ವಾಷಿಂಗ್ಟನ್: ಅಮೆರಿಕದ (America) ಫ್ಲೋರಿಡಾದಲ್ಲಿ (Florida) 2 ದೋಣಿಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಕ್ಲಿಯರ್‌ವಾಟರ್ ನಗರದ ಮೆಮೋರಿಯಲ್ ಕಾಸ್‌ವೇ ಸೇತುವೆಯ ಬಳಿ ನಡೆದಿದೆ.
ಇಬ್ಬರು ಸಿಬ್ಬಂದಿ ಸೇರಿದಂತೆ 45 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಗೆ ಇನ್ನೊಂದು ದೋಣಿಯು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಇನ್ನೊಂದು ದೋಣಿಯು ಘಟನಾ ಸ್ಥಳದಿಂದ ಕಾಣೆಯಾಗಿದೆ ಎಂದು ಕ್ಲಿಯರ್‌ವಾಟರ್ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ‘ಥಾಮಾ’ ಚಿತ್ರಕ್ಕಾಗಿ ಊಟಿಯಲ್ಲಿ ಬೀಡುಬಿಟ್ಟ ರಶ್ಮಿಕಾ ಮಂದಣ್ಣ
ಈ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೇಕೇರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಡಿಕ್ಕಿ ಹೊಡೆದು ಪರಾರಿಯಾದ ಮತ್ತೊಂದು ದೋಣಿಯ ಬಗ್ಗೆ ಮಾಹಿತಿ ದೊರೆತಿಲ್ಲ. ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
– ರಾಜಕೀಯ ಕಾರಣಕ್ಕೆ ನನ್ನ ಆಫರ್ ರಿಜೆಕ್ಟ್ – ಅಮೆರಿಕ ಮಾಧ್ಯಮಕ್ಕೆ ಮಸ್ಕ್ ಹೇಳಿಕೆ
ವಾಷಿಂಗ್ಟನ್: ನಾನು ಗಗನಯಾತ್ರಿಗಳನ್ನು ಮರಳಿ ತರುವ ಆಫರ್ ನೀಡಿದ್ದೆ. ಆದರೆ ಜೋ ಬೈಡನ್ (Joe Biden) ಸರ್ಕಾರ ಈ ಆಫರ್ ಅನ್ನು ರಾಜಕೀಯ ಕಾರಣಕ್ಕೆ ತಿರಸ್ಕರಿಸಿತ್ತು ಎಂದು ಸ್ಪೇಸ್ ಎಕ್ಸ್ (SpaceX) ಸಂಸ್ಥಾಪಕ ಎಲೋನ್ ಮಸ್ಕ್ (Elon Musk) ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಗಗನಯಾತ್ರಿಗಳು ಕೇವಲ ಎಂಟು ದಿನಗಳವರೆಗೆ ಮಾತ್ರ ಇರಬೇಕಿತ್ತು. ಆದರೆ ಸುಮಾರು 10 ತಿಂಗಳಿನಿಂದ ಅಲ್ಲಿದ್ದರು. ಸ್ಪೇಸ್‌ಎಕ್ಸ್ ಗಗನಯಾನಿಗಳನ್ನು ಕರೆತರುವ ಬಗ್ಗೆ ಬೈಡನ್ ಆಡಳಿತಕ್ಕೆ ಪ್ರಸ್ತಾಪ ಸಲ್ಲಿಸಿತ್ತು. ಆದರೆ ರಾಜಕೀಯ ಕಾರಣಗಳಿಗಾಗಿ ಇದನ್ನು ತಿರಸ್ಕರಿಸಲಾಗಿತ್ತು ಎಂದು ತಿಳಿಸಿದರು.
.@elonmusk reveals the Biden administration turned down his offer to get the stranded astronauts home sooner: 🚨“It was rejected for political reasons.” 🚨 pic.twitter.com/hN4pPk3YN1
ಇಂದು ಭೂಮಿಗೆ ಮರಳಿದ ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶದಲ್ಲಿ ಇದ್ದಾಗ ಈ ಪ್ರಶ್ನೆಯನ್ನು ಕೇಳಲಾಗಿತ್ತು. ಎಲೋನ್ ಮಸ್ಕ್ ಅವರು ನಿಮ್ಮನ್ನು ಮೊದಲೇ ಮರಳಿ ಕರೆತರುವ ಪ್ರಸ್ತಾಪವನ್ನು ನೀಡಿದ್ದಾಗಿ ಹೇಳಿದ್ದಾರೆ ಮತ್ತು ಅದನ್ನು ನಿರಾಕರಿಸಲಾಗಿದೆ ಇದು ನಿಜವೇ ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ವಿಲ್ಮೋರ್ ಅವರು, ಮಸ್ಕ್ ಹೇಳುವುದು ಸಂಪೂರ್ಣವಾಗಿ ವಾಸ್ತವ. ಇಷ್ಟು ಮಾತ್ರ ಈಗ ನಾನು ಹೇಳಬಲ್ಲೆ ಎಂದಿದ್ದರು. ಇದನ್ನೂ ಓದಿ: ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್- 286 ದಿನಗಳ ಅಂತರಿಕ್ಷ ವಾಸ ಅಂತ್ಯ. ಟಚ್‌ಡೌನ್ ಪ್ರಕ್ರಿಯೆ ಹೇಗಾಯ್ತು?
ಬೋಯಿಂಗ್ ಕಳುಹಿಸಿದ ನೌಕೆಯಲ್ಲಿ ಸಮಸ್ಯೆ ಎದುರಾದಾಗ ಮಸ್ಕ್ ಸ್ಪೇಸ್ ಎಕ್ಸ್ ಕ್ಯಾಪ್ಸುಲ್ ಮೂಲಕ ಮರಳಿ ಭೂಮಿಗೆ ತರುವ ಪ್ರಸ್ತಾಪ ಇಟ್ಟಿದ್ದರು.
ಜೋ ರೋಗನ್ ಅವರ ಜೊತೆ ಮಾತನಾಡಿದ್ದ ಮಸ್ಕ್, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಅವರ ಪ್ರಚಾರಕ್ಕೆ ಹಾನಿ ಮಾಡಲು ಬಯಸದ ಕಾರಣ ಬೈಡನ್ ಸರ್ಕಾರ ರಾಜಕೀಯ ಕಾರಣಗಳಿಗಾಗಿ ತನ್ನ ಮನವಿಯನ್ನು ನಿರಾಕರಿಸಿತ್ತು ಎಂದು ದೂರಿದ್ದರು.
NEW: Astronaut says Elon Musk is “absolutely factual” after a WaPo reporter asked him about how Musk said his rescue efforts were denied for political reasons.
Musk was condemned by the media for making the comment but it appears the astronauts agree.
ಮಸ್ಕ್ ಮೇಲೆ ಬೈಡನ್‌ಗೆ ಸಿಟ್ಟಾಕೆ?
ಮಸ್ಕ್ ಈ ಹಿಂದೆ ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸುತ್ತಿದ್ದರು. ಮಸ್ಕ್‌ಗೆ ಅಮೆರಿಕ ಪೌರತ್ವ ಸಿಕ್ಕಿದ್ದು 2002ರಲ್ಲಿ. ಈ ಹಿಂದೆ ಬರಾಕ್ ಒಬಾಮಾ (Barack Obama) ನಂತರ ಹಿಲರಿ ಕ್ಲಿಂಟನ್ (Hillary Clinton) ನಂತರ ಜೋ ಬೈಡನ್ (Joe Biden) ಅವರನ್ನು ಮಸ್ಕ್ ಬೆಂಬಲಿಸಿದ್ದರು. 2016ರಲ್ಲಿ ಟ್ರಂಪ್ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಗೆ ಆಗುವ ವ್ಯಕ್ತಿಯಲ್ಲ ಎಂದಿದ್ದರು. ರಿಪಬ್ಲಿಕನ್ ಪಕ್ಷದ ವಿರೋಧಿಯಾಗಿದ್ದ ಮಸ್ಕ್ ಈಗ ಆ ಪಕ್ಷದ ಪರ ಒಲವು ಹೊಂದಲು ಕಾರಣವಾದ ಮೊದಲ ಘಟನೆ ಯಾವುದು ಎಂದರೆ ಅದು ಕೋವಿಡ್.
ಕೊರೊನಾಗೆ ಲಸಿಕೆ ಕಂಡು ಹಿಡಿದ ನಂತರ ವಿಶ್ವಾದ್ಯಂತ ವಿತರಣೆ ಆರಂಭವಾಯಿತು. ಈ ವೇಳೆ ಮಸ್ಕ್ ಲಸಿಕೆಯನ್ನು ನಾನು ಲಸಿಕೆಯನ್ನು ತೆಗೆದುಕೊಳ್ಳಲ್ಲ ಎಂದಿದ್ದರು. ಇದು ಅಮೆರಿಕ ಸರ್ಕಾರದ ಕೆಂಗಣ್ಣಿಗೆ ಗುರಿಯಾಯಿತು. ನಂತರ ಮಸ್ಕ್ ಲಸಿಕೆಯನ್ನು ತೆಗೆದುಕೊಂಡಿದ್ದರು. ತೆಗೆದುಕೊಂಡಿದ್ದರೂ ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎನ್ನುವುದು ಸರಿಯಲ್ಲ ಎಂದು ಹೇಳಿದ್ದರು. ಬೈಡನ್ ಸರ್ಕಾರದ ವಿರುದ್ಧ ಅಸಮಾಧಾನವಿದ್ದರೂ ಮಸ್ಕ್ ಅದನ್ನು ಎಲ್ಲಿಯೂ ಬಹಿರಂಗವಾಗಿ ತೋರಿಸಿಕೊಂಡಿರಲಿಲ್ಲ.
2021 ರಲ್ಲಿ ಅಮೆರಿಕದ ಅಧ್ಯಕ್ಷರ ನಿವಾಸವಾದ ಶ್ವೇತ ಭವನದಲ್ಲಿ ಎಲೆಕ್ಟ್ರಿಕ್ ವಾಹನಕ್ಕೆ ಸಂಬಂಧಿಸಿದಂತೆ ಒಂದು ದೊಡ್ಡ ಕಾರ್ಯಕ್ರಮ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಅಮೆರಿಕದ ಅಟೋಮೊಬೈಲ್ ಕಂಪನಿಯ ಮಾಲೀಕರನ್ನು ಆಹ್ವಾನಿಸಲಾಗಿತ್ತು. ಆದರೆ ವಿಶ್ವದ ನಂಬರ್ ಒನ್ ಎಲೆಕ್ಟ್ರಿಕ್ ಕಾರು ಕಂಪನಿಯಾಗಿರುವ ಟೆಸ್ಲಾ ಮಾಲೀಕ ಮಸ್ಕ್ ಅವರನ್ನು ಆಹ್ವಾನಿಸಿರಲಿಲ್ಲ. ಉದ್ದೇಶಪೂರ್ವಕವಾಗಿ ಅಮೆರಿಕ ಸರ್ಕಾರ ನನ್ನನ್ನು ಕಡೆಗಣಿಸಿ ಅವಮಾನ ಮಾಡಿದ್ದರೆ ಎಂದು ತಿಳಿದ ಮಸ್ಕ್ 2022 ರಿಂದ ರಿಪಬ್ಲಿಕನ್ ಗುಂಪುಗಳಿಗೆ ಹಣಕಾಸಿನ ನೆರವು ನೀಡಲು ಆರಂಭಿಸಿದರು. ಇದನ್ನೂ ಓದಿ: ಭೂಮಿಗೆ ಸುನಿತಾ ವಿಲಿಯಮ್ಸ್ ಇಳಿದಾಯ್ತು ಮುಂದೇನು? 45 ದಿನಗಳ ರಿಹ್ಯಾಬಿಲಿಟೇಶನ್‌ನಲ್ಲಿ ಏನಿರುತ್ತೆ?
ನಂತರದ ದಿನದಲ್ಲಿ ಮಸ್ಕ್ ಕಂಪನಿಯ ವಿರುದ್ಧ ಬೈಡನ್ ಸರ್ಕಾರ ಹಲವಾರು ತನಿಖೆ ಆರಂಭಿಸಿತು. ಉದ್ಯೋಗಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪ ಬಂದಾಗಲೂ ತನಿಖೆ ನಡೆಯಿತು. ಟ್ವಿಟ್ಟರ್ ಕಂಪನಿಯ ಸ್ವಾಧೀನ ಪ್ರಕ್ರಿಯೆ, ಟೆಸ್ಲಾ ಅಟೋಪೈಲಟ್ ವಿಶೇಷತೆ ಮೇಲೆ ತನಿಖೆಯನ್ನು ಎದುರಿಸಬೇಕಾಯಿತು. 2023ರಲ್ಲಿ ನೇರವಾಗಿಯೇ ನಾನು ಜೋ ಬೈಡನ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಸಂದರ್ಶನದಲ್ಲಿ ಮಸ್ಕ್ ಹೇಳಿದರು.
ಟ್ಟಿಟ್ಟರ್ ಒಡೆತನ ಸಂಪೂರ್ಣ ಸಿಕ್ಕಿದ ಬೆನ್ನಲ್ಲೇ 2022 ರ ನವೆಂಬರ್‌ನಲ್ಲಿ ನಿಷೇಧಗೊಂಡಿದ್ದ ಟ್ರಂಪ್ ಖಾತೆಗೆ ಮಸ್ಕ್ ಮತ್ತೆ ಜೀವ ನೀಡುತ್ತಾರೆ. ಟ್ರಂಪ್ ಖಾತೆ ಮತ್ತೆ ಚಾಲನೆ ಸಿಕ್ಕಿದ್ದು ಬೈಡೆನ್ ಸರ್ಕಾರಕ್ಕೆ ಇಷ್ಟವಾಗಿರಲಿಲ್ಲ. ಇದರ ಬೆನ್ನಲ್ಲೇ ಟ್ರಂಪ್ ಕಂಪನಿಯ ವಿರುದ್ಧ ತನಿಖೆಗಳು ಮತ್ತಷ್ಟು ತೀವ್ರಗೊಳ್ಳುತ್ತದೆ.
ತನಿಖೆ ತೀವ್ರಗೊಳ್ಳೊತ್ತಿದ್ದಂತೆ ಚುನಾವಣೆಯಲ್ಲಿ ಟ್ರಂಪ್ ಪರ ಪ್ರಚಾರಕ್ಕೆ ಧುಮುಕಿದ್ದರು. ಟ್ರಂಪ್‌ಗೆ ಅತಿ ಹೆಚ್ಚು ದೇಣಿಗೆ ನೀಡಿದ ವ್ಯಕ್ತಿಗಳ ಪೈಕಿ ಮಸ್ಕ್ ಮೊದಲ ಸ್ಥಾನದಲ್ಲಿದ್ದಾರೆ. ಚುನಾವಣೆಯಲ್ಲಿ ಮಸ್ಕ್ ಅಮೆರಿಕ ಮಾಧ್ಯಮಗಳನ್ನು ಬಹಿರಂಗವಾಗಿಯೇ ದೂರಿದ್ದರು. ಟ್ರಂಪ್ ವಿರುದ್ಧ ಉದ್ದೇಶಪೂರ್ವವಾಗಿಯೇ ಅಪಪ್ರಚಾರ ಮಾಡಲಾಗುತ್ತದೆ. ಇವುಗಳಲ್ಲಿ ಬಂದ ಸುದ್ದಿಗಳನ್ನು ನಂಬಬೇಡಿ. ಎಕ್ಸ್‌ನಲ್ಲಿ ಬರುವ ಸುದ್ದಿಗಳನ್ನು ಮಾತ್ರ ನಂಬಿ ಎಂದು ಕರೆ ನೀಡಿದ್ದರು.
ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ಬಹಿರಂಗ ಬೆಂಬಲ ಘೋಷಿಸಿದ್ದು ಮಾತ್ರವಲ್ಲದೇ ಭಾರೀ ಪ್ರಮಾಣದಲ್ಲಿ ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ಪ್ರತಿ ದಿನ 1 ಮಿಲಿಯನ್ ಡಾಲರ್ ಭಾರತದ ರೂಪಾಯಿಯಲ್ಲಿ ಹೇಳುವುದಾದರೆ ಸುಮಾರು 8.40 ಕೋಟಿ ರೂ ನೀಡುವುದಾಗಿ ಘೋಷಣೆ ಮಾಡಿದ್ದರು. ದೇಣಿಗೆ ನೀಡಿದ್ದು ಮಾತ್ರವಲ್ಲದೇ ಟ್ರಂಪ್ ಪರ ಪ್ರಚಾರ ಸಭೆಯಲ್ಲಿ ಕಾಣಿಸಿಕೊಂಡಿದ್ದರು.
ಅಮೆರಿಕ ಉಳಿಯಬೇಕಾದರೆ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಬೇಕು ಎಂದು ಕರೆ ನೀಡಿದ್ದರು. ಟ್ರಂಪ್ ಪರ ಯುವ ಜನತೆಯನ್ನು ಮಸ್ಕ್ ಸೆಳೆದಿದ್ದರು. ಇದೆಲ್ಲದರ ಪರಿಣಾಮ ಟ್ರಂಪ್ ಈಗ 47ನೇ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವಾಷಿಂಗ್ಟನ್: ಅಂತರಿಕ್ಷದಲ್ಲಿ 9 ತಿಂಗಳು ಕಳೆದ ಸುನೀತಾ ವಿಲಿಯಮ್ಸ್ (Sunita Williams) ಬುಚ್ ವಿಲ್ಮೋರ್ ಯಶಸ್ವಿಯಾಗಿ ಧರೆಗೆ ಇಳಿದಿದ್ದಾರೆ. ನಾಸಾ (NASA) ಗಗನಯಾನಿ ನಿಕ್ ಹೇಗ್, ರಷ್ಯಾದ ಅಲೆಕ್ಸಾಂಡರ್ ಗೊರ್ಚನೋವ್ ಜೊತೆಗೂಡಿ ಸುನಿತಾ ಮತ್ತು ವಿಲ್ಮೋರ್ ಯಶಸ್ವಿಯಾಗಿ ಭೂಮಿಗೆ ಬಂದಿದ್ದಾರೆ.
ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 10.35ಕ್ಕೆ ಸರಿಯಾಗಿ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ಕ್ರೂ ಡ್ರ್ಯಾಗನ್ ಗಗನನೌಕೆ (Crew Dragon Capsule) ತನ್ನ 17 ಗಂಟೆಗಳ ಪಯಣವನ್ನು ಆರಂಭಿಸಿ ಅಮೆರಿಕದ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ 5:57ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ) ಸರಿಯಾಗಿ ಫ್ಲೋರಿಡಾ ಕಡಲ ತೀರದಲ್ಲಿ ಲ್ಯಾಂಡ್ ಆಗಿದೆ.
ನೌಕೆಯಿಂದ ಹೊರ ಬಂದ ಯಾನಿಗಳನ್ನು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಸಾಗಿಸಲಾಗಿದೆ. ಅಲ್ಲಿ ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ. ಗಗನ ಯಾತ್ರಿಗಳು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇದನ್ನೂ ಓದಿ: ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್- 286 ದಿನಗಳ ಅಂತರಿಕ್ಷ ವಾಸ ಅಂತ್ಯ
ಭೂಮಿಗೆ ಬಂದಿರುವ ಗಗನಯಾತ್ರಿಗಳಿಗೆ ನಾಸಾ 45 ದಿನಗಳ ರಿಹ್ಯಾಬಿಲಿಟೇಶನ್ ಯೋಜನೆ ರೂಪಿಸಿದೆ. 45 ದಿನಗಳಲ್ಲಿ ದೇಹದ ಚಟುವಟಿಕೆ ಮತ್ತು ಆರೋಗ್ಯ ಪರೀಕ್ಷೆಗಳನ್ನು ಗಗನಯಾತ್ರಿಗಳಿಗೆ ಮಾಡಲಾಗುತ್ತದೆ. ಭೂಮಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಅವಕಾಶ ನೀಡಲಾಗುತ್ತದೆ. ನೆಲದ ಮೇಲೆ ನಡೆಯಲು ಸಹಾಯ, ಆಹಾರ, ಅಗತ್ಯ ಔಷಧಗಳನ್ನು ಒದಗಿಸುವುದು, ಕಾಲುಗಳನ್ನು ಬಲಪಡಿಸುವ ವ್ಯಾಯಾಮ, ಕಾಲುಗಳು ತಮ್ಮ ನಿಯಂತ್ರಣಕ್ಕೆ ಬರುವವರೆಗೂ ಮೇಲ್ವಿಚಾರಣೆ ನಡೆಯಲಿದೆ.
ಏನೇನು ಸಮಸ್ಯೆ ಎದುರಿಸುತ್ತಾರೆ?
ಗುರುತ್ವಾಕರ್ಷಣೆ ಪ್ರಭಾವ ಇಲ್ಲದ ಕಾರಣ ದೇಹದಲ್ಲಿ ಕೆಲ ಬದಲಾವಣೆ ಆಗುತ್ತದೆ. ದೇಹ ಭಾರವಿಲ್ಲ ಎನ್ನುವಂತೆ ಅವರಿಗೆ ಅನಿಸುತ್ತದೆ. ಜೊತೆಗೆ ಅವರ ದೇಹದ ಚರ್ಮ ಮೊದಲಿನಂತೆ ಇರುವುದಿಲ್ಲ ಸ್ನಾಯು, ಮೂಳೆಗಳ ಸಾಂದ್ರತೆ ಶೇ.30 ಕ್ಷೀಣಿಸುತ್ತದೆ. ಮೂಳೆಗಳು ಬಲ ಮತ್ತು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ಈ ಕಾರಣಗಳಿಂದ ಗಗನಯಾನಿಗಳಿಗೆ ಮೂಳೆ ಮುರಿತದ ಸಮಸ್ಯೆ ಎದುರಿಸುತ್ತಾರೆ.
ಗಗನಯಾತ್ರಿಗಳ ದೇಹದ ಮೇಲೆ ಭೂಮಿಯ ಗುರುತ್ವಾಕರ್ಷಣೆಯ ಕೊರತೆಯಿಂದ ಮೂಳೆಯ ಸಾಂದ್ರತೆ ಮತ್ತು ಸ್ನಾಯು ಕ್ಷೀಣತೆ ಅನುಭವಿಸುತ್ತಾರೆ. ಶೂನ್ಯ ಗುರುತ್ವಾಕರ್ಷಣೆ ಮತ್ತು ಹೆಚ್ಚಿನ ವಿಕಿರಣದಲ್ಲಿ ದೀರ್ಘಕಾಲ ಬಾಹ್ಯಾಕಾಶದಲ್ಲಿ ಕಾಲ ಕಳೆದಿದ್ದರಿಂದ ಮೂಳೆಗಳ ದೌರ್ಬಲ್ಯ, ದೃಷ್ಟಿಯ ಮೇಲೆ ಪರಿಣಾಮ ಉಂಟಾಗಬಹುದು. ವಿಕಿರಣವು ಕ್ಯಾನ್ಸರ್ ಮತ್ತು ನರಮಂಡಲದ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು.
ಭೂಮಿಗೆ ವಾಪಸ್ ಆದ ತಕ್ಷಣ ಗಗನಯಾನಿಗಳಿಗೆ ನಡೆದಾಡಲು ಆಗುವುದಿಲ್ಲ. ಕೆಲವು ಕಾಲ ನಿಂತುಕೊಳ್ಳಲೂ ಸಮಸ್ಯೆ ಆಗಲಿದೆ. ಅಧಿಕ ರೇಡಿಯೇಷನ್ ಕಾರಣ ಕ್ಯಾನ್ಸರ್ ಭೀತಿ, ಡಿಎನ್‌ಎಗೆ ಹಾನಿಯಯಾಗುವ ಸಾಧ್ಯತೆಯಿದೆ. ಒಂಟಿತನ, ಮಾನಸಿಕ ಒತ್ತಡ, ನಿದ್ರಾಹೀನತೆ, ದೃಷ್ಟಿ ಕೇಂದ್ರೀಕರಿಸಲು ಸಮಸ್ಯೆ ಅನುಭವಿಸುತ್ತಾರೆ. ಈ ಎಲ್ಲವುಗಳಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ.
ವಿಲಿಯಮ್ಸ್ ಮತ್ತು ವಿಲ್ಮೋರ್ ತಮ್ಮ ಕಾರ್ಯಾಚರಣೆಯ ಸಮಯದಲ್ಲಿ 121,347,491 ಮೈಲುಗಳಷ್ಟು ಪ್ರಯಾಣಿಸಿದ್ದಾರೆ. ಬಾಹ್ಯಾಕಾಶದಲ್ಲಿ 286 ದಿನಗಳನ್ನು ಕಳೆದ ಇರವು ಭೂಮಿಯ ಸುತ್ತ 4,576 ಕಕ್ಷೆಗಳನ್ನು ಪೂರ್ಣಗೊಳಿಸಿದರು ಎಂದು ನಾಸಾ ಹೇಳಿದೆ. ವಿಲಿಯಮ್ಸ್ ತನ್ನ ಮೂರು ಹಾರಾಟಗಳಲ್ಲಿ 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ ಮತ್ತು ವಿಲ್ಮೋರ್ ತನ್ನ ಮೂರು ಹಾರಾಟಗಳಲ್ಲಿ 464 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.
ಫ್ಲೋರಿಡಾ: ಭಾರತೀಯ ಮೂಲದ ಅಮೆರಿಕದ ಖ್ಯಾತ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು 286 ದಿನಗಳ ಬಳಿಕ ಇಂದು ಭೂಮಿಗೆ ಯಶಸ್ವಿಯಾಗಿ ಮರಳಿದ್ದಾರೆ. ಬಾಹ್ಯಾಕಾಶ ಕೇಂದ್ರದಲ್ಲಿ (ISS)ಸಿಲುಕಿದ್ದ ಸುನಿತಾ ವಿಲಿಯಮ್ಸ್ (Sunita Williams) ಮತ್ತು ನಾಸಾದ (NASA) ಬಾಹ್ಯಾಕಾಶ ಯಾನಿ ಬುಚ್ ವಿಲ್ಮೋರ್ ಅವರಿದ್ದ ಸ್ಪೇಸ್ ಎಕ್ಸ್ ಡ್ರ್ಯಾಗನ್ ನೌಕೆ ಬುಧವಾರ ಬೆಳಗ್ಗೆ ಅಮೇರಿಕಾದ ಫ್ಲೋರಿಡಾದ ಕರಾವಳಿಯ ಸಮುದ್ರದಲ್ಲಿ ಟಚ್‌ಡೌನ್ ಆಗಿದೆ.
ಸುನಿತಾ, ಬುಚ್ ಜೊತೆಗೆ ರಷ್ಯಾದ ಅಲೆಕ್ಸಾಂಡರ್ ಗೋರ್ಬುನೋವ್ ಮತ್ತು ಅಮೆರಿಕದ ನಿಕ್ ಹೇಗ್ ಅವರನ್ನು ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಕಂಪನಿಯ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ ಭೂಮಿಗೆ ಕರೆತಂದಿದೆ. ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸಿದ ನೌಕೆ ನಿಗದಿಯಂತೆ ಅಮೆರಿಕದ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ 5:57ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ) ಭೂಮಿಯನ್ನು ತಲುಪಿದೆ.
🚨 The @NASA astronauts stranded in space for more than nine months have splashed down in the Gulf of America.
ಟಚ್‌ಡೌನ್ ಪ್ರಕ್ರಿಯೆ ಹೇಗಾಯ್ತು?
ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ ಫ್ಲೋರಿಡಾದ ಸಮುದ್ರದ ಮೇಲೆ ಟಚ್‌ಡೌನ್ ಆಗಿದೆ. ಆಕಾಶದಿಂದ ವೇಗವಾಗಿ ಬರುವ ಕ್ಯಾಪ್ಸೂಲ್ ನಿಧಾನವಾಗಿ ಲ್ಯಾಂಡ್ ಆಯ್ತು. ಭೂಮಿ ಪ್ರವೇಶದ ಬಳಿಕ ಕ್ಯಾಪ್ಸೂಲ್‌ನಲ್ಲಿರುವ 4 ಪ್ಯಾರಾಚೂಟ್‌ಗಳು ತೆರೆದುಕೊಂಡಿತ್ತು. ಈ ಪ್ಯಾರಾಚೂಟ್‌ಗಳು ಕ್ಯಾಪ್ಸೂಲ್ ವೇಗವನ್ನು ತಗ್ಗಿಸಿತ್ತು. ವೇಗ ತಗ್ಗಿದಂತೆ ಕ್ಯಾಪ್ಸೂಲ್ ನಿಧನವಾಗಿ ಸಮುದ್ರದಲ್ಲಿ ಟಚ್‌ಡೌನ್ ಆಯ್ತು.
ನಂತರ ವಿಶೇಷ ದೋಣಿಯಲ್ಲಿ ಸ್ಪೇಸ್ ಎಕ್ಸ್ ಸಿಬ್ಬಂದಿ ನೌಕೆಯನ್ನು ರೋಪ್ ಬಳಸಿ ಹತ್ತಿರದಲ್ಲೇ ಇದ್ದ ದೊಡ್ಡ ಬೋಟ್ ಬಳಿ ತಂದರು. ಈ ನೌಕೆಯನ್ನು ಕ್ರೇನ್ ಬಳಸಿ ಬೋಟ್ ಒಳಗಡೆ ಇಡಲಾಯಿತು. ಬೋಟ್ ಒಳಗಡೆ ಇಟ್ಟ ನಂತರ ಕ್ಯಾಪ್ಸೂಲ್ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಿದ ಬಳಿಕ ಕೆಳಗಡೆ ಇರುವ ಬಾಗಿಲು(ಹ್ಯಾಚ್) ತೆರೆಯಲಾಯಿತು. ಈ ಬಾಗಿಲಿನ ಮೂಲಕ ಯಾನಿಗಳನ್ನು ಸ್ಪೇಸ್ ಎಕ್ಸ್ ಸಿಬ್ಬಂದಿ ಹೊರಗೆ ನಿಧಾನವಾಗಿ ಎಳೆದು ವಿಶೇಷವಾಗಿ ವಿನ್ಯಾಸ ಪಡಿಸಲಾಗಿರುವ ವೀಲ್ ಚೇರ್‌ನಲ್ಲಿ ಕುಳ್ಳಿರಿಸಿದರು.
9 ತಿಂಗಳು ತಡವಾಗಿದ್ದು ಯಾಕೆ?
2024ರ ಜೂನ್ 6ರಂದು ಸುನಿತಾ ಮತ್ತು ವಿಲ್ಮೋರ್ ಎಂಟು ದಿನಗಳ ಕಾರ್ಯಾಚರಣೆಗಾಗಿ ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಬಾಹ್ಯಾಕಾಶ ನೌಕೆಯ ಸಮಸ್ಯೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಹಿಂದಿರುಗಲು ಸಾಧ್ಯವಾಗಿರಲಿಲ್ಲ. ಈ ಮುಂಚೆ 2025ರ ಫೆಬ್ರವರಿ ತಿಂಗಳಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ತಿಳಿಸಿತ್ತು. ಆದರೆ ಇದೀಗ ಮಾರ್ಚ್‌ಗೆ ಮುಂದೂಡಿಕೆ ಆಗಿತ್ತು.
ಸುನಿತಾ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ಯಾಕೆ?
ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ರೂಪಿಸಿದ್ದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣದ ಭಾಗವಾಗಿ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಸುನಿತಾ ಮತ್ತು ಬುಚ್ ಇಬ್ಬರೂ ಗಗನಯಾತ್ರಿಗಳು ಜೂ.5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಎಂಟು ದಿನಗಳ ಕಾಲ ಅಲ್ಲಿದ್ದು ಜೂ.14 ರಂದು ಸ್ಟಾರ್‌ಲೈನರ್ ಮೂಲಕವೇ ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅವರು ಬಾಹ್ಯಾಕಾಶದಲ್ಲೇ ಉಳಿಯುವಂತಾಗಿತ್ತು.
ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ನೆಲೆಯಿಂದ ಮಾರ್ಚ್ 15 ರಂದು ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ (Crew Dragon Capsule) ಹೊತ್ತುಕೊಂಡು ಫಾಲ್ಕನ್-9 ರಾಕೆಟ್ ಹಾರಿತ್ತು. ಉಡ್ಡಯನಗೊಂಡ 29 ಗಂಟೆಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಕ್ರ್ಯೂ ಡ್ರ್ಯಾಗನ್ ತಲುಪಿತ್ತು.
ಕೇಪ್ ಕೆನವೆರಲ್: ಕಳೆದ 9 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ISS)ಸಿಲುಕಿದ್ದ ಭಾರತ ಮೂಲದ ಬಾಹ್ಯಾಕಾಶ ಯಾನಿ ಸುನಿತಾ ವಿಲಿಯಮ್ಸ್ (Sunita Williams) ಮತ್ತು ನಾಸಾದ (NASA) ಬಾಹ್ಯಾಕಾಶ ಯಾನಿ ಬುಚ್ ವಿಲ್ಮೋರ್ ಭೂಮಿ ಪ್ರವೇಶಕ್ಕೆ ಕೌಂಟ್‌ಡೌನ್ ಆರಂಭವಾಗಿದೆ.
ಸುನಿತಾ, ಬುಚ್ ಜೊತೆಗೆ ರಷ್ಯಾದ ಅಲೆಕ್ಸಾಂಡರ್ ಗೋರ್ಬುನೋವ್ ಮತ್ತು ಅಮೆರಿಕದ ನಿಕ್ ಹೇಗ್ ಅವರನ್ನು ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಕಂಪನಿಯ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ ಭೂಮಿಗೆ ಕರೆತರಲಿದೆ. ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನೌಕೆ ನಿರ್ಗಮಿಸಿದೆ. ಎಲ್ಲವೂ ನಿಗದಿಯಂತೆ ನಡೆದರೆ ಅಮೆರಿಕದ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ 5:57ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ) ಭೂಮಿಗೆ ತಲುಪಲಿದ್ದಾರೆ.
ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ನೆಲೆಯಿಂದ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ (Crew Dragon Capsule) ಹೊತ್ತುಕೊಂಡು ಫಾಲ್ಕನ್-9 ರಾಕೆಟ್ ಹಾರಿತ್ತು. ಉಡ್ಡಯನಗೊಂಡ 29 ಗಂಟೆಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಕ್ರ್ಯೂ ಡ್ರ್ಯಾಗನ್ ತಲುಪಿತ್ತು.
They’re on their way! #Crew9 undocked from the @Space_Station at 1:05am ET (0505 UTC). Reentry and splashdown coverage begins on X, YouTube, and NASA+ at 4:45pm ET (2145 UTC) this evening. pic.twitter.com/W3jcoEdjDG
ಎಲ್ಲಿ ಇಳಿಯಲಿದ್ದಾರೆ?
ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ ಫ್ಲೋರಿಡಾದ ಸಮುದ್ರದ ಮೇಲೆ ಇಳಿಯಲಿದೆ. ಆಕಾಶದಿಂದ ವೇಗವಾಗಿ ಬರುವ ಕ್ಯಾಪ್ಸೂಲ್ ನಿಧಾನವಾಗಿ ಲ್ಯಾಂಡ್ ಆಗುತ್ತದೆ. ಭೂಮಿ ಪ್ರವೇಶದ ಬಳಿಕ ಕ್ಯಾಪ್ಸೂಲ್‌ನಲ್ಲಿರುವ ಪ್ಯಾರಾಚೂಟ್‌ಗಳು ತೆರೆದುಕೊಳ್ಳುತ್ತದೆ. ಈ ಪ್ಯಾರಾಚೂಟ್‌ಗಳು ಕ್ಯಾಪ್ಸೂಲ್ ವೇಗವನ್ನು ತಗ್ಗಿಸುತ್ತವೆ. ವೇಗ ತಗ್ಗಿದಂತೆ ಕ್ಯಾಪ್ಸೂಲ್ ನಿಧನವಾಗಿ ಸಮುದ್ರದಲ್ಲಿ ಲ್ಯಾಂಡ್ ಆಗಿ ತೇಲುತ್ತಿರುತ್ತದೆ.
ಲ್ಯಾಂಡ್ ಆದ ನಂತರ ವಿಶೇಷ ದೋಣಿಯಲ್ಲಿ ಸ್ಪೇಸ್ ಎಕ್ಸ್ ಸಿಬ್ಬಂದಿ ಕ್ಯಾಪ್ಸೂಲ್ ಬಳಿ ಬರುತ್ತಾರೆ. ಈ ಕ್ಯಾಪ್ಸೂಲ್ ಅನ್ನು ರೋಪ್ ಬಳಸಿ ದಡದ ಹತ್ತಿರ ತರುತ್ತಾರೆ. ನಂತರ ಕ್ರೇನ್ ಬಳಸಿ ಕ್ಯಾಪ್ಸೂಲ್ ಅನ್ನು ದೊಡ್ಡ ಬೋಟ್ ಒಳಗಡೆ ಇಡಲಾಗುತ್ತದೆ. ಬೋಟ್ ಒಳಗಡೆ ಇಟ್ಟ ನಂತರ ಕ್ಯಾಪ್ಸೂಲ್ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಿದ ಬಳಿಕ ಕೆಳಗಡೆ ಇರುವ ಬಾಗಿಲನ್ನು ತೆರೆಯಲಾಗುತ್ತದೆ. ಈ ಬಾಗಿಲಿನ ಮೂಲಕ ಯಾನಿಗಳನ್ನು ಸ್ಪೇಸ್ ಎಕ್ಸ್ ಸಿಬ್ಬಂದಿ ಹೊರಗೆ ನಿಧಾನವಾಗಿ ಎಳೆದು ವಿಶೇಷವಾಗಿ ವಿನ್ಯಾಸ ಪಡಿಸಲಾಗಿರುವ ವೀಲ್ ಚೇರ್‌ನಲ್ಲಿ ಕುಳ್ಳಿರಿಸುತ್ತಾರೆ.
ಮುಂದೇನು?
ಹೊರ ಬಂದ ಯಾನಿಗಳನ್ನು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ.
ಒಂಬತ್ತು ತಿಂಗಳುಗಳ ಕಾಲ ಶೂನ್ಯ ಗುರುತ್ವಾಕರ್ಷಣೆಯಲ್ಲಿ ವಾಸಿಸುವುದರಿಂದ ಅವರ ಕಾಲುಗಳಲ್ಲಿ ಸ್ನಾಯು ಕ್ಷೀಣತೆ ಉಂಟಾಗಿರುತ್ತದೆ. ಭೂಮಿಯ ಗುರುತ್ವಾಕರ್ಷಣೆಯಲ್ಲಿ ನಡೆಯಲು ಕಷ್ಟವಾಗುತ್ತದೆ. ಪೂರ್ಣ ಶಕ್ತಿಯನ್ನು ಮರಳಿ ಪಡೆಯಲು ವಾರಗಳು ಅಥವಾ ತಿಂಗಳು ಬೇಕಾಗುತ್ತದೆ.
9 ತಿಂಗಳು ತಡವಾಗಿದ್ದು ಯಾಕೆ?
2024ರ ಜೂನ್ 6ರಂದು ಸುನಿತಾ ಮತ್ತು ವಿಲ್ಮೋರ್ ಎಂಟು ದಿನಗಳ ಕಾರ್ಯಾಚರಣೆಗಾಗಿ ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಬಾಹ್ಯಾಕಾಶ ನೌಕೆಯ ಸಮಸ್ಯೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಹಿಂದಿರುಗಲು ಸಾಧ್ಯವಾಗಿರಲಿಲ್ಲ. ಈ ಮುಂಚೆ 2025ರ ಫೆಬ್ರವರಿ ತಿಂಗಳಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ತಿಳಿಸಿತ್ತು. ಆದರೆ ಇದೀಗ ಮಾರ್ಚ್‌ಗೆ ಮುಂದೂಡಿಕೆ ಆಗಿತ್ತು.
ಸುನಿತಾ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ಯಾಕೆ?
ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ರೂಪಿಸಿದ್ದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣದ ಭಾಗವಾಗಿ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಸುನಿತಾ ಮತ್ತು ಬುಚ್ ಇಬ್ಬರೂ ಗಗನಯಾತ್ರಿಗಳು ಜೂ.5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಎಂಟು ದಿನಗಳ ಕಾಲ ಅಲ್ಲಿದ್ದು ಜೂ.14 ರಂದು ಸ್ಟಾರ್‌ಲೈನರ್ ಮೂಲಕವೇ ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅವರು ಬಾಹ್ಯಾಕಾಶದಲ್ಲೇ ಉಳಿಯುವಂತಾಗಿತ್ತು.
ವಾಷಿಂಗ್ಟನ್: ಸ್ಯಾಂಡಲ್‌ವುಡ್‌ನ (Sandalwood) ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ (Shiva Rajkumar) ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸಿಟ್ಯೂಟ್‌ನಲ್ಲಿ (Miami Cancer Institute) ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸುಮಾರು 6 ಗಂಟೆಗಳ ಕಾಲ ತಜ್ಞ ವೈದ್ಯರು ಶಿವಣ್ಣನಿಗೆ ಆಪರೇಷನ್ ಮಾಡಿದ್ದಾರೆ.
ಭಾರತೀಯ ಮೂಲದ ತಜ್ಞ ವೈದ್ಯ ಡಾ. ಮುರುಗೇಶ್ ನೇತೃತ್ವದಲ್ಲಿ ಮಿಯಾಮಿ ಆಸ್ಪತ್ರೆಯಲ್ಲಿ ಶಿವಣ್ಣನಿಗೆ ಆಪರೇಷನ್ ಮಾಡಲಾಗಿದೆ. ಭಾರತೀಯ ಕಾಲಮಾನ ಮಂಗಳವಾರ ರಾತ್ರಿ 11:30ರ ಸುಮಾರಿಗೆ ಶಸ್ತ್ರಚಿಕಿತ್ಸೆ ಮುಗಿದಿದೆ. ಅಮೆರಿಕದ ಕಾಲಮಾನ ಬೆಳಗ್ಗೆ 8 ಗಂಟೆಗೆ ಅಂದರೆ ಭಾರತೀಯ ಕಾಲಮಾನದ ಪ್ರಕಾರ 6 ಗಂಟೆಗೆ ಆಪರೇಷನ್ ಥಿಯೇಟರ್‌ಗೆ ಶಿವಣ್ಣರನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸುಮಾರು 6 ಗಂಟೆಗಳ ಕಾಲ ಸರ್ಜರಿ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಶಿವಣ್ಣನೊಂದಿಗೆ ಪತ್ನಿ ಗೀತಾ, ಪುತ್ರಿ ನಿವೇದಿತಾ, ಬಾಮೈದ ಮಧು ಬಂಗಾರಪ್ಪ ಜೊತೆಗಿದ್ದಾರೆ. ಇದನ್ನೂ ಓದಿ: ಪೂಂಚ್‌ನಲ್ಲಿ 300 ಅಡಿ ಆಳದ ಕಂದಕಕ್ಕೆ ಬಿತ್ತು ಸೇನಾ ವಾಹನ – ಚಿಕ್ಕೋಡಿ ಯೋಧ ಹುತಾತ್ಮ
ಇನ್ನು ಕ್ಯಾನ್ಸರ್ ಚಿಕಿತ್ಸೆಗೊಳಾಗಿರುವ ಶಿವಣ್ಣನಿಗೆ ಆಸ್ಪತ್ರೆಯಲ್ಲೇ ಇನ್ನೊಂದು ವಾರ ಚಿಕಿತ್ಸೆ ಮುಂದುವರೆಯಲಿದೆ. ನುರಿತ ವೈದ್ಯರ ನಿಗಾದಲ್ಲಿ ಶಿವಣ್ಣ ಇರಲಿದ್ದಾರೆ. ಬಳಿಕ ಮನೆಗೆ ಶಿಫ್ಟ್ ಆಗಲಿದ್ದಾರೆ. ಇನ್ನೊಂದು ತಿಂಗಳು ಅಮೆರಿಕದಲ್ಲೇ ಇರುವ ಶಿವರಾಜ್‌ಕುಮಾರ್ ಜನವರಿ 26ರಂದು ಭಾರತಕ್ಕೆ ಮರಳಲಿದ್ದಾರೆ. ಇದನ್ನೂ ಓದಿ: ಫೋನ್ ಮಾಡಿ ಶಿವಣ್ಣ ಆರೋಗ್ಯ ವಿಚಾರಿಸಿದ ಸಿಎಂ
ವಾಷಿಂಗ್ಟನ್: ರಸ್ತೆ ದಾಟುತ್ತಿದ್ದ ಸಂದರ್ಭ ಕಾರು ಡಿಕ್ಕಿ ಹೊಡೆದ ಪರಿಣಾಮ ತೆಲಂಗಾಣ (Telangana) ಮೂಲದ ಯುವತಿ ಅಮೆರಿಕದ (America) ಫ್ಲೋರಿಡಾದಲ್ಲಿ ಸಾವನ್ನಪ್ಪಿದ್ದಾರೆ.
ಭಾನುವಾರ ರಾತ್ರಿ ಘಟನೆ ನಡೆದಿದ್ದು, ಯಾದಾದ್ರಿ ಭೋಂಗಿರ್ ಜಿಲ್ಲೆಯ ಯಾದಗರಿಪಲ್ಲಿ ಮೂಲದ ಸೌಮ್ಯಾ (25) ಅಪಘಾತದಲ್ಲಿ (Accident) ಮೃತಪಟ್ಟಿದ್ದಾರೆ. ಸೌಮ್ಯಾ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಫ್ಲೋರಿಡಾ (Florida) ಅಟ್ಲಾಂಟಿಕ್ ವಿಶ್ವವಿದ್ಯಾನಿಲಯದಿಂದ ಪದವಿ ಪೂರ್ಣಗೊಳಿಸಿದ್ದ ಸೌಮ್ಯ ಅಲ್ಲೇ ಉದ್ಯೋಗ ಹುಡುಕುತ್ತಿದ್ದರು. ಇದನ್ನೂ ಓದಿ: ಶಾಂತವಾಗುತ್ತಿದೆ ರೆಮಾಲ್ ಚಂಡಮಾರುತ – ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆ
ಭಾನುವಾರ ರಾತ್ರಿ ರಸ್ತೆ ದಾಟುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದು ಸೌಮ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೌಮ್ಯಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. ಆಕೆಯ ಮೃತದೇಹವನ್ನು ಭಾರತಕ್ಕೆ ತರುವಂತೆ ಆಕೆಯ ಪೋಷಕರಾದ ಕೋಟೇಶ್ವರ ರಾವ್ ಮತ್ತು ಬಾಲಾಮಣಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – 7 ಅಧಿಕಾರಿಗಳು ಅಮಾನತು
ವಾಷಿಂಗ್ಟನ್: ಬಾಲಿವುಡ್‌ನ ಪಿಕೆ ಸಿನಿಮಾ ನೋಡಿದವರಿಗೆ ಈ ಒಂದು ಘಟನೆ ಥೇಟ್ ಅದರಂತೆಯೇ ಎನಿಸುತ್ತದೆ. ಅಮೆರಿಕದಲ್ಲಿ (America) ವ್ಯಕ್ತಿಯೊಬ್ಬ ಬೀದಿಯಲ್ಲಿ ಬೆತ್ತಲಾಗಿ (Naked) ಸಂಚರಿಸಿದ್ದಕ್ಕೆ ಆತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆತ ಅನ್ಯಗ್ರಹದಿಂದ (Alien) ಬಂದಿರುವುದಾಗಿ ತಿಳಿಸಿದ್ದಾನೆ.
ಫ್ಲೋರಿಡಾದ (Florida) ಪಾಮ್ ಬೀಚ್‌ನಲ್ಲಿ (Palm Beach) 44 ವರ್ಷದ ವ್ಯಕ್ತಿಯೊಬ್ಬ ಬೆತ್ತಲಾಗಿ ನಡೆದುಕೊಂಡು ಹೋಗುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಳಿಕ ಆತ ತಾನು ಬೇರೊಂದು ಗ್ರಹದಿಂದ ಬಂದಿದ್ದೇನೆ ಎಂದಿದ್ದಾನೆ. ಇದನ್ನೂ ಓದಿ: ನರ್ಸ್ ವೇಷ ಧರಿಸಿ ಜಿಲ್ಲಾಸ್ಪತ್ರೆಯಿಂದ ನವಜಾತ ಶಿಶು ಕಳ್ಳತನ
ಪೊಲೀಸರು ಬಂಧಿಸಿದಾಗ ಆತ ನಾನು ಬಟ್ಟೆಗಳನ್ನು ಎಲ್ಲಿ ಇಟ್ಟಿದ್ದೇನೋ ಗೊತ್ತಿಲ್ಲ ಎಂದಿದ್ದಾನೆ. ಆತ ತನ್ನ ಹೆಸರು ಅಥವಾ ಯಾವುದೇ ಗುರುತುಗಳನ್ನು ನೀಡಲು ನಿರಾಕರಿಸಿದ್ದಾನೆ. ಇದಾದ ಬಳಿಕ ಪೊಲೀಸರು ಆತನ ಬಗ್ಗೆ ಪತ್ತೆ ಹಚ್ಚಿ, ಹೆಸರನ್ನು ಜೇಸನ್ ಸ್ಮಿತ್ ಎಂದು ಗುರುತಿಸಿದ್ದಾರೆ.
ವ್ಯಕ್ತಿ ನಾನು ಭೂಮಿಯವನೇ ಅಲ್ಲ, ಅನ್ಯಗ್ರಹದಿಂದ ಬಂದಿದ್ದೇನೆ. ಕೆಲ ದಿನಗಳಿಂದ ಪಾಮ್ ಬೀಚ್‌ನಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಇದೀಗ ಪೊಲೀಸರು ಅಸಭ್ಯವಾಗಿ ವರ್ತಿಸಿರುವುದಕ್ಕೆ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಾಸಕ ಎನ್ ಮಹೇಶ್‌ಗೆ ಎದೆನೋವು – ಆಸ್ಪತ್ರೆಗೆ ದಾಖಲು
ಫ್ಲೋರಿಡಾ: ಶಾಲೆಗೆ ತಂದಿದ್ದ ವೀಡಿಯೋಗೇಮ್‍ನ್ನು ಕಸಿದುಕೊಂಡಿದ್ದಕ್ಕಾಗಿ 17 ವರ್ಷದ ಹುಡುಗನೊಬ್ಬ ಶಾಲೆಯ ಶಿಕ್ಷಕರೊಬ್ಬರ ಸಹಾಯಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಫ್ಲೋರಿಡಾದ ಮತಾನ್ಜಾಸ್‍ನಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿ ಹಲ್ಲೆ ನಡೆಸುತ್ತಿರುವ ವೀಡಿಯೋವನ್ನು ಫ್ಲಾಗರ್ ಕೌಂಟಿ ಶೆರಿಫ್ ಕಛೇರಿಯು ಬಿಡುಗಡೆ ಮಾಡಿದೆ. ಅದರಲ್ಲಿ ವಿದ್ಯಾರ್ಥಿಯು ಸಹಾಯಕಿಯನ್ನು ನೆಲಕ್ಕೆ ತಳ್ಳಿ ಒದೆಯುವುದು ಮತ್ತು ಗುದ್ದುತ್ತಿರುವುದು ಸೆರೆಯಾಗಿದೆ. ಇದನ್ನೂ ಓದಿ: ನಿಲ್ಲಿಸಿದ್ದ ಬಸ್‍ಗಳಿಗೆ ಟ್ರಕ್ ಡಿಕ್ಕಿ- 8 ಮಂದಿ ಸಾವು, 50 ಮಂದಿಗೆ ಗಾಯ
ಶಿಕ್ಷಕ ಹಾಗೂ ಜನರು ಆತನನ್ನು ತಡೆಯುವ ತನಕ ನಿರಂತರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾಗಿದ್ದ ಸಹಾಯಕಿ ಸುಧಾರಿಸಿಕೊಳ್ಳಲು ಹಲವು ನಿಮಿಷಗಳನ್ನು ತೆಗೆದುಕೊಂಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ವಾಷಿಂಗ್ಟನ್: ಫ್ಲೋರಿಡಾದ (Florida) ನೈಋತ್ಯ ಭಾಗಕ್ಕೆ ಬುಧವಾರ ಭೀಕರ ಇಯಾನ್ ಚಂಡಮಾರುತ (Ian Hurricane) ಅಪ್ಪಳಿಸಿದ್ದು, ದೊಡ್ಡ ಅನಾಹುತವೇ ಸೃಷ್ಟಿಯಾಗಿದೆ. ಚಂಡಮಾರುತದ (Hurricane) ಪರಿಣಾಮ ಫ್ಲೋರಿಡಾದ ಬಹುತೇಕ ಭಾಗ ಕತ್ತಲೆಯಲ್ಲಿ ಮುಳುಗಿದೆ.
ನೂರಾರು ಮನೆಗಳು ಸೇರಿದಂತೆ ಹಲವರು ಈ ಚಂಡಮಾರುತಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಸಮುದ್ರಕ್ಕೆ ತೆರಳಿದ್ದ ದೋಣಿಯೊಂದು ಮುಳುಗಡೆಯಾಗಿದ್ದು, 20 ಜನರು ನಾಪತ್ತೆಯಾಗಿದ್ದಾರೆ. ಫ್ಲೋರಿಡಾದ ಕೀಸ್ ದ್ವೀಪದಲ್ಲಿ ನಾಲ್ವರು ಕ್ಯೂಬನ್ನರು ಈಜಿಕೊಂಡು ಬರುತ್ತಿದ್ದುದನ್ನು ಕಂಡು ಅವರಲ್ಲಿ ಮೂವರನ್ನು ಕರಾವಳಿಯ ಪಡೆ ರಕ್ಷಿಸಿದೆ ಎಂದು ವರದಿಯಾಗಿದೆ.
80,000 ಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಫೋರ್ಟ್ ಮೈಯರ್ಸ್ ಪ್ರದೇಶದಲ್ಲಿ ಮಳೆ, ಗಾಳಿಗೆ ಪ್ರವಾಹದ ಸ್ಥಿತಿ ಉಂಟಾಗಿ ಪ್ರದೇಶ ಸರೋವರದಂತೆ ಗೋಚರವಾಗುತ್ತಿದೆ. ರಾಜ್ಯದ ನೈಋತ್ಯ ಭಾಗದಲ್ಲಿ ಹೆಚ್ಚಿನ ಹಾನಿಗಳು ಸಂಭವಿಸಿದ್ದು, ಅಲ್ಲಿನ 1 ಕೋಟಿ ಜನಸಂಖ್ಯೆಯಲ್ಲಿ ಸುಮಾರು 20 ಲಕ್ಷ ಜನರು ನಿನ್ನೆ ಸಂಜೆಯಿಂದ ವಿದ್ಯುತ್ ಇಲ್ಲದೇ ದಿನ ದೂಡುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮನೆ ಬಾಗಿಲಿಗೆ ಪಡಿತರ – ಮಮತಾ ಬ್ಯಾನರ್ಜಿಯ ನೂತನ ಯೋಜನೆ ಕಾನೂನುಬಾಹಿರ ಎಂದ ಹೈಕೋರ್ಟ್
ಇಯಾನ್ ಚಂಡಮಾರುತ ಪ್ರಾರಂಭವಾದಾಗಲೇ ಗಂಟೆಗೆ 240 ಕಿ.ಮೀ ವೇಗದಲ್ಲಿ ಗಾಳಿ ಬೀಸಲಾರಂಭಿಸಿದೆ. ಫ್ಲೋರಿಡಾ ಈ ಹಿಂದೆ ಹಲವು ವರ್ಷಗಳಿಂದ ಕಾಣದೇ ಇದ್ದ ಚಂಡಮಾರುತವನ್ನು ಈಗ ಅನುಭವಿಸುತ್ತಿದೆ. ಇದು ಇನ್ನೂ 2 ದಿನಗಳವರೆಗೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ: 8 ಗಂಟೆ ಅಂತರದಲ್ಲಿ 2 ಬಸ್‌ಗಳಲ್ಲಿ ಸ್ಫೋಟ
Live Tv
[brid partner=56869869 player=32851 video=960834 autoplay=true]