Tag: ಫ್ಲವರ್ ಶೋ

  • ಲಾಲ್‌ಬಾಗ್‌ನಲ್ಲಿ 218ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ

    ಲಾಲ್‌ಬಾಗ್‌ನಲ್ಲಿ 218ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ

    – ಆಗಸ್ಟ್ 18ರವರೆಗೆ ನಡೆಯಲಿರುವ ಫ್ಲವರ್ ಶೋ
    – ಫಲಪುಷ್ಪಗಳಲ್ಲಿ ಅನಾವರಣಗೊಂಡ ಸ್ವಾತಂತ್ರ‍್ಯ ವೀರರ ಜೀವನ ಚರಿತ್ರೆ

    ಬೆಂಗಳೂರು: ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆ ಲಾಲ್‌ಬಾಗ್‌ನಲ್ಲಿ ನಡೆಯಲಿರುವ 218ನೇ ಫಲಪುಷ್ಪ ಪ್ರದರ್ಶನಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ.

    ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು 218ನೇ ವರ್ಷದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನವಾಗಿದೆ. ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಿಗೆ ಗೌರವ ಸಲ್ಲಿಸುವ ಕೆಲಸ ಆಗಿದೆ ಎಂದಿದ್ದಾರೆ. ಇದನ್ನೂ ಓದಿ: ‘ಮಾವೀರ’ನಾಗಿ ಎಂಟ್ರಿ ಕೊಟ್ಟ ಸು ಫ್ರಂ ಸೋ ಕರುಣಾಕರ ಗುರೂಜಿ

    ಕಿತ್ತೂರು ರಾಣಿ ಚೆನ್ನಮ್ಮಗೆ ಬ್ರಿಟಿಷರ ವಿರುದ್ಧ ಮೊದಲನೇ ಯುದ್ಧಗಳಲ್ಲಿ ಜಯ ಸಿಕ್ತು. ಎರಡನೇ ಯುದ್ಧದಲ್ಲಿ ಚೆನ್ನಮ್ಮನ ಸೆರೆಯಾಯಿತು. ಚೆನ್ನಮ್ಮನ ಬಲಗೈ ಬಂಟನಾಗಿದ್ದ ರಾಯಣ್ಣನಿಗೆ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆ ಆಯಿತು. ರಾಯಣ್ಣ ಹುಟ್ಟಿದ್ದು ಸ್ವಾತಂತ್ರ‍್ಯ ಸಿಕ್ಕ ದಿನವಾದರೆ, ಗಲ್ಲು ಶಿಕ್ಷೆ ಆಗಿದ್ದು ಗಣರಾಜ್ಯದ ದಿನ. ಇದು ಕಾಕತಾಳೀಯ ಅಂತಾನೇ ಎನ್ನಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಮೇಲೆ ದಾಳಿ ಮಾಡಿ – ಪಾಕ್ ಸೇನಾ ಮುಖ್ಯಸ್ಥನಿಗೆ ಬೆಂಗಳೂರಿನ ಅಲ್‌ಖೈದಾ ಭಯೋತ್ಪಾದಕಿ ಮನವಿ

    ಬ್ರಿಟಿಷರ ವಿರುದ್ಧ ರಾಯಣ್ಣ ವೀರಾವೇಶದಿಂದ ಹೋರಾಡಿದ್ದರು. ಬ್ರಿಟಿಷರನ್ನು ಸೋಲಿಸಿ 200 ವರ್ಷ ಆಯಿತು. ರಾಯಣ್ಣ ಹಿಂದುಳಿದ ಜಾತಿಗೆ ಸೇರಿದವರು, ಎಲ್ಲಾ ಸೈನ್ಯದಲ್ಲಿ ಎಲ್ಲ ಜಾತಿಯವರಿದ್ದರು. ಜಾತ್ಯಾತೀತರಾಗಿ ಎಲ್ಲರನ್ನೂ ಬಳಸಿಕೊಂಡು ಕಿತ್ತೂರು ಪ್ರಾಂತ್ಯ ಆಳಿದ್ದರು. ಚೆನ್ನಮ್ಮ ವೀರ ಮಹಿಳೆ ಹಾಗೂ ವೀರ ವನಿತೆಯೂ ಹೌದು. ಸರ್ಕಾರದಿಂದ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಆಚರಣೆ ಮಾಡಲಾಗುತ್ತದೆ. ಸಂಗೊಳ್ಳಿ ರಾಜಣ್ಣ ಅವರ ಪ್ರಾಧಿಕಾರ ಮಾಡಿದ್ದೇವೆ ಎಂದಿದ್ದಾರೆ.

    ಇಂದು ಈ ವೀರರನ್ನ ಸ್ಮರಿಸಬೇಕು. ತೋಟಗಾರಿಕೆ ಇಲಾಖೆಯಿಂದ ಇಂದು ಸ್ವಾತಂತ್ರ‍್ಯ ವೀರರಿಗೆ ಗೌರವ ಸಲ್ಲಿಸಲಾಗಿದೆ. ದೇಶಕ್ಕಾಗಿ ಹೋರಾಡಿದವರನ್ನ ನಾವೆಲ್ಲರೂ ಸ್ಮರಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ:  6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಜಾರಿ – ಭಾರೀ ಮಳೆಯಾಗುವ ಸಾಧ್ಯತೆ

    ಬಳಿಕ ಸಿಎಂ ಸಿದ್ದರಾಮಯ್ಯ ಅವರು ಫ್ಲವರ್ ಶೋ ವೀಕ್ಷಣೆ ಮಾಡಿದರು. ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್, ತೋಟಗಾರಿಕೆ ಇಲಾಖೆಯ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹಾಗೂ ಮತ್ತಿತ್ತರು ಸಾಥ್ ನೀಡಿದರು.

    ಆ.18ರವರೆಗೆ ನಡೆಯಲಿದೆ ಫ್ಲವರ್ ಶೋ
    ಇಂದಿನಿಂದ (ಆ.7) ಆಗಸ್ಟ್ 18ರವರೆಗೆ ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ ನಡೆಯಲಿದ್ದು, ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಪುಷ್ಪಮೇಳ ನಡೆಯುತ್ತಿದೆ. ಸ್ವಾತಂತ್ರ‍್ಯ ವೀರರ ಜೀವನ ಚರಿತ್ರೆ ಫಲಪುಷ್ಪಗಳಲ್ಲಿ ಅನಾವರಣಗೊಂಡಿದೆ. 18 ಅಡಿ ಎತ್ತರ, 32 ಅಡಿ ಅಗಲದ ಕಿತ್ತೂರು ಕೋಟೆಯ ಮಾದರಿಯಲ್ಲಿ ನಿರ್ಮಾಣವಾಗಿದೆ. ಅದರ ಒಳಭಾಗದಲ್ಲಿ ಫಲಪುಷ್ಪಗಳ ಮೂಲಕ ಹೋರಾಟದ ಸ್ಮರಣೆ ಮಾಡಲಾಗಿದೆ. ಇದನ್ನೂ ಓದಿ: ಟ್ರಂಪ್‌ ಬೆದರಿಕೆಗೆ ಜಗ್ಗದ ಭಾರತ – ರಷ್ಯಾದ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ

    ರಾಣಿ ಅಬ್ಬಕ್ಕದೇವಿ, ರಾಣಿ ಚೆನ್ನಭೈರಾದೇವಿ, ರಾಣಿ ಬೆಳವಾಡಿ ಮಲ್ಲಮ್ಮ, ರಾಣಿ ಕೆಳದಿ ಚೆನ್ನಮ್ಮ, ಒನಕೆ ಓಬವ್ವ ಅವರ ಹೂವಿನ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಆ.7ರಿಂದ ಹನ್ನೊಂದು ದಿನಗಳವರೆಗೆ ಫ್ಲವರ್ ಶೋ ನಡೆಯಲಿದೆ.

    ಪ್ರವೇಶ ಶುಲ್ಕ ಎಷ್ಟು?
    ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80 ರೂ., ಮಕ್ಕಳಿಗೆ 30 ರೂ. ಹಾಗೂ ಶನಿವಾರ, ಭಾನುವಾರ ರಜಾದಿನಗಳಲ್ಲಿ ವಯಸ್ಕರಿಗೆ 100 ರೂ., ಮಕ್ಕಳಿಗೆ 30 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.

  • ಲಾಲ್‍ಬಾಗ್ ಫ್ಲವರ್ ಶೋಗೆ ಜನಸಾಗರ- ಹೂವುಗಳಿಂದ ಕೆಂಗಲ್ ಹನುಮಂತಯ್ಯರ ಇತಿಹಾಸ ಅನಾವರಣ

    ಲಾಲ್‍ಬಾಗ್ ಫ್ಲವರ್ ಶೋಗೆ ಜನಸಾಗರ- ಹೂವುಗಳಿಂದ ಕೆಂಗಲ್ ಹನುಮಂತಯ್ಯರ ಇತಿಹಾಸ ಅನಾವರಣ

    ಬೆಂಗಳೂರು: ಸಸ್ಯಕಾಶಿ ಲಾಲ್ ಬಾಗ್ (Lalbagh) ನಲ್ಲಿ ಶುಕ್ರವಾರದಿಂದ ಫ್ಲವರ್ ಶೋ ಆರಂಭವಾಗಿದ್ದು, ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು. ಇಂದಿನಿಂದ ಸಾರ್ಜಜನಿಕರಿಗೆ ಫಲಪುಷ್ಟ ಪರ್ದಶನದ ವೀಕ್ಷಣೆಗೆ ಅವಕಾಶ ಕಲ್ಪಸಲಾಗಿದ್ದು, ವೀಕ್ ಎಂಡ್ ಆಗಿರೋದ್ರಿಂದ ಜನಸಾಗರವೇ ಇಂದು ಫ್ಲವರ್ ಶೋಗೆ (Flower Show) ಬಂದಿತ್ತು.

    ಹೂಗಳಿಂದ ನಿರ್ಮಾಣವಾಗಿರುವ ವಿಧಾನಸೌಧ (Vidhanasoudha), ಕೆಂಗಲ್ ಹನುಮಂತಯ್ಯನವರ ಪ್ರತಿಮೆ, ಸತ್ಯಾಗ್ರಹ ಮಂಟಪ ಇದೆಲ್ಲವೂ ಕಂಡು ಬಂದಿದ್ದು, ಲಾಲ್‍ಬಾಗ್‍ನಾ ಫ್ಲವರ್ ಶೋನಲ್ಲಿ. ಹೌದು, ಸಸ್ಯಕಾಶಿ ಇಂದಿನಿಂದ 214ನೇ ಫ್ಲವರ್ ಶೋ ಆರಂಭವಾಗಿದ್ದು, ಈ ಹೂವಿನ ಲೋಕಕ್ಕೆ ಜನಸಾಗರವೇ ಹರಿದು ಬಂದಿತ್ತು. ಸೆಲ್ಫಿ ತೆಗೆದುಕೊಂಡು ಖುಷಿ ಪಟ್ರು.

    ಹೂವಿನ ಕಲೆಯ ಕಲಾವಿದರಿಗಾಗಿಯೇ ಇಲ್ಲಿ ಇಕೆಬಾನೆ ಮತ್ತು ಕಲೆಗಳ ಸರ್ಧೆಯನ್ನ ಆಯೋಜನೆ ಮಾಡಲಾಗಿತ್ತು. ನಟಿ, ಕಾಂಗ್ರೆಸ್ ನಾಯಕಿ ಉಮಶ್ರೀ ಮತ್ತು ಹೈಕೋರ್ಟ್ ನ್ಯಾಯಮೂರ್ತಿ ಸಂದೀಪ್, ಕೆಂಗಲ್ ಹನುಮಂತಯ್ಯ ಅವ್ರ ಪುತ್ರಿ ಭೇಟಿ ನೀಡಿ ಸಂಭ್ರಮಿಸಿದ್ರು. ಇದನ್ನೂ ಓದಿ: ಮನೆ ಮುಂದೆ ಹೆಚ್ಚಿದ ಕಾರ್ ಪಾರ್ಕಿಂಗ್ – ಸಿಎಂ ನಿವಾಸದ ಎದುರು ಮನೆ ವ್ಯಕ್ತಿ ರಂಪಾಟ

    ಇಂದು ಸರಿಸುಮಾರು 60 ಸಾವಿರಕ್ಕು ಅಧಿಕ ಜನರು ಪ್ಲವರ್ ಶೋ ವೀಕ್ಷಣೆ ಮಾಡಿದ್ದಾರೆ. ಇನ್ನೂ ಆಗಸ್ಟ್ 15 ರವರೆಗೆ ನಡೆಯಲಿರೋ ಈ ಶೋಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಬರುವ ನಿರೀಕ್ಷೆಯಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶುಕ್ರವಾರದಿಂದ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ ಆರಂಭ

    ಶುಕ್ರವಾರದಿಂದ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ ಆರಂಭ

    ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತವಾಗಿ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ (Lalbagh) ಆಯೋಜಿಸಲಾಗಿರುವ 214ನೇ ಫ್ಲವರ್ ಶೋ ಶುಕ್ರವಾರದಿಂದ ಆರಂಭವಾಗಲಿದೆ.

    ನಾಳೆ ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಲಾಲ್ ಬಾಗ್ ಶೋ ಉದ್ಘಾಟಿಸಲಿದ್ದಾರೆ. ಆ.4ರಿಂದ ಶುರುವಾಗಿ ಆಗಸ್ಟ್ 15ರ ವರೆಗೆ ಫ್ಲವರ್ ಶೋ ನಡೆಯಲಿದೆ. ಜನರಿಗೆ ಯಾವುದೇ ಸಮಸ್ಯೆಗಳಗಾದಂತೆ ಬಿಗಿ ಬಂದೋಬಸ್ತ್ ಮಾಡಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಸಸ್ಯಕಾಶಿ ಲಾಲ್ ಬಾಗ್‍ನಲ್ಲಿ 76ನೇ ಸ್ವತಂತ್ರ ಮಹೋತ್ಸವದ ಹಿನ್ನೆಲೆಯಲ್ಲಿ 214ನೇ ಫ್ಲವರ್ ಶೋ (Flower Show) ಆಯೋಜನೆ ಮಾಡಲಾಗಿದೆ.

    ವಿಧಾನಸೌಧ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯಲ್ಲಿ ಈ ವರ್ಷದ ಫ್ಲವರ್ ಶೋ ಮೂಡಿ ಬರುತ್ತಿದೆ. ಇನ್ನು ಬರೋಬ್ಬರಿ 2 ಕೋಟಿ ಖರ್ಚು ಮಾಡುತ್ತಿದ್ದು, 69 ಬಗೆಯ ಹೂಗಳು ಈ ಬಾರಿ ಫ್ಲವರ್ ಶೋ ಅಂದವನ್ನ ಹೆಚ್ಚಿಸಲಿವೆ. ಈ ವರ್ಷ 10 ರಿಂದ 12 ಲಕ್ಷದಷ್ಟು ಜನರು ಬರುವ ಸಾಧ್ಯತೆ ಇದೆ. ಫಲಪುಷ್ಪ ಪ್ರದರ್ಶನದಲ್ಲಿ ಹಲವು ಕಲೆಗಳ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಒಟ್ಟು 10 ದಿನಗಳ ಕಾಲ ಫ್ಲವರ್ ಶೋ ಇರಲಿದೆ. ಫ್ಲವರ್ ಶೋಗೆ ಶಾಲಾ ಮಕ್ಕಳಿಗೆ ಫ್ರೀ ಇರಲಿದ್ದು, ಶಾಲಾ ಮಕ್ಕಳಿಗೆ ಕಾಂಪಿಟೇಷನ್ ಆಯೋಜಿಸಲಾಗಿದೆ. ಇದನ್ನೂ ಓದಿ: ಆಯುರ್ವೇದ ಔಷಧಿ ಹೆಸರಿನಲ್ಲಿ ಗಾಂಜಾ ಚಾಕೊಲೇಟ್ ಮಾರಾಟ – ಅಪ್ರಾಪ್ತರನ್ನೇ ಟಾರ್ಗೆಟ್‌ ಮಾಡ್ತಿದ್ದ ಗ್ಯಾಂಗ್‌ ಬಂಧನ

    ಸಾರ್ವಜನಿಕರಿಗೆ ಟ್ರಾಫಿಕ್ ಸಮಸ್ಯೆಯಾಗದಂತೆ ಪಾಕಿರ್ಂಗ್ ವ್ಯವಸ್ಥೆ ಮಾಡಲಾಗಿದ್ದು, ಆದಷ್ಟು ಜನರು ಮೆಟ್ರೋ ಹಾಗೂ ಬಿಎಂಟಿಸಿ ಬಸ್ಸುಗಳಿಂದಲೇ ಬಂದರೆ ಟ್ರಾಫಿಕ್ ಕಡಿಮೆಯಾಗಲಿದೆ ಎಂದು ತೋಟಗಾರಿಕೆ ಇಲಾಖೆ ಮನವಿ ಮಾಡಿದೆ. ಜನರಿಗೆ ಅನುಕೂಲವಾಗುವ ನಿಟ್ಟಿನಿಂದ ಒಟ್ಟು ನಾಲ್ಕೂ ಗೇಟ್ ಗಳಲ್ಲಿ ಜನರಿಗೆ ಎಂಟ್ರಿಗೆ ಅವಕಾಶ ನೀಡಲಾಗಿದೆ. ಫ್ಲವರ್ ಶೋ ಬರುವವರಿಗೆ ಎಂಟ್ರಿ ಫೀಸ್ ದೊಡ್ಡವರಿಗೆ 70 ರೂ. ಹಾಗೂ ಮಕ್ಕಳಿಗೆ 30 ರೂ. ನಿಗದಿ ಮಾಡಿದ್ದು, 200 ಸಿಸಿ ಟಿವಿ ಕ್ಯಾಮರಾಗಳನ್ನ ಅಳವಡಿಕೆ ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣರಾಜ್ಯೋತ್ಸವ ಫ್ಲವರ್ ಶೋ ಉದ್ಘಾಟನೆ- 10 ದಿನ ಜಗಮಗಿಸಲಿದೆ ಲಾಲ್‍ಬಾಗ್

    ಗಣರಾಜ್ಯೋತ್ಸವ ಫ್ಲವರ್ ಶೋ ಉದ್ಘಾಟನೆ- 10 ದಿನ ಜಗಮಗಿಸಲಿದೆ ಲಾಲ್‍ಬಾಗ್

    ಬೆಂಗಳೂರು: 213 ನೇ ಫಲಪುಷ್ಪ ಪ್ರದರ್ಶನ ಇಂದು ಲೋಕಾರ್ಪಣೆಗೊಂಡಿದೆ. ಇಂದಿನಿಂದ ಜನವರಿ 30ರವರೆಗೆ ನಡೆಯಲಿರುವ ಫಲಪುಷ್ಪ (FlowerShow) ಪ್ರದರ್ಶನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವಿದ್ಯುಕ್ತ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಸಿಎಂ, ಇಂದು ಅತ್ಯಂತ ಸಂತೋಷದಿಂದ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಮಾಡಿದ್ದೇನೆ. 10-15 ಲಕ್ಷ ಜನ ಬರೋ ನಿರೀಕ್ಷೆ ಇದೆ. ರಾಜ್ಯದ ಸಸ್ಯಸಂಪತ್ತಿನ ಪ್ರದರ್ಶನ ಆಗ್ತಿದೆ. ರಾಜ್ಯದಲ್ಲಿ ಹಸಿರು ವಿಸ್ತರಣೆಗಾಗಿ 100 ಕೋಟಿ ರೂಪಾಯಿ ಕೊಟ್ಟಿದ್ದೇನೆ ಎಂದರು.

    ರಾಜ್ಯದ ತೋಟಗಾರಿಕೆಯಿಂದ ಹಸಿರು ಹೆಚ್ಚಾಗಿ, ಉತ್ಪಾದನೆ ಹೆಚ್ಚಾಗುತ್ತದೆ. ಬೆಂಗಳೂರು ಗಾರ್ಡನ್ ಸಿಟಿ ಎಂದು ಹೆಸರಾಗಿತ್ತು. ಬೆಂಗಳೂರಿನ ಗಾರ್ಡನ್ ಗಳನ್ನು ಬೆಳೆಸುತ್ತೇವೆ. ಗಾರ್ಡನ್ ಸಿಟಿಯ ಗತವೈಭವ ಮತ್ತೆ ಮರುಕಳಿಸಲಿ ಎಂದು ಹೇಳಿದರು.

    ಈ ಫ್ಲವರ್ ಶೋನಿಂದ ಸಸ್ಯ ಸಂಪತ್ತು ಪ್ರದರ್ಶನ ಆಗುತ್ತಿದೆ. ರಾಜ್ಯಾದ್ಯಂತ ಹಸಿರು ವಿಸ್ತರಣೆ ಆಗಬೇಕಿದೆ. ರಾಜ್ಯದಲ್ಲಿ ಹಸಿರೀಕರಣ ವಿಸ್ತರಣೆಗೆ ಬಜೆಟ್ ನಲ್ಲಿ 100 ಕೋಟಿ ಮೀಸಲಿಡುತ್ತೇವೆ. ಗುಡ್ಡಗಾಡು ಪ್ರದೇಶದಲ್ಲಿ ಹಸಿರು ಸಮೃದ್ಧಿಯಾಗಬೇಕು. ತೋಟಗಾರಿಕೆ ಫಾರ್ಮ್ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ನೀಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

    ಬೆಂಗಳೂರು ಗಾರ್ಡನ್ ಸಿಟಿ (Garden City) ಎಂಬ ಹೆಸರು ಈಗ ಕಡಿಮೆ ಆಗಿದೆ. ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿ ಬಿಬಿಎಂಪಿ ಪಾರ್ಕ್ ಅಭಿವೃದ್ಧಿಗೆ ಒತ್ತು ನೀಡಲಾಗುತ್ತೆ. ನಗರದ ಹೊರವಲಯದಲ್ಲಿ ಗಾರ್ಡನ್ ಗಳ ಅಭಿವೃದ್ಧಿ ಮಾಡಲಾಗುತ್ತದೆ ಎಂದರು. ಇದನ್ನೂ ಓದಿ: ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ಹೆಂಡ ಕುಡಿಯುತ್ತಿದ್ದ ರಾಮ- ಮತ್ತೆ ನಾಲಿಗೆ ಹರಿಬಿಟ್ಟ ಭಗವಾನ್

    ಒಟ್ಟಿನಲ್ಲಿ ಫಲಪುಷ್ಪ ಮೇಳಕ್ಕೆ ಲಾಲ್‍ಬಾಗ್ ಅದ್ಧೂರಿಯಾಗಿ ಸಿದ್ಧಗೊಂಡಿದೆ. ಬೆಂಗಳೂರು ನಗರದ ಚಿತ್ರಣ ಈ ಬಾರಿಯ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಕಂಗೊಳಿಸಲಿದೆ. ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಥೀಮ್ ಬೆಂಗಳೂರು ನಗರದ ಇತಿಹಾಸವಾಗಿದ್ದು, ಲಾಲ್‍ಬಾಗ್‍ನಲ್ಲಿ ಸೃಷ್ಟಿಯಾಗಲಿದೆ. ಮೆಗಾ ಫ್ಲೋರಲ್ ಫ್ಲೋ ಪರಿಕಲ್ಪನೆ ಪುಷ್ಪ ಪಿರಾಮಿಡ್ ಗಳು ಕಂಗೊಳಸಲಿದೆ. ವಿದೇಶದಿಂದಲೂ ವಿವಿಧ ಬಗೆಯ ಹೂಗಳನ್ನ ತರಸಿ ಅಲಂಕಾರ ಮಾಡಲಾಗುತ್ತದೆ.

    ಇದೇ ವೇಳೆ ತೋಟಗಾರಿಕಾ ಸಚಿವ ಮುನಿರತ್ನ (Muniratna), ತೋಟಗಾರಿಕೆ ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್ (K Nagendra Prasad), ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ತೆರೆ- ಅಪ್ಪು ಜಾತ್ರೆ ವೀಕ್ಷಣೆಗೆ ಹರಿದು ಬಂತು ಜನಸಾಗರ

    10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ತೆರೆ- ಅಪ್ಪು ಜಾತ್ರೆ ವೀಕ್ಷಣೆಗೆ ಹರಿದು ಬಂತು ಜನಸಾಗರ

    ಬೆಂಗಳೂರು: ಲಾಲ್ ಬಾಗ್ ನಾ ಫಲಪುಷ್ಪ ಪ್ರದರ್ಶನಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ. ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಗೆ ಅರ್ಪಿಸಿದ್ದ ಫ್ಲವರ್ ಶೋ ವೀಕ್ಷಣೆಗೆ ಜನ ಸಾಗರವೇ ಹರಿದು ಬಂದಿದೆ.

    75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಆಯೋಜನೆ ಮಾಡಿದ್ದ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ತೆರೆ ಬಿದ್ದಿದೆ. ಆಗಸ್ಟ್ 5ರಿಂದ 15ರ ವರೆಗೆ 10 ದಿನಗಳ ಕಾಲ ನಡೆದ ಫ್ಲವರ್ ಶೋಗೆ ಕಡೆಯ ದಿನವಾದ ಸೋಮವಾರ ದಾಖಲೆ ಮಟ್ಟದಲ್ಲಿ ಜನ ಸಾಗರ ಹರಿದು ಬಂದಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈ ‘ಪ್ರಣಯ ಪಕ್ಷಿ’ಗಳದ್ದೇ ಮಾತು

    ಕೊರೋನಾ ಬಳಿಕ ಅದ್ಧೂರಿ ಆಗಿ ನಡೆದ ಮತ್ತು ಅಗಲಿದ ಕನ್ನಡ ನಾಡಿನ ಕರುನಾಡ ರತ್ನಗಳಾದ ಡಾ.ರಾಜ್ ಕುಮಾರ್ ಮತ್ತು ಡಾ.ಪುನೀತ್ ರಾಜ್ ಕುಮಾರ್‍ಗೆ ಈ ಬಾರಿ ಫ್ಲವರ್ ಶೋವನ್ನು ಅರ್ಪಿಸಲಾಗಿತ್ತು. ಹೀಗಾಗಿ ಫ್ಲವರ್ ಶೋ ವೀಕ್ಷಿಸಲು ಕಳೆದ 2 ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಜನಸ್ತೋಮವೇ ಆಗಮಿಸಿ ಹೂವಿನ ಲೋಕವನ್ನು ಕಣ್ತುಂಬಿಕೊಂಡಿದ್ದಾರೆ. ಹೂವಿನ ಲೋಕಕ್ಕೆ ಮರಳಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತೋಷ ಪಟ್ಟಿದ್ದಲ್ಲದೇ, ಕರುನಾಡ ರತ್ನ, ನಗುವಿನ ಒಡೆಯ ಡಾ.ಪುನೀತ್ ರಾಜ್‍ಕುಮಾರ್ ರನ್ನು ಕಂಡು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

    ಕಳೆದ 10 ದಿನಗಳ ಕಾಲ ನಡೆದ ಈ ಪ್ಲವರ್ ಶೋ ವೀಕ್ಷಣೆಗೆ ಸುಮಾರು 10 ಲಕ್ಷ ಕ್ಕೂ ಹೆಚ್ಚು ಜನ ಆಗಮಿಸಿದ್ದಾರಂತೆ. ಇಷ್ಟು ಪ್ರಮಾಣದಲ್ಲಿ ಜನ ಬಂದಿರೋದು ಇದೇ ಮೊದಲು. ಈ ಬಾರಿಯ ಫ್ಲವರ್ ಶೋನಿಂದ ತೋಟಗಾರಿಕೆ ಇಲಾಖೆಗೆ ಬರೋಬ್ಬರಿ 3.36 ಕೋಟಿ ಆದಾಯ ಬಂದಿದೆಯಂತೆ. ಒಟ್ಟಾರೆ 10 ದಿನಗಳ ಫ್ಲವರ್ ಶೋಗೆ ಅದ್ದೂರಿಯಾಗಿ ತೆರೆ ಬಿದ್ದಿದ್ದು ನಗುವಿನ ದೊರೆಗಳಾದ ಡಾ.ರಾಜ್, ಅಪ್ಪುವನ್ನು ಹೂವಿನಲ್ಲಿ ಕಂಡು ಹೂವಿನ ಪ್ರೇಮಿಗಳು ಖುಷಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಾಲ್‍ಬಾಗ್‍ನಲ್ಲಿ ಈಗ ಎಲ್ಲೆಲ್ಲೂ ಅಪ್ಪು – ನಗುವಿನ ಒಡೆಯನನ್ನು ನೋಡಲು ಮುಗಿಬಿದ್ದ ಜನ

    ಲಾಲ್‍ಬಾಗ್‍ನಲ್ಲಿ ಈಗ ಎಲ್ಲೆಲ್ಲೂ ಅಪ್ಪು – ನಗುವಿನ ಒಡೆಯನನ್ನು ನೋಡಲು ಮುಗಿಬಿದ್ದ ಜನ

    ಬೆಂಗಳೂರು: ನಗರದ ಲಾಲ್‍ಬಾಗ್‍ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ 500ಕ್ಕೂ ಹೆಚ್ಚು ಹೂಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅರಳಿ ನಗುತ್ತಿದ್ದಾರೆ. ಈ ನಗುವಿನ ಒಡೆಯನನ್ನು ನೋಡಲು ಜನ ಸಾಗರವೇ ಹರಿದು ಬರುತ್ತಿದೆ.

    75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫಲ ಪುಷ್ಪಪ್ರದರ್ಶನ ಮಾಡಲಾಗುತ್ತಿದೆ. ಈ ಬಾರಿ ಅಪ್ಪು ಮತ್ತು ಡಾ.ರಾಜ್‍ಕುಮಾರ್ ಥೀಮ್‍ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಮೂರನೇ ದಿನವಾದ ಶನಿವಾರದಂದು ರಾಜ್ಯದ ಮೂಲೆ ಮೂಲೆಗಳಿಂದ ಜನ ಸಾಗರವೇ ಹರಿದು ಬಂದಿತ್ತು. ಹೂವಿನಲ್ಲಿ ಅರಳಿದ ಪುನೀತ್ ರಾಜ್ ಕುಮಾರ್ ಅವರನ್ನು ಕಂಡು ಕೆಲವರು ಭಾವುಕರಾದರೆ, ಇನ್ನೂ ಕೆಲವರು ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಮಳೆ ಸಂಭವ – ಉಡುಪಿ, ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್

    ಶನಿವಾರ ಮಳೆಯನ್ನು ಲೆಕ್ಕಿಸದೇ 20 ಸಾವಿರಕ್ಕೂ ಹೆಚ್ಚು ಜನ ಲಾಲ್ ಬಾಗ್‍ಗೆ ಭೇಟಿ ಕೊಟ್ಟು ಸಖತ್ ಎಂಜಾಯ್ ಮಾಡಿದ್ದರು. ಒಟ್ಟು 500 ಬಗೆಯ ವಿವಿಧ ಜಾತಿಯ ಹೂವುಗಳಿಂದ ಹೂವಿನ ಲೋಕವೇ ಅರಳಿದ್ದು, ಆಗಸ್ಟ್ 15ರವರೆಗೆ ಈ ವಿಶೇಷ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು, ಪ್ರವಾಸಿಗರು, ವಿದೇಶಿ ಪ್ರೇಕ್ಷಕರು ಹಾಗೂ ಹೆಚ್ಚಾಗಿ ಶಾಲಾ ಮಕ್ಕಳು ಆಗಮಿಸಿ ಫಲಪುಷ್ಪ ಪ್ರದರ್ಶನದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದ್ದರು. ಇನ್ನೂ ಇಲ್ಲಿನ ಹೂಗಳ ಲೋಕ, ಶಿಸ್ತು, ಸ್ವಚ್ಛತೆ ಹಾಗೂ ತೋಟಗಾರಿಕೆ ಇಲಾಖೆಯ ಈ ವರ್ಷದ ಥೀಮ್ ಕಂಡು ಪ್ರವಾಸಿಗರು ಫುಲ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಅಪ್ಪು ನೆನಪಿನ ಫಲಪುಷ್ಪ ಪ್ರದರ್ಶನ

    ವೀಕೆಂಡ್ ಇದ್ದಿದ್ದರಿದ ಫ್ಲವರ್ ಶೋಗೆ ಹೆಚ್ಚಿನ ಜನ ಲಾಲ್‍ಬಾಗ್‍ಗೆ ಆಗಮಿಸಿದ್ದರು. ವಿವಿಧ ಜಾತಿಯ ಹಳದಿ, ಪಿಂಕ್ ಶೇಡ್‍ನಲ್ಲಿ ಹೂಗಳು ಕಂಗೊಳಿಸುತ್ತಿದ್ದವು. ಹಚ್ಚ ಹಸಿರಿನಿಂದ ಸೌಂದರ್ಯವನೆಲ್ಲಾ ತಮ್ಮ ಬಳಿಯೇ ಇರಿಸಿಕೊಂಡಿರುವ ಸುಂದರ ಗಿಡಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿತ್ತು. ಲಾಲ್‍ಬಾಗ್‍ನಲ್ಲಿರುವ ಈ ಹೂವುಗಳಿಗೆ ಮನಸೋತ ಜನ ಫೋಟೋಗಳನ್ನ ಕ್ಲಿಕ್ಕಿಸಿಕೊಳ್ಳುವ ದೃಶ್ಯಗಳು ಸಾಮಾನ್ಯವಾಗಿದ್ದವು.

    Live Tv
    [brid partner=56869869 player=32851 video=960834 autoplay=true]

  • ನಟ ದಿ. ಪುನೀತ್ ಹೆಸರಲ್ಲಿ ಆಗಸ್ಟ್ 5ರಿಂದ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ: ಮುನಿರತ್ನ

    ನಟ ದಿ. ಪುನೀತ್ ಹೆಸರಲ್ಲಿ ಆಗಸ್ಟ್ 5ರಿಂದ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ: ಮುನಿರತ್ನ

    ಬೆಂಗಳೂರು: ಈ ವರ್ಷ ಬೆಂಗಳೂರಿನ ಲಾಲ್‍ಬಾಗ್ ನಲ್ಲಿ ಫ್ಲವರ್ ಶೋ ನಡೆಯಲಿದೆ. ಆಗಸ್ಟ್ 5 ರಿಂದ 15 ರವರೆಗೆ ಫ್ಲವರ್ ಶೋ ನಡೆಯಲಿದ್ದು, ಆ.5ರಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದ್ದಾರೆ.

    ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಫ್ಲವರ್ ಶೋ ನಡೆಯಲಿದೆ. ಆಗಸ್ಟ್ 15ರ ಬಳಿಕ ಒಂದೆರಡು ದಿನಗಳ ಕಾಲ ಮುಂದುವರಿಸುವ ಬಗ್ಗೆ ಚರ್ಚೆ ನಡೆದಿದೆ. ದಿ. ನಟ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ನಡೆಯುತ್ತಿರುವ ಈ ಬಾರಿಯ ಫ್ಲವರ್ ಶೋಗೆ ವಿದೇಶಗಳಿಂದಲೂ ಹೂವುಗಳನ್ನು ತರಿಸಲಾಗಿದೆ ಎಂದರು. ಇದನ್ನೂ ಓದಿ: ಕುದುರೆ ಏರಿ ಫುಡ್ ಡೆಲಿವರಿ ಮಾಡಿದ ವ್ಯಕ್ತಿ ಪತ್ತೆ- ಆದರೆ ಈತ ಸ್ವಿಗ್ಗಿ ಉದ್ಯೋಗಿಯಲ್ಲ!

    ರಾಜ್ಯದಲ್ಲಿ ಮಳೆಯಿಂದ ತೋಟಗಾರಿಕೆ ಬೆಳೆ ನಷ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಂಪೂರ್ಣ ವರದಿ ಅಧಿಕಾರಿಗಳು ತರಿಸುತ್ತಿದ್ದಾರೆ. ವರದಿ ಬಳಿಕ ರೈತರಿಗೆ ಮಾಡಬೇಕಿರುವ ಸಹಾಯವನ್ನು ಖಂಡಿತವಾಗಿಯೂ ಮಾಡುತ್ತೇವೆ. ಏನೇನು ನಷ್ಟ ಉಂಟಾಗಿದೆಯೋ ಅದನ್ನು ಗಮನಿಸುತ್ತೇವೆ. ಪ್ರಾಮಾಣಿಕವಾಗಿ ನಾವು ರೈತರ ಜೊತೆ ಇದ್ದೇವೆ ಎಂದು ತಿಳಿಸಿದರು.

    ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಪುನೀತ್ ಹಾಗೂ ಗಾಜನೂರಿನ ಮನೆ ವಿಶೇಷವಾಗಿದೆ. ಲಾಲ್‍ಬಾಗ್ ಫ್ಲವರ್ ಶೋ ಕೋವಿಡ್‍ನಿಂದ ಕಾರ್ಯಕ್ರಮ ಮಾಡಿರಲಿಲ್ಲ. ಆದರೆ ಈ ಬಾರಿ ಆಗಸ್ಟ್ 15ರಂದು ಹಿಂದೆ ಮಾಡುತ್ತಿದ್ದಕ್ಕಿಂತ ಹೆಚ್ಚಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಕೊರೊನಾ ಕರಿನೆರಳು – ಈ ಬಾರಿ ಇಲ್ಲ ಫ್ಲವರ್ ಶೋ

    ಬೆಂಗಳೂರಿನಲ್ಲಿ ಕೊರೊನಾ ಕರಿನೆರಳು – ಈ ಬಾರಿ ಇಲ್ಲ ಫ್ಲವರ್ ಶೋ

    ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಇನ್ನೂ ಮೂರು ದಿನ ಬಾಕಿಯಿದೆ. ಆದರೆ ಪ್ರತಿ ವರ್ಷ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್‍ಬಾಗ್‍ನಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನ ಈ ಬಾರಿ ರದ್ದಾಗಿದೆ.

    ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾದ ಫಲಪುಷ್ಪ ರದ್ದತಿ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಕುಸುಮಾ, ಕೊರೊನಾ ಭೀತಿ ಹಿನ್ನೆಲೆ ಫ್ಲವರ್ ಶೋವನ್ನು ಕೈ ಬಿಟ್ಟಿದ್ದೇವೆ. ಪ್ರತಿವರ್ಷ ಐದು ಲಕ್ಷಕ್ಕೂ ಹೆಚ್ಚು ಮಂದಿ ಫ್ಲವರ್ ಶೋ ವೀಕ್ಷಣೆ ಮಾಡುತ್ತಿದ್ದರು ಎಂದು ಹೇಳಿದರು.

    ಒಂದು ಪ್ರದರ್ಶನಕ್ಕೆ ಎರಡು ಕೋಟಿಗೂ ಅಧಿಕ ವೆಚ್ಚ ತಗುಲುತ್ತಿತ್ತು. ಫ್ಲವರ್ ಶೋ ವೇಳೆ ಹೆಚ್ಚು ಜನ ಉದ್ಯಾನವನಕ್ಕೆ ಬರುತ್ತಾರೆ. ಈ ವೇಳೆ ಕ್ರೌಡ್ ಕಂಟ್ರೋಲ್ ಮಾಡುವುದು ಅಸಾಧ್ಯ. 1912 ರಿಂದ ಆರಂಭವಾದ ಪ್ಲವರ್ ಶೋ ಸುಮಾರು 109 ವರ್ಷಗಳ ಕಾಲ ಸತತವಾಗಿ ಆಚರಿಸಿಕೊಂಡು ಬಂದಿದೆ ಎಂದು ತಿಳಿಸಿದರು.

    ತೋಟಗಾರಿಕೆ ಇಲಾಖೆ ಈ ವರ್ಷ ಆಯೋಜನೆ ಮಾಡುವ ಲೆಕ್ಕಾಚಾರ ಇಟ್ಟುಕೊಂಡಿತ್ತು. ಈ ಬಗ್ಗೆ ಬಿಬಿಎಂಪಿಗೆ ತೋಟಗಾರಿಕೆ ಇಲಾಖೆ ಅಭಿಪ್ರಾಯ ಕೇಳಿತ್ತು. ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ಫಲಪುಷ್ಪ ಪ್ರದರ್ಶನ ಆಯೋಜಿಸುವುದಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಈ ವರ್ಷದ ಫ್ಲವರ್ ಶೋವನ್ನು ತೋಟಗಾರಿಕೆ ಇಲಾಖೆ ಕೈ ಬಿಟ್ಟಿದೆ ಎಂದರು.

    ಕೋವಿಡ್ 19 ನಿಂದಾಗಿ ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಬೇಕಿದ್ದ ಫ್ಲವರ್ ಶೋ ರದ್ದಾಗಿತ್ತು. ಈಗ ಮತ್ತೊಮ್ಮೆ ಕೊರೊನಾ ಕಾರಣದಿಂದಾಗಿ ಫ್ಲವರ್ ಶೋ ರದ್ದಾಗಿದೆ.

  • 20 ವರ್ಷದ ಬಳಿಕ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ ರದ್ದು

    20 ವರ್ಷದ ಬಳಿಕ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ ರದ್ದು

    ಬೆಂಗಳೂರು: ಮಹಾಮಾರಿ ಕೊರೊನಾದಿಂದ 20 ವರ್ಷದ ಬಳಿಕ ಈ ಬಾರಿ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫಲಪುಷ್ಟ ಪ್ರದರ್ಶನವನ್ನು ರದ್ದು ಮಾಡಲಾಗಿದೆ.

    ಪ್ರತಿ ವರ್ಷ ಸ್ವಾತಂತ್ರ್ಯ ದಿನಚರಣೆಗೆ ಫ್ಲವರ್ ಶೋ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಭಯದಿಂದಾಗಿ ಫಲಪುಷ್ಟ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ತೋಟಗಾರಿಕಾ ಸಂಘದ ಸಹಯೋಗದಲ್ಲಿ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗುತ್ತಿತ್ತು.

    ಪ್ರತಿವರ್ಷ ಫ್ಲವರ್ ಶೋಗೆ ಎರಡು ತಿಂಗಳಿಂದಲೇ ಸಿದ್ಧತೆಗಳನ್ನ ನಡೆಸಲಾಗುತ್ತಿತ್ತು. ಜೊತೆಗೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿಯೇ ಪ್ರದರ್ಶನಕ್ಕೆ ಅನುವು ಮಾಡಲಾಗುತ್ತಿತ್ತು. ಆದರೆ ಈ ವರ್ಷ ಆಗಸ್ಟ್ ಮೊದಲವಾರ ಬಂದರೂ ಯಾವುದೇ ಸಿದ್ಧತೆಗಳು ನಡೆದಿಲ್ಲ. ಫ್ಲವರ್ ಶೋಗೆ ಲಕ್ಷಾಂತರ ಮಂದಿ ಲಾಲ್‍ಬಾಗ್‍ಗೆ ಬರುತ್ತಾರೆ. ಇದರಿಂದ ಕೊರೊನಾ ಸೋಂಕು ಹೆಚ್ಚಾಗಬಹುದು ಎಂಬ ಕಾರಣಕ್ಕಾಗಿ ಈ ಬಾರಿಯ ಫ್ಲವರ್ ಶೋವನ್ನು ರದ್ದುಪಡಿಸಲಾಗುತ್ತಿದೆ.

    1912 ರಿಂದ ಆರಂಭವಾದ ಫ್ಲವರ್ ಶೋ 108 ವರ್ಷಗಳ ಕಾಲ ಸತತವಾಗಿ ಆಚಾರಿಸಿಕೊಂಡು ಬಂದಿದೆ. ಆದರೆ ಕೊರೊನಾದಿಂದ 20 ವರ್ಷದ ಬಳಿಕ ಈ ಬಾರಿ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫಲಪುಷ್ಟ ಪ್ರದರ್ಶನವನ್ನು ರದ್ದು ಮಾಡಲಾಗಿದೆ.

  • ಲಾಲ್ ಬಾಗ್ ಫ್ಲವರ್ ಶೋ ವೀಕ್ಷಣೆಗೆ ನಮ್ಮ ಮೆಟ್ರೋನಿಂದ ಬಂಪರ್ ಆಫರ್!

    ಲಾಲ್ ಬಾಗ್ ಫ್ಲವರ್ ಶೋ ವೀಕ್ಷಣೆಗೆ ನಮ್ಮ ಮೆಟ್ರೋನಿಂದ ಬಂಪರ್ ಆಫರ್!

    ಬೆಂಗಳೂರು: ವೀಕೆಂಡ್ ನಲ್ಲಿ ಲಾಲ್ ಬಾಗ್ ಫ್ಲವರ್ ಶೋ ನೋಡಲು ಬರುವವರಿಗೆ ನಮ್ಮ ಮೆಟ್ರೋ ಬಂಪರ್ ಆಫರ್  ವೊಂದನ್ನು ನೀಡಿದೆ.

    ನಮ್ಮ ಮೆಟ್ರೋ ಕೇವಲ 30 ರೂಪಾಯಿಯಲ್ಲಿ ಎರಡು ಬದಿಯ ಪ್ರಯಾಣಕ್ಕೆ ಅವಕಾಶ ನೀಡಿದೆ. 30 ರೂ. ಪೇಪರ್ ಟಿಕೆಟ್ ಮೂಲಕ ಲಾಲ್ ಬಾಗ್ ಗೆ ಹೋಗಿ ವಾಪಸ್ ಬರಬಹುದು. ಅಷ್ಟೇ ಅಲ್ಲದೇ ಲಾಲ್ ಬಾಗ್ ನಿಂದ ನಗರದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಹೋಗಿ ವಾಪಸ್ ಆಗಬಹುದು.

    ಈ ಆಫರ್ ವೀಕೆಂಡ್ ನಲ್ಲಿ ಅಂದ್ರೆ ದಿನಾಂಕ 11, 12, 15 ರಂದು ಮಾತ್ರ ಅನ್ವಯವಾಗುತ್ತಿದ್ದು, ಸ್ವಾತಂತ್ರ್ಯ ದಿನಾಚರಣೆಯಂದು 30 ರೂ. ನಲ್ಲಿ ಲಾಲ್ ಬಾಗ್ ಹೋಗಿ ವಾಪಸ್ ಬರಬಹುದು. ಸ್ಮಾರ್ಟ್ ಕಾರ್ಡ್ ಬಳಕೆ ಮಾಡುವರಿಗೂ ಸಾಮಾನ್ಯ ದರ ಅನ್ವಯವಾಗಲಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews