Tag: ಬಂದ್

  • ಸಂಧಾನ ಮಾತುಕತೆ ಯಶಸ್ವಿ: ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭ

    ಸಂಧಾನ ಮಾತುಕತೆ ಯಶಸ್ವಿ: ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭ

    ಬೆಂಗಳೂರು: ಸಿಬ್ಬಂದಿ ಜೊತೆಗಿನ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು, ಬೆಳಗ್ಗೆಯಿಂದ ಬಂದ್ ಆಗಿದ್ದ ಮೆಟ್ರೋ ಸೇವೆ ಆರಂಭವಾಗಿದೆ.

    ಎಲ್ಲ ಮೆಟ್ರೋ ನಿಲ್ದಾಣಗಳು ಓಪನ್ ಆಗಿದ್ದು, ಪ್ರತಿಭಟನೆ ಕೈಬಿಟ್ಟು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪ್ರಯಾಣಿಕರ ಹಿತದೃಷ್ಟಿಯಿಂದ 4 ನಿಮಿಷಕ್ಕೆ ಒಂದರಂತೆ ರೈಲು ಓಡಿಸಲು ನಿರ್ಧರಿಸಲಾಗಿದೆ.

    ಸ್ಟಾಪ್ ಆಗಿದ್ದು ಯಾಕೆ?
    ಗುರುವಾರ ಮೆಟ್ರೋ ಸಿಬ್ಬಂದಿ ಹಾಗೂ ರಾಜ್ಯ ಕೈಗಾರಿಕಾ ಭದ್ರತಾ ಪಡೆ ನಡುವೆ ಮಾರಾಮಾರಿ ನಡೆದಿತ್ತು. ಈ ಗಲಾಟೆ ವೇಳೆ ಆರು ಜನ ಬಿಎಂಆರ್‍ಸಿಎಲ್ ಸಿಬ್ಬಂದಿಯನ್ನು ಬಂಧಿಸಲಾಗಿತ್ತು. ಬಿಎಂಆರ್‍ಸಿಎಲ್ ಸಿಬ್ಬಂದಿ ಬಂಧನವನ್ನು ಖಂಡಿಸಿ ಮೆಟ್ರೋ ಸಿಬ್ಬಂದಿ ರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ಡಿಪೋದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು. ಮೆಟ್ರೋ ಸಿಬ್ಬಂದಿ ಪ್ರತಿಭಟನೆಯಲ್ಲಿ ತೊಡಗಿದ್ದರಿಂದ ಮೆಟ್ರೋ ಸಂಚಾರ ಸಂಪೂರ್ಣ ನಿಂತು ಹೋಗಿತ್ತು.

    ಇದನ್ನು ಓದಿ: ಕೆಲಸಕ್ಕೆ ಲೇಟಾಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್ರು, ಮೆಟ್ರೋ ಸಿಬ್ಬಂದಿ ಮಧ್ಯೆ ಜಟಾಪಟಿ: ವಿಡಿಯೋ ನೋಡಿ

     

     

  • ಬೆಂಗ್ಳೂರು ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್- ಇಂದು `ನಮ್ಮ ಮೆಟ್ರೋ’ ಬಂದ್

    ಬೆಂಗ್ಳೂರು ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್- ಇಂದು `ನಮ್ಮ ಮೆಟ್ರೋ’ ಬಂದ್

    ಬೆಂಗಳೂರು: ಗುರುವಾರ ಮೆಟ್ರೋ ಸಿಬ್ಬಂದಿ ಮೇಲೆ ಕರ್ನಾಟಕ ರಾಜ್ಯ ಇಂಡಸ್ಟ್ರಿಯಲ್ ಫೋರ್ಸ್ ಕಾನ್ಸ್‍ಟೇಬಲ್‍ನಿಂದ ಹಲ್ಲೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಮೆಟ್ರೋ ಸಿಬ್ಬಂದಿ ನಡುವೆ ನಡೆದಿದ್ದ ಗಲಾಟೆ ವೇಳೆ ಆರು ಜನ ಬಿಎಂಆರ್‍ಸಿಎಲ್ ಸಿಬ್ಬಂದಿಗಳನ್ನು ಬಂಧಿಸಲಾಗಿತ್ತು..

    ಬಿಎಂಆರ್‍ಸಿಎಲ್ ಸಿಬ್ಬಂದಿ ಬಂಧನವನ್ನು ಖಂಡಿಸಿ ಮೆಟ್ರೋ ಸಿಬ್ಬಂದಿ ರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ಡಿಪೋದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಕೂಡಲೇ ಬಂಧಿಸಲ್ಟಟ್ಟ ಸಿಬ್ಬಂದಿಯನ್ನು ಬಿಡುಗಡೆಗೊಳಿಸಿಬೇಕೆಂದು ಬೈಯಪ್ಪನಹಳ್ಳಿ ಡಿಪೋದಲ್ಲಿ ಸಾವಿರಾರರು ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಮೆಟ್ರೋ ಸಿಬ್ಬಂದಿ ಪ್ರತಿಭಟನೆಯಲ್ಲಿ ತೊಡಗಿದ್ದರಿಂದ ಮೆಟ್ರೋ ಸಂಚಾರ ಸಂಪೂರ್ಣ ನಿಂತು ಹೋಗಿದೆ.

    ಇನ್ನು ಬಂಧಿಸಿದ ಮೆಟ್ರೋ ಸಿಬ್ಬಂದಿಯನ್ನು ಬಿಡಡುಗಡೆ ಮಾಡಲಾಗುವುದಿಲ್ಲ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿದುಬಂದಿದೆ. ಪ್ರತಿಭಟನಾ ಸ್ಥಳಕ್ಕೆ ಬಿಎಂಆರ್‍ಸಿಎಲ್ ಎಂ.ಡಿ ಪ್ರದೀಪ್ ಸಿಂಗ್ ಭೇಟಿ ನೀಡಿದ್ದು, ಪ್ರತಿಭಟನೆಯನ್ನು ಕೈ ಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

     

     

  • ಕಾಶ್ಮೀರದಲ್ಲಿ ಬಂದ್ ನಡುವೆಯೂ ಉಗ್ರ ಲಷ್ಕರಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದ್ರು ಸಾವಿರಾರು ಜನ

    ಕಾಶ್ಮೀರದಲ್ಲಿ ಬಂದ್ ನಡುವೆಯೂ ಉಗ್ರ ಲಷ್ಕರಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದ್ರು ಸಾವಿರಾರು ಜನ

     

    ಶ್ರೀನಗರ: ಗಣ್ಯವ್ಯಕ್ತಿಗಳು ನಿಧನರಾದ್ರೆ ಅವರ ಅಂತ್ಯಕ್ರಿಯೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಭಾಗವಹಿಸೋದು ಸಾಮಾನ್ಯ. ಆದ್ರೆ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಶನಿವಾರದಂದು ಭದ್ರತಾ ಪಡೆಯಿಂದ ಹತ್ಯೆಗೀಡಾದ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರ ಬಷೀರ್ ಲಷ್ಕರಿ ಅಂತ್ಯಕ್ರಿಯೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದು, ಇದರ ಫೋಟೋಗಳು ಆನ್‍ಲೈನ್‍ನಲ್ಲಿ ಹರಿದಾಡ್ತಿವೆ. ಕಾಶ್ಮೀರದಲ್ಲಿ ಬಂದ್ ನಡುವೆಯೂ ಇಷ್ಟೊಂದು ಸಂಖ್ಯೆಯಲ್ಲಿ ಉಗ್ರನ ಅಂತ್ಯಕ್ರಿಯೆಯಲ್ಲಿ ಜನ ಭಾಗವಹಿಸಿದ್ದಾರೆ.

    ಶನಿವಾರದಂದು ಅನಂತ್‍ನಾಗ್ ಜಿಲ್ಲೆಯ ಬ್ರಿಂಟಿ ಡಯಲ್‍ಗಾಮ್ ಪ್ರದೇಶದಲ್ಲಿ ಮನೆಯೊಂದರಲ್ಲಿ ಅಡಗಿದ್ದ ಉಗ್ರ ಲಷ್ಕರಿ ಹಾಗೂ ಆತನ ಸಹಚರನನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು. ಯೋಧರ ಕಾರ್ಯಾಚರಣೆ ವೇಳೆ ಓರ್ವ ಮಹಿಳೆ ಹಾಗೂ ಯುವಕ ಸೇರಿ ಇಬ್ಬರು ನಾಗರೀಕರು ಸಾವನ್ನಪ್ಪಿದ್ದರು.

    ಲಷ್ಕರಿಯ ಅಂತ್ಯಕ್ರಿಯೆ ಭಾನುವಾರದಂದು ಅನಂತ್‍ನಾಗ್‍ನ ಕೋಕರ್‍ನಾಗ್‍ನಲ್ಲಿರುವ ಸೋಫ್ ಶಾಲಿ ಗ್ರಾಮದಲ್ಲಿ ನಡೆದಿದ್ದು, ಸಾವಿರಾರು ಜನ ಭಾಗವಹಿಸಿದ್ದರು. ಲಷ್ಕರಿಯ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯುವ ವೇಳೆ ಭಾರತದ ಆಡಳಿತದಿಂದ ಸ್ವಾತಂತ್ರ್ಯ ಬೇಕೆಂದು ಘೋಷಣೆ ಕೂಗಿದ್ರು. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಶನಿವಾರ ರಾತ್ರಿ ಅಂತಿಮ ದರ್ಶನ ನಡೆದಿದ್ದು, ಈ ವೇಳೆ ಕೆಲವರು ಸ್ಥಳಕ್ಕೆ ಬಂದು ಗನ್ ಸೆಲ್ಯೂಟ್ ಅರ್ಪಿಸಿದ್ರು ಎಂದು ವರದಿಯಾಗಿದೆ.

    ಈ ನಡುವೆ ಪ್ರತ್ಯೇಕತಾವಾದಿ ಮುಖಂಡರಾದ ಸೈಯದ್ ಅಲಿ, ಗಿಲಾನಿ ಹಾಗೂ ಮಿರ್ವೈಸ್ ಉಮರ್ ಫರೂಕ್ ಹಾಗೂ ಯಾಸಿನ್ ಮಲಿಕ್ ನೀಡಿದ್ದ ಕರೆಯ ಹಿನ್ನೆಲೆಯಲ್ಲಿ ಶ್ರೀನಗರ ಹಾಗೂ ಇತರೆ ಜಿಲ್ಲೆಗಳಲ್ಲಿ ಅಂಗಡಿಗಳು ಹಾಗೂ ಕಚೇರಿಗಳನ್ನು ಮುಚ್ಚಲಾಗಿತ್ತು.

    ಶ್ರೀನಗರ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಅಧಿಕಾರಿಗಳು ಕೆಲವು ಪ್ರಮುಖ ನಗರಗಳಲ್ಲಿ ನಿರ್ಬಂಧ ಹೇರಿದ್ದರು. ನೌಹಟ್ಟಾ, ಎಮ್‍ಆರ್ ಗುಂಜ್, ರೈನಾವರಿ, ಖನ್‍ಯಾರ್, ಸಫಕ್ದಲ್, ಮೈಸುಮಾ ಹಾಗೂ ಕ್ರಾಲ್‍ಕುದ್‍ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಉತ್ತರ ಕಾಶ್ಮೀರದ ಬರಾಮುಲ್ಲಾದಿಂದ ಶ್ರೀನಗರ ನಡುವಿನ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಹಾಗೇ ಕೇಂದ್ರ ಕಾಶ್ಮೀರದಿಂದ ದಕ್ಷಿಣ ಕಾಶ್ಮೀರ ನಡುವಿನ ರೈಲುಗಳ ಸಂಚಾರವನ್ನೂ ಕೂಡ ಸ್ಥಗಿತಗೊಳಿಸಲಾಗಿದೆ.

  • ಗಮನಿಸಿ, ಮಂಗಳವಾರ ರಾಜ್ಯದಲ್ಲಿ ಔಷಧಿ ಮಳಿಗೆಗಳು ಬಂದ್

    ಗಮನಿಸಿ, ಮಂಗಳವಾರ ರಾಜ್ಯದಲ್ಲಿ ಔಷಧಿ ಮಳಿಗೆಗಳು ಬಂದ್

    ಬೆಂಗಳೂರು: ರಾಜ್ಯದ ಜನರಿಗೆ ಇದೊಂದು ಶಾಕಿಂಗ್ ಸುದ್ದಿ. ಮಂಗಳವಾರದಂದು ಯಾವುದೇ ಔಷಧಿ ಸಿಗುವುದಿಲ್ಲ.

    ನಾನಾ ಬೇಡಿಕೆಗಳನ್ನ ಮುಂದಿಟ್ಟು ರಾಜ್ಯದ್ಯಾಂತ ಔಷಧಿ ಮಳಿಗೆಗಳು ಬಂದ್‍ಗೆ ಕರೆ ನೀಡಿವೆ. ಆನ್‍ಲೈನ್ ಔಷಧ ಮಾರಾಟದ ವಿರುದ್ಧ ಹಾಗೂ ಪರವಾನಿಗೆ ನವೀಕರಿಕರಣದ ಕುರಿತಂತೆ ಮುಖ್ಯವಾಗಿ ಗೊಂದಲ ನಿವಾರಣೆಗೆ ಆಗ್ರಹಿಸಿ ಮೇ. 30ರಂದು ಔಷಧಿ ಮಳಿಗೆಗಳು ಬಂದ್ ನಡೆಸಲಿವೆ.

    ಈ ಹಿನ್ನೆಲೆಯಲ್ಲಿ ಮಂಗಳವಾರದಂದು ಔಷಧಿ ಮಳಿಗೆಗಳು ಬಂದ್ ಆಗಲಿದ್ದು, ಔಷಧಿಗಳು ಸಿಗುವುದಿಲ್ಲ.

    ಅಲ್ಲದೆ ಕೇಂದ್ರದ ಜಿಎಸ್‍ಟಿ ವಿರೋಧಿಸಿ ಹೋಟೆಲ್ ಮಾಲೀಕರು ಕೂಡ ಮೇ 30 ರಂದು ಬಂದ್‍ಗೆ ಕರೆ ನೀಡಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಪುದುಚೆರಿಯ ಹೋಟೆಲ್ ಸಂಘಗಳು ಬಂದ್‍ಗೆ ಬೆಂಬಲ ನೀಡಿವೆ.

     

  • ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ನಿಂದನೆ ಖಂಡಿಸಿ ಇಂದು ಹೊಳೆನರಸೀಪುರ ಬಂದ್

    ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ನಿಂದನೆ ಖಂಡಿಸಿ ಇಂದು ಹೊಳೆನರಸೀಪುರ ಬಂದ್

    ಹಾಸನ: ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರನ್ನು ಅವಮಾನಿಸಿರೊದನ್ನು ವಿರೋಧಿಸಿ ಇಂದು ಹೊಳೇನರಸೀಪುರ ಬಂದ್ ಗೆ ಕರೆ ನೀಡಲಾಗಿದ್ದು, ಬಂದ್‍ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ತುರ್ತು ಸೇವೆಗಳನ್ನು ಹೊರತುಪಡಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವರ್ತಕರು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಂಜಾನೆಯಿಂದಲೇ ಪಟ್ಟಣದಲ್ಲಿ ಬಂದ್ ವಾತಾವರಣ ಕಂಡುಬಂದಿದೆ. ಜೆಡಿಎಸ್ ಪಕ್ಷ, ದೇವೇಗೌಡರ ಅಭಿಮಾನಿಗಳು, ವರ್ತಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿವೆ.

    ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಮತ್ತು ವಾಟ್ಸಪ್‍ಗಳಲ್ಲಿ ಮಾಜಿ ಪ್ರಧಾನಿಯನ್ನು ಅವಹೇಳನ ಮಾಡಿರೊದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಇದೀಗ ದೇವೇಗೌಡರ ಸ್ವಕ್ಷೇತ್ರ ಹೊಳೇನರಸೀಪುರದಲ್ಲಿ ಪ್ರತಿಭಟನೆ ನಡೆಯುತ್ತಿದೆ. 11ಗಂಟೆಗೆ ಪಟ್ಟಣದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

  • ನಾಳೆ ದೇಶವ್ಯಾಪಿ ಬ್ಯಾಂಕ್ ಮುಷ್ಕರ- ಯಾವ ಬ್ಯಾಂಕ್ ಇರುತ್ತೆ, ಯಾವುದು ಇರಲ್ಲ?

    ನಾಳೆ ದೇಶವ್ಯಾಪಿ ಬ್ಯಾಂಕ್ ಮುಷ್ಕರ- ಯಾವ ಬ್ಯಾಂಕ್ ಇರುತ್ತೆ, ಯಾವುದು ಇರಲ್ಲ?

    ನವದೆಹಲಿ: ಮಂಗಳವಾರದಂದು ದೇಶದಾದ್ಯಂತ ರಾಷ್ಟ್ರೀಕೃತ ಬ್ಯಾಂಕ್‍ಗಳು ಬಂದ್‍ಗೆ ಕರೆ ನೀಡಿವೆ.

    ಎಸ್‍ಬಿಐ ಜೊತೆ ಸಹವರ್ತಿ ಬ್ಯಾಂಕ್‍ಗಳ ವಿಲೀನಕ್ಕೆ ವಿರೋಧಿಸಿ, ನೋಟು ನಿಷೇಧದಿಂದ ಬ್ಯಾಂಕ್‍ಗಳಿಗೆ ನಷ್ಟವಾದ ವೆಚ್ಚ ಭರಿಸುವಂತೆ ಹಾಗೂ ಸೇವಾಭದ್ರತೆ ಸೇರಿದಂತೆ ಸುಮಾರು 30 ಬೇಡಿಕೆಗಳನ್ನು ಮುಂದಿಟ್ಟು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಮಂಗಳವಾರಂದು ಬಂದ್‍ಗೆ ಕರೆ ನೀಡಿದೆ. ದೇಶದಾದ್ಯಂತ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಬ್ಯಾಂಕ್ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.

    ದೇಶದ್ಯಾಂತ ಬ್ಯಾಂಕ್‍ಗಳು ಮುಷ್ಕರ ನಡೆಸಲು ನಿರ್ಧರಿಸಿರುವುದರಿಂದ, ಬ್ಯಾಂಕಿಂಗ್ ಸೇವೆ ಬಹುತೇಕ ಸ್ತಬ್ಧವಾಗಲಿದ್ದು, ಎಟಿಎಂನಲ್ಲಿ ಸೇವೆಯಲ್ಲೂ ವ್ಯತ್ಯಯ ಉಂಟಾಗಲಿದೆ.

    ಯಾವ ಬ್ಯಾಂಕ್‍ಗಳು ಇರಲ್ಲ?: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಐಡಿಬಿಐ ಬ್ಯಾಂಕ್, ಎಸ್‍ಬಿಐ, ಎಸ್‍ಬಿಎಂ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ಬ್ಯಾಂಕ್ ಸೇರಿದಂತೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳು ಮುಷ್ಕರದಲ್ಲಿ ಪಾಲ್ಗೊಳ್ಳುವುದರಿಂದ ಈ ಬ್ಯಾಂಕ್‍ಗಳ ಸೇವೆ ನಾಳೆ ಇರುವುದಿಲ್ಲ.

    ಯಾವ ಬ್ಯಾಂಕ್‍ಗಳು ಇರುತ್ತೆ?: ಐಸಿಐಸಿಐ, ಹೆಚ್‍ಡಿಎಫ್‍ಸಿ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹಿಂದ್ರ ಸೇರಿದಂತೆ ಖಾಸಗಿ ಬ್ಯಾಂಕ್‍ಗಳು ನಾಳೆ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

  • ಫೆ.19ರಿಂದ ಬೆಂಗಳೂರು ಏರ್‍ಪೋರ್ಟ್ ಬಂದ್- ಟ್ಯಾಕ್ಸಿ, ಹೋಟೆಲ್ ಉದ್ಯಮದಾರರಿಗೆ ಬೀಳಲಿದೆ ಭಾರೀ ಹೊಡೆತ

    ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಫೆ. 19ರಿಂದ 2 ತಿಂಗಳ ಕಾಲ ತಾತ್ಕಾಲಿಕವಾಗಿ ಬಂದ್ ಆಗಲಿದೆ.

    ಬೆಳಗ್ಗೆ 10.30 ರಿಂದ ಸಂಜೆ 5ರವರೆಗೂ ಬಂದ್ ಆಗಲಿದ್ದು, ಇದರಿಂದ ವಿಮಾನ ನಿಲ್ದಾಣವನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದ 4000 ಟ್ಯಾಕ್ಸಿಗಳಿಗೆ ಕೆಲಸ ಇಲ್ಲದಂತಾಗಲಿದೆ.

    ಹೋಟೆಲ್ ಉದ್ಯಮ, ವಾಣಿಜ್ಯ ಚಟುವಟಿಕೆಗಳಿಗೂ 2ತಿಂಗಳ ಕಾಲ ಏರ್‍ಪೋರ್ಟ್ ಬಂದ್ ಬಿಸಿ ತಟ್ಟಲಿದೆ. ನಷ್ಟದ ಭಯದಲ್ಲಿ ಬೆಂಗಳೂರು ಪ್ರವಾಸಿ ವಾಹನ ಮಾಲೀಕರು ಹೆಚ್‍ಎಎಲ್ ಏರ್‍ಪೋರ್ಟ್ ಬಳಸಿ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ನಂಬರ್ 1 ಸ್ಥಾನದಲ್ಲಿರುವ ನಗರವಾಗಿರುವ ಬೆಂಗಳೂರಿನಲ್ಲಿ ಇಮದು ನಮಗೆ ಆಲ್ಟರ್‍ನೇಟಿವ್ ವ್ಯವಸ್ಥೆನೇ ಇಲ್ಲ. ಇದರಂದಾಗಿ ಪ್ರವಾಸಿಗರನ್ನು ನಂಬಿಕೊಂಡು ಟ್ಯಾಕ್ಸಿ ಓಡಿಸುವವರಿಗೆ ಹಾಗೂ ಹೋಟೇಲ್ ಉದ್ಯಮ ನಡೆಸುವವರಿಗೆ ತುಂಬಾನೇ ತೊಂದರೆಯಗುತ್ತಿದೆ. 70 ದಿನಗಳ ಕಾಲ ಹೆಚು ಅಂದ್ರೆ 6 ಗಂಟೆ ವಿಮಾನ ಹಾರಾಟ ವ್ಯವಸ್ಥೆ ಇಲ್ಲ ಅಂದ್ರೆ ನಮ್ಮ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಕಂಟಕ ಎದುರಾಗುವುದರಲ್ಲಿ ಸಂಶಯವಿಲ್ಲ ಅಂತಾ ಟ್ಯಾಕ್ಸಿ ಮಾಲೀಕರ ಸಂಘದ ರಾಧಾಕೃಷ್ಣ ಹೊಳ್ಳ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾರ್ಯ, ಮತ್ತು ರನ್ ವೇ ಕಾಮಗಾರಿ ನಡೆಯುವುದರಿಂದ ಫೆಬ್ರವರಿ 19ರಿಂದ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ಹಗಲು ಸಮಯದಲ್ಲಿ ವಿಮಾನ ಆಗಮನ ಮತ್ತು ನಿರ್ಗಮನ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(ಬಿಐಎಎಲ್) ಪ್ರಕಟಣೆಯಲ್ಲಿ ತಿಳಿಸಿದೆ.