Tag: ಬಂಜಾರ ಸಮುದಾಯ

  • ಬಂಜಾರ ಸಮುದಾಯದ ಅಭಿವೃದ್ಧಿಗೆ ಬಿಎಸ್‌ವೈ ಸಾಕಷ್ಟು ಕೊಡುಗೆ ನೀಡಿದ್ದಾರೆ- ಆರಗ

    ಬಂಜಾರ ಸಮುದಾಯದ ಅಭಿವೃದ್ಧಿಗೆ ಬಿಎಸ್‌ವೈ ಸಾಕಷ್ಟು ಕೊಡುಗೆ ನೀಡಿದ್ದಾರೆ- ಆರಗ

    ಶಿವಮೊಗ್ಗ: ಬಂಜಾರ ಜನಾಂಗದ ಬಗ್ಗೆ ಯಡಿಯೂರಪ್ಪನವರಿಗೆ (B.S.Yediyurappa) ವಿಶೇಷವಾದ ಕಾಳಜಿಯಿದೆ. ಯಡಿಯೂರಪ್ಪನವರು ಬಂಜಾರ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.

    ಶಿಕಾರಿಪುರದಲ್ಲಿರುವ (Shikaripura) ಬಿಎಸ್‌ವೈ ನಿವಾಸದ ಮೇಲೆ ಕಲ್ಲುತೂರಾಟ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದೆ. ಹೀಗಿದ್ದರೂ ಯಡಿಯೂರಪ್ಪನವರು ಕಲ್ಲು ತೂರಾಟ ನಡೆಸಿದವರ ಮೇಲೆ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದಿದ್ದಾರೆ. ಅಲ್ಲದೇ ಬಂಜಾರ ಸಮುದಾಯದವರ ಜೊತೆಗೂ ಮಾತನಾಡುತ್ತೇನೆ ಎಂದಿದ್ದಾರೆ. ಯಾರೋ ಕೆಲವರ ತಪ್ಪು ತಿಳುವಳಿಕೆ ಹಾಗೂ ಪ್ರಚೋದನೆಯಿಂದ ಈ ಘಟನೆ ನಡೆದಿದೆ. ರೌಡಿಲಿಸ್ಟ್‌ನಲ್ಲಿರುವ ಕೆಲವು ಜನರು ಸೇರಿ ಪ್ರಕರಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಬಂಜಾರಾ, ಕೊರಚ, ಕೊರಮ, ಬೋವಿ ಶಾಶ್ವತವಾಗಿ ಎಸ್‌ಸಿ ಪಟ್ಟಿಯಲ್ಲಿರುತ್ತದೆ- ಪಿ.ರಾಜೀವ್ 

    ಬಂಜಾರ ಸಮುದಾಯದ (Banjara Community) ಕಾರ್ಯಕರ್ತರು ಬಹಳ ದೊಡ್ಡ ರೀತಿಯಲ್ಲಿ ದೊಂಬಿ ಎಬ್ಬಿಸಿ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಪೊಲೀಸರ ಮೇಲೂ ಹಲ್ಲೆ ನಡೆದಿರುವುದು ನನಗೆ ನೋವಾಗಿದೆ. ಪೊಲೀಸರು ತಕ್ಷಣ ಇದನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಯಾರೂ ಕೂಡಾ ಪ್ರಚೋದನೆಗೆ ಒಳಗಾಗಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಜೈ ಶ್ರೀರಾಮ್ ಎನ್ನದ್ದಕ್ಕೆ ಥಳಿಸಿ, ಗಡ್ಡ ಕತ್ತರಿಸಿದ್ರು

    ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆ ಎಲ್ಲಾ ಸಮುದಾಯಕ್ಕೆ ಅನುಕೂಲವಾಗಲಿದೆ. ಆದರೆ ಅದನ್ನು ಅಧ್ಯಯನ ಮಾಡಿ ನೋಡಬೇಕು. ಚರ್ಚೆ ಮಾಡಬೇಕು. ಕಾನೂನು ಕೈಗೆತ್ತಿಕೊಂಡರೆ ಕ್ರಮ ತೆಗೆದುಕೊಳ್ಳಲಾಗುತ್ತದೆ, ಶಿಕ್ಷೆಯಾಗುತ್ತದೆ. ಇದು ಇಲ್ಲಿಗೆ ನಿಲ್ಲಲಿ ಎಂದು ಹೇಳಿದರು. ಇದನ್ನೂ ಓದಿ: ಜೆಡಿಎಸ್ ಜೊತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ : ಸಿ.ಟಿ. ರವಿ

  • ಬಂಜಾರ ಸಮುದಾಯದ ಜನರನ್ನು ಮತಾಂತರ ಮಾಡಲಾಗುತ್ತಿದೆ: ಪಿ. ರಾಜೀವ್

    ಬಂಜಾರ ಸಮುದಾಯದ ಜನರನ್ನು ಮತಾಂತರ ಮಾಡಲಾಗುತ್ತಿದೆ: ಪಿ. ರಾಜೀವ್

    ಬೆಂಗಳೂರು: ಬಂಜಾರ ಸಮುದಾಯದ (Banjara Community) ಜನರನ್ನು ಜಿಹಾದಿ ಮನಸ್ಥಿತಿಗಳು, ಕ್ರೈಸ್ತ ಮಿಷನರಿಗಳು (Christian Missionary) ಮತಾಂತರ ಮಾಡುತ್ತಿದ್ದಾರೆ ಎಂದು ಬಂಜಾರ ಸಮುದಾಯದ ನಾಯಕ ಪಿ.ರಾಜೀವ್ (P. Rajeev) ಆರೋಪಿಸಿದ್ದಾರೆ.

    ಬೆಂಗಳೂರಿನಲ್ಲಿ (Benagaluru) ಮಾತನಾಡಿದ ಅವರು, ವ್ಯವಸ್ಥಿತವಾಗಿ ಬಂಜಾರ ಸಮಾಜವನ್ನು ಒಡೆಯುವ ಕೆಲಸ ಆಗುತ್ತಿದೆ. ಜಿಹಾದಿ ಮನಸ್ಥಿತಿ ಹುಟ್ಟು ಹಾಕುವುದು ಮತ್ತು ಕ್ರೈಸ್ತ ಮಿಷನರಿಗಳು ಮತಾಂತರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಒಡಿಶಾದಲ್ಲಿ ಹಳಿ ತಪ್ಪಿ, ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಗೂಡ್ಸ್ ರೈಲು – 3 ಸಾವು, ಹಲವರಿಗೆ ಗಾಯ

    ಉಡುಗೆಯಲ್ಲಿ ನಮ್ಮ ಸಮುದಾಯ ವಿಶೇಷವಾಗಿದೆ. ಒಂದೇ ರೀತಿ ಉಡುಗೆ ಇದೆ. ಆಹಾರ ಪದ್ದತಿ ಒಂದೇ ಇದೆ. ಭಾಷೆಯೂ ಒಂದೇ ಇದೆ. ಕ್ರೈಸ್ತ ಮಿಷನರಿಗಳು ಮತಾಂತರ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ಸಮಾವೇಶ ಮಹಾರಾಷ್ಟ್ರದಲ್ಲಿ ಇಟ್ಟುಕೊಂಡಿದ್ದಾರೆ ಎಂದರು.

    ಹಿಂದೂ ಭಾಷೆ ಅಶ್ಲೀಲ ಅಂತ ಒಬ್ಬ ರಾಜಕಾರಣಿ ಬಳಸುವುದು ಸರಿಯಲ್ಲ. ಹಿಂದೂಗಳಿಗೆ ಇರುವ ಭೂಮಿ ಭಾರತ ಮಾತ್ರ. ಜನಪ್ರತಿನಿಧಿ ಹಿಂದು ಮತ ಪಡೆದುಕೊಂಡಿರುತ್ತಾನೆ. ಅಂತಹ ಮತದಾರರನ್ನು ಅಶ್ಲೀಲ ಅಂತ ಹೇಳುತ್ತಾರೆ ಅಂದರೆ ಅವರು ಮುಸ್ಲಿಂ ಮತ್ತು ಕ್ರೈಸ್ತ ಮಿಷನರಿಗಳ ಮನಸ್ಥಿತಿ ಇಲ್ಲಿದೆ. ಇಂತಹ ಮನಸ್ಥಿತಿಗಳು ನಮ್ಮ ಸಮುದಾಯವನ್ನು ಮತಾಂತರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    ಅಂಕಿಅಂಶಗಳ ಪ್ರಕಾರ ಬಹಳಷ್ಟು ಜನರನ್ನು ಮತಾಂತರ ಮಾಡಿದರು. ಅವರನ್ನು ಘರ್ ವಾಪಸ್ಸಿ ಮಾಡಿಸುವ ಕೆಲಸ ಆಗುತ್ತಿದೆ. ಅಂಕಿ ಅಂಶದ ಪ್ರಕಾರ 1,700 ಕ್ಕಿಂತ ಹೆಚ್ಚು ಕುಟುಂಬಗಳನ್ನು ಘರ್ ವಾಪಸ್ಸಿ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಇಂಡೋನೆಷ್ಯಾದಲ್ಲಿ ಭೂಕಂಪ 40ಕ್ಕೂ ಅಧಿಕ ಸಾವು – 300ಕ್ಕೂ ಹೆಚ್ಚು ಮಂದಿಗೆ ಗಾಯ

    ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮ ಮಾಡಲು 75 ವರ್ಷಗಳಿಂದ ಬೇಡಿಕೆ ಇತ್ತು. ಕಾಂಗ್ರೆಸ್ ಸರ್ಕಾರ 65 ವರ್ಷಗಳಲ್ಲಿ ಇದನ್ನು ಮಾಡಿಲ್ಲ. ಬಿಜೆಪಿ ಸರ್ಕಾರ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಘೋಷಣೆ ಮಾಡಲಾಗಿದೆ. ಸಿಎಂ ಬೊಮ್ಮಾಯಿ, ಕಂದಾಯ ಸಚಿವ ಅಶೋಕ್ ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಲಾಗಿದೆ. 75 ಸಾವಿರಕ್ಕೂ ಹೆಚ್ಚು ಲಂಬಾಣಿ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಕೆಲಸ ಆಗಿದೆ. ಈಗ ಮತ್ತೆ ಯಾದಗಿರಿ, ಬೀದರ್‍ನ ಸುಮಾರು 60 ಸಾವಿರ ಜನರಿಗೆ ಹಕ್ಕುಪತ್ರ ನೀಡುವ ಕೆಲಸ ಆಗುತ್ತಿದೆ ಅಂದರು.

    Live Tv
    [brid partner=56869869 player=32851 video=960834 autoplay=true]

  • ಬಂಜಾರ ಮುಖಂಡ ಗುರು ಚವಾಣ್ ಎಎಪಿ ಸೇರ್ಪಡೆ

    ಬಂಜಾರ ಮುಖಂಡ ಗುರು ಚವಾಣ್ ಎಎಪಿ ಸೇರ್ಪಡೆ

    ಬೆಂಗಳೂರು: ಬಂಜಾರ ಸಮುದಾಯದ ಹಿರಿಯ ಮುಖಂಡ ಹಾಗೂ ಬೆಂಗಳೂರು ಎಸ್‍ಸಿ-ಎಸ್‍ಟಿ ನೌಕರರ ಕಲ್ಯಾಣ ಸಂಘಟನೆಯ ಅಧ್ಯಕ್ಷ ಗುರು ಎಂ.ಚವಾಣ್ ಅವರು ಆಮ್ ಆದ್ಮಿ ಪಾರ್ಟಿ ಸೇರಿದರು.

    ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗುರು ಚವಾಣ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಬೆಂಗಳೂರು ಎಎಪಿ ಉಪಾಧ್ಯಕ್ಷ ಸುರೇಶ್ ರಾಥೋಡ್ ಮಾತನಾಡಿದರು. ಈ ವೇಳೆ ಅವರು, ಕೇಂದ್ರೀಯ ವಿದ್ಯಾಲಯ ಸಂಘಟನಾ ಮೇಲ್ವಿಚಾರಕರಾಗಿ, ಜನಪದ ವಿಶ್ವವಿದ್ಯಾಲಯದ ಬೆಂಗಳೂರು ಜಿಲ್ಲಾ ಕ್ಷೇತ್ರ ಪ್ರತಿನಿಧಿಯಾಗಿ ಹಾಗೂ ಬೆಂಗಳೂರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಕಲ್ಯಾಣ ಸಂಘಟನೆ ಅಧ್ಯಕ್ಷರಾಗಿ ಗುರು ಚವಾಣ್ ಅವರು ಸಮಾಜಕ್ಕಾಗಿ ದುಡಿದರು. ಇದನ್ನೂ ಓದಿ: ಪಾಕ್ ಹೊಗಳುವ ಹಾಡು ಹಾಕಿದ ಇಬ್ಬರ ವಿರುದ್ಧ ಕೇಸ್

    ಲಂಬಾಣಿ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಲು ಶ್ರಮಿಸಿದ್ದಾರೆ. ಸುಮಾರು 30 ವರ್ಷಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಅನುಭವಿ ನಾಯಕರು ಆಮ್ ಆದ್ಮಿ ಪಾರ್ಟಿಯನ್ನು ಸೇರುತ್ತಿರುವುದು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಹೇಳಿದರು.

    ಗುರು ಚವಾಣ್ ಅವರು ಮಾತನಾಡಿ, ದೇಶ ಹಾಗೂ ರಾಜ್ಯವನ್ನು ಆಳಿದ ಬಿಜೆಪಿ, ಕಾಂಗ್ರೆಸ್ ಮತ್ತಿತರ ಪಕ್ಷಗಳು ದಲಿತರು ಹಾಗೂ ಹಿಂದುಳಿದ ಸಮುದಾಯದವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಅದನ್ನು ಬಿಟ್ಟು ಆ ವರ್ಗಗಳ ಜನರ ಏಳಿಗೆಗೆ ಶ್ರಮಿಸಲಿಲ್ಲ. ಆದರೆ ಆಮ್ ಆದ್ಮಿ ಪಾರ್ಟಿಯು ಬಂಜಾರ ಸಮುದಾಯ ಸೇರಿದಂತೆ ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಾಣುತ್ತಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಡಳಿತದಲ್ಲಿ ಅಲ್ಲಿನ ಎಲ್ಲ ಸಮುದಾಯಗಳಿಗೆ ಅನುಕೂಲವಾಗುತ್ತಿದೆ. ಕರ್ನಾಟಕದಲ್ಲೂ ಅದೇ ಮಾದರಿಯ ಆಡಳಿತ ಬರಬೇಕು ಎಂದು ಹೇಳಿದರು.

    ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಪ್ರದಾನ ಕಾರ್ಯದರ್ಶಿ ಜಗದೀಶ್‍ಚಂದ್ರ ಮಾತನಾಡಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ನಂತಹ ಭ್ರಷ್ಟ ಪಕ್ಷಗಳನ್ನು ಕರ್ನಾಟಕದ ಜನತೆ ತಿರಸ್ಕರಿಸಲು ಆರಂಭಿಸಿದ್ದಾರೆ. ಕೇಜ್ರಿವಾಲ್ ಅವರ ಪಾರದರ್ಶಕ ಹಾಗೂ ಜನಪರ ಆಡಳಿತದತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಯುವಕರು, ಗಣ್ಯರು, ಸಾಧಕರು ಪಕ್ಷವನ್ನು ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಪ್ರಮಾಣದಲ್ಲಿ ಮುಂದುವರಿಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗಲ್ಲಿ ಬಾಯ್ ರಣವೀರ್ ಚಿತ್ರಕ್ಕೆ ಚಾರ್ಲಿ ಚಾಪ್ಲಿನ್‍ನಿಂದ ಪ್ರೇರಣೆ?

    ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಎಎಪಿ ಮುಖಂಡ ಬೋಪಣ್ಣ ಹಾಗೂ ಇನ್ನಿತರ ಮುಖಂಡರು, ಗುರು ಚವಾಣ್ ಬೆಂಬಲಿಗರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

  • ಬಂಜಾರ ಸಮುದಾಯಕ್ಕೆ ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ: ಸ್ವಾಮೀಜಿ ಆರೋಪ

    ಬಂಜಾರ ಸಮುದಾಯಕ್ಕೆ ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ: ಸ್ವಾಮೀಜಿ ಆರೋಪ

    ವಿಜಯಪುರ: ವ್ಯಕ್ತಿಯೊಬ್ಬ ಬಂಜಾರಾ ಕ್ರಿಸ್ ಮಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

    ರೇವು ಚವ್ಹಾಣ ಎಂಬಾತ ಬಂಜಾರಾ ಕ್ರಿಸ್ ಮಸ್ ಎಂದು ಪೋಸ್ಟ್ ಹಾಕಿದ್ದಾನೆ. ಈ ವಿಚಾರಕ್ಕೆ ವಿಜಯಪುರ ಬಂಜಾರ ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

    ಕ್ರಿಸ್ ಮಸ್ ಆಚರಣೆ ಕಾರ್ಯಕ್ರಮಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ಅದರಲ್ಲಿ ಬಂಜಾರ ಶಬ್ದ ಬಳಸಿದ್ದಕ್ಕೆ ವಿರೋಧ ಮಾಡುತ್ತಿದ್ದೇವೆ. ನಮ್ಮ ಸಮಾಜದ ಮುಗ್ಧ ಜನರನ್ನು ನಮ್ಮ ಸಮಾಜದವರೆ ಆದ ರೇವು ಚವ್ಹಾಣ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

    ಬಂಜಾರ ಸಮಾಜದವರಿಗೆ ಅನೇಕ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುತ್ತಿದ್ದಾರೆ. ಇದನ್ನು ಬಂಜಾರ ಸಮಾಜ ಖಂಡಿಸುತ್ತದೆ. ಅಲ್ಲದೆ ರೇವು ಚವ್ಹಾಣ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ದೂರು ದಾಖಲಿಸುವುದಾಗಿ ಬಂಜಾರ ಸಮಾಜದ ಸೋಮಲಿಂಗ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.