Tag: ಬಂಡೇ ಮಠ

  • ಬಂಡೇಮಠ ಶ್ರೀಗಳ ಆತ್ಮಹತ್ಯೆ ಕೇಸ್- ವೀರಶೈವ ಲಿಂಗಾಯತ ಮುಖಂಡನಿಗೆ ನೋಟಿಸ್

    ಬಂಡೇಮಠ ಶ್ರೀಗಳ ಆತ್ಮಹತ್ಯೆ ಕೇಸ್- ವೀರಶೈವ ಲಿಂಗಾಯತ ಮುಖಂಡನಿಗೆ ನೋಟಿಸ್

    ರಾಮನಗರ: ಬಂಡೇಮಠದ ಬಸವಲಿಂಗ ಸ್ವಾಮೀಜಿ (BandeMutt Basavalinga Swamji) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಮೇಜರ್ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ ಪ್ರಕರಣ ಸಂಬಂಧ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿಯಾಗಿರುವ ವೀರಶೈವ ಲಿಂಗಾಯತ ಮುಖಂಡನಿಗೆ ನೋಟಿಸ್ ನೀಡಲಾಗಿದೆ.

    ಡೆತ್‍ನೋಟ್‍ನಲ್ಲಿ ಸಚ್ಚಿದಾನಂದ ಮೂರ್ತಿ ಹೆಸರು ಉಲ್ಲೇಖ ಆಗಿದ್ದರಿಂದ ಮಾಗಡಿ ಪೋಲಿಸರು (Magadi Police) ನೋಟಿಸ್ ನೀಡಿದ್ದಾರೆ. ಸಚ್ಚಿದಾನಂದ ಮೂರ್ತಿಯಿಂದಲೂ ಅಪಪ್ರಚಾರ ಎಂದು ಬಸವಲಿಂಗ ಶ್ರೀಗಳು ಬರೆದಿದ್ದರು. ಹೆಸರು ಪ್ರಸ್ತಾಪ ಹಿನ್ನಲೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‍ನಲ್ಲಿ ತಿಳಿಸಲಾಗಿದೆ. ಪ್ರಕರಣ ಸಂಬಂಧ ಮಾಹಿತಿ ಕಲೆಹಾಕುವ ನಿಟ್ಟನಲ್ಲಿ ವಿಚಾರಣೆ ನಡೆಸಲಾಗುತ್ತದೆ. ಇದನ್ನೂ ಓದಿ: ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಮತ್ತೊಂದು ಪ್ರಭಾವಿ ಮಠದ ಶ್ರೀ ಭಾಗಿ?

     

    ಪ್ರಕರಣ ಸಂಬಂಧ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿರುವ ಮೂವರು ಆರೋಪಿಗಳು ವಿಚಾರ ವೇಳೆ ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಡೆತ್‍ನೋಟ್‍ನಲ್ಲಿ ಇಬ್ಬರು ಶ್ರೀಗಳಿಂದ ತೊಂದರೆ ಆಗ್ತೀದೆ ಎಂದು ಬಸವಲಿಂಗ ಶ್ರೀ ಉಲ್ಲೇಖಿಸಿದ್ದಾರೆ. ಇದನ್ನ ಬೆನ್ನತ್ತಿರುವ ಪೊಲೀಸರು ಆ ಮತ್ತೊಬ್ಬ ಪ್ರತಿಷ್ಠಿತ ಮಠದ ಶ್ರೀಗೂ ಬಲೆ ಬೀಸಿದ್ದಾರೆ. ಬಂಧಿತ ಮೂವರು ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರಿಗೆ ಮತ್ತಷ್ಟು ಆಶ್ಚರ್ಯಕರ ವಿಚಾರಗಳನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣ- ನೀಲಾಂಬಿಕೆ ಮೊಬೈಲ್‍ನಿಂದ ನಿತ್ಯ ಮೆಸೇಜ್!

    ಬಸವಲಿಂಗ ಶ್ರೀಗೆ ಕಿರುಕುಳ ನೀಡಿದ್ದ ಆ ಮತ್ತೊಂದು ಮಠದ ಸ್ವಾಮೀಜಿ ಯಾರು..? ಬಂಡೇಮಠಕ್ಕೂ ಆ ಮತ್ತೊಬ್ಬ ಸ್ವಾಮೀಜಿಗೂ ಏನು ಸಂಬಂಧ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಸದ್ಯ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಆ ಮತ್ತೊಬ್ಬ ಶ್ರೀಗಳನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಅದು ಪ್ರತಿಷ್ಠಿತ ಮಠವೊಂದರ ಸ್ವಾಮೀಜಿ ಎಂಬ ಮಾತುಗಳು ಸಹ ಹರಿದಾಡುತ್ತಿವೆ. ಆದ್ರೆ, ಈ ಕುರಿತು ಮತ್ಯಾವ ಸ್ವಾಮೀಜಿಯನ್ನೂ ವಿಚಾರಣೆ ನಡೆಸಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಮತ್ತೊಂದು ಪ್ರಭಾವಿ ಮಠದ ಶ್ರೀ ಭಾಗಿ?

    ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಮತ್ತೊಂದು ಪ್ರಭಾವಿ ಮಠದ ಶ್ರೀ ಭಾಗಿ?

    – ಡೆತ್ ನೋಟ್‍ನಲ್ಲಿ ಇಬ್ಬರು ಶ್ರೀ ಎಂದು ಉಲ್ಲೇಖ
    – ಹಾಗಾದ್ರೆ ಆ ಮತ್ತೊಬ್ಬ ಶ್ರೀ ಯಾರು?

    ರಾಮನಗರ: ಬಂಡೇಮಠದ (BandeMutt) ಬಸವಲಿಂಗ ಸ್ವಾಮೀಜಿ (BasavalingaSwamiji) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಮೇಜರ್ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಮೂವರು ಆರೋಪಿಗಳು ವಿಚಾರ ವೇಳೆ ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

    ಶ್ರೀಗಳ ಆತ್ಮಹತ್ಯೆ ಹಿಂದೆ ಮತ್ತೊಬ್ಬ ಪ್ರತಿಷ್ಠಿತ ಮಠವೊಂದರ ಪ್ರಭಾವಿ ಸ್ವಾಮೀಜಿಯ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಬಂಡೆ ಮಠದ ಬಸವಲಿಂಗ ಶ್ರೀ ಆತ್ಮಹತ್ಯೆ ಸಂಬಂಧ ಮೂವರು ಆರೋಪಿಗಳನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಡೆತ್‍ನೋಟ್‍ನಲ್ಲಿ ಇಬ್ಬರು ಶ್ರೀಗಳಿಂದ ತೊಂದರೆ ಆಗುತ್ತಿದೆ ಎಂದು ಬಸವಲಿಂಗ ಶ್ರೀ ಉಲ್ಲೇಖಿಸಿದ್ದಾರೆ. ಇದನ್ನು ಬೆನ್ನತ್ತಿರುವ ಪೊಲೀಸರು ಆ ಮತ್ತೊಬ್ಬ ಶ್ರೀಗೂ ಗಾಳ ಹಾಕಿದ್ದಾರೆ. ಬಂಧಿತ ಮೂವರು ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರಿಗೆ ಮತ್ತಷ್ಟು ಆಶ್ಚರ್ಯಕರ ವಿಚಾರಗಳನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 2ನೇ ಬಾರಿಗೆ ದಾಖಲೆ GST ಸಂಗ್ರಹ – 1.52 ಲಕ್ಷ ಕೋಟಿಯಲ್ಲಿ ಯಾವ ರಾಜ್ಯದ ಪಾಲು ಎಷ್ಟು?

    ಬಸವಲಿಂಗ ಶ್ರೀಗೆ ಕಿರುಕುಳ ನೀಡಿದ್ದ ಆ ಮತ್ತೊಂದು ಮಠದ ಶ್ರೀ ಯಾರು? ಬಂಡೇ ಮಠಕ್ಕೂ ಆ ಮತ್ತೊಬ್ಬ ಶ್ರೀಗೂ ಏನು ಸಂಬಂಧ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಸದ್ಯ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಆ ಮತ್ತೊಬ್ಬ ಶ್ರೀಗಳನ್ನು ವಿಚಾರಣೆ ನಡೆಸಿದ್ದಾರೆ. ಅದು ಕುಣಿಗಲ್ ತಾಲೂಕಿನ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿ ಎಂಬ ಮಾತುಗಳು ಸಹ ಹರಿದಾಡುತ್ತಿವೆ. ಆದರೆ ಈ ಕುರಿತು ಮತ್ಯಾವ ಸ್ವಾಮೀಜಿಯನ್ನೂ ವಿಚಾರಣೆ ನಡೆಸಿಲ್ಲ ಎಂದು ಪೊಲೀಸರು ಹೇಳಿತ್ತಿದ್ದಾರೆ. ಇನ್ನೂ ಆತ್ಮಹತ್ಯೆ ಕೇಸ್‍ನಲ್ಲಿ ಬಗೆದಷ್ಟು ಟ್ವಿಸ್ಟ್ ಮೇಲೆ ಟ್ವಿಸ್ಟ್ ದೊರೆಯುತ್ತಿದೆ. ಸದ್ಯ ವಿಚಾರಣೆಯಲ್ಲಿರುವ ಆರೋಪಿಗಳು ಮತ್ತಷ್ಟು ಜನರ ಹೆಸರುಗಳನ್ನು ಬಾಯ್ಬಿಡ್ತಾರಾ? ಆ ಮತ್ತೊಬ್ಬ ಸ್ವಾಮೀಜಿಯ ಬಂಧನವೂ ಆಗುತ್ತಾ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಮುರಿದು ಬಿದ್ದ ಪುರಾತನ ವೀರಭದ್ರೇಶ್ವರ ಸ್ವಾಮಿಯ ರಥದ ಚಕ್ರ – ಅದೃಷ್ಟವಶಾತ್ ಭಕ್ತರು ಪಾರು

    Live Tv
    [brid partner=56869869 player=32851 video=960834 autoplay=true]

  • ಬಂಡೇ ಮಠದ ಶ್ರೀ ಬರೆದಿದ್ದು ಒಟ್ಟು 6 ಪುಟಗಳ ಡೆತ್‍ನೋಟ್ – ಈಗಾಗಲೇ 20 ಮಂದಿಯ ವಿಚಾರಣೆ

    ಬಂಡೇ ಮಠದ ಶ್ರೀ ಬರೆದಿದ್ದು ಒಟ್ಟು 6 ಪುಟಗಳ ಡೆತ್‍ನೋಟ್ – ಈಗಾಗಲೇ 20 ಮಂದಿಯ ವಿಚಾರಣೆ

    ರಾಮನಗರ: ಮಾಗಡಿ ತಾಲೂಕಿನ ಬಂಡೇ ಮಠದ (Bande Mutt)  ಬಸವಲಿಂಗ ಶ್ರೀಗಳ (Basavalinga Swamiji) ಆತ್ಮಹತ್ಯೆ ಪ್ರಕರಣ ಸಂಬಂಧ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

    ಒಟ್ಟು 6 ಪುಟಗಳ ಡೆತ್‍ನೋಟ್ (Death Note)  ಪತ್ತೆ ಆಗಿರುವ ಬಗ್ಗೆ ಸ್ವತಃ ರಾಮನಗರ ಎಸ್‍ಪಿ (SP) ಸಂತೋಷ್ ಬಾಬು ಮಾಹಿತಿ ನೀಡಿದ್ದಾರೆ. ಡೆತ್‍ನೋಟ್, ವೀಡಿಯೋ ಸೇರಿ ಎಲ್ಲ ಸಾಕ್ಷಿ ಸಂಗ್ರಹಿಸಿ ಪ್ರಕರಣದ ತನಿಖೆ ಮಾಡುತ್ತಿದ್ದೇವೆ. ಇನ್ನೊಂದು ಡೆತ್‍ನೋಟ್ ಇದೆ ಎಂದು ನಮಗೆ ತಿಳಿದುಬಂದಿದೆ ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಬಂಡೆಮಠದ ಸ್ವಾಮೀಜಿಗೆ ಮಹಿಳೆಯಿಂದ ಬರುತ್ತಿತ್ತು ದೂರವಾಣಿ ಕರೆ- ಡೆತ್‍ನೋಟ್‍ನಲ್ಲಿ ರಹಸ್ಯ ಬಯಲು

    ಈವರೆಗಿನ ವಿಚಾರಣೆಯಲ್ಲಿ ಯಾರನ್ನೂ ಸಹ ಬಂಧಿಸಿಲ್ಲ. ಅಲ್ಲದೇ ಮಾಗಡಿ ಠಾಣೆಗೆ ಈ ಕೇಸ್ (Case) ವರ್ಗಾವಣೆ ಆಗಿದ್ದು ಮಾಗಡಿ ಇನ್ಸ್‌ಪೆಕ್ಟರ್‌ ರಿಂದ ತನಿಖೆ ನಡೆಯುತ್ತಿದೆ. ತಾಂತ್ರಿಕ ಸಾಕ್ಷಿ ಕೂಡಾ ಕಲೆ ಹಾಕಲಾಗುತ್ತಿದೆ. ಮಠದ ಸಿಬ್ಬಂದಿ ಹಾಗೂ ಶ್ರೀಗಳ ಆಪ್ತರ ಮೊಬೈಲ್ (Mobile) ಫೋನ್‌ ಕೂಡಾ ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಸ್‍ಪಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ಯಾರನ್ನೂ ವಿಚಾರಣೆ ಮಾಡ್ಬೇಡಿ: ಮಡಿವಾಳೇಶ್ವರ ಸ್ವಾಮೀಜಿ ಡೆತ್‍ನೋಟ್

    Live Tv
    [brid partner=56869869 player=32851 video=960834 autoplay=true]

  • ಹನಿಟ್ರ‍್ಯಾಪ್‌ಗೆ ಬಲಿಯಾದ್ರಾ ಬಂಡೇ ಮಠದ ಬಸವಲಿಂಗ ಶ್ರೀ?

    ಹನಿಟ್ರ‍್ಯಾಪ್‌ಗೆ ಬಲಿಯಾದ್ರಾ ಬಂಡೇ ಮಠದ ಬಸವಲಿಂಗ ಶ್ರೀ?

    ರಾಮನಗರ: ಮಾಗಡಿ ತಾಲೂಕಿನ ಕಂಚುಗಲ್ ಮಠದ ಬಸವಲಿಂಗ ಶ್ರೀಗಳ (Basavalinga Swamiji) ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಶ್ರೀಗಳ ಮೊಬೈಲ್ ಕಾಲ್ ಹಾಗೂ ಡೆತ್‌ನೋಟ್ (Death Note) ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಉಲ್ಲೇಖ ಆಗಿರುವ ಕೆಲ ಅಂಶಗಳು ಹನಿಟ್ರ‍್ಯಾಪ್ (Honeytrap) ಸುಳಿವು ನೀಡಿದ್ದು, ಇನ್ನು 2-3 ದಿನಗಳಲ್ಲಿ ಶ್ರೀಗಳ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.

    ರಾಜ್ಯದಲ್ಲಿ ಕೆಲ ಸ್ವಾಮೀಜಿಗಳು ಹನಿಟ್ರ‍್ಯಾಪ್ ಜಾಲಕ್ಕೆ ಒಳಗಾಗಿದ್ದು, ಮುರುಘಾ ಶ್ರೀಗಳ ಪ್ರಕರಣದ ಬಳಿಕ ಈ ಜಾಲ ಇನ್ನಷ್ಟು ವಿಸ್ತಾರಗೊಂಡಿದೆ ಎನ್ನುವುದು ಖಾತ್ರಿಯಾಗಿದೆ. 6-7 ತಿಂಗಳ ಹಿಂದೆ ಮಾಗಡಿಯ ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿ ಮೃತದೇಹ ಸಹ ಕಿಟಕಿಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಬಂಡೇ ಮಠದ ಸ್ವಾಮೀಜಿ ಸಹ ಅದೇ ಮಾದರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಂಚುಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿಯ ಆತ್ಮಹತ್ಯೆ ಸಂಬಂಧ ಇಡೀ ಪ್ರಕರಣಕ್ಕೆ ರೋಚಕ ತಿರುವು ನೀಡಿರುವುದು ಡೇತ್‌ನೋಟ್. ಡೆತ್‌ನೋಟ್‌ನಲ್ಲಿ ಉಲ್ಲೇಖ ಆಗಿರುವ ಕೆಲ ಅಂಶಗಳು ಪ್ರಕರಣದ ದಿಕ್ಕನ್ನು ಬದಲಿಸಿವೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಡೇತ್‌ನೋಟ್ ಕೂಡಾ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ನಾನು ಮಠದ ಉತ್ತರಾಧಿಕಾರಿಯಾದ ಬಳಿಕ ಯಾವುದೇ ಹಗರಣವನ್ನು ಮಾಡಿಲ್ಲ. ಸಿದ್ದಗಂಗಾ ಮಠಕ್ಕೆ ನಂಬುಗೆಯಿಂದಲೇ ಕೆಲಸ ಮಾಡಿದ್ದೇನೆ. ಆದರೆ ಕೆಲವರು ಇತ್ತೀಚೆಗೆ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಮಹಿಳೆಯೊಬ್ಬಳು 6-7 ತಿಂಗಳಿನಿಂದ ನನಗೆ ಕರೆ ಮಾಡಿ ಹಿಂಸೆ ನೀಡುತ್ತಿದ್ದಳು ಎಂಬ ಮಾಹಿತಿ ವೈರಲ್ ಆಗಿರುವ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ. ಆದರೆ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಡೆತ್‌ನೋಟ್ ನಿಜವಾದುದಲ್ಲ, ಕೇವಲ 1-2 ಅಂಶಗಳು ಸಾಮ್ಯತೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಕೋಮು ಘರ್ಷಣೆ, ಪೊಲೀಸರ ಮೇಲೂ ಪೆಟ್ರೋಲ್ ಬಾಂಬ್ ದಾಳಿ- 19 ಮಂದಿ ವಶ

    ಒಂದೆಡೆ ಹನಿಟ್ರ‍್ಯಾಪ್ ಶಂಕೆ ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ಡೆತ್‌ನೋಟ್‌ನಲ್ಲಿ ಕೆಲವರ ಹೆಸರುಗಳನ್ನು ಉಲ್ಲೆಖ ಮಾಡಲಾಗಿದೆ. ಆದರೆ ಅವರು ಸಾವಿಗೆ ಕಾರಣ ಎಂದು ಬರೆದಿಲ್ಲ. ಒಬ್ಬ ಅನಾಮಧೇಯ ಹೆಸರನ್ನು ಸ್ಪಷ್ಟವಾಗಿ ಉಲ್ಲೆಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಪ್ರಕರಣ ಸಂಬಂಧ 306 ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದ್ದಾರೆ.

    ಒಟ್ಟಾರೆ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್‌ನೋಟ್‌ನ ಕೆಲ ಅಂಶಗಳನ್ನು ತನಿಖೆಯ ದಿಕ್ಕನ್ನೇ ಬದಲಿಸಿವೆ. ಒಂದೆಡೆ ಹನಿಟ್ರ‍್ಯಾಪ್ ಶಂಕೆ ವ್ಯಕ್ತವಾಗಿದ್ರೆ, ಮತ್ತೊಂದೆಡೆ ಮಠದ ಅಧಿಕಾರ ಹಿಡಿಯಲು ಕೆಲವರು ಸಂಚು ರೂಪಿಸಿದ್ದಾರೆ ಎನ್ನಲಾಗುತ್ತಿದೆ. ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬೀಳಬೇಕಿದೆ. ಇದನ್ನೂ ಓದಿ: ಇಶಾ ಫೌಂಡೇಶನ್ ನಲ್ಲಿ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ ಕಾಂತಾರ

    Live Tv
    [brid partner=56869869 player=32851 video=960834 autoplay=true]