Tag: ಬಚ್ಚೇಗೌಡ

  • ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಬಚ್ಚೇಗೌಡ ರಾಜೀನಾಮೆ

    ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಬಚ್ಚೇಗೌಡ ರಾಜೀನಾಮೆ

    ಬೆಂಗಳೂರು: ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ (B.N.Bache Gowda) ಬಿಜೆಪಿ (BJP) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು ರಾಜ್ಯಾಧ್ಯಕ್ಷ ವಿಜಯೇಂದ್ರಗೆ (Vijayendra) ರಾಜೀನಾಮೆ ಪತ್ರ ರವಾನಿಸಿದ್ದಾರೆ.

    ಕಳೆದ ವರ್ಷದ ಆಗಸ್ಟ್‌ನಲ್ಲಿ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದ ಬಚ್ಚೇಗೌಡ ಈಗ ಅಧಿಕೃತವಾಗಿ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: 5,8,9 ತರಗತಿಗೆ ಪರೀಕ್ಷೆ ಯಾವಾಗ? – ಗೊಂದಲದಲ್ಲಿ ವಿದ್ಯಾರ್ಥಿಗಳು, ಪೋಷಕರು

     

    ಚುನಾವಣಾ (Election) ರಾಜಕೀಯದಿಂದ ದೂರ ಇರಲು ನಿರ್ಧಾರ ಮಾಡಿದ್ದರೂ ಸಕ್ರಿಯ ರಾಜಕಾರಣದಲ್ಲಿಯೇ ಬಚ್ಚೇಗೌಡ ಇರಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಯಾರ ಪರವಾಗಿಯೂ ಕೆಲಸ ಮಾಡದಿರಲು ಬಚ್ಚೇಗೌಡ ನಿರ್ಧರಿಸಿದ್ದಾರೆ.
    ಇದನ್ನೂ ಓದಿ: ಐಪಿಎಲ್‌ ಹಬ್ಬದಲ್ಲಿ ಏನೆಲ್ಲಾ ವಿಶೇಷ – ಚೊಚ್ಚಲ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿ ಆರ್‌ಸಿಬಿ ಕಲಿಗಳು

    ಚಿಕ್ಕಬಳ್ಳಾಪುರ (Chikkaballapura) ಕ್ಷೇತ್ರದಲ್ಲಿ ಬಚ್ಚೇಗೌಡರ ಗೆಲುವಿನ ಮೂಲಕವೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿತ್ತು.ಬಚ್ಚೇಗೌಡರ ಪುತ್ರ ಶರತ್‌ ಬಚ್ಚೇಗೌಡ ಕಾಂಗ್ರೆಸ್‌ ಸೇರ್ಪಡೆಯಾಗಿದ್ದು ಹೊಸಕೋಟೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

    2019ರ ಲೋಕಸಭಾ ಚುನಾವಣೆಯಲ್ಲಿ ಬಚ್ಚೇಗೌಡ ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ಅವರನ್ನು 1,82,110 ಮತಗಳ ಅಂತರದಿಂದ ಸೋಲಿಸಿದ್ದರು. ಬಚ್ಚೇಗೌಡ ಅವರಿಗೆ 7,45,912 ಮತಗಳು ಬಿದ್ದರೆ ಮೊಯ್ಲಿ ಅವರಿಗೆ 5,63,802 ಮತಗಳು ಬಿದ್ದಿದ್ದವು.

     

  • 4ನೇ ಬಾರಿ ಗೆಲ್ತಾರಾ ಸುಧಾಕರ್‌? – ಬ್ರೇಕ್ ಹಾಕಲು ಜೆಡಿಎಸ್, ಕಾಂಗ್ರೆಸ್ ಪೈಪೋಟಿ

    4ನೇ ಬಾರಿ ಗೆಲ್ತಾರಾ ಸುಧಾಕರ್‌? – ಬ್ರೇಕ್ ಹಾಕಲು ಜೆಡಿಎಸ್, ಕಾಂಗ್ರೆಸ್ ಪೈಪೋಟಿ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅತಿ ಹೆಚ್ಚು ಕುತೂಹಲ ಸೃಷ್ಟಿಸಿರುವ ವಿಧಾನಸಭಾ ಕ್ಷೇತ್ರವೆಂದರೆ ಅದು ಚಿಕ್ಕಬಳ್ಳಾಪುರ. ಪ್ರಭಾವಿ ಸಚಿವರಾಗಿರುವ ಡಾ.ಕೆ.ಸುಧಾಕರ್ (Dr Sudhakar) ಪ್ರತಿನಿಧಿಸುವ ಕ್ಷೇತ್ರವಾಗಿರುವುದರಿಂದ (Chikkabalalpura Constiency) ಸಹಜವಾಗಿಯೇ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಜೆಡಿಎಸ್ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರನ್ನು ಕಣಕ್ಕಿಳಿಸಿ ತೊಡೆತಟ್ಟಲು ಅಣಿಯಾಗುತ್ತಿದ್ದರೆ ಕಾಂಗ್ರೆಸ್ (Congress) ಸುಧಾಕರ್ ಅವರನ್ನು ಸೋಲಿಸಲು ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಹುಡುಕಾಟ ನಡೆಸುತ್ತಿದೆ.

    ಹ್ಯಾಟ್ರಿಕ್‌ ಸಾಧನೆ:
    ಹ್ಯಾಟ್ರಿಕ್ ಜಯದ ನಗೆ ಬೀರಿ ನಾಲ್ಕನೇ ಬಾರಿ ಕಣಕ್ಕೆ ಧುಮುಕಲು ಈಗಾಗಲೇ ಡಾ.ಕೆ.ಸುಧಾಕರ್ ಭರ್ಜರಿ ತಯಾರಿ ನಡೆಸಿದ್ದಾರೆ. ಅಬ್ಬರದ ಬಿಜೆಪಿ(BJP) ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕ್ಷೇತ್ರದಲ್ಲಿ ಹವಾ ಎಬ್ಬಿಸಿದ್ದಾರೆ. ಇನ್ನೊಂದೆಡೆ ಚುನಾವಣೆ ಬರುವಷ್ಟರಲ್ಲಿ ಸಾಲು ಸಾಲು ಉದ್ಘಾಟನಾ ಸಮಾರಂಭಗಳು ಸೇರಿದಂತೆ ಚಿಕ್ಕಬಳ್ಳಾಪುರ ಸರ್ಕಾರಿ ಮೆಡಿಕಲ್ ಕಾಲೇಜು ಉದ್ಗಾಟನೆ ಮಾಡಿದ್ದಾರೆ. ಈ ಹಿಂದೆಯೇ ಮನೆ ಮನೆಗೂ ಸ್ಟೌವ್, ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಅರಿಶಿನ ಕುಂಕುಮದ ಹೆಸರಲ್ಲಿ ಸೀರೆ, ಪಂಚೆ, ಶಲ್ಯ, ಶರ್ಟ್ ಪೀಸ್ ಸೇರಿದಂತೆ ಸಾಕಷ್ಟು ಉಡುಗೊರೆಗಳು ಮತದಾರನ ಮನೆ ಬಾಗಿಲಿಗೆ ತಲುಪಿ ಆಗಿದೆ.

    ಜೆಡಿಎಸ್ ಮನೆ ಮನೆ ಪ್ರಚಾರ
    2013ರ ಚುನಾವಣೆಯಲ್ಲಿ ಸೋತ ನಂತರ ಮನೆ ಸೇರಿ ಕೃಷಿಕಾಯಕ ಮಾಡಿಕೊಳ್ಳುತ್ತಿದ್ದ ಮಾಜಿ ಶಾಸಕ ಬಚ್ಚೇಗೌಡರು, ಉಪಚುನಾವಣೆಯಲ್ಲಿ ಬೇರೆ ಅಭ್ಯರ್ಥಿಯನ್ನ ಕಣಕ್ಕಿಳಿಸಿ ಸುಮ್ಮನಾಗಿದ್ದರು. ಆದರೆ ಈ ಬಾರಿ ಸುಧಾಕರ್ ಅಬ್ಬರದ ನಡುವೆ ಜೆಡಿಎಸ್ (JDS) ಅಭ್ಯರ್ಥಿಯಾಗಿ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರೇ (KP Bacccggowda) ನೇರವಾಗಿ ಕಣಕ್ಕಿಳಿದಿದ್ದು ಸೈಲೆಂಟಾಗಿ ಕ್ಷೇತ್ರದಾದ್ಯಂತ ಪ್ರತಿ ಮನೆ ಮನೆಗೂ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಜಲಧಾರೆ, ಪಂಚರತ್ನ ಯಾತ್ರೆ ಮೂಲಕ ಅದ್ದೂರಿ ಪ್ರಚಾರಕ್ಕೆ ನಾಂದಿ ಹಾಡಿದ್ದರು. ಈಗ ಪ್ರತಿ ಗ್ರಾಮಕ್ಕೂ ಲಗ್ಗೆ ಇಡುತ್ತಿದ್ದು ಪ್ರತಿಯೊಬ್ಬ ಮತದಾರನ ನೇರವಾಗಿ ಭೇಟಿ ಮಾಡಿ ಮತ ಕೇಳುವ ಕಾಯಕ ಮಾಡುತ್ತಿದ್ದಾರೆ. ಮಂದಿರ, ಮಸೀದಿ, ಚರ್ಚ್ ಬಳಿಯೂ ಹೋಗಿ ಮತ ಕೇಳಲಾಗುತ್ತಿದೆ.

    ಕಾಂಗ್ರೆಸ್ ಅಭ್ಯರ್ಥಿ ಯಾರು?
    ಸುಧಾಕರ್, ಬಚ್ಚೇಗೌಡ ಚುನಾವಣಾ ತಯಾರಿ ಮಾಡುತ್ತಿದ್ದರೆ ಇತ್ತ ಕಾಂಗ್ರೆಸ್ (Congress) ಭದ್ರಕೋಟೆಯಲ್ಲಿ ಕಾಂಗ್ರೆಸ್ ಗೆ ಅಭ್ಯರ್ಥಿ ಯಾರೆಂಬುದು ಇದುವರೆಗೂ ನಿರ್ಧಾರವಾಗಿಲ್ಲ. ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಸೇರಿದ ಸುಧಾಕರ್ ಅವರನ್ನ ಸೋಲಿಸಲೇಬೇಕು ಅಂತ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ವೀರಾವೇಷದ ಮಾತುಗಳನ್ನಾಡಿ ಮುಳುಬಾಗಿಲಿನ ಕೊತ್ತೂರು ಮಂಜುನಾಥ್ ಕರೆತರಯವ ಪ್ರಯತ್ನ ಮಾಡಿದ್ರೂ ಫಲಪ್ರದವಾಗಿಲ್ಲ. ಬಲಿಜ ಸಮುದಾಯದ ಬ್ಯಾಕ್ ಅಪ್ ಪಡೆದು ರಕ್ಷಾ ರಾಮಯ್ಯ ಕಣಕ್ಕಿಳಿಸಲು ಪ್ರಯತ್ನಗಳು ನಡೆದವಾದರೂ ಆರಂಭದಲ್ಲೇ ಪಲ್ಟಿ ಹೊಡೆದವು . ಇದನ್ನೂ ಓದಿ: ರಾಕೇಶ್‌ನನ್ನು ಶಾಸಕನಾಗಿ ಕಾಣಲು ಬಯಸಿದ್ದ ಸಿದ್ದು – ಆದರೆ ವಿಧಿ ನಿಯಮವೇ ಬೇರೆ ಇತ್ತು!

    ಕ್ಷೇತ್ರದಲ್ಲಿ ಆರ್ ಎಲ್ ಜಾಲಪ್ಪ ಸೋದರ ಅಳಿಯ ಜಿ ಎಚ್ ನಾಗರಾಜ್ ಪುತ್ರ ವಿನಯ್ ಶ್ಯಾಂ ಟಿಕೆಟ್ ಗಾಗಿ ಫೈಟ್ ಮಾಡುತ್ತಿದ್ದರೆ ಇತ್ತ ಹಿರಿಯ ಕಾಂಗ್ರೆಸ್ ಮುಖಂಡ ಯಲವಳ್ಳಿ ರಮೇಶ್, ಗಂಗರೆಕಾಲುವೆ ನಾರಾಯಣಸ್ವಾಮಿ ನಾವು ಆಕಾಂಕ್ಷಿತರು ಟಿಕೆಟ್‌ಗಾಗಿ ಒತ್ತಡ ಹಾಕಿದ್ದಾರೆ. ಆದರೆ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೋ ಏನೋ ತಿಳಿಯದಾಗಿದೆ. ಆಕಾಂಕ್ಷಿತರು ಯಾರು ಸುಧಾಕರ್ ಎದುರು ಸಾಲಲ್ಲ ಅಂತ ಸ್ಥಳೀಯರನ್ನ ಬಿಟ್ಟು ಬೇರೆಯುವರನ್ನ ಕರೆ ತರುವ ಪ್ರಯುತ್ನಗಳು ಮುಂದುವರೆಯುತ್ತಿಲ್ಲ. ಯಾರು ಸಿಗಲಿಲ್ಲ ಅಂತ ಕೊನೆಗೆ ಸ್ಥಳೀಯರಿಗೆ ಮಣೆ ಹಾಕುತ್ತಾ ಕಾದು ನೋಡಬೇಕಿದೆ. ಸದ್ಯದ ಮಾಹಿತಿ ಪ್ರಕಾರ ಈಗ ಬಲಿಜ ಸಮುದಾಯದ ಮುಖಂಡ ಪರಿಶ್ರಮ ನೀಟ್ ಸಂಸ್ಥೆಯ ಮುಖ್ಯಸ್ಥ ಪ್ರದೀಪ್ ಈಶ್ವರ್ ಹೆಸರು ಸಹ ಕೇಳಿಬರುತ್ತಿದೆ.

    ಜಾತಿ ಲೆಕ್ಕಾಚಾರ ಏನು?
    ಒಕ್ಕಲಿಗ-ಬಲಿಜಿಗ ಸಮುದಾಯದ ಪ್ರಾಬಲ್ಯದ ಕ್ಷೇತ್ರದಲ್ಲಿ ಸದ್ಯಕ್ಕೆ ಬಿಜೆಪಿ ಮತ್ತು ಜೆಡಿಎಸ್‌ನಿಂದ ಒಕ್ಕಲಿಗ ಸಮುದಾಯದವರೇ ಕಣದಲ್ಲಿದ್ದಾರೆ. ಆದರೆ ಕಾಂಗ್ರೆಸ್ ಯಾರಿಗೆ ಮಣೆ ಹಾಕುತ್ತೆ ಎನ್ನುವುದರ ಮೇಲೆಯೂ ಚುನಾವಣಾ ಕಣ ರಂಗೇರಲಿದೆ. ಕಾಂಗ್ರೆಸ್‌ನಲ್ಲೂ ಒಕ್ಕಲಿಗ ಸಮುದಾಯದ ಆಕಾಂಕ್ಷಿಗಳೂ ಇದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್‌ನ ಲೆಕ್ಕಾಚಾರ ಏನಿದೆ? ಯಾರನ್ನು ಕಣಕ್ಕಿಳಿಸುತ್ತಾರೆ ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಬಿಜೆಪಿಗೆ ಸೇರಿ ಕಮಲ ಅರಳಿಸಿದ್ದು ಇದೇ ಡಾ.ಕೆ.ಸುಧಾಕರ್ ಈಗ ಬಿಜೆಪಿ ಪಾಳಯದಲ್ಲಿದ್ದಾರೆ. ಹೀಗಾಗಿ ಹೇಗಾದರೂ ಮಾಡಿ ಈ ಬಾರಿ ಮತ್ತೆ ಕೈವಶ ಮಾಡಿಕೊಳ್ಳಬೇಕೆಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ. ಹೀಗಾಗಿ ಭಾರೀ ಲೆಕ್ಕಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಶತಾಯಗತಾಯ ಸುಧಾಕರ್ ಅವರನ್ನು ಸೋಲಿಸುವ ಲೆಕ್ಕಾಚಾರದಲ್ಲಿ ಯಾರನ್ನು ಅಭ್ಯರ್ಥಿಯಾಗಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

    ಯಾವ ಚುನಾವಣೆಯಲ್ಲಿ ಯಾರಿಗೆ ಎಷ್ಟು ಮತ?
    2013 ಡಾ ಕೆ.ಸುಧಾಕರ್ (ಕಾಂಗ್ರೆಸ್) 74,914,
    ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ 59,866
    ಗೆಲುವಿನ ಅಂತರ 15,048

    2018ರ ಚುನಾವಣೆ
    ಡಾ ಕೆ.ಸುಧಾಕರ್ (ಕಾಂಗ್ರೆಸ್) 82,006
    ಕೆ.ಪಿ.ಬಚ್ಚೇಗೌಡ 51,575
    ಗೆಲುವಿನ ಅಂತರ 30,431

    2019ರ ಉಪ ಚುನಾವಣೆ
    ಡಾ ಕೆ.ಸುಧಾಕರ್ (ಬಿಜೆಪಿ) 84,389,
    ಎಂ.ಆಂಜಿನಪ್ಪ (ಕಾಂಗ್ರೆಸ್) 49,588
    ಗೆಲುವಿನ ಅಂತರ 34,801

    ಚಿಕ್ಕಬಳ್ಳಾಪುರ ಕ್ಷೇತ್ರ ಮತದಾರರ ವಿವರ
    ಪುರುಷ ಮತದಾರರು – 1,00,956
    ಮಹಿಳಾ ಮತದಾರರು – 1,03,322
    ಒಟ್ಟು ಮತದಾರರು – 20,4278

  • ಕಾಂಗ್ರೆಸ್ ತೆಕ್ಕೆಗೆ ಶರತ್ ಬಚ್ಚೇಗೌಡ – ಸುರ್ಜೇವಾಲ ಭೇಟಿ ಬಳಿಕ ಸ್ಪಷ್ಟಪಡಿಸಿದ ಶಾಸಕ

    ಕಾಂಗ್ರೆಸ್ ತೆಕ್ಕೆಗೆ ಶರತ್ ಬಚ್ಚೇಗೌಡ – ಸುರ್ಜೇವಾಲ ಭೇಟಿ ಬಳಿಕ ಸ್ಪಷ್ಟಪಡಿಸಿದ ಶಾಸಕ

    – ನನ್ನ ಮಗ ಕೈ ಸೇರೋದು ಗೊತ್ತಿಲ್ಲ ಅಂದ್ರು ಬಚ್ಚೇಗೌಡ

    ಚಿಕ್ಕಬಳ್ಳಾಪುರ: ಹೊಸಕೋಟೆ ಪಕ್ಷೇತರ ಶಾಸಕ ಶರತ್ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಜ್ಜಾಗಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾರನ್ನು ಶರತ್ ಭೇಟಿಯಾಗಿ ಖಚಿತ ಪಡಿಸಿದ್ದಾರೆ.

    ಈ ಬಗ್ಗೆ ಶರತ್ ತಂದೆ ಬಚ್ಚೇಗೌಡ ಪ್ರತಿಕ್ರಿಯಿಸಿ, ಸತ್ಯವಾಗಲೂ ನನ್ನ ಮಗ ಕಾಂಗ್ರೆಸ್ ಸೇರುವ ವಿಚಾರ ನನಗೆ ಗೊತ್ತಿಲ್ಲ. ಯಾವತ್ತು ಸೇರ್ತಾರೆ ಅಂತ ನನಗೆ ಗೊತ್ತಿಲ್ಲ. ನಾನು ಪದೇ ಪದೇ ಹೇಳಿದ್ದೇನೆ. ಇನ್ನು ನನ್ನ ಮಗನಿಗೆ ಬಿಟ್ಟ ವಿಚಾರ. ಈಗಾಗಲೇ ಎಂಟಿಬಿ ನಾಗರಾಜ್ ಬಿಜೆಪಿ ಸೇರಿ ಮಂತ್ರಿಯೂ ಆಗಿದ್ದಾರೆ. ಹೀಗಾಗಿ ನನ್ನ ಮಗ ರಾಷ್ಟ್ರೀಯ ಪಕ್ಷ ಸೇರಬೇಕಾಗುತ್ತದೆ. ನನ್ನ ಮಗ ಏನ್ ಮಾಡಬೇಕು ಅಂತ ನನ್ನ ಮಗ ಯಾವತ್ತು ಕೇಳಿಲ್ಲ. ನನ್ನ ಅವಧಿ 4 ವರ್ಷ ಇದೆ 82 ನೇ ವರ್ಷಕ್ಕೆ ನಿವೃತ್ತಿ ಆಗೋದು. ನಾನು ಈಗ ಬಿಜೆಪಿಯಲ್ಲೇ ಇದ್ದೀನಿ ನಾನು ಬದಲಾಯಿಸುವ ಸ್ಥಿತಿಯಲ್ಲಿಲ್ಲ ಎಂದರು.

    ಮಗನಿಗೆ ಇನ್ನೂ ಎರಡೂವರೆ ವರ್ಷಕ್ಕೆ ಅಸೆಂಬ್ಲಿ ಎಲೆಕ್ಷನ್ ಬರಲಿದೆ. ರಾಜಕೀಯ ದಿನದಿಂದ ದಿನಕ್ಕೆ ತಿರುವ ಪಡೆದುಕೊಳ್ತಿದೆ. ಇಬ್ಬರು ಜೊತೆ ಜೊತೆಯಲ್ಲಿ ಹೋಗ್ತೀವಾ ಅಂತ ಈಗಲೇ ಹೇಳೋಕೆ ಬರಲ್ಲ. ಮುಂದೆ ದೇಶದಲ್ಲಿ ರಾಜಕಾರಣ ನೋಡಿಕೊಂಡು ತೀರ್ಮಾನ ಮಾಡಬಹುದು. ಹೀಗಾಗಿ ನನ್ನ ಪಾಡಿಗೆ ನಾನು ಬಿಜೆಪಿಯಲ್ಲಿ ಕೆಲಸ ಮಾಡಿಕೊಂಡು ಹೋಗ್ತೇನೆ. ನಾನು ನ್ಯಾಯವಾಗಿ ಬಿಜೆಪಿಯಲ್ಲಿ ನಡೆದುಕೊಂಡು ಹೋಗ್ತಾ ಇದ್ದೀನಿ ಎಂದರು.

    ಇದೇ ವೇಳೆ ರಾಮಮಂದಿರ ದೇಣಿಗೆ ವಿಚಾರದಲ್ಲಿ ಮಾಜಿ ಸಿಎಂಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಮಮಂದಿರ ವಿಚಾರದಲ್ಲಿ ಎಲ್ಲರಿಗೂ ಗೌರವ ಇರಬೇಕು. ಒಳ್ಳೆಯ ಕಾರ್ಯ ಯಾರೇ ಮಾಡಿದ್ರೂ ಮೆಚ್ಚಬೇಕು. ಇದು ಪಕ್ಷಗಳ ಧೋರಣೆ ತೋರಿಸುವ ವಿಚಾರ ಅಲ್ಲ. ರಾಮಮಂದಿರಕ್ಕೆ ಅಪಪ್ರಚಾರ ಮಾಡಿದರೇ ತಪ್ಪು ಅಂತ ಹೇಳಬೇಕು. ರಾಮಮಂದಿರ ಕಟ್ಟುವ ಒಳ್ಳೆಯ ಕಾರ್ಯ ಮೆಚ್ಚಬೇಕು. ದೇವರ ವಿಷಯದಲ್ಲಿ ತಪ್ಪು ಮಾಡಿದವನಿಗೆ ಆ ಪಾಪ ಅವನಿಗೆ ಮುಚ್ಚಿಕೊಳ್ಳುತ್ತೆ. ದೇವರ ಹೆಸರಲ್ಲಿ ವಸೂಲಿ ದುರುಪಯೋಗ ಮಾಡಿಕೊಂಡರೆ ಪಾಪ ಅವರಿಗೆ ಮುಚ್ಚಿಕೊಳ್ಳುತ್ತೆ. ತಪ್ಪು ಅಲ್ವಾ..? ದೇವರ ಹೆಸರಲ್ಲಿ ಯಾರಾದ್ರಾ ಮಾಡ್ತಾರಾ..? ಭಕ್ತಿಪೂರ್ವಕವಾಗಿ ತಾನೇ ಜನ ಕೊಡೋದು ಎಂದು ಹೇಳಿದರು.

    ರಾಮಮಂದಿರ ಕಟ್ಟಲು ಮುಖಂಡರು ಹೋಗಿ ಹಣ ಕೇಳೋದು ತಪ್ಪಲ್ಲ. ಆದ್ರೆ ಅದರ ಹೆಸರಿನಲ್ಲಿ ತಪ್ಪು ಮಾಡೋದು ಸರಿಯಲ್ಲ ಅಂತ ಹೇಳಬೇಕು. ದುರ್ಬಳಕೆ ಮಾಡೋದು ತಪ್ಪು ಅಂತ ನಾನು ಹೇಳ್ತೀನಿ. ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು. ದೇಶದಲ್ಲಿ 600 ಕೋಟಿ ಹಣ ಸಂಗ್ರಹ ಆಗಿದ್ದು, ಕರ್ನಾಟಕದಲ್ಲಿ 80 ಕೋಟಿ ಆಗಿದೆ ಎಂದರು.

  • ಹೊಸಕೋಟೆಯಲ್ಲಿ ಇನ್ನೂ ಮುಗಿದಿಲ್ಲ ಫೈಟ್- ಬಚ್ಚೇಗೌಡ ಫ್ಯಾಮಿಲಿಗೆ ಎಂಟಿಬಿ ಸವಾಲು

    ಹೊಸಕೋಟೆಯಲ್ಲಿ ಇನ್ನೂ ಮುಗಿದಿಲ್ಲ ಫೈಟ್- ಬಚ್ಚೇಗೌಡ ಫ್ಯಾಮಿಲಿಗೆ ಎಂಟಿಬಿ ಸವಾಲು

    ಆನೇಕಲ್: ಬಹಿರಂಗ ವೇದಿಕೆಯೊಂದರಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಸಂಸದ ಬಚ್ಚೇಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡಗೆ ಚಾಲೆಂಜ್ ಮಾಡಿದ್ದು, ಹೊಸಕೋಟೆಯಲ್ಲಿ ಇನ್ನೂ ಫೈಟ್ ಮುಗಿದಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಎಂಟಿಬಿ, ನಿಮ್ಮಿಬ್ಬರ ಅನುದಾನದಲ್ಲಿ ನಡೆಯುವ ಕಾಮಗಾರಿಯ ಪೂಜೆ ನೀವು ಮಾಡಿ. ಜನರಿಗೆ ಯಾರ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬುದು ತಿಳಿಯಲಿ. ನಾನು ತಂದ ಅನುದಾನದ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಭಾಗವಹಿಸಿ ತಮ್ಮ ಅನುದಾನ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಎಂಟಿಬಿ ಟಾಂಗ್ ನೀಡಿದರು.

    ಶಾಸಕರ ನಿಧಿ ಕೇವಲ 50 ಲಕ್ಷ ಮಾತ್ರ ಇದೆ. ಈಗ ನಡೆಯುತ್ತಿರೋ ಕಾಮಗಾರಿಗಳು ಕೋಟಿ ಲೆಕ್ಕದ ಅನುದಾನ ನಾನು ತಂದದ್ದು. ಇನ್ನು ಕೇವಲ 25 ದಿನದಲ್ಲಿ 20 ಕೋಟಿ ಅನುದಾನ ಬರುತ್ತೆ. ಅದರಲ್ಲಿ ಹೊಸಕೋಟೆಯ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ ಮಾಡಲಾಗುತ್ತೆ. ನಾನು 3 ಬಾರಿ ಶಾಸಕನಾಗಿದ್ದವನು, 6 ತಿಂಗಳು ಮಂತ್ರಿ ಆಗಿದ್ದಾಗ ತಂದ ಅನುದಾನವಾಗಿದೆ ಎಂದರು.

    ಕಾವೇರಿ ನೀರು ಹೊಸಕೋಟೆಗೆ ಕೊಡಲು ಯಡಿಯೂರಪ್ಪ ಒಪ್ಪಿದ್ದಾರೆ. ಈ ಕೆಲಸಗಳು ನನ್ನ ಅನುದಾನದಲ್ಲಿ ಬಂದವು. ಅಪ್ಪ ಲೋಕಸಭಾ ಸದಸ್ಯ, ಮಗ ಶಾಸಕ ಇವರಿಬ್ಬರೂ ಹೊಸಕೋಟೆಗೆ ಕೊಟ್ಟ ಅನುದಾನ ಬಹಿರಂಗಪಡಿಸಲಿ ಎಂದು ಅಪ್ಪ- ಮಗನಿಗೆ ಎಂಟಿಬಿ ಸವಾಲೆಸೆದರು.

  • ಸಿಎಂ ಮನೆಯಲ್ಲಿ ಬದ್ಧ ವಿರೋಧಿಗಳ ಸಮಾಗಮ, ಮುಖಾಮುಖಿಯಾದ್ರೂ ಮಾತಿಲ್ಲ

    ಸಿಎಂ ಮನೆಯಲ್ಲಿ ಬದ್ಧ ವಿರೋಧಿಗಳ ಸಮಾಗಮ, ಮುಖಾಮುಖಿಯಾದ್ರೂ ಮಾತಿಲ್ಲ

    ಬೆಂಗಳೂರು : ಉಪ ಚುನಾವಣೆ ಸೋಲಿನಿಂದ ಆಕ್ರೋಶಗೊಂಡಿರೊ ಮಾಜಿ ಸಚಿವ ಎಂಟಿಬಿ ನಾಗರಾಜ್, ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡರ ವಿರುದ್ಧ ಕೆಂಡ ಕಾರುತ್ತಲೇ ಇದ್ದಾರೆ. ಬಚ್ಚೇಗೌಡರ ಮೇಲೆ ಕ್ರಮ ಆಗಬೇಕು ಅಂತ ಬಿಜೆಪಿ ಹೈಕಮಾಂಡ್ ಗೆ ಒತ್ತಾಯ ಮಾಡ್ತಾನೆ ಇದ್ದಾರೆ. ಈ ಮಧ್ಯೆ ಬದ್ದ ವೈರಿಗಳಾಗಿರೋ ಎಂಟಿಬಿ ನಾಗರಾಜ್ ಮತ್ತು ಬಚ್ಚೇಗೌಡ ಇವತ್ತು ಸಿಎಂ ಮನೆಯಲ್ಲಿ ಮುಖಾಮುಖಿ ಆದ್ರು. ಆದ್ರೆ ಒಬ್ಬರನ್ನೊಬ್ಬರು ಮಾತಾಡಿಸದೇ ತಮ್ಮ ಹಗೆ ಮುಂದುವರಿಸಿದ ಘಟನೆಯೂ ನಡೆಯಿತು.

    ಹುಟ್ಟುಹಬ್ಬದ ಶುಭಾಶಯ ತಿಳಿಸಲು ಸಂಸದ ಬಚ್ಚೇಗೌಡರು ಸಿಎಂ ಯಡಿಯೂರಪ್ಪನವರ ಮನೆಗೆ ಬಂದಿದ್ದರು. ಸಿಎಂಗೆ ಶುಭಾಶಯ ತಿಳಿಸಿ ಹೊರಡುವ ವೇಳೆಗೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಸಿಎಂ ಮನೆಗೆ ಬಂದರು.

    ಈ ವೇಳೆ ಎಂಟಿಬಿ ನಾಗರಾಜ್ ಬಂದ ಕೂಡಲೇ ಸಿಎಂ ಮನೆಯಿಂದ ತೆರಳಲು ಬಚ್ಚೇಗೌಡರು ಮುಂದಾದರು. ಸಿಎಂ ನಿವಾಸದ ಕಾರಿಡಾರ್ ನಲ್ಲಿ ಇಬ್ಬರು ನಾಯಕರು ಮುಖಾಮುಖಿಯಾದರು. ಆದ್ರೆ ಅವರ ಮುಖ ಇವರು ನೋಡದೆ ಇವ್ರ ಮುಖ ಅವರು ನೋಡದೆ ಹಾಗೆ ಇಬ್ಬರು ಹೊರಟು ಹೋದರು. ಏಕ ಕಾಲದಲ್ಲಿ ಸಿಎಂ ಮನೆಯಲ್ಲಿ ಇಬ್ಬರು ನಾಯಕರು ಬಂದಿದ್ದು ಒಂದಿಷ್ಟು ಕುತೂಹಲಕ್ಕೆ ಕಾರಣವಾಗಿತ್ತು.

    ತಮ್ಮ ಸೋಲಿಗೆ ಬಚ್ಚೇಗೌಡರೇ ಕಾರಣ ಅನ್ನೋದು ಎಂಟಿಬಿ ನಾಗರಾಜ್ ಆರೋಪ. ತಮ್ಮ ಮಗ ಶರತ್ ಗೆಲುವಿಗೆ ಬಿಜೆಪಿ ಸಂಸದರಾದರು ಶರತ್ ಪರ ಕೆಲಸ ಮಾಡಿದ್ದರು. ಇದ್ರೀಂದಲೇ ನಾನು ಸೋತೆ ಅನ್ನೋದು ಎಂಟಿಬಿ ನಾಗರಾಜ್ ವಾದ. ಹೀಗಾಗಿ ಸಿಎಂ ಭೇಟಿ ಮಾಡಿದಾಗಲೆಲ್ಲ ಬಚ್ಚೇಗೌಡರ ವಿರುದ್ಧ ಕ್ರಮ ತೆಗೆದುಕೊಳ್ಳಿ ಅಂತ ಎಂಟಿಬಿ ನಾಗರಾಜ್ ಒತ್ತಡ ಹಾಕುತ್ತಾನೆ ಇದ್ದಾರೆ. ಆದ್ರೆ ಸಿಎಂ ಹಾಗೂ ಕೇಂದ್ರದ ನಾಯಕರು ಈವರೆಗೂ ಕ್ರಮ ತೆಗೆದುಕೊಂಡಿಲ್ಲ. ಈ ಮಧ್ಯೆ ಇಬ್ಬರು ನಾಯಕರು ಸಿಎಂ ಮನೆಯಲ್ಲಿ ಮುಖಾಮುಖಿ ಭೇಟಿಯಾಗಿದ್ದು ವಿಶೇಷ ಎನಿಸಿತು.

  • ನನ್ನ ಸೋಲಿಗೆ ಬಚ್ಚೇಗೌಡ್ರೇ ನೇರ ಕಾರಣ: ಎಂಟಿಬಿ

    ನನ್ನ ಸೋಲಿಗೆ ಬಚ್ಚೇಗೌಡ್ರೇ ನೇರ ಕಾರಣ: ಎಂಟಿಬಿ

    ಬೆಂಗಳೂರು: ನಾನು ಉಪಚುನಾವಣೆಯಲ್ಲಿ ಸೋಲಲು ಬಿಜೆಪಿ ಸಂಸದರಾದ ಬಿಎನ್ ಬಚ್ಚೇಗೌಡ ಅವರೇ ನೇರ ಕಾರಣ ಎಂದು ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ಆರೋಪಿಸಿದ್ದಾರೆ.

    ನಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತನ್ನ ಸೋಲಿನ ಪರಾಮರ್ಶೆ ಮಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರನ ತೀರ್ಪು ಅಂತಿಮ. ಹೀಗಾಗಿ ಹೊಸಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪನ್ನ ನಾನು ಗೌರವಿಸುತ್ತೇನೆ ಎಂದರು.

    ಪ್ರಜಾತಂತ್ರ ವ್ಯವಸ್ಥೆಯ ಮೇಲೆ ವಿಶ್ವಾಸ ಮತ್ತು ನಂಬಿಕೆಯನ್ನಿಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಶರತ್ ಬಚ್ಚೇಗೌಡರಿಗೆ ಬಿಜೆಪಿಯಿಂದ ಟಿಕೆಟ್ ನೀಡಿಲ್ಲವೆಂಬ ಕಾರಣಕ್ಕೆ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನನ್ನ ಮೇಲೆ ನಂಬಿಕೆಯಿಟ್ಟು ಸುಮಾರು 71 ಸಾವಿರ ಮತದಾರರು ಮತವನ್ನ ಹಾಕಿದ್ದಾರೆ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.

    ನಾನು ಉಪಚುನಾವಣೆಯಲ್ಲಿ ಸೋಲಲು ಬಿಎನ್ ಬಚ್ಚೇಗೌಡರೇ ನೇರ ಕಾರಣರಾಗಿದ್ದಾರೆ. ಬಚ್ಚೇಗೌಡರು ಶಾಸಕರಾಗಿ, ಸಚಿವರಾಗಿ, ಈಗ ಸಂಸದರಾಗಿ ಬಿಜೆಪಿ ಪಕ್ಷದಿಂದ ಎಲ್ಲಾ ಅಧಿಕಾರವನ್ನ ಅನುಭವಿಸಿ ಪಕ್ಷಕ್ಕೆ ಬದ್ಧರಾಗಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನನ್ನ ಪರವಾಗಿ ಕೆಲಸ ಮಾಡದೆ ಮಗನನ್ನ ಬೆಂಬಲಿಸಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದರು.

    ಭಾರತೀಯ ಜನತಾ ಪಕ್ಷ ಒಂದು ರಾಷ್ಟೀಯ ಪಕ್ಷವಾಗಿದೆ. ಮಗನನ್ನ ಬೆಳಸಲು ರಾಜಕೀಯ ದುರುದ್ದೇಶದಿಂದ ಪಕ್ಷದ ಪರ ಕೆಲಸ ಮಾಡದೆ ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಕುತಂತ್ರ ನಡೆಸಿದ್ದಾರೆ. ಹೀಗಾಗಿ ಪಕ್ಷಕ್ಕೆ ದ್ರೋಹ ಮಾಡಿರುವ ಬಚ್ಚೇಗೌಡರ ವಿರುದ್ಧ ಈ ಕೂಡಲೇ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಪಕ್ಷದ ಹೈಕಮಾಂಡ್ ಮತ್ತು ರಾಜ್ಯದ ನಾಯಕರಲ್ಲಿ ಈ ಮೂಲಕ ಒತ್ತಾಯ ಮಾಡುವುದಾಗಿ ಹೇಳಿದರು.

  • ಇವತ್ತೆಲ್ಲಾ ಟೈಮ್ ತಗೊಳಿ, ನಾಳೆ ಬೆಳಗ್ಗೆ ಫೈನಲ್ ಆಗ್ಬೇಕು- ಬಿಎಸ್‍ವೈ ವಾರ್ನಿಂಗ್

    ಇವತ್ತೆಲ್ಲಾ ಟೈಮ್ ತಗೊಳಿ, ನಾಳೆ ಬೆಳಗ್ಗೆ ಫೈನಲ್ ಆಗ್ಬೇಕು- ಬಿಎಸ್‍ವೈ ವಾರ್ನಿಂಗ್

    ಬೆಂಗಳೂರು: ಇಂದು ಇಡೀ ದಿನ ಟೈಮ್ ತೆಗೆದುಕೊಳ್ಳಿ ನಾಳೆ ಬೆಳಗ್ಗೆ ಫೈನಲ್ ಆಗಬೇಕು. ಸೋಮವಾರ ನೀವು ಪ್ರಚಾರಕ್ಕೆ ಇಳಿಯಲೇಬೇಕು ಎಂದು ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡರಿಗೆ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ವಾರ್ನ್ ಮಾಡಿದ್ದಾರೆ.

    ಬಚ್ಚೇಗೌಡರ ಜೊತೆ ಕೊನೆಯ ಬಾರಿ ಮಾತುಕತೆ ನಡೆಸಿದ ಯಡಿಯೂರಪ್ಪ, ದಿನಕ್ಕೆ ಎರಡು `ಹೊಸ’ ಕಡೆ ಪ್ರಚಾರ ಮಾಡ್ಲೇಬೇಕು. ಸೋಮವಾರದೊಳಗೆ ಪ್ರಚಾರಕ್ಕೆ ಇಳಿಯಬೇಕು. ಇಲ್ಲದಿದ್ದರೆ ಪಕ್ಷ ವಿಧಿಸೋ ಕ್ರಮವನ್ನು ಎದುರಿಸಿ. ನಿಮ್ಮ ವಿಚಾರವನ್ನ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ದಿನಕ್ಕೆ ಎರಡು ಕಡೆಯಾದ್ರೂ ಚಿಕ್ಕಬಳ್ಳಾಪುರ, ಹೊಸಕೋಟೆಯಲ್ಲಿ ಪ್ರಚಾರ ಮಾಡಿ. ಇನ್ನೆರಡು ದಿನವಾದ್ರೂ ಟೈಮ್ ತೆಗೆದುಕೊಂಡು ಪ್ರಚಾರಕ್ಕೆ ಬನ್ನಿ ಎಂದು ಸಂದೇಶ ರವಾನೆ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಒಟ್ಟಿನಲ್ಲಿ ಬಿಜೆಪಿ, ಸಿಎಂ ಬಿಎಸ್‍ವೈ ವಾರ್ನಿಂಗ್‍ಗೆ ಬಚ್ಚೇಗೌಡರು ಮಣೀತಾರಾ ಅಥವಾ ಡೋಂಟ್ ಕೇರ್ ಎಂದು ಮಗನ ಪರ ನಿಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಮಗನ `ಕುಕ್ಕರ್’ನಲ್ಲಿ ಅಪ್ಪ ವಿಲವಿಲ!

  • ನನ್ನ ನಾಮಪತ್ರ ಸಲ್ಲಿಕೆಗೆ ಬಚ್ಚೇಗೌಡರು ಬರುತ್ತಾರೆ: ಎಂಟಿಬಿ ನಾಗರಾಜ್

    ನನ್ನ ನಾಮಪತ್ರ ಸಲ್ಲಿಕೆಗೆ ಬಚ್ಚೇಗೌಡರು ಬರುತ್ತಾರೆ: ಎಂಟಿಬಿ ನಾಗರಾಜ್

    ಬೆಂಗಳೂರು: ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಸೋಮವಾರ ಅಧಿಕೃತವಾಗಿ ಮೊತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ವೇಳೆ ಬಿಜೆಪಿ ಮುಖಂಡರು ಸೇರಿಂದಂತೆ ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡರು ಬರುತ್ತಾರೆ ಎಂದು ಎಂಟಿಬಿ ನಾಗರಾಜ್ ಅವರು ಹೇಳಿದ್ದಾರೆ.

    ಬುಧವಾರ ಅನರ್ಹರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಉಪಚುನಾವಣಾ ಕಣ ರಂಗೇರುವಂತೆ ಮಾಡಿದೆ. ಅದರಲ್ಲೂ ಹೊಸಕೋಟೆಯಲ್ಲಿ ಬಿಜೆಪಿಯಿಂದ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಸಿದ್ದರೆ ಇನ್ನೊಂದು ಕಡೆ ಬಿಜೆಪಿ ಸಂಸದ ಬಚ್ಚೇಗೌಡ ಅವರ ಪುತ ಶರತ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ಉಪಚುನಾವಣೆಯ ಕಾವು ಹೆಚ್ಚಾಗುವಂತೆ ಮಾಡಿದೆ.

    ಇಂದು ಅವಿಮುಕ್ತೇಶ್ವರ ದೇವಾಲಯದಲ್ಲಿ ನಾಮಪತ್ರ ಇಟ್ಟು ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ, ಈಗಾಗಲೇ ನನಗೆ ಬಿಜೆಪಿ ಬಿ ಫಾರಂ ನೀಡಿದೆ. ಸಾಂಕೇತಿಕವಾಗಿ ಇಂದು ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಸೋಮವಾರ ಸಹ ಸಿಎಂ, ಬಿಜೆಪಿ ಮುಖಂಡರೊಂದಿಗೆ ಮತ್ತೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಈ ವೇಳೆ ಸಂಸದ ಬಚ್ಚೇಗೌಡರೂ ಬರುತ್ತಾರೆ ಎಂದು ತಿಳಿಸಿದರು.

    ಒಂದು ಕಡೆ ಸ್ವಾಭಿಮಾನದ ಹೆಸರಿನಲ್ಲಿ ಶರತ್ ಬಚ್ಚೇಗೌಡ ಬಿಜೆಪಿ ವಿರುದ್ಧವೇ ತೊಡೆ ತೊಟ್ಟಿದ್ದಾರೆ. ಆದರೆ ಈಗ ಮಗನ ವಿರುದ್ಧ ಸ್ಪರ್ಧಿಸುತ್ತಿರುವ ಎಂಟಿಬಿ ನಾಗರಾಜ್ ಪರವಾಗಿ ನಾಮ ಪತ್ರ ಸಲ್ಲಿಕೆಗೆ ಬಚ್ಚೇಗೌಡರು ಬರುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.

  • ಅಂದು ತಂದೆಯ ವಿರುದ್ಧ ಸ್ಪರ್ಧೆ, ಇಂದು ಮಗನಿಗೆ ಬೆಂಬಲ

    ಅಂದು ತಂದೆಯ ವಿರುದ್ಧ ಸ್ಪರ್ಧೆ, ಇಂದು ಮಗನಿಗೆ ಬೆಂಬಲ

    – ಶರತ್ ಬಚ್ಚೇಗೌಡ ಬೆಂಬಲಿಸಲು ಎಚ್‍ಡಿಕೆ ನಿರ್ಧಾರ
    – ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶರತ್ ಗುರುವಾರ ನಾಮಪತ್ರ ಸಲ್ಲಿಕೆ

    ಬೆಂಗಳೂರು: ಉಪಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಅವರನ್ನು ಸೋಲಿಸಲೇಬೇಕೆಂದು ಜೆಡಿಎಸ್ ತೀರ್ಮಾನಿಸಿದ್ದು ಸಂಸದ ಬಚ್ಚೇಗೌಡ ಅವರ ಪುತ್ರ ಶರತ್ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದೆ.

    ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ವಿರುದ್ಧ ಅಭ್ಯರ್ಥಿಯನ್ನು ಹಾಕದೇ ನಾವು ಬೆಂಬಲಿಸುತ್ತೇವೆ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, 15 ಕ್ಷೇತ್ರಗಳ ಪೈಕಿ 14ರಲ್ಲಿ ಮಾತ್ರ ನಾವು ಸ್ಪರ್ಧೆ ಮಾಡುತ್ತೇವೆ. ಹೊಸ ಕೋಟೆಯಲ್ಲಿ ಶರತ್ ಬಚ್ಚೇಗೌಡ ಅವರಿಗೆ ನಾವು ಬೆಂಬಲ ನೀಡುತ್ತೇವೆ. ಪಕ್ಷೇತರ ಅಭ್ಯರ್ಥಿಗೆ ನಮ್ಮ ಅವಶ್ಯಕತೆ ಇದ್ದರೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು. ಈ ವೇಳೆ ಜೆಡಿಎಸ್‍ಗೆ ಬಂದರೆ ಸೇರಿಸಿಕೊಳ್ಳುತ್ತೀರಾ ಎನ್ನುವ ಪ್ರಶ್ನೆಗೆ ಅವರು ನಮ್ಮ ಮನೆಯವರೇ ಮುಂದೆ ಏನ್ ಆಗುತ್ತದೋ ನೋಡೋಣ ಎಂದು ಉತ್ತರಿಸಿದರು.

    ಕಾಂಗ್ರೆಸ್, ಬಿಜೆಪಿಯ ಜೊತೆಗೆ ಬಿಜೆಪಿ ಬಂಡಾಯ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡುವುದರಿಂದ ಹೊಸಕೋಟೆಯಲ್ಲಿ ಚುನಾವಣಾ ಕಾವು ನಿಧಾನವಾಗಿ ಏರತೊಡಗಿದೆ.

    ಸುಪ್ರೀಂ ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ್ದ ಎಂಟಿಬಿ ನಾಗರಾಜ್ ಹೊಸಕೋಟೆಯಲ್ಲಿ ನನ್ನ ವಿರುದ್ಧ ಶರತ್ ಸ್ಪರ್ಧಿಸಲಿ ನೋಡೋಣ ಎಂದು ಸವಾಲು ಎಸೆದಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಬೆಂಬಲಿಗರ ಜೊತೆ ಸಭೆ ನಡೆಸಿದ ಶರತ್ ಗುರುವಾರ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.

    ಶರತ್ ಬಂಡಾಯವಾಗಿ ಸ್ಪರ್ಧಿಸಲು ಮುಂದಾಗುತ್ತಿದ್ದಂತೆ ಹಿರಿಯ ನಾಯಕ ಅಶೋಕ್ ಅವರು ಪಕ್ಷದ ವಿರುದ್ಧ ಕೆಲಸ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅನರ್ಹರಿಗೆ ಮೋಸವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಶರತ್ ಇದನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಾರೆ. ನಾನೂ ಸಹ ಈ ಕುರಿತು ಅವರ ಬಳಿ ಮಾತನಾಡುತ್ತೇನೆ. ಅಭ್ಯರ್ಥಿ ಘೋಷಣೆಗೂ ಮೊದಲು ಇಂತಹ ಗೊಂದಲಗಳು ಸಹಜ. ಆದರೆ ಪಕ್ಷ ಒಂದು ಬಾರಿ ಅಭ್ಯರ್ಥಿಗಳನ್ನು ಘೋಷಿಸಿದರೆ ಯಾರೂ ಅದರ ವಿರುದ್ಧ ಮಾತನಾಡಬಾರದು. ಈ ರೀತಿಯ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದು ನಾನು ನಂಬಿದ್ದೇನೆ ಎಂದಿದ್ದರು.

    ಎಂಟಿಬಿ ರಾಜೀನಾಮೆ ನೀಡುವ ಮೊದಲು ಅವರ ಮನೆಗೆ ಡಿಕೆ ಶಿವಕುಮಾರ್ ತೆರಳಿ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲದೇ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯನವರು ತೆರಳಿ ರಾಜೀನಾಮೆ ನೀಡದಂತೆ ಮನವಿ ಮಾಡಿದ್ದರು. ಜೆಡಿಎಸ್, ಕೈ ನಾಯಕರ ಮಾತುಕತೆಯ ಹೊರತಾಗಿಯೂ ಎಂಟಿಬಿ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದರು.

    ಈ ಹಿಂದೆ ಕುಮಾರಸ್ವಾಮಿ ಮುಂದೆಯೇ ಕೈ ಟ್ರಬಲ್ ಶೂಟರ್ ಶಿವಕುಮಾರ್ ಬೆಂಗಳೂರಿನ ಐವರು ಶಾಸಕರನ್ನು ನಾನೇ ಸೋಲಿಸುತ್ತೇನೆ ಎಂದು ಶಪಥ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು. ಹೊಸಕೋಟೆಯ ಎಂಟಿಬಿ ನಾಗರಾಜ್, ಕೆಆರ್ ಪುರಂ ಭೈರತಿ ಬಸವರಾಜು, ಯಶವಂತಪುರದ ಎಸ್.ಟಿ.ಸೋಮಶೇಖರ್, ಮಹಾಲಕ್ಷ್ಮಿ ಲೇಔಟಿನ ಗೋಪಾಲಯ್ಯ ಹಾಗೂ ರಾಜರಾಜೇಶ್ವರಿ ನಗರದ ಮುನಿರತ್ನ ಅವರನ್ನು ಸೋಲಿಸುತ್ತೇನೆ ಡಿಕೆಶಿ ಹೇಳಿದ್ದರು.

    2014ರಲ್ಲಿ ಏನಾಗಿತ್ತು?
    ದೇವೇಗೌಡರ ಬಗ್ಗೆ ಹರಿಹಾಯ್ದ ಪರಿಣಾಮ ಕೊನೆ ಕ್ಷಣದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಚ್‍ಡಿ ಕುಮಾರಸ್ವಾಮಿ ಕಣಕ್ಕೆ ಇಳಿದಿದ್ದರು. ಹೀಗಾಗಿ ಓಕ್ಕಲಿಗರ ಮತ ವಿಭಜನೆಯಿಂದಾಗಿ ಕೇವಲ 9,520 ಮತಗಳ ಅಂತರದಿಂದ ಬಚ್ಚೇಗೌಡ ಅವರು ಸೋತಿದ್ದರು.

    ಲೋಕಸಭಾ ಚುನಾವಣೆಯಲ್ಲಿ ಬಚ್ಚೇಗೌಡ ಅವರು ಗೆಲ್ಲಲ್ಲಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿತ್ತು. ಚುನಾವಣಾ ಪ್ರಚಾರದ ಸಮಯದಲ್ಲಿ ಬಚ್ಚೇಗೌಡರು ದೇವೇಗೌಡ ಮತ್ತು ಅವರ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಇದರ ಪರಿಣಾಮ ಕೊನೆಯ ಕ್ಷಣದಲ್ಲಿ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಎಚ್‍ಡಿಕೆ ಅಭ್ಯರ್ಥಿಯಾದ ಕೂಡಲೇ ಚುನಾವಣೆಯ ಸಂಪೂರ್ಣ ಚಿತ್ರಣವೇ ಬದಲಾಯಿತು. ಒಕ್ಕಲಿಗರ ಮತ ವಿಭಜನೆಯಾದ ಪರಿಣಮ ಬಚ್ಚೇಗೌಡ ಭಾರೀ ಸ್ಪರ್ಧೆ ನೀಡಿದರೂ ಕೊನೆ ಕ್ಷಣದಲ್ಲಿ ಮೋಯ್ಲಿ ಮುಂದೆ 9,520 ಮತಗಳ ಅಂತರದಿಂದ ಸೋಲನ್ನಪ್ಪಿದರು. ಈ ಕಾರಣಕ್ಕೆ ತಮ್ಮ ಗೆಲುವಿನ ಹಾದಿ ಕಷ್ಟ ಆಗುತ್ತದೆ ಎಂದುಕೊಂಡಿರುವ ಬಚ್ಚೇಗೌಡ ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡ ಅವರು ವಿರುದ್ಧ ತುಟಿ ಬಿಚ್ಚರಲಿಲ್ಲ.

    ಕಳೆದ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ಎಂ.ವೀರಪ್ಪ ಮೋಯ್ಲಿ 4,24,800 ವೋಟ್ ಗಳಿಸಿದ್ದರೆ ಬಿ.ಎನ್ ಬಚ್ಚೇಗೌಡ ಅವರಿಗೆ 4,15,280 ಮತಗಳು ಬಿದ್ದಿತ್ತು. ಎಚ್.ಡಿ ಕುಮಾರಸ್ವಾಮಿ ಅವರು 3,46,339 ಲಕ್ಷ ಮತ ಪಡೆದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಚ್ಚೇಗೌಡ 7,45,912 ಮತಗಳನ್ನು ಪಡೆದಿದ್ದರೆ ಮೊಯ್ಲಿ 5,63,802 ಮಗಳನ್ನು ಪಡೆದು ಸೋತಿದ್ದರು.

  • ನಾಳೆಯಿಂದ ಕರ್ನಾಟಕ ರಾಜಕಾರಣ ಕುರುಕ್ಷೇತ್ರ ಆಗುತ್ತೆ: ಬಚ್ಚೇಗೌಡ

    ನಾಳೆಯಿಂದ ಕರ್ನಾಟಕ ರಾಜಕಾರಣ ಕುರುಕ್ಷೇತ್ರ ಆಗುತ್ತೆ: ಬಚ್ಚೇಗೌಡ

    ಚಿಕ್ಕಬಳ್ಳಾಪುರ: ಕರ್ನಾಟಕ ರಾಜಕಾರಣ ನಾಳೆಯಿಂದ ಕುರುಕ್ಷೇತ್ರ ಆಗುತ್ತೆ. ಮೂರು-ನಾಲ್ಕು ದಿನದಲ್ಲಿ ಬಿಜೆಪಿ ನಾಯಕ ಯಡಿಯೂರಪ್ಪ ಸಿಎಂ ಆಗ್ತಾರೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದು, ಎರಡು, ಮೂರು, ನಾಲ್ಕು ಅಂತ ಎಣಿಸಿ ನೋಡಿ. ನಾಳೆಯಿಂದ ಕರ್ನಾಟಕ ರಾಜಕಾರಣ ಕುರುಕ್ಷೇತ್ರ ಆಗುತ್ತೆ. ಯಡಿಯೂರಪ್ಪ ಈ ಕುರುಕ್ಷೇತ್ರದಲ್ಲಿ ಗೆಲ್ಲುತ್ತಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮೋದಿ ಪ್ರಧಾನಿ ಆಗಬೇಕು ಎಂಬುದು ನನ್ನ ಆಸೆ ಅದು ನೆರವೇರುತ್ತಿದೆ. ಈಗ ಯಡಿಯೂರಪ್ಪ ಸಿಎಂ ಅಗಬೇಕು ಎಂಬುದೇ ನನ್ನ ಆಸೆಯಾಗಿದೆ. ಎರಡು ಮೂರು ದಿನ ಕಾದು ನೋಡಿ ಯಡಿಯೂರಪ್ಪ ಸಿಎಂ ಅಗ್ತಾರೆ ಎಂದರು. ಇದೇ ವೇಳೆ  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮಾಧ್ಯಮಗಳ ಎಕ್ಸಿಟ್ ಪೋಲ್ ಸಮೀಕ್ಷೆಗೆ ಬಚ್ಚೇಗೌಡರು ಪ್ರಶಂಸೆ ವ್ಯಕ್ತಪಡಿಸಿದರು.