Tag: ಬಂದ್

  • Kolar | ಮಾವಿನ ಹಣ್ಣಿಗೆ ಬೆಲೆ ಕುಸಿತ – ಇಂದು ಶ್ರೀನಿವಾಸಪುರ ತಾಲೂಕು ಬಂದ್

    Kolar | ಮಾವಿನ ಹಣ್ಣಿಗೆ ಬೆಲೆ ಕುಸಿತ – ಇಂದು ಶ್ರೀನಿವಾಸಪುರ ತಾಲೂಕು ಬಂದ್

    -ರಸ್ತೆಯಲ್ಲಿ ಮಾವು ಸುರಿದು ರೈತರ ಆಕ್ರೋಶ

    ಕೋಲಾರ: ಹಣ್ಣುಗಳ ರಾಜ ಮಾವಿನ ಹಣ್ಣಿಗೆ (Mango) ಬೆಲೆ ಕುಸಿದ ಹಿನ್ನೆಲೆ ಇಂದು ಕೋಲಾರದ (Kolar) ಶ್ರೀನೀವಾಸಪುರ (Srinivaspur) ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ.

    ಮಾವು ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಬಂದ್‌ಗೆ ಕರೆ ನೀಡಿದ್ದು, ಮಾವು ಬೆಳೆಗಾರರರು ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಸಾಥ್ ಕೊಟ್ಟಿವೆ. ಮಾವು ಬೆಳೆಗೆ ಬೆಲೆ ಕುಸಿತ ಹಿನ್ನೆಲೆ ಕಂಗಾಲಾಗಿರುವ ಮಾವು ಬೆಳೆಗಾರರು, ಆಂದ್ರಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಬಂದ್‌ಗೆ ಕರೆ ಕೊಡಲಾಗಿದೆ. ಮಾವು ಬೆಳೆಗಾರರ ಬಂದ್‌ಗೆ ಬಿಜೆಪಿ, ಜೆಡಿಎಸ್ ಸೇರಿ ಹಲವು ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ. ಒಂದು ಟನ್ ಮಾವು 3 ರಿಂದ 4 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಲಾಗಿದೆ. ಇದನ್ನೂ ಓದಿ: ತಾಂತ್ರಿಕ ದೋಷ – ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ ಮುಂದೂಡಿಕೆ

    ಇನ್ನು ಶ್ರೀನಿವಾಸಪುರದಲ್ಲಿ ಮಾವು ರಸ್ತೆಯಲ್ಲಿ ಸುರಿದು ರೈತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸಪುರದ ಬಸ್ ನಿಲ್ದಾಣದಲ್ಲಿ ಮಾವು ರಸ್ತೆಯಲ್ಲಿ ಸುರಿದು ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಇದನ್ನೂ ಓದಿ: ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿ

  • ಹಾವೇರಿ | ಹಿಂದೂ ಯುವತಿ ಸ್ವಾತಿ ಹತ್ಯೆ ಖಂಡಿಸಿ ಮಾ.17 ರಂದು ಮಾಸೂರು ಬಂದ್‌ಗೆ ಕರೆ

    ಹಾವೇರಿ | ಹಿಂದೂ ಯುವತಿ ಸ್ವಾತಿ ಹತ್ಯೆ ಖಂಡಿಸಿ ಮಾ.17 ರಂದು ಮಾಸೂರು ಬಂದ್‌ಗೆ ಕರೆ

    ಹಾವೇರಿ: ಹಿಂದೂ ಯುವತಿ ಸ್ವಾತಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಮಾ.17 ರಂದು ಮಾಸೂರು (Masur) ಪಟ್ಟಣ ಬಂದ್‌ಗೆ ಕರೆ ನೀಡಿದೆ.

    ಅಮಾಯಕ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು ನಂತರ ಅಮಾನವೀಯವಾಗಿ ಕೊಲೆ ಮಾಡಿದ್ದಾರೆ. ಇವರಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ನಾಳೆ (ಮಾ.17) ಜಿಲ್ಲೆಯಾದ್ಯಂತ ಪ್ರತಿಭಟನೆ ಹಾಗೂ ಮಾಸೂರು ಬಂದ್‌ಗೆ ಕರೆ ಕೊಟ್ಟಿವೆ. ಅಲ್ಲದೇ ಮಾಲೀಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟನ್ನು ಮುಚ್ಚಿ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿವೆ. ಇದನ್ನೂ ಓದಿ: ‘ಜಗದೋದ್ಧಾರನಾ ಆಡಿಸಿದಳು ಯಶೋಧೆ’ ಹಾಡು ಹಾಡಿದ ಸಂಸದ ತೇಜಸ್ವಿ ಸೂರ್ಯ ಪತ್ನಿ

    ಇತ್ತೀಚೆಗೆ ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು, ಪ್ರೀತಿಯ ಬಲೆಗೆ ಬೀಳಿಸಿ ಜೀವ ತೆಗೆಯುತ್ತಿದ್ದಾರೆ. ಇನ್ನಾದರೂ ಹಿಂದೂಗಳು ಎಚ್ಚೆತ್ತುಕೊಂಡು ಸ್ವಾತಿಯಂತಹ ಅಮಾಯಕ ಹೆಣ್ಣುಮಕ್ಕಳಿಗಾಗುತ್ತಿರುವ ಅನ್ಯಾಯವನ್ನು ತಡೆಯಬೇಕು. ಹುಬ್ಬಳ್ಳಿಯ ನೇಹಾ, ಮಾಸೂರಿನ ಸ್ವಾತಿಗೆ ಆದ ಅನ್ಯಾಯ ನಮ್ಮ ಮನೆಯ ಮಕ್ಕಳಿಗೆ ಆಗಬಾರದೆಂದರೆ, ನಾವು ಜಾಗೃತರಾಗಬೇಕು ಎಂದು ವಿಹೆಚ್‌ಪಿ ಮುಖಂಡರು ಒತ್ತಾಯಿಸಿದರು. ಇದನ್ನೂ ಓದಿ: ಸಿನಿಮಾ ಮೂಲಕ ಪುನೀತ್ ಜೀವಂತವಾಗಿದ್ದಾರೆ: ‘ಅಪ್ಪು’ ಸಿನಿಮಾ ಬಗ್ಗೆ ರಮ್ಯಾ ಮಾತು

    ಹುಬ್ಬಳ್ಳಿ ನೇಹಾ ಹಿರೇಮಠ್ ಸಾವಿನ ಕಹಿ ನೆನೆಪು ಮಾಸುವ ಮುನ್ನವೇ ಲವ್ ಜಿಹಾದ್‌ಗೆ ಹಾವೇರಿಯಲ್ಲಿ ಮತ್ತೊಂದು ಬಲಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ದುರುಳರಿಗೆ ಗಲ್ಲು ಶಿಕ್ಷೆಯಾಗಬೇಕು. ಹಾಗಿದ್ದರೆ ಮಾತ್ರ ಇಂಥಾ ಕೃತ್ಯ ಮಾಡುವವರಿಗೆ ಭಯ ಹುಟ್ಟುತ್ತದೆ. ಹೀಗಾಗಿ ಸ್ವಾತಿ ಹತ್ಯೆ ಮಾಡಿದ ಮೂವರಿಗೂ ಗಲ್ಲು ಶಿಕ್ಷೆಯಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಒತ್ತಾಯಿಸಿದರು. ಇದನ್ನೂ ಓದಿ: ಮಂಗಳೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ

  • ಬಲ್ಡೋಟಾ ಫ್ಯಾಕ್ಟರಿ ಸ್ಥಾಪನೆ ವಿರೋಧಿಸಿ ಕೊಪ್ಪಳ ಬಂದ್ ಕರೆ – ಶಾಲೆಗಳಿಗೆ ರಜೆ

    ಬಲ್ಡೋಟಾ ಫ್ಯಾಕ್ಟರಿ ಸ್ಥಾಪನೆ ವಿರೋಧಿಸಿ ಕೊಪ್ಪಳ ಬಂದ್ ಕರೆ – ಶಾಲೆಗಳಿಗೆ ರಜೆ

    ಕೊಪ್ಪಳ: ಬಲ್ಡೋಟಾ ಫ್ಯಾಕ್ಟರಿ (Baldota factory) ಸ್ಥಾಪನೆ ವಿರೋಧಿಸಿ ಕೊಪ್ಪಳದಲ್ಲಿ (Koppal) ಇಂದು ಸ್ವಯಂಪ್ರೇರಿತ ಬಂದ್‌ಗೆ ಪರಿಸರ ಸಂರಕ್ಷಣಾ ಸಮಿತಿ ಕರೆ ನೀಡಿದೆ. ಬಂದ್ ಹಿನ್ನೆಲೆ ಕೊಪ್ಪಳ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಕೊಪ್ಪಳ ಬಿಇಓ ಶಂಕರಯ್ಯ (Shankarayya) ರಜೆ ಘೋಷಿಸಿದ್ದಾರೆ.

    ನಗರದ 130 ವಿವಿಧ ಸಂಘ ಸಂಸ್ಥೆಗಳು ಬಂದ್‌ಗೆ ಬೆಂಬಲ ನೀಡಿದ್ದು, ಕೊಪ್ಪಳ ಗವಿಮಠದಿಂದ ತಾಲೂಕು ಕ್ರೀಡಾಂಗಣವರಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಹೋರಾಟದಲ್ಲಿ ಸಾವಿರಾರು ಜನರು ಭಾಗಿಯಾಗೋ ಸಾಧ್ಯತೆಗಳಿವೆ. ಇದನ್ನೂ ಓದಿ: ಬ್ಯಾಂಕಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟರೆ ಸೇಫ್ ಆಗಿರುತ್ತಾ, ಇಲ್ವಾ? – ಏನಿದು ಠೇವಣಿ ವಿಮೆ?

    ಕೊಪ್ಪಳ ನಗರ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಬಲ್ಡೋಟಾ ಸ್ಟೀಲ್ ಫ್ಯಾಕ್ಟರಿಯು ಆರಂಭದಿಂದ ಕೊಪ್ಪಳ ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪರಿಸರದಲ್ಲಿ ಹೆಚ್ಚಿನ ಮಾಲಿನ್ಯ ಉಂಟುಮಾಡುತ್ತದೆ, ಈ ಹಿನ್ನೆಲೆ ನಗರಕ್ಕೆ ಹೊಂದಿಕೊಂಡು ಫ್ಯಾಕ್ಟರಿ ಬೇಡ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ತೆರಳಿದ್ದ 6 ಮಂದಿ ಸಾವು – ಇಂದು ಬೀದರ್‌ಗೆ ಮೃತದೇಹ ರವಾನೆ

    ಕೊಪ್ಪಳ ಬಂದ್ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಪ್ರತಿಭಟನಾಕಾರರು ಕೊಪ್ಪಳ ಬಸ್ ಡಿಪೋಗೆ ನುಗ್ಗಿ ವಾಗ್ವಾದ ನಡೆಸಿದ್ದಾರೆ. ಕೂಡಲೇ ಕಾರ್ಯಾಚರಣೆ ಬಂದ್ ಮಾಡುವಂತೆ ತಾಕೀತು ಮಾಡಿದ್ದು, ಡಿಪೋದಿಂದ ಬಸ್ ಹೊರಗೆ ಬಾರದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಂಗಳೂರಿಗರಿಗೆ ತ್ಯಾಜ್ಯ, ಮೆಡಿಕಲ್ ವೇಸ್ಟ್ ಡಂಪಿಂಗ್‌ – ಕಂಟಕವಾಯ್ತಾ ನೆರೆಯ ಕೇರಳ..?

  • ಬೆಂಗಳೂರಿನ ಮತ್ತೊಂದು ಪ್ರತಿಷ್ಠಿತ ಥಿಯೇಟರ್ ಬಂದ್

    ಬೆಂಗಳೂರಿನ ಮತ್ತೊಂದು ಪ್ರತಿಷ್ಠಿತ ಥಿಯೇಟರ್ ಬಂದ್

    ಬೆಂಗಳೂರಿನ (Bangalore) ಒಂದೊಂದೇ ಚಿತ್ರಮಂದಿರಗಳ ಬಾಗಿಲು ಹಾಕುತ್ತಿವೆ. ಒಟಿಟಿ, ಕಡಿಮೆ ಸಂಖ್ಯೆಯಲ್ಲಿ ಸಿನಿಮಾ ನಿರ್ಮಾಣ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಕೆಂಪೇಗೌಡ ರಸ್ತೆ ಅನೇಕ ಚಿತ್ರಮಂದಿಗಳು (Theatre) ಬಂದ್ ಆಗಿವೆ. ಆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಗಳು ತಲೆಯೆತ್ತಿವೆ. ಈಗ ಕಾವೇರಿ (Cauvery) ಚಿತ್ರಮಂದಿರದ ಸರದಿ.

    ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಯಲ್ಲಿ ಒಂದಾಗಿರುವ ಸ್ಯಾಂಕಿ ರಸ್ತೆಯ, ಪ್ಯಾಲೇಸ್ ಗುಟ್ಟಳ್ಳಿಯಲ್ಲಿರುವ ಕಾವೇರಿ ಚಿತ್ರಮಂದಿರ ತನ್ನ ಶಾಶ್ವತ ಪ್ರದರ್ಶನವನ್ನು ನಿಲ್ಲಿಸಲಿಲ್ಲ. ಕಳೆದ ಜನವರಿ 11ಕ್ಕೆ ಕಾವೇರಿಗೆ ಭರ್ತಿ 50 ವರ್ಷ ತುಂಬಿತ್ತು. ಗೋಲ್ಡನ್ ಜ್ಯುಬಿಲಿ ಆಚರಣೆಯನ್ನೂ ಮಾಡಲಾಗಿತ್ತು.

    ನಾನಾ ಕಾರಣಗಳಿಂದಾಗಿ ಕಾವೇರಿ ಥಿಯೇಟರ್ ಇತಿಹಾಸದ ಪುಟದಲ್ಲಿ ದಾಖಲಾಗಿತ್ತು. ಮೆಜೆಸ್ಟಿಕ್ ಏರಿಯಾದಲ್ಲಿದ್ದ ಕಪಾಲಿ ಚಿತ್ರಮಂದಿರ ಹೊರತು ಪಡಿಸಿದರೆ, ಅತೀ ಹೆಚ್ಚು ಹಾಸನಗಳುಳ್ಳ ಚಿತ್ರಮಂದಿರ ಇದಾಗಿತ್ತು. 1300ರಷ್ಟು ಸೀಟುಗಳು ಈ ಚಿತ್ರಮಂದಿರದಲ್ಲಿದ್ದವು. ಜೊತೆಗೆ ಸಾಕಷ್ಟು ಚಿತ್ರಗಳು ಇಲ್ಲಿ ಶತದಿನ ಪ್ರದರ್ಶನ ಕೂಡ ಕಂಡಿವೆ.

    ಕಾವೇರಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದು 1974 ಜನವರಿ 11ರಂದು. ಮೊದಲ ಚಿತ್ರ ಪ್ರದರ್ಶನವಾಗಿದ್ದ ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಪಂಜರ. ಕಮಲ್ ಹಾಸನ್ ನಟನೆಯ ಶಂಕರಾಭರಣಂ ಸಿನಿಮಾ ದಾಖಲೆ ರೀತಿಯಲ್ಲಿ ಪ್ರದರ್ಶನವಾಗಿತ್ತು. ಕನ್ನಡ, ತಮಿಳು, ಹಿಂದೆ, ಮಲಯಾಳಂ ಜೊತೆಗೆ ಹಾಲಿವುಡ್ ನ ಅನೇಕ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ.

    ಜನರು ಥಿಯೇಟರ್ ಬರುತ್ತಿಲ್ಲ. ಇಂತಹ ದೊಡ್ಡ ಕಟ್ಟಡವನ್ನು ನಿಭಾಯಿಸೋದು ಕಷ್ಟ. ಹಾಗಾಗಿ ಥಿಯೇಟರ್ ಬಂದು ಮಾಡಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಚಿತ್ರಮಂದಿರದ ಮಾಲೀಕರು ನಿರ್ಧಾರ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ.

  • ಸ್ವಯಂಪ್ರೇರಿತ ನಂಜನಗೂಡು ಬಂದ್‌ಗೆ ಭರ್ಜರಿ ಪ್ರತಿಕ್ರಿಯೆ – ಮೆಡಿಕಲ್ ಅಂಗಡಿ ಹೊರತು ಪಡಿಸಿ ಎಲ್ಲಾ ವ್ಯಾಪಾರ ಬಂದ್

    ಸ್ವಯಂಪ್ರೇರಿತ ನಂಜನಗೂಡು ಬಂದ್‌ಗೆ ಭರ್ಜರಿ ಪ್ರತಿಕ್ರಿಯೆ – ಮೆಡಿಕಲ್ ಅಂಗಡಿ ಹೊರತು ಪಡಿಸಿ ಎಲ್ಲಾ ವ್ಯಾಪಾರ ಬಂದ್

    ಮೈಸೂರು: ನಂಜನಗೂಡು (Nanjangud) ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇಂದು ಕರೆ ನೀಡಿದ ಸ್ವಯಂಪ್ರೇರಿತ ನಂಜನಗೂಡು ಬಂದ್‌ಗೆ (Bandh) ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೆಡಿಕಲ್ ಅಂಗಡಿ ಹೊರತು ಪಡಿಸಿ ಎಲ್ಲಾ ವ್ಯಾಪಾರ ಬಂದ್ ಮಾಡಿ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ,

    ದೇವಸ್ಥಾನದ ಸುತ್ತಮುತ್ತಲಿನ ಬೀದಿಗಳಲ್ಲಿ ವ್ಯಾಪಾರ ವಹಿವಾಟು ಆರಂಭವಾಗಿಲ್ಲ. ಬಂದ್‌ಗೆ ಬೆಂಬಲ ಕೊಡುವಂತೆ ನಂಜನಗೂಡಿನಲ್ಲಿ ನಂಜುಂಡೇಶ್ವರನ ಭಕ್ತರು ಕರ ಪತ್ರ ಹಂಚುತ್ತಿದ್ದಾರೆ. ಇದನ್ನೂ ಓದಿ: ಮಸ್ಕ್‌ನ ಸ್ಪೇಸ್‍ಎಕ್ಸ್ ರಾಕೆಟ್‍ನಲ್ಲಿ ಶೀಘ್ರ ಇಸ್ರೋ ಉಪಗ್ರಹ ಉಡಾವಣೆ

    ಈ ಪ್ರಕರಣದ ಕುರಿತು ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್, ದೇವರಿಗೆ ಎರಚಿರುವುದು ಶುದ್ಧ ನೀರು ಎಂದು ಹೇಳಿಕೆ ನೀಡಿದ್ದರು. ನಾಗಚಂದ್ರ ದೀಕ್ಷಿತ್ ಎಡಿಸಿ ನೇತೃತ್ವದ ಶಾಂತಿ ಸಭೆಯಲ್ಲಿ ಭಾಗಿಯಾಗಿದ್ದು, ಸಭೆ ನಂತರ ಉತ್ಸವ ಮೂರ್ತಿಗೆ ಶುದ್ಧ ನೀರು ಎರಚಿದ್ದಾರೆ ಎಂದು ಹೇಳಿದ್ದರು. ಬಳಿಕ ತಮ್ಮ ಹೇಳಿಕೆಯಿಂದ ಉಲ್ಟಾ ಹೊಡೆದಿದ್ದು ಹೇಳಿಕೆ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಕರಸೇವಕರ ಅರೆಸ್ಟ್‌ ಮಾಡಿದ್ದ ಇನ್ಸ್‌ಪೆಕ್ಟರ್‌ಗೆ ಕಡ್ಡಾಯ ರಜೆ – ಪ್ರಶ್ನೆಗೆ ಕಾರಣವಾಯ್ತು ಸರ್ಕಾರದ ನಡೆ

    ತಾಲೂಕು ದಂಡಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ಒಂದು ಪತ್ರ ನೀಡಿ ಸಹಿ ಹಾಕುವಂತೆ ಒತ್ತಾಯಿಸಿದರು. ಹೀಗಾಗಿ ನಾವು ಮೂವರು ಆ ಪತ್ರಕ್ಕೆ ಸಹಿ ಹಾಕಿದ್ದೇವೆ. ನಾವು ಸರ್ಕಾರಿ ನೌಕರರು. ಹೀಗಾಗಿ ಅಧಿಕಾರಿಗಳ ಮಾತಿಗೆ ಬೆಲೆ ಕೊಟ್ಟು ಸಹಿ ಮಾಡಿದ್ದೇವೆ. ನಂಜನಗೂಡಿನ ಜನತೆಗೆ ಈ ಪ್ರಕರಣ ಗೊತ್ತಿದೆ. ಅವರೇ ಇತ್ಯರ್ಥ ಮಾಡಿಕೊಳ್ಳಬೇಕು ಎನ್ನುವ ಮೂಲಕ ಬಂದ್‌ಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ಇದನ್ನೂ ಓದಿ: ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ನಿಮಿತ್ತ ನಾನು ಅಯೋಧ್ಯೆಗೆ ಹೋಗಲ್ಲ: ಸಿದ್ಧಲಿಂಗ ಶ್ರೀ

    ಪ್ರಕರಣ ಏನು?
    ಮಹಿಷಾಸುರ ವಧೆ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಆವರಣದಲ್ಲಿ ಸಂಪ್ರದಾಯದಂತೆ ಪಟ್ಟಣದ ರಾಕ್ಷಸ ಮಂಟಪದಲ್ಲಿ ಮಹಿಷಾಸುರ ಬೃಹತ್ ರಂಗೋಲಿ ಬರೆದು, ಬೃಹದಾಕಾರದ ಬ್ಯಾನರ್ ಕಟ್ಟಲಾಗಿತ್ತು. ಪದ್ಧತಿಯಂತೆ ನಂಜುಂಡೇಶ್ವರನ ಉತ್ಸವ ಮೂರ್ತಿಯನ್ನು ಹೊತ್ತವರು ಮಹಿಷಾಸುರನ ರಂಗೂಲಿಯ ಸುತ್ತ ಮೂರು ಸುತ್ತು ಸುತ್ತುಗಳನ್ನು ಹಾಕಿ ರಂಗೋಲಿಯನ್ನು ಅಳಿಸಿ, ಬ್ಯಾನರನ್ನು ಕಿತ್ತೆಸೆದು ತೇರಿನ ಬೀದಿಗಳಲ್ಲಿ ಮುಂದಕ್ಕೆ ಸಾಗಬೇಕು. ಇದು ಹತ್ತಾರು ವರ್ಷಗಳಿಂದ ನಡೆದುಕೊಂಡ ಬಂದ ವಾಡಿಕೆಯಾಗಿತ್ತು. ಇದನ್ನೂ ಓದಿ: ಟೀ ಕುಡಿದಿದ್ದ ಉಜ್ವಲ ಫಲಾನುಭವಿ ಮಹಿಳೆಯ ಮನೆಗೆ‌ ಗಿಫ್ಟ್‌ ಜೊತೆ ಮೋದಿ ಪತ್ರ

    ಮಹಿಷಾಸುರ ಸಂಹಾರಕ್ಕೆ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಮಹಿಷಾಸುರನನ್ನು ರಾಜನೆಂದು ಪೂಜಿಸುತ್ತೇವೆ. ಈ ಆಚರಣೆ ನಿಲ್ಲಿಸುವಂತೆ ಪಟ್ಟು ಹಿಡಿದಿದ್ದರು. ಈ ವೇಳೆ ಭಕ್ತರು, ತಲಾತಲಾಂತರಗಳಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ ಎಂದು ವಿವರಿಸಿದ್ದರು. ಆದರೂ ಮೆರವಣಿಗೆ ಬಂದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ನೀರನ್ನು ಉತ್ಸವ ಮೂರ್ತಿ ಮೇಲೆ ಎರಚಿದ್ದರು. ಇದನ್ನೂ ಓದಿ: ಒಬ್ಬ ಆರೋಪಿಯನ್ನು ಸಮರ್ಥಿಸುವಂತಹ ದುಸ್ಥಿತಿ ರಾಷ್ಟ್ರೀಯ ಪಕ್ಷಕ್ಕೆ ಬರಬಾರದಿತ್ತು: ಸಿಎಂ

    ನಂಜನಗೂಡು ಅಂಧಕಾಸುರ ಆಚರಣೆಗೆ ಅಡ್ಡಿಪಡಿಸಿದ ವಿಚಾರದ ಕುರಿತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಅವರು, ಬಾಲರಾಜು, ನಾರಾಯಣ, ನಾಗಭೂಷಣ್, ನಟೇಶ್ ಹಾಗೂ ಅಭಿ ಈ ಐವರ ಮೇಲೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ಬಿ.ಕೆ ಹರಿಪ್ರಸಾದ್‌ಗೆ ಮಂಪರು ಪರೀಕ್ಷೆ ಮಾಡಿಸಬೇಕು: ಸಂಗಣ್ಣ ಕರಡಿ

  • ಜನವರಿ 4 ರಂದು ನಂಜನಗೂಡು ಬಂದ್‌

    ಜನವರಿ 4 ರಂದು ನಂಜನಗೂಡು ಬಂದ್‌

    ಮೈಸೂರು: ಜನವರಿ 4 ರಂದು ನಂಜನಗೂಡು ಬಂದ್‌ಗೆ (Nanjanagudu Bandh) ಕರೆ ನೀಡಲಾಗಿದೆ. ನಂಜುಂಡೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೇಲೆ ಎಂಜಲು ನೀರು ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಾಗರೀಕರಿಂದ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ.

    ಏನಿದು ಪ್ರಕರಣ..?: ಅಂಧಕಾಸುರ ಸಂಹಾರಕ್ಕೆ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಮಹಿಷಾಸುರನನ್ನು ರಾಜನೆಂದು ಪೂಜಿಸುತ್ತೇವೆ. ಈ ಆಚರಣೆ ನಿಲ್ಲಿಸುವಂತೆ ಪಟ್ಟು ಹಿಡಿದಿದ್ದರು. ಈ ವೇಳೆ ಭಕ್ತರು, ತಲಾತಲಾಂತರಗಳಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ ಎಂದು ವಿವರಿಸಿದ್ದರು. ಆದರೂ ಮೆರವಣಿಗೆ ಬಂದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ನೀರನ್ನು ಉತ್ಸವ ಮೂರ್ತಿ ಮೇಲೆ ಎರಚಿದ್ದಾರೆ ಎಂದು ಆರೋಪಿಸಲಾಗಿತ್ತು.

    ನಂಜನಗೂಡು ಅಂಧಕಾಸುರ ಆಚರಣೆಗೆ ಅಡ್ಡಿಪಡಿಸಿದ ವಿಚಾರದ ಕುರಿತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಅವರು, ಬಾಲರಾಜು, ನಾರಾಯಣ, ನಾಗಭೂಷಣ್, ನಟೇಶ್ ಹಾಗೂ ಅಭಿ ಈ ಐವರ ಮೇಲೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಕೇಂದ್ರ ಸರ್ಕಾರ ರಜೆ ಘೋಷಣೆ ಮಾಡಲಿ: ಸಿದ್ದರಾಮಯ್ಯ

    ದೂರಿನಲ್ಲೇನಿದೆ..?: ನಮ್ಮ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಕುಡಿಯುವ ನೀರಿನ ಬಾಟ್ಲಿಯಲ್ಲಿ ಉತ್ಸವ ಮೂರ್ತಿಗೆ ನೀರನ್ನ ಎರಚುವ ಮೂಲಕ ಅಪಮಾನ ಮಾಡಿದ್ದಾರೆ. ನಾವು ಯಾವುದೇ ವ್ಯಕ್ತಿಯನ್ನ ಅಪಮಾನ ಮಾಡುವಂತೆ ಕೆಲಸ ಮಾಡಿಲ್ಲ ಎಂದು ವಿವರಿಸಿದ್ದೇವೆ. ಆದರೂ ಕೆಲವು ವ್ಯಕ್ತಿಗಳು ಉತ್ಸವ ಮೂರ್ತಿಯ ಮೇಲೆ ಕುಡಿಯುವ ನೀರಿನ ಬಾಟ್ಲಿಯಿಂದ ನೀರು ಎರಚಿದ್ದಾರೆ. ಇದು ಭಕ್ತಾದಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದಿದ್ದರು.

  • ಕಾವೇರಿಗಾಗಿ ನಾವು ಬಂದ್‌ಗೆ ಕರೆ ಕೊಟ್ಟರೆ ಸರ್ಕಾರ ನಮ್ಮನ್ನು ಬಂದ್‌ ಮಾಡಲು ಹೊರಟಿದೆ : ವಾಟಾಳ್‌ ಆಕ್ರೋಶ

    ಕಾವೇರಿಗಾಗಿ ನಾವು ಬಂದ್‌ಗೆ ಕರೆ ಕೊಟ್ಟರೆ ಸರ್ಕಾರ ನಮ್ಮನ್ನು ಬಂದ್‌ ಮಾಡಲು ಹೊರಟಿದೆ : ವಾಟಾಳ್‌ ಆಕ್ರೋಶ

    ಬೆಂಗಳೂರು: ಕಾವೇರಿಗಾಗಿ ನಾವು ಕರ್ನಾಟಕ ಬಂದ್‌ಗೆ (Karnataka Bandh) ಕರೆ ಕೊಟ್ಟರೆ ಸರ್ಕಾರ ನಮ್ಮನ್ನು ಬಂದ್‌ ಮಾಡಲು ಹೊರಟಿದೆ ಎಂದು ಕನ್ನಡ ಹೋರಾಟಗಾರ ವಾಟಾಳ್‌ ನಾಗರಾಜ್‌ (Vatal Nagaraj) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಡಾಲರ್ಸ್‌ ಕಾಲನಿ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತು ಎರಡು ಬಂದ್‌ ನಡೆಯುತ್ತಿದೆ. ನಾವು ಕಾವೇರಿಗಾಗಿ (Cauvery) ಬಂದ್‌ಗೆ ಕರೆ ನೀಡಿದರೆ ಸರ್ಕಾರ ನಮ್ಮ ಪ್ರತಿಭಟನೆಯನ್ನು ಬಂದ್‌ ಮಾಡುತ್ತಿದೆ. ಸರ್ಕಾರ ಕಾವೇರಿ ಸಮಸ್ಯೆಯನ್ನು ಅರ್ಥಮಾಡಿಕೊಂಡಿಲ್ಲ ಎಂದು ಸಿಟ್ಟು ಹೊರಹಾಕಿದರು.  ಇದನ್ನೂ ಓದಿ: ಕಾವೇರಿ ಕುರಿತು ಸಲಹೆ, ಮಾರ್ಗದರ್ಶನ ಪಡೆಯಲು ಇಂದು ಸಿಎಂ ಸಭೆ

    ಬಂದ್‌ಗೆ ಬೆಂಬಲ ನೀಡಿದ ಜನತೆಗೆ ಧನ್ಯವಾದ ಹೇಳಿದ ವಾಟಾಳ್‌, ಅಖಂಡ ಕರ್ನಾಟಕ ಹೆಸರನ್ನು ಕನ್ನಡಿಗರು ಉಳಿಸಿದ್ದಾರೆ. ದೇಶಕ್ಕೆ ಕನ್ನಡಿಗರ ಶಕ್ತಿ ಪ್ರದರ್ಶನವಾಗಿದೆ ಎಂದು ಹೇಳಿದರು.

    ಇಂದು ವಾಟಾಳ್‌ ನಾಗರಾಜ್‌ ಬುರ್ಖಾ ಧರಿಸಿ ತಲೆಯ ಮೇಲೆ ನೀರಿನ ಖಾಲಿ ಕೊಡ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇದೇನು ಕನ್ನಡಿಗರ ಸರ್ಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರ್ಕಾರವೋ? – ಕಾಂಗ್ರೆಸ್ ವಿರುದ್ಧ ಹೆಚ್‌ಡಿಕೆ ಕಿಡಿ

    ಇದೇನು ಕನ್ನಡಿಗರ ಸರ್ಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರ್ಕಾರವೋ? – ಕಾಂಗ್ರೆಸ್ ವಿರುದ್ಧ ಹೆಚ್‌ಡಿಕೆ ಕಿಡಿ

    ಬೆಂಗಳೂರು: ಕಾವೇರಿ ನೀರಿಗಾಗಿ (Kaveri Water) ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿದ ಹಿನ್ನೆಲೆ ರೈತರು ಹಾಗೂ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭ ಪೊಲೀಸರು ಹಲವು ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ವಶಕ್ಕೆ ಪಡೆದಿದ್ದು, ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಟ್ವೀಟ್ (Tweet) ಮೂಲಕ ಆಕ್ರೋಶ ಹೊರಹಾಕಿದ್ದಾರೆ.

    ಬೆಂಗಳೂರು ಬಂದ್ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕಾವೇರಿ ನೀರಿಗಾಗಿ ನಡೆಯುತ್ತಿರುವ ಬೆಂಗಳೂರು ಬಂದ್‌ಗೆ ನನ್ನ ಸಂಪೂರ್ಣ ಬೆಂಬಲವಿದೆ. ಹೋರಾಟ ಶಾಂತಿಯುತವಾಗಿರಲಿ. ಬಂದ್ ಯಶಸ್ವಿಯಾಗಲಿ. ಜನತಾದಳ ಪಕ್ಷದ ಕಾರ್ಯಕರ್ತರೂ ಕೂಡ ಬಂದ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ, ತಮಿಳುನಾಡು ನಡುವೆ ಸಾರಿಗೆ ಬಸ್‌ಗಳ ಸಂಚಾರಕ್ಕೆ ಬ್ರೇಕ್

    ಟ್ವೀಟ್‌ನಲ್ಲಿ ಏನಿದೆ?
    ಇದೆಂಥಾ ಚೋದ್ಯ? ಒಂದು ಕಡೆ ಮೇಕೆದಾಟು ಬೇಕು ಎಂದು ಪಾದಯಾತ್ರೆ ಮಾಡಿದವರು, ಇಂದು ಕಾವೇರಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ರೈತರನ್ನು, ಹೋರಾಟಗಾರರನ್ನು ಬಂಧಿಸಿದ್ದಾರೆ. ರಾತ್ರೋರಾತ್ರಿ ಹೋರಾಟಗಾರರನ್ನು ಬಂಧಿಸಿರುವುದು ಕಾಂಗ್ರೆಸ್ (Congress) ಸರ್ಕಾರದ ಕಿಡಿಗೇಡಿತನದ ಪರಮಾವಧಿ. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಒಂದು ನ್ಯಾಯ, ಕನ್ನಡಿಗರಿಗೆ ಇನ್ನೊಂದು ನ್ಯಾಯ ಎನ್ನುವುದು ಇದೆಯಾ? ಇದನ್ನೂ ಓದಿ: ಬೆಂಗಳೂರು ಬಂದ್ – ಕುರುಬೂರು ಶಾಂತಕುಮಾರ್ ಪೊಲೀಸ್ ವಶಕ್ಕೆ

    ಕೋವಿಡ್ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮಾಡಬಹುದಾದರೆ, ನಾಡಿನ ಜೀವನಾಡಿ ಕಾವೇರಿಗಾಗಿ ಕನ್ನಡಿಗರು ಪ್ರತಿಭಟನೆ ನಡೆಸಬಾರದೇ? ಶಾಂತವಾಗಿ ಹೋರಾಟ ನಡೆಸುತ್ತಿದ್ದ ರೈತರು, ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯ. ಇದೇನು ಕನ್ನಡಿಗರ ಸರ್ಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರ್ಕಾರವೋ? ಇಷ್ಟಕ್ಕೂ ಕನ್ನಡಿಗರು ಮತ ಹಾಕಿದ್ದು ಯಾರಿಗೆ? ಇದನ್ನೂ ಓದಿ: ಬೆಂಗಳೂರು ಬಂದ್ – ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದಲೂ ಸಹಜ ಸ್ಥಿತಿ

    ಹೋರಾಟಗಾರರು, ರೈತರನ್ನು ಕೂಡಲೇ ಬಂಧಮುಕ್ತಗೊಳಿಸಬೇಕು. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಪಕ್ಷವು ಡಿಎಂಕೆ ಪಕ್ಷದ ಬಿ ಟೀಮ್ ಆಗಿ ಪರಿವರ್ತನೆ ಆದ ಪರಿಣಾಮವೇ ಈ ಕಾವೇರಿ ಬಿಕ್ಕಟ್ಟು ಎನ್ನುವುದು ಕನ್ನಡಿಗರಿಗೆ ಈಗ ಸ್ಪಷ್ಟವಾಗಿ ಅರ್ಥವಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಂದ್‌- ಎಂದಿನಂತೆ ಸಂಚರಿಸುತ್ತಿವೆ ಬಿಎಂಟಿಸಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರು ಬಂದ್ – ಕುರುಬೂರು ಶಾಂತಕುಮಾರ್ ಪೊಲೀಸ್ ವಶಕ್ಕೆ

    ಬೆಂಗಳೂರು ಬಂದ್ – ಕುರುಬೂರು ಶಾಂತಕುಮಾರ್ ಪೊಲೀಸ್ ವಶಕ್ಕೆ

    ಬೆಂಗಳೂರು: ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್ (Kuruburu Shanthakumar) ಅವರನ್ನು ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪೊಲೀಸರು ವಶಕ್ಕೆ (Custody) ಪಡೆದಿದ್ದಾರೆ.

    ಕಾವೇರಿಗಾಗಿ ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದ್ದು, ಬೆಂಗಳೂರು ಬಂದ್ ಹಿನ್ನೆಲೆ ಬೆಳ್ಳಂಬೆಳಗ್ಗೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಳು ಆರಂಭಗೊಂಡಿದೆ. ಈ ವೇಳೆ ಕುರುಬೂರು ಶಾಂತಕುಮಾರ್ ಹಾಗೂ ಇತರೆ ಕೆಲವರನ್ನು ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರತಿಭಟನಾ ಮೆರವಣಿಗೆಗೂ ಮುನ್ನವೇ ಶಾಂತಕುಮಾರ್ ಹಾಗೂ ಇತರರನ್ನು ಖಾಕಿ ಪಡೆ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಂದ್ – ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದಲೂ ಸಹಜ ಸ್ಥಿತಿ

    ಈ ಸಂದರ್ಭ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಂತಕುಮಾರ್, ಪೊಲೀಸರು ಗೂಂಡಾಗಿರಿ ಮೂಲಕ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರಿನ ಜನತೆ ಇದನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರೂ ಬೀದಿಗಿಳಿಯಬೇಕು. ಸರ್ಕಾರಕ್ಕೆ ಸರಿಯಾದ ಪಾಠವನ್ನು ಕಲಿಸಬೇಕು. ಕರ್ನಾಟಕದ ರೈತರು ನಮಗೆ ಬೆಂಬಲ ನೀಡಿ ರಸ್ತೆಗಿಳಿಯಬೇಕು ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮೂವರು ಕೇಂದ್ರ ಸಚಿವರಿಗೆ ಬಿಜೆಪಿ ಟಿಕೆಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಿನ ಶಾಲಾ- ಕಾಲೇಜುಗಳಿಗೆ ರಜೆ: ಮಂಗಳವಾರ ಏನಿರತ್ತೆ..?, ಏನಿರಲ್ಲ..?

    ಬೆಂಗಳೂರಿನ ಶಾಲಾ- ಕಾಲೇಜುಗಳಿಗೆ ರಜೆ: ಮಂಗಳವಾರ ಏನಿರತ್ತೆ..?, ಏನಿರಲ್ಲ..?

    – ಶುಕ್ರವಾರ ಕರ್ನಾಟಕ ಬಂದ್‍ಗೆ ಕನ್ನಡ ಒಕ್ಕೂಟ ಕರೆ

    ಬೆಂಗಳೂರು: ಕಾವೇರಿ ವಿಚಾರದಲ್ಲಿ ನಡೆಯುತ್ತಿರುವ ಹೋರಾಟ ಗೊಂದಲದ ಗೂಡಾಗಿದೆ. ಹೋರಾಟಗಾರರ ಪ್ರತಿಷ್ಠೆಯ ಮೇಲಾಟದಲ್ಲಿ ಕಾವೇರಿ ನಲುಗಿದ್ದಾಳೆ. ಹಲವು ಗೊಂದಲಗಳ ನಡುವೆಯೂ ನಾಳೆ (ಮಂಗಳವಾರ) ಬೆಂಗಳೂರು ಬಂದ್‍ಗೆ ಜಲಸಂರಕ್ಷಣಾ ಸಮಿತಿ ಕರೆ ನೀಡಿದೆ.

    ಸಾಕಷ್ಟು ಒತ್ತಡಗಳು ಎದುರಾದ್ರೂ, ಹತ್ತು ಹಲವು ಸಂಘಟನೆಗಳು ಬೆಂಬಲ ನೀಡಲ್ಲ ಅಂದ್ರೂ ಕೂಡ ನಾಳೆಯ ಬಂದ್‍ನಿಂದ ಹಿಂದೆ ಸರಿಯಲು ಒಪ್ಪಿಲ್ಲ. ಹೀಗಾಗಿ ನಾಳೆ ಬೆಂಗಳೂರು ಬಂದ್ ನಡೆಯೋದು ಖಚಿತವಾಗಿದೆ. ಈ ಮಧ್ಯೆ ಸೆಪ್ಟೆಂಬರ್ 29ಕ್ಕೆ ಕರ್ನಾಟಕ ಬಂದ್‍ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ನಾಳೆಯ ಬಂದ್ ಹಿಂಪಡೆಯದ ಸಂಘಟನೆಗಳ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ.

    ನಾಳೆಯ ಬಂದ್‍ಗೆ ಬೆಂಬಲ ನೀಡಲ್ಲ ಎಂದು ಪ್ರಕಟಿಸಿವೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮಧ್ಯರಾತ್ರಿ 12 ಗಂಟೆಯಿಂದ ನಾಳೆ ರಾತ್ರಿಯವರೆಗೂ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ಅಂದ ಹಾಗೇ, ನಾಳೆಯೇ ಕೆಆರ್ ಪೇಟೆ, ಮಳವಳ್ಳಿ, ಟೀ.ನರಸೀಪುರ ಬಂದ್‍ಗೂ ಕರೆ ನೀಡಲಾಗಿದೆ. ಇದನ್ನೂ ಓದಿ: ಸುಪ್ರೀಂಕೋರ್ಟ್ ತೀರ್ಪನ್ನ ನಾವು ಪಾಲಿಸಬೇಕು: ಲಕ್ಷ್ಮಿ ಹೆಬ್ಬಾಳ್ಕರ್

    ನಾಳೆಯ ಬೆಂಗಳೂರು ಬಂದ್ ರಾಜಕೀಯ ಸ್ವರೂಪ ಪಡೆದಿದೆ. ಕಾರಣ ಜಲ ಸಂರಕ್ಷಣಾ ಸಮಿತಿ ಕರೆ ನೀಡಿರುವ ಬಂದ್‍ಗೆ ರಾಜ್ಯ ರಾಜಕೀಯದ ಹೊಸ ದೋಸ್ತಿಗಳು ಬೆಂಬಲ ಘೋಷಿಸಿವೆ. ಕಾವೇರಿ ಹೋರಾಟದ ಕಣಕ್ಕೆ ಬಿಜೆಪಿ, ಜೆಡಿಎಸ್ ಧುಮುಕಿದ್ದು, ಬೆಂಗಳೂರು ಬಂದ್‍ಗೆ ಬೆಂಬಲ ಘೋಷಿಸಿದೆ. ಬಿಜೆಪಿಯಂತೂ ನಾಳೆಯ ಬಂದ್ ಅನ್ನು ಗಂಭೀರವಾಗಿ ಪರಿಗಣಿಸಿದೆ. ವಿಧಾನಸೌಧದ ಗಾಂಧಿಪ್ರತಿಮೆ ಬಳಿ ಬಿಜೆಪಿಗರು ಧರಣಿ ನಡೆಸಲಿದ್ದಾರೆ. ಬಿಎಸ್‍ವೈ ಜೊತೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಕಾಣಿಸಿಕೊಳ್ಳಲಿದ್ದಾರೆ.

    ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಬೀದಿಗೆ ಇಳಿಯಲಿದ್ದಾರೆ. ಹೀಗಾಗಿಯೇ ನಾಳೆಯ ಬಂದ್ ರಾಜಕೀಯಪ್ರೇರಿತ ಎಂದು ಕನ್ನಡ ಪರ ಸಂಘಟನೆಗಳು ವ್ಯಾಖ್ಯಾನಿಸಿವೆ. ಈಗ ಬಂದ್ ಬೆಂಬಲಿಸ್ತಿರುವ ವಿಪಕ್ಷಗಳು ಹಿಂದೆ ಅಧಿಕಾರದಲ್ಲಿದ್ದಾಗ ಏನು ಮಾಡಿದ್ವು ಎಂದು ಪ್ರಶ್ನಿಸಿವೆ. ಈ ಮಧ್ಯೆ, ಆಡಳಿತ ಪಕ್ಷ ಕಾಂಗ್ರೆಸ್ ಕೂಡ, ಬಂದ್‍ಗೆ ನಮ್ಮ ವಿರೋಧವಿಲ್ಲ. ಆದರೆ ಬಂದ್ ಶಾಂತಿಯುತವಾಗಿರಲಿ ಎಂದು ಕೋರಿದೆ.

    ನಾಳೆ ಏನಿರತ್ತೆ..?: ಹೋಟೆಲ್, ಮದ್ಯದಂಗಡಿ, ಬಿಎಂಟಿಸಿ, ಓಲಾ, ಊಬರ್, ಆಟೋ – 50-50, ನಮ್ಮ ಮೆಟ್ರೋ, ರೈಲು, ಸರ್ಕಾರಿ ಕಚೇರಿಗಳು, ಬ್ಯಾಂಕ್, ಪೋಸ್ಟ್ ಆಫೀಸ್, ಆಸ್ಪತ್ರೆ, ಮೆಡಿಕಲ್ ಸ್ಟೋರ್, ದಿನಸಿ, ಹಾಲು, ಹಣ್ಣು, ತರಕಾರಿ ಅಂಗಡಿ.

    ಏನಿರಲ್ಲ?: ಕೆಎಸ್‍ಆರ್ ಟಿಸಿ, ಖಾಸಗಿ ಬಸ್, ಆಟೋ – 50-50 , ಗೂಡ್ಸ್ ವಾಹನ, ಶಾಲೆ-ಕಾಲೇಜು, ಕಾರ್ಖಾನೆಗಳು, ಗಾರ್ಮೆಂಟ್ಸ್, ಬಿಬಿಎಂಪಿ, ಬಿಡಿಎ ಕಚೇರಿ, ಎಪಿಎಂಸಿ ಮಾರ್ಕೆಟ್, ಕೆಆರ್ ಮಾರ್ಕೆಟ್, ಜ್ಯುವೆಲ್ಲರಿ ಶಾಪ್, ಚಿಕ್ಕಪೇಟೆ ಅಂಗಡಿಗಳು, ಥೇಟರ್, ಚಿತ್ರರಂಗದ ಚಟುವಟಿಕೆ, ಕಿರುತೆರೆ ಶೂಟಿಂಗ್, ಬೆಂಗಳೂರು ವಿವಿಗೆ ರಜೆ, ಪರೀಕ್ಷೆ ಮುಂದೂಡಿಕೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]