರೆ, ಅಮಿತ್ ಶಾ (Amit Shah) ಅವರು ತಮ್ಮ ಮಗನನ್ನು ಬಿಸಿಸಿಐ ಹುದ್ದೆಯಿಂದ ಕಿತ್ತು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ನೇಮಿಸಲಿ ಎಂದು ರಾಜ್ಯ ಕಾಂಗ್ರೆಸ್ ( Congress) ಟ್ವಿಟ್ಟರ್‌ನಲ್ಲಿ ದಾಳಿ ನಡೆಸಿದೆ.

    ಬಸವರಾಜ ಬೊಮ್ಮಾಯಿಯವರು (Basavaraj Bommai) ತಮ್ಮ ಮಗನ ಉದ್ಯಮವನ್ನು ಮುಚ್ಚಿಸಿ ರಾಜ್ಯಾಧ್ಯಕ್ಷನನ್ನಾಗಿ ಮಾಡಲಿ. ಬಿಜೆಪಿಗರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಡವರು, ದಲಿತ, ಹಿಂದುಳಿದವರ ಮಕ್ಕಳನ್ನು ಬಳಸಿ ಕೋರ್ಟಿಗೆ ಅಲೆಯುವಂತೆ ಮಾಡುವುದನ್ನು ಬಿಡಲಿ ಎಂದು ಕೆಂಡಕಾರಿದೆ. ಇದನ್ನೂ ಓದಿ: ಅಗತ್ಯವಿದ್ದರೆ ರಾಜ್ಯದಲ್ಲೂ ಬಜರಂಗದಳ ನಿಷೇಧ ಮಾಡ್ತೀವಿ – ಛತ್ತೀಸಗಢ ಸಿಎಂ

    ಕಾಂಗ್ರೆಸ್ ಟ್ವೀಟ್‍ನಲ್ಲಿ ಏನಿದೆ?
    ಬಜರಂಗದಳದ ಬಗ್ಗೆ ಬಹಳ ಮಾತನಾಡುವ ಬಿಜೆಪಿ (BJP) ನಾಯಕರಿಗೆ ಕಾಂಗ್ರೆಸ್ ಸರಣಿ ಪ್ರಶ್ನೆಗಳನ್ನಿಟ್ಟಿದೆ. ಸಿಟಿ ರವಿ ಮಕ್ಕಳು ಬಜರಂಗದಳದ ಯಾವ ಹುದ್ದೆಯಲ್ಲಿದ್ದಾರೆ? ಆರ್ ಅಶೋಕ್ ಮಗ ಬಜರಂಗದಳಲ್ಲಿ ಏನು ಕೆಲಸ ಮಾಡುತ್ತಿದ್ದಾರೆ? ತೇಜಸ್ವಿ ಸೂರ್ಯ ಏಕೆ ಬಜರಂಗದಳ ಸೇರಿಲ್ಲ? ಬೊಮ್ಮಾಯಿ ಮಗ ಬಜರಂಗದಳ ಸೇರಿ ಬೆಂಕಿ ಹಚ್ಚುವುದನ್ನು ಬಿಟ್ಟು ಉದ್ಯಮಿಯಾಗಿದ್ದೇಕೆ?

    ಬಜರಂಗದಳ ಬಿಜೆಪಿಯ ಅಂಗ ಸಂಘಟನೆಯೇ? ಇಷ್ಟೊಂದು ಮಮಕಾರ ತೋರುವ ಬಿಜೆಪಿ, ಬಜರಂಗದಳದವರಿಗೆ ಎಷ್ಟು ಟಿಕೆಟ್ ನೀಡಿದೆ? ಹಿರಿಯರ ನಾಯಕತ್ವವನ್ನು ಮುಗಿಸಲು ಅವರ ಮಕ್ಕಳು, ಸೊಸೆಯಂದಿರು, ಪತ್ನಿಯರಿಗೆ ಟಿಕೆಟ್ ನೀಡುವ ಬದಲು ಬಜರಂಗದಳದವರಿಗೆ ಟಿಕೆಟ್ ಏಕೆ ನೀಡಿಲ್ಲ?

    ಅಮಾಯಕ ಹುಡುಗರನ್ನು ಕಾನೂನು ವಿರೋಧಿ ಕೃತ್ಯಗಳಿಗೆ ಬಳಸಿ ಲಾಭ ಪಡೆಯುವುದು ಮಾತ್ರ ಬಿಜೆಪಿಯ ಕೆಲಸವೇ? ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವ ಬಜರಂಗದಳ ಪಿಎಫ್‍ಐ ಸೇರಿದಂತೆ ಯಾವುದೇ ಸಂಘಟನೆಯ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದರೆ ಬಿಜೆಪಿ ಉರಿದು ಬೀಳುತ್ತದೆ. ಆದರೆ ಸಂವಿಧಾನ ಬದಲಿಸುತ್ತೇವೆ ಎಂದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಎತ್ತಿದೆ.

