ರಾಮನಗರ: ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ (Basavalinga Swamiji) ಆತ್ಮಹತ್ಯೆ ಪ್ರಕರಣದಲ್ಲಿ ಮೂವರೂ ಆರೋಪಿಗಳನ್ನು ನವೆಂಬರ್ 15 ರವರೆಗೂ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಲಾಗಿದೆ.
ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳನ್ನು ಮಾಗಡಿ ಪೊಲೀಸರು ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ನ್ಯಾಯಾಧೀಶೆ ಎಂ. ಧನಲಕ್ಷ್ಮಿ ಮೂವರು ಆರೋಪಿಗಳಿಗೆ ನ.15ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ – NIA ದಾಳಿ, ಮೂವರ ಬಂಧನ
ಪ್ರಕರಣದ ಎ1 ಆರೋಪಿ ಕಣ್ಣೂರು ಮಠದ ಡಾ. ಮೃತ್ಯುಂಜಯಶ್ರೀ, ಎ3 ಆರೋಪಿ ಮಹದೇವಯ್ಯನನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ರವಾನೆ ಮಾಡಲಾಗಿದ್ದು, ಎ2 ಆರೋಪಿ ನೀಲಾಂಬಿಕೆಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಅಲ್ಲದೇ ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿ ಶಂಕೆ ಇದ್ದು ಪೊಲೀಸರ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಹಿಂದೂ ಭಾವನೆಗೆ ಧಕ್ಕೆ: ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ವಿರುದ್ಧ ಪ್ರಕರಣ
Live Tv
[brid partner=56869869 player=32851 video=960834 autoplay=true]
ರಾಮನಗರ: ಮಾಗಡಿ ತಾಲೂಕಿನ ಬಂಡೇ ಮಠದ (Bande Mutt) ಬಸವಲಿಂಗ ಶ್ರೀಗಳ (Basavalinga Swamiji) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಹೌದು. ಸ್ಥಳೀಯ ಸ್ವಾಮೀಜಿ ಹಾಗೂ ಇತರ ಏಳೆಂಟು ಮಂದಿಯಿಂದ ಕಿರುಕುಳ ಎದುರಾಗ್ತಿದೆ. ಮಠದ ವಿಚಾರದಲ್ಲಿ ಆಗ್ಗಾಗ್ಗೆ ತೊಂದರೆ ಉಂಟು ಮಾಡ್ತಿದ್ದಾರೆ. ನನ್ನ ಸಾವಿಗೆ ಗೊತ್ತಿಲ್ಲದಿರುವ ಆ ಮಹಿಳೆಯೇ ಕಾರಣ ಎಂದು ಸಾವಿಗೂ ಮುನ್ನ ಡೆತ್ ನೋಟ್‌ನಲ್ಲಿ (Death Note) ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಗಳ ಆತ್ಮಹತ್ಯೆ ಹಿಂದೆ ಲೋಕಲ್ ಸ್ವಾಮೀಜಿಯೊಬ್ಬರ ಕೈವಾಡ ಇರೋದು ತನಿಖೆ (Investigation) ವೇಳೆ ಕನ್ಫರ್ಮ್ ಆಗಿದೆ. ಅಲ್ಲದೇ ಸ್ಥಳೀಯ ಸ್ವಾಮೀಜಿಯೊಂದಿಗೆ ಏಳೆಂಟು ಮಂದಿ ಸಹ ಕೈ ಜೋಡಿಸಿರುವ ಮಾಹಿತಿ ಇದೆ ಅನ್ನೋದು ಪೊಲೀಸರ ಗುಮಾನಿ. ಇದನ್ನೂ ಓದಿ: ಬಂಡೇ ಮಠದ ಶ್ರೀ ಬರೆದಿದ್ದು ಒಟ್ಟು 6 ಪುಟಗಳ ಡೆತ್‍ನೋಟ್ – ಈಗಾಗಲೇ 20 ಮಂದಿಯ ವಿಚಾರಣೆ
ಮಹಿಳೆ ಮೊಬೈಲ್ ಸಂಖ್ಯೆ ಪತ್ತೆ: ಆತ್ಮಹತ್ಯೆ (Suicide) ದಿನ ಶ್ರೀಗಳ ಮೊಬೈಲ್ (Mobile) ಸೀಜ್ ಮಾಡಿ ಎಫ್‌ಎಸ್‌ಎಲ್‌ಗೆ ಕಳಿಸಿದ್ದ ಪೊಲೀಸರು ಇದೀಗ ಮೊಬೈಲ್‌ನ ಸಂಪೂರ್ಣ ಡೀಟೈಲ್ಸ್ ಕಲೆಹಾಕಿದ್ದಾರೆ. ಒಟ್ಟು ಮೂರು ವೀಡಿಯೋಗಳನ್ನ ಸ್ವಾಮೀಜಿಗೆ ಮೊಬೈಲ್‌ನಲ್ಲಿ ಕಳುಹಿಸಲಾಗಿದೆ. ಅದರಲ್ಲಿ ಮಹಿಳೆಯ ಮುಖ ಕಾಣದಂತೆ ಎಡಿಟ್ ಮಾಡಲಾಗಿದೆ. ಇದೀಗ ಸ್ವಾಮೀಜಿಗೆ ವೀಡಿಯೊ ಕಾಲ್ ರೆಕಾರ್ಡ್ ಕಳಿಸಿರೊ ಆ ಮಹಿಳೆಯ ಮೊಬೈಲ್ ನಂಬರ್ ಪತ್ತೆ ಮಾಡಲಾಗಿದೆ. ಮಹಿಳೆಯ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಇಂದು ಅಥವಾ ನಾಳೆ ಒಳಗಾಗಿ ಅರೆಸ್ಟ್ ಮಾಡುವ ಸಾಧ್ಯತೆ ಇದೆ. ಮಹಿಳೆ ವಿಚಾರಣೆ ಬಳಿಕ ಮಹಿಳೆ ಹಿಂದಿರುವ ಕಾಣದ ಕೈಗಳು ಸಹ ಹೊರಗೆ ಬರುವ ಸಾಧ್ಯತೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು/ನೆಲಮಂಗಲ: ಮಾಗಡಿ ಬಂಡೆ ಮಠದ (Bande Math) ಬಸವಲಿಂಗ ಸ್ವಾಮೀಜಿ (Basavalinga Swamiji) ಆತ್ಮಹತ್ಯೆ ಪ್ರಕರಣದ ಸುತ್ತ ದಿನ ಕಳೆದಂತೆ ಅನುಮಾನ ಹುತ್ತ ಸೃಷ್ಠಿಯಾಗುತ್ತಿದೆ.
ಮಂಗಳವಾರ ಶ್ರೀಗಳು ಬರೆದಿದ್ದಾರೆ ಎನ್ನಲಾದ ಡೆತ್‍ನೋತ್‍ನ ಒಂದು ಪುಟ ವೈರಲ್ ಆದ ಬೆನ್ನಲ್ಲೆ, ಬುಧವಾರ ಶ್ರೀಗಳ ವೀಡಿಯೋ ಕಾಲ್ ತುಣುಕೊಂದು ವೈರಲ್ ಆಗಿದ್ದು, ಇದೀಗ ಈ ಬಗ್ಗೆ ಸಾಕಷ್ಟು ಅನುಮಾನ ಹುಟ್ಟುಕೊಂಡಿದೆ. ಮಹಿಳೆಯೊಬ್ಬಳ ಜೊತೆ ಸ್ವಾಮೀಜಿ ವೀಡಿಯೋ ಕಾಲ್‍ನಲ್ಲಿ ಮಾತನಾಡುತ್ತಿರುವ ವೀಡಿಯೋ ದೊರೆತಿದ್ದು, ಇದರ ಹಿಂದಿರುವ ಕಾಣದ ಕೈಗಳ ಹುಡುಕಾಟ ಶುರುವಾಗಿದೆ.
ಬಸವಲಿಂಗ ಸ್ವಾಮೀಜಿ ಮಹಿಳೆ ಜೊತೆಗೆ ಮಾತನಾಡಿದ ವೀಡಿಯೋವನ್ನು ರೆಕಾರ್ಡ್ ಮಾಡಿಕೊಂಡು, ನಂತರ ವೀಡಿಯೋವನ್ನು ಸ್ವಾಮೀಜಿ ಮೊಬೈಲ್‍ಗೆ ಕಳುಹಿಸಿ ಮಹಿಳೆಯ ಗ್ಯಾಂಗ್ ಬೆದರಿಕೆ ಹಾಕಿತ್ತಾ? ಹತ್ತು ದಿನದ ಹಿಂದೆ ಬಸವಲಿಂಗ ಸ್ವಾಮೀಜಿ ಮೊಬೈಲ್‍ಗೆ ದುಷ್ಕರ್ಮಿಗಳು ವೀಡಿಯೋ ಕಳುಹಿಸಿದ್ದು, ಈ ಬಗ್ಗೆ ಯಾರ ಬಳಿನೂ ಹೇಳಿಕೊಳ್ಳಲಾಗದೇ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ:ಬಂಡೆಮಠ ಸ್ವಾಮೀಜಿ ಆತ್ಮಹತ್ಯೆಗೆ ಟ್ವಿಸ್ಟ್- ಮಹಿಳೆಯ ಜೊತೆಗಿನ ವೀಡಿಯೋ ಕಾಲ್ ವೈರಲ್
ವೀಡಿಯೋ ಮಾಡಿದ ಮಹಿಳೆ ಆ್ಯಂಡ್ ಟೀಂ ಬಸವಲಿಂಗ ಸ್ವಾಮೀಜಿಗೆ ಬರೋಬ್ಬರಿ 10 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿತ್ತಾ? ಟೀಂನಲ್ಲಿದ್ದ ಮುಖಂಡನೇ ಸ್ವಾಮೀಜಿ ಬಳಿ ಡೀಲ್ ನೆಪದಲ್ಲಿ ಬಂದಿದ್ದನಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸ್ವಾಮೀಜಿ ಮಠದ ಅಭಿವೃದ್ಧಿ ಜೊತೆಗೆ ಅಂತಹ ದೊಡ್ಡ ಮೊತ್ತದ ಹಣ ಕೂಡ ಇರಲಿಲ್ಲ. ಹೀಗಾಗಿ ದೊಡ್ಡ ಮೊತ್ತದ ಹಣವನ್ನು ಹೊಂದಿಸುವಲ್ಲಿ ಸ್ವಾಮೀಜಿ ವಿಫಲರಾಗಿದರು ಎಂಬ ಮಾಹಿತಿ ತಿಳಿದುಬಂದಿದೆ.
ಬೇಕಂತಾಲೇ ನಾಲ್ವರು ಹೆಣೆದ ಖೆಡ್ಡಾಗೆ ಸ್ವಾಮೀಜಿ ತಗಲಾಕಿಕೊಂಡು ಒದ್ದಾಡಿದ್ರಾ? ಸ್ವಾಮೀಜಿ ಬರೆದಿರುವ ಮೂರು ಪುಟಗಳ ಡೆತ್‍ನೋಟ್‍ನಲ್ಲಿ ಎಲ್ಲವೂ ಅಡಗಿದ್ಯ? ಪೊಲೀಸರ ತನಿಖೆಯಿಂದ ಸತ್ಯಸತ್ಯೆ ಹೊರಬರುತ್ತ ಎಂಬ ಪ್ರಶ್ನೆ ಮಠದ ಭಕ್ತರಲ್ಲಿ ಮೂಡಿದೆ. ಇದನ್ನೂ ಓದಿ: ಬಸವಲಿಂಗ ಶ್ರೀ ವೀಡಿಯೋ ಕಾಲ್ ವೈರಲ್- ಮೂವರು ಮಹಿಳೆಯರ ಪ್ರತ್ಯೇಕ ವಿಚಾರಣೆ
ಬುಧವಾರ ವೈರಲ್ ಆದ ವೀಡಿಯೋ ಬಗ್ಗೆ ಇದೀಗ ಸಾಕಷ್ಟು ಸಂಶಯಗಳು ಮೂಡುತ್ತಿದ್ದು, ಪೊಲೀಸರ ತನಿಖೆಗೆ ದಾರಿ ತಪ್ಪಿಸಲು ಹುನ್ನಾರ ನಡೆಯುತ್ತಿದ್ಯಾ? ವೀಡಿಯೋ ವೈರಲ್ ಮಾಡಿದ ವ್ಯಕ್ತಿ ಯಾರು? ಯಾವ ನಂಬರ್‍ನಿಂದ ವೀಡಿಯೋ ಲೀಕ್ ಆಯಿತು? ವೀಡಿಯೋ ಲೀಕ್ ಮಾಡಿದ ಹಿಂದೆ ಇನ್ನೂ ಷಡ್ಯಂತ್ರ ನಡೆದಿದ್ಯಾ? ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯ ಉತ್ತರ ಸಿಗಬೇಕಾಗಿದೆ.
Live Tv
[brid partner=56869869 player=32851 video=960834 autoplay=true]
ರಾಮನಗರ: ರೇಷ್ಮೆನಾಡು ರಾಮನಗರದಲ್ಲಿ (Ramanagara) ಸ್ವಾಮೀಜಿಗಳ ಸರಣಿ ಆತ್ಮಹತ್ಯೆ (Suicide) ಮುಂದುವರಿದಿದೆ. ಕಳೆದ ತಿಂಗಳು ಮನನೊಂದು ಮಾಗಡಿಯ ಚಿಲುಮೆ ಮಠದ ಸ್ವಾಮಿಜೀಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಕಂಚುಗಲ್ ಬಂಡೆಮಠದ (Bande Mutt) ಸ್ವಾಮೀಜಿ ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ (Death Note) ಪತ್ತೆಯಾಗಿದ್ದು, ಶ್ರೀಗಳ ಆತ್ಮಹತ್ಯೆ ಸುತ್ತ ಅನುಮಾನಗಳ ಹುತ್ತ ಬೆಳೆದಿದೆ. ಮಠದ ಆವರಣದಲ್ಲಿ ಶ್ರೀಗಳ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲೇ ದೊಡ್ಡ ಮಠ ಎಂಬ ಪ್ರಖ್ಯಾತಿ ಪಡೆದಿರುವ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಮಾಗಡಿಯ ಚಿಲುಮೆ ಮಠದ ಶ್ರೀ ಬಸವಲಿಂಗ ಸ್ವಾಮಿಗಳ (Basavalinga Swamiji) ದೇಹವೂ ಸಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ದುರ್ಘಟನೆ ಭಕ್ತರ ಮನಸ್ಸಿನಿಂದ ಮಾಸುವ ಮುನ್ನವೇ ಇಂದು ಬೆಳಗ್ಗೆ ಶ್ರೀಬಸವಲಿಂಗ ಸ್ವಾಮೀಜಿಯವರ ದೇಹವೂ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಇತರ ಮಠಗಳ ಶ್ರೀಗಳು ಹಾಗೂ ಭಕ್ತರಲ್ಲಿ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿಂದ ಬಿದ್ದು ಬೈಕ್ ಸವಾರ ಸಾವು
ಡೆತ್‍ನೋಟ್‍ನಲ್ಲಿ ಏನಿದೆ?
ಶ್ರೀಗಳು ಅತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೂರು ಪುಟಗಳ ಡೆತ್‍ನೋಟ್ ಬರೆದಿದ್ದು, ಡೆತ್‍ನೋಟ್‍ನಲ್ಲಿ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಯಾರ ಸಹಾಯವೂ ಇರಲಿಲ್ಲ. ಕೆಲವರಿಂದ ಬೆದರಿಕೆ ಕರೆಗಳು ಸಹ ಬಂದಿವೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ ಎಂದು ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ ಎಂದು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಸ್ವಾಮೀಜಿ ಆತ್ಮಹತ್ಯೆ ಪ್ರಕರಣ- ಮೂರು ಪುಟಗಳ ಡೆತ್‍ನೋಟ್ ಪತ್ತೆ
1997ರಲ್ಲಿ ಬಂಡೇ ಮಠದ ಅಧಿಕಾರ ವಹಿಸಿಕೊಂಡಿದ್ದ ಬಸವಲಿಂಗ ಸ್ವಾಮೀಜಿ ಅವರ ಮೂಲ ಹೆಸರು ಬಸವರಾಜು. ಚನ್ನಮಲ್ಲಯ್ಯ, ಪುಟ್ಟಗೌರಮ್ಮರ ಎಂಟನೇ ಪುತ್ರರಾಗಿದ್ದ ಬಸವಲಿಂಗ ಸ್ವಾಮೀಜಿ 8ನೇ ತರಗತಿಯವರೆಗೂ ಬಂಡೇಮಠದಲ್ಲೇ ವಿದ್ಯಾಭ್ಯಾಸ ಮಾಡಿದ್ದರು. ನಂತರ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಪಡೆದಿದ್ದ ಶ್ರೀಗಳು ವೇದ, ಉಪನಿಷತ್, ವಿದ್ವತ್‍ನಲ್ಲಿ ಪಾರಂಗತ ಗಳಿಸಿದ್ದರು. ಸ್ವಾಮೀಜಿಗಳ ಹೆಸರಲ್ಲಿ 80 ಎಕರೆ ಜಮೀನು ಇದ್ದು, ಬಂಡೆಮಠದಲ್ಲಿ 2ವರ್ಷ ಮರಿಸ್ವಾಮಿಗಳಾಗಿ ಬಳಿಕ ಪೀಠ ಅಲಂಕರಿಸಿದ್ದರು. ಇತ್ತೀಚೆಗೆ ಬೆಳ್ಳಿ ಮಹೋತ್ಸವ ಆಚರಣೆ ಮಾಡಿಕೊಂಡಿದ್ದರು. ಅಲ್ಲದೇ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಗಣ್ಯರನ್ನು ಸೇರಿಸಿ ಮಠದಲ್ಲಿ ನೂತನ ಕಟ್ಟಡದ ಗುದ್ದಲಿ ಪೂಜೆಗೆ ಪ್ಲಾನ್ ಮಾಡಿದ್ದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಭಕ್ತವೃಂದಕ್ಕೆ ಭರಿಸಲಾಗದ ನೋವುಂಟು ಮಾಡಿದೆ.
ಅನೇಕ ಉತ್ತಮ ಕಾರ್ಯಕ್ರಮಗಳನ್ನು ಮಾಡಿ ಸಮಾಜಕ್ಕೆ ಮಾದರಿ ಮಠವಾಗಿಯೂ ಬೆಳೆದಿದ್ದ ಶ್ರೀ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಸುದ್ದಿ ಕೇಳಿ ಸಾವಿರಾರು ಭಕ್ತಾದಿಗಳು ವಿಚಲಿತರಾಗಿದ್ದಾರೆ. ಅಲ್ಲದೇ ಶ್ರೀಗಳ ನಿಧನ ಸುದ್ದಿ ಕೇಳಿ ಸಿದ್ಧಲಿಂಗಾ ಸ್ವಾಮೀಜಿ, ಸುತ್ತೂರು ಶ್ರೀಗಳು ಸೇರಿದಂತೆ ಹಲವು ಮಠಾಧೀಶರು, ಜನಪ್ರತಿನಿಗಳು ಹಾಗೂ ಗಣ್ಯರು ಮಠಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಸಾವಿರಾರು ಮಂದಿ ಭಕ್ತರು ಮಠದ ಬಳಿ ಜಮಾಯಿಸಿದ್ದ ಹಿನ್ನೆಲೆಯಲ್ಲಿ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಹಿರಿಯ ಶ್ರೀ ಶಿವರುದ್ರ ಮಹಾಸ್ವಾಮಿ ಗದ್ದುಗೆ ಪಕ್ಕದಲ್ಲೇ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನಡೆಯಿತು.
ಒಟ್ಟಾರೆ ಮಠದ ಕೊಠಡಿಯೊಂದರ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶ್ರೀಗಳ ಮೃತದೇಹ ಪತ್ತೆಯಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ದೀಪಾವಳಿ ಆಚರಣೆಯ ಸಿದ್ಧತೆಯಲ್ಲಿ ಮಠದ ಭಕ್ತಾದಿಗಳಿಗೆ ಬಸವಲಿಂಗ ಸ್ವಾಮೀಜಿ ಅವರ ಆತ್ಮಹತ್ಯೆ ಬರಸಿಡಿಲು ಬಡಿದಂತಾಗಿದೆ. ಡೆತ್‍ನೋಟ್‍ನಲ್ಲಿರುವ ಕೆಲವು ಮಾಹಿತಿಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಕೆಲ ವೈಯಕ್ತಿಕ ಕಾರಣಗಳಿಂದ ಬೇಸತ್ತು ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಪೋಲಿಸರ ತನಿಖೆ ನಂತರವಷ್ಟೇ ಸತ್ಯಾಸತ್ಯತೆ ಬಯಲಾಗಬೇಕಿದೆ.
Live Tv
[brid partner=56869869 player=32851 video=960834 autoplay=true]