Tag: ಬಂದ್

  • ಯಡಿಯೂರಪ್ಪ ರಕ್ತ ಕೊಟ್ರೂ ನಾಳೆ ಬೆಳಗ್ಗೆ ನೀರು ಬರಲ್ಲ- ಎಚ್‍ಡಿಕೆ

    ಯಡಿಯೂರಪ್ಪ ರಕ್ತ ಕೊಟ್ರೂ ನಾಳೆ ಬೆಳಗ್ಗೆ ನೀರು ಬರಲ್ಲ- ಎಚ್‍ಡಿಕೆ

    ಬೆಂಗಳೂರು/ಹಾಸನ: ಯಡಿಯೂರಪ್ಪ ರಕ್ತ ಕೊಟ್ರೂ ನಾಳೆ ಬೆಳಗ್ಗೆ ನೀರು ಬರಲ್ಲ ಅಂತಾ ಮಹದಾಯಿ ವಿಚಾರದಲ್ಲಿ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮಹದಾಯಿ ನೀರು ಯಡಿಯೂರಪ್ಪ ಮತ್ತು ಪರಿಕ್ಕರ್ ಆಸ್ತಿನಾ? ನಾನು ಸಿದ್ದರಾಮಯ್ಯ ಅವರನ್ನು ನಂಬೋದಿಲ್ಲ ಅಂತ ಪರಿಕ್ಕರ್ ಹೇಳ್ತಾರೆ. ಯಡಿಯೂರಪ್ಪ ಅವರನ್ನು ನಂಬ್ತಾರಂತೆ. ಏನು ಪರಿಕ್ಕರ್ ಮತ್ತು ಅಮಿತ್ ಷಾ ಆಟವಾಡ್ತಾರಾ? ಬಿಜೆಪಿ ನಾಯಕರು ಕರ್ನಾಟಕ ರಾಜ್ಯಕ್ಕೆ ದ್ರೋಹ ಮಾಡ್ತಾ ಇದ್ದಾರೆ. ಬಿಎಸ್‍ವೈ ರಕ್ತ ಕೊಟ್ಟರೂ ನಾಳೆ ಬೆಳಗ್ಗೆ ನೀರು ಬರುವುದಿಲ್ಲ. ನ್ಯಾಯಾಧಿಕರಣದಿಂದಲೇ ಆದೇಶ ಆಗಬೇಕು ಅಂತ ಎಚ್‍ಡಿಕೆ ಹೇಳಿದ್ರು.

    ಮಹದಾಯಿ ನೀರು ಯಡಿಯೂರಪ್ಪ, ಗೋವಾ ಸಿಎಂ ಪರಿಕ್ಕರ್ ಆಸ್ತಿಯಲ್ಲ. ನೀರು ಜನರ ಆಸ್ತಿ. ಎರಡೂ ರಾಜ್ಯಗಳಿಗೆ ಸೇರಿದ ಹಕ್ಕು. ಜನರಿಗೆ ಟೋಪಿ ಹಾಕ್ಬೇಡಿ. ಪರಿಕ್ಕರ್ ಸಿದ್ದರಾಮಯ್ಯ ಮೇಲೆ ನಂಬಿಕೆ ಇಲ್ಲ ಅಂತಾ ಹೇಳ್ತಾರೆ. ಸಿದ್ದರಾಮಯ್ಯ 6 ಕೋಟಿ ಕನ್ನಡಿಗರ ಸಿಎಂ ಅಂತಾ ತಿರುಗೇಟು ನೀಡಿದ್ರು.

    ಕೇಂದ್ರದ ಬಿಜೆಪಿಗರು ಕರ್ನಾಟಕದ ಜನರ ದಾರಿ ತಪ್ಪಿಸಿ, ಮತ ಪಡೆಯಲು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಜನವರಿ 5 ರಿಂದ ಬೆಳಗಾವಿಯಲ್ಲಿ ಕಾಗವಾಡದಿಂದ ಯಾತ್ರೆ ಶುರು ಮಾಡ್ತೀನಿ. ಬಿಜೆಪಿಯವರ ಕೀಳುಮಟ್ಟದ ರಾಜಕಾರಣವನ್ನು ಜನರ ಮುಂದೆ ಇಡ್ತೀನಿ. ಬಿಜೆಪಿಯವರು 17 ಮಂದಿ ಸಂಸದರು, ಸಚಿವರು ಕೈ ಕಟ್ಟಿಕೊಂಡು ನಿಲ್ತಾರೆ. ಅವರು ಮಾತಾಡಿದ್ದೇ ಇಲ್ಲ ಅಂದ್ರು.

    ಇದೇ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಹಾಸನದಲ್ಲಿ ಮಾತನಾಡಿದ್ದು, ಗುಜರಾತ್ ಎಲೆಕ್ಷನ್ ಮುಗಿದ ಬಳಿಕ ಸಮಸ್ಯೆಗೆ ಒಂದು ಪರಿಹಾರ ಕಂಡು ಹಿಡಿಯಲೇ ಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಗೋವಾ, ಮಹಾರಾಷ್ಟ್ರ ಸಿಎಂಗಳ ಸಭೆ ನಡೆಸಿದರು. ಆ ಸಭೆಯಲ್ಲಿ ನಮ್ಮ ರಾಜ್ಯದ ಯಡಿಯೂರಪ್ಪ ಅವರೂ ಭಾಗಿಯಾಗಿದ್ದರು. ಸಭೆಯಲ್ಲಿ ಒಂದು ತೀರ್ಮಾನಕ್ಕೆ ಬರಲೇಬೇಕು ಎಂದು ಸೂಚನೆ ಕೊಟ್ಟರು. ಆದರೆ ದೆಹಲಿಯಿಂದ ಬಂದ ನಂತರ ಸರ್ಕಾರ ಉಳಿಸಿಕೊಳ್ಳಲು ಗೋವಾ ಸಿಎಂ ಏನು ಹೇಳಿಕೆ ನೀಡಿದರು ಎಂಬುದು ನಾಡಿನ ಜನರಿಗೆ ತಿಳಿದಿದೆ. ಕರ್ನಾಟಕಕ್ಕೆ ಎಷ್ಟು ಕುಡಿಯುವ ನೀರು ಕೊಡಬೇಕು ಎಂಬುದು ನ್ಯಾಯಾಧಿಕರಣದ ಮುಂದೆಯೇ ತೀರ್ಮಾನವಾಗಬೇಕು ಎಂದು ಗೋವಾ ಸಿಎಂ ಹೇಳಿದ್ದಾರೆ. ಆದರೆ ನೀರು ಹಂಚಿಕೆ ನಿಗದಿ ಮಾಡಿದ ನಂತರವೂ ಚರ್ಚೆಗೆ ಗ್ರಾಸವಾಗಲಿದೆ. ಹೀಗಾಗಿ ಇದು ಬಗೆಹರಿಯದ ಸಮಸ್ಯೆ ಎಂದರು.

    ಇದೇ ವೇಳೆ ತಮ್ಮ ವಿರುದ್ಧ ಟೀಕೆ ಮಾಡಿರುವ ಬಂಡಾಯ ಶಾಸಕ ಚಲುವರಾಯಸ್ವಾಮಿ ಬಗ್ಗೆ ಮಾತನಾಡಲು ನಿರಾಕರಿಸಿದ ಗೌಡರು, ಅವರ ಹೆಸರು ಎತ್ತಬೇಡಿ ಎಂದು ಖಾರವಾಗಿ ಉತ್ತರಿಸಿದರು. ಜೆಡಿಎಸ್ ಟಿಕೆಟ್ ಹಂಚಿಕೆ ಸಂಬಂಧ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಎಲ್ಲಾ ಜಿಲ್ಲೆಗಳ ಆಕಾಂಕ್ಷಿಗಳ ಸಭೆ ನಡೆಸುತ್ತಿದ್ದಾರೆ. ಪ್ರಜ್ವಲ್ ರೇವಣ್ಣ, ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡುವ ಬಗ್ಗೆ ಮತ್ತೆ ಮತ್ತೆ ಚರ್ಚೆ ಬೇಡ ಎಂದರು.

    ಚುನಾವಣೆ ಹೊಸ್ತಿಲಲ್ಲೇ ಉತ್ತರ ಕರ್ನಾಟಕದಲ್ಲಿ ಮಹದಾಯಿ ಹೋರಾಟ ತೀವ್ರಗೊಂಡಿದೆ. ಸಂಧಾನ ಹೆಸರಲ್ಲಿ ಬಿಜೆಪಿ ನಾಯಕರು ಉತ್ತರ ಕರ್ನಾಟಕ ಜನರ ಮೂಗಿಗೆ ತುಪ್ಪ ಸುರಿಯುವ ಕೆಲ್ಸ ಮಾಡ್ತಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿಯವರೇ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿ ರೈತ ಮತ್ತು ಕನ್ನಡಪರ ಸಂಘಟನೆಗಳು ಇದೇ ತಿಂಗಳ 27ರಂದು ಬಂದ್‍ಗೆ ಕರೆ ನೀಡಿವೆ.

    https://youtu.be/nK8HD8MjR_0

  • ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್

    ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್

    ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಮಹದಾಯಿ ನೀರಾವರಿ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್ ಮಾಡಲು ಕಳಸಾ ಬಂಡೂರಿ ಮಹದಾಯಿ ಹೋರಾಟ ಸಮಿತಿ ಹಾಗೂ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.

    ಕಳಸಾ ಬಂಡೂರಿ ರೈತ ಹಿತರಕ್ಷಣಾ ಸಮಿತಿ ಮುಖಂಡರು ಶುಕ್ರವಾರ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಪ್ರತಿಭಟಿಸಿದರು. ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಇತ್ಯರ್ಥ ಪಡಿಸುವ ನಿರೀಕ್ಷೆ ಕೊನೆಗೂ ಹುಸಿಯಾಗಿದೆ. ಯೋಜನೆ ಜಾರಿ ವಿಚಾರದಲ್ಲಿ ಸರ್ಕಾರಗಳು ಮಾತು ತಪ್ಪಿವೆ ಎಂದು ಆರೋಪಿಸಿದರು.

    ನಿರೀಕ್ಷೆ ಹುಸಿಯಾದ ಹಿನ್ನೆಲೆಯಲ್ಲಿ ಈ ವೇಳೆ ಮಹದಾಯಿ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಬಣ, ಆಟೋ ಚಾಲಕರ ಸಂಘ, ಎಪಿಎಂಸಿ ವರ್ತಕರು ಬೆಂಬಲ ನೀಡಿದ್ದಾರೆ.

    ಮಹದಾಯಿ ವಿವಾದವನ್ನು ಬಗೆ ಹರಿಸಿಲು ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಮಧ್ಯಪ್ರವೇಶಿಸಿ, ವಿವಾದಿತ ರಾಜ್ಯಗಳ ನಡುವೆ ಸಂಧಾನ ಮಾತುಕತೆ ಸಭೆ ನಡೆಸಬೇಕು. ಇದನ್ನು ಬಿಟ್ಟು ಪೊಳ್ಳು ಭರವಸೆ ನೀಡಿ ರೈತರ ಕಣ್ಣಿಗೆ ಮಣ್ಣೆರೆಚುವ ಕ್ರಮವನ್ನು ಬಿಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಳಸಾ ಬಂಡೂರಿ ಹೋರಾಟಗಾರರು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಪ್ರತಿಭಟನಾನಿರತು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಇಂದಿನಿಂದ ಮಹದಾಯಿ ನೀರಿನ ಚಿಂತೆಯನ್ನು ಬಿಟ್ಟು ಬಿಡಿ: ಬಿಎಸ್‍ವೈ

    ಇದೇ ವೇಳೆ ಬಿಜೆಪಿ ನಾಯಕರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಹೋರಾಟಗಾರರು, ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಕಳಸಾ ಬಂಡೂರಿ ಯೋಜನೆಯನ್ನು ಬಳಸಿಕೊಳ್ಳುವದನ್ನು ಬಿಡಬೇಕು. ಬಿಜೆಪಿ ನಾಯಕರಿಗೆ ನಿಜವಾಗಲೂ ಈ ಭಾಗದ ಜನರ ಬಗ್ಗೆ ಕಾಳಜಿ ಇದ್ದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮಧ್ಯಪ್ರವೇಶ ಮಾಡಲು ಒತ್ತಾಯಿಸಬೇಕು ಎಂದು ಅಗ್ರಹಿಸಿದರು. ಇದನ್ನೂ ಓದಿ: ಮಾತುಕತೆಗಷ್ಟೇ ಒಪ್ಪಿಗೆ, ನಮ್ಮ ಹಕ್ಕುಗಳಿಗೆ ತೊಂದರೆ ಆಗಬಾರದು ಪರಿಕ್ಕರ್ ಬರೆದ ಪತ್ರದಲ್ಲಿ ಏನಿದೆ?

    ಬಂದ್ ಗೆ ಕರೆ ನೀಡಿದ್ದರಿಂದ ಕಳಸಾ ಹೋರಾಟ ತೀವ್ರವಾಗಿರುವ ಗದಗ್, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಬೆಳಗಾವಿ, ಹಾವೇರಿಯಲ್ಲಿ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ.

    https://www.youtube.com/watch?v=_JWv-dVmm8E

  • ವಿಜಯಪುರ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಹೆಚ್ಚಿದ ಆಕ್ರೋಶ- ಚಿಕ್ಕಮಗಳೂರಲ್ಲಿ ಬಂದ್‍ಗೆ ಕರೆ

    ವಿಜಯಪುರ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಹೆಚ್ಚಿದ ಆಕ್ರೋಶ- ಚಿಕ್ಕಮಗಳೂರಲ್ಲಿ ಬಂದ್‍ಗೆ ಕರೆ

    – 6 ಜನರ ವಿರುದ್ಧ ಎಫ್‍ಐಆರ್

    ಚಿಕ್ಕಮಗಳೂರು: ವಿಜಯಪುರದಲ್ಲಿ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಇಂದು ಚಿಕ್ಕಮಗಳೂರು ನಗರ ಬಂದ್‍ಗೆ ಕರೆ ನೀಡಲಾಗಿದೆ.

    ವಿವಿಧ ಕನ್ನಡ ಪರ ಸಂಘಟನೆ, ದಲಿತ ಸಂಘಟನೆ ಹಾಗೂ ಮಹಿಳಾ ಸಂಘಟನೆಗಳು ಬಂದ್‍ಗೆ ಕರೆ ನೀಡಿದ್ದು, ಕಾಮುಕರನ್ನ ಶೀಘ್ರವೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಬೆಳ್ಳಂಬೆಳಗ್ಗೆಯೇ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಕೆಲ ವರ್ತಕರು ಮತ್ತು ಅಂಗಡಿಗಳು ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನ ಬಂದ್ ಮಾಡಿದ್ದಾರೆ. ಇನ್ನೂ ಕೆಲವು ಅಂಗಡಿಗಳನ್ನ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬಾಗಿಲು ಹಾಕಿಸಿದ್ದಾರೆ. ಸರ್ಕಾರಿ ಬಸ್‍ಗಳನ್ನ ಡಿಪೋಗೆ ವಾಪಸ್ ಕಳುಹಿಸಿದ್ದು, ನಗರದಲ್ಲಿ ಆಟೋ ಸಂಚಾರ ಕೂಡ ತಾತ್ಕಾಲಿಕವಾಗಿ ಬಂದ್ ಆಗಿದೆ. ವಿವಿಧ ಸಂಘಟನೆಗಳು ಇಂದು ಮಧ್ಯಾಹ್ನ 12 ಗಂಟೆಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಿವೆ.

    ವಿಜಯಪುರದ ದಲಿತ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ಮೇಲೆ ಪೋಕ್ಸೋ ಹಾಗೂ ದಲಿತ ದೌರ್ಜನ್ಯ ಕಾಯ್ದೆ ಅಡಿ ಎಫ್‍ಐಆರ್ ದಾಖಲಾಗಿದೆ ಎಂದು ವಿಜಯಪುರ ಎಸ್‍ಪಿ ಕುಲದೀಪ್ ಜೈನ್ ಹೇಳಿದ್ದಾರೆ.

    ಸದ್ಯ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ದೀಪಕ್‍ಗಾಗಿ ಎರಡು ತಂಡ ರಚನೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ತಿಳಿದಿದ್ದಾರೆ.

    ಇದನ್ನು ಓದಿ: ಶಾಲೆಗೆ ಹೋಗುವಾಗ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್, ಕೊಲೆ!

    ಇದನ್ನು ಓದಿ: ವಿಜಯಪುರದಲ್ಲಿ ದಲಿತ ಬಾಲಕಿಯ ರೇಪ್, ಕೊಲೆಗೆ ಸಿಎಂ ಖಂಡನೆ

     

  • ಹೆಬ್ಬಾಳ-ನಾಗವಾರ ಏತ ನೀರಾವರಿ ಯೋಜನೆ ವಿರೋಧಿಸಿ ಇಂದು ಚಿಕ್ಕಬಳ್ಳಾಪುರ ಬಂದ್

    ಹೆಬ್ಬಾಳ-ನಾಗವಾರ ಏತ ನೀರಾವರಿ ಯೋಜನೆ ವಿರೋಧಿಸಿ ಇಂದು ಚಿಕ್ಕಬಳ್ಳಾಪುರ ಬಂದ್

    ಚಿಕ್ಕಬಳ್ಳಾಪುರ: ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಿಗೆ ಸರ್ಕಾರ ಜಾರಿ ಮಾಡಲು ಹೊರಟಿರುವ ಕೆಸಿ ಹಾಗೂ ಎಚ್‍ಎನ್ ವ್ಯಾಲಿ ಯೋಜನೆಗಳನ್ನ ಕೈ ಬಿಡುವಂತೆ ಆಗ್ರಹಿಸಿ ಇಂದು ಚಿಕ್ಕಬಳ್ಳಾಪುರ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ.

    ಹೆಬ್ಬಾಳ-ನಾಗವಾರ ಏತ ನೀರಾವರಿ ಯೋಜನೆಯನ್ನ ವಿರೋಧಿಸಿ ಇಂದು ಬೆಳಗ್ಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿವೆ. ಚಿಕ್ಕಬಳ್ಳಾಪುರ ನಗರದ ಬಲಮುರಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೂ ಪಂಜಿನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸರ್ಕಾರ ಕೂಡಲೇ ಯೋಜನೆ ಕೈಬಿಡುವಂತೆ ಅಗ್ರಹಿಸಿದರು.

    ಬೆಂಗಳೂರಿನ ಹೆಬ್ಬಾಳ ಹಾಗೂ ನಾಗವಾರ ಕೆರೆಯ ನೀರನ್ನು ಸಂಸ್ಕರಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ 44 ಕರೆಗೆಳಿಗೆ ನೀರು ತುಂಬಿಸಲು ಸರ್ಕಾರ ಮುಂದಾಗಿದೆ. ಆದ್ರೆ ಸಂಸ್ಕರಿಸಿದ ನೀರು ಎಷ್ಟರ ಮಟ್ಟಿಗೆ ಸುರಕ್ಷಿತ ಅನ್ನೋ ಆತಂಕ ಪ್ರತಿಭಟನಕಾರರನ್ನ ಕಾಡುತ್ತಿದೆ. ಕೊಳಚೆ ನೀರಿನಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕಗಳಿದ್ದು, ಈ ಕೊಳಚೆ ನೀರು ನಮಗೆ ಬೇಡ. ಹೀಗಾಗಿ ಕೆಸಿ ವ್ಯಾಲಿ ಹಾಗೂ ಎಚ್‍ಎನ್ ವ್ಯಾಲಿ ಎರಡು ಯೋಜನೆಗಳನ್ನ ಸರ್ಕಾರ ರದ್ದು ಮಾಡಬೇಕು ಅಂತ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

    ಬಂದ್ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಂಘಟನೆಗಳ ಬಂದ್ ಗೆ ಶಾಸಕ ಸುಧಾಕರ್ ವಿರೋಧ ವ್ಯಕ್ತಪಡಿಸಿದ್ದು, ರಾಜಕೀಯ ದುರದ್ದೇಶದಿಂದ ಬಂದ್ ನಡೆಸಲಾಗ್ತಿದೆ. ಬಂದ್ ಗೆ ಸಹಕರಿಸಬೇಡಿ ಅಂತ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಸುಧಾಕರ್ ನೇತೃತ್ವದಲ್ಲಿ ಬಂದ್ ವಿರೋಧಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

  • ಕಾರವಾರ ಆಯ್ತು, ಈಗ ಶಿವಮೊಗ್ಗ ಸರದಿ- ಶಿರಸಿ ಬಳಿಕ ಪಕ್ಕದ ಸಾಗರ ಬಂದ್‍ ಗೆ ಕರೆ

    ಕಾರವಾರ ಆಯ್ತು, ಈಗ ಶಿವಮೊಗ್ಗ ಸರದಿ- ಶಿರಸಿ ಬಳಿಕ ಪಕ್ಕದ ಸಾಗರ ಬಂದ್‍ ಗೆ ಕರೆ

    ಶಿವಮೊಗ್ಗ: ಕಳೆದ ಮೂರ್ನಾಲ್ಕು ದಿನಗಳಿಂದ ಹೊತ್ತಿ ಉರಿದಿದ್ದ ಉತ್ತರ ಕನ್ನಡ ಇನ್ನೂ ಬೂದಿ ಮುಚ್ಚಿ ಕೆಂಡದಂತಿದೆ.

    ಸಿದ್ಧಾಪುರ, ಮುರುಡೇಶ್ವರದಲ್ಲಿ ಬಂದ್ ನ ವದಂತಿ ಹಬ್ಬಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಬಂದ್ ಕುರಿತಂತೆ ಸುಳ್ಳು ಸಂದೇಶಗಳು ಹರಿದಾಡುತ್ತಿದ್ದವು. ಆದರೆ ಯಾವುದೇ ಪಕ್ಷ ಅಧಿಕೃತವಾಗಿ ಬಂದ್ ಗೆ ಕರೆ ಕೊಟ್ಟಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ 3 ದಿನಗಳ ಕಾಲ ಸಭೆ, ಸಮಾರಂಭ, ಪ್ರತಿಭಟನೆಗಳಿಗೆ ನಿಷೇಧ ಹೇರಲಾಗಿದ್ದು, ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

    ಕುಮಟಾ ಮತ್ತು ಶಿರಸಿ ಸಹಜ ಸ್ಥಿತಿಗೆ ಮರಳುತ್ತಿದ್ದರೆ, ಮೇಸ್ತಾ ಸಾವು ಖಂಡಿಸಿ ಇವತ್ತು ಶಿವಮೊಗ್ಗ ಬಂದ್ ಗೆ ಸಂಘ ಪರಿವಾರ ಕರೆ ನೀಡಿದೆ. 144 ಸೆಕ್ಷನ್ ಜಾರಿ ಮಾಡಿ ಹೋರಾಟ ಕೈ ಬಿಡುವಂತೆ ಎಸಿ ಹಾಗೂ ಎಎಸ್ಪಿ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಗಿತ್ತು.

    ಆದರೆ ಏನೇ ಆದರೂ ಪ್ರತಿಭಟನೆ ನಿಶ್ಚಿತ ಎಂದು ಸಂಘ ಪರಿವಾರದ ನಾಯಕರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸಂಘ ಪರಿವಾರ ಇವತ್ತು ಗಣಪತಿ ದೇವಾಲಯದಿಂದ ಎಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.

  • ಸಹಜ ಸ್ಥಿತಿಯತ್ತ ಶಿರಸಿ-ಎಲ್ಲಿ ಏನಾಗುತ್ತೋ ಅನ್ನೋ ಭಯದಲ್ಲಿ ಪೊಲೀಸರು

    ಸಹಜ ಸ್ಥಿತಿಯತ್ತ ಶಿರಸಿ-ಎಲ್ಲಿ ಏನಾಗುತ್ತೋ ಅನ್ನೋ ಭಯದಲ್ಲಿ ಪೊಲೀಸರು

    -ಮುರುಡೇಶ್ವರ, ಯಲ್ಲಾಪುರದಲ್ಲಿ ಬಂದ್ ವದಂತಿ!

    ಕಾರವಾರ: ಬಂದ್ ಬಂದ್ ಬಂದ್. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಕಳೆದ ಐದು ದಿನಗಳಿಂದ ನಡೀತಿರೋ ಬಂದ್ ಗಳಿಂದ ಪೊಲೀಸರು ಹೈರಾಣಾಗಿ ಹೋಗಿದ್ದಾರೆ. ಇಂದು ಎಲ್ಲಿ ಗಲಾಟೆ ನಡೆಯುತ್ತೋ, ಎಲ್ಲಿ ಬಂದ್ ಆಗುತ್ತೋ ಅನ್ನೋ ಆತಂಕದಲ್ಲೇ ಪೊಲೀಸರು ಕಾಲ ಕಳೆಯುವಂತಾಗಿದೆ.

    ಅಲ್ಲದೆ ಈ ಮಧ್ಯೆ ಇಂದು ಮುರುಡೇಶ್ವರ ಮತ್ತು ಯಲ್ಲಾಪುರದಲ್ಲಿ ಬಂದ್ ಆಚರಿಸಲಾಗುತ್ತೆ ಅನ್ನೋ ವದಂತಿಗಳು ಹಬ್ಬಿವೆ. ಡಿಸೆಂಬರ್ 6ರಂದು ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳ ಉದ್ಘಾಟನೆಗಾಗಿ ಎರಡು ದಿನ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದರು. ಈ ವೇಳೆ ಚಂದಾವರದಲ್ಲಿ ಧ್ವಜದ ವಿಚಾರವಾಗಿ ಎರಡು ಕೋಮಿನವರ ನಡುವೆ ಗಲಾಟೆ ನಡೆದು ಅದು ಕೋಮುಗಲಭೆ ಬಣ್ಣ ಪಡಿತು.

    ಅಂದು ಕಾಣೆಯಾಗಿದ್ದ ಹಿಂದೂ ಯುವಕ ಪರೇಶ್ ಮೇಸ್ತ ಮೃತದೇಹ ಡಿಸೆಂಬರ್ 8ರಂದು ಕೆರೆಯಲ್ಲಿ ಪತ್ತೆಯಾಯ್ತು. ಇದಾದ ಬಳಿಕ ಉತ್ತರಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಯುವಕನನ್ನು ಅನ್ಯಧರ್ಮೀಯರೇ ಕೊಲೆ ಮಾಡಿದ್ದಾರೆಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ. ಹೀಗಾಗಿ ಹೊನ್ನಾವರ, ಕುಮಟಾದಲ್ಲಿ ನಡೆದಿದ್ದ ಬಂದ್‍ಗಳು ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು.

    ಅಷ್ಟೇ ಅಲ್ಲದೆ ಮಂಗಳವಾರ ಶಿರಸಿಯಲ್ಲಿ ನಡೆದ ಪ್ರತಿಭಟನೆಯಲ್ಲಿ 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿಪಾಸ್ತಿ ಹಾಳಾಗಿದ್ದು, ಪೊಲೀಸರು ಸೇರಿದಂತೆ 13 ಮಂದಿಗೆ ಗಾಯಗಳಾಗಿತ್ತು. ಇನ್ನು ಮಂಗಳವಾರ ನಿಷೇಧಾಜ್ಞೆ ಉಲ್ಲಂಘಿಸಿ ಯಾತ್ರೆ ಹೊರಟಿದ್ದ ಶಿರಸಿ ಶಾಸಕ ಕಾಗೇರಿ ಸೇರಿದಂತೆ 70 ಮಂದಿ ಹಿಂದೂ ನಾಯಕರನ್ನು ಬಂಧಿಸಲಾಯ್ತು.

    ಗಲಭೆ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ ಎಸ್‍ಎಸ್ ನಕುಲ್ ನೇತೃತ್ವದಲ್ಲಿ ಸಭೆ ನಡಿದಿದ್ದು, 11 ತಾಲೂಕಿನಲ್ಲಿಯೂ ಶಾಂತಿ ಸಭೆ ನಡೆಸುವಂತೆ ಎಸಿ ಹಾಗೂ ತಹಶೀಲ್ದಾರ್ ಗೆ ಮನವಿ ಮಾಡಿದ್ದಾರೆ. ಇನ್ನು ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಸಿಎಂ, ಇದೆಲ್ಲಾ ಸಂಘ ಪರಿವಾರಗಳ ಕಿತಾಪತಿ ಎಂದಿದ್ದಾರೆ.

    https://www.youtube.com/watch?v=dZ2QYyQX7lQ

    https://www.youtube.com/watch?v=6gDTIt2kztg

    https://www.youtube.com/watch?v=mLbtbTysyQg

    https://www.youtube.com/watch?v=wMhoBywNC5w

    https://www.youtube.com/watch?v=YWp8oHGTKro

    https://www.youtube.com/watch?v=l2bS6mJ_ysM

    https://www.youtube.com/watch?v=9GHFyRsVyyQ

    https://www.youtube.com/watch?v=N94xeWb2ryM

    https://www.youtube.com/watch?v=d2u3htXp_s4

     

  • ಬಿಜೆಪಿಯಿಂದ ಇಂದು ಹುಣಸೂರು ಬಂದ್ ಗೆ ಕರೆ- ರಸ್ತೆಗಿಳಿಯದ ಬಸ್‍ಗಳು, ಅಂಗಡಿ ಮುಂಗಟ್ಟುಗಳು ಬಂದ್

    ಬಿಜೆಪಿಯಿಂದ ಇಂದು ಹುಣಸೂರು ಬಂದ್ ಗೆ ಕರೆ- ರಸ್ತೆಗಿಳಿಯದ ಬಸ್‍ಗಳು, ಅಂಗಡಿ ಮುಂಗಟ್ಟುಗಳು ಬಂದ್

    ಮೈಸೂರು: ಹನುಮ ಜಯಂತಿ ಮೆರವಣಿಗೆಗೆ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಭಾನುವಾತರದಂದು ಕಲ್ಲು ತೂರಾಟ ನಡೆದಿದ್ದ ಹುಣಸೂರು ಪಟ್ಟಣದಲ್ಲಿ ಇಂದು ಬಂದ್ ಆಚರಿಸಲಾಗ್ತಿದೆ.

    ಹುಣಸೂರು ಬಂದ್‍ಗೆ ಬಿಜೆಪಿ ನಾಯಕರು ಕರೆ ನೀಡಿದ್ದು, ಕೆಲವೇ ಕ್ಷಣಗಳಲ್ಲಿ ಕೇಸರಿ ಪಡೆ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಲಿದೆ. ರಾತ್ರಿ ಬೇಲ್ ಮೇಲೆ ರಿಲೀಸ್ ಆದ ಸಂಸದ ಪ್ರತಾಪ ಸಿಂಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

    ಹುಣಸೂರು ಪಟ್ಟಣ ಬೆಳಗ್ಗೆಯಿಂದಲೇ ಬಿಕೋ ಎನ್ನುತ್ತಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಸರ್ಕಾರಿ ಬಸ್‍ಗಳು ಕೂಡ ರಸ್ತೆಗೆ ಇಳಿದಿಲ್ಲ. ಮುಂಜಾಗ್ರತಾ ಕ್ರಮವಾಗಿ ಹುಣಸೂರಿನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮೈಸೂರು ಜಿಲ್ಲಾಡಳಿತ ಹುಣಸೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.

    ಹುಣಸೂರಿನಲ್ಲಿ ಶಾಲಾ ಕಾಲೇಜುಗಳಿಗೆ ನಿನ್ನೆಯೇ ರಜೆ ಘೋಷಣೆ ಮಾಡಲಾಗಿದೆ.

  • ಟಿಪ್ಪು ಜಯಂತಿಗೆ ಮಡಿಕೇರಿಯಲ್ಲಿ ತೀವ್ರ ವಿರೋಧ – ಅಂಗಡಿಗಳು ಬಂದ್, ಮುಖ್ಯರಸ್ತೆಗೆ ಮರ ಕಡಿದು ಆಕ್ರೋಶ

    ಟಿಪ್ಪು ಜಯಂತಿಗೆ ಮಡಿಕೇರಿಯಲ್ಲಿ ತೀವ್ರ ವಿರೋಧ – ಅಂಗಡಿಗಳು ಬಂದ್, ಮುಖ್ಯರಸ್ತೆಗೆ ಮರ ಕಡಿದು ಆಕ್ರೋಶ

    ಮಡಿಕೇರಿ: ರಾಜ್ಯ ಸರ್ಕಾರ ನಿರ್ಧರಿಸಿರುವ ಟಿಪ್ಪು ಜಯಂತಿ ಆಚರಣೆಗೆ ಕೊಡಗು ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

    ಟಿಪ್ಪು ಜಯಂತಿ ಆಚರಣೆಗೆ ಕೊಡಗಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಇಂದು ಕೊಡಗು ಬಂದ್‍ಗೆ ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಮಂಜಿನ ನಗರಿ ಮಡಿಕೇರಿಯ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ. ಅಲ್ಲದೆ ಖಾಸಗಿ ಬಸ್‍ನವರು ಪ್ರಯಾಣಿಕರ ಹಿತದೃಷ್ಠಿಯಿಂದ ಬಸ್ ಸಂಚಾರ ಮಾಡುವುದಿಲ್ಲವೆಂದು ತಿಳಿಸಿದ್ದಾರೆ. ಇನ್ನು ಅಟೋ ಚಾಲಕರು, ಟ್ಯಾಕ್ಸಿ ಚಾಲಕರು ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಮಡಿಕೇರಿ ತಾಲೂಕಿನ ಕಡಗದಳು ಗ್ರಾಮದಲ್ಲಿ ಕಳೆದ ರಾತ್ರಿ ಮುಖ್ಯ ರಸ್ತೆಗಳಿಗೆ ಮರಗಳನ್ನು ಕಡಿದು ಹಾಕುವ ಮೂಲಕ ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡಲಾಗಿತ್ತು. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದ್ದಾರೆ.

    ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಪೋಲಿಸರೇ ಹೆಚ್ಚಾಗಿ ಕಂಡು ಬರುತ್ತಿದಾರೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ಕರಾಳ ದಿನ ಹಾಗೂ ಕಳೆದ ಬಾರಿ ಟಿಪ್ಪು ಜಯಂತಿ ಆಚರಣೆ ವೇಳೆ ಮೃತಪಟ್ಟ ಕುಟ್ಟಪ್ಪ ಹುತಾತ್ಮ ದಿನವನ್ನು ಆಚರಿಸಲು ನಿರ್ಧರಿಸಿದೆ.

    ವಿವಾದದ ಮಧ್ಯೆ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡ್ತಿದ್ದು, ಮಡಿಕೇರಿಯ ಕೋಟೆ ಸಭಾಂಗಣದಲ್ಲಿ ಟಿಪ್ಪು ಜಯಂತಿಗೆ ಸಿದ್ಧತೆ ಪೂರ್ಣಗೊಂಡಿದೆ. ಸಭಾಂಗಣದ ಸುತ್ತ ಪೊಲೀಸ್ ಭದ್ರತೆ ಮಾಡಲಾಗಿದೆ. ಅದರ ಜೊತೆಗೆ ಕಾರ್ಯಕ್ರಮ ನಡೆಯುವ ಟಿಪ್ಪು ಸಭಾಂಗಣದ ಸುತ್ತ 3 ಡ್ರೋನ್ ಕ್ಯಾಮೆರಾಗಳ ಬಳಕೆ ಮಾಡಲಾಗಿದೆ.

  • ದೇಶಾದ್ಯಂತ ಅಕ್ಟೋಬರ್ 13 ರಂದು ಪೆಟ್ರೋಲ್ ಬಂಕ್ ಬಂದ್

    ದೇಶಾದ್ಯಂತ ಅಕ್ಟೋಬರ್ 13 ರಂದು ಪೆಟ್ರೋಲ್ ಬಂಕ್ ಬಂದ್

    ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಅಕ್ಟೋಬರ್ 13 ರಂದು ದೇಶಾದ್ಯಂತ ಪೆಟ್ರೋಲ್ ಬಂಕ್ ಬಂದ್ ನಡೆಸಲಾಗುವುದು ಎಂದು ಪೆಟ್ರೋಲ್ ಡೀಸೆಲ್ ಡೀಲರ್ಸ್ ಆಸೋಸಿಯೇಷನ್ ತಿಳಿಸಿದೆ.

    ಸರ್ಕಾರವು ನಿತ್ಯ ದರದ ಪರಿಷ್ಕರಣೆಯನ್ನು ಕೈ ಬಿಡಲು ಹಾಗೂ ಅಪೂರ್ಣ ಚಂದ್ರ ಕಮೀಟಿ ವರದಿ ಜಾರಿಗೆ ಒತ್ತಾಯಿಸಿ, ಅಕ್ಟೋಬರ್ 12 ರ ಮಧ್ಯರಾತ್ರಿಯಿಂದ ಅಕ್ಟೋಬರ್ 13 ರ ದಿನವಿಡಿ ಪೆಟ್ರೋಲ್ ಬಂಕ್ ಬಂದ್ ನಡೆಸಲಾಗುತ್ತದೆ.

    ಕೇಂದ್ರ ಸರ್ಕಾರವು ಪೆಟ್ರೋಲ್-ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತೆಗೆದುಕೊಳ್ಳದಿದ್ದರೆ, ನಾವು ಅಕ್ಟೋಬರ್ 27 ರಿಂದ ನಮ್ಮ ಬೇಡಿಕೆ ಈಡೇರುವವರೆಗೂ ಅನಿರ್ಧಿಷ್ಟಾವಾಧಿ ಬಂದ್ ನಡೆಸುವುದಾಗಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪೆಟ್ರೋಲ್ ಡೀಸೆಲ್ ಡೀಲರ್ಸ್ ಆಸೋಸಿಯೇಷನ್ ರವೀಂದ್ರನಾಥ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.