Tag: ಫ್ಲೈಟ್

  • ಫ್ಲೈಟ್‌ನಲ್ಲಿ ನಾಯಿಯನ್ನು ಬಿಡದ ಪೈಲೆಟ್ – ಕ್ಯಾನ್ಸಲ್ ಆಯ್ತು 12 ದಿನದ ಟ್ರಿಪ್

    ಫ್ಲೈಟ್‌ನಲ್ಲಿ ನಾಯಿಯನ್ನು ಬಿಡದ ಪೈಲೆಟ್ – ಕ್ಯಾನ್ಸಲ್ ಆಯ್ತು 12 ದಿನದ ಟ್ರಿಪ್

    ಬೆಂಗಳೂರು: ಫ್ಲೈಟ್‌ನಲ್ಲಿ (Flight) ಪ್ರೀತಿಯ ಶ್ವಾನವನ್ನು (Dog) ಪೈಲೆಟ್ ಬಿಡದಿದ್ದಕ್ಕೆ ಬೆಂಗಳೂರಿನ (Bengaluru) ವ್ಯಕ್ತಿಯೊಬ್ಬ 4 ಲಕ್ಷ ರೂ. ಟ್ರಿಪ್‌ನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾನೆ.

    ಬೆಂಗಳೂರಿನ ವರ್ತೂರಿನ ನಿವಾಸಿ ಸಚಿನ್ ಶೆಣೈ ಟ್ರಿಪ್‌ ಕ್ಯಾನ್ಸಲ್‌ ಮಾಡಿಕೊಂಡ ವ್ಯಕ್ತಿ. ಬೆಂಗಳೂರಿನಲ್ಲಿ ಐಟಿ ಕಂಪನಿಯ HR ಆಗಿ ಕೆಲಸ ಮಾಡುತ್ತಿದ್ದ ಸಚಿನ್ ನಾಯಿಯೊಂದನ್ನು ಪ್ರೀತಿಯಿಂದ ಸಾಕಿಕೊಂಡಿದ್ದ. ಆತನ ಕುಟುಂಬಸ್ಥರು ಇಯರ್ ಎಂಡ್ ಟ್ರಿಪ್‌ಗಾಗಿ 12 ದಿನದ ಪ್ಲ್ಯಾನ್ ಮಾಡಿಕೊಂಡಿದ್ದರು. ಈ ವೇಳೆ ಸಚಿನ್‌ ತನ್ನ ಸಾಕು ನಾಯಿಯನ್ನು ಜೊತೆಗೆ ಕರೆದೊಯ್ಯುವ ಪ್ಲ್ಯಾನ್‌ ಮಾಡಿಕೊಂಡಿದ್ದ. ಹೀಗೆ ಪ್ಲ್ಯಾನ್‌ ಮಾಡಿದ್ದ ಸಚಿನ್‌ ಕುಟುಂಬ 4 ಲಕ್ಷ ಖರ್ಚು ಮಾಡಿ ಬೆಂಗಳೂರು ಟು ಅಮೃತಸರಕ್ಕೆ ಹೋಗಬೇಕೆಂದುಕೊಂಡಿದ್ದರು. ಇದಕ್ಕಾಗಿ ಅಮೃತಸರದಲ್ಲಿ ಹೋಟೆಲ್, ಕ್ಯಾಬ್ ಬುಕ್ ಮಾಡಿಕೊಂಡಿದ್ದರು.

    ಮೂರು ತಿಂಗಳ ಹಿಂದೆ ಫ್ಲೈಟ್ ಬುಕ್ ಆಗಿತ್ತು. ಜೊತೆಗೆ ನಾಯಿಗಾಗಿ ಬೋರ್ಡಿಂಗ್ ಪಾಸ್ ಪಿಟ್ ಟು ಫ್ಲೈ ಸರ್ಟಿಫಿಕೇಟ್ ಕೂಡ ತೆಗೆದುಕೊಂಡಿದ್ದರು. ಆದರೆ ಇನ್ನೇನೂ ಪ್ಲೈಟ್ ಹತ್ತಬೇಕು ಅನ್ನುವಷ್ಟರಲ್ಲಿ ನಾಯಿಯ ಗೂಡು ಸರಿಯಾಗಿಲ್ಲ ಎನ್ನುವ ಕಾರಣಕ್ಕೆ ಪೈಲೆಟ್ ನಿರಾಕರಿಸಿದ್ದಾರೆ. ಅದೆಷ್ಟು ಮನವೊಲಿಸಿದರೂ ಪೈಲೆಟ್ ನಾಯಿಯನ್ನು ಹತ್ತಿಸಿಕೊಳ್ಳಲು ತಯಾರಿರಲಿಲ್ಲ. ನಾಯಿಯನ್ನು ಬಿಟ್ಟು ಬಂದರೆ ಮಾತ್ರ ನೀವು ದೆಹಲಿಗೆ ಹೋಗಬಹುದು ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಚಿನ್ ಎಲ್ಲ ರೂಲ್ಸ್ ಪಾಲನೆ ಮಾಡಿ, ಹಣ ಕಟ್ಟಿದ ಮೇಲೆ ಪೈಲೆಟ್ ಕಿರಿಕಿರಿ ಮಾಡಿದ ಬಗ್ಗೆ ಅಸಮಾಧಾನ ತೋರಿಸಿದ್ದಾನೆ. ಅಷ್ಟೇ ಅಲ್ಲದೇ ಇಡೀ ಟ್ರಿಪ್ ಕ್ಯಾನ್ಸಲ್‌ ಮಾಡಿಕೊಂಡು ಏರ್‌ಪೋರ್ಟ್‌ನಿಂದ ಸಚಿನ್ ಕುಟುಂಬ ವಾಪಸಾಗಿದೆ. ಇದನ್ನೂ ಓದಿ: MES ಪುಂಡರನ್ನು ಹದ್ದುಬಸ್ತಿನಲ್ಲಿ ಇಡುವುದು ನಮಗೆ ಗೊತ್ತಿದೆ : ಬೊಮ್ಮಾಯಿ

    ಇನ್ನೂ ಘಟನೆಗೆ ಸಂಬಂಧಿಸಿ ಸಚಿನ್‌ ವೀಡಿಯೋವೊಂದನ್ನು ಮಾಡಿದ್ದು, ಏರ್‌ಪೋರ್ಟ್‌ನಲ್ಲಿ ನಡೆದ ಘಟನೆ ಬಗ್ಗೆ ಶೇರ್‌ ಮಾಡಿಕೊಂಡು, ಇದ್ಯಾವ ರೀತಿಯ ನ್ಯಾಯ ಅಂತಾ ಸಚಿನ್ ಪ್ರಶ್ನಿಸಿದ್ದಾನೆ. ಅಷ್ಟೇ ಅಲ್ಲದೇ ಶ್ವಾನವನ್ನು ಬಿಡದಿದ್ದಕ್ಕೆ 4 ಲಕ್ಷ ವೆಚ್ಚದ ಟ್ರಿಪ್‌ನ್ನು ಕ್ಯಾನ್ಸಲ್ ಮಾಡಿಕೊಳ್ಳಬೇಕಾಗಿ ಬಂತು ಎಂದು ಏರ್‌ಪೋರ್ಟ್‌ನಲ್ಲಿ ವೀಡಿಯೋ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಇದನ್ನೂ ಓದಿ: ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ನನಸಾಯ್ತು ಅಮ್ಮ, ಮಗಳ ಕನಸು – ಒಂದೇ ವಿಮಾನಕ್ಕೆ ಇಬ್ಬರೂ ಪೈಲಟ್

    ಕೊನೆಗೂ ನನಸಾಯ್ತು ಅಮ್ಮ, ಮಗಳ ಕನಸು – ಒಂದೇ ವಿಮಾನಕ್ಕೆ ಇಬ್ಬರೂ ಪೈಲಟ್

    ವಾಷಿಂಗ್ಟನ್: ಕನಸು ನನಸಾದ್ರೆ ಸ್ವರ್ಗವೇ ಸಿಕ್ಕಂತೆ ಆಗುತ್ತೆ. ಅದರಂತೆ ತಾಯಿ-ಮಗಳ ಜೋಡಿಯೊಂದು ತಮ್ಮ ಕನಸನ್ನು ನನಸು ಮಾಡಿಕೊಂಡಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ತಾಯಿ ಮತ್ತು ಮಗಳು ಜೋಡಿಯು ಸೌತ್‍ವೆಸ್ಟ್ ಏರ್‌ಲೈನ್‍ನ ಪೈಲಟ್‍ನಲ್ಲಿ ಸೇರಿಕೊಂಡಿದ್ದು, ಈ ಹೃದಯಸ್ಪರ್ಶಿ ಕ್ಷಣದ  ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕ್ಯಾಪ್ಟನ್ ಹಾಲಿ ಪೆಟಿಟ್ ಮತ್ತು ಫಸ್ಟ್ ಆಫೀಸರ್ ಕೀಲಿ ಪೆಟಿಟ್ ಸೌತ್‍ವೆಸ್ಟ್ ಏರ್‌ಲೈನ್ಸ್‍ನ ಮೊದಲ ಜೋಡಿ ತಾಯಿ-ಮಗಳು ಪೈಲಟ್ ಆಗಿದ್ದಾರೆ. ಇದನ್ನೂ ಓದಿ: ಸಚಿವರಾಗಿ ಒಂದು ವರ್ಷ – ಆಂಜನೇಯನ ದರ್ಶನ ಪಡೆದ ಆರಗ

     

    View this post on Instagram

     

    A post shared by Southwest Airlines (@southwestair)

    ಏರ್‌ಲೈನ್ಸ್ ಸೋಶಿಯಲ್ ಮೀಡಿಯಾ ಈ ವಿಶೇಷ ವೀಡಿಯೋ ಶೇರ್ ಮಾಡಿಕೊಂಡಿದೆ. ವೀಡಿಯೋ ನೋಡಿದ ನೆಟ್ಟಿಗರು ಫುಲ್ ಖುಷ್ ಆಗಿದ್ದು, ಅಭಿನಂದಿಸಿದ್ದಾರೆ. ಕ್ಯಾಪ್ಟನ್ ಹಾಲಿ ತನ್ನ ಮಗಳನ್ನು ವಿಮಾನದಲ್ಲಿ ಪ್ರಯಾಣಿಕರಿಗೆ ಪರಿಚಯಿಸಿದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ವೀಡಿಯೋದಲ್ಲಿ ಏನಿದೆ?
    ತಾಯಿ-ಮಗಳ ಜೋಡಿ ಫ್ಲೈಟ್‍ನೊಳಗೆ ಫೋಟೋ ಫ್ರೇಮ್ ಹಿಡಿದುಕೊಂಡು ನಿಂತಿರುತ್ತಾರೆ. ಈ ಫೋಟೋ ಮೂಲಕ ಇವರ ಇಡೀ ಕುಟುಂಬ ಫ್ಲೈಟ್‍ನ ಪೈಲಟ್ ಆಗಿರುವುದು ತಿಳಿದುಬರುತ್ತೆ. ಇಬ್ಬರು ಫ್ಲೈಟ್ ಓಡಿಸುವುದನ್ನು ನೋಡಬಹುದು.

    ಈ ಕುರಿತು ಬರೆದುಕೊಂಡ ಹಾಲಿ(ತಾಯಿ), ಇಂದು ನನಗೆ ವಿಶೇಷ ದಿನ. ನೈಋತ್ಯ ಪೈಲಟ್‍ಗಳ ತಂಡದ ಹೊಚ್ಚ ಹೊಸ ಸದಸ್ಯೆ ಮತ್ತು ನನ್ನ ಮಗಳು ಕೀಲಿಯನ್ನು ನಾನು ನಿಮಗೆ ಪರಿಚಯಿಸಲು ಬಯಸುತ್ತೇನೆ ಎಂದು ಬರೆದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸಿಮ್ ಕಾರ್ಡ್ ಇಲ್ಲದ ಮೊಬೈಲ್, ಖಾಲಿ ಹಾಳೆ ಕೈಗಿತ್ತು ಹೆತ್ತಮ್ಮನನ್ನೇ ಬಿಟ್ಟು ಹೋದ

    ಇಂದು ಕನಸು ನನಸಾಗಿದೆ. ಮೊದಲು, ನಾನು ಈ ವೃತ್ತಿಯನ್ನು ಕಂಡುಕೊಂಡು ಅದನ್ನು ಪ್ರೀತಿಸುತ್ತಿದ್ದೆ. ಆದರೆ ಇಗ ನನ್ನ ಮಗಳು ಈ ವೃತ್ತಿಯನ್ನು ಪ್ರೀತಿಸಿ ಇದೇ ವೃತ್ತಿಗೆ ಬರುತ್ತಿದ್ದಾಳೆ. ಇದು ಅತಿವಾಸ್ತವಿಕವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟ್ರೈನಿನಲ್ಲಿ ಪರಾರಿಯಾಗುತ್ತಿದ್ದ ಅಪಹರಣಕಾರರನ್ನು ಫ್ಲೈಟ್ ನಲ್ಲಿ ಹೋಗಿ ಅರೆಸ್ಟ್ ಮಾಡಿದ್ರು ಪೊಲೀಸರು!

    ಟ್ರೈನಿನಲ್ಲಿ ಪರಾರಿಯಾಗುತ್ತಿದ್ದ ಅಪಹರಣಕಾರರನ್ನು ಫ್ಲೈಟ್ ನಲ್ಲಿ ಹೋಗಿ ಅರೆಸ್ಟ್ ಮಾಡಿದ್ರು ಪೊಲೀಸರು!

    ಚಿಕ್ಕಬಳ್ಳಾಪುರ: ಮಾಲೀಕನನ್ನು ಕೊಲೆ ಮಾಡಿ ಅಸ್ಸಾಂಗೆ ತೆರಳುತ್ತಿದ್ದ ತೋಟದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನೆಟ್ಟಿ ಬಂಧಿಸಿದ್ದಾರೆ.

    ಬೆಂಗಳೂರು ಮೂಲದ ಕರೀಂಖಾನ್(81) ಕೊಲೆ ಮಾಡಿ ಪರಾರಿಯಾಗುತ್ತಿದ್ದ, ಜಾಕೀರ್, ಮುತಾಬುದ್ದೀನ್, ನಸರುವುಲ್ಲಾ ಹುಸೇನ್ ರನ್ನು ಗೌರಿಬಿದನೂರು ಪೊಲೀಸರು ವಿಮಾನದಲ್ಲಿ ಹೋಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಏನಿದು ಪ್ರಕರಣ?
    ಬೆಂಗಳೂರು ಮೂಲದ ಕರೀಂಖಾನ್(81) ಗೌರಿಬಿದನೂರು ತಾಲೂಕು ಗೊಡ್ಡಾವರಹಳ್ಳಿ ಬಳಿ ಅಡಿಕೆ, ಬಾಳೆ, ತೆಂಗಿನ ತೋಟವನ್ನು ಮಾಡಿ ಫಾರಂ ಹೌಸ್ ಮಾಡಿಕೊಂಡಿದ್ದರು. ತೋಟದ ಮನೆಯ ಕಾವಲಿಗಂತಲೇ ಅಸ್ಸಾಂ ಮೂಲದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಕ ಮಾಡಿದ್ದರು.

    ಆದರೆ ಮೇ 3ರಂದು ತೋಟಕ್ಕೆ ಬಂದಿದ್ದ ಮಾಲೀಕ ಕರೀಂಖಾನ್ ರನ್ನು ಮೂವರು ಸೆಕ್ಯೂರಿಟಿ ಗಾರ್ಡ್ ಗಳು ಕೈ-ಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿದ್ದಾರೆ. ಕರೀಂಖಾನ್ ನನ್ನ ತೋಟದಲ್ಲಿನ ಶೆಡ್ ನಲ್ಲಿ ಮೋಟಾರು ಅಳವಡಿಕೆಗೆ ಇರುವ ಬೃಹದಾದ ಗುಂಡಿಯಲ್ಲಿ ಹಾಕಿ ಕೂಡಿ ಹಾಕಿದ್ದರು. ನಂತರ ಮಗ ಆಯೂಬ್ ಖಾನ್ ಬಳಿ ಅಪರಿಚಿತರಂತೆ ನಿಮ್ಮ ತಂದೆಯನ್ನು ಕಿಡ್ನಾಪ್ ಮಾಡಿದ್ದೇವೆ. 70 ಲಕ್ಷ ರೂ. ನೀಡಿ ಬೇಡಿಕೆ ಇಟ್ಟಿದ್ದರು.

    ಈ ಬಗ್ಗೆ ಕರೀಂಖಾನ್ ಮಗ ಆಯೂಬ್ ಖಾನ್ ಗೌರಿಬಿದನೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆಗೆ ಮುಂದಾಗಿದ್ದರು. ಆದರೆ ಅಷ್ಟರಲ್ಲೇ ಇತ್ತ ಶೆಡ್‍ನ ಗುಂಡಿಯಲ್ಲಿ ಕೂಡಿ ಹಾಕಿದ್ದ ಕರೀಂಖಾನ್ ಕೂಡ ಗುಂಡಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದರಿಂದ ಪೊಲೀಸರಿಗೆ ವಿಷಯ ಗೊತ್ತಾಗುವಷ್ಟರಲ್ಲಿ ಪರಾರಿಯಾಗಬೇಕು ಎಂದು ತೀರ್ಮಾನಿಸಿದ ಮೂವರು ಸೆಕ್ಯೂರಿಟಿ ಗಾರ್ಡ್ ಗಳು, ರೈಲು ಮೂಲಕ ಅಸ್ಸಾಂಗೆ ಪಯಣ ಬೆಳೆಸಿದ್ದರು.

    ಪರಾರಿಯಾದ ವಿಷಯ ತಿಳಿದ ಪೊಲೀಸರು, ಇವರೇ ಅಪಹರಣಕಾರರು ಎಂದು ಅಸ್ಸಾಂ ನತ್ತ ತೆರಳುತ್ತಿದ್ದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನ ವಿಮಾನದ ಮೂಲಕ ಕೋಲ್ಕತ್ತಾ ಗೆ ತೆರಳಿ, ಅಲ್ಲಿ ಹೌರಾ ರೈಲ್ವೇ ಜಂಕ್ಷನ್ ನಲ್ಲಿ ಬಂಧಿಸಿ ಕರೆತಂದಿದ್ದಾರೆ. ಆಗ ನಡೆದ ಘಟನೆಯನ್ನ ಬಾಯ್ಬಿಟ್ಟಿರೋ ಸೆಕ್ಯೂರಿಟಿ ಗಾರ್ಡ್‍ಗಳು, ಕರೀಂಖಾನ್ ಮೃತಪಟ್ಟಿರುವ ವಿಷಯ ತಿಳಿಸಿದ್ದಾರೆ. ಈ ಸಂಬಂಧ ಸದ್ಯ ಮೂವರನ್ನು ಗೌರಿಬಿದನೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿತ ಸೆಕ್ಯೂರಿಟಿ ಗಾರ್ಡ್ ಗಳಿಂದ ಸ್ಥಳ ಮಹಜರು ಮಾಡಿಸಿದ್ದಾರೆ.

    ಮತ್ತೊಂದೆಡೆ ಗುಂಡಿಯಲ್ಲಿದ್ದ ಕರೀಂಖಾನ್ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.

    ಇನ್ನೂ ಮೂವರು ಅಸ್ಸಾಂ ಮೂಲದ ಸೆಕ್ಯೂರಿಟಿ ಗಾರ್ಡ್ ಗಳು, ಬಾಂಗ್ಲಾ ದೇಶದಿಂದ ಅಕ್ರಮವಾಗಿ ದೇಶಕ್ಕೆ ನುಸುಳಿದ್ದಾರೆ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದ್ದು, ಆ ದಿಕ್ಕಿನಲ್ಲೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.