Tag: ಫ್ಲೆಕ್ಸ್

  • ಜನ್ಮದಿನದಂದು ಕರ್ನಾಟಕದಲ್ಲಿ ಹಾಕಿರೋ ಫ್ಲೆಕ್ಸ್‌ಗೆ ಸನ್ನಿ ಫಿದಾ..!

    ಜನ್ಮದಿನದಂದು ಕರ್ನಾಟಕದಲ್ಲಿ ಹಾಕಿರೋ ಫ್ಲೆಕ್ಸ್‌ಗೆ ಸನ್ನಿ ಫಿದಾ..!

    ಬೆಂಗಳೂರು: ಬಾಲಿವುಡ್ ನಟಿ ಸನ್ನಿ ಲಿಯೋನ್ ಜನ್ಮದಿನದಂದು ಕರ್ನಾಟಕದ ರಸ್ತೆ ಬದಿಯಲ್ಲಿ ದೊಡ್ಡ ಫ್ಲೆಕ್ಸ್ ಒಂದನ್ನು ಹಾಕಲಾಗಿತ್ತು. ಈ ಫ್ಲೆಕ್ಸ್‌ಗೆ ನಟಿ ಫಿದಾ ಆಗಿದ್ದಾರೆ.

    ಹೌದು. ಮೇ 13ರಂದು ಸನ್ನಿ ಲಿಯೋನ್ ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಸನ್ನಿಲಿಯೋನ್ ಅವರು ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೇವಲ ನಟನೆ ಮಾತ್ರವಲ್ಲದೆ ಸನ್ನಿ, ಹಲವಾರು ಸಾಮಾಜಿಕ, ಮಾನವೀಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿಯ ಜನ್ಮದಿನದಂದು ಕರ್ನಾಟಕದಲ್ಲಿ ಅಭಿಮಾನಿಗಳು ವಿಶೇಷವಾಗಿ ತಮ್ಮ ಅಭಿಮಾನ ಮೆರೆದಿದ್ದಾರೆ.

    ಸನ್ನಿ ಹುಟ್ಟುಹಬ್ಬದ ಪ್ರಯುಕ್ತ ಕರ್ನಾಟಕದ ಹಳ್ಳಿಯೊಂದರ ರಸ್ತೆ ಬದಿಯಲ್ಲಿ ದೊಡ್ಡ ಫ್ಲೆಕ್ಸ್ ಹಾಕಲಾಗಿದೆ. ಫ್ಲೆಕ್ಸ್ ನಲ್ಲಿ ನಟಿ ಹಳದಿ ಹಾಗೂ ಕಪ್ಪು ಬಣ್ಣ ಮಿಶ್ರಿತ ಸೀರೆಯಲ್ಲಿ ಮಿಂಚಿದ್ದಾರೆ. ಫೋಟೋದ ಮೇಲೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಇಂಗ್ಲಿಷ್ ನಲ್ಲಿ ಬರೆದರೆ, ಕೆಳಗೆ ಅನಾಥ ಮಕ್ಕಳ ತಾಯಿ, ಅಭಿಮಾನಿಗಳ ದೇವತೆ ಎಂದು ಬರೆಯಲಾಗಿದೆ. ಈ ಫ್ಲೆಕ್ಸ್ ಗೆ ದೊಡ್ಡ ಹೂವಿನ ಹಾರವೊಂದನ್ನು ಕೂಡ ಹಾಕಲಾಗಿದ್ದು, ಈ ಮೂಲಕ ಅಭಿಮಾನಿಗಳು ಸನ್ನಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

     

    ಈ ಫ್ಲೆಕ್ಸ್ ಎಲ್ಲಿ ಹಾಕಿರುವುದು ಎಂಬುದಾಗಿ ತಿಳಿದುಬಂದಿಲ್ಲ. ಆದರೆ ಫ್ಲೆಕ್ಸ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನಟಿಗೂ ತಲುಪಿದೆ. ಹೀಗಾಗಿ ನಟಿ ಕೂಡ ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ಹಾರ್ಟ್ ಸಿಂಬಲ್ ಹಾಕಿ ಅಭಿಮಾನಿಗಳ ಅಭಿಮಾನಕ್ಕೆ ಫಿದಾ ಆಗಿದ್ದಾರೆ.

  • ನೆಲಮಂಗಲ ಬಳಿ ಬಿಜೆಪಿಯ ಪೋಸ್ಟರ್ ಶೋಕಿ- ಫೋಟೋ ವೈರಲ್ ಆಗ್ತಿದ್ದಂತೆ ಫ್ಲೆಕ್ಸ್ ತೆರವು

    ನೆಲಮಂಗಲ ಬಳಿ ಬಿಜೆಪಿಯ ಪೋಸ್ಟರ್ ಶೋಕಿ- ಫೋಟೋ ವೈರಲ್ ಆಗ್ತಿದ್ದಂತೆ ಫ್ಲೆಕ್ಸ್ ತೆರವು

    ನೆಲಮಂಗಲ: ಅಂತ್ಯಸಂಸ್ಕಾರ ವ್ಯವಸ್ಥೆಯಲ್ಲೂ ಬಿಜೆಪಿ ಶೋಕಿಗೆ ಇಳಿದಿದೆ. ಕೋವಿಡ್‍ನಿಂದ ಮೃತಪಟ್ಟವರ ಉಚಿತ ಅಂತ್ಯಸಂಸ್ಕಾರಕ್ಕೆ ಗಿಡ್ಡೇನಹಳ್ಳಿಯಲ್ಲಿ ಸ್ಮಶಾನ ನಿರ್ಮಿಸಲಾಗಿದೆ.

    ಈ ಸ್ಮಶಾನಕ್ಕೆ ಹೋಗುವ ದಾರಿಯ ಮಾರ್ಗವನ್ನ ಸೂಚಿಸುವ ಫ್ಲೆಕ್ಸ್ ನಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್ ಅಶೋಕ್, ಬಿಡಿಎ ಅಧ್ಯಕ್ಷ ಎಸ್. ಆರ್ ವಿಶ್ವನಾಥ್, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮರಿಸ್ವಾಮಿ ಫೋಟೊ ಹಾಕಲಾಗಿತ್ತು. ಅಲ್ಲದೆ ಕೊರೊನಾ ಶವಸಂಸ್ಕಾರಕ್ಕೆ ಬರುವ ಸಂಬಂಧಿಕರು, ಅಂಬುಲೆನ್ಸ್ ಚಾಲಕರು ಹಾಗೂ ಶವಸಂಸ್ಕಾರ ಮಾಡುವ ಸಿಬ್ಬಂದಿಗೆ ಚಿತಾಗಾರದ ಬಳಿ ಊಟ ತಿಂಡಿ ವ್ಯವಸ್ಥೆ ಮಾಡಲಾಗಿದೆ ಎಂದು ಬರೆಯಲಾಗಿತ್ತು.

    ಅಮಯಾಕರ ಪ್ರಾಣ ಉಳಿಸಲಾಗದ ಸರ್ಕಾರಕ್ಕೆ, ಈ ಶೋಕಿ ಯಾಕೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಜನ ಹಿಗ್ಗಾಮುಗ್ಗ ಝಾಡಿಸಿದ್ದಾರೆ. ಈ ಫೋಟೋ ವೈರಲ್ ಆದ ಬೆನ್ನಲ್ಲೇ ಫ್ಲೆಕ್ಸ್ ಅನ್ನು ತೆರವು ಮಾಡಲಾಗಿದೆ.

  • ಫ್ಲೆಕ್ಸ್ ತೆರವು- ಸಿಎಂ ಆಪ್ತ ಸಂತೋಷ್ ಬೆಂಬಲಿಗರಿಂದ ಅಧಿಕಾರಿಗಳಿಗೆ ನಿಂದನೆ

    ಫ್ಲೆಕ್ಸ್ ತೆರವು- ಸಿಎಂ ಆಪ್ತ ಸಂತೋಷ್ ಬೆಂಬಲಿಗರಿಂದ ಅಧಿಕಾರಿಗಳಿಗೆ ನಿಂದನೆ

    ಹಾಸನ: ನಿಯಮಮೀರಿ ಹಾಕಿಸಿದ್ದ ಫ್ಲೆಕ್ಸ್ ತೆರವುಗೊಳಿಸಿದ ಅರಸೀಕೆರೆ ನಗರಸಭೆ ಆಯುಕ್ತರ ವಿರುದ್ಧ ಮುಖ್ಯಮಂತ್ರಿ ಬಿಎಸ್‍ವೈ ಆಪ್ತ ಸಂತೋಷ್ ಬೆಂಬಲಿಗರು ಏಕವಚನದಲ್ಲಿ ನಿಂದಿಸಿದ ಘಟನೆ ನಡೆದಿದೆ.

    ಅರಸೀಕೆರೆ ನಗರಸಭೆ ವ್ಯಾಪ್ತಿಯ ಹಲವೆಡೆ ಎನ್.ಆರ್.ಸಂತೋಷ್‍ಗೆ ಶುಭಾಷಯ ಕೋರಿ ಫ್ಲೆಕ್ಸ್ ಹಾಕಲಾಗಿತ್ತು. ನಿಯಮ ಮೀರಿ ಫ್ಲೆಕ್ಸ್ ಹಾಕಿಸಿದ್ದಾರು. ಅರಸೀಕೆರೆ ನಗರಸಭೆ ಆಯುಕ್ತ ಕಾಂತರಾಜು, ತಡರಾತ್ರಿ ಫ್ಲೆಕ್ಸ್ ತೆರವುಗೊಳಿಸಲು ಮುಂದಾದರು. ಈ ವೇಳೆ ಸ್ಥಳಕ್ಕಾಗಮಿಸಿದ ಸಂತೋಷ್ ಬೆಂಬಲಿಗರು ಫ್ಲೆಕ್ಸ್ ತೆರವುಗೊಳಿಸಿ ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಅಡ್ಡಗಟ್ಟಿದ್ದಲ್ಲದೆ ನಗರಸಭೆ ಅಧಿಕಾರಿಗಳನ್ನು ಏಕವಚನದಲ್ಲಿ ನಿಂದಿಸಿದ್ದಾರೆ.

    ಬೇರೆಯವರು ಫ್ಲೆಕ್ಸ್ ಹಾಕಿದ್ರೆ ಕೇಳಲ್ಲ. ನಾವು ಹಾಕಿಸಿದ್ರೆ ತೆಗೆಸ್ತೀಯಾ? ಈ ಟ್ರ್ಯಾಕ್ಟರ್ ಮುಂದೆ ಹೋಗಲು ಬಿಡಲ್ಲ ಎಂದು ಗಲಾಟೆ ಮಾಡಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಸ್ಥಳದಲ್ಲಿದ್ದ ಪೊಲೀಸರು ಮಾತ್ರ ಮೂಕ ಪ್ರೇಕ್ಷಕರಂತೆ ನಿಂತಿದ್ದಾರೆ. ಈ ಗಲಾಟೆಯೆಲ್ಲ ಗಮನಿಸಿದ ಸಾರ್ವಜನಿಕರು ಮಾತ್ರ ಆಡಳಿ ಪಕ್ಷದದ ಬೆಂಬಲಿಗರು ಏನೂ ಮಾಡಿದ್ರು ಅಧಿಕಾರಿಗಳು ಕೇಳಬಾರದ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ತಡರಾತ್ರಿ ಆರಂಭವಾದ ಫ್ಲೆಕ್ಸ್ ಜಟಾಪಟಿ ಇನ್ನೂ ಕೂಡ ಮುಂದುವರಿದಿದೆ.

  • ಹೈಕೋರ್ಟ್ ಆದೇಶ ಮೀರಿ ಬ್ಯಾನರ್ ಹಾಕಿದ ಸಿಎಂ ಬೆಂಬಲಿಗರು

    ಹೈಕೋರ್ಟ್ ಆದೇಶ ಮೀರಿ ಬ್ಯಾನರ್ ಹಾಕಿದ ಸಿಎಂ ಬೆಂಬಲಿಗರು

    ಬೆಂಗಳೂರು: ಯಾವುದೇ ಕಾರಣಕ್ಕೂ ಬ್ಯಾನರ್ ಬಳಸುವಂತಿಲ್ಲ ಎಂದು ಸಂಪೂರ್ಣವಾಗಿ ಬ್ಯಾನರ್ ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಆದರೆ ಇದಾವುದನ್ನೂ ಲೆಕ್ಕಿಸದ ಸಿಎಂ ಬೆಂಬಲಿಗರು ಫ್ಲೆಕ್ಸ್ ಮತ್ತು ಬ್ಯಾನರ್ ಹಾಕಿ ಬಿಎಸ್‍ವೈಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

    ಸಿಎಂ ಯಡಿಯೂರಪ್ಪನವರ 78ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು, ಬೆಂಬಲಿಗರು ಸಂಭ್ರಮದಿಂದ ಆಚರಿಸುತ್ತಿದ್ದು, ಶುಭಾಶಯ ತಿಳಿಸುತ್ತಿದ್ದಾರೆ. ಇದರ ಜೊತೆಗೆ ಕಾವೇರಿ ನಿವಾಸ ಮುಂಭಾಗ ಪ್ಲೆಕ್ಸ್ ಮತ್ತು ಬ್ಯಾನರ್ ಗಳು ರಾರಾಜಿಸುತ್ತಿವೆ. ರೂಲ್ಸ್ ಫಾಲೋ ಮಾಡಿ ಎಂದು ಹೇಳಬೇಕಾದವರಿಂದಲೇ ರೂಲ್ಸ್ ಬ್ರೇಕ್ ಮಾಡಲಾಗಿದೆ. ಈ ಮೂಲಕ ಹೈಕೋರ್ಟ್ ಆದೇಶಕ್ಕೂ ಡೋಂಟ್ ಕೇರ್ ಎಂದು ಫ್ಲೆಕ್ಸ್ ಬ್ಯಾನರ್ ಹಾಕಿದ್ದಾರೆ.

    ಬೆಂಗಳೂರು ನಗರದಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಹಾಕದಂತೆ ಹೈಕೋರ್ಟ್ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಫ್ಲೆಕ್ಸ್ ಮತ್ತು ಬ್ಯಾನರ್ ಹಾಕಿದರೆ, ತೆರವುಗೊಳಿಸಿ ದಂಡ ವಿಧಿಸುವಂತೆ ಸಹ ಸೂಚಿಸಿದೆ. ಆದರೆ ಸಿಎಂ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿದ್ದಾರೆ.

    ನಗರದಲ್ಲಿ ಎಲ್ಲೆ ಬ್ಯಾನರ್ ಹಾಕಿದರೂ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬಿಬಿಎಂಪಿ ಆಯುಕ್ತರು ಮತ್ತು ಮೇಯರ್ ಬ್ಯಾನರ್ ತೆರವು ಮಾಡುವಂತೆ ಜನ ಸಾಮಾನ್ಯರಿಗೆ ಖಡಕ್ಕಾಗಿ ಆರ್ಡರ್ ಮಾಡುತ್ತಿದ್ದರು. ಆದರೆ ಸಿಎಂ ಬಿಎಸ್‍ವೈ ಮನೆ ಮುಂದೆ ಹಾಕಿರುವುದನ್ನು ಪ್ರಶ್ನೆ ಮಾಡುವವರೇ ಇಲ್ಲದಂತಾಗಿದೆ.

  • ‘ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ’ – ರಾಯಚೂರಿನಲ್ಲಿದೆ ಮಾದಕ ನಟಿಯ ಅಭಿಮಾನಿಗಳ ದಂಡು

    ‘ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ’ – ರಾಯಚೂರಿನಲ್ಲಿದೆ ಮಾದಕ ನಟಿಯ ಅಭಿಮಾನಿಗಳ ದಂಡು

    ರಾಯಚೂರು: ಮಾದಕ ನಟಿ ಸನ್ನಿ ಲಿಯೋನ್ ಅಭಿಮಾನಿ ಅಂತ ಸಾರ್ವಜನಿಕವಾಗಿ ಹೇಳಿಕೊಳ್ಳಲು ಡಬಲ್ ಗುಂಡಿಗೆ ಬೇಕು. ಆದರೆ ರಾಯಚೂರಿನ ಸಿಂಧನೂರು ತಾಲೂಕಿನ ಹುಡಾ ಗ್ರಾಮದಲ್ಲಿ ‘ಶ್ರೀಮತಿ ಸನ್ನಿಲಿಯೋನ್ ಯುವಕ ಮಂಡಳಿ’ ಸ್ಥಾಪನೆಯಾಗಿದ್ದು, ಗ್ರಾಮದ ಜನರೆಲ್ಲಾ ಹುಬ್ಬೇರಿಸುವಂತೆ ಮಾಡಿದೆ. ಗ್ರಾಮದಲ್ಲಿ ಈಗ ಶ್ರೀಮತಿ ಸನ್ನಿಲಿಯೋನ್ ಯುವಕ ಮಂಡಳಿ’ ಫ್ಲೆಕ್ಸ್ ರಾರಾಜಿಸುತ್ತಿದೆ.

    ಫ್ಲೆಕ್ಸ್ ನಲ್ಲಿ 13 ಯುವಕರು ಪಂಚೆ ಕಟ್ಟಿಕೊಂಡು ಸಾಲಾಗಿ ನಿಂತುಕೊಂಡ ಚಿತ್ರಗಳಿವೆ. ನಟಿ ಸನ್ನಿ ಲಿಯೋನ್ ಕೆಂಪು ಸೀರೆ ಧರಿಸಿ ನಿಂತಿರುವ ಚಿತ್ರವನ್ನು ಯುವ ಪದಾಧಿಕಾರಿಗಳ ಪಕ್ಕದಲ್ಲಿ ದೊಡ್ಡದಾಗಿ ಹಾಕಲಾಗಿದೆ. ‘ಶ್ರೀಮತಿ ಸನ್ನಿಲಿಯೋನ್’ ಅಂತ ಗೌರವ ಸೂಚಕ ಪದ ಬಳಿಸಿ ಸಂಘಕ್ಕೆ ನಾಮಕರಣ ಮಾಡಿಕೊಂಡಿದ್ದಾರೆ. ನಟಿಯ ಸಭ್ಯ ಚಿತ್ರವನ್ನೇ ಬಳಸಿಕೊಂಡಿರುವುದು ವಿಶೇಷ.

    ಗ್ರಾಮದಲ್ಲಿ ಜನವರಿ 10 ರಿಂದ 13 ರವರೆಗೆ ಅಂಬಾದೇವಿ ರಥೋತ್ಸವ ಹಾಗೂ ಕುಂಬೋತ್ಸವ ಆಯೋಜಿಸಲಾಗಿತ್ತು. ಜಾತ್ರಾ ಸಂದರ್ಭದಲ್ಲಿ ಹುಟ್ಟಿಕೊಂಡ ಯುವಕ ಸಂಘವು ಫ್ಲೆಕ್ಸ್ ಹಾಕಿಸಿದ್ದು, ಗಮನ ಸೆಳೆಯುತ್ತಿದೆ. ಶ್ರೀ ಶ್ರೀ ಶ್ರೀ ಸಿದ್ಧಪರ್ವತ ಅಂಬಾದೇವಿಯ ರಥೋತ್ಸವ ಹಾಗೂ ಕುಂಭೋತ್ಸವಕ್ಕೆ ಸರ್ವರಿಗೂ ಆದರದ ಸುಸ್ವಾಗತ. ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ ಹುಡಾ ಅನ್ನೋ ಫ್ಲೆಕ್ಸ್ ಈಗ ಗ್ರಾಮದಲ್ಲಿ ಎಲ್ಲರ ಕಣ್ಣು ಕುಕ್ಕುತ್ತಿದೆ.

  • ಬೆಂಗಳೂರಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳಿಗೆ ಬರವಿಲ್ಲ!

    ಬೆಂಗಳೂರಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳಿಗೆ ಬರವಿಲ್ಲ!

    – ಸದ್ದಿಲ್ಲದೇ ಮತ್ತೆ ತಲೆಯೆತ್ತಿದೆ ಜಾಹೀರಾತು ಮಾಫಿಯಾ?

    ಬೆಂಗಳೂರು: ಕೆಲ ತಿಂಗಳಿಂದ ಸಿಲಿಕಾನ್ ಸಿಟಿ ಜನ, ಬ್ಯಾನರ್, ಫ್ಲೆಕ್ಸ್ ಕಾಟದಿಂದ ಮುಕ್ತಿ ಹೊಂದಿದ್ದರು. ಆದ್ರೆ ಈಗ ಸಿಕ್ಕ ಸಿಕ್ಕಲ್ಲಿ ಅನಧಿಕೃತ ಬ್ಯಾನರ್ ಗಳು ರಾರಾಜಿಸುತ್ತಿವೆ. ಈ ಮೂಲಕ ಮಾಫಿಯಾವೊಂದು ಸದ್ದಿಲ್ಲದೆ ತಲೆಯತ್ತಿದೆ. ಕೋರ್ಟ್ ವಿಧಿಸಿದ್ದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. 2018ರ ಅಗಸ್ಟ್ ತಿಂಗಳಲ್ಲಿ ರಾಜ್ಯ ಹೈಕೋರ್ಟ್ ಬೆಂಗಳೂರು ನಗರದಲ್ಲಿ ಜಾಹೀರಾತು ಬ್ಯಾನ್ ಮಾಡಿ ಆದೇಶ ನೀಡಿತ್ತು. ಆದರೆ ಈಗ ದೊಡ್ಡ ಬ್ಯಾನರ್ ಫಲಕದ ಪ್ರದರ್ಶನವಾಗುತ್ತಿವೆ. ಹೆಬ್ಬಾಳ ಫ್ಲೈಓವರ್ ಮೇಲೆ 120 ಮೀಟರ್ ಜಾಗದಲ್ಲಿ ಖಾಸಗಿ ಕಂಪನಿಯ 4 ದೊಡ್ಡದಾದ ಜಾಹೀರಾತುಗಳು ರಾರಾಜಿಸುತ್ತಿವೆ. ಈ ಬಗ್ಗೆ ಪರಿಸರವಾದಿಗಳು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದು ಹೆಬ್ಬಾಳಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜಾಜಿನಗರ, ಮಾಗಡಿ ರೋಡ್ ಸೇರಿದಂತೆ ಎಲ್ಲೆಡೆ ಅನಧಿಕೃತ ಜಾಹೀರಾತುಗಳು ರಾರಾಜಿಸುತ್ತಿವೆ. ಈ ಬ್ಯಾನ್ ಜಾಹೀರಾತುಗಳ ವಿಚಾರವಾಗಿ ಹೈಕೋರ್ಟ್ ಪದೇ ಪದೇ ಚಾಟಿ ಬೀಸ್ತಿದ್ರು ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತು ಕೊಂಡಿಲ್ಲ.

    ಪಬ್ಲಿಕ್ ಟಿವಿ ಈ ಬಗ್ಗೆ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಅವರಲ್ಲಿ ಸ್ಪಷ್ಟನೆ ಕೇಳಿದಾಗ, ಹೆಬ್ಬಾಳದಲ್ಲಿ ತಲೆಯೆತ್ತಿರೋ ಜಾಹೀರಾತಿಗೆ ಬಿಡಿಎ ಅನುಮತಿ ನೀಡಿದೆಯಂತೆ. 30 ವರ್ಷಕ್ಕೆ ಅನುಮತಿ ನೀಡಿದ್ದು, ಕೆಎಂಸಿ ಆಕ್ಟ್ ಹಾಗೂ ಜಾಹೀರಾತು ಬೈಲಾ ಉಲ್ಲಂಘನೆಯಾದ್ರೆ ಫ್ಲೆಕ್ಸ್ ಸಂಬಂಧ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳಿಗೆ ಬ್ರೇಕ್ ಹಾಕಿ, ಬೆಂಗಳೂರಿನ ಅಂದವನ್ನು ಕಾಪಾಡೋ ಜವಬ್ದಾರಿ ಬಿಬಿಎಂಪಿ ಮೇಲಿದೆ ಎನ್ನುವುದಂತೂ ಸುಳ್ಳಲ್ಲ.

  • ಡಿಕೆಶಿ, ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಲು ಡಿಸಿಎಂ ನಕಾರ

    ಡಿಕೆಶಿ, ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಲು ಡಿಸಿಎಂ ನಕಾರ

    ಮೈಸೂರು: ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರು ಮೈಸೂರಿಗೆ ಭೇಟಿಕೊಟ್ಟಿದ್ದು, ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಹಾಗೂ ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

    ಡಿಕೆಶಿ ಅವರು ಕೆಲವು ತಪ್ಪುಗಳನ್ನು ಮಾಡಿರುವುದನ್ನು ತಮ್ಮ ಬಳಿ ಒಪ್ಪಿಕೊಂಡಿದ್ದಾರೆ ಎಂದು ಪರಮೇಶ್ವರ್ ಅವರು ಹೇಳಿಕೆ ಕೊಟ್ಟಿದ್ದರು. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಡಿಸಿಎಂ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಈ ಬಗ್ಗೆ ಹೇಳಿದರೆ ಅದು ಬೇರೆ ಅರ್ಥವನ್ನು ಕಲ್ಪಿಸುತ್ತದೆ. ಡಿಕೆಶಿ ಅವರ ವಿಚಾರ ಕಾನೂನಿನಲ್ಲಿ ಬೇರೆ ಬೇರೆ ಹಂತ ತಲುಪಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಇರುವ ಹಿನ್ನೆಲೆಯಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೊರಟು ಹೋದರು.

    ಇದೇ ವೇಳೆ ಕಾರ್ಯಕರ್ತರು ತಮ್ಮ ಫ್ಲೆಕ್ಸ್ ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಈ ಕೂಡಲೇ ಫ್ಲೆಕ್ಸ್ ತೆರವುಗೊಳಿಸಲು ಹೇಳಿದ್ದೇನೆ ಎಂದು ತಿಳಿಸಿದರು.

    ಹಾಗೆಯೇ ನೆರೆ ಪರಿಹಾರ ವಿಚಾರ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಮಾತನಾಡಿ, ಪ್ರತಿಪಕ್ಷದಿಂದ ರಾಜಕೀಯ ಮಾಡುವ ಯತ್ನವಾಗುತ್ತಿದೆ. ಈ ಹಿಂದಿನ ಸರ್ಕಾರ ಜನಪರ ಕೆಲಸ ಮಾಡಿಲ್ಲ. ಆದರೆ ನಾವು ಜನ ಪರ ಕೆಲಸ ಮಾಡುತ್ತಿದ್ದೇವೆ. ಪೂರ್ಣ ಪ್ರಮಾಣದ ಸಚಿವ ಸಂಪುಟ ಇದ್ದರೆ ಒಳ್ಳೆಯದು. ಆದರೆ ಇದರಿಂದ ಅಭಿವೃದ್ಧಿಗೆ ಯಾವುದೇ ಹಿನ್ನೆಡೆ ಆಗಿಲ್ಲ. ಆದಷ್ಟು ಬೇಗ ಪೂರ್ಣ ಪ್ರಮಾಣದ ಸಚಿವ ಸಂಪುಟ ಆಗಲಿದೆ ಎಂದು ಹೇಳಿದರು.

    ಬಳ್ಳಾರಿ ಪ್ರತ್ಯೇಕ ಜಿಲ್ಲೆ ಪರ ಅಶ್ವಥ್ ನಾರಾಯಣ್ ಬ್ಯಾಟಿಂಗ್ ಮಾಡಿದರು. ಇದರಿಂದ ಒಳ್ಳೆಯದಾಗುವುದಾರೆ ಆಗಲಿ. ಅಭಿವೃದ್ದಿ ದೃಷ್ಠಿಯಿಂದ ಬೆಳಗಾವಿ ಸೇರಿದಂತೆ ಯಾವುದೇ ಪ್ರತ್ಯೇಕ ಜಿಲ್ಲೆ ಆಗುವುದಾದರೆ ಆಗಲಿ. ಅಭಿವೃದ್ಧಿ ದೃಷ್ಟಿಯಿಂದ ಈ ಬಗ್ಗೆ ಮುಂದೆ ಸರ್ಕಾರ ನಿರ್ಧರಿಸುತ್ತದೆ ಎಂದರು.

  • ಬಿಎಸ್‍ವೈ ಫೋಟೋವಿರುವ ಫ್ಲೆಕ್ಸ್‌ನಲ್ಲಿ ಜೆಡಿಎಸ್‍ನ ಅನರ್ಹ ಶಾಸಕ

    ಬಿಎಸ್‍ವೈ ಫೋಟೋವಿರುವ ಫ್ಲೆಕ್ಸ್‌ನಲ್ಲಿ ಜೆಡಿಎಸ್‍ನ ಅನರ್ಹ ಶಾಸಕ

    ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್‍ನ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಬಿಜೆಪಿ ಸೇರಿದ್ದಾರಾ ಎಂಬ ಅನುಮಾನ ಮೂಡಿದೆ. ಯಾಕಂದರೆ ಸಿಎಂ ಯಡಿಯೂರಪ್ಪ ಅವರ ಭಾವಚಿತ್ರವುಳ್ಳ ಫ್ಲೆಕ್ಸ್‌ಗಳಲ್ಲಿ ನಾರಾಯಣಗೌಡರ ಫೋಟೋ ರಾರಾಜಿಸುತ್ತಿದೆ.

    ಒಂದೆಡೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಗ ನಿಖಿಲ್ ಅವರನ್ನು ಕೆ.ಆರ್.ಪೇಟೆಯ ಉಪಚುನಾವಣೆಯಲ್ಲಿ ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇತ್ತ ಎಚ್‍ಡಿಕೆಗೆ ಟಕ್ಕರ್ ಕೊಡಲು ಕೆ.ಆರ್.ಪೇಟೆ ಬಿಜೆಪಿ ಘಟಕ ಮುಂದಾಗಿದ್ದು, ಬಸವಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶುಭಕೋರಿ ಅಳವಡಿಸಿರುವ ಫ್ಲೆಕ್ಸ್‌ಗಳಲ್ಲಿ ಬಿಎಸ್‍ವೈ ಜೊತೆ ನಾರಾಯಣಗೌಡರ ಫೋಟೋವನ್ನು ಹಾಕಲಾಗಿದೆ. ಆ ಫ್ಲೆಕ್ಸ್‌ಗಳು ಕೆ.ಆರ್.ಪೇಟೆ ಪಟ್ಟಣದಾದ್ಯಂತ ರಾರಾಜಿಸುತ್ತಿವೆ.

    ಇಂದು ಸಂಜೆ ಕುಮಾರಸ್ವಾಮಿ ಅವರು ಕೆ.ಆರ್.ಪೇಟೆಗೆ ಆಗಮಿಸುತ್ತಿದ್ದಾರೆ. ಈ ವೇಳೆ ಕಾರ್ಯಕರ್ತರ ಸಭೆ ನಡೆಸಿ ಉಪಚುನಾವಣೆ ಸಿದ್ಧತೆಗೆ ಕರೆ ನೀಡುವ ಸಾಧ್ಯತೆ ಇದೆ. ಕುಮಾರಸ್ವಾಮಿ ಭೇಟಿ ಹಿನ್ನೆಲೆಯಲ್ಲಿ ಸಿಎಂ ಬಿಎಸ್‍ವೈ ಜೊತೆ ನಾರಾಯಣಗೌಡರ ಫೋಟೋಗಳಿರುವ ಫ್ಲೆಕ್ಸ್ ಅಳವಡಿಸಿ ಟಾಂಗ್ ಕೊಡಲು ಬಿಜೆಪಿ ಘಟಕ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

    ಸದ್ಯಕ್ಕೆ ನಾರಾಯಣಗೌಡ ಶಾಸಕ ಸ್ಥಾನದ ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಅನರ್ಹತೆ ಪ್ರಕರಣ ಇತ್ಯರ್ಥವಾಗದಿದ್ದರೂ ಶಾಸಕರು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಎಂದೇ ಫ್ಲೆಕ್ಸ್‌ಗಳಲ್ಲಿ ಮುದ್ರಿಸಲಾಗಿದೆ. ಈ ಮೂಲಕ ಅನರ್ಹತೆ ಪ್ರಕರಣ ಇತ್ಯರ್ಥದ ಬಳಿಕ ನಾರಾಯಣಗೌಡ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ.

  • ಬಿಜೆಪಿ ಫ್ಲೆಕ್ಸ್‌ನಲ್ಲಿ ರಮೇಶ್ ಜಾರಕಿಹೊಳಿ ಚಿತ್ರ

    ಬಿಜೆಪಿ ಫ್ಲೆಕ್ಸ್‌ನಲ್ಲಿ ರಮೇಶ್ ಜಾರಕಿಹೊಳಿ ಚಿತ್ರ

    ಕೊಪ್ಪಳ: ಅನರ್ಹ ಶಾಸಕ ರಮೇಶ್ ಜಾರಕಿಹೊಳಿಯವರ ಫೋಟೋ ಆಗಲೇ ಬಿಜೆಪಿ ಫ್ಲೆಕ್ಸ್, ಬ್ಯಾನರ್ ಗಳಲ್ಲಿ ಭಾವಚಿತ್ರ ರಾರಾಜಿಸುತ್ತಿದೆ.

    ಕೊಪ್ಪಳದಲ್ಲಿ ಬಿಜೆಪಿ ನಾಯಕರು ಹಾಕಿರುವ ಫ್ಲೆಕ್ಸ್ ನಲ್ಲಿ ಗೋಕಾಕ್ ಕ್ಷೇತ್ರದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಭಾವಚಿತ್ರವಿದ್ದು, ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಜಾರಕಿಹೊಳಿ ಅವರ ಮೇಲೆ ಇನ್ನೂ ಅನರ್ಹತೆ ತೂಗುಗತ್ತಿ ನೇತಾಡುತ್ತಿದೆ. ಅಲ್ಲದೆ, ಜಾರಕಿಹೊಳಿ ಪಕ್ಷಕ್ಕೆ ಸೇರುವ ಕುರಿತು ಬಿಜೆಪಿ ನಾಯಕರು ಇನ್ನೂ ಯಾವುದೇ ರೀತಿಯ ತೀರ್ಮಾನ ಕೈಗೊಂಡಿಲ್ಲ. ಆಗಲೇ ಫ್ಲೆಕ್ಸ್ ನಲ್ಲಿ ರಮೇಶ್ ಜಾರಕಿಹೊಳಿ ಭಾವಚಿತ್ರವನ್ನು ಹಾಕಲಾಗಿದೆ.

    ನಗರದ ಅಶೋಕ ವೃತ್ತದಲ್ಲಿ ಬಿಜೆಪಿ ಯುವ ಮುಖಂಡ ಹಾಲೇಶ್ ಕಂದಾರಿ, ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ಹಿನ್ನಲೆಯಲ್ಲಿ ಅಭಿನಂದನೆ ಸಲ್ಲಿಸಲು ಹಾಕಿರುವ ಫ್ಲೆಕ್ಸ್ ನಲ್ಲಿ ರಮೇಶ್ ಜಾರಕಿಹೊಳಿ ಫೋಟೋ ಹಾಕಿದ್ದಾರೆ. ರಮೇಶ್ ಜಾರಕಿಹೊಳಿ ಅವರನ್ನು ಇತ್ತೀಚಿಗಷ್ಟೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದ್ದು, ಅಲ್ಲದೆ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ.

    ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಬಿಜೆಪಿ ಸೇರುವುದಕ್ಕೂ ಮೊದಲೇ ರಮೇಶ್ ಜಾರಕಿಹೊಳಿ ಅವರ ಭಾವಚಿತ್ರವನ್ನು ಬಿಜೆಪಿ ನಾಯಕರು ತಮ್ಮ ಫ್ಲೆಕ್ಸ್‌ನಲ್ಲಿ ಹಾಕಿಕೊಂಡಿರುವುದು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

  • ಬೆಂಗ್ಳೂರಲ್ಲಿ ಮತ್ತೆ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಗಳಿಗೆ ಗ್ರೀನ್ ಸಿಗ್ನಲ್

    ಬೆಂಗ್ಳೂರಲ್ಲಿ ಮತ್ತೆ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಗಳಿಗೆ ಗ್ರೀನ್ ಸಿಗ್ನಲ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಗಳಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

    ಹೈಕೋರ್ಟ್ ತೀರ್ಪಿನಿಂದ ಜಾಹೀರಾತು ಕಂಪನಿಗಳಿಗೆ ಗೆಲುವು ಸಿಕ್ಕಿದಂತಾಗಿದೆ. ಆದರೆ ಬಿಬಿಎಂಪಿಯ ಅಧಿಕೃತ ಬೋರ್ಡ್ ಗಳಲ್ಲಿ ಮಾತ್ರ ಫ್ಲೆಕ್ಸ್, ಬ್ಯಾನರ್ ಹಾಗೂ ಹೋರ್ಡಿಂಗ್ಸ್ ಹಾಕಬೇಕೇ ಹೊರತು, ಎಲ್ಲೆಂದರಲ್ಲಿ ಹಾಕುವಂತಿಲ್ಲ ಎಂದು ಹೈಕೋರ್ಟ್ ವಾರ್ನಿಂಗ್ ಸಹ ಕೊಟ್ಟಿದೆ.

    ಬೆಂಗಳೂರಿನ ಅಂದ ಹೆಚ್ಚಿಸುವ ಸಲುವಾಗಿ ಗುಂಡಿಗಳನ್ನು ಮುಚ್ಚಲು, ಅನಧಿಕೃತ ಫ್ಲೆಕ್ಸ್ ತೆರವು ಮಾಡಲು ಹೈಕೋರ್ಟ್‍ನ ಹಿಂದಿನ ಮುಖ್ಯ ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಆದೇಶಿಸಿದ್ದರು. ಅದರಂತೆ 2018ರ ಆಗಸ್ಟ್ 6ರಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ 1 ವರ್ಷಗಳ ಕಾಲ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಗಳಿಗೆ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಜಾಹೀರಾತು ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಬಿಬಿಎಂಪಿ ನಿರ್ಣಯವನ್ನು ರದ್ದು ಪಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv