Tag: ಬಕ್ರಿದ್ ಹಬ್ಬ

  • ʻಟಗರು ಪಲ್ಯʼ ಚಿತ್ರದಲ್ಲಿ ನಟಿಸಿದ 7 ಸ್ಟಾರ್‌ ಸುಲ್ತಾನ್‌ ಕುರ್ಬಾನಿಗೆ ಭಾರೀ ವಿರೋಧ

    ʻಟಗರು ಪಲ್ಯʼ ಚಿತ್ರದಲ್ಲಿ ನಟಿಸಿದ 7 ಸ್ಟಾರ್‌ ಸುಲ್ತಾನ್‌ ಕುರ್ಬಾನಿಗೆ ಭಾರೀ ವಿರೋಧ

    ಬಾಗಲಕೋಟೆ: ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿರುವ ʻ7 ಸ್ಟಾರ್ ಸುಲ್ತಾನ್ ಖಾನ್ʼ ಎಂಬ ಟಗರನ್ನ (Tagaru) ಕುರ್ಬಾನಿಗೆ ಮಾಡಲು ಭಾರೀ ವಿರೋಧ ವ್ಯಕ್ತವಾಗುತ್ತಿದೆ.

    ಬಾಗಲಕೋಟೆ (Bagalkote) ತಾಲೂಕಿನ ಸುತಗುಂಡಾರ್ ಗ್ರಾಮದ ಯುನೀಸ್ ಗಡೇದ್ ಎಂಬ ವ್ಯಕ್ತಿ, ಬಕ್ರೀದ್‌ ಹಬ್ಬಕ್ಕೆ (Bakrid Festival) ಕುರ್ಬಾನಿಗಾಗಿ ಎರಡೂವರೆ ವರ್ಷದ ಹಿಂದೆ ರಾಂಪುರ್ ಗ್ರಾಮದ ಬಸು ಎಂಬುವರಿಂದ 1.88 ಲಕ್ಷ ರೂ. ನೀಡಿ ಈ ‌ಟಗರನ್ನ ಖರೀದಿಸಿದ್ದರು. ಆದ್ರೆ ಕುರ್ಬಾನಿ ಕೊಡೋ ಮುನ್ನ ಆ ಟಗರನ್ನ ಕಾಳಗಕ್ಕೆ ಇಳಿಸಿದ್ದರು. ಕಾಳಗದಲ್ಲಿ ಟಗರು ಜಯಭೇರಿ ಬಾರಿಸಿತ್ತು. ಇದನ್ನೂ ಓದಿ: 2ನೇ ವೀಕೆಂಡ್‌ನಲ್ಲೂ ಮಹಿಳೆಯರ ‘ಶಕ್ತಿ’ ಪ್ರದರ್ಶನ – ಯಾವ ಬಸ್‌ನಲ್ಲಿ ಎಷ್ಟು ಮಂದಿ ಪ್ರಯಾಣ?

    ಆ ನಂತರ ಯುನೀಸ್‌ ಎಲ್ಲ ಕಾಳಗಗಳಿಗೂ ಟಗರನ್ನ ಇಳಿಸಲು ಮುಂದಾರು. ಟಗರು ಹೋದಲೆಲ್ಲಾ ಜಯಭೇರಿ ಬಾರಿಸುತ್ತಾ ತನ್ನದೇ ಅಭಿಮಾನಿ ವರ್ಗವನ್ನ ಸೃಷ್ಟಿಸಿಕೊಂಡಿತು. ಆದ್ದರಿಂದ ಮಾಲೀಕ ಯುನೀಸ್‌ ಈ ಟಗರಿಗೆ ಪ್ರೀತಿಯಿಂದ ʻ7 ಸ್ಟಾರ್ ಸುಲ್ತಾನ್ʼ ಎಂಬ ಹೆಸರನ್ನಿಟ್ಟರು. ಇಲ್ಲಿಯ ವರೆಗೆ ಈ ಸೆವನ್ ಸ್ಟಾರ್ ಸುಲ್ತಾನ್ ಟಗರು 34 ಕಾಳಗದಲ್ಲಿ ಜಯ ಸಾಧಿಸಿ, 20 ಲಕ್ಷಕ್ಕೂ ಹೆಚ್ಚು ಹಣವನ್ನ ಸಂಪಾದಿಸಿಕೊಟ್ಟಿದೆ. ಅಷ್ಟು ಸಾಲದೆಂಬಂತೆ 3 ಎಚ್‌ಎಫ್‌ ಡೀಲಕ್ಸ್‌ ಬೈಕ್‌ ಇನ್ನೂ ಅನೇಕ ಬಹುಮಾನಗಳನ್ನ ಗೆದ್ದುಕೊಟ್ಟಿದೆ. ಇದನ್ನೂ ಓದಿ: 1,500 ಮಹಿಳೆಯರಿಂದ ಸೇನಾ ವಾಹನಗಳಿಗೆ ಮುತ್ತಿಗೆ – 12 ದಾಳಿಕೋರರ ಬಿಡುಗಡೆ

    ಅಲ್ಲದೇ ತೆರೆ ಕಾಣದ ಡಾಲಿ ಧನಂಜಯ್ ಅಭಿನಯದ ʻಟಗರು ಪಲ್ಯʼ ಚಿತ್ರದಲ್ಲಿ ಅಭಿನಯಿಸಿ, ಈ ಸೆವನ್ ಸ್ಟಾರ್ ಸುಲ್ತಾನ್‌ ಮತ್ತಷ್ಟು ಸುದ್ದಿಯಾಗಿತ್ತು. ಇದೀಗ ಯುನೀಸ್‌ ಗಡೇದ್‌ ಈ ಬಾರಿಯ ಬಕ್ರೀದ್ ಹಬ್ಬಕ್ಕೆ ಟಗರನ್ನ ಕುರ್ಬಾನಿ ಮಾಡಲು ನಿರ್ಧರಿಸಿದ್ದಾರೆ. ಇದು ಸುಲ್ತಾನ್ ಟಗರು ಅಭಿಮಾನಿಗಳಿಗೆ ಬೇಸರ ತರಿಸಿದೆ. ಹೀಗಾಗಿ ಈ ಸುಲ್ತಾನ್ ಅಭಿಮಾನಿಗಳು ಸಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮೂಲಕ ಟಗರನ್ನ ಕುರ್ಬಾನಿ ಮಾಡದಂತೆ ಮನವಿ ಮಾಡುವ ಅಭಿಯಾನ ಶುರುಮಾಡಿಕೊಂಡಿದ್ದಾರೆ.

  • ಹಬ್ಬ ಬಿಡಿ, ಬದುಕು ಕಟ್ಟಿಕೊಳ್ಳಲು ನಮ್ಗೆ ಸಹಾಯ ಮಾಡಿ- ಮುಸ್ಲಿಂ ಮಹಿಳೆಯರು ಕಣ್ಣೀರು

    ಹಬ್ಬ ಬಿಡಿ, ಬದುಕು ಕಟ್ಟಿಕೊಳ್ಳಲು ನಮ್ಗೆ ಸಹಾಯ ಮಾಡಿ- ಮುಸ್ಲಿಂ ಮಹಿಳೆಯರು ಕಣ್ಣೀರು

    ಮಡಿಕೇರಿ: ಇಂದು ಬಕ್ರಿದ್ ಹಬ್ಬ, ಆದರೆ ಸಂಭ್ರಮದಿಂದ ಅದನ್ನು ಆಚರಿಸುವ ಜನರ ಖುಷಿಯನ್ನು ಪ್ರವಾಹ ಕಿತ್ತುಕೊಂಡಿದೆ. ಪ್ರವಾಹದಿಂದ ಮನೆಗಳನ್ನು ತೊರೆದು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಮುಸ್ಲಿಂ ಮಹಿಳೆಯರು ಹಬ್ಬವನ್ನು ಮುಂದಿನ ವರ್ಷ ಮಾಡುತ್ತೇವೆ. ನಮಗೆ ನಮ್ಮ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿ ಎಂದು ಕಣ್ಣೀರು ಹಾಕಿದ್ದಾರೆ.

    ಕೊಡಗಿನ ನೆಲ್ಯಹುದಿಕೇರಿಯ ನಿರಾಶ್ರಿತ ಕೇಂದ್ರದಲ್ಲಿ ತಂಗಿರುವ ಮುಸ್ಲಿಂ ಮಹಿಳೆಯರು ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮುಂದಿನ ವರ್ಷ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡುತ್ತೇವೆ. ಸದ್ಯ ನಮಗೆ ನಮ್ಮ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿ. ಒಂದು ತಿಂಗಳಿಂದ ಹಬ್ಬಕ್ಕೆ ತಯಾರಿ ಮಾಡಿಕೊಂಡಿದ್ದೆವು. ಆದರೆ ಪ್ರವಾಹಕ್ಕೆ ಸಿಲುಕಿ ಎಲ್ಲವೂ ಕೊಚ್ಚಿಹೋಯಿತು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ನಮ್ಮ ಮನೆಗಳು, ಆಸ್ತಿಪಾಸ್ತಿಗಳು ನಾಶವಾಗಿದೆ. ಕೆಲವರು ಎಲ್ಲವನ್ನೂ ಕಳೆದುಕೊಂದು ಸಂಕಷ್ಟದಲ್ಲಿದ್ದಾರೆ. ಸದ್ಯ ನಿರಾಶ್ರಿತ ಕೇಂದ್ರದಲ್ಲಿ ನಮಗೆ ಬಟ್ಟೆ, ಊಟವನ್ನು ಕೊಡುತ್ತಿದ್ದಾರೆ. ಆದರೆ ಪ್ರವಾಹ ತಗ್ಗಿದ ಬಳಿಕ ಇಲ್ಲಿಂದ ಹೊರಹೋದ ನಂತರ ನಮ್ಮ ಮುಂದಿನ ಜೀವನ ಹೇಗೆ ಎಂದು ತಿಳಿದಿಲ್ಲ ಎಂದು ತಮ್ಮ ಪರಿಸ್ತಿತಿ ಬಗ್ಗೆ ಹೇಳಿಕೊಂಡಿದ್ದಾರೆ.

    ಕೊಡಗಿನಲ್ಲಿ ಮಳೆಯ ಅಬ್ಬರಕ್ಕೆ ಜನರು ನಲುಗಿ ಹೋಗಿದ್ದಾರೆ. ಕೊಡಗಿನ ಬಹುತೇಕ ಪ್ರದೇಶಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂದು ನಿರಾಶ್ರಿತ ಕೇಂದ್ರಗಳಲ್ಲಿ ನೆರವು ಪಡೆದಿದ್ದಾರೆ. ಹೀಗಾಗಿ ಮುಸ್ಲಿಮರು ಸಂಭ್ರಮದಿಂದ ಆಚರಿಸುವ ಬಕ್ರಿದ್ ಹಬ್ಬವನ್ನು ಮಾಡಲು ಸಾಧ್ಯವಾಗುತ್ತಿಲ್ಲ.