Tag: ಫ್ಲರ್ಟ್

  • ಕಿರುತೆರೆಯ ಖ್ಯಾತ ನಟ ಚಂದನ್ ನಿರ್ದೇಶನದ ಚಿತ್ರಕ್ಕೆ ಕಿಚ್ಚನ ಕಂಠ

    ಕಿರುತೆರೆಯ ಖ್ಯಾತ ನಟ ಚಂದನ್ ನಿರ್ದೇಶನದ ಚಿತ್ರಕ್ಕೆ ಕಿಚ್ಚನ ಕಂಠ

    ಸಾಮಾನ್ಯವಾಗಿ ಹುಡುಗಿಯರನ್ನು ಚುಡಾಯಿಸಿಕೊಂಡು ಓಡಾಡುವ ಹುಡುಗರನ್ನು ʻಫ್ಲರ್ಟ್ʼ ಎನ್ನುತ್ತಾರೆ. ಇದೀಗ ಇದೇ ಹೆಸರಿನಲ್ಲಿ ಚಲನಚಿತ್ರವೊಂದು ನಿರ್ಮಾಣವಾಗಿದೆ. ಕಿಚ್ಚ ಸುದೀಪ್ ಗರಡಿಯ ಹುಡುಗ, ಸಿಸಿಎಲ್ ಸಹಪಾಠಿಯೂ ಆದ ಚಂದನ್ ಕುಮಾರ್ (Actor Chandan Kumar) ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ಹಾಡೊಂದಕ್ಕೆ ಸುದೀಪ್ ಅವರೇ ದನಿಯಾಗಿದ್ದಾರೆ. ಈ ಫ್ರೆಂಡ್ ಶಿಪ್ ಆಂಥೆಮ್‌ನ ಬಿಡುಗಡೆ ಕಾರ್ಯಕ್ರಮ ಸೋಮವಾರ ಸಂಜೆ ನೆರವೇರಿತು.

    ʻಫ್ಲರ್ಟ್ʼ ಚಿತ್ರದಲ್ಲಿ ನಟಿಸುವ ಜತೆಗೆ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನೂ ಸಹ ಚಂದನ್ ಕುಮಾರ್ ಅವರೇ ಹೊತ್ತಿದ್ದಾರೆ. ಅಲ್ಲದೆ ಎವರೆಸ್ಟ್ ಪಿಕ್ಚರ್ಸ್ ಬ್ಯಾನರ್ ಅಡಿ ಚಂದನ್ ಅವರ ಪತ್ನಿ ಕವಿತಾಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ʻಎ ಪ್ಯೂರ್ ಡವ್ ಸ್ಟೋರಿʼ ಎಂಬ ಅಡಿಬರಹ ಫ್ಲರ್ಟ್ ಚಿತ್ರಕ್ಕಿದ್ದು, ಇದಕ್ಕೆ ವಿವರಣೆಯನ್ನೂ ಚಂದನ್ ನೀಡಿದ್ದಾರೆ. ವಿಶೇಷವಾಗಿ ಸುದೀಪ್ ಅವರ ಹಾಡಿಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡಿನ ಬಿಡುಗಡೆ ಸಂದರ್ಭದಲ್ಲಿ ಸುದೀಪ್ ಅವರು ಚಂದನ್ ಗೆ ವಿಡಿಯೋ ಮೂಲಕ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ನಾಯಕ, ನಿರ್ದೇಶಕ ಚಂದನ್ ಮಾತನಾಡುತ್ತ ಇದೊಂದು ರೋಮ್ ಕಾಮ್ ಸಿನಿಮಾ ಆದರೂ ಫ್ರೆಂಡ್ ಶಿಪ್, ಲವ್, ಹೀಗೆ ಎಲ್ಲಾ ಥರದ ಎಂಟರ್ ಟೈನಿಂಗ್ ಎಲಿಮೆಂಟ್ಸ್ ಒಳಗೊಂಡಿದೆ. ಫ್ಲರ್ಟ್ (Flirt Movie) ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ. ಗಾಢವಾದ ಪ್ರೀತಿಯನ್ನೂ ಸಹ ಫ್ಲರ್ಟ್ ಎಂದೇ ಕರೆಯುತ್ತಾರೆ ಎಂದು ಮಾತು ಆರಂಭಿಸಿದ ಚಂದನ್, ಎಲ್ಲರ ಡವ್ ನಲ್ಲೂ ಒಂದೊಂದು ಲವ್ ಇದೆ ಎನ್ನುತ್ತಾರೆ. ಈ ಚಿತ್ರದಲ್ಲಿ ರೋಮ್ ಕಾಮ್ ಜತೆಗೆ ಸೈಕೋ ಕ್ಯಾರೆಕ್ಟರ್ ಕೂಡ ಇದೆ. ಇಡೀ ಚಿತ್ರ ಎಲ್ಲೂ ಬೋರಾಗದಂತೆ ಫಾಸ್ಟ್ ಆಗಿ ಸಾಗುತ್ತದೆ. ಈಗ ರಿಲಿಸಾಗಿರುವ ಫ್ರೆಂಡ್ ಶಿಪ್ ಆಂಥೆಮ್ ಸಾಂಗನ್ನು ಸುದೀಪ್ ಹಾಡಿದ್ದಾರೆ ಎಂದು ಹೇಳಿದರು.

    ಹಿರಿಯ ನಟಿ ಶೃತಿ, ಸಾಧು ಕೋಕಿಲ ಅವರೂ ಒಂದೊಳ್ಳೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಿರಿ ನನ್ನ ಸ್ನೇಹಿತನಾಗಿ ನಟಿಸಿದ್ದಾರೆ. ಇಬ್ಬರೂ ನಾಯಕಿಯರಾಗಿ ಅಕ್ಷತಾ ಬೋಪಣ್ಣ ಹಾಗೂ ನಿಮಿಕಾ ರತ್ನಾಕರ್ ನಟಿಸಿದ್ದಾರೆ ಎಂದು ವಿವರಿಸಿದರು.

    ನಟ ಸಾಧು ಕೋಕಿಲ ಮಾತನಾಡುತ್ತಾ, ನಾನು ಸಾಮಾನ್ಯವಾಗಿ ಕಾರ್ಯಕ್ರಮಗಳಿಗೆ ಕೈಕೊಡೋದೇ ಜಾಸ್ತಿ. ಆದರೆ ಈತ ಸಬ್ಜೆಕ್ಟ್ ಮಾಡಿಕೊಂಡಿರುವ ರೀತಿ ನನಗೆ ತುಂಬಾ ಇಷ್ಟವಾಯಿತು. ನಿರ್ದೇಶಕನೇ ನಿರ್ಮಾಪಕನಾದಾಗ ಜವಾಬ್ದಾರಿ ಜಾಸ್ತಿ ಇರುತ್ತದೆ. ಒಂದೊಳ್ಳೇ ಥಾಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ನನ್ನದೂ ಸಹ ನಾನು ಈವರೆಗೆ ಮಾಡಿರದಂಥ ರೋಲ್,ಅವರ ನಿರ್ದೇಶನದ ಶೈಲಿ ಇಷ್ಟವಾಯಿತು. ನಾನಿಷ್ಟೊತ್ತು ಮಾತಾಡ್ತಿದ್ದೇನೆಂದರೆ ಅದಕ್ಕೆ ಕಾರಣ ಚಂದನ್ ಎಂದು ನಾಯಕ, ನಿರ್ದೇಶಕನನ್ನು ಹಾಡಿ ಹೊಗಳಿದರು.

    ನಾಯಕಿಯರಾದ ನಿಮಿಕಾ ರತ್ನಾಕರ್ ಅಕ್ಷತಾ ಬೋಪಣ್ಣ ಮಾತನಾಡುತ್ತ ಈ ಚಿತ್ರದ ಕಥೆ, ನಿರೂಪಣೆಯೇ ವಿಭಿನ್ನವಾಗಿದೆ. ಇಂಥ ಒಂದು ಚಿತ್ರದ ಭಾಗವಾಗಿರುವುದಕ್ಕೆ ನಮಗೆ ತುಂಬಾ ಖುಷಿಯಾಯ್ತು ಎಂದು ಹೇಳಿಕೊಂಡರು. ನಂತರ ಸ್ನೇಹಿತನ ಪಾತ್ರ ಮಾಡಿರೋ ಗಿರಿ, ಮೂಗು ಸುರೇಶ್, ತಂತಮ್ಮ ಕ್ಯಾರೆಕ್ಟರ್ ಬಗ್ಗೆ ಮಾತಾಡಿದರು. ಜೆಸ್ಸಿ, ಗಿಫ್ಟ್ ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದು ಉಳಿದ 3 ಹಾಡುಗಳ ಜತೆಗೆ ಹಿನ್ನೆಲೆ ಸಂಗೀತವನ್ನೂ ಅವರೇ ಒದಗಿಸಿದ್ದಾರೆ.

  • ‘ಫ್ಲರ್ಟ್’ ಮಾಡಲು ರೆಡಿಯಾದ ನಟ ಚಂದನ್

    ‘ಫ್ಲರ್ಟ್’ ಮಾಡಲು ರೆಡಿಯಾದ ನಟ ಚಂದನ್

    ಕಿರುತೆರೆಯ ಯಶಸ್ವಿ ನಟ, ನಿರ್ಮಾಪಕ ಚಂದನ್ (Chandan) ಇದೀಗ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳನ್ನು ಮಾಡಿರುವ ಮತ್ತು ಕೆಲ ಕನ್ನಡ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಚಂದನ್, ಇದೇ ಮೊದಲ ಬಾರಿಗೆ ನಿರ್ದೇಶನದ ಜೊತೆಗೆ ನಿರ್ಮಾಣ ವನ್ನೂ ಮಾಡಲಿದ್ದಾರೆ. ಜೊತೆಗೆ ಗೆಳೆಯರು ಇವರಿಗೆ ಸಾಥ್ ನೀಡಲಿದ್ದಾರೆ.

    ಚಂದನ್ ನಿರ್ದೇಶನದ ಮೊದಲ ಚಿತ್ರಕ್ಕೆ ‘ಫ್ಲರ್ಟ್’ (Flirt) ಎಂದು ಹೆಸರಿಡಲಾಗಿದ್ದು, ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸವನ್ನೂ ಅವರು ಮುಗಿಸಿದ್ದಾರೆ.  ಮೊನ್ನೆಯಷ್ಟೇ ಚಂದನ್ ಅವರ ಹುಟ್ಟು ಹಬ್ಬವಾಗಿದ್ದು, ಅಂದು ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಈ ಸಿನಿಮಾದ ಫಸ್ಟ್ ಲುಕ್ ಕುತೂಹಲ ಮೂಡಿಸುತ್ತಿದೆ.  ಇದನ್ನೂ ಓದಿ:‘ರಣಹದ್ದು’ ಫಸ್ಟ್ ಲುಕ್ ರಿಲೀಸ್ ಮಾಡಿದ ಜಂಭದ ಹುಡುಗಿ

    ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಮೂಡಿ ಬಂದ ಪ್ರೇಮ ಬರಹದಲ್ಲಿ ಚಂದನ್ ನಾಯಕನಾಗಿದ್ದರು. ಆನಂತರ ಅವರು ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೀಗ ಫ್ಲರ್ಟ್ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣ ಮತ್ತು ನಿರ್ದೇಶನವನ್ನೂ ಅವರು ಮಾಡಲಿದ್ದಾರೆ. ಸಿನಿಮಾದ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಅವರು ನೀಡಲಿದ್ದಾರೆ.

     

    ಲಕ್ಷ್ಮಿ ಬಾರಮ್ಮ, ರಾಧಾ ಕಲ್ಯಾಣ ಸೇರಿದಂತೆ ಹಲವು ಯಶಸ್ವಿ ಧಾರಾವಾಹಿಗಳಿಗೆ ಚಂದನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ಚಂದನ್ ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಹಿರಿತೆರೆಯಲ್ಲೂ ಯಶಸ್ಸು ಕಾಣಲು ಚಂದನ್ ಹಲವಾರು ರೀತಿಯಲ್ಲಿ ಕಸರತ್ತು ಮಾಡುತ್ತಿದ್ದಾರೆ. ಫ್ಲರ್ಟ್ ಸಿನಿಮಾ ಅಂಥದ್ದೊಂದು ಯಶಸ್ಸು ತಂದುಕೊಡಲಿದೆಯಾ ಎಂದು ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿಕ್ಷಕಿಯೊಂದಿಗೆ ಫ್ಲರ್ಟ್ ಮಾಡಿದ್ದೆ- ಸಲ್ಮಾನ್ ಖಾನ್

    ಶಿಕ್ಷಕಿಯೊಂದಿಗೆ ಫ್ಲರ್ಟ್ ಮಾಡಿದ್ದೆ- ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ರವರು ಶಾಲಾ ದಿನಗಳಲ್ಲಿ ಶಿಕ್ಷಕಿಯೊಂದಿಗೆ ಫ್ಲರ್ಟ್ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

    ವೀಕೆಂಡ್‍ಗಳಲ್ಲಿ ಬರುವ ದುಸ್ ಕಾ ದುಮ್- ದುಮ್ಡಾರ್ ನ ಚಿತ್ರಿಕರಣದ ವೇಳೆ ಸಲ್ಲು ತನ್ನ ಫ್ಲರ್ಟಿಂಗ್ ಇತಿಹಾಸವನ್ನು ಬಿಚ್ಚಿಟ್ಟಿದ್ದಾರೆ. ನಿಮಗೆ ಮೊದಲ ಬಾರಿಗೆ ಶಾಲಾ ಶಿಕ್ಷಕಿ ಜೊತೆ ಪ್ರೀತಿಯ ಬಲೆಗೆ ಸಿಲಿಕಿಕೊಂಡಿದ್ದಿರಾ ಎಂದು ಇಂಡಿಯನ್ಸ್ ಕಾರ್ಯಕ್ರಮದಲ್ಲಿ ಕೇಳಿದಾಗ ಸಲ್ಲು, ತನ್ನ ಶಾಲೆಯಲ್ಲಿ ಒಬ್ಬರು ಶಿಕ್ಷಕಿ ಮೇಲೆ ಪ್ರೀತಿ ಹುಟ್ಟಿತ್ತು. ಅಷ್ಟೇ ಅಲ್ಲದೆ ಅವರನ್ನು ನಾನು ತನ್ನ ಸೈಕಲ್‍ನಲ್ಲಿ ಮನೆವರಗೂ ಡ್ರಾಪ್ ಮಾಡುತ್ತಿದ್ದೆ. ಈ ಮೂಲಕ ಅವರು ನನ್ನ ಮುಂದೆ ಕುಳಿತುಕೊಳ್ಳುವಂತೆ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

    ಯಾರೊಬ್ಬರು ಶಾಲೆಯಲ್ಲಿ ಶಿಕ್ಷಕಿಯ ಜೊತೆ ಪ್ರೀತಿಯಲ್ಲಿ ಬೀಳದೆ ಇರಲು ಸಾಧ್ಯವಿಲ್ಲ. ಅದನ್ನು ಹೆಚ್ಚು ಜನರು ಒಪ್ಪಿಕೊಳ್ಳುವುದಿಲ್ಲ. ಆದರೆ ನಾನು ನನ್ನ ಶಿಕ್ಷಕಿ ಜೊತೆ ತುಂಬಾ ಫ್ಲರ್ಟ್ ಮಾಡುತ್ತಿದ್ದೆ ಎಂದು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.

    ಸದ್ಯ ಸಲ್ಲು ದುಸ್ ಕಾ ದುಮ್- ದುಮ್ಡಾರ್ ವಿಕೆಂಡ್ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದು, ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv