Tag: ಬಂದ್

  • ಬೆಂಗಳೂರಿನಲ್ಲಿ ನಾಳೆ ಚಿತ್ರೋದ್ಯಮ ಬಂದ್: ಥಿಯೇಟರ್ ತೆರೆಯೋದಿಲ್ಲ

    ಬೆಂಗಳೂರಿನಲ್ಲಿ ನಾಳೆ ಚಿತ್ರೋದ್ಯಮ ಬಂದ್: ಥಿಯೇಟರ್ ತೆರೆಯೋದಿಲ್ಲ

    ಕಾವೇರಿ ನದಿ ನೀರು ವಿಚಾರವಾಗಿ ಹೋರಾಟ ಮಾಡುತ್ತಿರುವ ರೈತರ ಪರ ನಿಲ್ಲಲು ಕರ್ನಾಟಕ ಚಲನಚಿತ್ರ ವಾಣಿಜ್ಯ (Film Chamber) ಮಂಡಳಿ ನಿರ್ಧರಿಸಿದೆ. ನಾಳೆ ನಡೆಯುತ್ತಿರುವ ಬೆಂಗಳೂರು (Bangalore) ಬಂದ್ ಗೆ ಬೆಂಬಲವನ್ನೂ ನೀಡಿರುವ ವಾಣಿಜ್ಯ ಮಂಡಳಿಯು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೂ ಚಿತ್ರಮಂದಿರಗಳು ತೆರೆಯುವುದಿಲ್ಲ. ಬೆಂಗಳೂರಿನಲ್ಲಿ ಯಾವುದೇ ಸಿನಿಮಾ ಚಿತ್ರೀಕರಣ ಕೂಡ ಇರುವುದಿಲ್ಲ ಎಂದಿದ್ದಾರೆ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಮ್. ಸುರೇಶ್.

    ಕಾವೇರಿ ವಿಚಾರ  (Cauvery Protest) ಗಂಭೀರವಾದ ವಿಚಾರ. ಇದಕ್ಕಾಗಿ ನಮ್ಮ ಸಂಪೂರ್ಣ ಬೆಂಬಲ ಇರುತ್ತೆ. ಚಿತ್ರರಂಗದ ಎಲ್ಲಾ ಅಂಗ ಸಂಸ್ಥೆಗಳ ಜೊತೆ ಚರ್ಚೆ ಮಾಡಬೇಕು. ಕಲಾವಿದರನ್ನು ಭೇಟಿ ಮಾಡಬೇಕು. ಸಮಯದ ಅಭಾವ ತುಂಬಾ ಇದೆ. ಹೀಗಾಗಿ ರೂಪುರೇಷೆಯನ್ನು ಸಾಯಂಕಾಲ ತಿಳಿಸುತ್ತೇವೆ. ರೈತರ ಸಮಸ್ಯೆ ಇದು. ನೀರಿನ ಸಮಸ್ಯೆಗೆ ಸ್ಪಂದಿಸೋದು ನಮ್ಮ ಕರ್ತವ್ಯ. ಸರ್ಕಾರಕ್ಕೆ ಮನದಟ್ಟು ಆಗಬೇಕಂದ್ರೆ ಸಮಯಾವಕಾಶ ಬೇಕು ಎಂದಿದ್ದಾರೆ.

    ನಾಳೆಯ ಬೆಂಗಳೂರು ಬಂದ್ ಗೆ ಬೆಂಬಲವನ್ನೂ ಸೂಚಿಸಿರುವ ವಾಣಿಜ್ಯ ಮಂಡಳಿ, ಬೆಂಗಳೂರು ಸಿಟಿಯಲ್ಲಿ ಶೂಟಿಂಗ್ ನಡೆಯುವುದಿಲ್ಲ. ಬೆಂಗಳೂರು ಬಿಟ್ಟು ಹೊರಗೆ ಶೂಟಿಂಗ್ ಮಾಡ್ತಿರೋರಿಗೆ ತೊಂದರೆ ಇಲ್ಲ. ನಡ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗು ಚಿತ್ರಮಂದಿರಗಳನ್ನ ಬಂದ್ ಮಾಡ್ತೀವಿ ಎಂದಿದ್ದಾರೆ ಅಧ್ಯಕ್ಷರು.

    ರಾಜ್ಯದಲ್ಲಿ ವರುಣ ಕೃಪೆಯಿಲ್ಲದೆ ಕಾವೇರಿ ನೀರಿನ ಪ್ರಮಾಣ ಇಳಿಕೆಯಾಗಿದೆ ಈ ನಡುವೆ ತಮಿಳುನಾಡಿಗೆ ನೀರನ್ನು ಹರಿಯಲು ಬಿಟ್ಟಿದ್ದು ರಾಜ್ಯದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ವಿವಿಧ ರೈತ ಹಾಗೂ ಸಂಘಟನೆಗಳು ಹೋರಾಟ ನಡೆಸುತಿದ್ದು, ಕಾವೇರಿ ಹೋರಾಟಕ್ಕೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಹಿರಿಯ ನಟಿ ಎಂ.ಲೀಲಾವತಿ ಇಳಿದಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಮನೆಯಲ್ಲಿ ಮಾತನಾಡಿದ ಅವರು, ಕಾವೇರಿ ನಮ್ಮದು ಎಂದು ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ನಾನು ಸಹ ಕಾವೇರಿ ಹೋರಾಟಕ್ಕೆ ಹೊರಡುವೆ ನಮ್ಮ ಜಲ, ನಮ್ಮ ನೆಲ, ನಮ್ಮ ನುಡಿ, ಎಲ್ಲಾ ಕನ್ನಡಕೊಸ್ಕರ. ಕಾವೇರಿ ನೀರಿಗಾಗಿ ನಾನು ಹೋರಾಟಕ್ಕೆ ಬರುವೆ’ ಎಂದಿದ್ದಾರೆ. ನೆಲಮಂಗಲದ ಮನೆಯಿಂದ ಮಂಡ್ಯ ಪ್ರತಿಭಟನೆ ಸ್ಥಳಕ್ಕೆ ಮಗ ವಿನೋದ್ ರಾಜ್ ಜೊತೆಗೆ ಹೊರಟಿದ್ದಾರೆ.

    ಕಾವೇರಿ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಚಿತ್ರರಂಗದ ನಟ-ನಟಿಯರು ಕಾವೇರಿ ಹೋರಾಟಕ್ಕೆ ಸಾಥ್ ನೀಡುತ್ತಿಲ್ಲ ಎನ್ನುವ ಕೂಗು ಎದ್ದಿದೆ. ಈ ಬೆನ್ನಲ್ಲೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಕಾವೇರಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಮಾತನಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂಗಳವಾರ ಬೆಂಗಳೂರಿನಲ್ಲಿ ಎಂದಿನಂತೆ ಸಂಚರಿಸಲಿವೆ ಓಲಾ, ಊಬರ್

    ಮಂಗಳವಾರ ಬೆಂಗಳೂರಿನಲ್ಲಿ ಎಂದಿನಂತೆ ಸಂಚರಿಸಲಿವೆ ಓಲಾ, ಊಬರ್

    – ಸೆ.29ರ ಬಂದ್‌ಗೆ ಬೆಂಬಲ

    ಬೆಂಗಳೂರು: ಕಾವೇರಿ (Cauvery) ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಮಂಗಳವಾರ ನಡೆಯಲಿರುವ ಬಂದ್‌ಗೆ (Bengaluru Bandh) ನಮ್ಮ ಬೆಂಬಲ ಇಲ್ಲ. ನಾಳೆ ನಮ್ಮ ಸೇವೆಗಳು ಯಥಾಸ್ಥಿತಿಯಲ್ಲಿ ಇರಲಿವೆ ಎಂದು ಓಲಾ, ಊಬರ್ ಅಸೋಸಿಯೇಷನ್ (Ola, Uber Association) ಮಾಹಿತಿ ನೀಡಿದೆ.

    ಸೋಮವಾರ ಕನ್ನಡಪರ ಹಾಗೂ ಅನೇಕ ವಿವಿಧ ಸಂಘಟನೆಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಓಲಾ, ಊಬರ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್, ನಾಳಿನ ಬಂದ್‌ಗೆ ನಮ್ಮ ಬೆಂಬಲ ಇಲ್ಲ. ಆದರೆ ಸೆಪ್ಟೆಂಬರ್ 29ರಂದು ನಡೆಯಲಿರುವ ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಲೆಕ್ಕಿಸದೆ ಕಾವೇರಿಗಾಗಿ ಮಂಡ್ಯಕ್ಕೆ ಹೊರಟ ನಟಿ ಲೀಲಾವತಿ

    ಬೆಂಗಳೂರಿನಲ್ಲಿ 1 ಲಕ್ಷಕ್ಕೂ ಅಧಿಕ ಓಲಾ, ಊಬರ್ ಆಟೋಗಳು ನಿತ್ಯ ಸಂಚಾರ ನಡೆಸುತ್ತವೆ. 48 ಸಾವಿರ ಟ್ಯಾಕ್ಸಿಗಳು ಓಡಾಡುತ್ತವೆ. 3 ಸಾವಿರ ಕ್ಯೂಟ್ ವಾಹನಗಳು (ಸಣ್ಣ ಪ್ರಮಾಣದ ವಾಹನಗಳು) ಕೂಡ ಎಂದಿನಂತೆ ಓಡಾಟ ನಡೆಸಲಿವೆ. ಆದರೆ ಸೆಪ್ಟೆಂಬರ್ 29ಕ್ಕೆ ನಡೆಯಲಿರುವ ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಓಲಾ ಊಬರ್ ಅಸೋಸಿಯೇಷನ್ ತಿಳಿಸಿದೆ. ಇದನ್ನೂ ಓದಿ: ಶಾಂತಿಯುತ ಬಂದ್‌ಗೆ ಸರ್ಕಾರ ಅಡಚಣೆ ಮಾಡಲ್ಲ: ಡಿಕೆಶಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೆ.29 ಅಖಂಡ ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಘೋಷಣೆ

    ಸೆ.29 ಅಖಂಡ ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಘೋಷಣೆ

    ಬೆಂಗಳೂರು: ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್ (Karnataka Bandh) ಇರಲಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಘೋಷಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಕನ್ನಡ ಒಕ್ಕೂಟ ಮಾಡುತ್ತಿರುವ ಬಂದ್. ಹೀಗಾಗಿ ಅಖಂಡ ಕರ್ನಾಟ ಬಂದ್ ಇರಲಿದೆ. ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್‌ನ ಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸೆ.26ರಂದು ಬೆಂಗಳೂರು ಬಂದ್ ಜೊತೆಗೆ ರಾಮನಗರ ಬಂದ್ – ಹಲವು ಸಂಘಟನೆಗಳ ಬೆಂಬಲ

    ಸೋಮವಾರ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಸಂಪೂರ್ಣ ತೀರ್ಮಾನಕ್ಕೆ ಬರುತ್ತೇವೆ. ಸೆಪ್ಟೆಂಬರ್ 29ರಂದು ಕನ್ನಡ ಒಕ್ಕೂಟದ ಆಶ್ರಯದಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಸಾಹಿತಿಗಳು, ವ್ಯಾಪಾರಿಗಳು ಎಲ್ಲರೂ ಇದಕ್ಕೆ ಬೆಂಬಲ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಮತ್ತಷ್ಟು ನೀರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೆ.26ರಂದು ಬೆಂಗಳೂರು ಬಂದ್ ಜೊತೆಗೆ ರಾಮನಗರ ಬಂದ್ – ಹಲವು ಸಂಘಟನೆಗಳ ಬೆಂಬಲ

    ಸೆ.26ರಂದು ಬೆಂಗಳೂರು ಬಂದ್ ಜೊತೆಗೆ ರಾಮನಗರ ಬಂದ್ – ಹಲವು ಸಂಘಟನೆಗಳ ಬೆಂಬಲ

    ರಾಮನಗರ: ರೇಷ್ಮೆನಗರಿ ರಾಮನಗರದಲ್ಲೂ (Ramanagara) ಕಾವೇರಿ ಕಿಚ್ಚು ಹೆಚ್ಚಾಗಿದೆ. ಸೆ.26ರಂದು ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿರುವ ಹಿನ್ನೆಲೆ ರಾಮನಗರ ಬಂದ್‌ಗೂ ಕರೆ ನೀಡಲಾಗಿದೆ.

    ರಾಮನಗರದ ರೈತ ಹಾಗೂ ಕನ್ನಡಪರ ಸಂಘಟನೆಗಳಿಂದ (Pro Kannada Organizations) ಬಂದ್‌ಗೆ ಕರೆ ನೀಡಲಾಗಿದ್ದು, ಇಂದು ರಾಮನಗರದ ರೈತ ಭವನದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ. ರಾಮನಗರ, ಚನ್ನಪಟ್ಟಣ, ಬಿಡದಿ ಪಟ್ಟಣವನ್ನು ಸಂಪೂರ್ಣ ಸ್ತಬ್ಧ ಮಾಡಲು ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ, ವಕೀಲರ ಸಂಘ, ಆಟೋ ಚಾಲಕರ ಸಂಘ ಸೇರಿ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಇದನ್ನೂ ಓದಿ: ಬೆಂಗಳೂರು ಬಂದ್‌ನಿಂದ ಸಮಸ್ಯೆ ಪರಿಹಾರ ಆಗಲ್ಲ, ಬಂದ್ ಕೈಬಿಡಿ: ಪರಮೇಶ್ವರ್ ಮನವಿ

    ಸೆ.26 ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮೆಡಿಕಲ್, ಆಸ್ಪತ್ರೆ, ಹಾಲಿನ ಅಂಗಡಿ, ರೇಷ್ಮೆ ಮಾರುಕಟ್ಟೆ ಹೊರತುಪಡಿಸಿ ಉಳಿದೆಲ್ಲಾ ಸೇವೆ ಸ್ಥಗಿತ ಮಾಡಲು ನಿರ್ಧರಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ಎಪಿಎಂಸಿ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಿ ಹಳೇ ಬೆಂ-ಮೈ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳು ಸಿದ್ಧತೆ ನಡೆಸಿವೆ. ಇದನ್ನೂ ಓದಿ: ಬಿಎಸ್‌ವೈ ಭೇಟಿ ಮಾಡಿದ ನಿಖಿಲ್ ಕುಮಾರಸ್ವಾಮಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂಗಳವಾರ ಬೆಂಗಳೂರು ಬಂದ್ ಇರುತ್ತಾ? – ಕನ್ನಡ ಸಂಘಟನೆಗಳಿಂದ ತಟಸ್ಥ ಧೋರಣೆ

    ಮಂಗಳವಾರ ಬೆಂಗಳೂರು ಬಂದ್ ಇರುತ್ತಾ? – ಕನ್ನಡ ಸಂಘಟನೆಗಳಿಂದ ತಟಸ್ಥ ಧೋರಣೆ

    ಬೆಂಗಳೂರು: ಕಾವೇರಿ ನೀರಿನ ವಿಚಾರವಾಗಿ ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ (Kuruburu Shanthakumar) ನೇತೃತ್ವದಲ್ಲಿ ಜಲ ಸಂರಕ್ಷಣಾ ಸಮಿತಿಯಿಂದ (Water Conservation Committee) ಮಂಗಳವಾರ ಬಂದ್‌ಗೆ ಕರೆ ನೀಡಲಾಗಿದ್ದು, ಕನ್ನಡ ಪರ ಸಂಘಟನೆಗಳು (Pro-Kannada Organization) ಈ ವಿಚಾರವಾಗಿ ತಟಸ್ಥ ಧೋರಣೆ ತಾಳಿವೆ.

    ಮಂಗಳವಾರ ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ಪ್ರವೀಣ್ ಶೆಟ್ಟಿ (Praveen Shetty) ಬಣ ಹೇಳಿದೆ. ಸದ್ಯಕ್ಕೆ ಕನ್ನಡ ಸಂಘಟನೆಗಳಿಂದ ಮಂಗಳವಾರ ಬಂದ್ ಬಗ್ಗೆ ಬೆಂಬಲವಿಲ್ಲ. ಬೇರೆ ದಿನಾಂಕದಂದು ಬಂದ್ ಘೋಷಣೆಯಾಗಬೇಕಿತ್ತು. ಮಂಗಳವಾರ ಕರೆ ನೀಡಿದ್ದು ಬಹಳ ಬೇಗ ಆಯ್ತು. ಎಲ್ಲರನ್ನೂ ಒಟ್ಟುಗೂಡಿಸಲು ಕಷ್ಟ ಆಗಬಹುದು ಎಂದು ಕನ್ನಡ ಸಂಘಟನೆಗಳ ಮುಖಂಡರು ಹೇಳುತ್ತಿದ್ದಾರೆ. ಇದನ್ನೂ ಓದಿ: ಗೋಮಾಂಸ ಸಾಗಾಟ ಮಾಡುತ್ತಿದ್ದ ಕಾರಿಗೆ ಬೆಂಕಿ ಹಚ್ಚಿದ ಶ್ರೀರಾಮ ಸೇನೆ

    ಈ ಕುರಿತು ಕರವೇ ನಾರಾಯಣಗೌಡ ಬಣ, ಕರವೇ ಪ್ರವೀಣ್ ಶೆಟ್ಟಿ ಬಣ, ಕರವೇ ಶಿವರಾಮೇಗೌಡ ಬಣ, ಸೇರಿ ಹಲವು ಕನ್ನಡಪರ ಸಂಘಟನೆಗಳಿಂದ ಬಂದ್ ಬಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಇದನ್ನೂ ಓದಿ: ಬಂದ್ ಮಾಡಿದರೆ ಬ್ರ್ಯಾಂಡ್‌ ಬೆಂಗಳೂರಿಗೆ ಧಕ್ಕೆ – ಡಿಕೆಶಿ ಹೇಳಿಕೆಗೆ ಆಕ್ರೋಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾವೇರಿ, ಹೇಮಾವತಿ ನೀರಿಗಾಗಿ ಮಂಗಳವಾರ ಕೆಆರ್ ಪೇಟೆ ಬಂದ್

    ಕಾವೇರಿ, ಹೇಮಾವತಿ ನೀರಿಗಾಗಿ ಮಂಗಳವಾರ ಕೆಆರ್ ಪೇಟೆ ಬಂದ್

    ಮಂಡ್ಯ: ಕಾವೇರಿ (Cauvery) ಮತ್ತು ಹೇಮಾವತಿ (Hemavati) ನೀರಿಗಾಗಿ ಸೆಪ್ಟೆಂಬರ್ 26ರಂದು ಕೆಆರ್ ಪೇಟೆ (KR Pete) ಬಂದ್‌ಗೆ (Bandh) ಕರೆ ನೀಡಲಾಗಿದೆ.

    ಕಾವೇರಿ ನೀರಿನ ಜೊತೆಗೆ ಹೇಮಾವತಿ ನೀರು ಉಳಿವಿಗಾಗಿ ಬಂದ್‌ಗೆ ಕರೆ ನೀಡಲಾಗಿದೆ. ರೈತ, ಕನ್ನಡ, ದಲಿತ, ಪ್ರಗತಿಪರ ಸಂಘಟನೆಗಳು ಬದ್‌ಗೆ ಕರೆ ನೀಡಿವೆ. ಈ ಬಂದ್‌ಗೆ ಜೆಡಿಎಸ್ ಹಾಗೂ ಬಿಜೆಪಿಯೂ ಬೆಂಬಲ ಸೂಚಿಸಿವೆ. ಇದನ್ನೂ ಓದಿ: ಗೋಮಾಂಸ ಸಾಗಾಟ ಮಾಡುತ್ತಿದ್ದ ಕಾರಿಗೆ ಬೆಂಕಿ ಹಚ್ಚಿದ ಶ್ರೀರಾಮ ಸೇನೆ

    ಕೆಆರ್ ಪೇಟೆ ಭಾಗದಲ್ಲಿ ಉಪಯೋಗಕ್ಕೆ ಸಿಗುವುದು ಹೇಮಾವತಿ ನೀರು. ಕೆಆರ್‌ಎಸ್ ಡ್ಯಾಂನಲ್ಲಿ ನೀರು ಖಾಲಿಯಾದರೆ ಹೇಮಾವತಿಯಿಂದ ನೀರು ಬಿಡುಗಡೆಯಾಗಲಿದೆ. ಆಗ ಎರಡೂ ಡ್ಯಾಂನ ನೀರು ಖಾಲಿಯಾಗುವ ಆತಂಕ ಎದುರಾಗಿದೆ. ಹೀಗಾಗಿ ಎರಡು ಡ್ಯಾಂ ನೀರು ರಕ್ಷಣೆಗೆ ಆಗ್ರಹಿಸಿ ಕೆಆರ್ ಪೇಟೆ ಬಂದ್‌ಗೆ ಕರೆ ನೀಡಲಾಗಿದೆ. ಇದನ್ನೂ ಓದಿ: ಬಂದ್ ಮಾಡಿದರೆ ಬ್ರ್ಯಾಂಡ್‌ ಬೆಂಗಳೂರಿಗೆ ಧಕ್ಕೆ – ಡಿಕೆಶಿ ಹೇಳಿಕೆಗೆ ಆಕ್ರೋಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾವೇರಿ ಹೋರಾಟಕ್ಕೆ ಬೆಂಬಲಿಸಿ ಮಂಡ್ಯ ಚಿತ್ರಮಂದಿರಗಳು ಬಂದ್

    ಕಾವೇರಿ ಹೋರಾಟಕ್ಕೆ ಬೆಂಬಲಿಸಿ ಮಂಡ್ಯ ಚಿತ್ರಮಂದಿರಗಳು ಬಂದ್

    ಕಾವೇರಿ ನದಿ ನೀರು ಹೋರಾಟಕ್ಕೆ ಸಂಬಂಧಿಸಿದಂತೆ ಇಂದು ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟಕ್ಕೆ (Cauvery Protest) ಮಂಡ್ಯ ಥಿಯೇಟರ್ (theater) ಮಾಲೀಕರು ಕೂಡ ಬೆಂಬಲ ಸೂಚಿಸಿದ್ದಾರೆ. ಚಿತ್ರಮಂದಿರಗಳನ್ನು ಬಂದ್ ಮಾಡುವ ಮೂಲಕ ಹೋರಾಟಕ್ಕೆ ಇಳಿದಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್ ಮಾಡಿದರೆ, ರಾಜ್ಯಾದ್ಯಂತ ಚಿತ್ರಮಂದಿರಗಳು ಕೂಡ ಬಂದ್ ಆಗಲಿವೆ.

    ಸ್ಯಾಂಡಲ್ ವುಡ್ ನಟ ನಟಿಯರು ಸೋಷಿಯಲ್ ಮೀಡಿಯಾ ಮೂಲಕ ಮಂಡ್ಯ (Mandya) ಭಾಗದ ರೈತರ ಪರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರೆ, ನಟ ಅಭಿಷೇಕ್ ಅಂಬರೀಶ್ (Abhishek Ambarish) ನೇರವಾಗಿ ರೈತರ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

    ಕಾವೇರಿ (Cauvery) ಹೋರಾಟಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅಂಬರೀಶ್ ಅವರು ತಮ್ಮ ಕೇಂದ್ರ ಮಂತ್ರಿ ಸ್ಥಾನವನ್ನೇ ತ್ಯಜಿಸಿದ್ದರು. ನಂತರ ಮಂಡ್ಯದ ಎಂಪಿ ಆಗಿರುವ ನಟಿ ಸುಮಲತಾ ಅಂಬರೀಶ್ ಕೂಡ ಹಲವು ದಿನಗಳಿಂದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದೀಗ ಅವರ ಪುತ್ರ ಅಭಿಷೇಕ್ ಕೂಡ ನೇರವಾಗಿ ಹೋರಾಟಕ್ಕೆ ಇಳಿಸಿದ್ದಾರೆ.

    ನಟ, ಯುವರಾಜಕಾರಣಿ ನಟ ನಿಖಿಲ್ ಕುಮಾರ್, ಕಾವೇರಿ ನೀರು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿರೋ ನಿಖಿಲ್, ‘ಕಾವೇರಿ ಕನ್ನಡಿಗರ ಹಕ್ಕು. ಕಾವೇರಿ ಕನ್ನಡಿಗರ ಜೀವನಾಡಿ, ಈ ವಿಷಯದಲ್ಲಿ ಅನ್ಯಾಯ ಸಹಿಸುವುದಿಲ್ಲ ಹಾಗೂ ರಾಜಿ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.

    ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಆಡುತ್ತಿರುವ ಕಪಟ ನಾಟಕ ಸಾಕು. ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸುವ ಯಾವುದೇ ಕೃತ್ಯವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ರಾಜ್ಯದಲ್ಲಿ ನೀರಿನ ಕೊರತೆ ಇದೆ ಮಳೆ ಕೈಕೊಟ್ಟಿದೆ. ಜಲಾಶಯಗಳು ಬರಿದಾಗಿವೆ. ಆದರೂ ತಮಿಳುನಾಡಿಗೆ ರಾಜ್ಯ ಸರಕಾರ ಏಕಪಕ್ಷೀಯವಾಗಿ ನೀರು ಹರಿಸಿದ್ದು ಅಕ್ಷಮ್ಯ. ಬ್ರಿಟೀಷರ ಕಾಲದಲ್ಲಿಯೇ ಶುರುವಾದ ಅನ್ಯಾಯದ ಪರಂಪರೆಯನ್ನು ನಮ್ಮ ರಾಜ್ಯ ಸರಕಾರವೇ ಮುಂದುವರಿಸಿದೆ ಎಂದು ಬರೆದುಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದು ಮಂಡ್ಯ, ಮದ್ದೂರ್ ಬಂದ್- ಪೊಲೀಸ್ ಬಿಗಿ ಭದ್ರತೆ

    ಇಂದು ಮಂಡ್ಯ, ಮದ್ದೂರ್ ಬಂದ್- ಪೊಲೀಸ್ ಬಿಗಿ ಭದ್ರತೆ

    ಮಂಡ್ಯ: ಕಾವೇರಿ (Cauvery Water) ಕಿಚ್ಚು ಹೆಚ್ಚಾಗುತ್ತಿದ್ದು, ಇಂದು ಮಂಡ್ಯ ಹಾಗೂ ಮದ್ದೂರ್ ಬಂದ್ (Mandya & Maddur Bandh) ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ.

    ಸುಪ್ರೀಂ ಕೋರ್ಟ್ (Supreme Court) ಆದೇಶ ವಿರೋಧಿಸಿ ಇಂದು ರೈತ, ಕನ್ನಡ ಪರ, ಪ್ರಗತಿ ಪರ ಸಂಘಟನೆಗಳಿಂದ ಮಂಡ್ಯ ನಗರ ಹಾಗೂ ಮದ್ದೂರು ಪಟ್ಟಣ ಬಂದ್‍ಗೆ ಕರೆ ನೀಡಿವೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಎರಡೂ ನಗರಗಳು ಸಂಪೂರ್ಣ ಸ್ಥಬ್ದವಾಗಲಿದೆ. ವರ್ತಕರ ಸಂಘ, ಹೋಟೆಲ್, ಪೆಟ್ರೋಲ್ ಬಂಕ್ ಮಾಲೀಕರು, ಆಟೋ ಚಾಲಕರು, ಖಾಸಗಿ ಬಸ್, ಲಾರಿ ಮಾಲೀಕರು ಸಂಘಗಳು ಬೆಂಬಲ ಸೂಚಿಸಿದ್ದು. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಿಂದಲೂ ಬಂದ್ ಬೆಂಬಲಿಸಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.

    ಬೆಳಗ್ಗೆ 8ಗಂಟೆಗೆ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬಳಿಕ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಲಿದ್ದು, ಮತ್ತೊಂದು ತಂಡದಿಂದ ನಗರದ ಹಲವು ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಯಲಿದೆ. ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಬೆಂಬಲಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಲಿದ್ದಾರೆ. ಇದನ್ನೂ ಓದಿ: ಕಾವೇರಿಗಾಗಿ ಶನಿವಾರ ಮಂಡ್ಯ ಬಂದ್ – ಏನಿರುತ್ತೆ? ಏನಿರಲ್ಲ?

    10 ಗಂಟೆಗೆ ಸಂಜಯ ವೃತ್ತದಲ್ಲಿ ಪ್ರತಿಭಟನೆ, ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದ್ದು, ರೈತ ಸಂಘ, ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ. ಮದ್ದೂರಿನಲ್ಲಿ ಬೆಳಗ್ಗೆ 9 ಗಂಟೆಗೆ ಪ್ರತಿಭಟನೆ ಆರಂಭವಾಗಲಿದೆ. ಮದ್ದೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಬೈಕ್ ರ್ಯಾಲಿ, ಬಳಿಕ ಮದ್ದೂರಿನ ಕೊಲ್ಲಿ ಸರ್ಕಲ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

    ಬಂದ್ ಹಿನ್ನೆಲೆ ಎರಡೂ ನಗರಗಳಲ್ಲಿ ಖಾಕಿ ಅಲರ್ಟ್ ಆಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಅಹಿತಕರ ಘಟನೆ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಕ್ಕೆ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಎಸ್‍ಪಿ, ಎಎಸ್‍ಪಿ, ಮೂವರು ಡಿವೈಎಸ್‍ಪಿ, ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಸೇರಿ 400 ಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಡಲಾಗಿದೆ. ಜೊತೆಗೆ 6 ಕೆ.ಎಸ್.ಆರ್.ಪಿ, 5 ಡಿಎಆರ್ ತುಕಡಿ ನಿಯೋಜಿಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದು ಬಂಡೀಪುರದಲ್ಲಿ ಪ್ರವಾಸಿಗರಿಗೆ ಸಫಾರಿ ಬಂದ್

    ಇಂದು ಬಂಡೀಪುರದಲ್ಲಿ ಪ್ರವಾಸಿಗರಿಗೆ ಸಫಾರಿ ಬಂದ್

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಹುಲಿಸಂರಕ್ಷಿತಾರಣ್ಯ ಬಂಡೀಪುರದಲ್ಲಿ (Bandipura) ಇಂದು (ಬುಧವಾರ) ಒಂದು ದಿನದ ಮಟ್ಟಿಗೆ ಸಫಾರಿ ಬಂದ್ ಮಾಡಲಾಗಿದೆ.

    ಇಂದು (ಸೆ.20) ಸಫಾರಿ ಪಾಯಿಂಟ್ ಮೇಲುಕಾಮನಹಳ್ಳಿಯಲ್ಲಿ ಬಂಡೀಪುರದ ಅರಣ್ಯ ಮುಂಚೂಣಿ ಸಿಬ್ಬಂದಿಗಳ ದಿನಾಚರಣೆ ಆಚರಿಸಲಾಗುತ್ತಿದೆ. ಆ ಹಿನ್ನೆಲೆ ಬಂಡೀಪುರದ ಅರಣ್ಯ ಸಿಬ್ಬಂದಿ ಸೇವೆ, ಸಾಧನೆ ಸ್ಮರಿಸಿ ಗೌರವ ಸಲ್ಲಿಕೆ ಮಾಡಲಾಗುತ್ತದೆ. ಇದನ್ನೂ ಓದಿ: ಹಾಲಶ್ರೀ ಬಂಧಿಸಲು ಅರ್ಚಕರ ವೇಷದಲ್ಲಿ ಫೀಲ್ಡ್‌ಗಿಳಿದಿದ್ದ ಅಧಿಕಾರಿಗಳು!

    ಈ ವೇಳೆ ಬಂಡೀಪುರದ ಬಹುತೇಕ ಎಲ್ಲಾ ಸಿಬ್ಬಂದಿ ಕೂಡ ಪಾಲ್ಗೊಳ್ಳುತ್ತಾರೆ. ಅರಣ್ಯ ಸಿಬ್ಬಂದಿಗಳಿಗೆ ಮೊದಲ ಬಾರಿಗೆ ಗೌರವ ಕೊಡಲು ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹೀಗಾಗಿ ಪ್ರವಾಸಿಗರಿಗೆ ಸಫಾರಿ ಬಂದ್ ಮಾಡಿರುವ ಕುರಿತು ಬಂಡೀಪುರ ಹುಲಿಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಮಾಹಿತಿ ಕೊಟ್ಟಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಧ್ಯರಾತ್ರಿಯಿಂದ್ಲೇ ಬಂದ್ ಬಿಸಿ- ಸೋಮವಾರ ಆಟೋ, ಟ್ಯಾಕ್ಸಿ ಸಿಗೋದು ಅನುಮಾನ

    ಮಧ್ಯರಾತ್ರಿಯಿಂದ್ಲೇ ಬಂದ್ ಬಿಸಿ- ಸೋಮವಾರ ಆಟೋ, ಟ್ಯಾಕ್ಸಿ ಸಿಗೋದು ಅನುಮಾನ

    ಬೆಂಗಳೂರು: ಸೋಮವಾರ ಬೆಂಗಳೂರು ಭಾಗಶಃ ಬಂದ್ ಆಗುವ ಸಂಭವ ಇದೆ. ಕಾರಣ ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್‌ಗೆ ಕರೆ ನೀಡಿದೆ.

    ಇಂದು ಮಧ್ಯರಾತ್ರಿಯಿಂದ್ಲೇ ಬಂದ್ ಬಿಸಿ ಶುರುವಾಗಿದೆ, ಆಟೋ, ಟ್ಯಾಕ್ಸಿ, ಗೂಡ್ಸ್, ಖಾಸಗಿ ಬಸ್ ಸೇರಿ ವಿವಿಧ ಮಾದರಿಯ ಖಾಸಗಿ ಸಾರಿಗೆಯ ವಾಹನಗಳು ರಸ್ತೆಗೆ ಇಳಿಯಲ್ಲ. ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಒಕ್ಕೂಟ ಆಯೋಜಿಸಿದೆ. ಬಂದ್ ಯಶಸ್ಸಿಗಾಗಿ ಒಕ್ಕೂಟ ಪಣತೊಟ್ಟಿದೆ. ಇದನ್ನೂ ಓದಿ: ಭಾರತ ಎಂಬ ಮರುನಾಮಕರಣವನ್ನು ವಿರೋಧಿಸುವವರು ದೇಶ ತೊರೆಯಬಹುದು: ಬಿಜೆಪಿ ಎಂಪಿ

    ಬೆಂಗಳೂರಿನ ಕಲಾಸಿಪಾಳ್ಯ ಖಾಸಗಿ ಬಸ್ ನಿಲ್ದಾಣದ ಒಂದರಲ್ಲೇ  250ಕ್ಕೂ ಹೆಚ್ಚು ಬಸ್ ಸ್ತಬ್ದವಾಗಲಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ನೆರೆಯ ಜಿಲ್ಲೆಗಳ ಖಾಸಗಿ ಬಸ್ ಮಾಲೀಕರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಇದರ ಪರಿಣಾಮ ಬೆಂಗಳೂರು ಜನಜೀವನದ ಮೇಲೆ ಸ್ವಲ್ಪ ಮಟ್ಟಿಗೆ ಬೀರುವ ಸಂಭವ ಇದೆ. ಇದನ್ನೂ ಓದಿ: ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ, ಹೋರಾಟ ಮಾಡೋದು ನೌಕರರ ಹಕ್ಕು: ರಾಮಲಿಂಗಾ ರೆಡ್ಡಿ

    ಏನೆಲ್ಲಾ ಇರಲ್ಲ?: ಆಟೋ, ಖಾಸಗಿ ಟ್ಯಾಕ್ಸಿ, ಏರ್‌ಪೋರ್ಟ್ ಟ್ಯಾಕ್ಸಿ, ಶಾಲೆಗಳ ಖಾಸಗಿ ವಾಹನ, ಖಾಸಗಿ ಬಸ್ ಹಾಗೂ ಗೂಡ್ಸ್ ವಾಹನ ಇರಲ್ಲ.
    ಖಾಸಗಿ ಬಸ್ ಎಫೆಕ್ಟ್ ಎಲ್ಲಿ?: ಬೆಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ಬಳ್ಳಾರಿಯಲ್ಲಿ ಖಾಸಗಿ ಬಸ್ ಎಫೆಕ್ಟ್ ಬೀಳಲಿದೆ.