Tag: ಬಂಡೆಪ್ಪ ಖಾಶೆಂಪೂರ್

  • ಬಿಜೆಪಿ ಜೊತೆ ಮೈತ್ರಿ – ಜೆಡಿಎಸ್‌ನಲ್ಲಿಅಸಮಾಧಾನವಿಲ್ಲ ಎಂದ ಖಾಶೆಂಪೂರ್

    ಬಿಜೆಪಿ ಜೊತೆ ಮೈತ್ರಿ – ಜೆಡಿಎಸ್‌ನಲ್ಲಿಅಸಮಾಧಾನವಿಲ್ಲ ಎಂದ ಖಾಶೆಂಪೂರ್

    ಬೀದರ್‌: ಲೋಕಸಭಾ ಚುನಾವಣೆಗಾಗಿ (Lok Sabha Election) ಬಿಜೆಪಿ (BJP) ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಕ್ಕೆ ಜೆಡಿಎಸ್‌ನಲ್ಲಿ (JDS) ಅಸಮಾಧಾನ ಸ್ಫೋಟ ವಿಚಾರಕ್ಕೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ (Bandeppa Kashempur) ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭೆಗೆ ನಾವು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದಕ್ಕೆ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ದೇವೇಗೌಡರು (Devegowda) ಹಾಗೂ ಕುಮಾರಸ್ವಾಮಿ (Kumaraswamy) ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾವು ಬದ್ಧರಾಗಿ ಇರುತ್ತೇವೆ. ಒಬ್ಬರು ಇಬ್ಬರು ಅಸಮಾಧಾನವಾಗಿದ್ದು  ಅವರ ಜೊತೆಗೆ ಉಪಾಧ್ಯಕ್ಷರು ರಾಜೀನಾಮೆ ಕೊಟ್ಟಿದ್ದಾರೆ. ಎಲ್ಲರನ್ನು ಕುಮಾರಸ್ವಾಮಿ ಸಮಾಧಾನ ಮಾಡುತ್ತಾರೆ ಎಂದರು.

    ಸ್ಥಳೀಯ ಮಟ್ಟದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇರುತ್ತದೆ. ಅದನ್ನೂ ಕುಮಾರಸ್ವಾಮಿ ಸರಿಪಡಿಸುತ್ತಾರೆ. ನಾಳೆ ಬೆಂಗಳೂರಿನಲ್ಲಿ ಯಾವುದೇ ಅತೃಪ್ತರ ಸಭೆ ಇಲ್ಲ. ಅವರು ವೈಯಕ್ತಿಕ ಸಭೆ ಮಾಡಿದರೂ ನಾನು ಸಭೆಗೆ ಹೋಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ವಿದೇಶದಲ್ಲಿರುವ ಖಲಿಸ್ತಾನ್‌ ಉಗ್ರರಿಗೆ ಶಾಕ್‌ – OCI Card ರದ್ದು

    ನಮ್ಮಲ್ಲಿ ಹೆಚ್‌ಡಿಡಿ ಹಾಗೂ ಹೆಚ್‌ಡಿಕೆ ಸಭೆ ಮಾತ್ರ ಇರುತ್ತದೆ. ಮೊದಲು ಅಲ್ಪಸಂಖ್ಯಾತರಿಗೆ 4% ಮೀಸಲಾತಿ ಕೊಟ್ಟಿದ್ದೇ ದೇವೇಗೌಡರು ಎಂದು ತಿಳಿಸಿದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯದಲ್ಲಿ ಈ ಬಾರಿ ಹೆಚ್‍ಡಿಕೆ ಸಿಎಂ ಆಗೋದು ಗ್ಯಾರಂಟಿ: ಬಂಡೆಪ್ಪ ಖಾಶೆಂಪೂರ್