    ಬಿಜೆಪಿಗೆ ಸಂವಿಧಾನ ಮುಖ್ಯವೇ, ಸಂವಿಧಾನ ವಿರೋಧಿ ಸಂಘಟನೆಗಳು ಮುಖ್ಯವೇ? ಸ್ಪಷ್ಟಪಡಿಸಿ ಮುಂದಿನ ಮಾತಾಡಲಿ. ಬಜರಂಗದಳ ಬಿಜೆಪಿಯ ಮುದ್ದಿನ ಕೂಸು ಎಂದಾದರೆ, ದಿನೇಶ್ ನಾಯ್ಕ ಎಂಬ ದಲಿತನ ಕೊಲೆಯ ಹೊಣೆಯನ್ನು ಬಿಜೆಪಿ ಹೊರಲಿ. ಮಂಗಳೂರಿನ ಪಬ್ ದಾಳಿಯ ಹೊಣೆಯನ್ನು ಬಿಜೆಪಿ ಹೊರಲಿ. ಸಮಾಜಘಾತುಕ ಕೃತ್ಯಗಳೆಲ್ಲದರ ಹೊಣೆಯನ್ನು ಬಿಜೆಪಿಯೇ ಹೊರಲಿ. ನಂತರ ಬಜರಂಗದಳವನ್ನು ಸಮರ್ಥಿಸಿಕೊಳ್ಳಲಿ ಎಂದು ಹರಿಹಾಯ್ದಿದೆ.

    ನಿಜವಾದ ಭಜರಂಗಿಗಳು (ಕ್ರೀಡಾಪಟುಗಳು) ದೆಹಲಿಯ ಜಂತರ್ ಮಂಥರ್‌ನಲ್ಲಿ ತಮಗಾದ ಶೋಷಣೆಯ ನೋವು ತಾಳದೆ ಪ್ರತಿಭಟಿಸುತ್ತಿದ್ದಾರೆ. ಮೋದಿಯವರೇ (Narendra Modi), ಇಲ್ಲಿನ ನಕಲಿ ಭಜರಂಗಿಗಳ ಓಲೈಕೆ ಬಿಟ್ಟು ಅಸಲಿ ಭಜರಂಗಿಗಳ ನೋವು ಆಲಿಸಿ. ಅಲ್ಲೂ “ಬಜರಂಗಿ ಪುನಿಯಾ” ಎಂಬ ಹೆಸರಿನ ಕ್ರೀಡಾಪಟು ನೋವಿನಲ್ಲಿದ್ದಾರೆ. ನಿಮಗೆ ಆ ಅಸಲಿ ಬಜರಂಗಿಗಳ ಹಿತ ಬೇಡವೇ ಎಂದು ಪ್ರಶ್ನಿಸಿ ಸರಣಿ ಟ್ವೀಟ್ ಮಾಡಿ ಕಿಡಿಕಾರಿದೆ. ಇದನ್ನೂ ಓದಿ: ಬ್ರಾಹ್ಮಣರು ಭಾರತದವರಲ್ಲ, ರಷ್ಯಾದಿಂದ ಬಂದಿದ್ದಾರೆ: ಆರ್‌ಜೆಡಿ ನಾಯಕ ಯದುವಂಶ್ ಕುಮಾರ್

  • ಬಜರಂಗದಳ ನಿಷೇಧ: ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ನಟಿ ರಮ್ಯಾ

    ಬಜರಂಗದಳ ನಿಷೇಧ: ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ನಟಿ ರಮ್ಯಾ

    ರಾಜ್ಯದಲ್ಲಿ ಬಜರಂಗದಳ (Bajrang Dal) ಬ್ಯಾನ್ ಮಾಡುವ ವಿಚಾರ ರಾಜಕೀಯ ಪಡಸಾಲೆಯಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿದೆ. ಕಾಂಗ್ರೆಸ್ (Congress) ಪಕ್ಷ ಬಿಡುಗಡೆ ಮಾಡಿರುವ ತನ್ನ ಪ್ರಣಾಳಿಕೆಯಲ್ಲಿ ‘ಬಜರಂಗದಳವನ್ನು ನಿಷೇಧ ಮಾಡಲಾಗುವುದು’ ಎಂದಿದೆ. ಇದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕೋಪಕ್ಕೆ ತುತ್ತಾಗಿದೆ. ಅದರಲ್ಲೂ ಬಿಜೆಪಿಯು ಇದನ್ನು ಚುನಾವಣಾ ಅಸ್ತ್ರವಾಗಿ ಕಾಂಗ್ರೆಸ್ ಮೇಲೆ ಪ್ರಯೋಗಿಸುತ್ತಿದೆ.

    ಈ ಕುರಿತಂತೆ ಕಾಂಗ್ರೆಸ್ ಪಕ್ಷದ ಸ್ಟಾರ್ ಕ್ಯಾಂಪೇನರ್ ರಮ್ಯಾ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಬಜರಂಗದಳವನ್ನು ಬ್ಯಾನ್ (Ban) ಮಾಡುತ್ತೇವೆ ಎಂದರೆ, ರಮ್ಯಾ ಈ ನಿಲುವು ಸರಿಯಾದದ್ದು ಅಲ್ಲ. ಒಂದು ಸಂಘಟನೆಯನ್ನು ಬ್ಯಾನ್ ಮಾಡಿದರೆ ಮತ್ತೊಂದು ಸಂಘಟನೆ ಹುಟ್ಟಿಕೊಳ್ಳುತ್ತದೆ’ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ಕೆಲವು ಸಲಹೆಗಳನ್ನೂ ರಮ್ಯಾ (Ramya) ಕೊಟ್ಟಿದ್ದಾರೆ.

    ಬನ್ನೂರಿನಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಬಂದಿದ್ದ ರಮ್ಯಾ, ಮಾಧ್ಯಮಗಳೊಂದಿಗೆ ಮಾತನಾಡಿ, ‘ದ್ವೇಷದ ಭಾಷಣ ಮಾಡುವವರ ವಿರುದ್ಧ ದೂರು ದಾಖಲಿಸಿ ಎಂದು ನ್ಯಾಯಾಲಯವೇ ಹೇಳಿದೆ. ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಕೂಡ ಇದೆ. ಅದನ್ನು ಸಮರ್ಥವಾಗಿ ಜಾರಿಗೆ ತಂದರೆ, ಬಜರಂಗ ದಳ ಬ್ಯಾನ್ ಮಾಡುವಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದಿದ್ಧಾರೆ.

  • ಅಂಜನಾದ್ರಿ ಅಭಿವೃದ್ಧಿ ಮಾಡ್ತೇವೆ, ಯುವಕರಿಗೆ ಆಂಜನೇಯನ ವಿಚಾರಗಳ ಬೆಳೆಸಲು ವಿಶೇಷ ಕಾರ್ಯಕ್ರಮ: ಡಿಕೆಶಿ

    ಅಂಜನಾದ್ರಿ ಅಭಿವೃದ್ಧಿ ಮಾಡ್ತೇವೆ, ಯುವಕರಿಗೆ ಆಂಜನೇಯನ ವಿಚಾರಗಳ ಬೆಳೆಸಲು ವಿಶೇಷ ಕಾರ್ಯಕ್ರಮ: ಡಿಕೆಶಿ

    ಮೈಸೂರು: ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಆಂಜನೇಯ ಹುಟ್ಟಿದ ಸ್ಥಳ ಅಂಜನಾದ್ರಿ (Anjanadri) ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ವಿಶೇಷ ಮಂಡಳಿ ರಚನೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಮೈಸೂರಿನಲ್ಲಿ (Mysuru) ಗುರುವಾರ ಹೇಳಿದ್ದಾರೆ. ಇದನ್ನೂ ಓದಿ: ತಂದೆಗೆ ಟಿಕೆಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಅಭ್ಯರ್ಥಿಯ ಪುತ್ರ – ಕಾಂಗ್ರೆಸ್‍ನಿಂದ ವೀಡಿಯೋ ರಿಲೀಸ್

    ನಗರದ ಚಾಮುಂಡೇಶ್ವರಿ ದೇವಾಲಯಕ್ಕೆ (Chamundeshwari Temple) ಭೇಟಿ ನೀಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿಗರಿಗೆ (BJP) ಗಾಬರಿಯಾಗಿದೆ. ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸವಿದೆ. ಬಜರಂಗದಳ ಒಂದು ರಾಜಕೀಯ ಪಕ್ಷದ ಭಾಗ. ಹುಟ್ಟುವ ಎಲ್ಲವೂ ಬಸವ ಆಗುವುದಕ್ಕೆ ಸಾಧ್ಯವಿಲ್ಲ. ಹನುಮಂತನ ಹೆಸರಿಟ್ಟುಕೊಂಡವರೆಲ್ಲಾ ಹನುಮಂತ ಆಗಲು ಸಾಧ್ಯವೇ ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

    ಬಜರಂಗದಳದವರು (Bajrang Dal) ನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದಾರೆ. ಬಜರಂಗ ಬಲಿಯ ನಿಜವಾದ ಭಕ್ತರು ನಾವು. ಬಜರಂಗಿಯ ಕುಂಕುಮ ನನ್ನ ಹಣೆಯಲ್ಲಿಯೇ ಇದೆ. ಈ ನಾಡಿನಲ್ಲಿ ಆಂಜನೇಯ ಹುಟ್ಟಿದ್ದಕ್ಕೆ ಸಾಕ್ಷಿ ಇದೆ. ಇತಿಹಾಸ ಸೃಷ್ಟಿಸಿದ ಆಂಜನೇಯ ದೇವಾಲಯ ಅಭಿವೃದ್ಧಿಗೆ ಕಾಂಗ್ರೆಸ್ ವಿಶೇಷ ಒತ್ತು ನೀಡಲಿದೆ. ಯುವಕರಿಗೆ ಆಂಜನೇಯನ ವಿಚಾರಗಳನ್ನು ಬೆಳೆಸಲು ವಿಶೇಷ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸಿದರು.

    ಬಿಜೆಪಿಯವರು ಒಂದಾದರೂ ಆಂಜನೇಯನ ದೇವಾಲಯವನ್ನು ಕಟ್ಟಿದ್ದಾರಾ? ಯಾರಿಗೆ ಏನೂ ಸಹಾಯ ಮಾಡಿದ್ದೇವೆ, ಕೆಲಸ ಮಾಡಿದ್ದೇವೆ ಎಂದು ಪ್ರಧಾನಿಗಳು ಭಾಷಣದಲ್ಲಿ ಹೇಳುತ್ತಿಲ್ಲ. ದೇವರ ಹೆಸರಿನಲ್ಲಿ ಪ್ರಧಾನಿ ಹಾಗೂ ಬಿಜೆಪಿ ರಾಜಕೀಯ ನಡೆಸಲು ಯತ್ನಿಸುತ್ತಿದೆ. ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಪ್ರಾಣಾಳಿಕೆಯನ್ನು ಈಶ್ವರಪ್ಪ ಸುಟ್ಟು ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರದ ಫಲವಾಗಿ ಬಿಜೆಪಿಗರು ಈಶ್ವರಪ್ಪನನ್ನೆ ಸುಟ್ಟು ಹಾಕಿದ್ದಾರೆ ಎಂದು ಹೇಳಿ ತಿರುಗೇಟು ನೀಡಿದರು.

    ಗರ್ಭಗುಡಿಯಲ್ಲಿ ರುದ್ರಾಕ್ಷಿ ಜಪ ಮಾಡಿದ್ದೇನೆ, ರಾಜ್ಯಕ್ಕೆ ಬಂದಿರುವ ದುಃಖವನ್ನು ದೂರ ಮಾಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇನೆ. ದುಷ್ಟರನ್ನು ದೂರ ಮಾಡಿ ಶಿಷ್ಟರನ್ನು ದೇವರು ಕಾಪಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ಧರಾಮಯ್ಯ ಪರವಾಗಿ ರಮ್ಯಾ, ಶಿವಣ್ಣ ದುನಿಯಾ ವಿಜಯ್ ಕ್ಯಾಂಪೇನ್

  • ಅಗತ್ಯವಿದ್ದರೆ ರಾಜ್ಯದಲ್ಲೂ ಬಜರಂಗದಳ ನಿಷೇಧ ಮಾಡ್ತೀವಿ – ಛತ್ತೀಸಗಢ ಸಿಎಂ

    ಅಗತ್ಯವಿದ್ದರೆ ರಾಜ್ಯದಲ್ಲೂ ಬಜರಂಗದಳ ನಿಷೇಧ ಮಾಡ್ತೀವಿ – ಛತ್ತೀಸಗಢ ಸಿಎಂ

    ರಾಯ್ಪುರ: ರಾಜ್ಯದಲ್ಲಿ ಬಜರಂಗದಳ (Bajrang Dal) ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ರಾಜ್ಯದಲ್ಲೂ ಸಂಘಟನೆಯನ್ನು ನಿಷೇಧಿಸಲಾಗುವುದು ಎಂದು ಛತ್ತೀಸಗಢ (Chhattisgarh) ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ (Bhupesh Baghel) ತಿಳಿಸಿದ್ದಾರೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್‌ (Congress) ಪ್ರಣಾಳಿಕೆ ಬಿಡುಗಡೆ ಮಾಡಿತು. ಪಕ್ಷ ಅಧಿಕಾರಕ್ಕೆ ಬಂದರೆ ಬಜರಂಗದಳ ಸಂಘಟನೆಯನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ಧ ಹಿಂದೂಪರ ಸಂಘಟನೆಗಳ ಆಕ್ರೋಶ ಹೊರಹಾಕಿವೆ. ಇದೇ ಹೊತ್ತಿನಲ್ಲಿ ಬಜರಂಗದಳ ಸಂಘಟನೆ ಬಗ್ಗೆ ಛತ್ತೀಸಗಢ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬ್ರಾಹ್ಮಣರು ಭಾರತದವರಲ್ಲ, ರಷ್ಯಾದಿಂದ ಬಂದಿದ್ದಾರೆ: ಆರ್‌ಜೆಡಿ ನಾಯಕ ಯದುವಂಶ್ ಕುಮಾರ್

    ಎರಡೂ ರಾಜ್ಯಗಳಲ್ಲಿನ ಪರಿಸ್ಥಿತಿಗಳು ವಿಭಿನ್ನವಾಗಿರುವ ಕಾರಣ ಕರ್ನಾಟಕದಲ್ಲಿ ತೆಗೆದುಕೊಂಡ ನಿರ್ಧಾರಗಳು ಛತ್ತೀಸಗಢಕ್ಕೆ ಅನ್ವಯಿಸುವುದಿಲ್ಲ. ಬಜರಂಗಿಗಳು ಇಲ್ಲಿ (ಛತ್ತೀಸ್‌ಗಢದಲ್ಲಿ) ಕೆಲವು ಗೊಂದಲಗಳನ್ನು ಉಂಟುಮಾಡಿದರು. ಅವೆಲ್ಲವನ್ನು ನಾವು ಸರಿಪಡಿಸಿದ್ದೇವೆ. ಕರ್ನಾಟಕ ಕಾಂಗ್ರೆಸ್‌ನ ನಿರ್ಧಾರಗಳು ಛತ್ತೀಸಗಢಕ್ಕೂ ಅನ್ವಯಿಸುವ ಅಗತ್ಯವಿಲ್ಲ. ಒಂದು ವೇಳೆ ಅಗತ್ಯವೆನಿಸಿದರೆ ಆಲೋಚಿಸಿ ಕ್ರಮಕೈಗೊಳ್ಳುತ್ತೇವೆ. ನಮ್ಮ ನಾಯಕರು ಮತ್ತು ಪಕ್ಷದ ಪದಾಧಿಕಾರಿಗಳು ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಹೇಳಿಕೆಗೆ ಛತ್ತೀಸಗಢ ರಾಜ್ಯದ ಬಜರಂಗದಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮೊದಲು ರಾಮ ಜನ್ಮಭೂಮಿ. ನಂತರ ರಾಮಸೇತು ಪುರಾವೆ ಕೇಳಿದರು. ಈಗ ಅವರು ಬಜರಂಗದಳವನ್ನು ಪ್ರಶ್ನಿಸುತ್ತಿದ್ದಾರೆ. ಛತ್ತೀಸಗಢದ ಜನರು ಇದನ್ನು ಸಹಿಸುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುತ್ತಾರೆ ಎಂದು ಹಿರಿಯ ಬಿಜೆಪಿ ನಾಯಕ ಬ್ರಿಜ್‌ಮೋಹನ್ ಅಗರ್ವಾಲ್ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ತಂದೆಗೆ ಟಿಕೆಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಅಭ್ಯರ್ಥಿಯ ಪುತ್ರ – ಕಾಂಗ್ರೆಸ್‍ನಿಂದ ವೀಡಿಯೋ ರಿಲೀಸ್

  • ಬಜರಂಗದಳ ಅಲ್-ಖೈದಾ ಅಲ್ಲ: ಸಿದ್ದರಾಮಯ್ಯ ವಿರುದ್ಧ ಅಪ್ಪಚ್ಚು ರಂಜನ್ ಕಿಡಿ

    ಬಜರಂಗದಳ ಅಲ್-ಖೈದಾ ಅಲ್ಲ: ಸಿದ್ದರಾಮಯ್ಯ ವಿರುದ್ಧ ಅಪ್ಪಚ್ಚು ರಂಜನ್ ಕಿಡಿ

    ಮಡಿಕೇರಿ: ಬಜರಂಗದಳ ಭಯೋತ್ಪಾದಕ ಸಂಘಟನೆಯಲ್ಲ. ಅದು ಅಲ್-ಖೈದಾವೂ ಅಲ್ಲ ಎಂದು ಮಡಿಕೇರಿ ಕ್ಷೇತ್ರ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ (Appachu Ranjan) ಸಿದ್ದರಾಮಯ್ಯ (Siddaramaiah) ವಿರುದ್ಧ ಕಿಡಿಕಾರಿದ್ದಾರೆ.

    ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ (Somwarpet) ತಾಲೂಕಿನ ಶಿರಂಗಾಲದಲ್ಲಿ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳ ಒಂದು ದೇಶಭಕ್ತ ಸಂಘಟನೆ. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಬಜರಂಗದಳವನ್ನು (Bhajarang Dal) ನಿಷೇಧ ಮಾಡುವುದಾಗಿ ಹೇಳಿದ್ದಾರೆ. ಅವರು ಅವಸಾನ ಹೊಂದುವುದು ಖಚಿತ ಎಂದು ಹರಿಹಾಯ್ದರು. ಇದನ್ನೂ ಓದಿ: ಪತ್ನಿ, ಸಹೋದರನಿಗಾಗಿ ಒಂದು ದಿನ ಆಸ್ಪತ್ರೆಗೆ ಭೇಟಿ – ಮತ್ತೊಂದು ದಿನ ಕ್ಷೇತ್ರದಲ್ಲಿ ಪ್ರಿಯಾಂಕ್ ಪ್ರಚಾರ

    ಬಜರಂಗದಳ ದೇಶಾಭಿಮಾನವನ್ನು ಪಸರಿಸುತ್ತಿರುವ ದೇಶಭಕ್ತರ ಸಂಘಟನೆ. ಅದು ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಇಂತಹ ಸಂಘಟನೆಯನ್ನು ನಿಷೇಧಿಸುತ್ತೇವೆ ಎಂದಿರುವ ಸಿದ್ದರಾಮಯ್ಯ ಈ ಬಾರಿ ವರುಣಾದಲ್ಲಿ (Varuna) ಸೋಲುವುದು ಖಚಿತ. ಅಲ್ಲದೇ ಕಾಂಗ್ರೆಸ್ (Congress) 40ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದರು. ಇದನ್ನೂ ಓದಿ: ಯತ್ನಾಳ್‌, ಪ್ರಿಯಾಂಕ್‌ ಖರ್ಗೆಗೆ ಶೋಕಾಸ್‌ ನೋಟಿಸ್‌ ಜಾರಿ

    ಇಂಗ್ಲೆಂಡ್‌ನಿಂದ ಟಿಪ್ಪುವಿನ ಖಡ್ಗ ತಂದ ವಿಜಯ್ ಮಲ್ಯ ಮಣ್ಣು ಮುಕ್ಕಿದರು. ಟಿಪ್ಪು ಧಾರವಾಹಿ ಮಾಡಿದ ಸಂಜಯ್ ಖಾನ್ ಸಹ ಮಣ್ಣು ಮುಕ್ಕಿದರು. ಇದೀಗ ಟಿಪ್ಪು ಜಯಂತಿ ಮತ್ತೆ ಮಾಡುತ್ತೇವೆ ಎನ್ನುತ್ತಿರುವ ಸಿದ್ದರಾಮಯ್ಯನವರ ಸರದಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್‌ ಬಜರಂಗಿ ಸಂಘರ್ಷ – ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಮೊಳಗಲಿದೆ ಹನುಮಾನ್ ಚಾಲೀಸಾ

  • ಕಾಂಗ್ರೆಸ್‌ ಬಜರಂಗಿ ಸಂಘರ್ಷ – ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಮೊಳಗಲಿದೆ ಹನುಮಾನ್ ಚಾಲೀಸಾ

    ಕಾಂಗ್ರೆಸ್‌ ಬಜರಂಗಿ ಸಂಘರ್ಷ – ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಮೊಳಗಲಿದೆ ಹನುಮಾನ್ ಚಾಲೀಸಾ

    ಬೆಂಗಳೂರು: ಬಜರಂಗ ದಳವನ್ನು (Bajrang Dal) ನಿಷೇಧಿಸುವ ಪ್ರಸ್ತಾಪ ಮಾಡಿದ ಕಾಂಗ್ರೆಸ್ (Congress) ಇದೀಗ ಪೇಚಾಡುವಂತಾಗಿದೆ. ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧ ಪ್ರಸ್ತಾಪ ಮಾಡಿದ್ದೇ ಮಾಡಿದ್ದು ಹಿಂದೂ (Hindu) ಸಂಘಟನೆಗಳು ಬೆಂಕಿಯುಂಡೆಯಂತಾಗಿದೆ.

