Tag: ಬಂಗಾರ

  • ಕೆಜಿ ಚಿನ್ನ ಕದ್ದು ಗೋವಾದಲ್ಲಿ ಎಂಜಾಯ್ ಮಾಡ್ತಿದ್ದ ನಟಿ ಸೌಮ್ಯ ಶೆಟ್ಟಿ ಬಂಧನ

    ಕೆಜಿ ಚಿನ್ನ ಕದ್ದು ಗೋವಾದಲ್ಲಿ ಎಂಜಾಯ್ ಮಾಡ್ತಿದ್ದ ನಟಿ ಸೌಮ್ಯ ಶೆಟ್ಟಿ ಬಂಧನ

    ತೆಲುಗು ಸಿನಿಮಾ ರಂಗದಲ್ಲಿ ಡ್ರಗ್ಸ್ ಪ್ರಕರಣ ಒಂದು ರೀತಿಯಲ್ಲಿ ಪೊಲೀಸರಿಗೆ ತಲೆಬಿಸಿಯಾಗಿದ್ದರೆ, ಮತ್ತೊಂದು ಕಡೆ ಕೆಜಿ ಚಿನ್ನ ಕದ್ದು ಗೋವಾದಲ್ಲಿ ಪಾರ್ಟಿ ಮಾಡುತ್ತಿದ್ದ ತೆಲುಗು ನಟಿ ಸೌಮ್ಯ ಶೆಟ್ಟಿ ಪೊಲೀಸರ ನಿದ್ದೆಗೆಡಿಸಿದ್ದಾಳೆ. ಪರಿಚಿತರ ಮನೆಯಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನ ಕದ್ದು ಸೌಮ್ಯ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

    ತೆಲುಗು ಚಿತ್ರೋದ್ಯಮದಲ್ಲಿ ಉದಯೋನ್ಮುಖ ನಟಿಯಾಗಿರುವ ಸೌಮ್ಯ, ನಿವೃತ್ತ ಅಂಚೆ ಇಲಾಖೆಯ ನೌಕರರ ಮಗಳ ಜೊತೆ ಸ್ನೇಹವಿತ್ತು. ಆಗಾಗ್ಗೆ ಮನೆಗೆ ಬರುತ್ತಿದ್ದಳು ಸೌಮ್ಯ. ಆ ಮನೆಯಲ್ಲಿ ಬಂಗಾರ ಇರುವುದು ಗೊತ್ತಾಗಿ, ವಾಶ್ ರೂಮ್ ಗೆ ಹೋಗುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದಳು ಎಂದು ದೂರು ನೀಡಲಾಗಿದೆ.

    ತಮ್ಮ ಮನೆಗೆ ಬರುತ್ತಿದ್ದ ಸೌಮ್ಯ, ಆಗಾಗ್ಗೆ ಚಿನ್ನ ಕಳ್ಳತನ ಮಾಡುವುದು ಮನೆಯವರ ಗಮನಕ್ಕೆ ಬಂದಿಲ್ಲ. ಮದುವೆಗೆ ಹೋಗಲು ಆಭರಣ ಹುಡುಕಿದಾಗ ಮಾತ್ರ ಕಳ್ಳತನವಾಗಿರೋದು ಗೊತ್ತಾಗಿದೆ. ಕೂಡಲೇ ಅನುಮಾನಗೊಂಡು ಪೊಲೀಸ್ ರಿಗೆ ದೂರು ನೀಡಿದ್ದಾರೆ. ಸೌಮ್ಯ ತಮ್ಮ ಮನೆಗೆ ಬರುತ್ತಿದ್ದ ವಿಚಾರವನ್ನೂ ತಿಳಿಸಿದ್ದಾರೆ. ಕೊನೆಗೂ ಸೌಮ್ಯಳನ್ನು ಪತ್ತೆ ಮಾಡಿರೋ ವಿಶಾಖಪಟ್ಟಣಂ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ.

  • ಒಂದೇ ದಿನದಲ್ಲಿ ಕಳ್ಳತನ‌ ಪ್ರಕರಣ ಭೇದಿಸಿದ ಪೊಲೀಸರು

    ಒಂದೇ ದಿನದಲ್ಲಿ ಕಳ್ಳತನ‌ ಪ್ರಕರಣ ಭೇದಿಸಿದ ಪೊಲೀಸರು

    ಚಿಕ್ಕೋಡಿ: ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಇತ್ತೀಚಿಗೆ ಜರುಗಿದ ಮನೆಕಳ್ಳತನ ಪ್ರಕರಣ ದಾಖಲಿಸಿಕೊಂಡ 24 ಗಂಟೆಯೊಳಗಾಗಿ ಆರೋಪಿಯನ್ನು ಪತ್ತೆ ಹಚ್ಚಿ ಆರೋಪಿತನಿಂದ 5.3 ಲಕ್ಷ ಮೊತ್ತದ ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿ ಸಂಕೇಶ್ವರ ಪೊಲೀಸರು (Police) ಯಶಸ್ವಿಯಾಗಿದ್ದಾರೆ.

    ಹೆಬ್ಬಾಳ ಗ್ರಾಮದಲ್ಲಿ ಕಳ್ಳನೊಬ್ಬ ಮನೆಯಲ್ಲಿದ್ದ ಚಿನ್ನಾಭರಣ (Gold), ನಗದು (Money), ಬೈಕ್ (Bike) ಅನ್ನು ಕದ್ದೊಯ್ದಿದ್ದನು. ಈ ಬಗ್ಗೆ ಸಂಕೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿ.ಎಸ್.ಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಡವನ್ನು ರಚನೆ ಮಾಡಿದ್ದಾರೆ. ಇದನ್ನೂ ಓದಿ: ‘ಸಿದ್ರಮುಲ್ಲಾ ಖಾನ್’ ಎಂದು ಕರೆದರೆ ಖುಷಿ ಪಡುವೆ: ಸಿದ್ದರಾಮಯ್ಯ

    ತಂಡದಲ್ಲಿ ಸಿಪಿಐ ಪಿ. ಆರ್. ಚನ್ನಗಿರಿ, ಪಿ.ಎಸ್ಐ ಎಸ್.ಬಿ. ನಾಯಿಕವಾಡಿ ಮತ್ತು ಸಿಬ್ಬಂದಿಯವರಾದ ಬಿ.ಕೆ ನಾಗನೂರಿ , ಐ.ಬಿ. ಅಲಗರಾವತ , ಬಿ.ವಿ. ಹುಲಕುಂದ, ಮೆಹಬೂಬ ದಾದಾಮಕ, ಬಿ.ಟಿ. ಪಾಟೀಲ್‌, ಎಮ್.ಎಮ್. ಜಂಬಗಿ, ಚಿ.ಎಸ್. ಕಪರಟ್ಟಿ, ಮಹೇಶ್‌ ಕರಗುಪ್ಪಿ, ಯಾಶೀನ ನದಾಫ್ ಅವರನ್ನು ಒಳಗೊಂಡ ತಂಡ 24 ಗಂಟೆಯೊಳಗೆ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಯಿಂದ ಸುಮಾರು 85 ಗ್ರಾಂ ಬಂಗಾರದ ಆಭರಣ ಹಾಗೂ 4,500 ರೂ. ನಗದು ಮತ್ತು ಬೈಕ್‌ ಜೊತೆಗೆ 5,03,000 ರೂ. ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಭೀಕರ ಅಪಘಾತ- ಸಿಪಿಐ, ಪತ್ನಿ ಸಾವು

    Live Tv
    [brid partner=56869869 player=32851 video=960834 autoplay=true]

  • ರವೀಂದರ್ ಗೆ ಮಹಿಳಾ ಅಭಿಮಾನಿಗಳ ಕಾಟ, ಪತಿಯ ರಕ್ಷಣೆಗೆ  ಟೊಂಕ ಕಟ್ಟಿ ನಿಂತ ಮಹಾಲಕ್ಷ್ಮಿ

    ರವೀಂದರ್ ಗೆ ಮಹಿಳಾ ಅಭಿಮಾನಿಗಳ ಕಾಟ, ಪತಿಯ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಮಹಾಲಕ್ಷ್ಮಿ

    ದುವೆಯ ನಂತರ ನಟಿ ಮಹಾಲಕ್ಷ್ಮಿ (Mahalakshmi) ಮತ್ತು ನಿರ್ಮಾಪಕ ರವೀಂದರ್ (Ravinder Chandrasekaran) ಹೆಚ್ಚೆಚ್ಚು ಪ್ರವಾಸ ಮಾಡುತ್ತಿದ್ದಾರೆ. ಅದರಲ್ಲೂ ಒಟ್ಟೊಟ್ಟಿಗೆ ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಜೋಡಿ ಎಲ್ಲಿಯೇ ಹೋದರೂ, ಅಭಿಮಾನಿಗಳು (Fans) ಮುತ್ತಿಕ್ಕುತ್ತಿದ್ದಾರೆ. ಹಾಗಾಗಿ ಪತಿಯನ್ನು ರಕ್ಷಿಸುವ ಜವಾಬ್ದಾರಿ ಮಹಾಲಕ್ಷ್ಮಿ ಮೇಲೆ ಬಿದ್ದಿದೆ. ಆದಷ್ಟು ಪತಿಯ ಜೊತೆಯೇ ಇದ್ದುಕೊಂಡು ಗಂಡನ ರಕ್ಷಣೆಗೆ ನಿಲ್ಲುತ್ತಾರಂತೆ ಮಹಾಲಕ್ಷ್ಮಿ.

    ಮಿಸ್ ಮ್ಯಾಚ್ ಜೋಡಿ ಎಂದೇ ಟ್ರೋಲ್ ಆದವರು ರವೀಂದರ್ ಮತ್ತು ಮಹಾಲಕ್ಷ್ಮಿ. ಆನಂತರ ಇವರ ಮದುವೆಯ ಬಗ್ಗೆ ನಾನಾ ರೀತಿಯ ಗಾಸಿಪ್ ಗಳು ಹುಟ್ಟಿಕೊಂಡವು. ಇಬ್ಬರದ್ದೂ ಎರಡನೇ ಮದುವೆ (Ravinder Mahalakshmi Marriage) ಆದ ಕಾರಣಕ್ಕಾಗಿ ಅಪಹಾಸ್ಯ ಕೂಡ ಮಾಡಲಾಯಿತು. ದುಡ್ಡಿಗಾಗಿ ತೂಕದ ವ್ಯಕ್ತಿಯನ್ನು ಮಹಾಲಕ್ಷ್ಮಿ ಮದುವೆಯಾದರು ಎಂದು ಕಾಲೆಳೆದರು. ಆದರೂ, ಈ ಜೋಡಿ ಯಾವುದನ್ನೂ ತಲೆ ಕೆಡಿಸಿಕೊಳ್ಳದೇ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ.

    ನಟಿ ಮಹಾಲಕ್ಷ್ಮಿ ಅವರನ್ನು ಮದುವೆಯಾದ ನಂತರ ನಿರ್ಮಾಪಕ ರವೀಂದರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ತಾವು ಅನುಭವಿಸುತ್ತಿರುವ ಒಂದೊಂದೇ ಮಧುರ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಅವರನ್ನು ಮದುವೆಯಾದ ನಂತರ ಅವರ ಬದುಕಿನಲ್ಲಿ ಆದ ಬದಲಾವಣೆಗಳನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್ ವುಡ್ ನಟಿ ಇತಿ ಆಚಾರ್ಯಗೆ ನ್ಯೂಯಾರ್ಕ್ ನಲ್ಲಿ ವಿಶೇಷ ಗೌರವ

    ಈ ಹಿಂದೆ ಹೆಂಡತಿಯನ್ನು ತಮ್ಮ ಮನೆದೇವರಿಗೆ ಕರೆದುಕೊಂಡು ಹೋಗಿದ್ದರು. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ಹೆಂಡತಿಯೊಂದಿಗೆ ರೆಸಾರ್ಟ್ ನಲ್ಲಿ ಕಳೆದ ಕ್ಷಣಗಳನ್ನೂ ಅವರು ಫೋಟೋಗಳ ಸಮೇತ ತಿಳಿಸಿದ್ದರು. ಹೀಗೆ ತಮ್ಮ ಸುಖ ದಾಂಪತ್ಯ ಜೀವನದ ರಸಗಳಿಗೆಯನ್ನು ಗಂಭೀರವಾಗಿ ಒಂದೊಂದು ಸಲ ತಮಾಷೆಯಾಗಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಈ ಬಾರಿ ತಮಾಷೆಯ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.

    ಪತಿ ಮಹಾಲಕ್ಷ್ಮಿ ಈ ರವಿವಾರದಂದು ಶೂಟಿಂಗ್ ಗಾಗಿ ತೆರಳಿದ್ದರಂತೆ. ಅಲ್ಲದೇ, ಏನೆಲ್ಲ ತಮಗೆ ಊಟ ಬೇಕು ಎಂದು ಹೇಳಿಕೊಟ್ಟಿದ್ದರಂತೆ. ಊಟ ಆರ್ಡರ್ ಮಾಡಿ ಕಳುಹಿಸಬಹುದಿತ್ತು. ಆದರೆ, ನಾನೇ ಶೂಟಿಂಗ್ ಸ್ಪಾಟ್ ಗೆ ಅಡುಗೆ ತಗೆದುಕೊಂಡು ಹೋಗಿದ್ದೆ. ಅದೊಂದು ರೀತಿಯಲ್ಲಿ ಅನುಭವ ವಿಭಿನ್ನವಾಗಿತ್ತು. ರವಿವಾರದಂದು ಸಾಮಾನ್ಯವಾಗಿ ನಾನ್ ವೆಜ್ ಇರತ್ತೆ. ನನ್ನ ತಾಯಿ ಹೆಂಡತಿಗಾಗಿ ವೆಜ್ ಮಾಡಿದ್ದಳು ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬಂಗಾರದ ಗಿಣಿ’ ಮಹಾಲಕ್ಷ್ಮಿಗೆ ಭಾರವಾಗುವಷ್ಟು ಬಂಗಾರ ಕೊಟ್ಟ ರವೀಂದರ್

    ‘ಬಂಗಾರದ ಗಿಣಿ’ ಮಹಾಲಕ್ಷ್ಮಿಗೆ ಭಾರವಾಗುವಷ್ಟು ಬಂಗಾರ ಕೊಟ್ಟ ರವೀಂದರ್

    ಕಿರುತೆರೆ ನಟ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravinder Chandrasekaran) ಮದುವೆಯಾದ ನಂತರ ದಿನಕ್ಕೊಂದು ಸುದ್ದಿ ಹೊರ ಬರುತ್ತಿವೆ. ಮಿಸ್ ಮ್ಯಾಚ್ ಜೋಡಿ ಎಂದೇ ಟ್ರೋಲ್ ಮಾಡಿದ್ದ ನೆಟ್ಟಿಗರೇ ಇದೀಗ ಪತ್ನಿ ಮಹಾಲಕ್ಷ್ಮಿಗೆ ಉಡುಗೊರೆಯಾಗಿ ಕೊಟ್ಟ ಚಿನ್ನದ (Gold) ಬಗ್ಗೆ ಕೇಳಿ ಶಾಕ್ ಆಗಿದ್ದರೆ. ಮದುವೆಗಾಗಿ ರವೀಂದರ್ ಬರೋಬ್ಬರಿ ಒಂದೂವರೆ ಕೆಜಿ ತೂಕದ ಒಡೆವೆಗಳನ್ನು ಮಾಡಿಸಿದ್ದರು ಎನ್ನುವುದು ಬ್ರೇಕಿಂಗ್ ನ್ಯೂಸ್. ಅದರಲ್ಲಿ ಕೆಲವು ಒಡವೆಗಳನ್ನು ಮಾತ್ರ ಮಹಾಲಕ್ಷ್ಮಿ ಮದುವೆ ದಿನ ಹಾಕಿದ್ದರಂತೆ.

    ರವೀಂದರ್ ಮತ್ತು ಮಹಾಲಕ್ಷ್ಮಿ (Mahalakshmi) ಒಂದೇ ಸೀರಿಯಲ್ ನಲ್ಲಿ ಕೆಲಸ ಮಾಡಿದವರು. ಮಹಾಲಕ್ಷ್ಮಿ ನಟಿಯಾಗಿ ಕಾಣಿಸಿಕೊಂಡಿದ್ದರೆ, ರವೀಂದರ್ ಆ ಸೀರಿಯಲ್ ನಿರ್ಮಾಪಕರು. ಹೀಗೆ ಪರಿಚಯವಾದವರು, ನಂತರ ಪ್ರೀತಿಸಿ ಇದೀಗ ಹೊಸ ಜೀವನಕ್ಕೆ (Marriage) ಕಾಲಿಟ್ಟಿದ್ದಾರೆ. ಮಹಾಲಕ್ಷ್ಮಿಯನ್ನು ಅಪಾರವಾಗಿ ಪ್ರೀತಿಸುವ ರವೀಂದರ್, ಆ ಪ್ರೀತಿಗಾಗಿ ಅವರು ಸಾಕಷ್ಟು ಉಡುಗೊರೆಯನ್ನೇ ಕೊಟ್ಟಿದ್ದಾರಂತೆ. ಈ ಹಿಂದೆ ಅವರು ನೂರಾರು ಸೀರೆಗಳನ್ನು ಕೊಟ್ಟಿದ್ದು ಕೂಡ ಸುದ್ದಿ ಆಗಿತ್ತು.

    ನಟಿ ಮಹಾಲಕ್ಷ್ಮಿ ಅವರನ್ನು ಮದುವೆಯಾದ ನಂತರ ನಿರ್ಮಾಪಕ ರವೀಂದರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ತಾವು ಅನುಭವಿಸುತ್ತಿರುವ ಒಂದೊಂದೇ ಮಧುರ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಅವರನ್ನು ಮದುವೆಯಾದ ನಂತರ ಅವರ ಬದುಕಿನಲ್ಲಿ ಆದ ಬದಲಾವಣೆಗಳನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಈ ಹಿಂದೆ ಹೆಂಡತಿಯನ್ನು ತಮ್ಮ ಮನೆದೇವರಿಗೆ ಕರೆದುಕೊಂಡು ಹೋಗಿದ್ದರು. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ಹೆಂಡತಿಯೊಂದಿಗೆ ರೆಸಾರ್ಟ್ ನಲ್ಲಿ ಕಳೆದ ಕ್ಷಣಗಳನ್ನೂ ಅವರು ಫೋಟೋಗಳ ಸಮೇತ ತಿಳಿಸಿದ್ದರು. ಹೀಗೆ ತಮ್ಮ ಸುಖ ದಾಂಪತ್ಯ ಜೀವನದ ರಸಗಳಿಗೆಯನ್ನು ಗಂಭೀರವಾಗಿ ಒಂದೊಂದು ಸಲ ತಮಾಷೆಯಾಗಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಈ ಬಾರಿ ತಮಾಷೆಯ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.

    ಪತಿ ಮಹಾಲಕ್ಷ್ಮಿ ಈ ರವಿವಾರದಂದು ಶೂಟಿಂಗ್ ಗಾಗಿ ತೆರಳಿದ್ದರಂತೆ. ಅಲ್ಲದೇ, ಏನೆಲ್ಲ ತಮಗೆ ಊಟ ಬೇಕು ಎಂದು ಹೇಳಿಕೊಟ್ಟಿದ್ದರಂತೆ. ಊಟ ಆರ್ಡರ್ ಮಾಡಿ ಕಳುಹಿಸಬಹುದಿತ್ತು. ಆದರೆ, ನಾನೇ ಶೂಟಿಂಗ್ ಸ್ಪಾಟ್ ಗೆ ಅಡುಗೆ ತಗೆದುಕೊಂಡು ಹೋಗಿದ್ದೆ. ಅದೊಂದು ರೀತಿಯಲ್ಲಿ ಅನುಭವ ವಿಭಿನ್ನವಾಗಿತ್ತು. ರವಿವಾರದಂದು ಸಾಮಾನ್ಯವಾಗಿ ನಾನ್ ವೆಜ್ (Non Veg) ಇರತ್ತೆ. ನನ್ನ ತಾಯಿ ಹೆಂಡತಿಗಾಗಿ ವೆಜ್ ಮಾಡಿದ್ದಳು ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೃದ್ಧ ದಂಪತಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ದರೋಡೆ

    ವೃದ್ಧ ದಂಪತಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ದರೋಡೆ

    ಮಡಿಕೇರಿ: ವೃದ್ಧ ದಂಪತಿಯನ್ನು ಕೋಣೆಯಲ್ಲಿ ಕೂಡಿಹಾಕಿ ದರೋಡೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಮಾಲ್ದಾರೆಯಲ್ಲಿ ನಡೆದಿದೆ.

    ಮಾಲ್ದಾರೆಯ(ಬಾಡಗ) ತಂಗಪ್ಪಣ್ಣ ಹಾಗೂ ಜಾನಕಿ ದಂಪತಿಯ ಮನೆಗೆ 3 ಮಂದಿ ಮುಸುಕುಧಾರಿಗಳು ದಾಳಿ ಮಾಡಿದ್ದಾರೆ. ಮನೆಯ ಹಿಂಬದಿಯ ಬಾಗಿಲು ಮೂಲಕ ಒಳಗೆ ಪ್ರವೇಶಿಸಿದ ದರೋಡೆಕೋರರು, ಚಿನ್ನ ಹಾಗೂ ನಗದು ಎಲ್ಲಿಟ್ಟಿದ್ದೀರಿ ಎಂದು ಬೆದರಿಸಿ ದಂಪತಿಯನ್ನು ಮನೆಯ ಕೋಣೆಯೊಂದರಲ್ಲಿ ಕೂಡಿಹಾಕಿದರು ಎನ್ನಲಾಗಿದೆ.

    ಬಳಿಕ ದರೋಡೆಕೋರರು ಮನೆಯಲ್ಲಿದ್ದ ಅಂದಾಜು 1.5 ಲಕ್ಷ ರೂ. ಹಣವನ್ನು ದೋಚಿದ್ದಾರೆ. ಕೊನೆಯಲ್ಲಿ ಜಾನಕಿ ಅವರ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದಾಡಿದ್ದಾರೆ. ಪರಿಣಾಮ ಅರ್ಧ ಭಾಗ ಸರ ದರೋಡೆಕೋರರ ಕೈಸೇರಿದೆ. ಇದನ್ನೂ ಓದಿ: ಪಠ್ಯದಲ್ಲಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪಾಠವನ್ನು ಕಾಂಗ್ರೆಸ್ ಸರ್ಕಾರ ತೆಗೆದುಹಾಕಿತ್ತು: ಬಿಜೆಪಿ

    ಘಟನಾ ಸ್ಥಳಕ್ಕೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ, ಡಿ.ವೈ.ಎಸ್.ಪಿ ಗಜೇಂದ್ರ ಪ್ರಸಾದ್, ಸಿ.ಐ ವೆಂಕಟೇಶ್, ಪಿ.ಎಸ್.ಐ ಮೋಹನ್ ರಾಜ್ ಭೇಟಿ ನೀಡಿ, ಪರಿಶೀಲನೆ ನಡೆಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: PSI ನೇಮಕಾತಿಯಲ್ಲಿ ಅಕ್ರಮ – ಫಸ್ಟ್‌ ರ‍್ಯಾಂಕ್‌ ಅಭ್ಯರ್ಥಿ ಅರೆಸ್ಟ್

  • 18 ಲಕ್ಷ ಮೌಲ್ಯದ ಚಿನ್ನದಿಂದ ಬುರ್ಕಾ ಡಿಸೈನ್ ಮಾಡಿ ಸಾಗಾಟ- ಖತರ್ನಾಕ್ ಕಳ್ಳಿ ಪೊಲೀಸರ ಬಲೆಗೆ

    18 ಲಕ್ಷ ಮೌಲ್ಯದ ಚಿನ್ನದಿಂದ ಬುರ್ಕಾ ಡಿಸೈನ್ ಮಾಡಿ ಸಾಗಾಟ- ಖತರ್ನಾಕ್ ಕಳ್ಳಿ ಪೊಲೀಸರ ಬಲೆಗೆ

    ಹೈದರಾಬಾದ್: ಕಳ್ಳತನ ಮಾಡಬೇಕು ಎಂದು ನಿರ್ಧರಿಸಿದರೆ ಕಳ್ಳರು ಮಾಸ್ಟರ್ ಪ್ಲ್ಯಾನ್ ಮಾಡುತ್ತಾರೆ. ಬ್ಯಾಗ್, ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡು ಬಂದು ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಳಿ ಸಿಕ್ಕಿಬಿಳುತ್ತಾರೆ. ಹೀಗೆ ಖತರ್ನಾಕ್ ಐಡಿಯಾವನ್ನು ಮಾಡಿ ದುಬೈನಿಂದ ಹೈದ್ರಾಬಾದ್‌ಗೆ ಚಿನ್ನ ಕಳ್ಳ ಸಾಗಣೆ ಮಾಡುತ್ತಿರುವ ಮಹಿಳೆಯೊಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾಳೆ.

    ಮಹಿಳೆಯೊಬ್ಬಳು ದುಬೈನಿಂದ ಈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಳು. ಮಹಿಳೆ ಕಪ್ಪು ಬಣ್ಣದ ಬುರ್ಕಾ ಧರಿಸಿದ್ದರು. ಆ ಬುರ್ಕಾದ ಮೇಲೆ ಅತ್ಯಂತ ಚೆಂದನೆಯ ಡಿಸೈನ್ ಮಾಡಲಾಗಿತ್ತು. ಈ ಡಿಸೈನ್ ಮೂಲಕವಾಗಿ ಮಹಿಳೆ ಚಿನ್ನವನ್ನು ಸಾಗಾಟ ಮಾಡುತ್ತಿದ್ದಳು. ಹೈದರಾಬಾದ್‍ನ ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿನಿಯ ವೀಡಿಯೋ ಶೇರ್ ಮಾಡಿದ ಪ್ರಿಯಾಂಕಾ!

    ಬರ್ಕಾ ಡಿಸೈನ್ ಹೇಗಿತ್ತು ಗೊತ್ತಾ?: ರೋಡಿಯಂ ಲೇಪನವಿರುವ ಚಿನ್ನದ ಮಣಿಗಳನ್ನು ಹಾಕಿ ಹೊಲಿಯಲಾಗಿತ್ತು. ಸುಲಭಕ್ಕೆ ಕಂಡು ಹಿಡಿಯಲು ಸಾಧ್ಯವಿಲ್ಲದಂತೆ ಸುಮಾರು 350 ಗ್ರಾಂ ತೂಕವುಳ್ಳ, 18 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಣಿಗಳನ್ನು ಬುರ್ಕಾಧಾರಿ ಮಹಿಳೆ ಸಾಗಿಸುತ್ತಿದ್ದಳು. ಮಹಿಳೆಯನ್ನು ವಶಪಡಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ಕಳ್ಳತನ ಬೆಳಕಿಗೆ ಬಂದಿದೆ.

  • ಮಣಪ್ಪುರಂ ಗೋಲ್ಡ್ ಲೋನ್ ಸಿಬ್ಬಂದಿಯ ಎಡವಟ್ಟು- ಯಾರದೋ ಬಂಗಾರ ಮತ್ಯಾರಿಗೋ

    ಮಣಪ್ಪುರಂ ಗೋಲ್ಡ್ ಲೋನ್ ಸಿಬ್ಬಂದಿಯ ಎಡವಟ್ಟು- ಯಾರದೋ ಬಂಗಾರ ಮತ್ಯಾರಿಗೋ

    ಹುಬ್ಬಳ್ಳಿ: ಮಣಪ್ಪುರಂ ಗೋಲ್ಡ್ ಲೋನ್ ಸಿಬ್ಬಂದಿಯ ಎಡವಟ್ಟು ಯಾರದೋ ಬಂಗಾರ ಮತ್ಯಾರಿಗೋ ಹಸ್ತಾಂತರವಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ಜಗದೇವಿ ಮಾಳಿ ಕುಟುಂಬಸ್ಥರು ಇವರು ಕಳೆದ ವರ್ಷ ಮಣಪ್ಪುರಂ ಗೋಲ್ಡ್ ಲೋನ್‍ನಲ್ಲಿ, 37ಗ್ರಾಂ ಬಂಗಾರವನ್ನು ಇಟ್ಟು ಸಾಲ ಪಡೆದಿದ್ದರು. ಪಡೆದ ಸಾಲಕ್ಕೆ ಪ್ರತಿ ತಿಂಗಳು ಸಾಲದ ಕಂತನ್ನು ಸಹ ಪಾವತಿ ಮಾಡುತ್ತಿದ್ದರು.

    ಆದರೆ ಕಳೆದ ಮೂರು ತಿಂಗಳಿನಿಂದ ಕೆಲಸದ ನಿಮಿತ್ತ ಸೊಲ್ಲಾಪುರ ಹೋಗಿದ್ದ ಈ ಕುಟುಂಬ ಬಡ್ಡಿ ಹಾಗೂ ಸಾಲದ ಪಾವತಿ ಮಾಡಿರಲಿಲ್ಲ. ಈಗ ಹಳೆಯ ಸಾಲವನ್ನು ವಜಾ ಮಾಡಿ ಬಂಗಾರ ಪಡೆಯಲು ಮತ್ತೆ, ಗೊಲ್ಡ್ ಲೋನ್ ಕಚೇರಿಗೆ ಬಂದಿದ್ದಾರೆ.

    ಆದರೆ ಅಲ್ಲಿನ ಸಿಬ್ಬಂದಿ ನಿಮ್ಮ ಬಂಗಾರವನ್ನು ಈಗಾಗಲೇ ಯಾರೋ ಬಿಡಿಸಿಕೊಂಡು ಹೋಗಿದ್ದಾರೆ ಎಂದು ಹೇಳಿ ಈ ಕುಟುಂಬಕ್ಕೆ ಶಾಕ್ ಕೊಟ್ಟಿದ್ದಾರೆ. ಇವರ ಹೆಸರಿನಲ್ಲಿ ಇದ್ದ ಬಂಗಾರವನ್ನು ಯಾರಿಗೂ ಅಪರಿಚಿತರಿಗೆ ಬಂಗಾರವನ್ನು ಕೊಟ್ಟಿದ್ದು, ಬಡ ಕುಟುಂಬಕ್ಕೆ ಭರ ಸಿಡಿಲು ಬಡೆದಂತಾಗಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸೂಕ್ತ ಕ್ರಮ : ಬೊಮ್ಮಾಯಿ

    ತಮ್ಮ ಬಂಗಾರವನ್ನು ಯಾರಿಗೊ ಕೊಟ್ಟಿರುವ ಸಿಬ್ಬಂದಿಯ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಬಾಂಡ್ ನಮ್ಮ ಹತ್ತಿರ ಇದ್ದರೂ ಅದು ಹೇಗೆ ನಮ್ಮ ಬಂಗಾರವನ್ನು ಬೇರೆಯವರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಈ ಬಗ್ಗೆ ಪೊಲೀಸರು ಸಿಬ್ಬಂದಿ ವಿಚಾರಿಸಿದಾಗ, ಈ ಹಿಂದೆ ಇದ್ದ ಮ್ಯಾನೇಜರ್ ಅವರ ಅಧಿಕಾರ ಅವಧಿಯಲ್ಲಿ ಆಗಿದ್ದು, ಇದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ ಎಂದು ಕೈ ಚೆಲ್ಲುತ್ತಿದ್ದಾರೆ. ಅಲ್ಲದೇ ನಮ್ಮ ಬಂಗಾರ ನಮಗೆ ಬೇಕು ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ನವವಿವಾಹಿತೆ ಟೆಕ್ಕಿ ಅನುಮಾನಸ್ಪದ ಸಾವು – ವರದಕ್ಷಿಣೆ ಕಿರುಕುಳ ಆರೋಪ

  • ಕುತ್ತಿಗೆಗೆ ಚಾಕು ಹಿಡಿದು, ಕೈ, ಕಾಲು ಕಟ್ಟಿ ಮನೆಗಳ ದರೋಡೆ

    ಕುತ್ತಿಗೆಗೆ ಚಾಕು ಹಿಡಿದು, ಕೈ, ಕಾಲು ಕಟ್ಟಿ ಮನೆಗಳ ದರೋಡೆ

    ಚಿಕ್ಕೋಡಿ: ಕೈ, ಕಾಲು ಕಟ್ಟಿ ಹಾಕಿ ಸಿನಿಮಾ ರೀತಿಯಲ್ಲಿ ಮನೆಯನ್ನ ದರೋಡೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

    ಪಟ್ಟಣದ ಹೊರವಲಯದಲ್ಲಿರುವ ಎರಡು ಮನೆಗಳಲ್ಲಿ ದರೋಡೆ ಮಾಡಲಾಗಿದ್ದು ,ಇದರಲ್ಲಿ ರಾಮ ಕಿಲ್ಲೆದಾರ ಅವರ ಮನೆಯಲ್ಲಿ ಯಾರು ಇಲ್ಲದಿದಾಗ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಶಕುಂತಲಾ ಕಿಲ್ಲೆದಾರ ಅವರ ಮನೆಗೆ ನುಗ್ಗಿ ಮನೆಯಲ್ಲಿದ್ದ ವೃದ್ಧೆ ಶಕುಂತಲಾ ಸೇರಿದಂತೆ ಮೂವರನ್ನ ಕೈಕಾಲು ಕಟ್ಟಿ ,ಕುತ್ತಿಗೆಗೆ ಚಾಕು ಹಿಡಿದು ಹೆದರಿಸಿ ಕಳ್ಳತನ ಮಾಡಲಾಗಿದೆ.  ಇದನ್ನೂ ಓದಿ:  ನೀನು ಜಮೀರ್ ಥರಾ ಆಡ್ತೀಯಲ್ಲೋ – ರೇಣುಕಾಚಾರ್ಯಗೆ ಮಾತಿನಿಂದ ತಿವಿದ ಬಿಎಸ್‍ವೈ

    ಈ ಎರಡು ಮನೆಯಲ್ಲಿ ಒಟ್ಟು 140 ಗ್ರಾಂ ಚಿನ್ನ ,ಹಾಗೂ 75 ಸಾವಿರ ನಗದು ದೋಚಿ ಕಳ್ಳರ ಪರಾರಿಯಾಗಿದ್ದಾರೆ. ಸುಮಾರು ಎಂಟರಿಂದ ಹತ್ತು ಜನರು ಗುಂಪು ಏಕಾಏಕಿ ಮನೆಗೆ ನುಗ್ಗಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಮನೆಯಲ್ಲಿದ್ದ ಮೂವರನ್ನು ಕಟ್ಟಿ ಹಾಕಿದ್ದಾರೆ. ಹಾಗೂ ಕುತ್ತಿಗೆಗೆ ಚಾಕು ಹಿಡಿದು ಬೆದರಿಕೆ ಹಾಕಿ ಮನೆಯಲ್ಲಿದ್ದ ಚಿನ್ನ ,ನಗದು ಹಣ ದರೋಡೆ ಮಾಡಿದ್ದಾರೆ ಎಂದು ಘಟನೆ ಕುರಿತು ಕುಟುಂಸ್ಥರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್‌ ವಿವಾದ – ಅಪ್ರಾಪ್ತ ಬಾಲಕಿಯರ ವೈಯಕ್ತಿಕ ವಿವರ ಟ್ವೀಟ್‌ ಮಾಡ್ತಿದೆ ಬಿಜೆಪಿ: ಶಿವಸೇನಾ ಸಂಸದೆ ತರಾಟೆ

    ಘಟನೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ ಭೇಟಿ ನೀಡಿದ್ದು, ಶ್ವಾನ ದಳ, ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು. ಪಿಎಸ್‍ಐ ಗಣಪತಿ ಕೊಂಗನೊಳಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಕುರಿತು ಸಂಕೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೋಣಕ್ಕೆ 3 ಕೆಜಿ ಚಿನ್ನ ಗಿಫ್ಟ್

    ಕೋಣಕ್ಕೆ 3 ಕೆಜಿ ಚಿನ್ನ ಗಿಫ್ಟ್

    ಹೈದರಾಬಾದ್: ಒಂದುವರೆಕೋಟಿ ಬೆಲೆ ಬಾಳುವ ಚಿನ್ನದ ಸರವನ್ನು ವ್ಯಕ್ತಿ ಕೋಣವೊಂದಕ್ಕೆ ತೊಡಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಹರಿಯಾಣದಿಂದ ಒಂದು ಕೋಣವನ್ನು ತರಿಸಲಾಗಿದ್ದು, ಅದಕ್ಕೆ ಬಾಹುಬಲಿ ಕೋಣ ಎಂದು ಹೆಸರಿಡಲಾಗಿದೆ. ಹೈದರಾಬಾದ್‍ನ ಚಾಪೆಲ್ ಬಜಾರ್‍ನ ಲಡ್ಡು ಯಾದವ್ ಎಂಬಾತ ಕೋಣವನ್ನು ಹರಿಯಾಣದ ಬಲ್ವೀರ್ ಸಿಂಗ್ ಎಂಬಾತನಿಂದ ತಂದು, ಸದರ್ ಉತ್ಸವದಲ್ಲಿ ಪ್ರದರ್ಶಿಸಲು ಮುಂದಾಗಿದ್ದಾರೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

    ಈ ಕೋಣವನ್ನು ಪ್ರದರ್ಶನಕ್ಕಾಗಿ ಮಾತ್ರ ತಂದಿದ್ದು, ಇದಕ್ಕೆ ಕೋಣದ ಮಾಲೀಕ ಬಲ್ವೀರ್ ಸಿಂಗ್ ಯಾವುದೇ ಹಣವನ್ನೂ ಪಡೆದಿಲ್ಲ. ಕೋಣ ತಂದ ಲಡ್ಡು ಯಾದವ್ ಸುಮಾರು 3 ಕೆ.ಜಿ ತೂಕವಿರುವ, ಒಂದೂವರೆ ಕೋಟಿ ಬೆಲೆ ಬಾಳುವ ಚಿನ್ನದ ಸರವನ್ನು ಕೋಣಕ್ಕೆ ತೊಡಿಸಿದ್ದಾನೆ. ನಿಜಾಮರ ಕಾಲದಿಂದಲೂ ಸದರ್ ಉತ್ಸವ ಪ್ರತಿ ವರ್ಷ ನಡೆಯುತ್ತಿದ್ದು, ಹಸುಗಳು, ಎಮ್ಮೆ, ಎತ್ತು ಕೋಣಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. ಇದನ್ನೂ ಓದಿ: ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತೆ: ಮುನಿಸ್ವಾಮಿ

    ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಮೆರುಗು ನೀಡುವ ಕೋಣಗಳ ಉತ್ಸವವಾದ ಸದರ್ ಉತ್ಸವಕ್ಕೆ ಹೈದರಾಬಾದ್ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಹುಬಲಿ ಕೋಣ ಸಾಕಷ್ಟು ಗಮನ ಸೆಳೆಯುತ್ತಿದೆ.

  • ಗ್ರಾಹಕನ ಸೋಗಿನಲ್ಲಿ ಆಭರಣ ಕಳ್ಳತನ- 4ಲಕ್ಷ ಮೌಲ್ಯದ ಸ್ವತ್ತುಗಳು ವಶ

    ಗ್ರಾಹಕನ ಸೋಗಿನಲ್ಲಿ ಆಭರಣ ಕಳ್ಳತನ- 4ಲಕ್ಷ ಮೌಲ್ಯದ ಸ್ವತ್ತುಗಳು ವಶ

    ಕಾರವಾರ : ಚಿನ್ನದಂಗಡಿಯಲ್ಲಿ ಗ್ರಾಹಕನ ಸೋಗಿನಲ್ಲಿ ಆಭರಣ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸರು 4ಲಕ್ಷ ಮೌಲ್ಯದ ಸ್ವತ್ತುಗಳು ವಶಕ್ಕೆ ಪಡೆಯಲಾಗಿದೆ.

    ಸೆಪ್ಟೆಂಬರ್ 17 ರಂದು ಶಿರಸಿ ನಗರದ ರತ್ನದೀಪ ಜ್ಯುವೆಲರಿ ಶಾಪ್ ನಲ್ಲಿ ಗ್ರಾಹಕನ ಸೋಗಿನಲ್ಲಿ ಬಂದು ಕಳ್ಳತನ ಮಾಡಿದ್ದ ಪ್ರಕರಣವನ್ನು ಶಿರಸಿ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಿಜೆಪಿಯನ್ನು ತುಕ್ಡೆ ತುಕ್ಡೆ ಮಾಡುತ್ತೇನೆ: ಕನ್ಹಯ್ಯ ಕುಮಾರ್

    ಬೆಳವಾಗಿಯ ನಾವೇಕರ ಗಲ್ಲಿಯ ನಿಲೇಶ್ ರೇವಣಕರ (32) ಹಾಗೂ ಕಾರವಾರದ ಹಬ್ಬುವಾಡದ ರಾಘವೇಂದ್ರ ದೈವಜ್ಞ (35) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿ ನಿಲೇಶ್ ರತ್ನದೀಪ ಜ್ಯುವೆಲರ್ಸನಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು, ಚಿನ್ನದ ಸರವನ್ನು ಕಸಿದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದ. ಇದು ಅಂಗಡಿಯ ಸಿಸಿಟಿಯಲ್ಲಿ ದಾಖಲಾಗಿತ್ತು. ನಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

    ಬಂಧಿತ ಆರೋಪಿಗಳಿಂದ ಪೊಲೀಸರು 22.28 ಗ್ರಾಂ ಬಂಗಾರದ ತೂಕದ ಚಿನ್ನದ ಎರಡು ಸರ ಹಾಗೂ ಮಾರುತಿ ಸ್ವಿಪ್ಟ್ ಕಾರು ಸೇರಿ ಒಟ್ಟೂ 4ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನಲ್ಲಿ ಪಿಎಸ್‍ಐ ರಾಜಕುಮಾರ, ಪಿಎಸ್‍ಐ ಮೋಹಿನಿ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ಚೇತನ್ ಕುಮಾರ್, ಕೊಟೇಶ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.