Tag: ಬಗಲಗುಂಟೆ

  • ಎಲೆಕ್ಟ್ರಿಕ್‌ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ – 4 ಸ್ಕೂಟರ್ ಬೆಂಕಿಗಾಹುತಿ

    ಎಲೆಕ್ಟ್ರಿಕ್‌ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ – 4 ಸ್ಕೂಟರ್ ಬೆಂಕಿಗಾಹುತಿ

    ಬೆಂಗಳೂರು: ನಗರದ ಹೊರವಲಯ ಟಿ.ದಾಸರಹಳ್ಳಿಯಲ್ಲಿರುವ ಎಲೆಕ್ಟ್ರಿಕ್‌ ಬೈಕ್ ಶೋರೂಂನಲ್ಲಿ (Electric Bike Showroom) ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲೇ ಹೊತ್ತಿ ಉರಿದಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

    ಅಗ್ನಿ ಅವಘಡದಲ್ಲಿ (Fire Accident) 4 ಎಲೆಕ್ಟ್ರಿಕ್‌ ಬೈಕ್‌ಗಳು ಬೆಂಕಿಗಾಹುತಿಯಾಗಿದೆ. ಇನ್ನೂ ಮನೀಷ್ ಎಂಬುವವರಿಗೆ ಸೇರಿದ್ದ ಎಲೆಕ್ಟ್ರಿಕ್‌ ಬೈಕ್ ಶೋರೂಂ ಆಗಿದ್ದು, ರಾತ್ರಿ ಶೋರೂಂ ಕ್ಲೋಸ್ ಮಾಡಿ ಮನೆಗೆ ತೆರಳಿದ ವೇಳೆ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಡಿಸಿ, ಸಿಇಓಗಳಿಗೆ ಸಿಎಂ ಎಚ್ಚರಿಕೆ

    ಶೋರೂಂನಲ್ಲಿದ್ದ ಎಲೆಕ್ಟ್ರಿಕ್‌ ಬೈಕ್‌ಗಳ ಬ್ಯಾಟರಿ ಬ್ಲಾಸ್ಟ್ ಆಗಿ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೀಣ್ಯಾ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಇದನ್ನೂ ಓದಿ: ಕಮಲ್‌ ಹಾಸನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಇಬ್ಬರ ವಿರುದ್ಧ ಎಫ್‌ಐಆರ್

    ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Bengaluru | ಪತಿಗೆ ಅಕ್ರಮ ಸಂಬಂಧ – ಮಗಳನ್ನು ಕೊಲೆಗೈದು ಪತ್ನಿ ಆತ್ಮಹತ್ಯೆ

    Bengaluru | ಪತಿಗೆ ಅಕ್ರಮ ಸಂಬಂಧ – ಮಗಳನ್ನು ಕೊಲೆಗೈದು ಪತ್ನಿ ಆತ್ಮಹತ್ಯೆ

    ಬೆಂಗಳೂರು: ಗಂಡನ ಅಕ್ರಮ ಸಂಬಂಧಕ್ಕೆ (Illicit Relationship) ಬೇಸತ್ತ ಪತ್ನಿ 5 ವರ್ಷದ ಮಗಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಬಗಲಗುಂಟೆಯಲ್ಲಿ (Bagalgunte) ನಡೆದಿದೆ.

    ಶೃತಿ (33) ಆತ್ಮಹತ್ಯೆ ಮಾಡಿಕೊಂಡ ಪತ್ನಿ. ಪಾವಘಡದ ಗುಂಡಾರನಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷೆಯಾಗಿದ್ದ ಶೃತಿ ಮಗಳು ರೋಶಿಣಿಯನ್ನು (5) ಫ್ಯಾನ್‌ಗೆ ನೇಣು ಹಾಕಿ ಬಳಿಕ ಅದೇ ಫ್ಯಾನಿಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ದಾವಣಗೆರೆ| ಜಾತ್ರೆಗೆ ಒಂದು ದಿನ ಇರುವಾಗಲೇ ದೇವಾಲಯದ ಹುಂಡಿ ಕಳವು!

    ಶೃತಿ, ಈ ಹಿಂದೆ ಪಂಚಾಯತ್ ಕಚೇರಿಯಲ್ಲಿ ಆಡಿಟಿಂಗ್ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣನನ್ನ ಪ್ರೀತಿಸಿ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಭಾನುವಾರ ಸಂಜೆ ಪತಿ ಮನೆಯಿಂದ ಹೊರಗಡೆ ಹೋಗಿದ್ದ ಸಂದರ್ಭ ಶೃತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ ಮನೆಯ ಹೊರಗಡೆ ಆಟವಾಡುತ್ತಿದ್ದ. ಮಗ ಮನೆಯೊಳಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೆಲಸ ಮಾಡದ ಮೋದಿಯನ್ನು ಕೆಳಗಿಳಿಸಿ, ಗಡ್ಕರಿಯನ್ನು ಪ್ರಧಾನಿ ಮಾಡಿ: ಸಂತೋಷ್‌ ಲಾಡ್‌

    ಗಂಡ ಗೋಪಾಲಕೃಷ್ಣನ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶೃತಿ ಡೆತ್ ನೋಟ್ ಬರೆದಿದ್ದಾರೆ. ಭಾನುವಾರ ಸಂಜೆ ಘಟನೆ ನಡೆದಿದೆ. ಸ್ಥಳಕ್ಕೆ ಬಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಮುಗಿಸಿ ಕುಟುಂಬಸ್ಥರಿಗೆ ಮೃತದೇಹಗಳನ್ನು ಪೊಲೀಸರು ಒಪ್ಪಿಸಿದ್ದಾರೆ. ಸದ್ಯ ಪತಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 17ರ ಬಾಲಕಿ ಮೇಲೆ ಅತ್ಯಾಚಾರ – ಮೃತ ವ್ಯಕ್ತಿಯ ವಿರುದ್ಧ ಪೋಕ್ಸೋ ಕೇಸ್‌

  • ಸಬ್ ಇನ್ಸ್‌ಪೆಕ್ಟರ್ ಕೆಲಸದ ಆಮಿಷ – ಪ್ರೀತಿಸುವಂತೆ ಬ್ಲ್ಯಾಕ್ ಮೇಲ್, ಯುವತಿಗೆ 5 ಲಕ್ಷ ರೂ. ವಂಚನೆ

    ಸಬ್ ಇನ್ಸ್‌ಪೆಕ್ಟರ್ ಕೆಲಸದ ಆಮಿಷ – ಪ್ರೀತಿಸುವಂತೆ ಬ್ಲ್ಯಾಕ್ ಮೇಲ್, ಯುವತಿಗೆ 5 ಲಕ್ಷ ರೂ. ವಂಚನೆ

    ಬೆಂಗಳೂರು: ಸಬ್ ಇನ್ಸ್‌ಪೆಕ್ಟರ್ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಗೆ 5 ಲಕ್ಷ ರೂ. ವಂಚಿಸಿರುವ ಘಟನೆ ನಗರದ ಬಗಲಗುಂಟೆಯಲ್ಲಿ ನಡೆದಿದೆ.

    ಒಟ್ಟು ಎಂಟು ಆರೋಪಿಗಳು ಈ ಕೃತ್ಯ ಎಸಗಿದ್ದು, ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಿ ಪ್ರಸಾದ್ ಸಾಹೋ, ಮೋಹನ್, ಮೋಹನ್ ತಾಯಿ ರತ್ನಮ್ಮ, ತಂದೆ ರತ್ನಾಕರ ಹೆಗಡೆ, ವಿಜಯಾ ಕರ್ನಾಟಕ ಸಂಘದ ಸತೀಶ್ ಮತ್ತು ನಂಜಪ್ಪ, ನಾರಾಯಣ್ ದಾಸ್ ಜಾಜೂ, ಎಂ.ರಂಗಪ್ಪ ಯುವತಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿದ್ದಾರೆ.

    ಆರೋಪಿ ದೇವಿಪ್ರಸಾದ್ 5 ಲಕ್ಷ ರೂ. ಹಣ ಪಡೆದು, ಯುವತಿಗೆ ವಂಚಿಸಿದ್ದಾನೆ. ಪ್ರೀತಿಯ ನೆಪದಲ್ಲಿ ಯುವತಿಗೆ ಹತ್ತಿರವಾಗಿದ್ದ ದೇವಿಪ್ರಸಾದ್. ಅದೇ ಸಲಿಗೆಯಲ್ಲಿ ಯುವತಿಗೆ ಪಿಎಸ್‌ಐ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದ. ಹಣ ಮರಳಿ ಹಣ ಕೇಳಿದ್ದಕ್ಕೆ ಅಶ್ಲೀಲ ಫೋಟೋ ಫೇಸ್‌ಬುಕ್‌ಗೆ ಹಾಕುತ್ತೇನೆ ಎಂದು ಬೆದರಿಕೆ ಒಡ್ಡಿದ್ದ.

    ಪ್ರಕರಣದ ವಿವರ
    ಯುವತಿ ಗಂಗಾ(ಹೆಸರು ಬದಲಾಯಿಸಲಾಗಿದೆ) 2016ರಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಹಾಕಿದ್ದರು. ಎ1 ಆರೋಪಿ ದೇವಿ ಪ್ರಸಾದ್ ಸಾಹೋ ಎ7 ಆರೋಪಿ ನಾರಾಯಣ ದಾಸ್ ಜಾಜೂನನ್ನು ಗಂಗಾಗೆ ಪರಿಚಯಿಸಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಇದಕ್ಕಾಗಿ ಮೊದಲ ಹಂತದಲ್ಲಿ ಯುವತಿಯಿಂದ 3.50 ಲಕ್ಷ ರೂ. ಹಾಗೂ ಚಿನ್ನಾಭರಣ, ಲ್ಯಾಪ್‌ಟಾಪ್ ಪಡೆದಿದ್ದಾನೆ. ನಂತರ ಪ್ರೀತಿಸುವಂತೆ ಯುವತಿಗೆ ಕಿರುಕುಳ ನೀಡಿದ್ದಾರೆ.

    ಇದರಿಂದ ಬೇಸತ್ತ ಗಂಗಾ ದೇವಿ ಪ್ರಸಾದ್‌ಗೆ ಪರಿಚಿತನಾದ ಎ2 ಆರೋಪಿ ಮೋಹನ್‌ನನ್ನು ಸಂಪರ್ಕಿಸಿ ಹಣ ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಆರೋಪಿ ಮೋಹನ್, ನಾರಾಯಣ ದಾಸ್ ಜೊತೆ ಮಾತನಾಡಿ ಕೆಲಸ ಕೊಡಿಸುವ ಕುರಿತು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದಾನೆ. ಸೆ.4ರಂದು ಪ್ರಮುಖ ಆರೋಪಿ ದೇವಿ ಪ್ರಸಾದ್ ಗಂಗಾಳನ್ನು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಕರೆಸಿ ಕೈ ಹಿಡಿದು ಎಳೆದಾಡಿ ಅವಮಾನಿಸಿದ್ದಾನೆ. ಅಲ್ಲದೆ ಸಂತ್ರಸ್ತೆ ಹೆಸರಲ್ಲಿ ಫೇಸ್‌ಬುಕ್ ಖಾತೆ ತೆರೆದು ತನ್ನೊಂದಿಗೆ ಗಂಗಾ ಇದ್ದ ಫೋಟೋಗಳನ್ನು ಗಂಡನ ಸಂಬಂಧಿಕರ ಫೇಸ್‌ಬುಕ್ ಖಾತೆಗೆ ಕಳುಹಿಸಿದ್ದಾನೆ.

    ಈ ಫೋಟೋಗಳನ್ನು ಫೇಸ್‌ಬುಕ್‌ನಿಂದ ತೆಗೆಯಲು 5 ಲಕ್ಷ ರೂ. ನೀಡುವಂತೆ ಎ2 ಆರೋಪಿ ಮತ್ತೆ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದಾರೆ.

    ಈ ವೇಳೆ ಎ1 ಆರೋಪಿ ದೇವಿ ಪ್ರಸಾದ್ ಗಂಗಾಳನ್ನು ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮದುವೆಯಾಗಿದ್ದೇನೆ. ಈ ಕುರಿತು ಮದುವೆ ನೋಂದಣಿ ಸಹ ಆಗಿದೆ ಎಂದು ತಿಳಿಸಿದ್ದ. ಈ ಕುರಿತು ನಕಲಿ ಮದುವೆ ಪತ್ರಗಳನ್ನು ಸಹ ಸೃಷ್ಟಿಸಿದ್ದ.

    ಎ7 ಆರೋಪಿ ನಾರಾಯಣ ದಾಸ್‌ಗೆ ಸಂತ್ರಸ್ತೆ 2.50 ಲಕ್ಷ ರೂ.ಹಣ ನೀಡದ್ದಕ್ಕೆ ಇಬ್ಬರೂ ಇರುವ ಫೋಟೋಗಳನ್ನು ಮತ್ತೆ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಅಲ್ಲದೆ ವಾಟ್ಸಪ್ ಮೂಲಕ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಅವಮಾನಿಸಿದ್ದಾನೆ. ಎ2 ಆರೋಪಿ ಮೋಹನ್ ಹಾಗೂ ಎ3 ಆರೋಪಿ ರತ್ನಮ್ಮ ಸಂತ್ರಸ್ತೆಯಿಂದ ಬಲವಂತವಾಗಿ 1.50 ಲಕ್ಷ ರೂ.ಗಳನ್ನು ಪಡೆದಿದ್ದಾರೆ. ಸಮಸ್ಯೆ ಬಗೆಹರಿಸುತ್ತೇವೆ ಎಂದು ಮತ್ತೆ 2.50 ರೂ.ಗಳನ್ನು ಪಡೆದಿದ್ದಾರೆ. ಇಷ್ಟು ಹಣ ಪಡೆದರೂ ಸಹ ಮತ್ತೆ 2.50 ಲಕ್ಷ ರೂ. ನೀಡುವಂತೆ ಒತ್ತಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ವಿವರಿಸಿದ್ದಾಳೆ.

  • ಬೆಂಗ್ಳೂರು ದರೋಡೆ ಪ್ರಕರಣಕ್ಕೆ ಟ್ವಿಸ್ಟ್ – ಹ್ಯಾಪಿ ಎಂಡಿಂಗ್‍ಗೆ ಬಂದವರಿಂದಲೇ ಮಹಿಳೆಗೆ ಚಾಕು ಇರಿತ

    ಬೆಂಗ್ಳೂರು ದರೋಡೆ ಪ್ರಕರಣಕ್ಕೆ ಟ್ವಿಸ್ಟ್ – ಹ್ಯಾಪಿ ಎಂಡಿಂಗ್‍ಗೆ ಬಂದವರಿಂದಲೇ ಮಹಿಳೆಗೆ ಚಾಕು ಇರಿತ

    ಬೆಂಗಳೂರು: ದರೋಡೆ ಪ್ರಕರಣವೊಂದು ಭಾರೀ ತಿರುವು ಪಡೆದುಕೊಂಡಿದ್ದು, ಪರಿಚಿತರೇ ದರೋಡೆ ಮಾಡಿದರೂ ಅವರ್ಯಾರೂ ಗೊತ್ತೇ ಇಲ್ಲ ಎಂದಿದ್ದ ಮಹಿಳೆಯ ಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ.

    ಕುಡಿಯಲು ನೀರು ಕೇಳುವ ನೆಪದಲ್ಲಿ ಅಕ್ರಮ ಸಂಬಂಧ ಹೊಂದಿದ್ದವನೇ ಮಹಿಳೆಗೆ ಚಾಕುವಿನಿಂದ ಇರಿದ ಘಟನೆ ಬಾಗಲಗುಂಟೆಯಲ್ಲಿ ನಡೆದಿದೆ. ದರೋಡೆಕೋರರು ಪರಿಚಯವಿದ್ದರೂ ಸಹ ಮಹಿಳೆ ಅವರ್ಯಾರು ಗೊತ್ತೇ ಇಲ್ಲ ಎಂದು ದೂರು ನೀಡಿದ್ದು, ಡಬಲ್ ಗೇಮ್ ಆಡುವ ಮೂಲಕ ಮಾಜಿ ಮುಖ್ಯಮಂತ್ರಿಗಳ ಪ್ರತಿಭಟನೆಯಲ್ಲಿ ಬ್ಯುಸಿ ಇದ್ದ ಪೊಲೀಸರಿಗೆ ಮಹಿಳೆ ಥಂಡಾ ಹೊಡೆಸಿದ್ದಾಳೆ.

    ಏನಿದು ಪ್ರಕರಣ?
    ಅ.1 ರಂದು ಮಹಿಳೆಯೊಬ್ಬರ ಮನೆಗೆ ನುಗ್ಗಿ ಚಾಕು ಹಾಕಿ, ದರೋಡೆ ಮಾಡಲಾಗಿತ್ತು. ಯಾರೋ ಅಪರಿಚಿತರು ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ, ಚಾಕುವಿನಿಂದ ಇರಿದು ದರೋಡೆ ಮಾಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಳು. ಈ ದೂರಿನ ಹಿನ್ನೆಲೆಯಲ್ಲಿ ಟವರ್ ಲೋಕೇಶನ್ ಮೂಲಕ ಬಾಗಲಕುಂಟೆ ಪೊಲೀಸರು ಆರೋಪಿಗಳಾದ ರಾಕೇಶ್ ಗೌಡ ಮತ್ತು ಇರ್ಫಾನ್ ಬಂಧಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರಿಗೆ ಬೇರೆಯದೇ ಸತ್ಯ ಅನಾವರಣವಾಗಿದೆ.

    ಮಲ್ಲೇಶ್ವರದ ಗ್ಲಾಮರ್ ಸ್ಪಾ ಆ್ಯಂಡ್ ಸಲೂನ್‍ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ರಾಕೇಶ್ ಗೌಡಮ ಪರಿಚಯವಾಗಿತ್ತು. ಸ್ಪಾ ಹೆಸರಲ್ಲಿ ರಾಕೇಶ್ ಗೌಡ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಆಗಾಗ ಸ್ಪಾಗೆ ಆಗಮಿಸಿ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಬೆಳೆಸುತ್ತಿದ್ದ. ಇದೇ ಪರಿಚಯದ ಮೇಲೆ ರಾಕೇಶ್ ಮಹಿಳೆಗೆ ಸ್ವಲ್ಪ ಹಣ ಕೊಟ್ಟಿದ್ದ. ಈ ಹಣ ಕೇಳಲು ರಾಕೇಶ್ ತನ್ನ ಸ್ನೇಹಿತ ಇರ್ಫಾನನ್ನೂ ಜೊತೆಗೆ ಕರೆದುಕೊಂಡು ಮಂಗಳವಾರ ಬಾಗಲಗುಂಟೆಯ ಮಹಿಳೆ ಮನೆಗೆ ಹೋಗಿದ್ದ.

    ಈ ವೇಳೆ ಮಹಿಳೆಯ ಜೊತೆ ರಾಸಲೀಲೆ ನಡೆಸಿದ ರಾಕೇಶ್, ಬಳಿಕ ಹಣ ಕೊಡುವಂತೆ ಕೇಳಿದ್ದ. ನಾನು ನಿನ್ನ ಜೊತೆ ಸಹಕರಿಸಿಯೂ ಹಣವನ್ನೂ ಕೊಡಬೇಕೇ? ನಾನು ಹಣ ನೀಡಲ್ಲ ಎಂದು ಮಹಿಳೆ ದಬಾಯಿಸಿದ್ದಾಳೆ. ಮಹಿಳೆ ಕೂಗಿಕೊಳ್ಳಲು ಪ್ರಾರಂಭಿಸುತ್ತಿದ್ದಂತೆ ರಾಕೇಶ್ ಗೌಡ ಮತ್ತು ಇರ್ಫಾನ್ ಅವಳ ಮುಖಕ್ಕೆ ಬಟ್ಟೆ ಸುತ್ತಿ ಕೈಗೆ ಚಾಕು ಇರಿದಿದ್ದರು. ನಂತರ ಮಹಿಳೆಯ ಮನೆಯಲ್ಲಿದ್ದ ಚಿನ್ನ ದೋಚಿ ರಾಕೇಶ್ ಮತ್ತೂಟ್ ಫೈನಾನ್ಸಿನಲ್ಲಿ ಅಡವಿಟ್ಟಿದ್ದ.

    ರಾಕೇಶ್ ಗೌಡ ದರೋಡೆ ಮಾಡಿಕೊಂಡು ಹೋಗುತ್ತಿದ್ದಂತೆ ಮಹಿಳೆ ಪೊಲೀಸರಿಗೆ ಸತ್ಯ ಮರೆಮಾಚಿ, ಯಾರೋ ಅಪರಿಚಿತರು ನೀರು ಕೇಳಲು ಬಂದು ನನ್ನ ಮನೆ ದರೋಡೆ ಮಾಡಿದ್ದಾರೆ ಎಂದು ಸುಳ್ಳು ದೂರು ದಾಖಲಿಸಿದ್ದಳು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜೊತೆಗೆ ಮಹಿಳೆಯ ಡಬಲ್ ಗೇಮ್ ಸಹ ಬಯಲಾಗಿದೆ.