    ಕಾಂಗ್ರೆಸ್ ಪ್ರಣಾಳಿಕೆ ವಿರೋಧಿಸಿ ಅಖಾಡಕ್ಕೆ ಇಳಿದಿರುವ ಬಜರಂಗದಳ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೇರಿಗೆ ಸವ್ವಾಸೇರು ಎನ್ನುವಂತೆ ಇಂದು ಹನುಮಾನ್ ಚಾಲೀಸಾ ಪಠಣ ಮಾಡಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ವಿಜಯನಗರ, ಜಯನಗರ, ಕತ್ರಿಗುಪ್ಪೆ, ರಾಜಾಜಿನಗರ, ಬನ್ನೇರುಘಟ್ಟ ಸೇರಿ ಬೆಂಗಳೂರಿನ 20 ಕಡೆಗಳಲ್ಲಿ ಹನುಮಂತನ ದೇವಾಲಯ, ರಾಮ ಮಂದಿರದಲ್ಲಿ  ಹನುಮಾನ್ ಚಾಲೀಸಾ ಪಠಣೆ ಮಾಡಿ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ತೊಡೆತಟ್ಟಿ ನಿಲ್ಲಲು ಬಜರಂಗದಳ, ಹಿಂದೂಸಂಘಟನೆಗಳು ನಿರ್ಧರಿಸಿದೆ.

     

    ಬಿಜೆಪಿ ನಾಯಕರು ಇಂದು ಹನುಮಾನ್ ಚಾಲೀಸಾ (Hanuman Chalisa) ಪಠಣೆಗೆ ಬರಲಿ ಬಿಡಲಿ. ಅದು ಅವರ ವಿವೇಚನೆಗೆ ಬಿಡಲಾಗಿದೆ. ಇದು ರಾಜಕೀಯ ಹೋರಾಟವಲ್ಲ ಹಿಂದೂಗಳ ಅಸ್ತಿತ್ವದ ಪ್ರಶ್ನೆ ಎಂದು ಬಜರಂಗದಳ ಹೇಳಿದೆ.  ಇದನ್ನೂ ಓದಿ: ಭಾರತ ಮೂಲದ ಅಜಯ್ ಬಂಗಾಗೆ ವಿಶ್ವಬ್ಯಾಂಕ್ ಅಧ್ಯಕ್ಷ ಪಟ್ಟ

    ಬಿಜೆಪಿಯಿಂದ ಬಜರಂಗಿ ಅಸ್ತ್ರ:
    ಕಳೆದ ಬಾರಿ ಚುನಾವಣೆ ವೇಳೆ ಲಿಂಗಾಯತ ಪ್ರತ್ಯೇಕಧರ್ಮ (Lingayat Religion) ವಿವಾದದಿಂದ ಕಾಂಗ್ರೆಸ್ ಕುರ್ಚಿ ಕಳೆದುಕೊಳ್ಳುವಂತಾಯಿತು. ಈ ಬಾರಿ ಬಜರಂಗದಳ ನಿಷೇಧಿಸುತ್ತೇವೆ ಎಂಬ ಕಾಂಗ್ರೆಸ್ ಪ್ರಣಾಳಿಕೆ ಪ್ರಸ್ತಾವನೆ ಬಿಜೆಪಿ (BJP) ಬ್ರಹ್ಮಾಸ್ತ್ರವಾಗಿ ಸಿಕ್ಕಿದೆ. ಈ ಅಸ್ತ್ರವನ್ನು ಬಿಜೆಪಿ ಪರಿಣಾಮಕಾರಿಯಾಗೇ ಬಳಸಿಕೊಳ್ಳುತ್ತಿದ್ದು ಹಿಂದೂ ಮತಗಳ ಕ್ರೋಢೀಕರಣಕ್ಕೆ ಮುಂದಾಗಿದೆ.

    ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಚಾರ ಭಾಷಣದಲ್ಲಿ ಬಜರಂಗಿ ಅಸ್ತ್ರ ಪ್ರಯೋಗಿಸಿದ್ದಾರೆ. ಮುಲ್ಕಿ, ಅಂಕೋಲಾ, ಬೈಲಹೊಂಗಲದಲ್ಲಿ ಬಜರಂಗಿ ಬಲಿ ಕೀ ಜೈ ಎಂದು ಹೇಳಿ ಭಾಷಣ ಆರಂಭಿಸುತ್ತಿದ್ದಾರೆ. ಈ ಮೂಲಕ ಜನರಿಗೆ ಹತ್ತಿರವಾಗಲು ಮುಂದಾಗಿದ್ದಾರೆ.

    ಇನ್ನೊಂದೆಡೆ, ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿಗರು ಮುಗಿಬಿದ್ದಿದ್ದಾರೆ. ಕಾಂಗ್ರೆಸ್‍ಗೆ ವಿನಾಶ ಕಾಲೇ ವಿಪರೀತ ಬುದ್ದಿ. ತಿರುಕನ ಕನಸು. ಕಾಂಗ್ರೆಸ್‍ನದ್ದು ಹಿಂದೂ ವಿರೋಧಿ ಮಾನಸಿಕತೆ. ಬಜರಂಗದಳ ನಿಷೇಧ ಮಾಡಿ ನೋಡಲಿ ಎಂದು ಸವಾಲು ಎಸೆದಿದ್ದಾರೆ.

  • ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವಭಕ್ತ – ಡಿಕೆಶಿ

    ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವಭಕ್ತ – ಡಿಕೆಶಿ

    – ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಕಿಡಿ

    ಬೆಂಗಳೂರು: ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವ ಭಕ್ತ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿಕೊಂಡಿದ್ದಾರೆ.

    ಕಾಂಗ್ರೆಸ್ ಪ್ರಣಾಳಿಕೆಯಲ್ಲಿ (Congress Manifesto) ಬಜರಂಗದಳ ಬ್ಯಾನ್ ವಿಚಾರ ಕೈ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್  ಹಾಗೂ ರಣದೀಪ್ ಸುರ್ಜೆವಾಲ ನಗರದ ಖಾಸಗಿ ಹೋಟೆಲೊಂದರಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ.ಕೆ ಶಿವಕುಮಾರ್, ಮೋದಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ.  ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಬಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ‌ ಹರಿಪ್ರಸಾದ್ 

    ಬಜರಂಗದಳ ಬ್ಯಾನ್ ಮಾಡ್ತೀವಿ ಅಂದಿದ್ದಕ್ಕೆ ಯಾಕೆ ಅವರು ಗಾಬರಿ ಆಗ್ತಿದ್ದಾರೆ. ಆಂಜನೇಯನಿಗೂ ಬಜರಂಗದಳಕ್ಕೂ ಏನ್ ಸಂಬಂಧ? ಬಹಳ ಪ್ರಚೋದನೆ ಉಂಟುಮಾಡ್ತಿದ್ದಾರೆ. ಜನಕ್ಕೆ ಇದೆಲ್ಲವೂ ಅರ್ಥವಾಗಿದೆ. ನಾವೂ ಹನುಮನ ಭಕ್ತರು, ಆಂಜನೇಯನ ಪ್ರವೃತ್ತಿಯವರು, ಆಂಜನೇಯ ಬೇರೆ, ಬಜರಂಗದಳ ಬೇರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಸೇರಿದ್ದು ಹೇಗೆ? – ಇನ್‌ಸೈಡ್‌ ಸ್ಟೋರಿ

    ಏಪ್ರಿಲ್ 4ರಂದು ಹನುಮಾನ್ ಚಾಲಿಸಾ ಪಠಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹನುಮಾನ್ ಚಾಲಿಸಾ ದಿನಾ ಪಠಿಸ್ತೀವಿ. ಹಿಂದಿನ ಆರ್‌ಎಸ್‌ಎಸ್ ಬೇರೆಯಿತ್ತು. ಈಗಿನ ಆರ್‌ಎಸ್‌ಎಸ್ ಬೇರೆ ಇದೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ಯಾಕೆ ನೋಡಿಕೊಳ್ತೀರಾ? ಮೊದಲು ನೀವು ದೇಶ ಉಳಿಸಿ ಎಂದು ಕುಟುಕಿದ್ದಾರೆ.

    ಬಜರಂಗಿ ಅಂತಾ ಕ್ಯಾಂಪೇನ್ ಮಾಡೋರು ಜನರ ಹೊಟ್ಟೆಗೆ ಏನು ಕೊಟ್ರಿ? ಎಷ್ಟು ಜನರಿಗೆ ಉದ್ಯೋಗ ಕೊಟ್ರಿ? ಎಂದು ಪ್ರಶ್ನಿಸಿದ ಡಿಕೆಶಿ ಪ್ರಣಾಳಿಕೆಯಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗಲ್ಲ. ಮೇ 13ರಂದು ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಪಕ್ಕಾ. ನಾನು ಹಿಂದೂ, ನಾನು ಆಂಜನೇಯನ ಭಕ್ತ, ನಾನೂ ರಾಮನ ಭಕ್ತ, ಶಿವಭಕ್ತ ಎಂದು ಹೇಳಿದ್ದಾರೆ.