Tag: ಬಂಡಿಸಿದ್ದನಗೌಡ

  • ರೆವೆನ್ಯೂ ಇನ್ಸ್ ಪೆಕ್ಟರ್‍ಗೆ ಜೀವಬೆದರಿಕೆ ಹಾಕಿದ ಶಾಸಕ ಬಂಡಿಸಿದ್ದೇಗೌಡ: ವಿಡಿಯೋ ನೋಡಿ

    ರೆವೆನ್ಯೂ ಇನ್ಸ್ ಪೆಕ್ಟರ್‍ಗೆ ಜೀವಬೆದರಿಕೆ ಹಾಕಿದ ಶಾಸಕ ಬಂಡಿಸಿದ್ದೇಗೌಡ: ವಿಡಿಯೋ ನೋಡಿ

    ಮಂಡ್ಯ: ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಶ್ರೀರಂಗಪಟ್ಟಣ ಕಸಬಾದ ರೆವೆನ್ಯೂ ಇನ್ಸ್ ಪೆಕ್ಟರ್ ಕೋಟಿ ದೊಡ್ಡಯ್ಯ ಎಂಬವರ ಮೇಲೆ ಜೀವಬೆದರಿಕೆ ಹಾಕಿದ್ದಾರೆ.

    ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ದೂರವಾಣಿ ಕರೆ ಮಾಡಿ ಜಾತಿ ನಿಂದನೆ, ಅವಾಚ್ಯ ಶಬ್ಧ, ಸೊಂಟದ ಕೆಳಗಿನ ಭಾಷೆಗಳ ಬಳಕೆ ಮಾಡಿ ದಲಿತ ದೌರ್ಜನ್ಯ ಕಾಯ್ದೆ ಅಡಿ ಕೇಸ್ ಹಾಕುತ್ತೇನೆ ಅಷ್ಟೇ ಅಲ್ಲದೇ ಚಪ್ಪಲಿಯಲ್ಲಿ ಹೊಡೆದು ಮುಗಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೊಡ್ಡಯ್ಯ ಆರೋಪಿಸಿದ್ದಾರೆ.

    ನಿರಂತರ ದೌರ್ಜನ್ಯ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಶಾಸಕ ರಮೇಶ್ ಮತ್ತು ಬೆಂಬಲಿಗರ ವಿರುದ್ಧ ಮಂಡ್ಯ ಎಸ್‍ಪಿ ಅವರಿಗೆ ಕೋಟಿ ದೊಡ್ಡಯ್ಯ ದೂರು ನೀಡಿದ್ದಾರೆ.

    ರಾಜ್ಯಪಾಲರು, ಸಿಎಂ, ಲೋಕಾಯುಕ್ತ, ವಿಧಾನ ಸಭಾ ಸ್ಪೀಕರ್‍ಗೆ ದೂರು ನೀಡಿರುವ ಕೋಟಿ ದೊಡ್ಡಯ್ಯ ಆರೋಪಿತರ ವಿರುದ್ಧ ಕ್ರಮಕೈಗೊಳ್ಳಬೇಕು, ಜೀವ ಭಯ ಇರುವ ತನಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.