Tag: ಬಜರಂಗದಳ

  • ಬಜರಂಗದಳ, ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರು ದಾಳಿ

    ಬಜರಂಗದಳ, ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರು ದಾಳಿ

    ಮಂಗಳೂರು: ಬಜರಂಗದಳ (Bajrangdal) ಮತ್ತು ಬಿಜೆಪಿ ಕಾರ್ಯಕರ್ತರ (bJP Activists) ಮೇಲೆ ತಲವಾರು ದಾಳಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಮಾಣಿ ಎಂಬಲ್ಲಿ ನಡೆದಿದೆ.

    ಫಲಿತಾಂಶದ ದಿನದ ಸಂಭ್ರಮಾಚರಣೆ ವೇಳೆ ನಡೆದಿದ್ದ ಗಲಾಟೆಗೆ ಪ್ರತೀಕಾರ ಶಂಕೆ ವ್ಯಕ್ತವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾದ ತಂಡದಿಂದ ದಾಳಿ ನಡೆದಿರುವ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಬಿಲ್ ಕೇಳಲು ಬಂದ ಲೈನ್‍ಮೆನ್ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿ ಅರೆಸ್ಟ್

    ಪೆರಾಜೆ (Peraje) ಬಜರಂಗದಳ ಸಂಚಾಲಕ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಮೇಲೆ ದಾಳಿಯಾಗಿದೆ. ಮಾಣಿ ಜಂಕ್ಷನ್ ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಓಮ್ನಿ ಕಾರಿನಲ್ಲಿ ಬಂದ ತಂಡ ಸ್ಕೂಟರ್‍ಗೆ ಡಿಕ್ಕಿ ಹೊಡೆದು ಕೃತ್ಯ ಎಸಗಿದೆ. ಘಟನೆಯಿಂದ ಯುವಕರ ಕಾಲು ಮತ್ತು ತಲೆಯ ಭಾಗಕ್ಕೆ ಗಾಯಗಳಾಗಿವೆ. ಹಲ್ಲೆಗೊಳಗಾದ ಇಬ್ಬರು ಯುವಕರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಮಂಗಳೂರು ನಿವಾಸಿ ರಾಕೇಶ್, ಮಾಣಿ ಮಂಜುನಾಥ್ ಯಾನೆ ಮಂಜು, ಪ್ರವೀಣ್ ನಾಯ್ಕ್ ಯಾನೆ ಮಹಾಲಿಂಗ ಮತ್ತಿತರ ತಂಡ ಹಲ್ಲೆ ನಡೆಸಿದ ಬಗ್ಗೆ ದೂರು ನೀಡಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರ ತಂಡ ಭೇಟಿ ನೀಡಿ ತನಿಖೆ ನಡೆಸಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕರ್ನಾಟಕದಲ್ಲಿ ಹಿಂದೂ ಸಂಘಟನೆಗಳಿಂದ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಖಡಕ್ ಸೂಚನೆ ಕೊಟ್ಟ ಎಡಿಜಿಪಿ

    ಕರ್ನಾಟಕದಲ್ಲಿ ಹಿಂದೂ ಸಂಘಟನೆಗಳಿಂದ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಖಡಕ್ ಸೂಚನೆ ಕೊಟ್ಟ ಎಡಿಜಿಪಿ

    ಜರಂಗದಳ (Bajrang Dal), ವಿಎಚ್ ಪಿ (VHP) ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಇಂದಿನಿಂದ ರಾಜ್ಯಾದ್ಯಂತ (Karnataka) ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶನಕ್ಕೆ ಮುಂದಾಗಿವೆ. ರಾಜ್ಯದ ಹಲವು ಕಡೆ ಸಿನಿಮಾ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಎಡಿಜಿಪಿ ನೇತೃತ್ವದಲ್ಲಿ ಸಭೆ ನಡೆದಿದೆ. ರಾಜ್ಯದ ಎಲ್ಲ ಪೊಲೀಸ್ (Police) ಅಧಿಕಾರಿಗಳಿಗೂ ಖಡಕ್ ಸೂಚನೆ ನೀಡಲಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚರಿಕೆ ವಹಿಸುವಂತೆ ತಿಳಿಸಲಾಗಿದೆ.

    ದೇಶದ ಹಲವು ಕಡೆ ಮುಸ್ಲಿಂ ಸಂಘಟನೆಗಳು ಚಿತ್ರದ ವಿರುದ್ಧ ಪ್ರತಿಭಟನೆ ಮಾಡಿದ್ದು, ಅದು ರಾಜ್ಯದಲ್ಲಿಯೂ ಮುಂದುವರೆಯಬಹುದು ಎನ್ನುವ ಕಾರಣಕ್ಕಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ ಎನ್ನುವ ಮಾಹಿತಿ ಇದೆ. ಎಲ್ಲೆಲ್ಲಿ ಪ್ರದರ್ಶನ ನಡೆಯುತ್ತದೆಯೋ, ಅಲ್ಲಿ ಶಾಂತಿಯನ್ನು ಕಾಪಾಡುವಂತೆ ತಿಳಿಸಲಾಗಿದೆ. ಅಲ್ಲದೇ, ಪ್ರದರ್ಶನಕ್ಕೆ ತೊಂದರೆ ಆಗಬಹುದು ಎಂದು ಹಿಂದೂ ಪರ ಸಂಘಟನೆಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಇದನ್ನೂ ಓದಿ:ಪವಿತ್ರಾ ಜೊತೆಗಿನ ಸಂಬಂಧಕ್ಕೆ ಗ್ರೀನ್ ಸಿಗ್ನಲ್ ಕೊಟ್ರಿದ್ರಾ ಕೃಷ್ಣ, ಮಹೇಶ್ ಬಾಬು- ನರೇಶ್ ಹೇಳೋದೇನು?

    ಈ ನಡುವೆಯೇ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರದಲ್ಲಿ ಮುಸ್ಲಿಂ ಹುಡುಗಿಯಾಗಿ ನಟಿಸಿದ್ದ ನಟಿ ಸೋನಿಯಾ ಬಾಲಾನಿಗೆ ಕೊಲೆ ಬೆದರಿಕೆ  (Death Threat) ಹಾಕಿದ್ದಾರೆ ಎನ್ನವ ಮಾಹಿತಿ ಸಿಕ್ಕಿದೆ. ಈ ಹಿಂದೆ ಚಿತ್ರದ ನಾಯಕಿ ಅದಾ ಶರ್ಮಾಗೂ (Adah Sharma) ಕೊಲೆ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸ್ ಭದ್ರತೆಯನ್ನೂ ನೀಡಲಾಗಿತ್ತು.

    ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಸೋನಿಯಾ (Sonia Balani) ಮುಸ್ಲಿಂ ಹುಡುಗಿಯಾಗಿ, ಹಿಂದೂ ಹುಡುಗಿಯರನ್ನು ಮತಾಂತರ ಮಾಡುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತಾರೆ. ನಟಿಯಾಗಿ ಅವರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರ ಹಲವರ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ ಕೊಲೆ ಬೆದರಿಕೆಯ ಸಂದೇಶಗಳು ಸೋನಿಯಾಗೆ ಬಂದಿವೆಯಂತೆ. ಹಾಗಾಗಿ ಆ ನಟಿಗೂ ಭದ್ರತೆಯನ್ನು ಒದಗಿಸಬೇಕು ಎಂದು ಚಿತ್ರತಂಡ ಮನವಿ ಮಾಡಿಕೊಂಡಿದೆ.

  • ಬಜರಂಗದಳಕ್ಕೆ ಪಿಎಫ್‍ಐ ಹೋಲಿಕೆ –  ಖರ್ಗೆಗೆ ಕೋರ್ಟ್ ಸಮನ್ಸ್

    ಬಜರಂಗದಳಕ್ಕೆ ಪಿಎಫ್‍ಐ ಹೋಲಿಕೆ – ಖರ್ಗೆಗೆ ಕೋರ್ಟ್ ಸಮನ್ಸ್

    ಚಂಡೀಗಢ: ಬಜರಂಗದಳದ (Bajrang Dal) ವಿರುದ್ಧ ಹೇಳಿಕೆ ನೀಡಿದ ವಿಚಾರವಾಗಿ ಪಂಜಾಬ್‍ನ (Punjab) ಸಂಗ್ರೂರ್‌ ಸ್ಥಳೀಯ ನ್ಯಾಯಾಲಯ (Local Court) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ (Mallikarjun Kharge) ಸಮನ್ಸ್ ಜಾರಿ ಮಾಡಿದೆ. ಜುಲೈ 10 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.

    ಕಾಂಗ್ರೆಸ್ (Congress) ಬಜರಂಗದಳವನ್ನು ದೇಶವಿರೋಧಿ ಸಂಘಟನೆಗಳೊಂದಿಗೆ ಹೋಲಿಸಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ಭರವಸೆ ನೀಡಿದೆ. ಇದು ಅಪಾರ ಕಾರ್ಯಕರ್ತರಿಗೆ ಮಾಡಿರುವ ಅಪಮಾನವಾಗಿದೆ ಎಂದು ಹಿಂದೂ ಸುರಕ್ಷಾ ಪರಿಷತ್ ಭಜರಂಗದಳ ಸಂಸ್ಥಾಪಕ ಸಂಗ್ರೂರ್ ಮೂಲದ ಹಿತೇಶ್ ಭಾರದ್ವಾಜ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯನ್ನು ಸೋಲಿಸಿದ್ದಕ್ಕೆ ಡಿವಿಎಸ್‌, ಕಟೀಲ್‌ ಫೋಟೋಗೆ ಚಪ್ಪಲಿ ಹಾರ ಹಾಕಿದ ಹಿಂದೂ ಕಾರ್ಯಕರ್ತರು

    ಇತ್ತೀಚೆಗೆ ನಡೆದ ಕರ್ನಾಟಕ ಚುನಾವಣಾ (Karnataka Election) ಪ್ರಚಾರದ ವೇಳೆ ಖರ್ಗೆಯವರು ಪಿಎಫ್‍ಐ ಜೊತೆ ಬಜರಂಗದಳವನ್ನು ಹೋಲಿಸಿ ಟೀಕಿಸಿದ್ದಾರೆ. ಇದು ಅವಹೇಳನಕಾರಿ ವಿಚಾರವಾಗಿದೆ ಎಂದು ಅರ್ಜಿದಾರರು ಆರೋಪಿಸಿ ನ್ಯಾಯಾಲಯದಲ್ಲಿ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

    ಹಿತೆಶ್ ಅವರ ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಮೂರ್ತಿ ರಮಣದೀಪ್ ಕೌರ್ ಖರ್ಗೆಯವರಿಗೆ ಸಮನ್ಸ್ ನೀಡಿದ್ದಾರೆ. ಇದನ್ನೂ ಓದಿ: ಹಿಂಡನ್‍ಬರ್ಗ್ ವರದಿ ವಿವಾದ – ತನಿಖೆಗೆ 3 ತಿಂಗಳ ಗಡುವು ನೀಡಿದ ಸುಪ್ರೀಂ

  • ಯಾರ ಹೆಂಡತಿ ಪತಿವ್ರತೆನೋ ಅವರೆಲ್ಲ BJPಗೆ ವೋಟ್‌ ಹಾಕ್ತಾರೆ – ಬಜರಂಗದಳ ಕಾರ್ಯಕರ್ತನ ವಾಟ್ಸಪ್‌ ಸ್ಟೇಟಸ್‌ ರಾದ್ಧಾಂತ

    ಯಾರ ಹೆಂಡತಿ ಪತಿವ್ರತೆನೋ ಅವರೆಲ್ಲ BJPಗೆ ವೋಟ್‌ ಹಾಕ್ತಾರೆ – ಬಜರಂಗದಳ ಕಾರ್ಯಕರ್ತನ ವಾಟ್ಸಪ್‌ ಸ್ಟೇಟಸ್‌ ರಾದ್ಧಾಂತ

    ಚಿಕ್ಕಮಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಮತದಾನ ಬುಧವಾರ ಮುಕ್ತಾಯಗೊಂಡಿದೆ. ಆದರೂ ವಿವಾದ, ಒಳಜಗಳಗಳ ಕಾವು ಇನ್ನೂ ಇದೆ. ಮತದಾನ ವಿಚಾರವಾಗಿ ಬಜರಂಗದಳ (Bajrang Dal) ಕಾರ್ಯಕರ್ತನೊಬ್ಬ ಹಾಕಿದ ವಾಟ್ಸಪ್‌ ಸ್ಟೇಟಸ್‌ ಗ್ರಾಮದಲ್ಲಿ ರಾದ್ಧಾಂತ ಸೃಷ್ಟಿಸಿದೆ. ಚುನಾವಣೆ ಮುಗಿದರೂ ವಿವಾದ ಬಗೆಹರಿದಿಲ್ಲ.

    ತರೀಕೆರೆ ತಾಲೂಕಿನ ರಂಗೇನಹಳ್ಳಿ ಗ್ರಾಮದ ನಿವಾಸಿ ಕಾರ್ತಿಕ್‌ ವಾಟ್ಸಪ್‌ ಸ್ಟೇಟಸ್‌ ಹಾಕಿಕೊಂಡು ವಿವಾದ ಸೃಷ್ಟಿಸಿದ ಬಜರಂಗದಳ ಕಾರ್ಯಕರ್ತ. ಈತ ಮತದಾನದ ದಿನ, “ಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕ್ತಾರೆ” ಎಂದು ವಾಟ್ಸಪ್‌ ಸ್ಟೇಟಸ್‌ ಹಾಕಿಕೊಂಡಿದ್ದ. ಇದು ವಿಪಕ್ಷಗಳ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಕೆರಳಿಸಿದೆ. ಇದನ್ನೂ ಓದಿ: ಕಿಡ್ನಿ ಸಮಸ್ಯೆ – ಸಿ.ಟಿ ರವಿ ಆಸ್ಪತ್ರೆಗೆ ದಾಖಲು

    ಸ್ಟೇಟಸ್ ನೋಡಿ ರೊಚ್ಚಿಗೆದ್ದ ಸ್ಥಳೀಯರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಕಾರ್ತಿಕ್‌ನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

    ಮೇ 10 ರಾಜ್ಯಾದ್ಯಂತ ಮತದಾನ ನಡೆಯಿತು. ಹಲವೆಡೆ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ತಮ್ಮ ಪಕ್ಷಗಳ ಪರ ಜನರಿಂದ ಮತ ಹಾಕಿಸಲು ಕೊನೆವರೆಗೂ ಕಸರತ್ತು ನಡೆಸಿದರು. ಇದರ ನಡುವೆ ಕೆಲವೆಡೆ ಗಲಾಟೆಗಳು ನಡೆದವು. ಈ ಎಲ್ಲ ಬೆಳವಣಿಗೆಗಳ ನಡುವೆ ಚುನಾವಣೆಯು ಸಾಂಗವಾಗಿ ನೆರವೇರಿತು. ಇದನ್ನೂ ಓದಿ: ಬೆಂಗಳೂರಲ್ಲಿ ತಗ್ಗಿದ ಮತದಾನ ಪ್ರಮಾಣ – ನಗರ ಜನತೆ ನಿರುತ್ಸಾಹ; ಕಾರಣ ಏನು?

  • ಮೇ 13ಕ್ಕೆ ಹನುಮಾನ್ ಗದಾ ಕಾಂಗ್ರೆಸ್ ಮೇಲೆ ಹೇಗೆ ಪ್ರಹಾರ ಮಾಡುತ್ತೆ ನೋಡಿ: ಭಗವಂತ್ ಖೂಬಾ

    ಮೇ 13ಕ್ಕೆ ಹನುಮಾನ್ ಗದಾ ಕಾಂಗ್ರೆಸ್ ಮೇಲೆ ಹೇಗೆ ಪ್ರಹಾರ ಮಾಡುತ್ತೆ ನೋಡಿ: ಭಗವಂತ್ ಖೂಬಾ

    ಬೀದರ್: ಮೇ 13 ರಂದು ಹನುಮಾನ್ ಗದಾ ಕಾಂಗ್ರೆಸ್ ಮೇಲೆ ಏರಿ ಹೇಗೆ ಪ್ರಹಾರ ಮಾಡುತ್ತೆ ನೋಡಿ ಎಂದು ಕಾಂಗ್ರೆಸ್ (Congress) ಪ್ರಣಾಳಿಕೆಯಲ್ಲಿ ಬಜರಂಗದಳ (Bajrang Dal) ಬ್ಯಾನ್ ವಿಚಾರಕ್ಕೆ ಬೀದರ್‌ನಲ್ಲಿ (Bidar) ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಮಂಗಳವಾರ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪೂರ್‌ದಲ್ಲಿರುವ ಐತಿಹಾಸಿಕ ಹನುಮಾನ್ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಿ ಕಾಂಗ್ರೆಸ್ ಭಜರಂಗದಳ ಬ್ಯಾನ್ ಅಸ್ತ್ರಕ್ಕೆ ಟಾಂಗ್ ನೀಡಲಿದ್ದಾರೆ. ಹನುಮಾನ್ ಚಾಲೀಸಾ ಪಠಣೆ ಮಾಡುವ ಮೂಲಕ ಪರೋಕ್ಷವಾಗಿ ಬಜರಂಗದಳ ಬ್ಯಾನ್‌ಗೆ ಕೌಂಟರ್ ಕೊಡಲಿರುವ ಕೇಂದ್ರ ಸಚಿವ ಭಗವಂತ್ ಖೂಬಾ, ನಾನು ಹನುಮಾನ್ ಭಕ್ತನಾಗಿ ಕಾರ್ಯಕರ್ತರ ಜೊತೆ ಪವಿತ್ರ ಸ್ಥಳದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡುತ್ತೆನೆ ಎಂದರು.

    ಬಜರಂಗದಳ ಹಾಗೂ ಬಜರಂಗಿಗೆ ಸಂಬಂಧವಿಲ್ಲ ಎಂಬ ಕಾಂಗ್ರೆಸ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಖೂಬಾ, ಕಾಂಗ್ರೆಸ್ ಬ್ಯಾಕ್ ಪುಟ್‌ಗೆ ಹೋಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಕೂಡಾ ಲಿಂಗಾಯತರ ಬಗ್ಗೆ ಮಾತನಾಡಿ ಬ್ಯಾಕ್ ಪುಟ್ ಅನುಸರಿಸಿದರು. ಕಾಂಗ್ರೆಸ್ ರಿವರ್ಸ್ ಗೇರ್‌ನಲ್ಲಿ ನಡೆಯುವ ಪಕ್ಷವಾಗಿದ್ದು ಎಲ್ಲಾ ಹೇಳಿಕೆಯ ಜೊತೆಗೆ ರಿವರ್ಸ್ ಹೋಗುತ್ತದೆ. ಹೀಗಾಗಿ ಚುನಾವಣೆಯಲ್ಲೂ ಕಾಂಗ್ರೆಸ್ ರಿವರ್ಸ್ ಆಗುತ್ತದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಇದು ನನ್ನ ಕೊನೆಯ ಚುನಾವಣೆ, ಆದರೆ ಸಕ್ರಿಯ ರಾಜಕೀಯದಲ್ಲಿರುತ್ತೇನೆ: ಜಗದೀಶ್ ಶೆಟ್ಟರ್

    ಭಾಲ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 4 ಲಕ್ಷ ರೂ. ಮೌಲ್ಯದ ಸಾರಾಯಿ ಹಂಚಲು ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿರುದ್ಧ ಭಗವಂತ್ ಖೂಬಾ ಆರೋಪ ಮಾಡಿದರು. ಇದನ್ನೂ ಓದಿ: ಹೆಣ್ಮಕ್ಕಳಿಗಾಗಿ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಮಾಡ್ತೀವಿ – ಪ್ರಚಾರದ ಕೊನೇ ದಿನ ಡಿಕೆಶಿ ಗ್ಯಾರಂಟಿ

  • ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕಾಂಗ್ರೆಸ್ ನಿರಂತರ ತುಷ್ಟೀಕರಣ ನೀಡುತ್ತಿದೆ: ಅಮಿತ್ ಶಾ

    ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕಾಂಗ್ರೆಸ್ ನಿರಂತರ ತುಷ್ಟೀಕರಣ ನೀಡುತ್ತಿದೆ: ಅಮಿತ್ ಶಾ

    ಬೆಳಗಾವಿ: ಕಾಂಗ್ರೆಸ್‌ನವರು (Congress) ಮುಸ್ಲಿಮರಿಗೆ ಶೇ.6ರಷ್ಟು ಮೀಸಲಾತಿ ಕೊಡುತ್ತೇವೆ ಎನ್ನುತ್ತಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕಾಂಗ್ರೆಸ್ ನಿರಂತರ ತುಷ್ಟೀಕರಣ ನೀಡುತ್ತಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ಸವದತ್ತಿಯಲ್ಲಿ (Savadatti) ನಡೆದ ಬಿಜೆಪಿ (BJP) ಚುನಾವಣಾ (Election) ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ಗೆ ಮರಾಠರ ನೆನಪಾಗುತ್ತದೆ. ಆದರೆ ಬಿಜೆಪಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಸಂವಿಧಾನ ಬಾಹಿರವಾಗಿ ಮುಸ್ಲೀಮರ ಶೇ.4ರಷ್ಟು ಮೀಸಲಾತಿಯನ್ನು ಕಾಂಗ್ರೆಸ್ ನೀಡಿತ್ತು. ಇದನ್ನು ತೆಗೆದು ಲಿಂಗಾಯತರಿಗೆ ಮೀಸಲಾತಿ ನೀಡಲಾಗಿದೆ ಎಂದರು. ಇದನ್ನೂ ಓದಿ: ಬಜರಂಗಬಲಿ ಕೀ ಜೈ ಎಂದಿರೋ ಹೆಬ್ಬಾಳ್ಕರ್ ವೀಡಿಯೋ ವೈರಲ್

    ರೈತ ಸಮ್ಮಾನ್ ಯೋಜನೆಗೆ ರೈತರ ಪಟ್ಟಿ ಕೊಡುವಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಹಿಂದೇಟು ಹಾಕಿತ್ತು. ಬಿಜೆಪಿ ಭದ್ರಾ ಮತ್ತು ಕೃಷ್ಣ ಮೇಲ್ದಂಡೆ ಯೋಜನೆಗೆ ಅನುಮೋದನೆ ನೀಡಿದೆ. ಮೂರು ವರ್ಷಗಳಲ್ಲಿ ರೈತರಿಗೆ ವರ್ಷಕ್ಕೆ ಎರಡು ಬೆಳೆ ತೆಗೆಯುವಷ್ಟು ನೀರು ಕೊಡಲಾಗುವುದು. ಎಥನಾಲ್ ಯೋಜನೆ ಅನುಷ್ಠಾನ ಮಾಡಿ ರೈತರಿಗೆ ಅನುಕೂಲ ಮಾಡಿದೆ. ಉತ್ತರ ಕರ್ನಾಟಕದ ರೈತರ ಜೊತೆಗೆ ನರೇಂದ್ರ ಮೋದಿ (Narendra Modi) ಬೆಟ್ಟದಂತೆ ನಿಂತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕ ಚುನಾವಣೆ – ಡಿಜಿಟಲ್‌ ಮೀಡಿಯಾ ಹವಾ ಹೇಗಿದೆ?

    ಕಾಂಗ್ರೆಸ್ ನಾಯಕರೇ ಕಿವಿಯೊಡ್ಡಿ ಕೇಳಿ. ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಯಾರ ಮೀಸಲಾತಿ ತೆಗೆಯುತ್ತೀರಿ ಎಂದು ಹೇಳಿ. ನೀವು ಅಧಿಕಾರಕ್ಕೆ ಬರಲ್ಲ, ಲಿಂಗಾಯತ ಮೀಸಲಾತಿ ತೆಗೆಯಲು ಸಾಧ್ಯವಿಲ್ಲ. ಪ್ರಭು ಶ್ರೀರಾಮನನ್ನು ಕಾಂಗ್ರೆಸ್‌ನವರು ಬಂಧಿಸಿ ಇಟ್ಟಿದ್ದರು. 2024ರಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗಲಿದೆ. ಬಜರಂಗದಳ (Bajarang Dal) ನಿಷೇಧ ಮಾಡುವ ಮಾತನ್ನು ಕಾಂಗ್ರೆಸ್ ಆಡಿದೆ. ಹನುಮಾನ್ ಜನ್ಮದಿನದ ಬಗ್ಗೆ ದಾಖಲೆ ಕೇಳಿ ಕಾಂಗ್ರೆಸ್ ನಾಯಕರು ಅಪಮಾನ ಮಾಡಿದ್ದಾರೆ. ಇಡೀ ದೇಶಕ್ಕೆ ಹನುಮಾನ್ ಜಯಂತಿ ಯಾವಾಗ ಎಂದು ಗೊತ್ತು. ದೇಶ ವಿರೋಧಿ ಕೆಲಸ ಮಾಡುವವರನ್ನು ಜೈಲಿನ ಕಂಬಿಯ ಹಿಂದೆ ಕಳುಹಿಸಲಾಗುವುದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್ ಮುಸ್ಲಿಂ ಪಾರ್ಟಿ, ಕಾಂಗ್ರೆಸ್‌ನಲ್ಲಿ ಅರ್ಧಂಬರ್ಧ ಹಿಂದೂಗಳಿದ್ದಾರೆ: ಯತ್ನಾಳ್

    ಪಿಎಫ್‌ಐ (PFI) ನಿಷೇಧ ಮಾಡಿದ್ದು ನಮ್ಮ ಸರ್ಕಾರ. ಪಿಎಫ್‌ಐ ಏಜೆಂಟ್ ರೀತಿಯಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಬಸವಣ್ಣನ ಸಿದ್ಧಾಂತದ ಮೇಲೆ ಕೆಲಸ ಮಾಡುವವರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ. ಲಿಂಗಾಯತರನ್ನು ಅಪಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಬಸವಣ್ಣನ ಸಂದೇಶ ಸಾರುವವರನ್ನು ಅಪಮಾನ ಮಾಡುತ್ತೀರಿ. ಭ್ರಷ್ಟಾಚಾರವನ್ನು ಒಂದು ಸಮುದಾಯಕ್ಕೆ ಹೋಲಿಸೋದು ಎಷ್ಟರ ಮಟ್ಟಿಗೆ ಸರಿ? ಇಂದಿರಾ ಗಾಂಧಿ ನಿಜಲಿಂಗಪ್ಪರಿಗೆ ಅವಮಾನ ಮಾಡಿದರು. ರಾಜೀವ್ ಗಾಂಧಿಯವರು ವೀರೇಂದ್ರ ಪಾಟೀಲ್‌ಗೆ ಅಪಮಾನ ಮಾಡಿದರು. ಬಿಜೆಪಿ ಯಡಿಯೂರಪ್ಪ ಮತ್ತು ಬೊಮ್ಮಾಯಿಯವರನ್ನು ಸಿಎಂ ಮಾಡಿದೆ. ಲಿಂಗಾಯತರಿಗೆ ಸನ್ಮಾನ ಮಾಡುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದರು. ಇದನ್ನೂ ಓದಿ: ಖರ್ಗೆ ಸಾಹೇಬ್ರು ಏನ್ ತಪ್ಪು ಮಾಡಿದ್ದಾರೆ ಸಾಯಿಸೋಕೆ?- ಪ್ರಿಯಾಂಕ್ ಖರ್ಗೆ ಕಿಡಿ

    2024ರಲ್ಲಿ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಆಗುತ್ತದೆ. ಟಿಕೆಟ್ ರಿಸರ್ವೇಷನ್ ಮಾಡಿ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡಿದ್ದಾರೆ. ನಿಮಗೆ ಕೇವಲ ತುಷ್ಟೀಕರಣ ನೆನಪಿದೆ. ಪಿಎಫ್‌ಐ ಬ್ಯಾನ್ ಮಾಡಿದ್ದು ಸರಿನಾ ಇಲ್ವಾ ನೀವು ಹೇಳಬೇಕು. ದೇಶ ವಿರೋಧಿ ಕೆಲಸ ಮಾಡುವವರು ಜೈಲಿಗೆ ಹೋಗುತ್ತಾರೆ. ಪಿಎಫ್‌ಐ ಅಜೆಂಡಾ ಮೇಲೆ ಸರ್ಕಾರ ನಡೆಯುತ್ತದೆ. ಕಾಂಗ್ರೆಸ್ ಅಧ್ಯಕ್ಷರು ಮೋದಿಗೆ ವಿಷ ಸರ್ಪ ಎನ್ನುತ್ತಾರೆ. ಇದು ಕಾಂಗ್ರೆಸ್‌ನ ಲೆವೆಲ್ ತೋರಿಸುತ್ತದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಚಿಕ್ಕಮಗಳೂರು ಅಖಾಡ ಹೇಗಿದೆ? – ಸತತ 5ನೇ ಬಾರಿ ಗೆಲ್ತಾರಾ ಸಿಟಿ ರವಿ?

    ನಾವು ನಮ್ಮ ಪ್ರಣಾಳಿಕೆಯಲ್ಲಿ ಮೂರು ಉಚಿತ ಸಿಲಿಂಡರ್ ನೀಡುವುದಾಗಿ ಘೋಷಿಸಿದ್ದೇವೆ. ಗಣೇಶ ಚತುರ್ಥಿ, ಯುಗಾದಿ ಹಾಗೂ ದೀಪಾವಳಿಗೆ ಉಚಿತ ಸಿಲಿಂಡರ್ ನೀಡುತ್ತೇವೆ. ಸಮಾನ ನಾಗರಿಕ ಹಕ್ಕು ತರುವ ಭರವಸೆಯನ್ನು ಬಿಜೆಪಿ ನೀಡಿದೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಕಿತ್ತೂರು – ಧಾರವಾಡ ನೇರ ರೈಲು ಮಾರ್ಗ ಯೋಜನೆ ಆರಂಭಿಸಿದೆ. ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡಲು ಘೋಷಣೆ ಮಾಡಿದೆ. ಕರ್ನಾಟಕ ಅಭಿವೃದ್ಧಿ, ದೇಶದ ಸುರಕ್ಷತೆ ಮತ್ತು ದೇಶದ ಅಭಿವೃದ್ಧಿಯನ್ನು ಬಿಜೆಪಿ ಸರ್ಕಾರ ಮಾಡುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರವಿ ಕುಮಾರ್ ಶಾಸಕರಾಗುವುದು ಸತ್ಯ, ಕುಮಾರಸ್ವಾಮಿ ಸಿಎಂ ಆಗೋದು ಅಷ್ಟೇ ಸತ್ಯ: ಹೆಚ್‌ಡಿಡಿ

  • ಕಾಂಗ್ರೆಸ್ ಗೆದ್ದರೆ ತಾಲಿಬಾನ್‌ಗಳಿಗೆ ಬಿರಿಯಾನಿ ಕೊಟ್ಟು ಸಾಕುತ್ತಾರೆ: ಸಿ.ಟಿ.ರವಿ ವಾಗ್ದಾಳಿ

    ಕಾಂಗ್ರೆಸ್ ಗೆದ್ದರೆ ತಾಲಿಬಾನ್‌ಗಳಿಗೆ ಬಿರಿಯಾನಿ ಕೊಟ್ಟು ಸಾಕುತ್ತಾರೆ: ಸಿ.ಟಿ.ರವಿ ವಾಗ್ದಾಳಿ

    ಮಡಿಕೇರಿ: ಕಾಂಗ್ರೆಸ್ (Congress) ಗೆದ್ದರೆ ಮತ್ತೆ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸಿ ತಾಲಿಬಾನ್‌ಗಳಿಗೆ ಬಿರಿಯಾನಿ ಕೊಟ್ಟು ಸಾಕುತ್ತಾರೆ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ (Somwarpet) ತಾಲೂಕಿನ ಶನಿವಾರಸಂತೆಯಲ್ಲಿ (Shanivarasanthe) ಶಾಸಕ, ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ (Appachu Ranjan) ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್ ತನ್ನ ಹಿಂದೂ ವಿರೋಧಿ ನೀತಿಯನ್ನು ಮತ್ತೆ ಪ್ರಕಟಿಸಿದೆ. ಹನುಮನ ನಾಡಿನಲ್ಲಿ ಹನುಮನ ಸೈನಿಕನನ್ನೇ ನಿಷೇಧಿಸುವ ದುಸ್ಸಾಹಸ ಮಾಡುತ್ತಿದೆ. ಕಾಂಗ್ರೆಸ್ ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಹನುಮನಿಗೆ ನಮಸ್ಕರಿಸಿದ ಮೋದಿ

    ಬಜರಂಗದಳ (Bajarang Dal) ಎಂದರೆ ಹನುಮನ ಆರಾಧಕರು, ರಾಷ್ಟ್ರಭಕ್ತರು. ಅವರನ್ನು ನಿಷೇಧಿಸುತ್ತೇವೆ ಎನ್ನುವುದು ದರ್ಪದ ಮಾತು. ಆ ಮಾತಿಗೆ ಕಾಂಗ್ರೆಸ್ ದೊಡ್ಡ ಬೆಲೆ ತೆರಬೇಕು. ಕಾಂಗ್ರೆಸ್‌ನದ್ದು ನಾಯಿ ಬಾಲ ಇದ್ದಂತೆ. ಯಾವತ್ತೂ ನೆಟ್ಟಗಾಗುವುದಿಲ್ಲ. ಅವರು ಸೋತಾಗ ಸರಿ ಇರುತ್ತಾರೆ. ಗೆದ್ದರೆ ಮತ್ತೆ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಾರೆ. ಅವರು ತಾಲಿಬಾನ್‌ಗಳಿಗೆ ಬಿರಿಯಾನಿ ಕೊಟ್ಟು ಸಾಕುತ್ತಾರೆ. ಇಂತಹ ಬೌದ್ಧಿಕ ದಿವಾಳಿತನ ಅವರಿಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ದಾಖಲೆ ಬರೆದ ಮೋದಿ ಬೆಂಗಳೂರು ರೋಡ್ ಶೋ

  • ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ತಾನೇ ಬಜರಂಗದಳವನ್ನು ಬ್ಯಾನ್ ಮಾಡೋದು: ಬಿ.ವೈ ವಿಜಯೇಂದ್ರ

    ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ತಾನೇ ಬಜರಂಗದಳವನ್ನು ಬ್ಯಾನ್ ಮಾಡೋದು: ಬಿ.ವೈ ವಿಜಯೇಂದ್ರ

    ಮೈಸೂರು: ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದ್ರೆ ತಾನೇ ಬಜರಂಗದಳವನ್ನು (Bajarang Dal) ಬ್ಯಾನ್ ಮಾಡೋದು ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

    ಮೈಸೂರು (Mysuru) ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಬಿಜೆಪಿ (BJP) ಅಭ್ಯರ್ಥಿ ವಿಜಯಶಂಕರ್ ಪರವಾಗಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಬಜರಂಗದಳವನ್ನು ಬ್ಯಾನ್ ಮಾಡಲು ಅವರಿಗೆ ಅವಕಾಶ ಕೊಡುವವರು ಯಾರು? ಬಜರಂಗದಳವು ದೇಶಭಕ್ತಿಯ ಸಂಘಟನೆ. ಹಿಂದೂ ಪರ ಕಾಳಜಿ ಇರುವ ಸಂಘಟನೆ. ಒಂದು ಸಂಘಟನೆ ಬಗ್ಗೆ ಕಾಂಗ್ರೆಸ್ ಮನಬಂದಂತೆ ಮಾತನಾಡಿದರೆ ರಾಜ್ಯದ ಜನರು ಬುದ್ಧಿ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಲಿಂಗಾಯತ ಅಭ್ಯರ್ಥಿಯನ್ನೇ ಸಿಎಂ ಮಾಡುತ್ತೇವೆಂದು ಹೇಳುವ ಧೈರ್ಯ ಬಿಜೆಪಿಗಿದೆಯಾ?: ಜಗದೀಶ್ ಶೆಟ್ಟರ್

    ಈ ಚುನಾವಣೆಯಲ್ಲಿ (Election)ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುವುದರಿಂದ ಬ್ಯಾನ್ ಮಾಡುವ ವಿಚಾರ ಉದ್ಭವ ಆಗಲ್ಲ. ಕಾಂಗ್ರೆಸ್ ಪಕ್ಷದಿಂದ ಯಾವ ನಿರೀಕ್ಷೆ ಮಾಡಲು ಆಗುತ್ತದೆ? ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿಯಾಗಿರುವಾಗ ಎಷ್ಟು ಹಿಂದೂ ಯುವಕರ ಹತ್ಯೆ ಆಯಿತು. ಅವರಿಗೆ ವಿನಾಶ ಕಾಲೇ ವಿಪರೀತ ಬುದ್ಧಿ ಇರುವುದರಿಂದ ರಾಜ್ಯದ ಜನರು ಅವಕಾಶ ಮಾಡಿಕೊಡುವುದಿಲ್ಲ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗ್ಬೇಕು – ದುನಿಯಾ ವಿಜಯ್

    ವರುಣಾದಲ್ಲಿ (Varuna) ಸಿದ್ದರಾಮಯ್ಯ ಪರವಾಗಿ ಸ್ಯಾಂಡಲ್‌ವುಡ್ ನಟ-ನಟಿಯರ ಪ್ರಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ವರುಣಾ ಕ್ಷೇತ್ರದಲ್ಲಿ ಸ್ಟಾರ್‌ಗಳು ಬಂದು ಮತ ಹಾಕುವುದಿಲ್ಲ. ಅಲ್ಲಿ ಮತದಾನ ಮಾಡುವುದು ಜನಗಳು. ಈ ಬಾರಿ ಅಲ್ಲಿನ ಜನಗಳು ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಳಿಯಲ್ಲಿ ಬೆಂಕಿ ಕಾಯಿಸಿಕೊಳ್ಳುವ ಚಟ ಈಶ್ವರಪ್ಪರಿಗಿದೆ, ನನಗಿಲ್ಲ: ಮಧು ಬಂಗಾರಪ್ಪ

    ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಬಗ್ಗೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿರುವ ಕುರಿತು ಮಾತನಾಡಿದ ಅವರು, ಪುನೀತ್ ರಾಜ್‌ಕುಮಾರ್ ಈ ನಾಡು ಕಂಡಂತಹ ಶ್ರೇಷ್ಠ ನಾಯಕ. ಶಿವರಾಜ್ ಕುಮಾರ್ ಅವರಿಗೆ ಸ್ವಾತಂತ್ರ್ಯವಿದೆ. ಅವರು ಎಲ್ಲಿಗೆ ಬೇಕಾದರೂ ಹೋಗಿ ಪ್ರಚಾರ ಮಾಡಬಹುದು. ಇದರಲ್ಲಿ ರಾಜಕೀಯ ಮಾಡುವುದು ಬೇಡ ಎಂದರು. ಇದನ್ನೂ ಓದಿ: ಬಿ.ಎಲ್ ಸಂತೋಷ್ ಬಗ್ಗೆ ಕಾಂಗ್ರೆಸ್‍ಗೆ ನಡುಕ ಶುರುವಾಗಿದೆ: ಪ್ರತಾಪ್ ಸಿಂಹ

  • ಬಜರಂಗಬಲಿಯ ಆಕ್ರೋಶದಿಂದ ಕಾಂಗ್ರೆಸ್ ಭವಿಷ್ಯ ಸುಟ್ಟು ಬೂದಿಯಾಗಲಿದೆ: ಪ್ರಹ್ಲಾದ್ ಜೋಶಿ ಕಿಡಿ

    ಬಜರಂಗಬಲಿಯ ಆಕ್ರೋಶದಿಂದ ಕಾಂಗ್ರೆಸ್ ಭವಿಷ್ಯ ಸುಟ್ಟು ಬೂದಿಯಾಗಲಿದೆ: ಪ್ರಹ್ಲಾದ್ ಜೋಶಿ ಕಿಡಿ

    ಹುಬ್ಬಳ್ಳಿ: ಲಂಕಾದಲ್ಲಿ ರಾಮನ ಭಕ್ತ ಹನುಮಂತ ಹೋಗಿ ಬಾಲಕ್ಕೆ ಬೆಂಕಿ ಹಚ್ಚಿ ಲಂಕೆಯನ್ನು ಸುಟ್ಟು ಭಸ್ಮ ಮಾಡಿದ. ಅದೇ ರೀತಿ ಬಜರಂಗಬಲಿಯ ಆಕ್ರೋಶದಿಂದ ಕಾಂಗ್ರೆಸ್ (Congress) ಭವಿಷ್ಯ ಸುಟ್ಟು ಬೂದಿಯಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳ (Bajarang Dal) ವಿಚಾರದಲ್ಲಿ ಕಾಂಗ್ರೆಸ್ ಗೊಂದಲದಲ್ಲಿ ಸಿಲುಕಿಕೊಂಡಿದೆ. ನಾವು ಬಜರಂಗದಳವನ್ನು ಬ್ಯಾನ್ ಮಾಡುವುದಿಲ್ಲ ಎಂದು ವೀರಪ್ಪ ಮೊಯ್ಲಿಯವರೇ ಸ್ಪಷ್ಟಪಡಿಸಿದ್ದಾರೆ. ಆದರೆ ಸುರ್ಜೇವಾಲ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ನಾವು ಬಜರಂಗದಳವನ್ನು ಬ್ಯಾನ್ ಮಾಡಿಯೇ ತೀರುತ್ತೇವೆ ಎನ್ನುತ್ತಿದ್ದಾರೆ. ಬಜರಂಗದಳದ ಭಯ ಎಷ್ಟಿದೆ ಎನ್ನುವುದನ್ನು ಕಾಂಗ್ರೆಸ್‌ನವರು ಒಮ್ಮೆ ನೋಡಿಕೊಳ್ಳಿ. ಬಜರಂಗದಳ ನಿಷೇಧ ಮಾಡುವುದರ ಬಗ್ಗೆ ಜಗದೀಶ್ ಶೆಟ್ಟರ್ ತಮ್ಮ ನಿಲುವನ್ನು ವ್ಯಕ್ತಪಡಿಸಬೇಕು ಎಂದು ನಾನು ವಿನಂತಿ ಮಾಡುತ್ತೇನೆ ಎಂದರು. ಇದನ್ನೂ ಓದಿ: ಸಿಎಂ ಪೋಸ್ಟ್‌ಗೆ 2,500 ಕೋಟಿ.. ಮಿನಿಸ್ಟರ್‌ಗಾಗಿ 500 ಕೋಟಿ ರೂ. – ಬಿಜೆಪಿ ವಿರುದ್ಧ ಕಾಂಗ್ರೆಸ್‌ ಭ್ರಷ್ಟಾಚಾರ ಅಸ್ತ್ರ

    ಗೋವಾದಲ್ಲಿ ಬಿಜೆಪಿ (BJP) ಸರ್ಕಾರ ಶ್ರೀರಾಮ ಸೇನೆ ಬ್ಯಾನ್ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಯಾ ರಾಜ್ಯ ಸರ್ಕಾರ ಅಲ್ಲಿನ ವ್ಯವಸ್ಥೆ ನೋಡಿ ಬ್ಯಾನ್ ಮಾಡಿರಬಹುದು. ಅದು ಬೇರೆ ವಿಷಯ. ಬಜರಂಗದಳ ಯಾವುದೇ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗದ ಸಂಘಟನೆ. ಬಜರಂಗದಳ ಯಾವುದೇ ಕಾರಣಕ್ಕೂ ಭಯೋತ್ಪಾದನೆಯ (Terrorism) ಲಿಂಕ್ ಹೊಂದಿಲ್ಲ. ಪಿಎಫ್‌ಐಗೆ (PFI) ಭಯೋತ್ಪಾದಕರ ಜೊತೆ ಲಿಂಕ್ ಇದೆ. ಇದನ್ನು ನಾನು ಖಂಡಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಾನೂ ಕೂಡ ಶಿವಣ್ಣನ ಅಭಿಮಾನಿ : ಉಲ್ಟಾ ಹೊಡೆದ ಸಂಸದ ಸಿಂಹ

    ಬಿ.ಎಲ್.ಸಂತೋಷ್ (B.L.Santhosh) ಲಿಂಗಾಯತರ ಮತ ಬೇಡ ಎಂಬ ಹೇಳಿಕೆಯ ವಿಚಾರವಾಗಿ ಮಾತನಾಡಿದ ಅವರು, ಬಿ.ಎಲ್.ಸಂತೋಷ್ ಆ ರೀತಿ ಹೇಳಿಲ್ಲ. ಇದು ಮಾಧ್ಯಮಗಳ ಸೃಷ್ಟಿ ಎಂದರು. ಇದನ್ನೂ ಓದಿ: ರೋಡ್ ಶೋನಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆಯಾಗಬಾರದು ಅಂದ್ರು ಪ್ರಧಾನಿ: ಶೋಭಾ ಕರಂದ್ಲಾಜೆ

  • ಹನುಮಾನ್ ಚಾಲೀಸಾ ಪಠಿಸಿ ಕಾಂಗ್ರೆಸ್‍ಗೆ ಕೇಸರಿ ಪಡೆ ಸೆಡ್ಡು

    ಹನುಮಾನ್ ಚಾಲೀಸಾ ಪಠಿಸಿ ಕಾಂಗ್ರೆಸ್‍ಗೆ ಕೇಸರಿ ಪಡೆ ಸೆಡ್ಡು

    ಬೆಂಗಳೂರು: ಕಾಂಗ್ರೆಸ್ ಪಕ್ಷ (Congress) ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ (Bajarangdal)ನಿಷೇಧದ ಪ್ರಸ್ತಾಪ ಮಾಡಿರೋದಕ್ಕೆ ಬಿಜೆಪಿ (BJP) ಯವರ ಜೊತೆ ಹಿಂದೂ ಸಂಘಟನೆಗಳು ಕೂಡ ಸಿಡಿದೆದ್ದಿವೆ. ಕಾಂಗ್ರೆಸ್ ವಿರುದ್ಧ ದೇಶದ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸತೊಡಗಿದೆ.

    ಮಲ್ಲೇಶ್ವರಂನ ರಾಮ ದೇಗುಲದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ನೇತೃತ್ವದಲ್ಲಿ ಹನುಮಾನ್ ಚಾಲಿಸಾ (Hanuman Chalisa) ಪಾರಾಯಣ ಮಾಡಿ ಕಾಂಗ್ರೆಸ್‍ಗೆ ಸೆಡ್ಡು ಹೊಡೆದರು. ಬಿಜೆಪಿಯವರಿಗೆ ಹನುಮಾನ್ ಚಾಲೀಸಾ ಹೇಳಲು ಬರುತ್ತಾ ಎಂದು ಸುರ್ಜೆವಾಲಾ ಹಾಕಿದ್ದ ಸವಾಲ್‍ಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4 ಕೋಟಿ 5 ಲಕ್ಷ ರೂ. ವಶ

    ಬೆಂಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೀದರ್, ರಾಮನಗರ, ಮಂಡ್ಯ, ಉಡುಪಿ, ತುಮಕೂರು, ಚಿಕ್ಕಮಗಳೂರು, ಉಡುಪಿ, ಯಾದಗಿರಿ ಸೇರಿ ರಾಜ್ಯದ ವಿವಿಧೆಡೆ ಬಜರಂಗದಳದ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಾರಾಯಣ ಮಾಡಿ, ಪ್ರತಿಭಟನೆ ಮಾಡಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬರಲು ಬಿಡಲ್ಲ ಎಂದು ಶಪಥ ಮಾಡಿದ್ದಾರೆ. ಮನೆ ಮನೆಗೆ ತೆರಳಿ ಕಾಂಗ್ರೆಸ್‍ಗೆ ಮತ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

    ಈ ಮಧ್ಯೆ, ಗಾಳಿ ಆಂಜನೇಯ ದೇಗುಲದಲ್ಲಿ ಹನುಮಾನ್ ಚಾಲೀಸ್ ಪಠಣಕ್ಕೆ ಮುಂದಾದ ಕಾರ್ಯಕರ್ತರಿಗೆ, ನೀವು ಪಠಣ ಮಾಡುವುದಾದರೆ ಮಾಡಿ. ಆದರೆ ವೀಡಿಯೋ ಚಿತ್ರೀಕರಣಕ್ಕೆ ಅವಕಾಶವಿಲ್ಲ. ದೇವಾಲಯದ ಒಳಗೆ ರಾಜಕೀಯ ತರಬೇಡಿ ಎಂದು ಆಡಳಿತ ಮಂಡಳಿ ಖಡಕ್ಕಾಗಿ ಹೇಳಿತು. ಹೀಗಾಗಿ ದೇಗುಲದ ಮುಂಭಾಗವೇ ಹಿಂದೂ ಕಾರ್ಯಕರ್ತರು ಹನುಮಾನ್ ಚಾಲಿಸಾ ಪಠಿಸಿದ್ರು. ಮಧ್ಯಪ್ರದೇಶದ ಜಬಲ್ಪುರದಲ್ಲಿ ಕಾಂಗ್ರೆಸ್ ಕಚೇರಿಗೆ ನುಗ್ಗಿದ ಬಜರಂಗದಳ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ದಾಂಧಲೆ ನಡೆಸುವ ದೃಶ್ಯಗಳು ವೈರಲ್ ಆಗಿವೆ.