    ರಾಜ್ಯದಲ್ಲಿ ಈ ಬಾರಿ ಹೆಚ್‍ಡಿಕೆ ಸಿಎಂ ಆಗೋದು ಗ್ಯಾರಂಟಿ: ಬಂಡೆಪ್ಪ ಖಾಶೆಂಪೂರ್

    ಬೀದರ್: ರಾಜ್ಯದಲ್ಲಿ ಈ ಬಾರಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗುವುದು ಪಕ್ಕಾ ಇದೆ. ಆದರೆ ಈ ಬಾರಿ ಇನ್ನೊಂದು ಪಕ್ಷದೊಂದಿಗೆ ಮೈತ್ರಿ ಮಾಡಬಾರದು ಎಂದು ಪರೋಕ್ಷವಾಗಿ ಸಮ್ಮಿಶ್ರ ಸರ್ಕಾರ ಬೇಡ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ವಿಶ್ವಾಸ ವ್ಯಕ್ತಪಡಿಸಿದರು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲು 20 ತಿಂಗಳು ಬಳಿಕ 14 ತಿಂಗಳು ಜೊತೆಯಾಗಿ ಸಮ್ಮಿಶ್ರ ಸರ್ಕಾರ ಮಾಡಿ ಸಾಲ ಮನ್ನಾ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಸಹಿತ ಸಮ್ಮಿಶ್ರ ಸರ್ಕಾರ ಉಳಿಯಲಿಲ್ಲ ಎಂದರು. ಇದನ್ನೂ ಓದಿ: ಪಿಎಸ್‍ಐ ನೇಮಕಾತಿ ಅಕ್ರಮ ವಿಚಾರ – 7ನೇ ರ‍್ಯಾಂಕ್ ಪಡೆದಿದ್ದ ಕಲಬುರಗಿ ಅಭ್ಯರ್ಥಿ ಸಿಐಡಿ ವಶಕ್ಕೆ

    ಸಿಎಂ ಇಬ್ರಾಹಿಂ ಜೆಡಿಎಸ್ ಬರೋದು ಪಕ್ಕಾ. ಆದರೆ ರೋಷನ್ ಬೇಗ್ ಜೆಡಿಎಸ್‍ಗೆ ಬರೋದು ಗೋತ್ತಿಲ್ಲ. ಕಾಂಗ್ರೆಸ್ – ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಸಮಯ ಬಂದಾಗ ಹೇಳುತ್ತೆನೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿಯವರು ಗೊಂದಲ ಮೂಡಿಸುವ ಕೆಲಸ ಮಾಡಬಾರದು: ಬಿಎಸ್‍ವೈ

  • ಬೀದರ್‌ನಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವ

    ಬೀದರ್‌ನಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವ

    ಬೀದರ್: ರಾಜ್ಯದ ಗಡಿ ಜಿಲ್ಲೆ ಬೀದರ್‌ನಲ್ಲಿ ಮತ್ತೆ ಎರಡು ಗ್ರಾಮಗಳಲ್ಲಿ ಭೂಮಿ ಕಂಪನದ ಅನುಭವವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

    ಬೀದರ್ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ತಡರಾತ್ರಿ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಕಂಪಿಸಿದ್ದಕ್ಕೆ ಮಂಗಲಗಿ ಗ್ರಾಮಸ್ಥರು ಆತಂಕಗೊಂಡು ಮನೆಯಿಂದ ಹೊರ ಬಂದಿದ್ದಾರೆ.

    ಮತ್ತೊಂದೆಡೆ ತಾಲೂಕಿನ ಸಿರಕಟನಹಳ್ಳಿಯಲ್ಲೂ ಒಂದು ಬಾರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಇದರಿಂದ ಭಯಗೊಂಡ ಗ್ರಾಮಸ್ಥರು ಮನೆಯಿಂದ ಹೊರಗಡೆ ಬಂದು ಜಾಗರಣೆ ಮಾಡಿದ್ದಾರೆ. ಇದನ್ನೂ ಓದಿ:  ಬಿಹಾರ್‌ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ

    ವಿಷಯ ತಿಳಿದು ತಡರಾತ್ರಿ ಸಿರಕಟನಹಳ್ಳಿ ಗ್ರಾಮಕ್ಕೆ ಶಾಸಕ ಬಂಡೆಪ್ಪ ಖಾಶೆಂಪೂರ್ ಭೇಟಿ ನೀಡಿ ಪರಿಶೀಲನೆ ಮಾಡಿ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ. ಪದೇ ಪದೇ ಭೂಮಿ ಕಂಪಿಸುತ್ತಿರುವುದಕ್ಕೆ ಹಾಗೂ ಭೂಮಿಯಿಂದ ಕೇಳಿ ಬರುತ್ತಿರುವ ನಿಗೂಢ ಶಬ್ದಕ್ಕೆ ಈ ಗ್ರಾಮಗಳ ಜನರು ಆತಂಕಗೊಂಡಿದ್ದಾರೆ. ಇದು ಭೂಕಂಪನವಲ್ಲ, ಮಳೆ ಜಾಸ್ತಿಯಾಗಿದ್ದರಿಂದ ಈ ರೀತಿಯಾಗುತ್ತಿದೆ ಎಂದು ಗ್ರಾಮಸ್ಥರಿಗೆ ಶಾಸಕರು ತಿಳಿಸಿದರು. ಇದನ್ನೂ ಓದಿ: ವಿದ್ಯುತ್‌ ನೀಡದಿದ್ದಕ್ಕೆ ಅಖಿಲೇಶ್‌ ಯಾದವ್‌ ಮೊದಲು ಕ್ಷಮೆಯಾಚಿಸಲಿ: ಯೋಗಿ ಆದಿತ್ಯನಾಥ್

  • ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌ಗೆ ಕೊರೊನಾ ಸೋಂಕು ದೃಢ

    ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌ಗೆ ಕೊರೊನಾ ಸೋಂಕು ದೃಢ

    ಬೀದರ್: ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 4 ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದ ವೇಳೆ ಸೋಂಕು ದೃಢಪಟ್ಟಿದೆ. ಯಾವುದೇ ಗುಣಲಕ್ಷಣಗಳು ಕಂಡು ಬರದಿದ್ದರೂ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸೋಂಕು ದೃಢಪಡುತ್ತಿದ್ದಂತೆ 4-5 ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ. ಬಂಡೆಪ್ಪ ಖಾಶೆಂಪೂರ್ ಶಿರಾದಲ್ಲಿ ನಡೆದ ಉಪ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದರು. ಹೀಗಾಗೀ ಪ್ರಚಾರದ ವೇಳೆ ಕೊರೊನಾ ಸೋಂಕು ತಗುಲಿರುವ ಸಾದ್ಯತೆ ಇದೆ.

  • ಬ್ರೀಮ್ಸ್ ಅವ್ಯವಸ್ಥೆ ನೋಡಿ ನಿರ್ದೇಶಕರನ್ನ ತರಾಟೆ ತಗೆದುಕೊಂಡ ಬಂಡೆಪ್ಪ ಖಾಶೆಂಪೂರ್

    ಬ್ರೀಮ್ಸ್ ಅವ್ಯವಸ್ಥೆ ನೋಡಿ ನಿರ್ದೇಶಕರನ್ನ ತರಾಟೆ ತಗೆದುಕೊಂಡ ಬಂಡೆಪ್ಪ ಖಾಶೆಂಪೂರ್

    ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್ ಇಂದು ಬ್ರೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಅಲ್ಲಿನ ಅವ್ಯವಸ್ಥೆ ಕಂಡು ಬ್ರೀಮ್ಸ್ ನಿರ್ದೇಶಕ ಡಾ. ಚನ್ನಣ್ಣನವರ ಅವರನ್ನು ತರಾಟೆಗೆ ತಗೆದುಕೊಂಡಿದ್ದಾರೆ.

    ಆಸ್ಪತ್ರೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಹಾಗೂ ಅವ್ಯವಸ್ಥಿತೆಯಿಂದ ರೋಗಿಗಳು ಪರದಾಡುವಂತಾಗಿದೆ ಎಂದು ಸ್ಥಳೀಯರು ಸಚಿವರಿಗೆ ದೂರು ನೀಡಿದ್ದರು. ಹೀಗಾಗಿ ಇಂದು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವಪ್ಪ ನೇತೃತ್ವದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಬೆಡ್‍ಗಳ ಮೇಲೆ ದೂಳು ಇರುವುದು, ಸ್ವಚ್ಛತೆ ಇಲ್ಲದಿರುವುದು, ಬೆಳಕಿನ ಅಭಾವ ಕಂಡು ಅಧಿಕಾರಿಗಳ ವಿರುದ್ಧ ಗರಂ ಆದರು.

    ನಿಮ್ಮ ಮನೆಯ ಕೆಲಸಗಾರರು ಸರಿಯಾಗಿ ಕೆಲಸ ಮಾಡದಿದ್ದರೆ ನೀವು ಸುಮ್ಮನೆ ಇರುತ್ತಿರಾ? ಆಸ್ಪತ್ರೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ನಿಮಗೇನು ತೊಂದರೆ? ನಿಮ್ಮ ನಿಷ್ಕಾಳಜಿ ರೋಗಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಸಮಸ್ಯೆ ಏನು ಅಂತಾ ಹೇಳಿ ಎಂದು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

    ಸ್ವಚ್ಛತೆ ಕಾಪಾಡಲು ಹಾಗೂ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ನಿಮಗೆ ಏನು ಸವಲತ್ತು ಬೇಕು ಹೇಳಿ, ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ನಿಮಗೆ ಅನುಕೂಲ ಮಾಡಿಕೊಡುತ್ತೇನೆ. ಸಹಾಯ ಮಾಡಲಾಗುತ್ತದೆ ಅಂತಾ ನಾನೇ ಪತ್ರದಲ್ಲಿ ಬರೆದುಕೊಡಬೇಕೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv