Tag: ಬಂಡೆಪ್ಪ ಖಾಶಂಪೂರ್

  • ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಖಾಶಂಪೂರ್ ಫುಲ್ ಕ್ಲಾಸ್

    ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಖಾಶಂಪೂರ್ ಫುಲ್ ಕ್ಲಾಸ್

    ಬೀದರ್: ಕಳೆದ ಬಾರಿಯ ಕೆಡಿಪಿ ಸಭೆಯಲ್ಲಿ ಕೇಳಿದ್ದ ಮಾಹಿತಿ ನೀಡದ್ದಕ್ಕೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶಂಪೂರ್ ಅವರು ಹಿಗ್ಗಾಮಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಬೀದರ್‍ನ ಹೇಳಿಕೆಗಾಗಿ ಒಬ್ಬ ಏನಾದರೂ ಬಂದಿದ್ದಿರಾ? ಕಾಟಾಚಾರಕ್ಕೆ ಯಾಕೆ ಕೆಲಸ ಮಾಡುತ್ತಿದ್ದಿರಿ. ನಮ್ಮ ಬೀದರ್ ಅನ್ನು ಉದ್ಧಾರ ಮಾಡೋಕೆ ಏನ್‍ಬೇಕು ಎಂದು ಒಬ್ಬ ಆಫೀಸರ್ ಎದ್ದು ಹೇಳಿ. ನಾನು ಕರೆದಾಗ ಬರೋದಲ್ಲ. ನೀವು ನನ್ನ ಬಳಿ ಎಂದಾದರೂ ಚರ್ಚೆ ಮಾಡಿದ್ದೀರಾ? ಏನ್ ತಿಳ್ಕೊಂದ್ದಿರಾ ನೀವು ಸರ್ಕಾರ ಅದ್ರೆ ಏನು? 14 ರಂದು ಮುಖ್ಯಮಂತ್ರಿಗಳು ಬರುತ್ತಾರೆ. ಸ್ಪೆಷಲ್ ಪ್ಯಾಕೇಜ್ ಕೊಡಬೇಕು ಅಂದುಕೊಂಡಿದ್ದೇವೆ. ನಿಮ್ಮನ್ನು ಕಟ್ಕೊಂಡು ನಾವು ಯಾವ ಪ್ಯಾಕೇಜ್ ಮಾಡುವುದು. ಬೈದ್ರೆ ಕೈ ಕಟ್ಟಿಕೊಂಡು ನಿಲ್ಲೋದು ಮಾತ್ರ ಗೊತ್ತು ಎಂದು ವಾಗ್ದಾಳಿ ನಡೆಸಿದರು.

    ಜನರು ನಮ್ಮ ಮೇಲೆ ನಿರೀಕ್ಷೆಯನ್ನು ಇಟ್ಟಿರುತ್ತಾರೆ. ಯಾವ ಅಧಿಕಾರಿ ಕೆಲಸ ಮಾಡುವುದಿಲ್ಲವೋ ಅವರನ್ನು ಮುಲಾಜು ಇಲ್ಲದೇ ತೆಗೆದು ಹಾಕುತ್ತೇನೆ ಎಂದು ಹೇಳಿ ಬಂಡೆಪ್ಪ ಖಾಶಂಪೂರ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

    ಅಧಿಕಾರಿಗಳಿಗೆ ಸಚಿವರು ಪುಲ್‍ಕ್ಲಾಸ್ ತೆಗೆದುಕೊಳ್ಳುತ್ತಿದ್ದರೂ ಕೆಲ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧ ಇಲ್ಲ ಎನ್ನುವಂತೆ ಸಭೆಯ ಒಳಗಡೆ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv