Tag: ಬಂದ್

  • ‘ಶಕ್ತಿ’ ವಿರೋಧಿಸಿ ಕರ್ನಾಟಕ ಬಂದ್ – ಖಾಸಗಿ ಸಾರಿಗೆ ಒಕ್ಕೂಟದ ಜೊತೆಗಿನ ಸಭೆ ವಿಫಲ

    ‘ಶಕ್ತಿ’ ವಿರೋಧಿಸಿ ಕರ್ನಾಟಕ ಬಂದ್ – ಖಾಸಗಿ ಸಾರಿಗೆ ಒಕ್ಕೂಟದ ಜೊತೆಗಿನ ಸಭೆ ವಿಫಲ

    ಬೆಂಗಳೂರು: ಶಕ್ತಿ ಯೋಜನೆ (Shakti Scheme) ಜಾರಿಯಾಗಿದ್ದರಿಂದ ಮಹಿಳೆಯರೇನೋ ಪುಲ್ ಖುಷ್ ಆಗಿದ್ದಾರೆ. ಆದರೆ ಖಾಸಗಿ ಸಾರಿಗೆ ಸಂಘಟನೆಗಳು ಹಾಗೂ ಸರ್ಕಾರದ ಜಟಾಪಟಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಸೋಮವಾರ ಸಿಎಂ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಮುಖ್ಯಮಂತ್ರಿಗಳು ಕರೆದ ಸಭೆಯನ್ನು ಕೆಲ ಖಾಸಗಿ ಸಾರಿಗೆ ಸಂಘಟನೆಗಳು ಬಹಿಷ್ಕರಿಸಿವೆ. ಜೊತೆಗೆ ಸರ್ಕಾರಕ್ಕೆ ಮತ್ತೊಮ್ಮೆ ಬೆಂಗಳೂರು ಬಂದ್ (Bengaluru Bandh) ಅಥವಾ ಕರ್ನಾಟಕ ಬಂದ್ (Karnataka Bandh) ಮಾಡುವ ಎಚ್ಚರಿಕೆ ನೀಡಿವೆ.

    ಶಕ್ತಿ ಯೋಜನೆ ಜಾರಿ ಆದ ನಂತರ ಖಾಸಗಿ ಸಾರಿಗೆ ಉದ್ಯಮಕ್ಕೆ ಎದುರಾದ ಸಂಕಷ್ಟಗಳ ಕುರಿತಂತೆ ಆಗಾಗ್ಗೆ ಆಕ್ರೋಶ ವ್ಯಕ್ತವಾಗುತ್ತಿತ್ತು. ಇದರ ಗಂಭೀರತೆ ಅರಿತ ಸಚಿವ ರಾಮಲಿಂಗಾರೆಡ್ಡಿ ಹಲವು ಸುತ್ತಿನ ಮಾತುಕತೆ ಸಹ ನಡೆಸಿದ್ದರು. ಆದರೆ ಯಾವುದಕ್ಕೂ ತಾರ್ಕಿಕ ಅಂತ್ಯ ಸಿಗದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ನೇತತ್ವದಲ್ಲಿ ನಡೆದ ಸಭೆಯಲ್ಲಿ ಖಾಸಗಿ ಸಾರಿಗೆ ಒಕ್ಕೂಟದ ಸದಸ್ಯರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

    ಸಚಿವರು ಹಾಗೂ ಇಲಾಖೆ ಅಧಿಕಾರಿಗಳು ಸಹ ಸಭೆಯಲ್ಲಿ ಭಾಗಿ ಆಗಿದ್ದರು. ಆದರೆ ಈ ಸಭೆಗೆ ಬಂದ್‌ಗೆ ಕರೆಕೊಟ್ಟಿದ್ದ ಖಾಸಗಿ ಸಾರಿಗೆ ಸಂಘಟನೆಗಳ ಅಧ್ಯಕ್ಷ ಹಾಗೂ ಖಾಸಗಿ ಬಸ್ ಸಂಘಟನೆಯ ಅಧ್ಯಕ್ಷ ನಟರಾಜಶರ್ಮಾ, ಪೀಸ್ ಆಟೋ ಅಸೋಸಿಯೇಷನ್‌ನ ರಾಘು, ರಾಧಾಕೃಷ್ಣ ಹೊಳ್ಳ ಸಂಘಟನೆಯವರು ಸಿಎಂ ಸಭೆಯನ್ನು ಬಹಿಷ್ಕರಿಸಿದರು.

    ಈ ಬಗ್ಗೆ ಮಾತನಾಡಿದ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮಾ, ಸಾರಿಗೆ ಸಚಿವರ ಆಶ್ವಾಸನೆ ಮೇರೆಗೆ ಬಂದ್ ವಾಪಾಸ್ ಪಡೆದಿದ್ದೆವು. ಆದರೆ ಹೋರಾಟಕ್ಕೆ ಬೆಂಬಲ ಸೂಚಿಸದ ಸಂಘಟನೆಗಳನ್ನು ಸಭೆಗೆ ಕರೆಯಲಾಗಿದೆ. ಸಾರಿಗೆ ಅಡಿಷನಲ್ ಕಮೀಷನರ್, ಹೇಮಂತ್ ಕುಮಾರ್ ಸಂಘಗಳನ್ನು ಒಡೆಯೋ ಕೆಲಸ ಮಾಡುತ್ತಾರೆ. ಹೇಮಂತ್ ಕುಮಾರ್ ವರ್ಗಾವಣೆಗೆ ಕಮಿಷನರ್‌ಗೆ ಮನವಿ ಮಾಡಿದ್ದೇವೆ. ಸಿಎಂ ಸಭೆಗೆ 32 ಸಂಘಟನೆಗಳು ಬಹಿಷ್ಕರಿಸಿದ್ದೇವೆ. ಸಿಎಂ ಸಭೆಯನ್ನು ತುಚ್ಚವಾಗಿ ನೋಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇನ್ನೂ 10 ದಿನ ಕಾಲಾವಕಾಶವಿದ್ದು ಅಷ್ಟರೊಳಗೆ ಮತ್ತೆ ಎಲ್ಲಾ ಸಂಘಟನೆಗಳು ಸೇರಿ ಸಭೆ ಕರೆಯಬೇಕು. ಇಲ್ಲದಿದ್ದರೆ ಹೋರಾಟದ ದಾರಿ ಹಿಡಿಯುತ್ತೇವೆ. ಸೆಪ್ಟೆಂಬರ್ 1 ರಂದು ಬೆಂಗಳೂರು ಅಥವಾ ಕರ್ನಾಟಕ ಬಂದ್ ದಿನಾಂಕ ಪ್ರಕಟಿಸುತ್ತೇವೆ ಎಂದರು.

    ಸೋಮವಾರದ ಸಿಎಂ ಸಭೆಯಲ್ಲಿ ಭಾಗವಹಿಸಿದ ಆದರ್ಶ್ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘದ ಸಭೆಯಲ್ಲಿ ಭಾಗಿಯಾದ ಮಂಜುನಾಥ್ ಮಾತನಾಡಿ, ಆಟೋ ಅಸೋಸಿಯೇಷನ್‌ನ ಬೇಡಿಕೆಗೆ ಮನವಿ ಮಾಡಿದ್ದೇವೆ. 30 ರವರೆಗೆ ಗಡವು ನೀಡಲಾಗಿದೆ. ಬೇಡಿಕೆ ಈಡೇರದೇ ಇದ್ದರೆ ಮತ್ತೆ ಹೋರಾಟ ಮಾಡುವ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಇನ್ಮುಂದೆ ಲಗೇಜ್‌ಗಳನ್ನು ಸಾಗಿಸಲು ರಸ್ತೆಗಿಳಿಯಲಿದೆ KSRTC ಲಾರಿ

    ಒಟ್ಟಿನಲ್ಲಿ ಸಿಎಂ ಆಶ್ವಾಸನೆಗೆ ಕೆಲ ಒಕ್ಕೂಟಗಳು ಸಮ್ಮತ ವ್ಯಕ್ತಪಡಿಸಿದರೆ ಇನ್ನೂ ಕೆಲವು ಸಂಘಟನೆಗಳು ವಿರೋಧಿಸಿವೆ. ಯಾವಾಗ ಈ ಭರವಸೆಗಳು ಕಾರ್ಯರೂಪಕ್ಕೆ ಬರುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ. ಇಲ್ಲದಿದ್ದರೆ ಸಾರಿಗೆ ಒಕ್ಕೂಟಗಳು ಮತ್ತೆ ಹೋರಾಟದ ಹಾದಿ ತುಳಿಯುವುದು ಪಕ್ಕ. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ಓಡಾಡುವವರೇ ಎಚ್ಚರ – ಇಂದು ಕಾವೇರಿಗಾಗಿ ರೈತರಿಂದ ಬೃಹತ್ ಪ್ರತಿಭಟನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೂನ್ 5 ರಿಂದ ಕನ್ನಡ ಸಿನಿಮಾಗಳ ಶೂಟಿಂಗ್ ಬಂದ್

    ಜೂನ್ 5 ರಿಂದ ಕನ್ನಡ ಸಿನಿಮಾಗಳ ಶೂಟಿಂಗ್ ಬಂದ್

    ಸ್ಯಾಂಡಲ್ ವುಡ್ (Sandalwood) ಅಂಗಳದಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ಜೂನ್ 5 ರಿಂದ ಸ್ಯಾಂಡಲ್ ವುಡ್ ಶಟ್ ಡೌನ್ (Shut down) ಆಗಲಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹೊರಾಂಗಣ ಚಿತ್ರೀಕರಣ ಕಾರ್ಮಿಕರ ಸಂಘವು ಒತ್ತಾಯಿಸಿದ್ದು, ಈ ಬೇಡಿಕೆಗಳಿಗಾಗಿಯೇ ಚಿತ್ರೀಕರಣಕ್ಕೆ ಬ್ರೇಕ್ ಹಾಕುವುದಾಗಿ ಸಂಘದ ಅಧ್ಯಕ್ಷ ಎ.ಹೆಚ್. ಭಟ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

    ಸಂಬಳ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘವು ಚಿತ್ರೋದ್ಯಮದ ಮುಂದೆ ಇಟ್ಟಿದೆ. ಆ ಬೇಡಿಕೆ ಈಡೇರುವವರೆಗೂ ಚಿತ್ರೀಕರಣದಲ್ಲಿ ಭಾಗಿಯಾಗದಂತೆ ನಿರ್ಧರಿಸಲಾಗಿದೆ. ಕಳೆದ ಮೂರು ವರ್ಷಗಳಿಂದಲೂ ಈ ಬೇಡಿಕೆಗಳನ್ನು ಇಡುತ್ತಾ ಬಂದಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಬಂದ್ ಮಾಡುವಂತಹ ನಿರ್ಧಾರವನ್ನು ಸಂಘ ತಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘ ಆಗ್ರಹಿಸಿದೆ. ಒಂದು ವೇಳೆ ತಮ್ಮ ಬೇಡಿಕೆಯನ್ನು ಈಡೇರಿಸದೇ ಹೋದರೆ ಜೂನ್ 5 ರಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳದಂತೆ ತನ್ನ ಸದಸ್ಯರಿಗೆ ಸಂಘ ಸೂಚಿಸಿದೆ. ನಿರ್ಮಾಪಕರಿಂದ ತಮಗೆ ಅನೇಕ ರೀತಿಯಲ್ಲಿ ಮೋಸವಾಗುತ್ತಿದೆ ಎಂದು ಸಂಘವು ಆರೋಪಿಸಿದೆ.

  • ಕೇತುಗ್ರಸ್ಥ ಸೂರ್ಯಗ್ರಹಣ – ಘಾಟಿಸುಬ್ರಮಣ್ಯ ದೇವಾಲಯ, ಶ್ರೀ ಭೋಗನಂದೀಶ್ವರನ ಆಲಯ ಬಂದ್

    ಕೇತುಗ್ರಸ್ಥ ಸೂರ್ಯಗ್ರಹಣ – ಘಾಟಿಸುಬ್ರಮಣ್ಯ ದೇವಾಲಯ, ಶ್ರೀ ಭೋಗನಂದೀಶ್ವರನ ಆಲಯ ಬಂದ್

    ಚಿಕ್ಕಬಳ್ಳಾಪುರ: ಇಂದು ಕೇತು ಗ್ರಸ್ತ ಸೂರ್ಯಗ್ರಹಣ (Solar eclipse) ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಶ್ರೀ ಕ್ಷೇತ್ರ ಘಾಟಿಸುಬ್ರಮಣ್ಯಸ್ವಾಮಿ (Ghati Subramanya) ದೇವಾಲಯ ಹಾಗೂ ನಂದಿಬೆಟ್ಟದ ತಪ್ಪಲಿನ ಶ್ರೀ ಭೋಗನಂದೀಶ್ವರ (Bhoga Nandishwara Gudi) ದೇವಾಲಯವನ್ನು ಬಂದ್ ಮಾಡಲಾಗುತ್ತಿದೆ.

    ಈ ಕುರಿತಂತೆ ಘಾಟಿಸುಬ್ರಮಣ್ಯಸ್ವಾಮಿ ದೇವಾಲಯ ಕಾರ್ಯ ನಿರ್ವಾಹಕಾಧಿಕಾರಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದು, ಕೇತು ಗ್ರಸ್ತ ಸೂರ್ಯಗ್ರಹಣ ಹಿನ್ನೆಲೆ ಶ್ರೀ ಘಾಟಿಸುಬ್ರಮಣ್ಯಸ್ವಾಮಿ ದರ್ಶನಕ್ಕೆ ಬೆಳಗ್ಗೆ 10:30ರವರೆಗೆ ಮಾತ್ರ ಅವಕಾಶವಿದೆ. ತದನಂತರ ದೇವಾಲಯದ ಬಾಗಿಲು ಮುಚ್ಚಲಾಗುತ್ತಿದೆ. ಗ್ರಹಣದ ನಂತರ ರಾತ್ರಿ 7:45ಕ್ಕೆ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರಲಿದೆ. ಇಂದು ಬೆಳಗ್ಗೆ 6:30 ರಿಂದಲೇ ದೇವರಿಗೆ ಅಭಿಷೇಕ ವಿಶೇಷ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿದ್ದು, 08:00ಕ್ಕೆ ಮಹಾಮಂಗಳಾರತಿ ನೆರವೇರಿಸಲಾಗುವುದು. ಇನ್ನೂ ದೀಪಾವಳಿ ಹಬ್ಬ ಸೂರ್ಯ ಗ್ರಹಣದ ನಿಮಿತ್ತ ಬೆಳಗ್ಗೆಯೇ ದೇವಾಲಯಕ್ಕೆ ಭಕ್ತರ ದಂಡು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಮತ್ತೆ ಉದ್ವಿಗ್ನ – ಹರ್ಷನ ಮನೆ ಮುಂದೆ ಲಾಂಗು, ಮಚ್ಚು ಹಿಡಿದು ಓಡಾಟ

    ಮತ್ತೊಂದೆಡೆ 27 ವರ್ಷಗಳ ನಂತರ ದೀಪಾವಳಿಯಂದು ಕೇತುಗ್ರಸ್ಥ ಸೂರ್ಯಗ್ರಹಣ ಸಂಭವಿಸುತ್ತಿರುವುದರಿಂದ ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದ ತಪ್ಪಲಿನ ಶ್ರೀ ಭೋಗನಂದೀಶ್ವರ ದೇವಾಲಯದ ಬಾಗಿಲು ಬಂದ್ ಮಾಡಲಾಗುತ್ತಿದೆ. ಜೊತೆಗೆ ನಂದಿಗಿರಿಧಾಮದ ಮೇಲಿನ ಶ್ರೀ ಯೋಗನಂದೀಶ್ವರನ ಆಲಯದ ಬಾಗಿಲನ್ನು ಸಹ ಮುಚ್ಚಲಾಗುತ್ತಿದೆ. ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದ್ದು, ತದನಂತರ ದೇವಾಲಯದ ಬಾಗಿಲು ಕ್ಲೋಸ್ ಮಾಡಲಾಗುತ್ತದೆ ಎಂದು ದೇವಾಲಯದ ಕಾರ್ಯನಿರ್ವಹಕಾಧಿಕಾರಿ ನಾಗರಾಜ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಇನ್ನೂ ಗ್ರಹಣ ಮುಗಿದ ನಂತರವೂ ಇಂದು ದೇವಾಲಯದ ಬಾಗಿಲು ತೆರಯುವುದಿಲ್ಲ. ಬದಲಾಗಿ ನಾಳೆ ಎಂದಿನಂತೆ ಬೆಳಗ್ಗೆ 7 ಗಂಟೆ ನಂತರ ತೆರೆಯಲಾಗುವುದು. ಇದನ್ನೂ ಓದಿ: ದುಷ್ಕರ್ಮಿಗಳಿಂದ ಭಯ ಹುಟ್ಟಿಸೋ ಪ್ರಕರಣ- ನಮಗೆ ಸೂಕ್ತ ರಕ್ಷಣೆ ಬೇಕು: ಹರ್ಷ ಸಹೋದರಿ

    Live Tv
    [brid partner=56869869 player=32851 video=960834 autoplay=true]

  • ಕೇತುಗ್ರಸ್ಥ ಸೂರ್ಯ ಗ್ರಹಣ – ಅ. 25ರಂದು ಶ್ರೀ ಕ್ಷೇತ್ರ ಘಾಟಿ ದೇವಾಲಯ ಬಂದ್

    ಕೇತುಗ್ರಸ್ಥ ಸೂರ್ಯ ಗ್ರಹಣ – ಅ. 25ರಂದು ಶ್ರೀ ಕ್ಷೇತ್ರ ಘಾಟಿ ದೇವಾಲಯ ಬಂದ್

    ಚಿಕ್ಕಬಳ್ಳಾಪುರ: ಅಕ್ಟೋಬರ್ 25ರ ಮಂಗಳವಾರ ಸಂಭವಿಸುವ ಕೇತು ಗ್ರಸ್ತ ಸೂರ್ಯಗ್ರಹಣ (Solar Eclipse) ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಶ್ರೀ ಕ್ಷೇತ್ರ ಘಾಟಿಸುಬ್ರಮಣ್ಯಸ್ವಾಮಿ ದೇವಾಲಯವನ್ನು (GhatiSubramanyaswamy Temple) ಬಂದ್ (Bandh) ಮಾಡಲಾಗುತ್ತಿದೆ.

    ಈ ಕುರಿತಂತೆ ದೇವಾಲಯ ಕಾರ್ಯ ನಿರ್ವಾಹಕಾಧಿಕಾರಿ ಪ್ರಕಟಣೆ ನೀಡಿದ್ದು, ಅಕ್ಟೋಬರ್ 25ರ ಮಂಗಳವಾರ ಸಂಭವಿಸುವ ಕೇತು ಗ್ರಸ್ತ ಸೂರ್ಯಗ್ರಹಣ ಹಿನ್ನಲೆ ಶ್ರೀ ಘಾಟಿಸುಬ್ರಮಣ್ಯಸ್ವಾಮಿ ದರ್ಶನಕ್ಕೆ ಬೆಳಗ್ಗೆ 10:30 ರವರೆಗೆ ಮಾತ್ರ ಅವಕಾಶ ನೀಡಲಾಗಿದ್ದು, ತದನಂತರ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಇದನ್ನೂ ಓದಿ: ಬಾರ್ ಗಲಾಟೆಯಲ್ಲಿ ಪ್ರಭಾವಿ ವ್ಯಕ್ತಿಯ ಮಗನಿಂದ ಹಲ್ಲೆಗೊಳಗಾದ ಯುವಕ ಸಾವು

    ಗ್ರಹಣದ ನಂತರ ರಾತ್ರಿ 7.45ಕ್ಕೆ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ. ಅಂದು ಬೆಳಗ್ಗೆ 6:30ಕ್ಕೆ ಅಭಿಷೇಕ ಪ್ರಾರಂಭವಾಗುತ್ತದೆ ಹಾಗೂ ಮಹಾಮಂಗಳಾರತಿಯನ್ನು ಬೆಳಗ್ಗೆ 08:00 ಕ್ಕೆ ನೆರವೇರಿಸಲಾಗುತ್ತದೆ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ – ಬಳ್ಳಾರಿಯಲ್ಲಿ ರಾಹುಲ್ ಮತದಾನ

    Live Tv
    [brid partner=56869869 player=32851 video=960834 autoplay=true]

  • ತೆಲುಗಿನಲ್ಲಿ ಶೂಟಿಂಗ್ ಬಂದ್: ಸಿನಿಮಾ ರಂಗದ ಬಿಕ್ಕಟ್ಟಿಗೆ ನಿರ್ದೇಶಕ ರಾಜಮೌಳಿ ಕಾರಣ?

    ತೆಲುಗಿನಲ್ಲಿ ಶೂಟಿಂಗ್ ಬಂದ್: ಸಿನಿಮಾ ರಂಗದ ಬಿಕ್ಕಟ್ಟಿಗೆ ನಿರ್ದೇಶಕ ರಾಜಮೌಳಿ ಕಾರಣ?

    ಗಸ್ಟ್ 1 ರಿಂದ ತೆಲುಗು ಸಿನಿಮಾ ರಂಗ ಶೂಟಿಂಗ್ ನಿಲ್ಲಿಸಿದೆ. ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕ ಚಟುವಟಿಕೆಗಳನ್ನು ಅದು ಸ್ಥಗಿತಗೊಳಿಸಿದೆ. ಸಿನಿಮಾಗಳ ಬಜೆಟ್, ಹೆಚ್ಚಿದ ಚಿತ್ರೀಕರಣದ  ವೆಚ್ಚ ಮತ್ತು ಸ್ಟಾರ್ ನಟರ ಸಂಭಾವನೆ ಏರಿಕೆಯಾದ ಹಿನ್ನೆಲೆಯಲ್ಲಿ ನಿರ್ಮಾಪಕರಿಗೆ ಹೊರೆ ಆಗುತ್ತಿದ್ದು, ಈ ಕುರಿತು ಸಕಾರಾತ್ಮಕವಾಗಿ ಚರ್ಚೆ ಆಗುವತನಕ ಚಿತ್ರೀಕರಣ ನಿಲ್ಲಿಸುವುದಾಗಿ ಅಲ್ಲಿನ ನಿರ್ಮಾಪಕರು ಹೇಳಿಕೊಂಡಿದ್ದರು. ಅದರಂತೆ ಆಗಸ್ಟ್ 1 ರಿಂದಲೇ ನಿಲ್ಲಿಸಿದ್ದಾರೆ.

    ಈ ನಡೆಯ ಕುರಿತಂತೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದು ತೆಲುಗು ಸಿನಿಮಾ ರಂಗದ ಈ ಬಿಕ್ಕಟ್ಟಿಗೆ ನಿರ್ದೇಶಕ ರಾಜಮೌಳಿ ಕಾರಣ ಎಂದಿದ್ದಾರೆ. ರಾಜಮೌಳಿ ಅವರು ಸಿನಿಮಾದಿಂದ ಸಿನಿಮಾಗೆ ಬಜೆಟ್, ಸಂಭಾವನೆ, ಅತ್ಯಧಿಕ ಖರ್ಚು ಅನ್ನು ಏರಿಸುತ್ತಲೇ ಹೋಗಿದ್ದಾರೆ. ಅದೇ ಹಾದಿಯನ್ನೇ ಕೆಲವರು ತುಳಿಯುತ್ತಿದ್ದಾರೆ. ಹೀಗಾಗಿ ಇಂಥದ್ದೊಂದು ಬಿಕ್ಕಟ್ಟು ಸೃಷ್ಟಿಯಾಗಿದೆ ಎನ್ನುತ್ತಾರೆ ರಾಮ್ ಗೋಪಾಲ್ ವರ್ಮಾ. ಇದನ್ನೂ ಓದಿ:ಶ್ರದ್ಧಾ ಹೆಸರಿನ ಮುಂದಿರುವ ಈ ರಮಾ ಯಾರು?

    ಈ ಬಿಕ್ಕಟ್ಟಿನ ಕುರಿತು ಕನ್ನಡದ ಯುವ ಸಿನಿಮಾ ನಿರ್ದೇಶಕ ವೀರು ಮಲ್ಲಣ್ಣ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದು ಹೀಗೆ, ಅತಿ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆಗಳ ಚಿತ್ರಗಳನ್ನು ನೀಡಿ, ಭಾರತೀಯ ಚಿತ್ರರಂಗವನ್ನೇ ಆಳುವಷ್ಟು ಬಲಿಷ್ಠವಾಗಿದೆ ಎನ್ನಲಾದ ತೆಲುಗು ಚಿತ್ರರಂಗ ಎರಡು ದಿನಗಳಿಂದ ಶೂಟಿಂಗ್ ನಿಲ್ಲಿಸಿ ಬಂದ್ ಆಗಿದೆ. ದೊಡ್ಡ ಲಾಭ ಮಾಡಿದ ನಾಲ್ಕೈದು ಸಿನಿಮಾಗಳು ಕಣ್ಣಿಗೆ ಕಾಣಿಸಬಹುದು, ಸಾಲು ಸಾಲಾಗಿ ಸೋತ ಸಿನಿಮಾಗಳ ನಷ್ಟ ಆ ಚಿತ್ರರಂಗಕ್ಕೆ ನುಂಗಲಾರದ ತುತ್ತಾಗಿದೆ. ದೊಡ್ಡ ನಟರ ಸಿನಿಮಾಗಳೇ ಅತಿ ದೊಡ್ಡ ನಷ್ಟಕ್ಕೂ ಕಾರಣವಾಗಿದೆ. ಥಿಯೇಟರಿನಲ್ಲಿ ಟಿಕೇಟ್ ದರ ಎಷ್ಟೇ ಏರಿಸಿದರೂ ಲಾಭ ಕಂಡುಕೊಳ್ಳಲಾಗದಷ್ಟು ಸಿನಿಮಾ ಬಡ್ಜೆಟ್ಟುಗಳು ಕೈ ಮೀರುತ್ತಿರುವುದೇ ಕಾರಣ ಅನ್ನುವುದು ಹಿರಿಯ ಅನುಭವಿ ನಿರ್ಮಾಪಕರು ಮತ್ತು ಹಿರಿಯ ನಟರ ಸ್ಪಷ್ಟನೆ.

    ಓಟಿಟಿಯನ್ನು ದೂಷಿಸುವುದು ಪಲಾಯನ ವಾದವಷ್ಟೇ. ದುಬಾರಿ ಟಿಕೇಟುಗಳು, ಕಂಟೆಂಟ್ ಕೊರತೆ, ಸ್ಟಾರ್ ನಟರು ಹಾಗೂ ದೊಡ್ಡ ಸಿನಿಮಾಗಳ ನಿರ್ಮಾಪಕ ಹಾಗೂ ನಿರ್ದೇಶಕರ greed, ಬೇಜವಾಬ್ದಾರಿತನ ಹಾಗೂ ಪ್ರತಿಷ್ಠೆಯ ಪೈಪೋಟಿಯಿಂದಾಗಿ ಮಾರುಕಟ್ಟೆ ಇರುವುದಕ್ಕಿಂತ ಹೆಚ್ಚು ಖರ್ಚಿನಲ್ಲಿ ಸಿನಿಮಾ ಮಾಡುತ್ತಿರುವುದರ ಕುರಿತು ಮಾತನಾಡುತ್ತಿದ್ದಾರೆ. ಹಿರಿಯ ನಟ NTR, ಅಕ್ಕಿನೇನಿ ನಾಗೇಶ್ವರ ರಾವ್, ಶೋಬನ್ ಬಾಬು, ಕೃಷ್ಣಂ ರಾಜು, ಚಿರಂಜೀವಿ, ಬಾಲಕೃಷ್ಣರ ಕಾಲದಲ್ಲಿ ನಟರು ಪ್ರತಿ ದಿನ 8-10 ಗಂಟೆಗಳ ಕಾಲ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅವರ ಸಂಭಾವನೆಯೂ ಸಿನಿಮಾದಿಂದ ಸಿನಿಮಾಗೆ ಏರುತ್ತಿರಲಿಲ್ಲ. ಆದರೆ ಸಿನಿಮಾದಿಂದ ಸಿನಿಮಾಗೆ ಏರುತ್ತಿರುವ ಇಂದಿನ ನಟರ ಸಂಭಾವನೆಯ ಜೊತೆಗೆ ‘ಅವರ ಇತರೆ ಖರ್ಚುಗಳನ್ನೂ’ ನಿರ್ಮಾಪಕನೇ ಭರಿಸಬೇಕಾಗಿರುವ ಕಾರಣದಿಂದ ಸಿನಿಮಾದ ಬಡ್ಜೆಟ್ ಹೆಚ್ಚಾಗುತ್ತಿದೆ. ಇಂದಿನ ನಟರು 4-5 ಗಂಟೆ ಚಿತ್ರೀಕರಣದಲ್ಲಿ ಭಾಗಿಯಾಗುತ್ತಾರೆ. ಚಿತ್ರೀಕರಣಕ್ಕೆ ಹೆಚ್ಚೆಚ್ಚು ದಿನಗಳನ್ನು ತೆಗೆದುಕೊಳ್ಳಲಾಗುತ್ತಿದೆ, ಹಾಗಾಗಿ ಅನವಶ್ಯಕ ಖರ್ಚುಗಳೂ ಹೆಚ್ಚಾಗಿದೆ. ಇಂದಿನ ನಿರ್ಮಾಪಕರೂ ಮಾರುಕಟ್ಟೆಯಲ್ಲಿ ಓಡುವ ನಟರಿಗೆ ಅಗತ್ಯಕ್ಕಿಂತ ಹೆಚ್ಚೇ ಸಂಭಾವನೆ ಮತ್ತು ಸೌಕರ್ಯಗಳನ್ನು ಕೊಡುವ ಸಂಪ್ರದಾಯ ಪಾಲಿಸಿಕೊಂಡಿದ್ದಾರೆ.

    ಶಿಸ್ತಿಲ್ಲದೆ ಖರ್ಚು ಮಾಡಿ ಸಿನಿಮಾ ಬಡ್ಜೆಟ್ ಜಾಸ್ತಿ ಮಾಡಿ, ಅಬ್ಬರದ ಪ್ರಚಾರ ಮಾಡಿ, ಟಿಕೇಟ್ ದರ ಏರಿಸಿದರೆ “ಆ ಸ್ಟಾರ್ ನಟರ ವೀರಾಭಿಮಾನಿಗಳಷ್ಟೇ ಥಿಯೇಟರಿಗೆ ಬರುತ್ತಾರೆ. ಉಳಿದ ಪ್ರೇಕ್ಷಕರು ಸಿನಿಮಾದಿಂದ ವಿಮುಖರಾಗ್ತಾರೆ..” ಎನ್ನುವ ಹಿರಿಯ ನಿರ್ಮಾಪಕರು, ಈ ವರ್ಷದಲ್ಲಿಯೇ ಬಿಡುಗಡೆಯಾದ, ಕಡಿಮೆ ಬಡ್ಜೆಟ್ ನಲ್ಲಿ ಮಾಡಿದ, ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಗೆದ್ದ ಉತ್ತಮ ಚಿತ್ರಗಳನ್ನು ಹೆಸರಿಸುತ್ತಾರೆ..‌ ಆ ಸಿನಿಮಾಗಳು ಗೆಲ್ಲಲು ಕಾರಣ ಟಿಕೇಟ್ ದರ ಕಡಿಮೆ ಇದ್ದು, ಕಂಟೆಂಟ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿರುವ ಕಾರಣಕ್ಕೆ. ಪ್ರಾದೇಶಿಕತೆಗೆ ಒತ್ತು ಕೊಟ್ಟು ಸಿನಿಮಾ ಮಾಡಿದರೂ ಇಂದು ಎಲ್ಲ ಜನರಿಗೆ ಸಿನಿಮಾ ತಲುಪುತ್ತದೆ.  ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಹೆಸರಿನಲ್ಲಿ ನೂರಾರು ಕೋಟಿಗಳನ್ನು ಸುರಿಯುವುದು ತಪ್ಪು ಅಂತಲೇ ಅಲ್ಲಿನ ಕೆಲ ಹಿರಿಯ ನಿರ್ಮಾಪಕರ ಅಭಿಪ್ರಾಯವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಟಾರ್ ನಟರ ಸಂಭಾವನೆ ಇಳಿಕೆ ಸೇರಿದಂತೆ ನಾನಾ ಬದಲಾವಣೆಗಾಗಿ ತೆಲುಗು ಚಿತ್ರೋದ್ಯಮ ಬಂದ್

    ಸ್ಟಾರ್ ನಟರ ಸಂಭಾವನೆ ಇಳಿಕೆ ಸೇರಿದಂತೆ ನಾನಾ ಬದಲಾವಣೆಗಾಗಿ ತೆಲುಗು ಚಿತ್ರೋದ್ಯಮ ಬಂದ್

    ಗಸ್ಟ್ 1 ರಿಂದ ತೆಲುಗು ಸಿನಿಮಾ ರಂಗವನ್ನು ಬಂದ್ ಮಾಡುವುದಾಗಿ ಎಟಿಎಫ್ಪಿಜಿ (ಆಕ್ಟಿವ್ ತೆಲುಗು ಫಿಲ್ಮ್ ಪ್ರೊಡ್ಯುಸರ್ಸ್ ಗಿಲ್ಡ್) ತಿಳಿಸಿದೆ. ಕೊರೊನಾ ನಂತರದಲ್ಲಿ ತೆಲುಗು ಚಿತ್ರೋದ್ಯಮ ಭಾರೀ ನಷ್ಟವನ್ನು ಅನುಭವಿಸುತ್ತಿದೆಯಂತೆ. ಈಗಾಗಲೇ ಹಲವಾರು ಚಿತ್ರಮಂದಿರಗಳು ಮುಚ್ಚಿದ್ದು, ಮತ್ತಷ್ಟು ಚಿತ್ರಮಂದಿರಗಳು ಮುಚ್ಚುವ ಹಂತದಲ್ಲಿವೆ. ಜೊತೆಗೆ ನಾನಾ ಸಮಸ್ಯೆಗಳಿಂದಾಗಿ ಸಿನಿಮಾಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಇಂತಹ ಅನೇಕ ಕಾರಣಗಳಿಂದಾಗಿ ಚಿತ್ರೋದ್ಯಮ ಬಂದ್ ಮಾಡಲು ನಿರ್ಧರಿಸಲಾಗಿದೆ.

    ಕೊರೋನಾ ನಂತರ ಸಿನಿಮಾ ಟಿಕೆಟ್ ದರದ ನಿಯಂತ್ರಣ, ಸ್ಟಾರ್ ನಟರ ಸಂಭಾವನೆ, ಮಿತಿಮೀರಿದ ಖರ್ಚು ಹಾಗೂ ಸರಕಾರದ ಕೆಲ ನಡೆಗಳಿಂದಾಗಿ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರಂತೆ. ಅಲ್ಲದೇ, ತೆಲುಗಿನ ಕೆಲ ಸ್ಟಾರ್ ನಟರು ಸಂಭಾವನೆಯನ್ನು ಹೆಚ್ಚಿಸಿಕೊಂಡು ನಿರ್ಮಾಪಕರಿಗೆ ಹೊರೆಯಾಗಿದ್ದಾರಂತೆ. ಇವೆಲ್ಲವೂ ಸರಿ ಹೋಗುವತನಕ ಸಿನಿಮಾ ಶೂಟಿಂಗ್ ನಡೆಸಬಾರದು ಎಂದು ನಿರ್ಮಾಪಕರಿಗೆ ತಿಳಿಸಲಾಗಿದೆ. ಹೊಸ ಸಿನಿಮಾ ಶುರು ಮಾಡಬಾರದು ಎಂದೂ ತಿಳಿಸಲಾಗಿದೆ. ಇದನ್ನೂ ಓದಿ:ರಾಕೇಶ್ ಬಾಪಟ್ ಜೊತೆ ಬ್ರೇಕಪ್ ಮಾಡಿಕೊಂಡ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ

    ಮೊದ ಮೊದಲು ಸರಕಾರ ಮತ್ತು ಸಿನಿಮಾ ರಂಗದ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಟಿಕೆಟ್ ದರದ ವಿಚಾರದಲ್ಲಂತೂ ಸರಕಾರ ಮತ್ತು ನಿರ್ಮಾಪಕರ ನಡುವೆ ಹಲವು ಸಭೆಗಳು ನಡೆದರೂ, ಅದನ್ನು ಸರಿ ಮಾಡಲು ಆಗದೇ ಇರುವಂತಹ ವಾತಾವರಣ ಅಲ್ಲಿ ಸೃಷ್ಟಿಯಾಗಿತ್ತು. ಇದರಿಂದ ಬೇಸತ್ತ ಹಲವು ನಿರ್ಮಾಪಕರು ಸಿನಿಮಾ ಮಾಡುವುದನ್ನೆ ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಬಜೆಟ್ ಕೂಡ ಹಿಗ್ಗುತ್ತಿರುವುದರಿಂದ ಬಂದ್ ಮಾಡುವುದು ಅನಿವಾರ್ಯ ಎಂದು ನಿರ್ಮಾಪಕರ ಗಿಲ್ಡ್ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಈದ್ಗಾ ಮೈದಾನ ವಿವಾದ – ಚಾಮರಾಜಪೇಟೆ ಬಂದ್ ಯಶಸ್ವಿ

    ಈದ್ಗಾ ಮೈದಾನ ವಿವಾದ – ಚಾಮರಾಜಪೇಟೆ ಬಂದ್ ಯಶಸ್ವಿ

    ಬೆಂಗಳೂರು: ಚಾಮರಾಜಪೇಟೆ 2.5 ಎಕರೆ ಜಾಗದ ಈದ್ಗಾ ಮೈದಾನವನ್ನು ಬಿಬಿಎಂಪಿ ಆಸ್ತಿ, ಆಟದ ಮೈದಾನ ಎಂದು ಘೋಷಿಸಲೇಬೇಕೆಂದು ನಾಗರಿಕ ಒಕ್ಕೂಟ ಸೇರಿದಂತೆ 50 ಸಂಘಟನೆಗಳು ಇಂದು ಬಂದ್‌ಗೆ ಕರೆ ನೀಡಿದ್ದು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಬಂದ್‌ಗೆ ಬೆಂಬಲ ನೀಡಿದ್ದಾರೆ. ಎರಡು ಕಡೆಯ ಹಗ್ಗ ಜಗ್ಗಾಟದ ನಡುವೆ ಬಹುತೇಕ ಶಾಂತಿಯುತ ಬಂದ್‌ಗೆ ಖಾಕಿ ಸರ್ಪಗಾವಲು ಸಾಕ್ಷಿಯಾಗಿದ್ದು, ಬಂದ್ ಯಶಸ್ವಿಯಾಗಿದೆ.

    ಬಂದ್ ಹಿನ್ನೆಲೆ ಚಾಮರಾಜಪೇಟೆ ಸ್ತಬ್ಧವಾಗಿತ್ತು. ಬೀಗ ಜಡಿದ ಅಂಗಡಿ ಮುಗ್ಗಟ್ಟು, ಬೀದಿ ಬದಿ ವ್ಯಾಪಾರಕ್ಕೂ ಬ್ರೇಕ್, ಕಾಫಿ ಕುಡಿಯೊಕೆ ಒಂದು ಹೋಟೆಲ್ ಕೂಡಾ ತೆಗೆದಿರಲಿಲ್ಲ. ಬಹುತೇಕ ಚಾಮರಾಜಪೇಟೆಯ ವಾಣಿಜ್ಯ ಚಟುವಟಿಕೆ ಶೇ.90 ರಷ್ಟು ಸಂಪೂರ್ಣ ಬಂದ್ ಆಗಿತ್ತು.

    ಹಾಲು, ಮೆಡಿಕಲ್ ಸೌಲಭ್ಯ ಹೊರತು ಪಡಿಸಿ ಎಲ್ಲಾ ಚಟುವಟಿಕೆ 7 ವಾರ್ಡ್‌ನಲ್ಲೂ ಪೂರ್ಣ ಸ್ತಬ್ಧವಾಗಿತ್ತು. ಹೋರಾಟದ ಮಧ್ಯೆ ರಾಜಕೀಯ ರಂಗಿನ ಕರಿನೆರಳು ಕಾಣಿಸಿತು. ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಕಚೇರಿ ಪಕ್ಕ ಹಣ್ಣಿನ ಜ್ಯೂಸ್ ಅಂಗಡಿ ಓಪನ್ ಮಾಡಿಸಿ, ಜ್ಯೂಸ್ ವ್ಯಾಪಾರಕ್ಕೆ ಬೆಂಬಲಿಗರು ಮುಂದಾಗಿದ್ದರು. ಈ ವೇಳೆ ಬಂದ್ ಪರ ವಿರೋಧ ಇದ್ದವರ ನಡುವೆ ವಾಗ್ವಾದ ನಡೆಯಿತು. ಇದನ್ನೂ ಓದಿ: RSS ನಿಮ್ಮ ಜೊತೆ ಇದೆ: ದಲಿತ, ಹಿಂದುಳಿದ ವರ್ಗಗಳ ಮಠಾಧೀಶರೊಂದಿಗೆ ಮೋಹನ್‌ ಭಾಗವತ್‌ ಸಂವಾದ

    ಮತ್ತೊಂದೆಡೆ ಶ್ರೀರಾಮ ಸೇನೆ, ನಾಗರಿಕ ಒಕ್ಕೂಟ, ಸ್ಥಳೀಯ ನಾಗರಿಕರು ಹಲವು ಬಾರಿ ಗ್ರೌಂಡ್ ಪ್ರವೇಶಿಸಿ ಜೈ ರಾಮ್, ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿ, ಹಿಂದೂ ಧಾರ್ಮಿಕ ಕಾರ್ಯಕ್ರಮ ಮಾಡಲು ಅವಕಾಶ ಕೊಡಿ ಎಂದು ಬೇಡಿಕೆ ಇಟ್ಟರು. ಇದೇ ವೇಳೆ ಪೊಲೀಸರು ಶಾಂತಿ ಕಾಪಾಡಲು ಹೋರಾಟಗಾರರನ್ನು ವಶಕ್ಕೆ ಪಡೆದರು.

    ಬಂದ್ ಬೆಂಬಲಿಸಿ ಟೆಂಪೋ, ಲಾರಿ, ಆಟೋ ಸ್ಟ್ಯಾಂಡ್‌ಗಳಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ಮಾಡದೇ ಸ್ತಬ್ಧವಾಗಿತ್ತು. ಇತ್ತ ಸ್ಥಳೀಯ ಶಾಸಕರು ಕ್ಷೇತ್ರದತ್ತ ಸುಳಿಯಲಿಲ್ಲ.

    ಚಾಮರಾಜಪೇಟೆ ಬಂದ್ ಕೇವಲ ಕ್ಷೇತ್ರಕ್ಕೆ ಸೀಮಿತವಾಗದೇ ರಾಜಕೀಯ ನಾಯಕರ ಚರ್ಚೆಗೂ ಕಾರಣವಾಯಿತು. ಕಾಂಗ್ರೆಸ್ ಸರ್ಕಾರ ಇದಕ್ಕೆಲ್ಲ ಅವಕಾಶ ಕೊಡಬಾರದು ಎಂದರೆ, ಗೃಹ ಸಚಿವರು ಶಾಂತಿಯುತ ಬಂದ್‌ಗೆ ಮಾತ್ರ ಅವಕಾಶ, ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತದೆ ಎಂದರು. ಇದನ್ನೂ ಓದಿ: 24 ದಿನಗಳಲ್ಲಿ 9ನೇ ಕೇಸ್ – ಮಂಗಳೂರಿನಿಂದ ದುಬೈಗೆ ತೆರಳಿದ್ದ ಸ್ಪೈಸ್‌ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷ

    ಚಾಮರಾಜಪೇಟೆ ಬಂದ್ ವಾದ-ವಿವಾದಗಳ ಮಧ್ಯೆ ಹತ್ತಾರು ವರ್ಷಗಳಿಂದ ಮಕ್ಕಳ ಆಟಕ್ಕೆ ಮೀಸಲಿದ್ದ ಮೈದಾನ ಎಂದಿನಂತೆ ಮಕ್ಕಳ ಆಟಕ್ಕೆ ಇಂದಿಗೂ ಸಾಕ್ಷಿಯಾಯಿತು. ಜನರಂತೂ ಬಂದ್ ಯಶಸ್ವಿ ಮೂಲಕ ತಮ್ಮ ಬೆಂಬಲ ಆಟದ ಮೈದಾನಕ್ಕೆ ಎಂದಿದ್ದು, ಇನ್ನು ಸರ್ಕಾರ, ಬಿಬಿಎಂಪಿ ಕಾಲಹರಣ ಮಾಡದೇ ಈದ್ಗಾ ಮೈದಾನ ಸರ್ಕಾರಿ ಸ್ವತ್ತಾ ಎಂಬುದನ್ನು ಘೋಷಣೆ ಮಾಡುವುದಷ್ಟೇ ಬಾಕಿ ಉಳಿದಿದೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರ ಬಂದ್‍ಗೆ ಯಾಕೆ ಬೆಂಬಲ ಕೊಡಬೇಕು?: ಆರಗ

    ಸರ್ಕಾರ ಬಂದ್‍ಗೆ ಯಾಕೆ ಬೆಂಬಲ ಕೊಡಬೇಕು?: ಆರಗ

    ಬೆಂಗಳೂರು: ಸರ್ಕಾರ ಬಂದ್‍ಗೆ ಬೆಂಬಲ ಕೊಟ್ಟಿಲ್ಲ, ಯಾಕೆ ಕೊಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದರು.

    ಈದ್ಗಾ ಮೈದಾನ ವಿವಾದ ಜಟಾಪಟಿ ಈಗ ಬಂದ್‍ವರೆಗೆ ತಲುಪಿದೆ. ಈ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆ ವತಿಯಿಂದ ಪೊಲೀಸರು ಎಲ್ಲ ಬಂದೋಬಸ್ತ್ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಆದ್ರೆ ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಅಲ್ಲಿರೋರಲ್ಲಿಯೂ ವಿನಂತಿ ಮಾಡ್ತೀನಿ ಎಂದು ಕೇಳಿಕೊಂಡರು.

    ಸ್ಥಳಕ್ಕೆ ಭೇಟಿ ನೀಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ. ಪೊಲೀಸರು ಇದ್ದಾರೆ, ಎಲ್ಲ ರೀತಿಯ ಬಂದೋಬಸ್ತ್ ಮಾಡಿದ್ದಾರೆ. ಸರ್ಕಾರ ಬಂದ್‍ಗೆ ಬೆಂಬಲ ಕೊಟ್ಟಿಲ್ಲ, ಯಾಕೆ ಬೆಂಬಲ ಕೊಡಬೇಕು. ಜಾಗದ ಬಗ್ಗೆ ಬಿಬಿಎಂಪಿ ನಿರ್ಣಯ ಮಾಡುತ್ತೆ ಎಂದರು. ಇದನ್ನೂ ಓದಿ: ಈದ್ಗಾ ಮೈದಾನ ವಿವಾದ- ಅನುಮತಿ ಇಲ್ಲದ ಬಂದ್‍ಗಾಗಿ 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

    ಏನಿದು ಘಟನೆ?
    ಇಂದು ಚಾಮರಾಜಪೇಟೆ ನಾಗರಿಕ ಒಕ್ಕೂಟ, ಶ್ರೀರಾಮಸೇನೆ, ಹಿಂದೂ ಜನಜಾಗೃತಿ ಸೇರಿದಂತೆ ಅನೇಕ ಹಿಂದೂ ಸಂಘಟನೆ ಬಂದ್‍ಗೆ ಕರೆ ಕೊಟ್ಟಿದ್ದು, ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಚಾಮರಾಜಪೇಟೆ ಬಂದ್ ಆಗಲಿದೆ. ಈದ್ಗಾ ಆಟದ ಮೈದಾನವನ್ನು ವಕ್ಫ್‍ಗೆ ನೀಡಬಾರದು ಅದು ಬಿಬಿಎಂಪಿ ಸುಪರ್ದಿಯಲ್ಲಿಯೇ ಇದ್ದು ಆಟದ ಮೈದಾನವಾಗಿರಬೇಕು. ಈದ್ಗಾ ಹೆಸರನ್ನು ಬದಲಾಗಿ ಒಡೆಯರ್ ಹೆಸರನ್ನು ಇಡಬೇಕು. ಇದು ಒಡೆಯರ್ ಕೊಡುಗೆ ಅನ್ನೋದು ಸಂಘಟನೆಯವರ ಆಗ್ರಹ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಈದ್ಗಾ ಮೈದಾನ ವಿವಾದ- ಅನುಮತಿ ಇಲ್ಲದ ಬಂದ್‍ಗಾಗಿ 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

    ಈದ್ಗಾ ಮೈದಾನ ವಿವಾದ- ಅನುಮತಿ ಇಲ್ಲದ ಬಂದ್‍ಗಾಗಿ 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

    ಬೆಂಗಳೂರು: ಈದ್ಗಾ ಮೈದಾನಕ್ಕಾಗಿ ಹಿಂದೂಗಳ ಮತ್ತೊಂದು ಸುತ್ತಿನ ಹೋರಾಟ ಆರಂಭವಾಗಿದೆ. ಇಂದು ಚಾಮರಾಜಪೇಟೆ ನಾಗರಿಕ ಒಕ್ಕೂಟ, ಶ್ರೀರಾಮಸೇನೆ, ಹಿಂದೂ ಜನಜಾಗೃತಿ ಸೇರಿದಂತೆ ಅನೇಕ ಹಿಂದೂ ಸಂಘಟನೆ ಬಂದ್‍ಗೆ ಕರೆ ಕೊಟ್ಟಿವೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಚಾಮರಾಜಪೇಟೆ ಬಂದ್ ಆಗಲಿದೆ.

    ಈದ್ಗಾ ಆಟದ ಮೈದಾನವನ್ನು ವಕ್ಫ್‍ಗೆ ನೀಡಬಾರದು. ಮೈದಾನ ಬಿಬಿಎಂಪಿ ಸುಪರ್ದಿಯಲ್ಲಿಯೇ ಇದ್ದು ಆಟದ ಮೈದಾನವಾಗಿರಬೇಕು. ಮೈದಾನಕ್ಕೆ ಈದ್ಗಾ ಹೆಸರಿಗೆ ಬದಲಾಗಿ ಜಯಚಾಮರಾಜ ಒಡೆಯರ್ ಹೆಸರು ಇಡಬೇಕು ಎಂದು ಸಂಘಟನೆಗಳು ಒತ್ತಾಯಿಸ್ತಿವೆ. ಅಂಗಡಿ-ಮುಂಗಟ್ಟುಗಳು, ಬ್ಯಾಂಕ್, ಕಾಲೇಜು, ವಾಣಿಜ್ಯ ಕಟ್ಟಡಗಳಲ್ಲಿ ಭಿತ್ತಿ ಪತ್ರ ಹಂಚಿ ಬಂದ್‍ಗೆ ಬೆಂಬಲ ಕೊಡುವಂತೆ ಹೋರಾಟಗಾರರು ಮನವಿ ಮಾಡಿದ್ದಾರೆ. ಬಂದ್‍ಗೆ ವ್ಯಾಪಾರಿಗಳು ಬೆಂಬಲ ಘೋಷಿಸಿದ್ದಾರೆ. ಇನ್ನು ಬಂದ್‍ಗೆ ಕರೆಕೊಟ್ಟವರು ಸ್ಥಳೀಯರಲ್ಲ ಎಂಬ ಜಮೀರ್ ಹೇಳಿಕೆಗೆ ಲಹರಿ ವೇಲು ತಿರುಗೇಟು ನೀಡಿದ್ದಾರೆ.

    ಏನಿರಲ್ಲ..?: ಎಲ್ಲ ವಾರ್ಡ್‍ಗಳಲ್ಲಿಯೂ ಬಂದ್ ಬಿಸಿ ತಟ್ಟುವ ಸಾಧ್ಯತೆ ಇದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳು ಬಂದ್ ಸಾಧ್ಯತೆಗಳಿವೆ. ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತ, ಚಾಮರಾಜಪೇಟೆಯ ಪ್ರಮುಖ ಮಂಡಿ ಕ್ಲೋಸ್ ಸಾಧ್ಯತೆಗಳು ಹೆಚ್ಚಾಗಿವೆ. ಹೋಟೆಲ್‍ಗಳು ಇರೋದು ಬಹುತೇಕ ಅನುಮಾನವಾಗಿದೆ. ಈದ್ಗಾ ಸುತ್ತಮುತ್ತ ರಸ್ತೆಯಲ್ಲಿ ಬಹುತೇಕ ಬಂದ್ ಬಿಸಿ ಹೆಚ್ಚಿರಲಿದೆ. ಖಾಸಗಿ ಕಚೇರಿಗಳು ಬಂದ್ ಆಗುವ ಸಾಧ್ಯತೆ ಇದೆ.

    ಏನಿರುತ್ತೆ..?: ಔಷಧಿ ಅಂಗಡಿಗಳು, ಆಸ್ಪತ್ರೆಗಳು, ಹಣ್ಣು-ತರಕಾರಿ, ಹಾಲು, ದಿನಸಿ ಅಂಗಡಿ, ಬ್ಯಾಂಕ್ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಶಾಲಾ-ಕಾಲೇಜು ತೆರೆದಿರುತ್ತವೆ, ಎಟಿಎಂ ಇರುತ್ತೆ ಹಾಗೂ ವಾಹನ ಸಂಚಾರ ಯಥಾಸ್ಥಿತಿ ಇರಲಿದೆ. ಇದನ್ನೂ ಓದಿ: ಇನ್ನು ವಾಟ್ಸಪ್ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇ ಎಮೋಜಿ ಬಳಸಬಹುದು

    ಈಗಾಗಲೇ ಪ್ರತಿಭಟನೆಗೆ ವರ್ತಕರ ಸಂಘಗಳು ಸಂಪೂರ್ಣ ಬೆಂಬಲ ಘೋಷಿಸಿದ್ದು ಚಾಮರಾಜಪೇಟೆಯಲ್ಲಿ ವಾಣಿಜ್ಯ ವಹಿವಾಟು ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ. ವ್ಯಾಪಾರ ಒಂದಿನ ಹೋದ್ರೂ ಪರವಾಗಿಲ್ಲ, ನಮಗೆ ಆಟದ ಮೈದಾನ ಮುಖ್ಯ ಎನ್ನುವ ನಿಲುವನ್ನು ವ್ಯಾಪಾರಿಗಳು ವ್ಯಕ್ತಪಡಿಸಿದ್ದು ಬಂದ್‍ಗೆ ಬೆಂಬಲ ನೀಡೋದಾಗಿ ಹೇಳಿದ್ದಾರೆ.

    ಇಂದಿನ ಬಂದ್‍ನ್ನು ಹಿಂದೂ ಸಂಘಟನೆಗಳಂತೂ ಪ್ರತಿಷ್ಠೆಯ ಅಖಾಡವಾಗಿಯೇ ಬದಲಾಯಿಸಿದೆ. ಶಾಸಕ ಜಮೀರ್‍ಗೆ ಠಕ್ಕರ್ ಕೊಡಲು ನಿರ್ಧಾರ ಮಾಡಿಬಿಟ್ಟಿವೆ. ಇನ್ನು ಬಂದ್ ಜೊತೆಗೆ ಇದೇ ಶುಕ್ರವಾರ ಬೃಹತ್ ಬೈಕ್ ರ್ಯಾಲಿಯ ಮೂಲಕ ಮಗದೊಂದು ಶಕ್ತಿಪ್ರದರ್ಶನಕ್ಕೆ ಸಂಘಟನೆಗಳು ನಿರ್ಧರಿಸಿದೆ.

    Live Tv
    [brid partner=56869869 player=32851 video=960834 autoplay=true]

  • ನಾಳೆ ಚಾಮರಾಜಪೇಟೆ ಬಂದ್- ಜಮೀರ್ ಕಚೇರಿಗೆ ತೆರಳಿ ಹಿಂದೂ ಸಂಘಟನೆ ಮನವಿ

    ನಾಳೆ ಚಾಮರಾಜಪೇಟೆ ಬಂದ್- ಜಮೀರ್ ಕಚೇರಿಗೆ ತೆರಳಿ ಹಿಂದೂ ಸಂಘಟನೆ ಮನವಿ

    ಬೆಂಗಳೂರು: ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿಂದತೆ ನಾಳೆ ಚಾಮರಾಜಪೇಟೆ ಬಂದ್‍ಗೆ ಕರೆ ಕೊಡಲಾಗಿದೆ.

    ಹೌದು. ನಾಳೆ ಬೆಳಗ್ಗೆ 8 ರಿಂದ ಸಂಜೆ 5 ಗಂಟೆ ತನಕ ಚಾಮರಾಜಪೇಟೆ ಬಂದ್ ಮಾಡುವಂತೆ ನಾಗರೀಕ ಒಕ್ಕೂಟ ಕರೆ ಕೊಟ್ಟಿದೆ. ಪ್ರತಿಭಟನೆಗೆ ಹಿಂದೂ ಸಂಘಟನೆಗಳು ಕೂಡ ಸಾಥ್ ನೀಡುತ್ತಿವೆ. ಈ ಮೂಲಕ ಬಂದ್ ತೀವೃಗೊಳಿಸಲು ಸಂಘಟನೆಗಳು ಕೂಡ ಮುಂದಾಗಿವೆ.

    ಚಾಮರಾಜಪೇಟೆ ವಕ್ಫ್ ಗೆ ಸೇರಬಾರದು ಅದು ಆಟದ ಮೈದಾನವಾಗಿಯೇ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಈ ಬಂದ್ ನಡೆಯಲಿದೆ. ವ್ಯಾಪಾರ ಚಟುವಟಿಕೆಯ ಕೇಂದ್ರವಾಗಿರುವ ಬೆಂಗಳೂರಿನ ಚಾಮರಾಜಪೇಟೆ ಬಂದ್‍ಗೆ ಈಗಾಗಲೇ ನಾಗರೀಕ ಒಕ್ಕೂಟ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಎಲ್ಲಾ ಅಂಗಡಿ ಮುಗ್ಗಟ್ಟು ಮನೆ ಮನೆಗಳಿಗೆ ಕರ ಪತ್ರ ಹಂಚಲಾಗಿದೆ.

    ಚಾಮರಾಜಪೇಟೆ ಅಂಗಡಿಗಳ ಗೋಡೆ, ಬ್ಯಾಂಕ್‍ಗಳ ಮುಂದೆ ಮುಂದೆ ಬಂದ್ ಗೆ ಸಂಪೂರ್ಣ ಬೆಂಬಲ ನೀಡುವಂತೆ ಪೋಸ್ಟರ್ ಅಂಟಿಸಲಾಗಿದೆ. ಆಟೋಗಳ ಮೂಲಕ ಬಂದ್ ಬಗ್ಗೆ ಅನೌನ್ಸ್‍ಮೆಂಟ್ ಮಾಡಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಬಿಬಿಎಂಪಿ ಕಚೇರಿಗೂ ಬಿತ್ತಿ ಪತ್ರ ಅಂಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇಂದಿನಿಂದಲೇ ಕಣ್ಗಾವಲು ಇರಿಸಿವೆ.

    ಬಂದ್ ಸಂಬಂಧ ಮಾತನಾಡಿದ ಲಹರಿ ವೇಲು, ಜಮೀರ್ ಅವರೇ ನಾವು ಇಲ್ಲಿನ ಮೂಲ ನಿವಾಸಿಗಳು. ಪ್ರತಿಭಟನೆಗೆ ಕರೆ ಕೊಟ್ಟವರು ಮೂಲ ನಿವಾಸಿಗಳು ಅಲ್ಲ ಅಂತಿರಲ್ಲ ನಾನು ಹುಟ್ಟಿ ಬೆಳೆದಿದ್ದು ಇಲ್ಲೆ. ಸತ್ರೂ ಇಲ್ಲಿನ ಸ್ಮಶಾನಕ್ಕೇ ತರಬೇಕು. ಈ ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಸರು ನಾಮಕರಣ ಆಗಬೇಕು. ಗಣೇಶೋತ್ಸವ ಆಚರಣೆ ಮಾಡಬೇಕು ಎಂದು ಶಾಸಕರ ವಿರುದ್ಧ ಕಿಡಿಕಾರಿ ನಾಳೆಯ ಬಂದ್ ಯಶಸ್ಸಿಯಾಗುತ್ತೆ ಅಂತ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮದ್ಯದ ದೊರೆ ವಿಜಯ್‌ ಮಲ್ಯಗೆ 4 ತಿಂಗಳು ಜೈಲು: ಸುಪ್ರೀಂ ಕೋರ್ಟ್ ತೀರ್ಪು

    ಜಮೀರ್ ಚೇಲಾಗಳು ಬಂದ್ ಇಲ್ಲ ಅಂತಾ ಹೇಳ್ತಾ ಇದ್ದಾರೆ. ನಮ್ಮ ಆಕ್ರೋಶದ ಕಟ್ಟೆ ಒಡೆದಿದೆ. ನಾಳೆ ಬಂದ್ ಮಾಡೇ ಮಾಡ್ತೀವಿ. ರ್ಯಾಲಿ ಮಾಡೇ ಮಾಡ್ತೀವಿ. ಪೊಲೀಸ್ ಅಡ್ಡಿ ಪಡಿಸಿದ್ರೂ ಕ್ಯಾರೇ ಎನ್ನಲ್ಲ. ನಮಗೆ ನ್ಯಾಯ ಬೇಕು. ಸಾಕು ಈ ಜಮೀರ್ ಕಡೆಯ ದೌರ್ಜನ್ಯ ಎಂದು ನಾಗರೀಕ ಒಕ್ಕೂಟ ಕಿಡಿಕಾರಿದೆ. ಇತ್ತ ವ್ಯಾಪಾರಿಗಳು ಪ್ರತಿಕ್ರಿಯಿಸಿ, ಒಂದು ದಿನ ವ್ಯಾಪಾರ ಹೋದ್ರೂ ಪರವಾಗಿಲ್ಲ. ನಾವ್ ಬಂದ್ ಮಾಡ್ತೀವಿ. ನಮ್ಮ ಈ ಏರಿಯಾಗೆ ಇದೊಂದೇ ಆಟದ ಮೈದಾನ ಇರುವುದು. ಹೀಗಾಗಿ ಇದನ್ನು ಉಳಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ಬೆಂಬಲ ಸೂಚಿಸಿದ್ದಾರೆ.

    ಜಮೀರ್ ಗೆ ಮನವಿ:
    ಇದೇ ವೇಳೆ ಹಿಂದೂ ಸಂಘಟನೆಯವರು ಜಮೀರ್ ಕಚೇರಿಯೊಳಗೆ ತೆರಳಿ ಬಂದ್ ಗೆ ಬೆಂಬಲ ಕೋರಿದ್ದಾರೆ. ಈ ವೇಳೆ ಜಮೀರ್ ಇಲ್ಲದ ಕಾರಣ ಅವರ ಪಿಎ ಬಳಿ ಸಪೋರ್ಟ್ ಮಾಡುವಂತೆ ಹೇಳಿ ಬಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]