Tag: ಫ್ರೆಂಡ್ ಶಿಪ್ ಡೇ

  • ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇದೆ ಅಂತ ಗೊತ್ತಿರಲಿಲ್ಲ: ಮಂಜು

    ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇದೆ ಅಂತ ಗೊತ್ತಿರಲಿಲ್ಲ: ಮಂಜು

    ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಮನೆಯಲ್ಲಿ ಈಡೇರದ ಒಂದೊಂದು ಕೋರಿಕೆಯನ್ನು ತಿಳಿಸುವಂತೆ ಬಿಗ್‍ಬಾಸ್ ಸೂಚಿಸಿದ್ದರು. ಹಾಗಾಗಿ ಮನೆಯ ಸ್ಪರ್ಧಿಗಳು ತಮ್ಮ ಚಿಕ್ಕ ಚಿಕ್ಕ ಬಯಕೆಗಳನ್ನು ಬಿಗ್‍ಬಾಸ್ ಬಳಿ ತೊಡಿಕೊಂಡಿದ್ದರು. ಸದ್ಯ ಮಂಜು ಪಾವಗಡಗೆ ಸ್ಪೆಷಲ್ ಆಗಿ ಫ್ರೆಂಡ್ ಶಿಪ್ ಡೇಗೆ ವಿಶ್ ಮಾಡಬೇಕೆಂದು ಕೇಳಿಕೊಂಡಿದ್ದ ದಿವ್ಯಾ ಸುರೇಶ್ ಆಸೆಯನ್ನು ಬಿಗ್‍ಬಾಸ್ ಈಡೇರಿಸಿದ್ದಾರೆ.

    ಅದರಂತೆ ಗಾರ್ಡನ್ ಏರಿಯಾದಲ್ಲಿ ಒಂದು ಟೇಬಲ್ ಮೇಲೆ ಕೇಕ್, ಬಲೂನ್‍ಗಳ ರಾಶಿ, ಮಂಜು ಹಾಗೂ ದಿವ್ಯಾ ಸುರೇಶ್ ಫೋಟೋವೊಂದನ್ನು ಇರಿಸಿ ಸಿಂಗಾರಿಸಲಾಗಿತ್ತು. ಈ ಅರೆಂಜ್ ಮೆಂಟ್ಸ್ ನೋಡಿ ಮಂಜು ಶಾಕ್ ಆದರೆ, ಮನೆಮಂದಿಯೆಲ್ಲಾ ಫುಲ್ ಖುಷ್ ಆಗಿದ್ದಾರೆ.

    ನಂತರ ದಿವ್ಯಾ ಸುರೇಶ್ ಹಾಗೂ ಮಂಜು ಏಕಾಂತದಲ್ಲಿ ಕುಳಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ನಿನ್ನನ್ನು ನೋಡಿದಾಗ ನನಗೆ ಗೌರವ ನೀಡಬೇಕು ಅನಿಸುತ್ತದೆ. ನೀವು ಹೋಗಿ ಬನ್ನಿ ಎಂದು ಕರೆಯಬೇಕು ಎನಿಸುತ್ತದೆ. ಫಸ್ಟ್ ಇನ್ನಿಂಗ್ಸ್‌ನಲ್ಲಿ ನಾನು ನಿನಗೆ ಬಹಳ ಹರ್ಟ್ ಮಾಡಿದ್ದೇನೆ. ಬಹಳ ಡೊಮಿನೇಟ್ ಆಗಿಬಿಟ್ಟೆ, ಕೊನೆ ಕೊನೆಯಲ್ಲಿ ನನ್ನಿಂದ ನಿನ್ನ ಆಟಕ್ಕೆ ತೊಂದರೆ ಆಯ್ತು ಎಂಬುವುದು ಅರ್ಥವಾಯಿತು. ನಾನು ನಿನ್ನ ಬಗ್ಗೆ ಬಹಳ ಪೊಸೆಸಿವ್ ಆಗಿಬಿಟ್ಟೆ ಜೊತೆಗೆ ನಿನ್ನ ಫ್ರೀಡಂನ ಕಂಟ್ರೋಲ್ ಕೂಡ ಮಾಡಾತ್ತಿದೆ. ಮನೆಯಿಂದ ಹೊರಗೆ ಹೋದ ನಂತರ ನಾನು ನಿನಗೆ ಕ್ಷಮೆ ಕೇಳಲು ಆಗಲಿಲ್ಲ. ನನಗೆ ನೀನು ಅಂದರೆ ತುಂಬಾ ಇಷ್ಟ. ಥ್ಯಾಂಕ್ಯು ನೀನು ನನಗೆ ಫ್ರೆಂಡ್ ಆಗಿದ್ದಕ್ಕೆ. ಹೀಗೆ ನನ್ನ ಜೊತೆ ಯಾವಾಗಲೂ ಇರು, ನೀನು ನನ್ನ ಬೆಸ್ಟ್ ಫ್ರೆಂಡ್ ಎನ್ನುತ್ತಾರೆ.

    ಇದಕ್ಕೆ ಮಂಜು, ಗೊತ್ತೊ, ಗೊತ್ತಿಲ್ಲದೇ ಮಾಡುವ ತಪ್ಪನ್ನು ತಿದ್ದುಕೊಳ್ಳಬೇಕು ಎಂಬುವುದು ನಿನಗೆ ಅರ್ಥವಾಯಿತಲ್ಲಾ ನನಗೆ ಖುಷಿಯಾಯಿತು. ಇದು ದೊಡ್ಡ ವೇದಿಕೆ ಇಲ್ಲಿಂದ ಆಚೆ ಹೋದ ಬಳಿಕ ಎಲ್ಲರೂ ಒಳ್ಳೆದನ್ನು ಮಾತನಾಡಬೇಕು, ಒಳ್ಳೆ ಅವಕಾಶಗಳು ಸಿಗಬೇಕು. ಚೆನ್ನಾಗಿ ಹಾಗೂ ಖುಷಿಯಾಗಿರು ಎಂದು ವಿಶ್ ಮಾಡುತ್ತಾರೆ. ಅಲ್ಲದೇ ಇದನ್ನೆಲ್ಲಾ ನಾನು ಸಿನಿಮಾದಲ್ಲಿ ನೋಡಿದ್ದೆ. ಇದು ಯಾವುದು ನನಗೆ ಗೊತ್ತಿಲ್ಲ ಎಂದು ಹೇಳುತ್ತಾರೆ.

    ನಂತರ ಇಬ್ಬರೂ ಕೇಕ್ ಕತ್ತರಿಸಿ ಫ್ರೆಂಡ್ ಶಿಪ್ ಡೇ ಸೆಲೆಬ್ರೆಟ್ ಮಾಡುತ್ತಾರೆ. ನಂತರ ಕೇಕ್ ತಿನ್ನುವ ವೇಳೆ ಮಂಜು ನಮ್ಮ ಹುಡುಗ್ರು ಇದನ್ನೆಲ್ಲಾ ನೋಡಿದರೆ ಫುಲ್ ಶಾಕ್ ಆಗುತ್ತಾರೆ. ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇರುತ್ತದೆ ಎಂದು ಗೊತ್ತಿರಲಿಲ್ಲ ಎಂದು ಹೇಳುತ್ತಾರೆ.  ಇದನ್ನೂ ಓದಿ:BB ಮನೆಯಿಂದ ರಾತ್ರೋರಾತ್ರಿ ಹೊರಗೆ ಬಂದ DS

  • ಮೋದಿಗೆ ಸ್ನೇಹಿತರ ದಿನಾಚರಣೆಯ ಶುಭಕೋರಿ ಕಾಲೆಳೆದ ರಾಹುಲ್

    ಮೋದಿಗೆ ಸ್ನೇಹಿತರ ದಿನಾಚರಣೆಯ ಶುಭಕೋರಿ ಕಾಲೆಳೆದ ರಾಹುಲ್

    ನವದೆಹಲಿ: ಸ್ನೇಹಿತರ ದಿನಾಚರಣೆಯ ಪ್ರಯುಕ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ಕೈಗಾರಿಕೋದ್ಯಮದ ಜೊತೆ ಕೈ ಜೋಡಿಸಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಮೋದಿಗೆ ಸ್ನೇಹಿತರ ದಿನಾಚರಣೆಯ ದಿನದಂದು ಕಾಲೆಳೆದಿದ್ದಾರೆ.

    ಈ ವೀಡಿಯೋದಲ್ಲಿ ಮೋದಿ ಹಲವಾರು ಕೈಗಾರಿಕೋದ್ಯಮದ ಗಣ್ಯ ವ್ಯಕ್ತಿಗಳಿಗೆ ಶೇಕ್ ಹ್ಯಾಂಡ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಸದ್ಯ ಈ ವೀಡಿಯೋವನ್ನು ರಾಹುಲ್ ಗಾಂಧಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಹಮ್ ದೋ ಹಾಮಾರೆ ದೋ ಕಿ ಸರ್ಕಾರ್‌ಗೆ ಸ್ನೇಹಿತರ ದಿನಾಚರಣೆ ಶುಭಾಶಯಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ಶುಭಾಶಯ ಕೋರಿದ್ದಾರೆ.

    ಮೋದಿಯವರ ಹಳೆಯ ಫೋಟೋಗಳನ್ನು ಬಳಸಿ, ಹಮ್ ದೋ ಹಾಮಾರೆ ದೋ ಕಿ (ನಾವಿಬ್ಬರು, ನಮಗಿಬ್ಬರು) ಎನ್ನುತ್ತಾ, ಕೇವಲ ನಾಲ್ಕು ಜನರಿಂದ ದೇಶವನ್ನು ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

     

    View this post on Instagram

     

    A post shared by Rahul Gandhi (@rahulgandhi)

    ಈ ಹಿಂದೆ ಫೆಬ್ರವರಿಯಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶದ ವೇಳೆ ಕೂಡ ಹಮ್ ದೋ, ಹಮಾರೆ ದೋ ಎಂಬ ಪದ ಬಳಸಿದ್ದರು ಮತ್ತು ನೂತನ ಕೃಷಿ ಕಾಯ್ದೆ ವಿರುದ್ಧ ಹರಿಹಾಯ್ದಿದ್ದರು. ಈಗ ಮತ್ತೆ ನಾಲ್ಕು ಜನರು ಮಾತ್ರ ದೇಶವನ್ನು ನಡೆಸುತ್ತಿದ್ದಾರೆ ಹಾಗೂ ಅವರು ಯಾರೆಂದು ಎಲ್ಲರಿಗೂ ತಿಳಿದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದನ್ನೂ ಓದಿ:ಬಿಜೆಪಿಯಲ್ಲಿ ಅಸಮಾಧಾನ ಪ್ರಶ್ನೆಯೇ ಇಲ್ಲ: ಈಶ್ವರಪ್ಪ

  • ಹೊಗೆ ಬಿಟ್ಟಿದ್ದಕ್ಕೆ ಗ್ಯಾಂಗ್‍ವಾರ್-ಜಿಮ್ ಟ್ರೈನರ್ ಗಳ ಮೂಳೆಗಳು ಪುಡಿ ಪುಡಿ

    ಹೊಗೆ ಬಿಟ್ಟಿದ್ದಕ್ಕೆ ಗ್ಯಾಂಗ್‍ವಾರ್-ಜಿಮ್ ಟ್ರೈನರ್ ಗಳ ಮೂಳೆಗಳು ಪುಡಿ ಪುಡಿ

    ಬೆಂಗಳೂರು: ಆಗಸ್ಟ್ ಮೊದಲ ಭಾನುವಾರ ವಿಶ್ವದೆಲ್ಲೆಡೆ ಗೆಳೆಯರ ದಿನ ಆಚರಿಸಲಾಗಿತ್ತು. ಫ್ರೆಂಡ್ ಶಿಪ್ ಡೇ ಆಚರಣೆಗೆ ತೆರಳಿದ್ದ ಎರಡು ಜಿಮ್ ಟ್ರೈನರ್ ಗಳ ಗುಂಪಿನ ನಡುವೆ ಬಿಗ್ ಫೈಟ್ ನಡೆದಿದೆ. ಹಲ್ಲೆಗೊಳಗಾದ ಜಿಮ್ ಟ್ರೈನರ್ ಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆತಯುತ್ತಿದ್ದಾರೆ.

    ನಗರದ ಕೋರ್ಟ್ ಯಾರ್ಡ್ ಬೈ ಮ್ಯಾರೆಯೇಟ್ ಹೋಟೆಲಿನ ‘ನಝಾರಾ’ ಪಬ್‍ನಲ್ಲಿ ಈ ಗಲಾಟೆ ನಡೆದಿದೆ. ಫ್ರೆಂಡ್ ಶಿಪ್ ಡೇ ಆಚರಣೆಗಾಗಿ ಜಿಮ್ ಟ್ರೈನರ್ ನವೀನ್ ಆ್ಯಂಡ್ ಟೀಂ ಮತ್ತು ಪ್ರಶಾಂತ್ ಗೌಡ ಆ್ಯಂಡ್ ಗ್ಯಾಂಗ್ ಪ್ರತ್ಯೇಕವಾಗಿ ತೆರಳಿತ್ತು. ಪಾರ್ಟಿ ಮೂಡ್ ನಲ್ಲಿದ್ದ ಪ್ರಶಾಂತ್ ಒಳಗಡೆ ಧೂಮಪಾನ ಮಾಡಲಾರಂಭಿಸಿದ್ದಾನೆ. ಪಕ್ಕದ ಟೇಬಲ್ ನಲ್ಲಿದ್ದ ನವೀನ್, ಹೊರಗಡೆ ಹೋಗಿ ಸಿಗರೇಟ್ ಸೇದುವಂತೆ ಸೂಚಿಸಿದ್ದಾರೆ. ಇದೇ ವಿಚಾರಕ್ಕೆ ಎರಡು ಟೀಂಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಎರಡೂ ತಂಡದ ಸದಸ್ಯರು ಹೊಡೆದಾಡಿಕೊಂಡಿದ್ದಾರೆ.

    ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಪ್ರಶಾಂತ್ ಮತ್ತು ಆತನ ಸಹಚರರು ಕೈಗೆ ಸಿಕ್ಕ ವಸ್ತುಗಳಿಂದ ನವೀನ್ ಆ್ಯಂಡ್ ಟೀಂ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ವೇಳೆ ಎರಡೂ ತಂಡದ ಸದಸ್ಯರು ಮದ್ಯ ಸೇವಿಸಿದ್ದರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ನವೀನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಘಟನೆ ಬಳಿಕ ನವೀನ್ ಆ್ಯಂಡ್ ಟೀಂ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಮೃತಹಳ್ಳಿ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಸ್ಕೇಪ್ ಆಗಿರುವ ಪ್ರಶಾಂತ್ ಗೌಡ ಆ್ಯಂಡ್ ಗ್ಯಾಂಗ್ ಬಂಧನಕ್ಕೆ ವಿಶೇಷ ಬಲೆ ಬೀಸಿದ್ದಾರೆ.