Tag: ಬಂಡೆಕಲ್ಲು

  • ವಾಹನ‌ ಸವಾರರೇ ಎಚ್ಚರ – ಚಾರ್ಮಾಡಿ ಘಾಟಿಯಲ್ಲಿ ಬಾಯ್ತೆರೆದು ಕೂತಿವೆ ಬಂಡೆಕಲ್ಲು

    ವಾಹನ‌ ಸವಾರರೇ ಎಚ್ಚರ – ಚಾರ್ಮಾಡಿ ಘಾಟಿಯಲ್ಲಿ ಬಾಯ್ತೆರೆದು ಕೂತಿವೆ ಬಂಡೆಕಲ್ಲು

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ (Charmadi Ghat) ಸಂಚಾರ ಮಾಡುವ ಸವಾರರು ಅತ್ಯಂತ ಎಚ್ಚರ ಹಾಗೂ ಜಾಗರೂಕರಾಗಿ ವಾಹನ ಚಾಲನೆ ಮಾಡಬೇಕಿದೆ. ಏಕೆಂದರೆ, ಚಾರ್ಮಾಡಿ ಘಾಟಿಯ ಅಣ್ಣಪ್ಪಸ್ವಾಮಿ ದೇಗುಲದಿಂದ ತುಸು ದೂರದಲ್ಲೇ 2 ಬೃಹತ್ ಬಂಡೆಗಳು (Boulder) ಅನಾಹುತಕ್ಕೆ ಬಾಯ್ತೆರೆದು ಕೂತಿವೆ.

    ಬೃಹತ್ ಬಂಡೆಗಳ ಕೆಳಭಾಗದ ಮಣ್ಣು ಭಾರೀ ಮಳೆಗೆ ಕೊಚ್ಚಿ ಹೋಗಿದ್ದು ಎರಡು ಬಂಡೆಗಳು ಕೂದಲೆಳೆ ಅಂತರದಲ್ಲಿ ನಿಂತಂತಿದೆ. ಮತ್ತೆ ಮಳೆಯಾದರೇ ಅಥವಾ ಬಿರುಗಾಳಿಗೆ ಬಂಡೆಗಳು ಕುಸಿದು ಬೀಳುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಆ ಕಿರಿದಾದ ರಸ್ತೆಯಲ್ಲಿ (Charmadi Ghat Road) ಬಂಡೆಗಳು ಕುಸಿದು ಬಿದ್ದರೆ ಮತ್ತೊಂದು ಬದಿ ಪ್ರಪಾತವಿರುವುದರಿಂದ ರಸ್ತೆಯೇ ಕುಸಿಯುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕಪಟ್ಟಿದ್ದಾರೆ. ಇದನ್ನೂ ಓದಿ: ಟಿಬಿ ಡ್ಯಾಂಗೆ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಪ್ಲಾನ್ – ಏನೇನು ತಯಾರಿ ನಡೆಯುತ್ತಿದೆ?

    ಒಂದು ವೇಳೆ ಟ್ರಾಫಿಕ್ ಜಾಮ್, ಸೆಲ್ಫಿ ಕ್ರೇಜ್, ಇನ್ಯಾವುದೋ ಕಾರಣಕ್ಕೆ ಟ್ರಾಫಿಕ್ ಜಾಮ್ ಆದ ಸಂದರ್ಭದಲ್ಲಿ ಕೆಳಗಡೆ ವಾಹನಗಳು ಇದ್ದರೇ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆಯೂ ಇದೆ. ಹಾಗಾಗಿ, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಅತ್ಯಂತ ಎಚ್ಚರದಿಂದಿರುವಂತೆ ಅಲ್ಲಿನ ಸ್ಥಳೀಯರೇ ಮನವಿ ಮಾಡುತ್ತಿದ್ದಾರೆ.

    ಅಲ್ಲದೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅನಾಹುತ ಸಂಭವಿಸುವ ಮೊದಲೇ ಕಲ್ಲುಗಳನ್ನ ಸ್ಥಳಾಂತರಿಸಿದರೇ ಅಥವಾ ಕೆಳಗೆ ಇಳಿಸಿದ್ರೆ ಮುಂದಾಗುವ ಅನಾಹುತ ತಪ್ಪಿಸಬಹುದು ಎಂದು ಹೆದ್ದಾರಿ ಪ್ರಾಧಿಕಾರದ (Highway Authority) ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ದುರಂತ – ಎರಡನೇ ಹಂತದ ಶೋಧಕಾರ್ಯ, ಗಂಗಾವಳಿ ನದಿಯಲ್ಲಿ ಲಾರಿಯ ಅವಶೇಷ ಪತ್ತೆ 

  • ಬಂಡೆಕಲ್ಲು ಸಿಡಿತದ ಭಾರೀ ಶಬ್ಧಕ್ಕೆ ಬೆಚ್ಚಿಬಿದ್ದ ಬೆಂಗ್ಳೂರು!

    ಬಂಡೆಕಲ್ಲು ಸಿಡಿತದ ಭಾರೀ ಶಬ್ಧಕ್ಕೆ ಬೆಚ್ಚಿಬಿದ್ದ ಬೆಂಗ್ಳೂರು!

    ಬೆಂಗಳೂರು: ಲೇಔಟ್ ನಿರ್ಮಾಣಕ್ಕಾಗಿ ಭಾರೀ ಪ್ರಮಾಣದ ಸ್ಫೋಟಕಗಳನ್ನ ಬಳಸಿ ಬಂಡೆ ಕಲ್ಲನ್ನು ಒಡೆದಿದ್ದು ಕೆಲಕಾಲ ನಗರದಲ್ಲಿ ಆತಂಕಕ್ಕೆ ಕಾರಣವಾಗಿತ್ತು.

    ರಾಜರಾಜೇಶ್ವರಿ ನಗರ ನೈಸ್ ರಸ್ತೆಯ ಬಳಿ ಕೆರೆಕೋಡಿ ಎಂಬಲ್ಲಿ ಲೇಔಟ್ ನಿರ್ಮಾಣಕ್ಕೆ ಬಂಡೆ ಕಲ್ಲನ್ನು ಒಡೆಯಲಾಗುತ್ತಿದೆ. ಸ್ಫೋಟಕಗಳನ್ನು ಬಳಸಿ ಒಡೆಯುತ್ತಿದ್ದ ಕೆಲಸಗಾರರು ಇವತ್ತು ಭಾರೀ ಪ್ರಮಾಣದ ಸ್ಫೋಟಕಗಳನ್ನು ಬಳಸಿದ್ದಾರೆ. ಇದರ ಪರಿಣಾಮ ರಾಜರಾಜೇಶ್ವರಿ ನಗರ, ಕೆಂಗೇರಿ, ಕುಮಾರಸ್ವಾಮಿ ಲೇಔಟ್ ಸಮೀಪದ ಪ್ರದೇಶಗಳಲ್ಲಿ ಭಾರೀ ಶಬ್ಧ ಕೇಳಿದೆ. ಶಬ್ಧ ಕೇಳಿದ ಕೂಡಲೇ ಜನ ಆತಂಕದಿಂದ ಹೊರ ಬಂದಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಕೆರಕೋಡಿ ನಿವಾಸಿ ಜಯಪ್ರಭಾ, ಕಳೆದ ಮೂರು ತಿಂಗಳಿನಿಂದ ಈ ಭಾಗದಲ್ಲಿ ಲೇಔಟ್ ನಿರ್ಮಾಣಕ್ಕೆ ಬಂಡೆ ಕಲ್ಲನ್ನು ಒಡೆಯಲಾಗುತ್ತಿದೆ. ಡೈನಾಮೈಟ್ ಬಳಸಿ ಒಡೆಯುವ ಕಾರಣ ಈ ಶಬ್ಧ ಸಾಮಾನ್ಯ. ಆದರೆ ಇಂದು ಭಾರೀ ಪ್ರಮಾಣದಲ್ಲಿ ಡೈನಾಮೈಟ್ ಬಳಸಿರುವ ಸಾಧ್ಯತೆಯಿದೆ. ಹೀಗಾಗಿ ಎಂದಿಗಿಂತ ಭಾರೀ ಪ್ರಮಾಣದಲ್ಲಿ ಶಬ್ಧ ಕೇಳಿದೆ. ಸ್ವಲ್ಪ ಕಂಪನದ ಅನುಭವ ಆಗಿದೆ ಎಂದು ವಿವರಿಸಿದರು.

    ಭಾರೀ ಪ್ರಮಾಣದ ಶಬ್ಧ ಕೇಳಿ ಬಂದ ಹಿನ್ನೆಯಲ್ಲಿ ಆರ್ ಆರ್ ನಗರ ಸುತ್ತಮುಲ್ಲಿನ ಜನ ಭೂಕಂಪ ಆಯ್ತು ಎಂದು ತಿಳಿದು ಮನೆಯಿಂದ ಹೊರ ಬಂದಿದ್ದರು. ಹೀಗಾಗಿ ಭೂಕಂಪದ ವದಂತಿ ಹರಿದಾಡಲು ಆರಂಭವಾಗಿತ್ತು.

    ಈ ವಿಚಾರದ ಬಗ್ಗೆ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ವಿಜ್ಞಾನಿ ಗವಾಸ್ಕರ್ ಪ್ರತಿಕ್ರಿಯಿಸಿ, ಭೂಮಿ ಕಂಪಿಸಿರುವುದು ಕೇವಲ ವದಂತಿಯಷ್ಟೇ. ಭೂಗರ್ಭದ ಒಳಗೆ ಯಾವುದೇ ಕಂಪನವಾಗಿಲ್ಲ. ಯಾವುದಾದರೂ ದೊಡ್ಡಮಟ್ಟದ ಶಬ್ಧವಾಗಿರಬಹುದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv