Tag: ಫ್ಲಾಟ್

  • ಗ್ಯಾಂಗ್‌ಸ್ಟರ್ ಅತೀಕ್ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚಿದ ಯೋಗಿ ಆದಿತ್ಯನಾಥ್

    ಗ್ಯಾಂಗ್‌ಸ್ಟರ್ ಅತೀಕ್ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚಿದ ಯೋಗಿ ಆದಿತ್ಯನಾಥ್

    ಲಕ್ನೋ: ಕಳೆದ 2 ತಿಂಗಳ ಹಿಂದೆ ಹತ್ಯೆಯಾಗಿದ್ದ ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್‌ನ (Atiq Ahmed) ಜಮೀನನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಇದೀಗ ಆ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಬಡವರಿಗೆ ಹಂಚಿದ್ದಾರೆ.

    ಪ್ರಯಾಗ್‌ರಾಜ್ (Prayagraj) ಬಳಿಯ ಲುಕರ್ಗಂಜ್ ಬಳಿ ಸ್ವಾಧೀನಪಡಿಸಿಕೊಂಡ 1731 ಚ.ಮೀ ಭೂಮಿಯಲ್ಲಿ ಸಿಎಂ ಆದಿತ್ಯನಾಥ್ 2021ರ ಡಿಸೆಂಬರ್ 26ರಂದು ವಸತಿಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದರು. ಬಳಿಕ ಭೂಮಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojana) ಅಡಿಯಲ್ಲಿ 2 ಬ್ಲಾಕ್‌ಗಳಲ್ಲಿ 76 ಫ್ಲಾಟ್‌ಗಳನ್ನು ನಿರ್ಮಾಣ ಮಾಡಲಾಗಿದೆ.

    ಈ ತಿಂಗಳ ಆರಂಭದಲ್ಲಿ ಲಾಟರಿ ಮೂಲಕ ಫ್ಲಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಶುಕ್ರವಾರ ಆದಿತ್ಯನಾಥ್ ಅವರು 76 ಫ್ಲಾಟ್‌ಗಳ ಕೀಲಿಗಳನ್ನು ಬಡವರಿಗೆ ಹಂಚಿಕೆ ಮಾಡಿದ್ದಾರೆ. ಇದನ್ನೂ ಓದಿ: 4 ತಿಂಗಳಲ್ಲಿ ಮೂರನೇ ಬಾರಿಗೆ ಸಂಪುಟಕ್ಕೆ ಸರ್ಜರಿ- ಕೇಜ್ರಿವಾಲ್ ಬಳಿಕ ಅತಿಶಿ ಪ್ರಭಾವಿ ಸಚಿವೆ

    ಅಧಿಕಾರಿಗಳ ಪ್ರಕಾರ ಪ್ರತಿ ಫ್ಲಾಟ್‌ಗಳು 41 ಚ.ಮೀ ವಿಸ್ತೀರ್ಣವನ್ನು ಹೊಂದಿದೆ. ಮನೆಗಳಲ್ಲಿ 2 ಕೊಠಡಿಗಳು, ಅಡುಗೆಮನೆ, ಶೌಚಾಲಯ ಒಳಗೊಂಡಿದೆ. ಈ ಫ್ಲಾಟ್‌ಗಳಿಗಾಗಿ 6,000 ಕ್ಕೂ ಹೆಚ್ಚು ಜನರು ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 1,590 ಜನರು ಲಾಟರಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದರು.

    2017ಕ್ಕೂ ಮೊದಲು ಬಡವರು, ಉದ್ಯಮಿಗಳು ಅಥವಾ ಸರ್ಕಾರಿ ಸಂಸ್ಥೆಗಳ ಭೂಮಿಯನ್ನು ಯಾವುದೇ ಮಾಫಿಯಾಗಳು ವಶಪಡಿಸಿಕೊಳ್ಳಬಹುದಾಗಿತ್ತು. ಆ ಕಾಲದಲ್ಲಿ ಬಡವರು ಅಸಹಾಯಕರಾಗಿ ನೋಡುತ್ತಿದ್ದರು. ಇಂದು ನಾವು ಅದೇ ಭೂಮಿಯಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸುತ್ತಿದ್ದೇವೆ. ಈ ಮಾಫಿಯಾಗಳಿಂದ ಭೂಮಿಯನ್ನು ವಶಪಡಿಸಿಕೊಂಡಿರುವುದು ದೊಡ್ಡ ಸಾಧನೆಯಾಗಿದೆ ಎಂದು ಆದಿತ್ಯನಾಥ್ ಸಮಾರಂಭದಲ್ಲಿ ತಿಳಿಸಿದ್ದಾರೆ.

    100 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಅತೀಕ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಈ ವರ್ಷದ ಏಪ್ರಿಲ್‌ನಲ್ಲಿ ಹತ್ಯೆಯಾದರು. ವೈದ್ಯಕೀಯ ತಪಾಸಣೆಗೆಂದು ಪ್ರಯಾಗ್‌ರಾಜ್‌ಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಪತ್ರಕರ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಹತ್ಯೆಯ ವೇಳೆ ಅವರು ಪೊಲೀಸರ ವಶದಲ್ಲೇ ಇದ್ದರು. ಘಟನೆಗೂ ಕೆಲ ದಿನಗಳ ಮುನ್ನ ಅತೀಕ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಇದನ್ನೂ ಓದಿ: ಕೇಂದ್ರದ ಆದೇಶವನ್ನು ಪಾಲಿಸಿ – ಟ್ವಿಟ್ಟರ್‌ ಅರ್ಜಿ ವಜಾ, 50 ಲಕ್ಷ ದಂಡ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 38 ಕೋಟಿ ಮೌಲ್ಯದ ಆಸ್ತಿಯನ್ನು ಶಿಲ್ಪಾ ಶೆಟ್ಟಿಗೆ ವರ್ಗಾಯಿಸಿದ ರಾಜ್ ಕುಂದ್ರಾ

    38 ಕೋಟಿ ಮೌಲ್ಯದ ಆಸ್ತಿಯನ್ನು ಶಿಲ್ಪಾ ಶೆಟ್ಟಿಗೆ ವರ್ಗಾಯಿಸಿದ ರಾಜ್ ಕುಂದ್ರಾ

    ಮುಂಬೈ: ಉದ್ಯಮಿ ರಾಜ್ ಕುಂದ್ರಾ 38.5 ಕೋಟಿ ಮೌಲ್ಯದ 5 ಫ್ಲಾಟ್‌ಗಳನ್ನು ತಮ್ಮ ಪತ್ನಿ ಶಿಲ್ಪಾ ಶೆಟ್ಟಿ ಹೆಸರಿಗೆ ವರ್ಗಾಯಿಸಿದ್ದಾರೆ.

    ಕಳೆದ ವರ್ಷ ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಚಿತ್ರ ನಿರ್ಮಾಣ ಮಾಡಿದ ಆರೋಪದ ಮೇಲೆ ಬಂಧಿಯಾಗಿದ್ದರು. ಈ ಸಂದರ್ಭದಲ್ಲಿ ನಟಿ ಶಿಲ್ಪಾ ಶೆಟ್ಟಿ ತನ್ನ ಕಷ್ಟ ಕಾಲದಲ್ಲಿ ಗೌಪ್ಯತೆಯನ್ನು ಗೌರವಿಸುವಂತೆ ಜನರಲ್ಲಿ ಕೇಳಿಕೊಂಡಿದ್ದರು. ಇದೀಗ 6 ತಿಂಗಳುಗಳ ಬಳಿಕ ರಾಜ್ ಕುಂದ್ರಾ ತಮ್ಮ 38.5 ಕೋಟಿ ಮೌಲ್ಯದ ಆಸ್ತಿಯನ್ನು ಪತ್ನಿ ಹೆಸರಿಗೆ ವರ್ಗಾಯಿಸಿದ್ದಾರೆ. ಇದನ್ನೂ ಓದಿ: ನಾನು ರಾಖಿಯನ್ನು ಈ ಕಾರಣಕ್ಕೆ ಇಷ್ಟಪಡುತ್ತೇನೆ- ಹಾಡಿ ಹೊಗಳಿದ ರಾಜ್ ಕುಂದ್ರಾ

    Squarefeatindia.com (ಸ್ಕ್ವಾರ್‌ಫೀಟ್ ಡಾಟ್ ಕಾಂ)ನ ನೋಂದಣಿ ದಾಖಲೆಗಳ ಪ್ರಕಾರ ಉದ್ಯಮಿ ರಾಜ್ ಕುಂದ್ರಾ ತಮ್ಮ ಪತ್ನಿಯ ಹೆಸರಿಗೆ 38.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬರೆದಿರುವುದಾಗಿ ಉಲ್ಲೇಖವಾಗಿದೆ. ಜುಹುನಲ್ಲಿರುವ ಓಷನ್ ವ್ಯೂ ಹೆಸರಿನ ಕಟ್ಟಡದಲ್ಲಿನ ಒಟ್ಟು 5 ಫ್ಲಾಟ್‌ಗಳನ್ನು ಪತ್ನಿಯ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು Squarefeatindia.com ನ ಸಂಸ್ಥಾಪಕ ವರುಣ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ:  ‘ನಿಮ್ಮ ಶಾಯರಿ ಏಕೆ ಕೆಟ್ಟದಾಗಿದೆ’ – ಟ್ರೋಲಿಗರ ಪ್ರಶ್ನೆಗೆ ಸಾರಾ ಖಡಕ್ ಉತ್ತರ

    ಸದ್ಯ ಹಲವು ಸಿನಿಮಾ ಹಾಗೂ ರಿಯಾಲಿಟಿ ಶೋ ಗಳಲ್ಲಿ ಬ್ಯೂಸಿಯಾಗಿರುವ ಶಿಲ್ಪಾ ಹೊಸದಾಗಿ 38.5 ಕೋಟಿ ಮೌಲ್ಯದ ಆಸ್ತಿಗೆ ಒಡತಿಯಾಗಿದ್ದಾರೆ.

  • ಹೊತ್ತಿ ಉರಿದ ಬೆಂಗಳೂರಿನ ಫ್ಲ್ಯಾಟ್ – ನೋಡನೋಡುತ್ತಲೇ ಮಹಿಳೆ ಸಜೀವ ದಹನ

    ಹೊತ್ತಿ ಉರಿದ ಬೆಂಗಳೂರಿನ ಫ್ಲ್ಯಾಟ್ – ನೋಡನೋಡುತ್ತಲೇ ಮಹಿಳೆ ಸಜೀವ ದಹನ

    ಬೆಂಗಳೂರು: ಸಿಲಿಂಡರ್ ಸ್ಫೋಟವಾಗಿ ಫ್ಲಾಟ್ ಹೊತ್ತು ಉರಿದು ಸಾವು ನೋವು ಸಂಭವಿಸಿರುವ ಘಟನೆ ಬೊಮ್ಮನಹಳ್ಳಿ ಸಮೀಪದ ದೇವರಚಿಕ್ಕನಹಳ್ಳಿ ಬಳಿಯ ಅಪಾರ್ಟ್ಮೆಂಟ್‍ನಲ್ಲಿ ನಡೆದಿದೆ.

    ಆಶ್ರಿತ್ ಅಪಾರ್ಟ್ಮೆಂಟ್‍ನಲ್ಲಿ ಸಿಲಿಂಡರ್ ಸ್ಪೋಟವಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

    ನೋಡನೋಡುತ್ತಲೇ ಮಹಿಳೆಯೊಬ್ಬರು ಸಜೀವ ದಹನವಾಗಿದ್ದಾರೆ. ಗಾಯಗೊಂಡ ಐವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಾರ್ಟ್ಮೆಂಟ್‍ ಒಳಗೆ ಒಬ್ಬರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮೈಕ್ ನಲ್ಲಿ ಆನೌನ್ಸ್ ಮೆಂಟ್ ಮಾಡಿ ಮನೆಯೊಳಗೆ ಯಾರಾದ್ರೂ ಇದ್ದಾರ ಅಂತಾ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ಮಕ್ಕಳ ನಿರ್ಲಕ್ಷ್ಯ- ಬೇಸತ್ತ ವೃದ್ಧ ತಂದೆ, ತಾಯಿ ಆತ್ಮಹತ್ಯೆ

    ಗ್ಯಾಸ್ ಲೈನ್ ಏಕಾಏಕಿ ಬ್ಲಾಸ್ಟ್ ಆಗಿದೆ. ಹೀಗಾಗಿ ಸ್ಫೋಟದ ರಭಸಕ್ಕೆ ಬೆಂಕಿ ಇಡೀ ಅಂತಸ್ತಿಗೆ ವ್ಯಾಪಿಸಿದೆ. ಅಪಾರ್ಟ್ಮೆಂಟ್‍ ಐದು ಅಂತಸ್ತು ಹೊಂದಿದೆ. ಎರಡನೇ ಮಳಿಗೆಯಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿ ಮೂರು ಪ್ಲೋರ್ ಗಳಿಗೆ ಬೆಂಕಿ ವ್ಯಾಪಿಸಿದೆ.

    ಇತ್ತೀಚಿನ ಮಾಹಿತಿ ಪ್ರಕಾರ ತಾಯಿ, ಮಗಳು ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಆರು ಜನರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

  • ಮುಂಬೈನಲ್ಲಿ ಅದ್ದೂರಿ ಫ್ಲಾಟ್ ಖರೀದಿಸಿದ್ರಾ ರಶ್ಮಿಕಾ ಮಂದಣ್ಣ?

    ಮುಂಬೈನಲ್ಲಿ ಅದ್ದೂರಿ ಫ್ಲಾಟ್ ಖರೀದಿಸಿದ್ರಾ ರಶ್ಮಿಕಾ ಮಂದಣ್ಣ?

    ಬೆಂಗಳೂರು: ಸೌತ್ ಸಿನಿ ಇಂಡಸ್ಟ್ರಿಯಾ ಒನ್ ಆಫ್ ದಿ ಮೋಸ್ಟ್ ಬ್ಯುಸಿಯಸ್ಟ್ ನಟಿ ಅಂದರೆ ಅದು ರಶ್ಮಿಕಾ ಮಂದಣ್ಣ. ಪ್ರಸ್ತುತ ಕನ್ನಡ, ತೆಲುಗು, ತಮಿಳು ಮತ್ತು ಬಾಲಿವುಡ್‍ನಲ್ಲಿ ಚಿತ್ರರಂಗದಲ್ಲಿ ಅಭಿನಯಿಸುವ ಮೂಲಕ ರಾಷ್ಟ್ರಾದ್ಯಂತ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ತಮ್ಮ ಮೊದಲ ಬಾಲಿವುಡ್ ಸಿನಿಮಾ ಮಿಷನ್ ಮಜ್ನುಗೆ ನಟ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಬಣ್ಣಹಚ್ಚುತ್ತಿದ್ದಾರೆ ಎಂಬ ಸುದ್ದಿ ಪ್ರಕಟವಾಗಿತ್ತು. ಈಗ ರಶ್ಮಿಕಾ ಕುರಿತಂತೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ.

    ಹೌದು, ನಟಿ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಅದ್ದೂರಿಯಾಗಿರುವ ಫ್ಲಾಟ್ ಖರೀದಿಸಿದ್ದಾರೆ. ಈ ಫ್ಲಾಟ್ ಮುಂಬೈ ಉಪನಗರದಲ್ಲಿದೆ. ರಶ್ಮಿಕಾ ಅಭಿನಯಿಸುತ್ತಿರುವ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಈಗಾಗಲೇ ಮುಂಬೈನಲ್ಲಿ ನಡೆಯುತ್ತಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸುಲಭವಾಗಲೆಂದು ರಶ್ಮಿಕಾ ಮುಂಬೈನಲ್ಲಿ ಫ್ಲಾಟ್ ಖರೀದಿಸಿದ್ದಾರೆ. ಆದರೆ ಈ ಕುರಿತಂತೆ ರಶ್ಮಿಕಾ ಎಲ್ಲಿಯೂ ಇಲ್ಲಿಯವರೆಗೂ ಬಹಿರಂಗ ಪಡಿಸಿಲ್ಲ. ಅಲ್ಲದೆ ರಶ್ಮಿಕಾ ಕೈನಲ್ಲಿ ಹಲವು ಟಾಲಿವುಡ್ ಸಿನಿಮಾಗಳಿದ್ದು, ಹೈದರಾಬಾದ್‍ನಲ್ಲಿ ಕೂಡ ಫ್ಲಾಟ್ ಖರೀದಿಸಿದ್ದಾರೆ.

    ರಶ್ಮಿಕಾ ತಮ್ಮ ಬಾಲಿವುಡ್‍ನ 2ನೇ ಸಿನಿಮಾಕ್ಕೂ ಕೂಡ ಸಹಿ ಹಾಕಿದ್ದು, ಬಿಗ್ ಬಿ ಅಮಿತಾ ಬಚ್ಚನ್ ಜೊತೆ ಅಭಿನಯಿಸಲಿದ್ದಾರೆ. ಈ ಸಿನಿಮಾಕ್ಕೆ ಕ್ವೀನ್ ಸಿನಿಮಾದ ನಿರ್ದೇಶಕ ವಿಕಾಸ್ ಬಹ್ಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ತಂದೆ ಮಗಳ ಸಂಬಂಧವನ್ನು ಆಧಾರಿಸಿದ ಹಾಸ್ಯಮಯವಾದ ಕಥೆಯನ್ನು ಸಿನಿಮಾ ಹೊಂದಿದೆ ಎಂದು ಹೇಳಲಾಗುತ್ತಿದೆ.

    ಟಾಲಿವುಡ್‍ನಲ್ಲಿ ರಶ್ಮಿಕಾ ಮಂದಣ್ಣ ನಟ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾ ತೆಲಗು, ತಮಿಳು, ಮಲೆಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಗೊಳ್ಳಲಿದೆ. ಅಲ್ಲದೆ ಕಾಲಿವುಡ್‍ನಲ್ಲಿ ನಟ ಕಾರ್ತಿಕ್ ಜೊತೆ ಕೂಡ ಸುಲ್ತಾನ್ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಕನ್ನಡದಲ್ಲಿ ನಟ ಧ್ರುವ ಸರ್ಜಾ ಜೊತೆ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದ ಪೊಗರು ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.

  • ಏಷ್ಯಾದ ಅತ್ಯಂತ ದುಬಾರಿ ಫ್ಲ್ಯಾಟ್ ಸೇಲ್ – ಬೆಲೆ ಎಷ್ಟು ಗೊತ್ತಾ?

    ಏಷ್ಯಾದ ಅತ್ಯಂತ ದುಬಾರಿ ಫ್ಲ್ಯಾಟ್ ಸೇಲ್ – ಬೆಲೆ ಎಷ್ಟು ಗೊತ್ತಾ?

    ಹಾಂಕಾಂಗ್: ಏಷ್ಯಾದ ಅತ್ಯಂತ ದುಬಾರಿ ಫ್ಲ್ಯಾಟ್ 59 ದಶಲಕ್ಷ ಡಾಲರ್ ಗೆ(429 ಕೋಟಿ ರೂ.) ಮಾರಾಟವಾಗುವುದರ ಮೂಲಕ ದಾಖಲೆ ನಿರ್ಮಿಸಿದೆ.

    ಹಾಂಕಾಂಗ್ ಉದ್ಯಮಿ ವಿಕ್ಟರ್ ಲಿ ಅವರ ಸಿಕೆ ಅಸೆಟ್ ಹೋಲ್ಡಿಂಗ್ಸ್ ಒಡೆತನದ ಅಪಾರ್ಟ್‍ಮೆಂಟ್ ಅನ್ನು ಅನಾಮಿಕ ವ್ಯಕ್ತಿಯೊಬ್ಬರು ಇಷ್ಟೊಂದು ದುಬಾರಿ ಬೆಲೆ ನೀಡಿ ಖರೀದಿಸಿದ್ದಾರೆ.

    ಈ ಕಟ್ಟಡದ ಒಂದು ಚದರ ಅಡಿ ಜಾಗದ ಬೆಲೆ 17,500 ಡಾಲರ್ (12.70 ಲಕ್ಷ ರೂ.) ಇದೆ. 23 ಮಹಡಿಯಲ್ಲಿರುವ ಈ ಫ್ಲ್ಯಾಟ್ 3,378 ಚದರ ಅಡಿಯನ್ನು ಹೊಂದಿದೆ. ಇದರಲ್ಲಿ 5 ಬೆಡ್ ರೂಂ, ಒಂದು ಈಜು ಕೊಳ, ಖಾಸಗಿ ಟೆರೆಸ್, ಮತ್ತು ವಾಹನ ನಿಲುಗಡೆಗಾಗಿ ಮೂರು ಪಾರ್ಕಿಂಗ್ ಜಾಗ ಮೀಸಲಿಡಲಾಗಿದೆ.

    ಹಾಂಕಾಂಗ್‍ನಲ್ಲಿ ಹಲವು ದುಬಾರಿ ಕಟ್ಟಡಗಳಿದ್ದು, ಶ್ರೀಮಂತ ಉದ್ಯಮಿಗಳು ಈ ಅಪಾರ್ಟ್‍ಮೆಂಟ್‍ನ ಒಡೆಯರಾಗಿದ್ದಾರೆ. 2019ರಲ್ಲಿ ಸಿಬಿಆರ್‍ಇ  ನಡೆಸಿದ ಸರ್ವೇ ಪ್ರಕಾರ ಹಾಂಕಾಂಗ್ ವಿಶ್ವದ ದುಬಾರಿ ಪಟ್ಟಣಗಳಲ್ಲಿ ಒಂದಾಗಿದೆ.

  • ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ – ಖ್ಯಾತ ನಟ ಸೇರಿ 12 ಮಂದಿ ಅರೆಸ್ಟ್

    ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ – ಖ್ಯಾತ ನಟ ಸೇರಿ 12 ಮಂದಿ ಅರೆಸ್ಟ್

    ಚೆನ್ನೈ: ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್‍ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಮನೆಯಲ್ಲಿಯೇ ಜೂಜಾಟ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದ ಖ್ಯಾತ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

    ಖ್ಯಾತ ನಟ ಶ್ಯಾಮ್ ನುಂಗಂಬಕ್ಕಂ ಪ್ರದೇಶದ ಸಮೀಪವಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ ಆಡುತ್ತಿದ್ದರು. ಅಲ್ಲದೇ ಈ ಜೂಜಾಟದಲ್ಲಿ ತಮಿಳು ನಟರೊಬ್ಬರು ಹಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ನಟನ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿದ್ದಾರೆ. ಆಗ ಪೊಲೀಸರು ನಟ ಶ್ಯಾಮ್ ಸೇರಿದಂತೆ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಲಾಕ್‍ಡೌನ್ ನಡುವೆಯೂ ತಡರಾತ್ರಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಫ್ಲ್ಯಾಟ್‍ನಿಂದ ಜೂಜಾಟಕ್ಕೆ ಬಳಸಿದ ಟೋಕನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯಕ್ಕೆ ನಟ ಶ್ಯಾಮ್ ಮತ್ತು ಇತರ 11 ಮಂದಿಯನ್ನು ಬಂಧಿಸಲಾಗಿದೆ. ಟೋಕನ್‍ಗಳ ಬಳಕೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಈ ಜೂಜಾಟದಲ್ಲಿ ಹಣದ ರೂಪದಲ್ಲಿ ಟೋಕನ್ ಗಳನ್ನು ಬಳಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಆನ್‍ಲೈನ್ ಜೂಜಾಟದಲ್ಲಿ ಸುಮಾರು 20 ಸಾವಿರ ಹಣವನ್ನು ಕಳೆದುಕೊಂಡಿದ್ದನು. ಇದೇ ಖಿನ್ನತೆಯಲ್ಲಿ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದನು. ಈ ಘಟನೆ ಬಳಿಕ ತಮಿಳುನಾಡಿನಲ್ಲಿ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಕೆಲಸವಿಲ್ಲದ ಕಾರಣ ಯುವಕರು ಆನ್‍ಲೈನ್ ಮೂಲಕ ಜೂಜಾಟ ಆಟವಾಡುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಹೀಗಾಗಿ ಅನೇಕ ಆನ್‍ಲೈನ್ ಗೇಮ್‍ಗಳ ನಿಯಂತ್ರಣಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಪುಗಳೇಂದಿ ಹೇಳಿದ್ದಾರೆ. ಅಲ್ಲದೇ ಕೆಲವು ಆನ್‍ಲೈನ್ ಗೇಮ್‍ಗಳ ಪಟ್ಟಿಯನ್ನು ಕೂಡ ಮಾಡಿದ್ದಾರೆ.

  • ಬಾಲ್ಕನಿಯಿಂದ ಫ್ಲಾಟ್‍ಗೆ ನುಗ್ಗಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಅತ್ಯಾಚಾರ

    ಬಾಲ್ಕನಿಯಿಂದ ಫ್ಲಾಟ್‍ಗೆ ನುಗ್ಗಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಅತ್ಯಾಚಾರ

    – ಸೆಕೆ ಎಂದು ಬಾಲ್ಕನಿ ಬಾಗಿಲು ತೆರೆದಿದ್ದೇ ತಪ್ಪಾಯ್ತು
    – ಲಾಕ್‍ಡೌನ್‍ನಿಂದ ರಾಜಸ್ಥಾನದಲ್ಲಿ ಪತಿ ಲಾಕ್

    ಭೋಪಾಲ್: ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್‍ ಆಗಿದೆ. ಈ ಮಧ್ಯೆ ಅಪರಿಚಿತ ವ್ಯಕ್ತಿಯೊಬ್ಬ ಫ್ಲಾಟ್‍ಗೆ ನುಗ್ಗಿ ದೃಷ್ಟಿ ವಿಶೇಷ ಚೇತನ ಬ್ಯಾಂಕ್ ವ್ಯವಸ್ಥಾಪಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಶಹಪುರ ಪ್ರದೇಶದಲ್ಲಿ ನಡೆದಿದೆ.

    53 ವರ್ಷದ ಬ್ಯಾಂಕ್ ವ್ಯವಸ್ಥಾಪಕಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ. ದೃಷ್ಟಿ ವಿಶೇಷ ಚೇತನ ಸಂತ್ರಸ್ತೆ ಕಳೆದ ಕೆಲವು ದಿನಗಳಿಂದ ಫ್ಲಾಟ್‍ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು.

    ಸಂತ್ರಸ್ತೆಯ ಪತಿ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ತನ್ನ ಗ್ರಾಮಕ್ಕೆ ಹೋಗಿದ್ದರು. ಆದರೆ ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಪತಿ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಹೀಗಾಗಿ ಸಂತ್ರಸ್ತೆ ಮೂರು ಮಹಡಿಯನ್ನು ಹೊಂದಿರುವ ಫ್ಲಾಟ್‍ನಲ್ಲಿ ಎರಡನೇ ಮಹಡಿಯಲ್ಲಿ ಒಬ್ಬರೇ ವಾಸಿಸುತ್ತಿದ್ದರು.

    ಶುಕ್ರವಾರ ಮುಂಜಾನೆ ಮಹಿಳೆ ತುಂಬಾ ಸೆಕೆಯಾಗುತ್ತಿದೆ ಎಂದು ಬಾಲ್ಕನಿಯ ಬಾಗಿಲುಗಳನ್ನು ತೆರೆದಿಟ್ಟು ಮಲಗಿದ್ದರು. ಈ ವೇಳೆ ಶಂಕಿತ ಮೆಟ್ಟಿಲಿನಿಂದ ಎರಡನೇ ಮಹಡಿಗೆ ನಡೆದುಕೊಂಡು ಹೋಗಿದ್ದು, ಅಲ್ಲಿ ಬಾಗಿಲು ತೆರೆದಿದ್ದ ಬಾಲ್ಕನಿಯಿಂದ ಫ್ಲಾಟ್‍ಗೆ ನುಗ್ಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಸಾಹು ತಿಳಿಸಿದ್ದಾರೆ.

    ನಂತರ ಆರೋಪಿ ಫ್ಲಾಟ್ ಬಾಗಿಲು ಲಾಕ್ ಮಾಡಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಸಂತ್ರಸ್ತೆಯ ಫೋನ್ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸಂತ್ರಸ್ತೆ ಕಿರುಚಿಕೊಂಡಿದ್ದಾರೆ. ತಕ್ಷಣ ನೆರೆಯವರು ಬಂದು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ನಟಿ ದೀಪಿಕಾ ವಾಸವಿರುವ ಫ್ಲಾಟ್‍ನ ಅಪಾರ್ಟ್ ಮೆಂಟ್‍ನಲ್ಲಿ ಅಗ್ನಿ ಅವಘಡ

    ನಟಿ ದೀಪಿಕಾ ವಾಸವಿರುವ ಫ್ಲಾಟ್‍ನ ಅಪಾರ್ಟ್ ಮೆಂಟ್‍ನಲ್ಲಿ ಅಗ್ನಿ ಅವಘಡ

    ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ವಾಸವಿರುವ ಫ್ಲಾಟ್‍ನ ಹೈ ರೈಸ್‍ನಲ್ಲಿ ಅಗ್ನಿ ಕಾಣಿಸಿಕೊಂಡಿದೆ. ಮುಂಬೈನ ವರ್ಲಿಯಲ್ಲಿರುವ ಅಪಾರ್ಟ್ ಮೆಂಟ್‍ನ ಹೈ ರೈಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

    ದೀಪಿಕಾ ವಾಸವಿರುವ ಅಪಾರ್ಟ್‍ಮೆಂಟ್‍ನಲ್ಲಿ 90ಕ್ಕೂ ಹೆಚ್ಚು ಕುಟುಂಬ ವಾಸವಿದ್ದು, ಎಲ್ಲರನ್ನು ರಕ್ಷಿಸಲಾಗಿದೆ. ಈ ಅವಘಡದಲ್ಲಿ ಯಾರಿಗೂ ಯಾವುದೇ ರೀತಿ ಗಾಯಗಳಾಗಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

    ಮಧ್ಯಾಹ್ನ ಸುಮಾರು 2ಗಂಟೆಗೆ, 33ನೇ ಮಹಡಿಯ ಮೇಲಿರುವ ಎರಡೂ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 5 ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಸದ್ಯ ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

    ಈ ಹಿಂದೆ ಅಕ್ಟೋಬರ್ ತಿಂಗಳಲ್ಲಿ ಬಾಂದ್ರಾದ ಲೀ ಮರ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆ ಕಟ್ಟಡದಲ್ಲಿ ಹಲವು ಸೆಲೆಬ್ರಿಟಿಗಳು ವಾಸವಿದ್ದು, ನಟಿ ಐಶ್ವರ್ಯ ರೈ ಬಚ್ಚನ್ ಅವರ ತಾಯಿ ಕೂಡ ಅದೇ ಅಪಾರ್ಟ್ ಮೆಂಟ್‍ನಲ್ಲಿ ವಾಸವಿದ್ದರು.

  • ಹುತಾತ್ಮ ಯೋಧರ ಕುಟುಂಬಕ್ಕೆ 25 ಫ್ಲಾಟ್‍ಗಳನ್ನು ನೀಡಿದ ನಟ ವಿವೇಕ್ ಒಬೆರಾಯ್!

    ಹುತಾತ್ಮ ಯೋಧರ ಕುಟುಂಬಕ್ಕೆ 25 ಫ್ಲಾಟ್‍ಗಳನ್ನು ನೀಡಿದ ನಟ ವಿವೇಕ್ ಒಬೆರಾಯ್!

    ಥಾಣೆ: ಬಾಲಿವುಡ್ ನಟ ವಿವೇಕ್ ಓಬೆರಾಯ್ ಅವರ ಕರ್ಮ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಹುತಾತ್ಮ ಸಿಆರ್‍ಪಿಎಫ್ ಯೋಧರ ಕುಟುಂಬಸ್ಥರಿಗೆ 25  ಫ್ಲಾಟ್‍ ಗಳನ್ನು ನೀಡಿದೆ.

    ಈ ಬಗ್ಗೆ ಕಂಪನಿ ವತಿಯಿಂದ ಹುತಾತ್ಮ ಯೋಧರ ಸಂಬಂಧಿಕರಿಗೆ ಪತ್ರ ಬರೆಯಲಾಗಿದೆ. ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಯೋಧರ ಕುಟುಂಬಸ್ಥರಿಗೆ  ಫ್ಲಾಟ್‍ ಗಳನ್ನು ನೀಡುವುದಾಗಿ ಪತ್ರದಲ್ಲಿ ಹೇಳಲಾಗಿದೆ. ಇದರಲ್ಲಿ 4 ಫ್ಲಾಟ್‍ಗಳನ್ನು ಈಗಾಗಲೇ ಯೋಧರ ಕುಟುಂಬಕ್ಕೆ ನೀಡಿರುವುದಾಗಿ ವರದಿಯಾಗಿದೆ.

    ಫ್ಲಾಟ್ ನೀಡಲಾಗಿರುವ ಯೋಧರ ಕುಟುಂಬಗಳ ಪಟ್ಟಿಯನ್ನು ಸಂಸ್ಥೆ ಬಿಡುಗಡೆ ಮಾಡಿದ್ದು, ಉಳಿದ ಯೋಧರ ಕುಟುಂಬಕ್ಕೆ ಶೀಘ್ರದಲ್ಲಿಯೇ ಫ್ಲಾಟ್‍ಗಳನ್ನು ಹಸ್ತಾಂತರ ಮಾಡಲಾಗುತ್ತದೆ ಎನ್ನಲಾಗಿದೆ.

    ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ 12 ಹುತಾತ್ಮ ಯೋಧರ ಕುಟುಂಬಸ್ಥರಿಗೆ ರೂ.1.08 ಕೋಟಿ ರೂ. ನೆರವು ನೀಡಿದ್ದರು.

    2017ರ ಮಾರ್ಚ್ 11 ರಂದು ಛತ್ತೀಸ್‍ಘಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ದಾಳಿಗೆ 219 ಬೆಟಾಲಿಯನ್‍ಗೆ ಸೇರಿದ ಸುಮಾರು 25 ಮಂದಿ ಯೋಧರು ಹುತಾತ್ಮರಾಗಿದ್ದರು.