Tag: ಬಂಗರ್ ರಾಜು

  • ನಟಿಯರ ಮೈಮುಟ್ಟಿದರೆ ನಾಗ ಚೈತನ್ಯ ‘SORRY…’  ಕೇಳ್ತಾರೆ : ನಟಿ ದಕ್ಷಾ ನಗರ್ಕರ್

    ನಟಿಯರ ಮೈಮುಟ್ಟಿದರೆ ನಾಗ ಚೈತನ್ಯ ‘SORRY…’ ಕೇಳ್ತಾರೆ : ನಟಿ ದಕ್ಷಾ ನಗರ್ಕರ್

    ತೆಲುಗು ನಟಿ ಸಮಂತಾ (Samantha) ಡಿವೋರ್ಸ್ ಹಿನ್ನೆಲೆಯಲ್ಲಿ ನಟ ನಾಗ ಚೈತನ್ಯ (Naga Chaitanya) ಕುರಿತು ಈವರೆಗೂ ನೆಗೆಟಿವ್ ಕಾಮೆಂಟ್ ಗಳೇ ಕೇಳಿ ಬಂದಿದ್ದವು. ಈ ನೋವಿನಿಂದ ಸಮಂತಾ ಆಚೆ ಬಂದರೂ, ನಾಗ ಚೈತನ್ಯ ಇನ್ನೂ ಅದರಿಂದ ಆಚೆ ಬಂದಿಲ್ಲ ಎಂದೇ ಹೇಳಲಾಗಿತ್ತು. ಆದರೂ, ನಾಗ ಚೈತನ್ಯ ಬಗ್ಗೆ ದಿನಕ್ಕೊಂದು ನೆಗೆಟಿವ್ ಸುದ್ದಿ ಆಚೆ ಬರುತ್ತಲೇ ಇವೆ. ಇದೇ ಮೊದಲ ಬಾರಿಗೆ ನಟಿಯೊಬ್ಬರು ನಾಗ ಚೈತನ್ಯ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದಾರೆ. ಅವರ ಮಾತು ಸದ್ಯ ವೈರಲ್ ಆಗಿವೆ.

    ಶೂಟಿಂಗ್ ಸ್ಥಳದಲ್ಲಿ ನಾಗ ಚೈತನ್ಯ ಹೇಗಿರುತ್ತಾರೆ ಮತ್ತು ಮಹಿಳೆಯರನ್ನು ಅವರು ಹೇಗೆ ಗೌರವಿಸುತ್ತಾರೆ ಎನ್ನುವ ಕುರಿತು ನಟಿ ದಕ್ಷಾ ನಗರ್ಕರ್ (Daksha Nagarkar) ಮಾತನಾಡಿದ್ದಾರೆ. ಅವರಂತಹ ಒಳ್ಳೆಯ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ಹಾಡಿ ಹೊಗಳಿದ್ದಾರೆ. ಅಲ್ಲದೇ, ಚಿತ್ರೀಕರಣ ನಡೆಯುವ ಸ್ಥಳದಲ್ಲಿನ ಅವರ ನಡೆತೆಯನ್ನೂ ದಕ್ಷಾ ಕೊಂಡಿದ್ದಾರೆ. ಇದನ್ನೂ ಓದಿ: ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

    ನಾಗ ಚೈತನ್ಯ ಜೊತೆ ದಕ್ಷಾ ‘ಬಂಗರ್ ರಾಜು’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹಾಡೊಂದರಲ್ಲಿ ದಕ್ಷಾ ಮತ್ತು ನಾಗ ಚೈತನ್ಯ ಹೆಜ್ಜೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕಿಸ್ ಕೊಡುವ ಹಾಗೂ ತಬ್ಬಿಕೊಳ್ಳುವ ದೃಶ್ಯಗಳು ಬಂದಾಗ  ಚಿತ್ರೀಕರಣ ಮುಗಿಸಿ ದಕ್ಷಾಗೆ ಕ್ಷಮೆ ಕೇಳಿದ್ದರಂತೆ ನಾಗ್. ಅಷ್ಟೊಂದು ಗೌರವವನ್ನು ಅವರು ನಟಿಯರಿಗೆ ಕೊಡುತ್ತಾರೆ ಎಂದಿದ್ದಾರೆ ದಕ್ಷಾ.

    ‘ನಾಗ ಚೈತನ್ಯ ಯಾವಾಗಲೂ ಕೂಲ್ ಆಗಿ ಇರುತ್ತಾರೆ. ಅನೇಕ ಸಲ ನನ್ನ ಯೋಗಕ್ಷೇಮ ಕೇಳಿದ್ದಾರೆ. ಅವರ ಜೊತೆಗೆ ಕೆಲಸ ಮಾಡಿದ್ದನ್ನೂ ನಾನು ಯಾವತ್ತೂ ಮರೆಯುವುದಿಲ್ಲ ಎಂದಿರುವ ನಟಿ’, ಅವರೊಂದಿಗೆ ಮತ್ತೆ ಕೆಲಸ ಮಾಡುವ ಇಂಗಿತವನ್ನೂ ವ್ಯಕ್ತ ಪಡಿಸಿದ್ದಾರೆ.